ವೃಕ್ಷ ಉರುಳಿಸಿ ನೆಟ್ಟಿದ್ದು, ಆಂಗ್ಲನಾಡಿನ ಸಸಿ!

ವೃಕ್ಷ ಉರುಳಿಸಿ ನೆಟ್ಟಿದ್ದು, ಆಂಗ್ಲನಾಡಿನ ಸಸಿ!

‘ಶಿಕ್ಷಣದ ಕುರಿತಂತೆ ಪೂರ್ವ ದೇಶದ ಜನರಿಗೆ ಯಾವಾಗಲೂ ಒಂದು ಗೌರವದ ಭಾವನೆ ಇದೆ. ಆಗಾಗ್ಗೆ ದಾಳಿ ಮತ್ತು ನಾಗರಿಕ ಯುದ್ಧಗಳು ನಡೆದ ನಂತರವೂ ಇಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಜನ ಸಾಮಾನ್ಯರೂ ಕೂಡ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಶಿಕ್ಷಣ ನೀಡುವವರಿಗಾಗಿ ತನ್ನ ಉತ್ಪಾದನೆಯ ಒಂದಷ್ಟು ಭಾಗವನ್ನು ನೀಡದ ಯಾವ ಹಳ್ಳಿಗನೂ ಇರಲಿಲ್ಲ. ಹೀಗಾಗಿಯೇ ಎಷ್ಟೇ ಕಡಿಮೆ ಎಂದರೂ ಈಗಿರುವ ಕನಿಷ್ಠ ಪಕ್ಷ ಮೂರು ಪಟ್ಟು ಹೆಚ್ಚು ಜನ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು’ ಎಂದು ಅಪರೂಪದ ಅಂಕಿ-ಅಂಶಗಳನ್ನು ಬಯಲಿಗಿಡುತ್ತಾರೆ  ಡಾ|| ಲೈಟ್ನರ್

ನಿಮ್ಮದು ಹಳ್ಳಿಯಾಗಿದ್ದು ನಿಮ್ಮೂರಿನಲ್ಲೊಂದು ಸಕರ್ಾರಿ ಶಾಲೆಯಿದ್ದರೆ ಸುಮ್ಮನೆ ಒಮ್ಮೆ ಶಾಲೆಗೆ ಹೋಗಿ ಹಳೆಯ ಕಡತಗಳನ್ನು ಪರಿಶೀಲಿಸಿ ನೋಡಿ. ಆ ಜಮೀನು ಸಕರ್ಾರಕ್ಕೆ ಸೇರಿದ್ದೋ ಅಥವಾ ಸಕರ್ಾರವೇ ಅದನ್ನು ಜನರಿಂದ ಖರೀದಿಸಿದ್ದೋ? ನಿಮಗೆ ಅಚ್ಚರಿಯಾದೀತು. ಈ ದೇಶದ ಬಹುತೇಕ ಶಾಲೆಗಳು ಜನರಿಂದ ದಾನವಾಗಿ ಕೊಡಲ್ಪಟ್ಟ ಜಮೀನಿನ ಮೇಲೆಯೇ ಕಟ್ಟಲ್ಪಟ್ಟಿರೋದು. ಶಾಲೆಗಳಷ್ಟೇ ಅಲ್ಲ. ಅನೇಕ ಸಕರ್ಾರಿ ಕಟ್ಟಡಗಳಿಗೆ ಸ್ಥಳೀಯರು ತಮ್ಮ ಭೂಮಿಯನ್ನು ದಾನವಾಗಿ ಕೊಡುತ್ತಿದ್ದರು. ಅನೇಕ ಬಾರಿ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಊರವರೇ ಹೊರುತ್ತಿದ್ದರು.
‘ಕೆಲವೊಮ್ಮೆ ಊರಿನ ಜನ, ಕೆಲವೊಮ್ಮೆ ಸ್ವತಃ ರಾಜನೇ ಗುರುವೊಬ್ಬನಿಗೆ ಅಥವಾ ಮಠಾಧಿಪತಿಗಳಿಗೆ ಅವರು ನಡೆಸುವ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಶಾಲೆಗಳ ನಿರ್ವಹಣೆಗೆ ಹಾಗೂ ಅಲ್ಲಿ ಉಚಿತ ಶಿಕ್ಷಣ ನೀಡುವುದಕ್ಕೆ ದಾನ-ದತ್ತಿ ನೀಡುತ್ತಿದ್ದರು. ಅದು ಇಲ್ಲಿನ ಸಂಪ್ರದಾಯವೇ ಆಗಿತ್ತು. ಹೀಗೆ ಪಡಕೊಂಡ ದಾನವನ್ನು ಮುಂದಿನವರು ಮಾರುವಂತಿಲ್ಲವೆಂಬ ನಿಬಂಧನೆಯೂ ಇತ್ತು’ ಎಂದೂ ಬಳ್ಳಾರಿಯ ಕಲೆಕ್ಟರ್ ಎ.ಡಿ ಕಾಂಟ್ಬೆಲ್ ಹೇಳುತ್ತಾನೆ. ಅಂದಿನ ದಿನಗಳ ದಾಖಲೆಗಳ ಅವಲೋಕನ ನಡೆಸಿದಾಗ ಒಂದಂಶವಂತೂ ಸ್ಪಷ್ಟವಾಗುತ್ತದೆ. ಓದಬೇಕೆಂದು ಬಂದ ವಿದ್ಯಾಥರ್ಿಗೆ ಬಡತನ ಅಡ್ಡಿಯಾಗುತ್ತಲೇ ಇರಲಿಲ್ಲ. ಉಪಾಧ್ಯಾಯರು ತಿಂಗಳಿಗೊಮ್ಮೆ ಒಂದಷ್ಟು ಹಣವನ್ನು ಆತನಿಂದ ಪಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ವಿದ್ಯಾಥರ್ಿಗಳು ತಾವು ಬೆಳೆದ ಧಾನ್ಯವನ್ನು ತಂದು ಕೊಡುತ್ತಿದ್ದರು. ಯಾವುದೂ ಆಗಲಿಲ್ಲವೆಂದರೂ ಚಿಂತೆಯಿಲ್ಲ ಆಯಾ ಹಳ್ಳಿಯ ಜನ ತಮ್ಮ ಉತ್ಪನ್ನದ ಒಂದಂಶವನ್ನು ಕೊಟ್ಟು ಅಧ್ಯಾಪಕರನ್ನು ನೋಡಿಕೊಳ್ಳುತ್ತಿದ್ದರು.
ಈ ಹಂತದಲ್ಲಿ ಗಮನಿಸಲೇಬೇಕಾದ ಮಹತ್ವದ ಸಂಗತಿಯೊಂದಿದೆ. ಹಳ್ಳಿಗಳು ತಮ್ಮ ವ್ಯವಸ್ಥೆಯನ್ನು ತಾವೇ ಸಂಭಾಳಿಸುವ ಸ್ವಾತಂತ್ರ್ಯವನ್ನು ಖಂಡಿತ ಹೊಂದಿದ್ದವು. ಪ್ರತೀ ಹಳ್ಳಿಯೂ ಅಂದಿನ ದಿನಗಳಲ್ಲಿ ಒಂದು ಗಣರಾಜ್ಯವೇ. ತೆರಿಗೆಯನ್ನು ರಾಜ್ಯಕ್ಕೆ ಕಟ್ಟಿ, ಅದು ಅಲ್ಲಿಂದ ಹಳ್ಳಿಗೆ ಹರಿದು ಬರುವ ವ್ಯವಸ್ಥೆ ಇರಲಿಲ್ಲ. ಪಕ್ಕಾ ವಿಕೇಂದ್ರೀಕರಣದ ಚಿಂತನೆ ಇತ್ತು. 1770ರ ಆಸುಪಾಸಿನ ವರದಿಗಳ ಪ್ರಕಾರ ಸಂಗ್ರಹಗೊಂಡ ಪ್ರತಿಶತ 80ರಷ್ಟು ತೆರಿಗೆ ಆಯಾ ಪ್ರದೇಶದ ಒಳಿತಿಗೆ ವಿನಿಯೋಗವಾಗಿಬಿಡುತ್ತಿತ್ತು. ಆಥರ್ಿಕವಾಗಿ ಶಕ್ತರಾಗಿದ್ದವರು ಕಟ್ಟಬೇಕಿದ್ದ ತೆರಿಗೆಯನ್ನು ಚೆಕರನ್ ಎನ್ನಲಾದರೆ ದತ್ತಿ ದಾನ ಪಡೆದವರು ಕಟ್ಟಬೇಕಿದ್ದ ತೆರಿಗೆಯನ್ನು ಬಾಜೀ ಎನ್ನಲಾಗುತ್ತಿತ್ತು. ಈ ತೆರಿಗೆಗಳ ಒಂದು ಭಾಗ ಪೂಜಾ ಸ್ಥಳಗಳ ನಿರ್ವಹಣೆಗೆ ಹೋದರೆ ಇನ್ನೊಂದು ಭಾಗ ಅಗ್ರಹಾರಗಳಿಗೋ, ಶಾಲೆಗಳಿಗೋ ವಿನಿಯೋಗವಾಗುತ್ತಿತ್ತು. ಅಂದಿನ ವರದಿಯ ಪ್ರಕಾರ ಬಂಗಾಳದ ಹಳ್ಳಿಯೊಂದರಲ್ಲಿ ಅರ್ಧದಷ್ಟು ಜಮೀನು ಬಾಜೀ ಕಂದಾಯದಡಿಯಲ್ಲಿದ್ದವು. 1780 ರ ವೇಳೆಗೆ ಬಂಗಾಳದಲ್ಲಿ 72 ಸಾವಿರ ಜನ ತಮ್ಮನ್ನು ತಾವು ಬಾಜೀ ಜಮೀನಿನ ಕಂದಾಯಗಾರರೆಂದು ನೊಂದಾಯಿಸಿಕೊಂಡಿದ್ದರು. ಬಳ್ಳಾರಿ ಭಾಗದಲ್ಲಿ ಪ್ರತಿಶತ 35 ಭಾಗದಷ್ಟು ಜಮೀನು ಕಂದಾಯ ರಹಿತವಾಗಿತ್ತು. ಅಂದರೆ ಅವು ಮಂದಿರಗಳಿಗೆ ಶಾಲೆಗಳಿಗೆ ಆಸ್ಪತ್ರೆ ಮುಂತಾದವುಗಳಿಗೆ ಬಿಟ್ಟುಕೊಟ್ಟ ದಾನ-ದತ್ತಿಯ ಜಮೀನಾಗಿತ್ತು. ಬ್ರಿಟೀಷರು ಕಾಲಕ್ರಮದಲ್ಲಿ ಈ ಕಂದಾಯರಹಿತ ಜಮೀನನ್ನು ಕಂದಾಯ ಸಹಿತ ಜಮೀನಾಗಿ ಪರಿವತರ್ಿಸಿದರು. ನೋಡ ನೋಡುತ್ತಲೇ ಬಳ್ಳಾರಿಯ ಪ್ರತಿಶತ 30 ಭಾಗದಷ್ಟು ಜಮೀನನ್ನು ಕಂದಾಯ ಕಟ್ಟುವ ವ್ಯಾಪ್ತಿಗೆ ಎಳೆತಂದು, ವಿಪರೀತ ಪ್ರಮಾಣದ ತೆರಿಗೆ ಹೇರಿದರು. ಸಹಜವಾಗಿಯೇ ಹೈರಾಣಾದ ಜನತೆ ಊರಿನ ವ್ಯವಸ್ಥೆಯ ಉಸಾಬರಿಯಿಂದ ದೂರನಿಲ್ಲುವಂತಾಯ್ತು. ಆದಾಯದ ಮೂಲ ನಿಂತಿದ್ದರಿಂದ ಬೋಧಕರು, ವೈದ್ಯರು ಮೊದಲಾದವರೆಲ್ಲ ಅಕ್ಷರಶಃ ಭಿಕ್ಷಾಟನೆ ಮಾಡಬೇಕಾದ ಪರಿಸ್ಥಿತಿ ಬಂತು. ಕಾಲಕ್ರಮೇಣ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗದೇ ಅವರೂ ಕೂಡ ಇತರೆ ವೃತ್ತಿಗಳನ್ನು ಅರಸಲಾರಂಭಿಸಿದರು ಅಥವಾ ಸಕರ್ಾರಿ ನೌಕರಿಯೆಡೆ ಮುಖ ಮಾಡಿ ಕುಳಿತರು. ಬಳ್ಳಾರಿಯ ಕಲೆಕ್ಟರ್ ಈ ಕುರಿತಂತೆ ಬರೆದ ಸಾಲುಗಳು ಮನನ ಯೋಗ್ಯ. ‘ಸ್ಥಳೀಯ ಸಂಪತ್ತು ಮೊದಲು ಸ್ಥಳೀಯವಾಗಿಯೇ ವಿನಿಯೋಗವಾಗುತ್ತಿತ್ತು. ಈಗ ಅದು ಯೂರೋಪಿಗೆ ವರ್ಗವಾಗುತ್ತಿದೆ. ಇದರಿಂದ ರಾಜ್ಯದ ವರಮಾನ ಬಲು ಕಡಿಮೆಯಾಗಿಬಿಟ್ಟಿದೆ. ಹೀಗಾಗಿ ಈ ದೇಶದ ಬಹುತೇಕ ಮಧ್ಯಮ ಮತ್ತು ಕೆಳವರ್ಗದ ಜನರಿಗೆ ತಮ್ಮ ಮಕ್ಕಳ ಶಿಕ್ಷಣದ ಶುಲ್ಕ ಪಾವತಿಸುವುದೂ ಕಠಿಣವಾಗುತ್ತಿದೆ. ಗುಡಿಕೈಗಾರಿಕೆಗಳ ಕಾಲಕ್ಕೆ ಮಕ್ಕಳೂ ಸಣ್ಣ-ಪುಟ್ಟ ಕೆಲಸಗಳಿಂದ ಸಂಪಾದನೆ ಮಾಡುತ್ತಿದ್ದರು. ಈಗ ಅದೂ ನಿಂತಿದೆ’ ಎಂದದ್ದನ್ನು ಮತ್ತೆ ಮತ್ತೆ ಓದಿಕೊಳ್ಳಬೇಕು. ಇಲ್ಲಿನ ವ್ಯವಸ್ಥೆಯನ್ನು ಪೂತರ್ಿ ಬುಡಮೇಲುಗೊಳಿಸಿದ ಬ್ರಿಟೀಷರು ಶಿಕ್ಷಣ ಪದ್ಧತಿ ಮೂಲಸ್ವರೂಪದಲ್ಲಿರಲು ಬಿಡಲೇ ಇಲ್ಲ.
ಬಹುಶಃ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಓದಿದ ವಿದ್ಯಾಥರ್ಿಗಳಿಗೆ ನಾನು ಹೇಳ ಹೊರಟಿರುವ ಸಂಗತಿಗಳು ಅರ್ಥವಾದೀತು. ನಮ್ಮೂರಿನ ಶಾಲೆಗೆ ಅಕ್ಕಪಕ್ಕದ ಹಳ್ಳಿಗಳಿಂದ ಬರುತ್ತಿದ್ದ ವಿದ್ಯಾಥರ್ಿಗಳು ಶಾಲಾ ಶುಲ್ಕವನ್ನು ಕಟ್ಟಿದ ನಂತರವೂ ಮನೆಪಾಠಕ್ಕೆ ಹೋಗುವಾಗ ತೋಟದಲ್ಲಿ ಬೆಳೆದ ತರಕಾರಿ, ದವಸ-ಧಾನ್ಯವನ್ನು ಉಪಾಧ್ಯಾರಿಗೆ ಒಯ್ದು ಕೊಡುತ್ತಿದ್ದನ್ನು ಕಂಡಿದ್ದೇನೆ. ಅಷ್ಟೇ ಅಲ್ಲ. ದೊಡ್ಡೂರಿನ ಹೋಟೆಲ್ಲುಗಳಲ್ಲಿ ಬೇಸಿಗೆ ರಜೆಯ ವೇಳೆಗೆ ಕೆಲಸಮಾಡಿ ಶಾಲೆಗೆ ಬೇಕಾದ ಶುಲ್ಕ ಹೊಂದಿಸಿಕೊಳ್ಳುತ್ತಿದ್ದ ಹುಡುಗರನ್ನೂ ನೋಡಿದ್ದೇನೆ. ಈಗ ಎಲ್ಲವೂ ಕಡಿಮೆಯಾಗುತ್ತಿದೆ ನಿಜ, ಆದರೆ ಬ್ರಿಟೀಷ್ ಅಧಿಕಾರಿಗಳ ವಾಕ್ಯವನ್ನು ಪುಷ್ಟೀಕರಿಸಲು ತೀರಾ ಇತ್ತೀಚಿನವರೆಗೂ ನಡೆಯುತ್ತಿದ್ದ ಈ ಘಟನೆಗಳೇ ಸಾಕ್ಷಿ!

33
ಬ್ರಿಟೀಷರ ಈ ಬಗೆಯ ನೀತಿಯಿಂದಾಗಿ ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಸಾವಿರಾರು ಶಾಲೆಗಳು ಮುಚ್ಚಿ ಹೋಗಿದ್ದವು. ಶ್ರೀಮಂತರು ಮಾತ್ರ ಶಾಲೆಗೆ ಕಳಿಸಬಲ್ಲವರಾಗಿದ್ದರು. ಜಿಲ್ಲೆಯಲ್ಲಿ ಉಳಿದ 533 ಶಿಕ್ಷಣ ಸಂಸ್ಥೆಗಳಲ್ಲಿ ಒಂದಕ್ಕೂ ಸಕರ್ಾರಿ ನೆರವು ಇಲ್ಲವೆಂಬುದನ್ನು ಕಲೆಕ್ಟರ್ ದಾಖಲಿಸಿದ್ದಾನೆ. ಸ್ವತಃ ಥಾಮಸ್ ಮನ್ರೋ ಎಲ್ಲಾ ಕಲೆಕ್ಟರುಗಳ ವರದಿ ಸಂಗ್ರಹಿಸಿದ ನಂತರ ‘ನಮ್ಮ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕಡಿಮೆ ಎನಿಸಿದರೂ ಇತರೆ ಯೂರೋಪ್ ದೇಶಗಳಿಗೆ ಹೋಲಿಸಿದಾಗ ಅದು ಹೆಚ್ಚೇ’ ಎಂದು ಉದ್ಗರಿಸಿದ್ದಾನೆ. ಅವನ ಹೇಳಿಕೆಯ ಮೊದಲಾರ್ಧ ಸಹಜವಾದ ಬಿಳಿಯರ ಧಿಮಾಕಿನ ದ್ಯೋತಕ. ಹೀಗಾಗಿಯೇ ಆತ ಈ ವಾಕ್ಯ ಮುಂದುವರಿಸಿ ‘ಈ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇದಕ್ಕೂ ಮುನ್ನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದುಬಿಡುತ್ತಾನೆ. ಅದರರ್ಥ ಬಲು ಸ್ಪಷ್ಟ. ಬ್ರಿಟೀಷರು ಬಂದ ಮೇಲೆಯೇ ಇಲ್ಲಿನ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಶಾಲೆಗಳ ಸಂಖ್ಯೆ-ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು.
ಪಂಜಾಬಿನ ನುರಿತ ಶಿಕ್ಷಣ ತಜ್ಞರು ನೀಡಿದ ವರದಿಯ ಆಧಾರದ ಮೇಲೆ ಡಾ|| ಲೈಟ್ನರ್ ಮಂಡಿಸುವ ವಿಚಾರ ನೋಡಿದರೆ ನೀವು ಅವಾಕ್ಕಾಗುವಿರಿ. ಅವರು ಹೇಳುವಂತೆ ‘ಶಿಕ್ಷಣದ ಕುರಿತಂತೆ ಪೂರ್ವ ದೇಶದ ಜನರಿಗೆ ಯಾವಾಗಲೂ ಒಂದು ಗೌರವದ ಭಾವನೆ ಇದೆ. ಆಗಾಗ್ಗೆ ದಾಳಿ ಮತ್ತು ನಾಗರಿಕ ಯುದ್ಧಗಳು ನಡೆದ ನಂತರವೂ ಇಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಜನ ಸಾಮಾನ್ಯರೂ ಕೂಡ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಶಿಕ್ಷಣ ನೀಡುವವರಿಗಾಗಿ ತನ್ನ ಉತ್ಪಾದನೆಯ ಒಂದಷ್ಟು ಭಾಗವನ್ನು ನೀಡದ ಯಾವ ಹಳ್ಳಿಗನೂ ಇರಲಿಲ್ಲ. ಹೀಗಾಗಿಯೇ ಎಷ್ಟೇ ಕಡಿಮೆ ಎಂದರೂ ಈಗಿರುವ ಕನಿಷ್ಠ ಪಕ್ಷ ಮೂರು ಪಟ್ಟು ಹೆಚ್ಚು ಜನ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು’ ಎಂದು ಅಪರೂಪದ ಅಂಕಿ-ಅಂಶಗಳನ್ನು ಬಯಲಿಗಿಡುತ್ತಾರೆ. ಅಷ್ಟೇ ಅಲ್ಲ. ಆಕ್ರಮಣಕಾರಿಯಾಗಿ ಇವೆಲ್ಲವನ್ನೂ ಬದಲಾವಣೆ ಮಾಡಿದ ನಂತರವೂ ಭಾರತೀಯರು ತಮಗೆ ಗೌರವ ಸಲ್ಲಿಸುತ್ತಿದ್ದಾರೆಂಬುದನ್ನು ಅವರು ವಿನಮ್ರವಾಗಿ ಹೇಳಿಕೊಂಡಿದ್ದಾರೆ.

32
ಭಾರತೀಯ ಶಿಕ್ಷಣದ ಕುರಿತಂತೆ ತನ್ನ ವಾಯೇಜ್ ಟು ಈಸ್ಟ್ ಕೃತಿಯಲ್ಲಿ ಪ್ರೋಲಿನೋ ಡ ಬಾತರ್ಾ ಲೋಮಿಯೋ , ‘ಭಾರತದ ಶಿಕ್ಷಣ ಪದ್ಧತಿಯು ಯೂರೋಪಿನವರಿಗಿಂತ ಸರಳವೂ, ಕಡಿಮೆ ಖಚರ್ಿನದೂ ಆಗಿದೆ’ ಎಂದಿದ್ದಾನೆ. ಗುರುಗಳು ತರಗತಿಗೆ ಬರುತ್ತಿದ್ದಂತೆ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ವಿದ್ಯಾಥರ್ಿಗಳು ಬಲಗೈಯಿಂದ ಬಾಯಿ ಮುಚ್ಚಿಕೊಳ್ಳುತ್ತಾರೆ. ಗುರುಗಳು ಹೇಳುವವರೆಗೆ ಮುಚ್ಚಿದ ಕೈ ತೆಗೆಯುವುದಿಲ್ಲ ಎಂಬುದನ್ನೂ ಗುರುತಿಸಿದ್ದಾನೆ. ಜೊತೆಗೆ ಭಾರತದಲ್ಲಿ ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದೇಶೀಯರು ಭಾರತಕ್ಕೆ ಬಂದಾಗಿನಿಂದ ತೀವ್ರತರದ ಪತನವಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ.
ನಮ್ಮ ಶಿಕ್ಷಣ ಪದ್ಧತಿ ಯೂರೋಪಿನವರಿಗಿಂತ ಕಡಿಮೆ ಖಚರ್ಿನದ್ದಾಗಿದ್ದೇಕೆ ಗೊತ್ತೇ? ಇಲ್ಲಿ ಗುರುಗಳು ಹಣಕ್ಕಾಗಿ ಬೋಧನೆ ಮಾಡುವವರಾಗಿರಲಿಲ್ಲ. ಹಾಗೆಯೇ ಕಲಿಕೆಯ ಸಾಮಗ್ರಿಗಳು ಮತ್ತು ವಿಧಾನ ಎರಡೂ ಸರಳವಾಗಿದ್ದವು. ಡಬ್ಲ್ಯೂ ಯೇಡಮ್ ಭಾರತೀಯ ಪ್ರಾಥಮಿಕ ಶಾಲೆಗಳ ವರದಿ ನೀಡುವಾಗ ನಾಲ್ಕು ಹಂತದ ಶಿಕ್ಷಣ ಕ್ರಮ ವಿವರಿಸುತ್ತಾನೆ, ಮೊದಲ ಹಂತದ ಹತ್ತು ದಿನಗಳು ನೆಲದ ಮೇಲೆ ಬಿದಿರಿನ ಕಡ್ಡಿಯಿಂದ ಅಕ್ಷರಗಳನ್ನು ಬರೆಯುವುದು(ಕೆಲವೆಡೆ ಮರಳನ್ನು ಇದಕ್ಕಾಗಿ ಬಳಸುತ್ತಿದ್ದರು). ಎರಡನೇ ಅವಧಿ ಮುಂದಿನ ಎರಡೂವರೆಯಿಂದ ನಾಲ್ಕು ವರ್ಷಗಳ ಕಾಲ ತಾಳೆಗರಿಯಲ್ಲಿ ಬರೆಯುವುದು. ಈ ಹೊತ್ತಿನಲ್ಲಿ ಅಕ್ಷರದ ಉಚ್ಚಾರಣೆ ಅದನ್ನು ಬರೆಯುವುದರ ಕುರಿತಂತೆ ಅಭ್ಯಾಸ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಸಂಧ್ಯಾಕ್ಷರಗಳು, ನದಿ ಪರ್ವತಗಳ ಹೆಸರುಗಳು, ಒಂದಷ್ಟು ಲೆಕ್ಕಗಳನ್ನು ಕಲಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ವಿದ್ಯಾಥರ್ಿಗಳು ಕೃಷಿ, ವಾಣಿಜ್ಯನೆಂದು ಬೇರ್ಪಟ್ಟು ಆಯಾ ವಿಭಾಗದಲ್ಲಿ ತಜ್ಞರ ಮಾರ್ಗದರ್ಶನ ಪಡೆದು ಅಧ್ಯಯನ ಮಾಡುತ್ತಾರೆ.
ಗಾಂಧೀಜಿಗೆ ಎಡತಾಕಿದ ಫಿಲಿಪ್ ಹಾರ್ಟಗ್ಗೆ ಉತ್ತರಿಸಿದ ಎಡ್ವಡರ್್ ಥಾಮ್ಸನ್ ಪಶ್ಚಿಮದಲ್ಲಿ ಸಾಕ್ಷರತೆ ಎಂಬುದು ಶಾಲೆಗೆ ಹೋಗುವವರ ಹಾಜರಾತಿ ಎಂಬ ಭಾವನೆ ಇರುವುದನ್ನು ಗುರುತಿಸಿ ವ್ಯಂಗ್ಯವಾಡುತ್ತಾರೆ. ಅಲ್ಲಿನ ವಾರಪತ್ರಿಕೆಗಳು, ದಿನಪತ್ರಿಕೆಗಳು ಓದುವವರಿಲ್ಲದೇ ಸಾಯುವ ಸ್ಥಿತಿಯಲ್ಲಿವೆ ಎಂದು ಗೇಲಿಯಾಡುತ್ತಾನೆ. ಅದೇ ವೇಳೆಗೆ ಬಂಗಾಳದ ಬಜಾರುಗಳಲ್ಲಿ ಮಾರಾಟವಾಗುವ ರಾಮಪ್ರಸಾದ, ಚಂಡಿದಾಸನ ಕೃತಿಗಳು, ರಾಮಾಯಣ-ಮಹಾಭಾರತಗಳ ಕುರಿತಂತೆ ಆತ ಹುಬ್ಬೇರಿಸುತ್ತಾನೆ. ಒಟ್ಟಾರೆ ಆತನ ಪತ್ರದ ಸಾರಾಂಶ ಶಾಲೆಗಳೆಷ್ಟಿವೆಯೋ ಅದಕ್ಕೂ ಹೆಚ್ಚಿನ ಸಾಕ್ಷರತೆ ಭಾರತದಲ್ಲಿದೆ ಎಂಬುದೇ ಆಗಿತ್ತು. ಅಂದರೆ ಶಾಲೆಗೆ ಹೋಗದೇ ಮನೆಯಲ್ಲಿಯೇ ಕಲಿಯುವವರಿಗೂ ಇಲ್ಲಿ ಕೊರತೆ ಇರಲಿಲ್ಲ. ಹಾಗೆಂದೇ 1819 ರಲ್ಲಿ ಮುಂಬಯಿಯ ಎಜುಕೇಶನ್ ಸೊಸೈಟಿಯ ವರದಿಯೊಂದರಲ್ಲಿ ‘ಭಾರತದಲ್ಲಿ ಹೆಚ್ಚಿನ ಜನ ಓದು-ಬರವಣಿಗೆಯನ್ನೂ ಬಲ್ಲರು, ಹಾಗೆಯೇ ಸರಳವಾದ ಲೆಕ್ಕಗಳನ್ನೂ ಮಾಡಬಲ್ಲರು’ ಎಂದಿದೆ. 1821 ರಲ್ಲಿ ಮುಂಬೈ ಸರಕಾರದ ಕಾರ್ಯ ನಿವರ್ಾಹಕ ಅಧಿಕಾರಿ ಶ್ರೀ ಫ್ರಿಂಡರ್ ಗಾಸ್ಟ್ ‘ಭಾರತದಲ್ಲಿ ಎಷ್ಟು ಒಳ್ಳೆಯ ವಿದ್ಯೆ ದೊರಕುತ್ತಿತ್ತೆಂದರೆ ಇಲ್ಲಿ ಎಲ್ಲರೂ ತಮ್ಮ ಲೆಕ್ಕಾಚಾರಗಳನ್ನು ಸುಲಭವಾಗಿ ತಾವೇ ಸಂಭಾಳಿಸುತ್ತಾರೆ. ನಮ್ಮ ದೇಶದಲ್ಲಾದರೋ ಒಬ್ಬ ದೊಡ್ಡ ಕೃಷಿಕ, ಸಣ್ಣ ವ್ಯಾಪಾರಿ ಕೂಡ ತಮ್ಮ ಲೆಕ್ಕ ತಾವೇ ಮಾಡಬಲ್ಲಷ್ಟು ಶಿಕ್ಷಣ ಪಡೆದಿಲ್ಲ’ ಎಂದು ಅಚ್ಚರಿಯಿಂದ ಹೇಳಿದ್ದಾನೆ.
ಇವಿಷ್ಟನ್ನೂ ಹಂಚಿಕೊಳ್ಳಬೇಕಾದ ಉದ್ದೇಶ ಇಷ್ಟೇ. ಗುರುಕುಲಗಳ ಶಿಕ್ಷಣ ರೂಪಾಂತರಗೊಂಡು, ತಕ್ಷಶಿಲಾ, ನಲಂದಾ, ವಿಕ್ರಮಶಿಲಾದಂತಹ ವಿಶ್ವವಿದ್ಯಾಲಯಗಳಾಗಿ ಅಗಾಧವಾಗಿ ಬೆಳೆದು ನಿಂತವು. ಅದೂ ಬದಲಾವಣೆ ಹೊಂದಿ ಮಂದಿರ ಕೇಂದ್ರಿತ, ಅಗ್ರಹಾರಗಳಿಗೆ ಸೀಮಿತವಾದ ಶಿಕ್ಷಣ ಕೇಂದ್ರವಾದವು. ಕಾಲಕ್ರಮದಲ್ಲಿ ಇದು ದಿನದ ಶಾಲೆಯಾಗಿಯೂ ಬದಲಾವಣೆ ಹೊಂದಿತು. ರೂಪಗಳಲ್ಲಿ ಬದಲಾವಣೆ ಬಂದಂತೆಲ್ಲಾ ಶಿಕ್ಷಣದ ವ್ಯಾಪ್ತಿ ವಿಸ್ತಾರಗೊಳ್ಳುತ್ತ ಸಾಗಿತು. ಹೆಚ್ಚು ಹೆಚ್ಚು ಜನ ಜೀವನಕ್ಕೆ ಬೇಕಾದ ಅಗತ್ಯ ವಿದ್ಯೆಯನ್ನು ತಮ್ಮದಾಗಿಸಿಕೊಂಡರು. ಪಾಂಡಿತ್ಯ ಪಡೆದು ಬುದ್ಧಿವಂತರೆನಿಸಿಕೊಂಡರು. ಬಿಳಿಯರಿಗಿಂತ ಬುದ್ಧಿವಂತರಿರುವುದನ್ನು ಸಹಿಸದ ಆಂಗ್ಲರು ಇದನ್ನೆಲ್ಲಾ ಧಿಕ್ಕರಿಸಿ ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ ತಾವೇ ಇಂಗ್ಲೀಷು ಶಾಲೆಗಳನ್ನು ಪರಿಚಯಿಸಿದರು. ಅದೇ ವೇಳೆಗೆ ಇಲ್ಲಿನ ಶಿಕ್ಷಣ ಕ್ರಮವನ್ನು ಅನಾಮತ್ತು ನಕಲು ಮಾಡಿ ತಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದರು. ಪೀಟರ್ ಡೆಲ್ಲಾ ವಿಲ್ಲಿಯೆಂಬ ಯಾತ್ರಿಕ ಯೂರೋಪಿನ ಜನ ಶಿಕ್ಷಣದಲ್ಲಿ ಆಸಕ್ತಿ ತೋರುವಂತೆ ಮಾಡುವಲ್ಲಿ ಭಾರತೀಯ ಪದ್ಧತಿಯನ್ನು ಅಳವಡಿಸಿದ್ದೇ ಕಾರಣವೆಂದೂ, ಆರಂಭದಲ್ಲಿ ಭಾರತಕ್ಕೆ ಶಿಕ್ಷಣ ತಂದವರೇ ತಾವೆಂದು ಬೀಗುತ್ತಿದ್ದ ಮಿಶನರಿಗಳಿಗೆ ತಮ್ಮದು ಇಲ್ಲಿಂದ ಎರವಲು ಪಡೆದಿರುವ ಶಿಕ್ಷಣ ಪದ್ಧತಿ ಎನ್ನುವುದು ಈಗೀಗ ಅರ್ಥವಾಗುತ್ತಿದೆ ಎಂದೂ ಖಂಡಿತ ಧ್ವನಿಯಲ್ಲಿ ಹೇಳುತ್ತಾನೆ.
ಆದರೇನು? ಆಳುವ ಬಿಳಿಯರ ಮಾತುಗಳನ್ನು ನಂಬಿ, ಅದನ್ನೇ ಸತ್ಯವೆಂದು ಸಾಧಿಸುತ್ತ ನಡೆದ ಇಲ್ಲಿನ ವಿದ್ವತ್ ವಲಯ ಭಾರತದ ಕುರಿತಂತೆ ಹೇಳಿದ ಇಂತಹ ಹೇಳಿಕೆಗಳನ್ನು ಲೇವಡಿಮಾಡಿತು. ಬ್ರಿಟೀಷರು ಹುಟ್ಟು ಹಾಕಿದ ಜಾತಿ-ಮತ-ಪಂಥಗಳ ತಾಕಲಾಟವನ್ನು ಹಿಗ್ಗಿಸಲು ಕೈ ಜೋಡಿಸಿತು. ಹೆಚ್ಚು ಹೆಚ್ಚು ಕಲಿತಷ್ಟು ದೇಶವನ್ನು, ಧರ್ಮವನ್ನೂ ಅವಹೇಳನ ಮಾಡುವ ಪ್ರಕ್ರಿಯೆ ಹೆಚ್ಚು ಹೆಚ್ಚಾಯ್ತು. ಶಿಕ್ಷಣ ಅನ್ನೋದು ಭಾರತಕ್ಕೆ ಕಂಟಕವಾಗಿದ್ದು ಹೀಗೆ.
ಏಕೆಂದರೆ ಈಗಿನ ಶಿಕ್ಷಣ ಕ್ರಮ ಪಾಶ್ಚಾತ್ಯರು ನಮ್ಮ ಪದ್ಧತಿಯನ್ನು ಬುಡಮೇಲುಗೊಳಿಸಿ ತಾವೇ ನೆಟ್ಟ ಆಂಗ್ಲನಾಡಿನ ಸಸಿ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s