ಸುಂದರ ವೃಕ್ಷ ಬುಡ ಸಮೇತ ಕಿತ್ತೊಗೆದರು!!

ಸುಂದರ ವೃಕ್ಷ ಬುಡ ಸಮೇತ ಕಿತ್ತೊಗೆದರು!!

ಅಂದಿನ ದಿನಗಳಲ್ಲಿ ಜ್ಞಾನಿಗೆ ನೀಡುತ್ತಿದ್ದ ಗೌರವದ ಕುರಿತಂತೆ ಒಂದು ವಿಶೇಷ ಉಲ್ಲೇಖವಿದೆ. ಅದೊಮ್ಮೆ ಸುಮಾರು 8000 ಭಿಕ್ಷುಗಳ ಮಹಾ ಸಮಾವೇಶ ವಿಕ್ರಮಶಿಲೆಯಲ್ಲಿ ನಡೆದಿತ್ತಂತೆ. ಮಗಧದ ರಾಜನಿಗೆ ಎಲ್ಲರಿಗಿಂತಲೂ ಎತ್ತರದ ಪೀಠ ನೀಡಲಾಗಿತ್ತು. ಆದರೆ ಆತ ಬರುವಾಗ ಹಿರಿ-ಕಿರಿಯ ಭಿಕ್ಷುಗಳಲ್ಲಿ ಯಾರೊಬ್ಬರೂ ಎದ್ದು ನಿಲ್ಲಲಿಲ್ಲವಂತೆ. ಆದರೆ ಬಹುಶ್ರುತ ಪಂಡಿತ ವೀರವಜ್ರ ಆಸ್ಥಾನ ಪ್ರವೇಶಿಸುವಾಗ ರಾಜನೂ ಸೇರಿದಂತೆ ಪ್ರತಿಯೊಬ್ಬರೂ ನಿಂತು ಗೌರವಿಸಿದರಂತೆ. ‘ವಿದ್ವಾನ್ ಸರ್ವತ್ರ ಪೂಜ್ಯತೆ’ (ಜ್ಞಾನಿಗೆ ಎಲ್ಲೆಡೆ ಗೌರವವಿದೆ) ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದ ಕಾಲ ಅದು.

ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ನೆನಪಿದೆಯಲ್ಲಾ? ‘ಆಜಾದಿ’ ಮದೋನ್ಮತ್ತ ಪುಂಡರ ತಾಣ. ಇತ್ತೀಚೆಗೊಂದು ಆರ್ಟಿಐ ಕಾಯಿದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ದೊರೆತ ಮಾಹಿತಿಯ ಪ್ರಕಾರ ಕಳೆದ ಆರೇಳು ವರ್ಷಗಳಿಂದ ಅಲ್ಲಿ ನಿರಂತರ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ತಿಂಗಳಿಗೆ ಹೆಚ್ಚೂ ಕಡಿಮೆ ಏಳು ಜನರ ಮೇಲೆ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತು ಸೇವನೆಯ ಜೊತೆಗೆ ಮಹಿಳೆಯರೊಂದಿಗೆ ಲೈಂಗಿಕವಾಗಿ ಅಸಭ್ಯವಾಗಿ ವತರ್ಿಸಿದ ಉದಾಹರಣೆಗಳೂ ಸಾಕಷ್ಟಿವೆ. ಅವಧಿ ಮುಗಿದ ನಂತರವೂ ಹಾಸ್ಟೆಲ್ಲಿನಲ್ಲಿ ಇದ್ದು ವಾತಾವರಣವನ್ನು ಕಲುಷಿತಗೊಳಿಸುವವರೂ ಇದ್ದಾರೆ. ಇವರೆಲ್ಲರಿಗೂ ವಿದ್ಯಾಥರ್ಿ ವೇತನ ಕೊಟ್ಟು ಸಾಕಿ ಸಲಹುವ ಕೆಲಸ ಸಕರ್ಾರದ್ದು! ಅದಕ್ಕಾಗಿ ತೆರಿಗೆ ಕಟ್ಟುವ ದದರ್ು ನಮ್ಮದ್ದು. ಪಾಟಲೀಪುತ್ರ, ತಕ್ಷಶಿಲಾ, ನಲಂದಾದಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಬಗ್ಗೆ ಚಚರ್ೆ ಮಾಡುತ್ತಾ ಶತಮಾನಗಳ ಹಿಂದೆ ಕಳೆದು ಹೋದವರನ್ನು ಒಮ್ಮೆ ವಾಸ್ತವಕ್ಕೆ ತರಬೇಕೆಂಬ ಪ್ರಯತ್ನ ಅಷ್ಟೇ.

1

ನಲಂದಾದಂತಹುದ್ದೇ ಮತ್ತೊಂದು ಶ್ರೇಷ್ಠ ಶಿಕ್ಷಣ ಸಂಸ್ಥೆ ವಿಕ್ರಮಶಿಲಾ. ನಲಂದಾ ಉತ್ತುಂಗ ಶಿಖರದಲ್ಲಿದ್ದು ಹೆಸರು ಗಳಿಸಿದಾಗಲೇ ಈ ವಿಶ್ವವಿದ್ಯಾಲಯವೂ ಪ್ರವರ್ಧಮಾನಕ್ಕೆ ಬಂದಿತ್ತು. ಹಾಗಂತ ನಲಂದಾದೊಂದಿಗೆ ಅದಕ್ಕೆ ಎಂದೂ ಕಿತ್ತಾಟವಿರಲಿಲ್ಲ, ಇವೆರಡರ ಸಂಪರ್ಕ ಅದೆಷ್ಟು ಸುಮಧುರವಾಗಿತ್ತೆಂದರೆ ದೀಪಂಕರ, ಅಭಯಂಕರರಂತಹ ಅಧ್ಯಾಪಕರೂ ಎರಡೂ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡುತ್ತಿದ್ದರಂತೆ. ಕೆಲವೊಮ್ಮೆ ಆಚಾರ್ಯರ ವಿನಿಮಯವೂ ಕೂಡ ನಡೆಯುತ್ತಿತ್ತು! ಮಗಧದ ಉತ್ತರ ದಿಕ್ಕಿಗೆ ಗಂಗಾ ತಟದ ಮೇಲೆ ವಿಕ್ರಮಶಿಲೆಯನ್ನು ಗುರುತಿಸಲಾಗುತ್ತದೆ. ಭಾಗಲ್ಪುರದ ಸುಲ್ತಾನ್ಗಂಜ್ ಎಂದು ವಿದ್ವಾಂಸರ ಅಭಿಮತ. ಕೆಲವು ಟಿಬೇಟಿನ ಸಾಹಿತ್ಯಗಳನ್ನು ಅಧ್ಯಯನ ಮಾಡಿದಾಗ ತಿಳಿದು ಬರುವ ಅಂಶವೆಂದರೆ ಈ ವಿಶ್ವವಿದ್ಯಾಲಯದ ಮಧ್ಯದ ವಿಶಾಲ ಹಜಾರದಿಂದ ಆರು ಮಹಾದ್ವಾರಗಳ ಮೂಲಕ ಆರು ಮಹಾ ವಿದ್ಯಾಲಯಗಳಿಗೆ ಹೋಗಬಹುದಿತ್ತಂತೆ. ಈ ಮಹಾ ವಿದ್ಯಾಲಯಗಳ ರಕ್ಷಣೆಗೆ ನಿಂತ ಸೆಕ್ಯುರಿಟಿಯವನನ್ನು ದ್ವಾರಪಂಡಿತ ಎಂದೇ ಸಂಬೋಧಿಸುತ್ತಿದ್ದರಂತೆ. ಈ ಪಂಡಿತರ ಸಮಕ್ಕಿದ್ದವರು ದ್ವಾರ ಪಂಡಿತರಾಗಬಹುದು. ಅವರಿಗಿಂತಲೂ ಬುದ್ಧಿವಂತರು ಮಾತ್ರ ಮಹಾವಿದ್ಯಾಲಯದ ಒಳಹೊಕ್ಕಬಹುದು ಎಂಬ ಕಲ್ಪನೆಯಿರಬಹುದು. ಇನ್ನು ಅಲ್ಲಿನ ಕುಲಪತಿಗಳ ಪಾಂಡಿತ್ಯ ಹೇಗಿರಬಹುದೆಂಬುದನ್ನು ಊಹಿಸಿಯೇ ನೋಡಬೇಕಷ್ಟೇ.
ವಿಕ್ರಮಶಿಲಾದ ಕುರಿತಂತೆ ಅಧಿಕೃತವಾದ ಇತಿಹಾಸ ಕೆದಕುವುದು ಕಠಿಣ. ಆದರೆ ಇಲ್ಲಿಂದ ಪಾಂಡಿತ್ಯ ಪಡೆದು ಟಿಬೇಟಿನ ಬೌದ್ಧಿಕ ವಿಸ್ತಾರಕ್ಕೆ ಹೊರಟವರ ಕುರಿಂತಂತೆ ಅಲ್ಲಿನ ಸಾಹಿತ್ಯಗಳು ಬೆಳಕು ಚೆಲ್ಲುತ್ತವೆ. ಒಂದು ವಿಶ್ವವಿದ್ಯಾಲಯದ ಘನತೆಯೇ ಅದು. ತನ್ನಿಂದ ಮಾಗಿ ಫಲವಾದ ಎಷ್ಟು ಹಣ್ಣುಗಳು ಇತರೆಡೆ ಮರವಾಗಿವೆ ಎನ್ನೋದು. ರಾಜಾಧರ್ಮಪಾಲನ ರಾಜ ಪುರೋಹಿತನಾಗಿದ್ದು ಆನಂತರ ವಿಕ್ರಮ ಶಿಲೆಯ ಸಮಸ್ತ ಜವಾಬ್ದಾರಿ ಹೊತ್ತ ಆಚಾರ್ಯ ಜ್ಞಾನಪಾದ, ಪದ್ಮಸಂಭವನ ಮಗನಾದ ವೈರೋಚನ, ದ್ವಾರಪಂಡಿತನಾಗಿದ್ದು ಅನೇಕ ಕೃತಿ ರಚಿಸಿದ ಪ್ರಜ್ಞಾಕರ ಮತಿ, ರತ್ನಾಕರಶಾಂತಿ, ಜ್ಞಾನ ಶ್ರೀ, ರತ್ನವಜ್ರ ಮೊದಲಾದವರೆಲ್ಲ ಟಿಬೇಟಿಗೆ ಹೋಗಿ ಸಾಕಷ್ಟು ಹೆಸರು ಗಳಿಸಿದವರೇ.
ಅಂದಿನ ದಿನಗಳಲ್ಲಿ ಜ್ಞಾನಿಗೆ ನೀಡುತ್ತಿದ್ದ ಗೌರವದ ಕುರಿತಂತೆ ಒಂದು ವಿಶೇಷ ಉಲ್ಲೇಖವಿದೆ. ಅದೊಮ್ಮೆ ಸುಮಾರು 8000 ಭಿಕ್ಷುಗಳ ಮಹಾ ಸಮಾವೇಶ ವಿಕ್ರಮಶಿಲೆಯಲ್ಲಿ ನಡೆದಿತ್ತಂತೆ. ಮಗಧದ ರಾಜನಿಗೆ ಎಲ್ಲರಿಗಿಂತಲೂ ಎತ್ತರದ ಪೀಠ ನೀಡಲಾಗಿತ್ತು. ಆದರೆ ಆತ ಬರುವಾಗ ಹಿರಿ-ಕಿರಿಯ ಭಿಕ್ಷುಗಳಲ್ಲಿ ಯಾರೊಬ್ಬರೂ ಎದ್ದು ನಿಲ್ಲಲಿಲ್ಲವಂತೆ. ಆದರೆ ಬಹುಶ್ರುತ ಪಂಡಿತ ವೀರವಜ್ರ ಆಸ್ಥಾನ ಪ್ರವೇಶಿಸುವಾಗ ರಾಜನೂ ಸೇರಿದಂತೆ ಪ್ರತಿಯೊಬ್ಬರೂ ನಿಂತು ಗೌರವಿಸಿದರಂತೆ. ‘ವಿದ್ವಾನ್ ಸರ್ವತ್ರ ಪೂಜ್ಯತೆ’ (ಜ್ಞಾನಿಗೆ ಎಲ್ಲೆಡೆ ಗೌರವವಿದೆ) ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದ ಕಾಲ ಅದು.

2 vallabhi
ನಲಂದಾ, ವಿಕ್ರಮಶಿಲಾಗಳಂತೆ ಸಾಕಷ್ಟು ಕೇಳಿ ಬರುವ ಮತ್ತೊಂದು ವಿಶ್ವವಿದ್ಯಾಲಯ ‘ವಲ್ಲಭಿ’. ಈಗಿನ ಗುಜರಾತಿನ ಭಾವನಗರದ ಬಳಿ ವಲ್ಲಭಿಪುರದಲ್ಲಿ ಗುರುತಿಸಲ್ಪಡುವ ಈ ಸಂಸ್ಥೆ ನಲಂದಾಕ್ಕೆ ಸಂವಾದಿಯಾಗಿ ಬೆಳೆದು ನಿಂತಿತ್ತಂತೆ. ನಲಂದಾ ಮಹಾಯಾನ ಪರಂಪರೆಗೆ ಶಕ್ತಿ ತುಂಬಿ ನಿಂತರೆ ವಲ್ಲಭಿ ಶಿಕ್ಷಾಥರ್ಿಗಳಿಗೆ ಹೀನಯಾನ ಪರಂಪರೆಯಲ್ಲಿ ವಿಶೇಷ ಪ್ರಭುತ್ವ ತುಂಬುತ್ತಿತ್ತಂತೆ. ಕಥಾಸರಿತ್ಸಾಗರದಲ್ಲಿ ವಸುದತ್ತ ತನ್ನ ಮಗ ವಿಷ್ಣುದತ್ತನನ್ನು ವಲ್ಲಭೀಪುರಕ್ಕೆ ಅಧ್ಯಯನಕ್ಕೆ ಕಳಿಸಿದ ಉಲ್ಲೇಖವಿದೆ. ಇಲ್ಲಿ ಪಾಂಡಿತ್ಯ ಗಳಿಸಿದ ವಿದ್ಯಾಥರ್ಿ ರಾಜನ ಆಸ್ಥಾನದಲ್ಲಿ ತನ್ನ ಸಾಮಥ್ರ್ಯ ಪ್ರದಶರ್ಿಸಿ ಸಕರ್ಾರಿ ಹುದ್ದೆಗಳಿಗೆ ಅರ್ಹನಾಗುತ್ತಿದ್ದನೆಂದು ಇತ್ಸಿಂಗ್ ಬರೆದಿದ್ದಾನೆ. ಹೀಗಾಗಿಯೇ ಅಲ್ಲಿ ಧಾಮರ್ಿಕ ವಿಚಾರಗಳನ್ನಲ್ಲದೇ ಇತರೆ ಅನೇಕ ವಿದ್ಯೆಯ ಪರಿಚಯ ಮಾಡಿಕೊಡಲಾಗುತ್ತಿತ್ತೆಂದು ಊಹಿಸಬಹುದು.
ಹೀಗೇ ಒಂದೊಂದು ವಿಶ್ವವಿದ್ಯಾಲಯದ ಹೆಸರು ಹೇಳಿ ಅದರ ಶಿಕ್ಷಣ ಕ್ರಮವನ್ನು ವಿವರಿಸುತ್ತ ಹೋದರೇನೇ ಆರೆಂಟು ವಾರಗಳ ಲೇಖನ ಮಾಲೆಯಾದೀತು. ಇವುಗಳೊಟ್ಟಿಗೆ ಅಗ್ರಹಾರದ ಪದ್ಧತಿ, ಪರಿವ್ರಾಜಕ ಗುರುಗಳು ನೀಡುತ್ತಿದ್ದ ಶಿಕ್ಷಣ ಇವೆಲ್ಲವನ್ನೂ ಸೇರಿಸಿಬಿಟ್ಟರೆ ಭಾರತೀಯ ಶಿಕ್ಷಣ ಪರಂಪರೆಯ ಕುರಿತಂತೆ ಎಂಥವನಿಗೂ ಗೌರವ ಮೂಡಬೇಕಾದದ್ದೇ. ಆದರೆ ಆಕ್ರಮಣಕಾರಿ ಬ್ರಿಟೀಷರು ಭಾರತಕ್ಕೆ ಶಿಕ್ಷಣದ ಮೂಲ ಕಲ್ಪನೆ ಕೊಟ್ಟಿದ್ದೇ ತಾವೆಂದು ನಮ್ಮನ್ನು ನಂಬಿಸಿಬಿಟ್ಟಿದ್ದಾರೆ. ಈ ಎಲ್ಲ ವಾದಗಳನ್ನು ಬ್ರಿಟೀಷರದ್ದೇ ದಾಖಲೆಗಳ ಮೂಲಕ ಚೂರು-ಚೂರು ಮಾಡಿ ಬಿಸಾಡಿದವರು ಗಾಂಧಿವಾದಿ ಧರ್ಮಪಾಲ್ ಜಿ. ಅವರ ‘ದ ಬ್ಯೂಟಿಫುಲ್ ಟ್ರೀ’ ಈ ನಿಟ್ಟಿನಲ್ಲಿ ಮಹತ್ವದ ಕೃತಿ.
ಕ್ರಿಶ್ಚಿಯನ್ ಮಿಷಿನರಿಯಾಗಿದ್ದ ವಿಲಿಯಂ ಆಡಂ ಇಲ್ಲಿನ ಶಿಕ್ಷಣದ ಕುರಿತಂತೆ ಮಹತ್ವದ ಕೆಲಸ ಮಾಡಿದ್ದಾನೆ. ಆತ ಬಂಗಾಳ-ಬಿಹಾರಗಳಲ್ಲಿನ ಶಿಕ್ಷಣದ ಕುರಿತಂತೆ ಅಪಾರ ಅಧ್ಯಯನ ನಡೆಸಿ ವರದಿ ನೀಡಿದ. ಅದರ ಪ್ರಕಾರ 1830 ರ ವೇಳೆಗೆ ಬಂಗಾಳ-ಬಿಹಾರಗಳಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಇದಕ್ಕೆ ಆತ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ಸೋತನಾದರೂ, ಥಾಮಸ್ ಮನ್ರೋಥರದವರು ಮದ್ರಾಸ್ ಭಾಗದ ಕುರಿತಂತೆ ಇದೇ ಬಗೆಯ ಮಾತುಗಳನ್ನಾಡುವಾಗ ಅಚ್ಚರಿಯಾಗದೇ ಇರದು. ಹಳ್ಳಿಗೊಂದು ಶಾಲೆ ಇದ್ದೇ ಇರುತ್ತಿದ್ದ ಕಾಲವಂತೆ ಅದು. ಹಳ್ಳಿ ದೊಡ್ಡದಾದರೆ ಒಂದಕ್ಕಿಂತ ಹೆಚ್ಚು ಶಾಲೆಗಳು! ಆಳುವ ಬಿಳಿಯ ದೊರೆಗಳಿಗೆ ಇದನ್ನು ಒಪ್ಪುವುದು ಕಷ್ಟವೇ ಆಯಿತು. ಏಕೆಗೊತ್ತೇ? ಭಾರತ ಶಿಕ್ಷಣ ನೀಡುವಲ್ಲಿ ಇಷ್ಟೊಂದು ಕ್ರಾಂತಿಯನ್ನೇ ಮಾಡಿರುವಾಗ ಯೂರೋಪಿನಲ್ಲಿ ಆ ಅವಧಿಯಲ್ಲಿ ಜನ ಸಾಮಾನ್ಯರಿಗೆಂದು ಬಲು ಕಡಿಮೆ ಶಾಲೆಗಳಿದ್ದವು!

3
ಯೂರೋಪಿನಲ್ಲಿ 13 ಮತ್ತು 14 ನೇ ಶತಮಾನದಲ್ಲಿಯೇ ಕಲಿಕೆಯ ಆಸಕ್ತಿ ಗರಿಗೆದರಿತ್ತು. ಆದರೆ 16 ನೇ ಶತಮಾನದ ಮಧ್ಯಭಾಗದಲ್ಲಿ ಚಚರ್್ಗಳಲ್ಲಿ ಇಂಗ್ಲೀಷ್ ಬೈಬಲ್ ಓದುವುದನ್ನೂ ನಿಷೇಧಿಸಲಾಯ್ತು. ಸಿರಿವಂತರು, ವ್ಯಾಪಾರಿಗಳು ಮನೆಯೊಳಗೆ ಓದಿಕೊಳ್ಳಬಹುದಿತ್ತಷ್ಟೇ. ಕಲಾಕಾರರು, ಸೇವಕರು ಮತ್ತಿತರೆ ಬಡ ವರ್ಗಕ್ಕೆ ಇಂಗ್ಲಿಷ್ ಬೈಬಲ್ ಅಧ್ಯಯನ ನಿರಾಕರಿಸಲಾಯಿತು. ಪವಿತ್ರ ಗ್ರಂಥಗಳನ್ನು ಎಲ್ಲರೂ ಓದುವುದರಿಂದ ಆಗುವ ಏರುಪೇರು ನಿಯಂತ್ರಿಸುವ ಉದ್ದೇಶ ಅದರಲ್ಲಿತ್ತು. ಎಲ್ಲಕ್ಕೂ ಮಿಗಿಲಾಗಿ ರೈತರ ಮಕ್ಕಳು ರೈತರೇ ಆಗಿರಬೇಕು, ಕಾಮರ್ಿಕನ ಮಗ ಕಾಮರ್ಿಕನೇ ಆಗಿರಬೇಕು ಎಂಬ ಮೇಲ್ವರ್ಗದವರ ಹಠವಾದಿ ಮನೋಭಾವ ಅದು. ಆ ಮೂಲಕ ಸಿರಿವಂತರ ಮಕ್ಕಳು ಅಧ್ಯಯನ ಮಾಡಿ ಸರಕಾರ ನಡೆಸುವಾಗ ದೊಡ್ಡ ಸಂಖ್ಯೆಯ ಕಾಮರ್ಿಕವರ್ಗ ಹೊಂದುವ ಬಯಕೆಯೂ ಅಲ್ಲಿತ್ತು. ಅದಕ್ಕೇ ಎಲ್ಲರೂ ಶಾಲೆಗೆ ಹೋಗುವುದು ಸರಿಯಲ್ಲವೆಂಬುದು ಬ್ರಿಟೀಷರ ಒಮ್ಮತದ ನಿಧರ್ಾರವಾಗಿತ್ತು. ಇಂಗ್ಲೆಂಡಿನಲ್ಲಿ ಆಗೆಲ್ಲ ಪಟ್ಟಣದ ದೊಡ್ಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕೆಂದರೆ ವಾಷರ್ಿಕವಾಗಿ 20 ಷಿಲ್ಲಿಂಗ್ ತೆರಿಗೆ ಪಾವತಿಸಲು ಸಮರ್ಥರಾಗಿರಬೇಕು ಎಂಬ ನಿಯಮವೇ ಇತ್ತು. ಹಾಗಾಗಲಿಲ್ಲವೆಂದರೆ ತಾವು ಕೆಲಸಕ್ಕೆ ಹೋಗುವ ಎಸ್ಟೇಟ್ಗಳಲ್ಲಿಯೇ ಕಲಿಕೆಗೆ ಅವಕಾಶ ಮಾಡಿಕೊಡಬೇಕಾಗಿತ್ತು.
ಪ್ರೊಟೆಸ್ಟೆಂಟರ ಚಳವಳಿಯ ನಂತರ ಸ್ವಲ್ಪ ಬದಲಾವಣೆ ಕಂಡುಬಂತು. ಅದರ ಪರಿಣಾಮವಾಗಿ ಸಿರಿವಂತರ ಮಾನಸಿಕತೆಯೂ ಸ್ವಲ್ಪ ಸರಿಹೋದಂತೆ ಕಂಡುಬಂತು. ಜನಸಾಮಾನ್ಯರಿಗಾಗಿ ಉದಾರವಾಗಿ ಶಾಲೆಗಳನ್ನು ತೆರೆದರು. ಇದೂ ಕೂಡ ಬಡವರ ಉದ್ಧಾರ ಮಾಡುವ ಮನಸ್ಥಿತಿಯಿಂದ ಹುಟ್ಟಿದ್ದಲ್ಲ ಬದಲಿಗೆ ಭಾನುವಾರದ ಪ್ರಾರ್ಥನೆಗೆ ಬೈಬಲ್ ಓದುವ ಮತ್ತು ಪ್ರವಚನದಲ್ಲಿ ಪಾಲ್ಗೊಳ್ಳುವ ಹಾಗೆ ಮಾಡುವುದಕ್ಕಾಗಿ ಇಟ್ಟ ಹೆಜ್ಜೆ ಎನ್ನುತ್ತಾರೆ ಧರ್ಮಪಾಲ್ಜೀ. ಅಲ್ಲಿ ಜನಪ್ರಿಯ ಶಾಲೆಗಳೆಂದರೆ ಬೈಬಲ್ ಓದುವುದನ್ನು ಕಲಿಸಿಕೊಡುವ ವಿಚಾರಕ್ಕೆ ಅನೇಕ ದಶಕಗಳವರೆಗೆ ಸೀಮಿತವಾಗಿತ್ತು. ಭಾನುವಾರದ ಶಾಲೆಗಳಾಗಿ ಶುರುವಾದ ಈ ಪಾಠಗಳು ಕಾಲಕ್ರಮೇಣ ಪ್ರತಿದಿನಕ್ಕೆ ವಿಸ್ತಾರಗೊಂಡಿತು. ಓದುವುದು, ಬರೆಯುವುದು, ಗಣಿತವನ್ನು ಕಲಿಸಲು ಮೊದಲಾಯ್ತು. ಕಾನೂನುಗಳನ್ನು ಜಾರಿಗೆ ತಂದು ವಿದ್ಯಾಥರ್ಿಗಳು ಕಡ್ಡಾಯವಾಗಿ ಶಿಕ್ಷಣ ಪಡೆಯುವಂತೆ ಮಾಡಲಾಯ್ತು. 1792ರಲ್ಲಿ 40 ಸಾವಿರ ವಿದ್ಯಾಥರ್ಿಗಳು ಬರುತ್ತಿದ್ದ ಶಾಲೆಗಳು 1851 ರ ವೇಳೆಗೆ 21 ಲಕ್ಷ ದಾಟಲು ಶಕ್ತವಾಯಿತು! ಅದೇ ವೇಳೆಗೆ ಭಾರತದ ಬಂಗಾಳ, ಬಿಹಾರ, ಮದರಾಸುಗಳನ್ನು ಲೆಕ್ಕಹಾಕಿದರೆ ಶಾಲೆಗಳೇ ಎರಡು ಲಕ್ಷಕ್ಕೂ ಹೆಚ್ಚಿದ್ದವು!
ಇನ್ನು ವಿಶ್ವವಿದ್ಯಾಲಯಗಳ ಚಚರ್ೆಗೆ ಬಂದರೆ ಎಡಿನ್ಬಗರ್್, ಆಕ್ಸ್ಫಡರ್್, ಕೇಂಬ್ರಿಡ್ಜ್ಗಳೆಲ್ಲ ಯಾವ ದಿಕ್ಕಿನಿಂದಲೂ ನಲಂದ, ತಕ್ಷಶಿಲಾ, ವಿಕ್ರಮಶಿಲಾದಷ್ಟು ಖ್ಯಾತವಾಗಿರಲಿಲ್ಲ. 19ನೇ ಶತಮಾನದ ಆರಂಭದಲ್ಲಿ ಆಕ್ಸ್ಫಡರ್್ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡು 19 ಕಾಲೇಜುಗಳು, ಐದು ಸಭಾಂಗಣಗಳಿದ್ದವು. 1800 ರಲ್ಲಿ 19 ಪ್ರೊಫೆಸರ್ಗಳಿದ್ದರೆ 1854ರಲ್ಲಿ ಈ ಸಂಖ್ಯೆ 25ಕ್ಕೆ ಏರಿತ್ತು. ಆರಂಭದಲ್ಲಿ 760 ರಷ್ಟಿದ್ದ ವಿದ್ಯಾಥರ್ಿಗಳ ಸಂಖ್ಯೆ ಕ್ರಮೇಣ 1300ನ್ನು ಮುಟ್ಟಿತು. ನಲಂದಾದ ಎಂಟೂವರೆ ಸಾವಿರ ವಿದ್ಯಾಥರ್ಿಗಳ, ಒಂದೂವರೆ ಸಾವಿರ ಅಧ್ಯಾಪಕರ ಮಹಾಸದನವನ್ನೊಮ್ಮೆ ತುಲನೆ ಮಾಡಿ ನೋಡಿ. ಅದೂ ಅದೆಷ್ಟೋ ಶತಮಾನಗಳ ಮುಂಚೆ!
ವಾಸ್ತವವೇನು ಗೊತ್ತೇ? ಪಶ್ಚಿಮದವರ, ಕ್ರಿಶ್ಚಿಯನ್ನರ ಶಿಕ್ಷಣದ ರೂಪುರೇಷೆಗಳು ಬದಲಾದದ್ದೇ ಭಾರತೀಯರ ಸಂಪರ್ಕದೊಂದಿಗೆ. 1755 ರಲ್ಲಿ ಆಡಂ ಫಗ್ಯರ್ುಸನ್ ತನ್ನ ವಿದ್ಯಾಥರ್ಿ ಮ್ಯಾಕ್ ಫರ್ಸನ್ನಿಗೆ ಬರೆದ ಪತ್ರದಲ್ಲಿ ಭಾರತದ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸು ಎಂದು ಬುದ್ಧಿವಾದ ಹೇಳುವುದರೊಂದಿಗೆ ಕೊನೆಯಲ್ಲಿ ‘ಯಾರು ಭಾರತದ ಬಗೆಗೆ ಯೂರೋಪಿನ ಜನರಿಗೆ ಬೆಳಕು ಚೆಲ್ಲುತ್ತಾನೋ ಹಾಗೂ ಅವುಗಳನ್ನು ಅನುಸರಿಸುವಂತೆ ತಿಳಿ ಹೇಳುತ್ತಾನೋ ಅವನೇ ನಿಜವಾದ ಯಶಸ್ವೀ ಪುರುಷನಾಗುತ್ತಾನೆ’ ಎಂಬ ಕಿವಿಮಾತನ್ನು ಹೇಳಿದ್ದ. ಮೆಕೊನೊಶಿಯಂತೂ ‘ಬನಾರಸ್ಸು ಎಲ್ಲಾ ಬಗೆಯ ವಿಜ್ಞಾನದ ಕೇಂದ್ರವೆಂದೂ ಅಲ್ಲಿ ಈಗಲೂ ಅವುಗಳನ್ನು ಕಲಿಸಲಾಗುತ್ತಿದೆ’ಎಂದೂ ಹೇಳಿದ್ದ. ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕೆಲಸಗಳು ಅಲ್ಲಿ ಈಗಲೂ ಮುಂದುವರೆದಿವೆ ಎಂಬುದು ಆತನ ಉದ್ಗಾರಕ್ಕೆ ಕಾರಣವಾಗಿತ್ತು. ಆಗಿನ್ನೂ 18ನೇ ಶತಮಾನದ ಕೊನೆಯ ದಶಕಗಳು ನಡೆಯುತ್ತಿದ್ದವು.
ನಿಮಗೆ ಅಚ್ಚರಿಯಾದೀತು. ಅಮೇರಿಕಾದ ನಾಗರೀಕತೆ ನಾಶಗೈದ ಅನುಭವದ ಆಧಾರದ ಮೇಲೆ ‘ಒಂದು ನಾಗರೀಕತೆಯನ್ನು ಗೆಲ್ಲುವುದೆಂದರೆ ಅದಕ್ಕೆ ಅಂಟಿದ್ದ ಹಿಂದಿನ ಜ್ಞಾನ ಕಣ್ಮರೆಯಾಗುವುದು’ ಎಂಬುದನ್ನು ಬ್ರಿಟೀಷರು ಅರಿತಿದ್ದರು. ಅದಕ್ಕೇ ವಾರಾಣಸಿಯಂತಹ ಕೇಂದ್ರಗಳಲ್ಲಿ, ಕಲಿಯಬಹುದೇನೇನಿದೆಯೋ ಅವುಗಳ ಲಿಖಿತ ದಾಖಲೆ ತಯಾರಿಸಿದರು, ತಮ್ಮ ನಾಡಿಗೆ ಒಯ್ದರು. ಇಲ್ಲಿ ಹಂತ-ಹಂತವಾಗಿ ಶಾಲೆಗಳನ್ನು ನಾಶಮಾಡುತ್ತಾ ಕ್ರೈಸ್ತ ಮಿಶನರಿಗಳೇ ಶಾಲೆ ತೆರೆದು ಮತ ಪ್ರಚಾರಕ್ಕೆ ನಿಂತರು. ಯೂರೋಪಿನ ಮಾದರಿಯ ಬೈಬಲ್ ಕಲಿಯುವ, ಒಂದಷ್ಟು ಸಾಹಿತ್ಯ, ವ್ಯಾಕರಣ, ಗಣಿತ ಅಧ್ಯಯನದ ಶಾಲೆಗಳು ಮತ್ತು ಶಿಕ್ಷಣ ಪದ್ಧತಿ ಭಾರತಕ್ಕೆ ವಕ್ಕರಿಸಿಕೊಂಡಿದ್ದು ಹೀಗೇ. ಶಿಕ್ಷಣದ ಸೇವೆ ಎಂಬುದು ಬಿಳಿಯರ ಮುಖವಾಡವಾಗಿತ್ತಷ್ಟೇ. ಸಕರ್ಾರಿ ಸವಲತ್ತು ಪಡೆದು ಭಾರತದ ಸಂಸ್ಕೃತಿಯನ್ನು ಧ್ವಂಸಗೊಳಿಸಿ ತಮ್ಮ ನಾಗರೀಕತೆಯನ್ನು ಹೇರುವ ಪ್ರಯತ್ನ ಅದರೊಳಗಡಗಿತ್ತು.
ಇಲ್ಲಿನ ಶಿಕ್ಷಣ ಕ್ರಮವನ್ನು ವಿರೂಪಗೊಳಿಸಿ ಅದರ ಬಹುಮೂಲ್ಯ ಸೂತ್ರಗಳನ್ನು ತಮ್ಮ ನಾಡಿಗೊಯ್ದ ಬ್ರಿಟೀಷರು ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ವಿಶೇಷವಾಗಿ ರೂಪಿಸಿಕೊಂಡರು. ತಮ್ಮ ದೇಶದಲ್ಲಿದ್ದ ಎಲ್ಲಾ ಶೈಕ್ಷಣಿಕ ದೋಷಗಳನ್ನು ನಮ್ಮ ತಲೆಗೆ ಕಟ್ಟಿ ತಾವು ಸಂಭಾವಿತರಾಗಿಬಿಟ್ಟರು. ಅವರ ಈ ಪ್ರಯತ್ನಗಳ ನಂತರವೇ ‘ಭಾರತದಲ್ಲಿ ಶಿಕ್ಷಣ ಮೇಲ್ವರ್ಗದವರ ಆಸ್ತಿಯಾಗಿತ್ತು, ಬಡವರು-ದಲಿತರು ಶಾಲೆಗಳಿಗೆ ಹೋಗುವಂತಿರಲಿಲ್ಲ. ಅವರು ಯಾವ ಜಾತಿಯಲ್ಲಿ ಹುಟ್ಟಿದರೋ ಅದೇ ಜಾತಿಯಲ್ಲಿ ಮುಂದುವರಿಯಬೇಕಿತ್ತು’ ಎಂದೆಲ್ಲ ಹೊಸ ಸಿದ್ಧಾಂತಗಳು ರೂಪುಗೊಂಡಿದ್ದು. ನಾವೂ ನಂಬಿದೆವು. ಒಂದಿಡೀ ಸಂಸ್ಕೃತಿಯನ್ನು ಬುಡಸಹಿತ ಕಿತ್ತೊಗೆಯುವ ಪ್ರಯತ್ನ ಅವರು ಮಾಡಿದರು. ಗಾಂಧೀಜಿ ಹೇಳುತ್ತಾರೆ ‘ಈ ಸುಂದರ ವೃಕ್ಷದ ಬುಡವನ್ನು ಅಗೆದು ಬೇರಿಗೆ ಹುಡುಕಾಡಿದರು. ಅಷ್ಟೇ ಅಲ್ಲ ಅಗೆದ ಬೇರುಗಳನ್ನು ಹಾಗೆಯೇ ಬಿಟ್ಟುಬಿಟ್ಟರು. ಅದರಿಂದಾಗಿಯೇ ಈ ವೃಕ್ಷ ನೆಲಕ್ಕುರುಳಿತು’ ಅಂತ.
ಎಷ್ಟು ಮಾಮರ್ಿಕವಾಗಿದೆಯಲ್ಲವೇ? ಜಗವನ್ನೇ ನಿಬ್ಬೆರಗಾಗಿಸಿದ ಶಿಕ್ಷಣ ವ್ಯವಸ್ಥೆಯನ್ನು ಕೆಲಸಕ್ಕೆ ಬಾರದ್ದೆಂದು ಷರಾ ಬರೆದು ಬಿಟ್ಟರಲ್ಲಾ ಪುಣ್ಯಾತ್ಮರು!!

2 thoughts on “ಸುಂದರ ವೃಕ್ಷ ಬುಡ ಸಮೇತ ಕಿತ್ತೊಗೆದರು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s