ಏಳು ನೂರು ವರ್ಷಗಳ ಬೆಳಕಿನ ಸ್ರೋತಕ್ಕೇ ಬಿತ್ತು ಬೆಂಕಿ!!

ಏಳು ನೂರು ವರ್ಷಗಳ ಬೆಳಕಿನ ಸ್ರೋತಕ್ಕೇ ಬಿತ್ತು ಬೆಂಕಿ!!

ಏಳು ಶತಮಾನಗಳ ಕಾಲ ಭೂಪಟದಲ್ಲಿ ಮಿಂಚಿ ಬೆಳಕಿನ ಸ್ರೋತವಾಗಿ ನಿಂತ ನಲಂದಾ ಕಾಲಕ್ರಮದಲ್ಲಿ ಪ್ರಭೆಯನ್ನು ಕಳಕೊಳ್ಳುತ್ತಾ ಬಂತು. ಬೌದ್ಧ ಮತ ತಾನು ಅನುಭವಿಸುತ್ತಿದ್ದ ರಾಜಾಶ್ರಯವನ್ನು ಕಳಕೊಳ್ಳುತ್ತ ಬಂದಂತೆ ನಲಂದದ ಪ್ರಗತಿ ಕುಂಠಿತವಾಯ್ತು. ಆನಂತರದ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಕ್ರಮಶಿಲಾ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನಗಳು ದೊರೆಯಲಾರಂಭಿಸಿತು. ವಿದ್ಯಾಥರ್ಿಗಳ ಸಂಖ್ಯೆ ಕಡಿಮೆಯಾಯ್ತು. ಕೊನೆಗೆ ಮುಸ್ಲೀಂ ದಾಳಿಕೋರ ಭಕ್ತಿಯಾರ್ ಖಿಲ್ಜಿ 12ನೇ ಶತಮಾನದ ಕೊನೆಯ ವೇಳೆಗೆ ಘೋರ ಆಕ್ರಮಣ ಮಾಡಿದ. ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾಥರ್ಿಗಳು, ಭಿಕ್ಷುಗಳು ಆತ್ಮರಕ್ಷಣೆಯನ್ನು ಮಾಡಿಕೊಳ್ಳದಾದರು. ಅಹಿಂಸೆಯ ಮಂತ್ರವನ್ನು ಪರಮ ಹಿಂಸೆಯ ಪಶುಗಳೆದುರು ಜಪಿಸುತ್ತ ಕುಳಿತಿದ್ದರು. ಅವರ ಖಡ್ಗಗಳಿಗೆ ತುಂಡರಿಸಿ ಬೀಳುವ ಮರದ ಶಾಖೆಗಳಂತೆ ಬೌದ್ಧಾನುಯಾಯಿಗಳು ಉರುಳಿಬಿದ್ದರು. ಗ್ರಂಥಾಲಯಕ್ಕೆ ಬೆಂಕಿ ಇಡಲಾಯ್ತು. ಏಳೆಂಟು ಶತಮಾನಗಳ ಗೌರವ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಯ್ತು.

1

ಕ್ರಿಸ್ತ ಹುಟ್ಟುವ ಬಲು ಮುನ್ನವೇ ‘ನಲಂದಾ’ ತನ್ನ ಸಂಪತ್ತಿನಿಂದಾಗಿ ಹೆಸರು ಮಾಡಿದ ಸ್ಥಳ. ಬುದ್ಧನ ಸಾನ್ನಿಧ್ಯದಿಂದ ಚಚರ್ೆಗಳಿಂದ ಪುನೀತಗೊಂಡ ನಗರ ಇದು. ಅದಕ್ಕೂ ಪೂರ್ವದಲ್ಲಿ ಮಹಾವೀರ ಅನೇಕ ತಿಂಗಳುಗಳನ್ನು ಇಲ್ಲಿ ಕಳೆದಿದ್ದ. ರಾಜಗೃಹದಿಂದ ಸ್ವಲ್ಪ ದೂರದಲ್ಲಿದ್ದು ವಿರಳ ಸಂಖ್ಯೆಯ ಜನರಿಂದ ಶಾಂತವಾಗಿ ರೂಪುಗೊಂಡಿದ್ದ ನಗರವಾದ್ದರಿಂದ ಅನೇಕ ಸಾಧಕರನ್ನು ಸೆಳೆದಿತ್ತು ನಲಂದಾ. ಅಶೋಕ ಈ ಕಾರಣಕ್ಕಾಗಿಯೇ ಇಲ್ಲೊಂದು ವಿಹಾರವನ್ನೂ ನಿಮರ್ಿಸಿದ್ದ.
ನಲಂದಾದ ಹೆಸರಿನ ಕುರಿತಂತೆಯೂ ಸಾಕಷ್ಟು ಸಿದ್ಧಾಂತಗಳಿವೆ. ನಲಂದಾ ಅನ್ನೋದು ಇಲ್ಲಿನ ಮಾವಿನ ಮರದ ಕೆಳಗೆ ವಾಸವಾಗಿದ್ದ ನಾಗವೊಂದರ ಹೆಸರಂತೆ. ಭಗವಾನ್ ಬುದ್ಧ ಹರಿಸಿದ ಅಖಂಡ ಕೃಪೆಯ ಕಾರಣಕ್ಕಾಗಿ ನಲಂದಾ ಎಂಬ ಹೆಸರು ಬಂತಂತೆ. ವಿಶ್ವವಿದ್ಯಾಲಯ ನಿಮರ್ಾಣಗೊಂಡ ನಂತರ ಅದಕ್ಕೆ ಹರಿದು ಬಂದ ಧನ ಸಹಾಯ ಅಪಾರ. ಕೊಡುವವನಿಗೆ ಎಷ್ಟು ಕೊಟ್ಟರೂ ತೃಪ್ತಿಯಾಗುತ್ತಿರಲಿಲ್ಲವಂತೆ. ಹೀಗಾಗಿ ನಲಂದಾ ಎನ್ನಲಾಯ್ತಂತೆ. ಕೊನೆಯದನ್ನೇ ಬಹುತೇಕ ಪಂಡಿತರು ಒಪ್ಪಿಕೊಂಡಂತೆ ಕಾಣುತ್ತದೆ. ಸದ್ಯ ಪಟ್ನಾದಿಂದ 72 ಕಿ.ಮೀ ದೂರದಲ್ಲಿ ರಾಜಗೀರ್ನಿಂದ ಏಳು ಮೈಲು ದೂರದಲ್ಲಿರುವ ನಲಂದ ಒಂದು ಕಾಲದಲ್ಲಿ ಬೌದ್ಧಿಕವಾಗಿ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಉತ್ಖನನದ ನಂತರ ಇಲ್ಲಿ ಮೂರು ಆಶ್ರಮಗಳನ್ನು ಹೆಕ್ಕಿ ತೆಗೆಯಲಾಗಿದೆ. ಅಕ್ಕಪಕ್ಕದ ಹಳ್ಳಿಗಳ ಕೆಳಗೆ ಇದಕ್ಕಿಂತಲೂ ಸಾಕಷ್ಟು ವಿಸ್ತಾರವಾದ ಅವಶೇಷಗಳು ಇರಲು ಸಾಕು. ಆದರೆ ಸಿಕ್ಕಷ್ಟು ಕಟ್ಟಡಗಳೇ ಭಾರತೀಯ ಶಿಕ್ಷಣ ವ್ಯವಸ್ಥೆಯ ಕಲ್ಪನೆಯ ಕುರಿತು ಜಗತ್ತಿಗೆ ಕೂಗಿ ಕೂಗಿ ಹೇಳುತ್ತಿವೆ. ಒಂದು ಅಂದಾಜಿನ ಪ್ರಕಾರ ಈ ಬಗೆಯ ಹದಿಮೂರು ಆಶ್ರಮಗಳನ್ನು ಕಟ್ಟಲಾಗಿತ್ತಂತೆ. ನೆನಪಿರಲಿ, ನಲಂದಾ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ನೀಡುವ ಕೇಂದ್ರವಾಗಿರಲಿಲ್ಲ. ಅದು ಉನ್ನತ ಶಿಕ್ಷಣ ನೀಡುವ ಸವಸತಿ ವಿಶ್ವವಿದ್ಯಾಲಯವೇ ಆಗಿತ್ತು. ಇಲ್ಲಿ ವಿದ್ಯಾಥರ್ಿಗಳನ್ನು ಸೈದ್ಧಾಂತಿಕವಾಗಿ ಬಲಗೊಳಿಸಲಾಗುತ್ತಿತ್ತಲ್ಲದೇ, ವಾದಗಳಲ್ಲಿ ಸಮರ್ಥವಾಗಿ ಚಚರ್ಿಸಲು ಬೇಕಾದ ತರಬೇತಿ ನೀಡಲಾಗುತ್ತಿತ್ತು. ಚೀನಾದ ಪ್ರವಾಸಿಗ ಇತ್ಸಿಂಗನೇ ಹೇಳುವಂತೆ, ‘ಪ್ರತಿಭಾವಂತ, ಸಾಧಕರು ಗುಂಪುಗೂಡುತ್ತಿದ್ದರು. ಸಿದ್ಧಾಂತವೊಂದರ ಸಾಧಕ ಬಾಧಕಗಳ ಕುರಿತಂತೆ ಸುದೀರ್ಘ ಚಚರ್ೆ ನಡೆಸುತ್ತಿದ್ದರು. ಅಲ್ಲಿಯೇ ಇದ್ದ ಅನುಭವಿ ಪಂಡಿತರು ಇವರ ವಾದಗಳನ್ನು ಬೆಂಬಲಿಸಿ ಅನುಮೋದಿಸಿದರೆ ಅಂತಹ ವ್ಯಕ್ತಿ ಕೀತರ್ಿವಂತನಾಗುತ್ತಿದ್ದ. ಎಲ್ಲರ ಗೌರವಕ್ಕೂ ಪಾತ್ರವಾಗುತ್ತಿದ್ದ’.
ದೇಶದಲ್ಲೂ ಅಷ್ಟೇ ಯಾವುದಾದರೂ ವಿಚಾರವನ್ನು ಅಧಿಕೃತವಾಗಿ ಮಂಡಿಸಲು ನಲಂದಾದ ಠಸ್ಸೆ ಇದ್ದರೆ ಮಾತ್ರ ಸಾಧ್ಯವಾಗುತ್ತಿತ್ತು. ಕಾಶ್ಮೀರದ ಸರ್ವಜ್ಞ ಪೀಠವನ್ನು ಏರಿದ ಮೇಲೆ ಮಾತ್ರ ದೇಶದಲ್ಲಿ ವ್ಯಕ್ತಿಯ ಪಾಂಡಿತ್ಯಕ್ಕೆ ಮುದ್ರೆ ಬೀಳುತ್ತಿತ್ತಲ್ಲ ಹಾಗೆಯೇ ಇದು. ಈ ಪಾಂಡಿತ್ಯದ ಠಸ್ಸೆ ಪಡೆಯಲೆಂದೇ ದೇಶ-ವಿದೇಶಗಳ ಜನ ಆಗಮಿಸಿ ಅಧ್ಯಯನ ನಿರತರಾಗುತ್ತಿದ್ದರು. ಹಾಗಂತ ಬಂದವರಿಗೆಲ್ಲ ಅಲ್ಲಿ ಅಧ್ಯಯನಕ್ಕೆ ಅವಕಾಶ ದಕ್ಕಿಬಿಡುತ್ತಿರಲಿಲ್ಲ. ಅದಕ್ಕೊಂದು ಪ್ರವೇಶ ಪರೀಕ್ಷೆ ಇರುತ್ತಿತ್ತು. ಅದು ಅದೆಷ್ಟು ಕಠಿಣವಾಗಿರುತ್ತಿತ್ತೆಂದರೆ, ಹ್ಯುಯೆನ್ತ್ಸಾಂಗನ ಪ್ರಕಾರ ಅದರಲ್ಲಿ ಉತ್ತೀರ್ಣರಾಗಿ ನಲಂದಾಕ್ಕೆ ಸೇರಿಕೊಳ್ಳುತ್ತಿದ್ದವರು ಇಪ್ಪತ್ತು ಪ್ರತಿಶತದಷ್ಟು ವಿದ್ಯಾಥರ್ಿಗಳು ಮಾತ್ರ! ವಿದೇಶದಿಂದ ಬಂದ ವಿದ್ಯಾಥರ್ಿಗಳ ಫಲಿತಾಂಶವೂ ಹೆಚ್ಚು ಕಡಿಮೆ ಇಷ್ಟೇ ಇತ್ತಂತೆ. ಅನೇಕ ವಿದೇಶೀ ವಿದ್ಯಾಥರ್ಿಗಳು ಪ್ರವೇಶ ಪರೀಕ್ಷೆಗೂ ಮುನ್ನ ಬೇರೆಡೆ ತರಬೇತಿ ಪಡೆದು ಸಿದ್ಧರಾಗಿ ಬರುತ್ತಿದ್ದುದರ ಬಗ್ಗೆಯೂ ಅಲ್ಲಲ್ಲಿ ಕಾಣಸಿಗುತ್ತದೆ. ಇತ್ಸಿಂಗನು ಸುಮಾತ್ರಾದ ‘ಶ್ರೀ ವಿಜಯ’ದಲ್ಲಿ ಆರು ತಿಂಗಳುಗಳ ಕಾಲ ಗುರುಗಳ ಬಳಿ ಸೂಕ್ತ ಅಧ್ಯಯನ ನಡೆಸಿ ಆನಂತರ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣವಾದುದನ್ನು ಈ ಹಿಂದೆಯೇ ನಾವು ದಾಖಲಿಸಿದ್ದೇವೆ. ಹೀಗಿದ್ದರೂ ವಿಶ್ವವಿದ್ಯಾಲಯಕ್ಕೆ ವಿದ್ಯಾಥರ್ಿಗಳ ಸಂಖ್ಯೆ ಕೊರತೆ ಇರಲಿಲ್ಲ. ಇಷ್ಟು ಆಸ್ಥೆಯಿಂದ ನಲಂದಾಕ್ಕೆ ಸೇರಿಕೊಳ್ಳಲು ಅಲ್ಲಿನ ಶಿಕ್ಷಣ ಮಟ್ಟದ ಜೊತೆಗೆ ಸಿಗುತ್ತಿದ್ದ ಸೌಲಭ್ಯಗಳೂ ಕಾರಣವೇ. ವಿದ್ಯಾಥರ್ಿ ವೇತನಗಳೂ ಸಾಕಷ್ಟು ದೊರೆಯುತ್ತಿದ್ದವು. ವಿದ್ಯಾಥರ್ಿಗಳಿಗಿದ್ದ ಏಕೈಕ ಗುರಿಯೆಂದರೆ ಅಧ್ಯಯನ ಮತ್ತು ಚಚರ್ೆ ಮಾತ್ರ. ಕೆಲವೊಮ್ಮೆ ಹಗಲು-ರಾತ್ರಿಗಳೂ ಗಹನ ವಿಚಾರ ಮಂಥನಗಳಲ್ಲಿ ಕಳೆದು ಹೋಗುತ್ತಿದ್ದುದು ಗೊತ್ತೇ ಆಗುತ್ತಿರಲಿಲ್ಲವಂತೆ.
ಸುಮಾರು ಹತ್ತು ಸಾವಿರ ಜನರಿಂದ ತುಂಬಿ ತುಳುಕಾಡುತ್ತಿದ್ದ ಈ ವಿಶ್ವವಿದ್ಯಾಲಯದಲ್ಲಿ 1500 ರಷ್ಟು ಅಧ್ಯಾಪಕ ವರ್ಗದವರೇ ಇದ್ದರಂತೆ. ಇವರಲ್ಲಿ ಸಾವಿರ ಜನ ಸುಮಾರು ಇಪ್ಪತ್ತು ಸೂತ್ರ-ಶಾಸ್ತ್ರಗಳ ಮೇಲೆ ಪಾಂಡಿತ್ಯ ಪಡೆದವರಾದರೆ ಐದು ನೂರು ಅಧ್ಯಾಪಕರು 30 ಸೂತ್ರ-ಶಾಸ್ತ್ರಗಳ ಮೇಲೆ ಪ್ರಭುತ್ವ ಹೊಂದಿದ್ದರಂತೆ. ಹ್ಯೂಎನ್ತ್ಸಾಂಗನೂ ಸೇರಿದಂತೆ ಹತ್ತು ಜನ 50 ಸೂತ್ರ-ಶಾಸ್ತ್ರಗಳನ್ನು ಕರಗತ ಗೊಳಿಸಿಕೊಂಡಿದ್ದರಂತೆ. ಹಾಗಂತ ತಮ್ಮ ಪ್ರಾಚೀನ ಭಾರತೀಯ ಶಿಕ್ಷಣದಲ್ಲಿ ರಾಧಾಕುಮುದ ಮುಖಜರ್ಿ ಉಲ್ಲೇಖಿಸಿದ್ದಾರೆ. ಆ ಗ್ರಂಥಗಳು ಯಾವುವು? ಸಂಖ್ಯೆಗಳು ಎಲ್ಲಿಂದ ದೊರೆತಿವೆ ಅನ್ನೋದು ಗೊತ್ತಿಲ್ಲವಾದರೂ ಪಾಂಡಿತ್ಯದ ಆಧಾರದ ಮೇಲೆ ಅಧ್ಯಾಪಕ ವೃತ್ತಿ ನಿಧರ್ಾರಿತವಾಗಿರುತ್ತಿತ್ತೆನ್ನುವುದು ಮಾತ್ರ ಸ್ಪಷ್ಟ. ಆಳುವ ಧಣಿಗಳೆದುರು ಹಲ್ಲುಗಿಂಜಿ, ಅವರು ಹೇಳಿದ ಕೆಲಸ ಮಾಡಿಕೊಂಡು ಅಧ್ಯಾಪಕ ವೃತ್ತಿಗಿಟ್ಟಿಸುವುದಿರಲಿ, ಪ್ರವೇಶ ಪರೀಕ್ಷೆ ಉತ್ತೀರ್ಣರಾಗುವುದೂ ಸಾಧ್ಯವಿರಲಿಲ್ಲ. ಸಹಜವಾಗಿಯೇ ಕುಲಪತಿಗಳ ಆಯ್ಕೆಯೂ ಪಾಂಡಿತ್ಯದ ಆಧಾರದ ಮೇಲೆ ನಡೆಯುತ್ತಿತ್ತೇ ಹೊರತು ರಾಜನ ಚಾಕರಿ ಮಾಡಲು ನಿಂತ ಹಲ್ಕಿರಕನಿಗಲ್ಲ. ಹ್ಯುಯೆನ್ತ್ಸಾಂಗನ ಕಾಲಕ್ಕೆ ಕುಲಪತಿಯಾಗಿದ್ದ ಶೀಲಭದ್ರ ಒಂದು ರೀತಿಯಲ್ಲಿ ಸರ್ವಜ್ಞನೇ ಆಗಿದ್ದನಂತೆ.

5
ನಲಂದಾ ಬೌದ್ಧ ಚಿಂತನೆಗಳಿಗೆ ಹೆಸರುವಾಸಿಯಾದ ಗುರುಕುಲವಾಗಿದ್ದರೂ ಅಲ್ಲಿನ ಶಿಕ್ಷಣದ ಹರವು ವಿಸ್ತಾರವೇ ಆಗಿತ್ತು. ಬ್ರಾಹ್ಮಣ ಮತ್ತು ಬೌದ್ಧ, ತಾತ್ತ್ವಿಕ ಮತ್ತು ಪ್ರಯೋಗಾತ್ಮಕ, ವೈಜ್ಞಾನಿಕ ಮತ್ತು ಕಲಾತ್ಮಕ ಎಲ್ಲ ಬಗೆಯ ಶಿಕ್ಷಣವೂ ಅಲ್ಲಿ ಸಿಗುತ್ತಿತ್ತು. ಸ್ವತಃ ಹ್ಯುಯೆನ್ತ್ಸಾಂಗನು ಯೋಗಶಾಸ್ತ್ರದ ಅಧ್ಯಯನಕ್ಕೆಂದು ಅಲ್ಲಿಗೆ ಬಂದಿದ್ದ. ಕಾಲಕ್ರಮೇಣ ಆತ ಬ್ರಾಹ್ಮಣಗಳನ್ನು ಅರಿತುಕೊಂಡ. ಅನೇಕ ಬೌದ್ಧ ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡ. ಅದಾಗಲೇ ಕಾನೂನು ತಜ್ಞನೆಂಬ ಹೆಸರು ಪಡೆದಿದ್ದರೂ ಇಲ್ಲಿ ಅಧ್ಯಯನ ಮಾಡುವುದರಿಂದ ತನ್ನ ಬೌದ್ಧಿಕ ಆಕಾಶ ವಿಸ್ತಾರವಾಗಲಿರುವುದು ಅವನಿಗೆ ಗೊತ್ತಿತ್ತು. ಇತ್ಸಿಂಗನದೂ ಅದೇ ಕಥೆ. ಹೀನಯಾನ ಬೌದ್ಧ ಪಂಥದ ವಿದ್ಯಾಥರ್ಿಯಾಗಿದ್ದ ಆತ ಇಲ್ಲಿ ಭಿನ್ನ ಭಿನ್ನ ವಿಭಾಗದಲ್ಲಿ ನೆಲೆನಿಂತು ಪಾಂಡಿತ್ಯ ಪಡೆಯುವ ಯತ್ನ ಮಾಡಿದ.
ಇಲ್ಲಿನ ಅಧ್ಯಾಪಕರಿಗೆ ಎಷ್ಟೊಂದು ಬೇಡಿಕೆ ಇತ್ತು ಗೊತ್ತೇ? ಅಸ್ಸಾಂನ ರಾಜ ಒಂದಷ್ಟು ಅಧ್ಯಾಪಕರನ್ನು ತಮ್ಮ ನಾಡಿಗೆ ಕಳಿಸುವಂತೆ ಬೇಡಿಕೆ ಸಲ್ಲಿಸಿದ್ದ. ಕುಲಪತಿಗಳ ಉತ್ತರ ಬರುವಲ್ಲಿ ತಡವಾದಾಗ ಮತ್ತೊಂದಷ್ಟು ದೂತರನ್ನು ಕಳಿಸಿದ. ಆಗಲೂ ಉಪಯೋಗವಾಗದಾದಾಗ ಆಕ್ರಮಣ ಮಾಡಿ ವಿಶ್ವವಿದ್ಯಾಲಯವನ್ನೇ ನಾಶ ಮಾಡಿಬಿಡುವ ಬೆದರಿಕೆ ಒಡ್ಡಿದನಂತೆ! ಮುಂದೆ ಹರ್ಷ ಮಹಾರಾಜ ಆತನನ್ನು ಗದರಿಸಿ ಸುಮ್ಮನಾಗಿಸಬೇಕಾಯ್ತಂತೆ. ಈಗಿನ ದಿನಮಾನಗಳಿಗೆ ಇದನ್ನು ಹೋಲಿಸಿ ನೋಡಿದರೆ ನಗು ಉಕ್ಕುವಂತಿದೆ. ಅಧ್ಯಾಪಕರೇ ಡೆಪ್ಯುಟೇಶನ್ಗೆ ಅಜರ್ಿ ಗುಜರಾಯಿಸುತ್ತಾರೆ. ಇತ್ತ ಈ ವಿಶ್ವವಿದ್ಯಾಲಯಕ್ಕೆ ಇವರು ಹೋದರೆ ಸಾಕು. ಅತ್ತ ಆ ವಿಶ್ವವಿದ್ಯಾಲಯಕ್ಕೆ ಬರದಿದ್ದರೆ ಸಾಕು ಎಂಬ ಭಾವ. ಇಂತಹ ಶಿಕ್ಷಣ ವ್ಯವಸ್ಥೆಯನ್ನು ಕಷ್ಟಪಟ್ಟು ರೂಪಿಸಿದ್ದೇವೆ!
ವಿಶ್ವವಿದ್ಯಾಲಯದಲ್ಲಿ ಸಮಯವನ್ನು ನೀರ್ಗಡಿಯಾರದ ಮೂಲಕ ಲೆಕ್ಕ ಹಾಕುತ್ತಿದ್ದರಂತೆ. ದೊಡ್ಡ ಪಾತ್ರೆಯೊಂದರಲ್ಲಿ ತಳದಲ್ಲಿ ರಂಧ್ರವಿರುವ ಚಿಕ್ಕ ಪಾತ್ರೆಯನ್ನು ತೇಲಿಬಿಡಲಾಗುತ್ತಿತ್ತು. ಇದು ನಾಲ್ಕು ಬಾರಿ ತಳ ಮುಟ್ಟಿದರೆ ಒಂದು ಗಂಟೆಯಾದಂತೆ. ಆಗ ಬಲವಾಗಿ ಗಂಟೆ ಬಡಿಯಲಾಗುತ್ತಿತ್ತಂತೆ (ಬುದ್ಧ ಮಂದಿರಗಳಲ್ಲಿ ಇದನ್ನು ಗಾಂಗ್ ಎನ್ನುತ್ತಾರೆ). ಹೀಗೆ ದಿನದ ಅವಧಿ ಎಂಟುಗಂಟೆಗಳದ್ದು. ಮಧ್ಯಾಹ್ನದ ಅವಧಿ ಸೂಚಕ ಗಂಟೆ ಮತ್ತು ಶಂಖದ ಸದ್ದು ಬಂದ ನಂತರ ಆಹಾರ ಸೇವಿಸುವಂತಿರಲಿಲ್ಲ. ಪ್ರತಿ ದಿನ ಬೆಳಗ್ಗೆ ಏಳುವುದಕ್ಕೂ ಘಂಟಾನಾದವಿರುತ್ತಿತ್ತು. ಆಗ ಕೆಳಗಿನ ಕೊಳಕ್ಕಿಳಿದು ಅಧ್ಯಾಪಕರು, ಪಂಡಿತರು ಮತ್ತು ವಿದ್ಯಾಥರ್ಿಗಳು ಸ್ನಾನ ಮಾಡುತ್ತಿದ್ದರು. ಇತ್ಸಿಂಗ್ ಇದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ‘ಪ್ರತಿ ದಿನ ಬೆಳಗ್ಗೆ ಗಂಟೆಯ ಸದ್ದಾದೊಡನೆ ಕೆಲವೊಮ್ಮೆ ನೂರು ಕೆಲವೊಮ್ಮೆ ಸಾವಿರ ಜನ ಸನ್ಯಾಸಿಗಳು ಆಶ್ರಮದಿಂದ ಕೊಳಗಳತ್ತ ಸಾಗುತ್ತಿದ್ದರು. ಹತ್ತಿರ ಬಂದೊಡನೆ ಹರಡಿಕೊಂಡಿದ್ದ ಹತ್ತು ಕೊಳಗಳಿಗೆ ವಿಂಗಡಣೆಯಾಗಿಬಿಡುತ್ತಿದ್ದರು. ಸ್ನಾನ ಮುಗಿಸಿ ಮುಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದರು’ ಎಂದಿದ್ದಾನೆ. ಹಾಗೆ ಊಹಿಸಿಕೊಂಡು ನೋಡಿ. ಸೂಯರ್ೋದಯದ ವೇಳೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕೊಳಕ್ಕಿಳಿಯುವ ಗುರು-ಶಿಷ್ಯರು ಎಂತಹ ವಾತಾವರಣ ರೂಪಿಸಬಹುದು! ಹೀಗೆ ಮಿಂದು ಸಾಧನೆಗೆ ಅಣಿಯಾಗುವ, ಧ್ಯಾನಮಗ್ನರಾಗುವ ವಿದ್ಯಾಥರ್ಿಗಳು ಎಂತಹ ಶಕ್ತಿ ವೃತ್ತವನ್ನು ಸುತ್ತಲೂ ಸೃಷ್ಟಿಸಬಹುದು! ಆಹ್. ನಲಂದಾ ಈ ಕಾರಣಕ್ಕಾಗಿಯೇ ಎಲ್ಲರ ಮನಸೂರೆಗೊಂಡಿದ್ದು.
ನಲಂದಾದ ವಿದ್ಯಾಥರ್ಿಗಳೆಂದರೆ ದೇಶದಾದ್ಯಂತ ಮಾದರಿ ವಿದ್ಯಾಥರ್ಿಗಳೆಂದೇ ಹೆಸರುವಾಸಿಯಾಗಿದ್ದರು. ಶೈಕ್ಷಣಿಕವಾಗಿಯೂ, ನೈತಿಕವಾಗಿಯೂ ಅವರ ಬದುಕಿನ ರೀತಿ ಬಲು ಉನ್ನತವಾದುದಾಗಿತ್ತು. ‘ಏಳುನೂರು ವರ್ಷಗಳ ವಿಶ್ವವಿದ್ಯಾಲಯದ ಅವಧಿಯಲ್ಲಿ ಒಬ್ಬೇ ಒಬ್ಬ ವಿದ್ಯಾಥರ್ಿಯೂ ನಿಯಮಗಳಿಗೆ ವಿರುದ್ಧವಾಗಿ ನಿಂತ ಉದಾಹರಣೆಯೇ ಇಲ್ಲ’ ಎಂದು ಹ್ಯುಯೆನ್ತ್ಸಾಂಗ್ ಹೇಳಿರುವುದು ಸ್ವಲ್ಪ ಅತಿಶಯೋಕ್ತಿಯೆನಿಸಿದರೂ ವಿಶೇಷವೇ ಸರಿ.
ನಲಂದಾದ ಕುರಿತಂತೆ ಮಾತನಾಡುವಾಗ ಅಲ್ಲಿನ ಗ್ರಂಥಾಲಯದ ಕುರಿತಂತೆ ಹೇಳಲೇಬೇಕು. ಗ್ರಂಥಾಲಯದ ಜಾಗವನ್ನು ಧರ್ಮಗಂಜವೆಂದು ಕರೆಯುತ್ತಿದ್ದುದನ್ನು ಟಿಬೇಟಿನ ಸಾಹಿತ್ಯಗಳು ದಾಖಲಿಸಿವೆ. ರತ್ನಸಾಗರ, ರತ್ನೋದಧಿ, ರತ್ನರಾಜಕವೆಂಬ ಮೂರು ಬೃಹತ್ ಕಟ್ಟಡಗಳಲ್ಲಿ ಗ್ರಂಥ ಸಂಗ್ರಹವಿತ್ತಂತೆ. ರತ್ನಸಾಗರವಂತೂ ಅತ್ಯಂತ ಅಮೂಲ್ಯ ಗ್ರಂಥಗಳನ್ನು ಹೊಂದಿದ ಒಂಭತ್ತು ಅಂತಸ್ತಿನ ಕಟ್ಟಡವಾಗಿತ್ತು. ಹತ್ತು ವರ್ಷಗಳ ಕಾಲ ಇಲ್ಲಿ ಅಧ್ಯಯನ ಮಾಡಿದ ಇತ್ಸಿಂಗನು ಸುಮಾರು ಐದುಲಕ್ಷ ಶ್ಲೋಕಗಳನ್ನು ಒಳಗೊಂಡ ನಾಲ್ಕು ನೂರು ಸಂಸ್ಕೃತ ಪುಸ್ತಕಗಳನ್ನು ಸಂಗ್ರಹಿಸಿದ್ದನಂತೆ. ಅದನ್ನು ತನ್ನ ದೇಶಕ್ಕೆ ಒಯ್ದದ್ದಲ್ಲದೇ ಚೀನೀ ಭಾಷೆಗೆ ಅನುವಾದವನ್ನು ಮಾಡಿದ್ದ. ಮುಂದೆ ಇಡಿಯ ವಿಶ್ವವಿದ್ಯಾಲಯ ಮುಸಲ್ಮಾನರ ದಾಳಿಗೆ ಸಿಕ್ಕು ನಾಶವಾದಾಗ ಗ್ರಂಥಾಲಯಕ್ಕೆ ಹೊತ್ತಿದ ಬೆಂಕಿ ಅನೇಕ ತಿಂಗಳುಗಳವರೆಗೆ ಉರಿಯುತ್ತಲೇ ಇತ್ತೆಂದು ಹೇಳುವುದು ರೂಢಿಗತವಾಗಿಬಿಟ್ಟಿದೆ. ನಲಂದಾದ ಗ್ರಂಥ ಸಂಪತ್ತಿನ ಕುರಿತಂತೆ ಹರಡಿರುವ ಕಥೆಗಳು ಅಂಥವು.
ನಲಂದಾದ ಕೀತರ್ಿ ಜಗತ್ತಿಗೆ ಹಬ್ಬಿದ್ದು ಅಲ್ಲಿನ ಅಧ್ಯಾಪಕರ ಕಾರಣದಿಂದ. ಶೀಲಭದ್ರನಿಗಿಂತಲೂ ಮುಂಚಿತವಾಗಿ ಮುಖ್ಯಸ್ಥ ಹುದ್ದೆಯನ್ನು ಅಲಂಕರಿಸಿದ್ದ ಧರ್ಮಪಾಲ, ಬಂಗಾಳಿಯಾಗಿದ್ದೂ ವಿಶೇಷ ಅಧ್ಯಯನದ ಮೂಲಕ ನಲಂದಾದಲ್ಲಿಯೇ ಪಾಂಡಿತ್ಯ ಪಡೆದು ಬೌದ್ಧ ಚಿಂತನೆಯ ಮೇಲೆ ಸಂಸ್ಕೃತದಲ್ಲಿ ಸಾಕಷ್ಟು ಪುಸ್ತಕ ಬರೆದ ಚಂದ್ರಗೋಮಿನ, ಟಿಬೇಟಿನ ರಾಜನ ಕೋರಿಕೆಯ ಮೇರೆಗೆ ಬೌದ್ಧ ಚಿಂತನೆಗಳ ಪ್ರಚಾರಕ್ಕೆ ಅತ್ತ ತೆರಳಿದ ಪದ್ಮಸಂಭವ, ಕಮಲಶಿಲ, ಸ್ಥಿರಮತಿ ಮೊದಲಾದವರು ಅಲ್ಲಿನ ಕೀತರ್ಿಯನ್ನು ಹೆಚ್ಚಿಸಿದವರೇ. ಆರ್ಯದೇವನೊಂದಿಗೆ ಸೇರಿ ಮಹಾಯಾನವೆಂಬ ಬೌದ್ಧ ಪಂಥವೊಂದನ್ನು ಹುಟ್ಟುಹಾಕಿದ ನಾಗಾಜರ್ುನ, ಸಾಂಖ್ಯವಾದವನ್ನು ಅಡ್ಡಗಟ್ಟಲು ಪರಮಾರ್ಥ ಸಪ್ತತಿಯನ್ನು ರಚಿಸಿದ ವಸುಬಂಧು, ಮಹಾಯಾನದ ಮೇಲೆ ವಿಶೇಷ ಕೃತಿ ರಚಿಸಿದ ಅಸಂಗ, ನಲಂದಾ ಮತ್ತು ವಿಕ್ರಮಶಿಲೆಯ ನಡುವೆ ಸೇತುವೆಯಂತೆ ದುಡಿದ ಬುದ್ಧಕೀತರ್ಿ ಇವರೆಲ್ಲ ಇಲ್ಲಿ ಸಾಕಷ್ಟು ಹೆಸರು ಗಳಿಸಿದವರೇ.
ನಲಂದಾದ ವೈಶಿಷ್ಟ್ಯವೇ ಅದು. ಇಲ್ಲಿ ಅಧ್ಯಯನ ಮಾಡಿದ ವ್ಯಕ್ತಿ ತಾನು ಕಲಿತದ್ದನ್ನು ಪ್ರಚಾರ ಮಾಡಲೆಂದು ಹೊರಡುತ್ತಿದ್ದ. ನಲಂದಾದಲ್ಲಿ ಕಲಿತವನೆಂಬ ಮುದ್ರೆಯೂ ಇರುತ್ತಿದ್ದರಿಂದ ಹೋದಲ್ಲೆಲ್ಲಾ ಅಪಾರ ಗೌರವ ಪಡೆಯುತ್ತಿದ್ದ. ಆಚಾರ್ಯ ಧರ್ಮಪಾಲರು ಸುಮಾತ್ರಾಕ್ಕೆ ಹೋದಾಗ ಅಲ್ಲಿನ ರಾಜಧಾನಿ ಶ್ರೀ ವಿಜಯ ನವವಧುವಿನಂತೆ ಸಿಂಗಾರಗೊಂಡಿತ್ತಂತೆ. ಅಲ್ಲಿನ ರಾಜ ನಲಂದಾದಲ್ಲಿ ವಿಹಾರಗಳನ್ನು ಕಟ್ಟಿಕೊಟ್ಟು ತನ್ನ ದೇಶದ ವಿದ್ಯಾಥರ್ಿಗಳಿಗೆ ಗೌರವ ಸಿಗುವಂತೆ ಮಾಡಿದ್ದ.

3
ಹೀಗೆ ಸುಮಾರು ಏಳು ಶತಮಾನಗಳ ಕಾಲ ಭೂಪಟದಲ್ಲಿ ಮಿಂಚಿ ಬೆಳಕಿನ ಸ್ರೋತವಾಗಿ ನಿಂತ ನಲಂದಾ ಕಾಲಕ್ರಮದಲ್ಲಿ ಪ್ರಭೆಯನ್ನು ಕಳಕೊಳ್ಳುತ್ತಾ ಬಂತು. ಬೌದ್ಧ ಮತ ತಾನು ಅನುಭವಿಸುತ್ತಿದ್ದ ರಾಜಾಶ್ರಯವನ್ನು ಕಳಕೊಳ್ಳುತ್ತ ಬಂದಂತೆ ನಲಂದದ ಪ್ರಗತಿ ಕುಂಠಿತವಾಯ್ತು. ಆನಂತರದ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಕ್ರಮಶಿಲಾ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನಗಳು ದೊರೆಯಲಾರಂಭಿಸಿತು. ವಿದ್ಯಾಥರ್ಿಗಳ ಸಂಖ್ಯೆ ಕಡಿಮೆಯಾಯ್ತು. ಕೊನೆಗೆ ಮುಸ್ಲೀಂ ದಾಳಿಕೋರ ಭಕ್ತಿಯಾರ್ ಖಿಲ್ಜಿ 12ನೇ ಶತಮಾನದ ಕೊನೆಯ ವೇಳೆಗೆ ಘೋರ ಆಕ್ರಮಣ ಮಾಡಿದ. ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾಥರ್ಿಗಳು, ಭಿಕ್ಷುಗಳು ಆತ್ಮರಕ್ಷಣೆಯನ್ನು ಮಾಡಿಕೊಳ್ಳದಾದರು. ಅಹಿಂಸೆಯ ಮಂತ್ರವನ್ನು ಪರಮ ಹಿಂಸೆಯ ಪಶುಗಳೆದುರು ಜಪಿಸುತ್ತ ಕುಳಿತಿದ್ದರು. ಅವರ ಖಡ್ಗಗಳಿಗೆ ತುಂಡರಿಸಿ ಬೀಳುವ ಮರದ ಶಾಖೆಗಳಂತೆ ಬೌದ್ಧಾನುಯಾಯಿಗಳು ಉರುಳಿಬಿದ್ದರು. ಗ್ರಂಥಾಲಯಕ್ಕೆ ಬೆಂಕಿ ಇಡಲಾಯ್ತು. ಏಳೆಂಟು ಶತಮಾನಗಳ ಗೌರವ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಯ್ತು.
ಕ್ರೌರ್ಯವನ್ನು ವಣರ್ಿಸಲು ಒಬ್ಬೇ ಒಬ್ಬ ನಲಂದಾದ ಭಿಕ್ಷು ಉಳಿಯಲಿಲ್ಲ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s