ಜಗದ ಕಣ್ ಕುಕ್ಕಿದ ನಲಂದಾ..

ಜಗದ ಕಣ್ ಕುಕ್ಕಿದ ನಲಂದಾ..

‘ವಿಶ್ವವಿದ್ಯಾಲಯ ಆರಂತಸ್ತಿನ ಕಟ್ಟಡವಾಗಿತ್ತು. ಸುತ್ತಲೂ ಎತ್ತರದ ಕಾಂಪೌಂಡು ಗೋಡೆ. ಇಡಿಯ ವಿಶ್ವವಿದ್ಯಾಲಯಕ್ಕೆ ಒಂದೇ ದ್ವಾರ. ಅದನ್ನು ತೆರೆದೊಡನೆ ವಿಶಾಲ ಕಾಲೇಜಿನೊಳಕ್ಕೆ ಹೊಕ್ಕಬಹುದಿತ್ತು, ಅಲ್ಲಿಂದ ಎಂಟು ವಿಸ್ತಾರ ಕೊಠಡಿಗಳಿಗೆ! ಪ್ರತೀ ಕೊಠಡಿಗಳೂ ಅನೇಕ ಅಂತಸ್ತುಗಳಿಂದ ಕೂಡಿದ್ದು ಮುಗಿಲ ಚುಂಬಿಸುವ ಗಿರಿ ತುದಿಯಂತೆ ಕಾಣುತ್ತಿದ್ದವು. ಮೇಲಿನ ಕೋಣೆ ಮೋಡದ ಮೇಲೆಯೇ ನಿಮರ್ಿಸಿದಂತೆ ಕಾಣುತ್ತಿತ್ತು. ಈ ಕೋಣೆಗಳಲ್ಲಿ ಕುಳಿತವರು ಕಿಟಕಿಗಳ ಮೂಲಕ ಮೋಡಗಳು ಗಾಳಿಯೊಂದಿಗೆ ಸೇರಿ ನತರ್ಿಸುವುದನ್ನು ನೋಡಬಹುದಿತ್ತು. ಸಂಜೆಯಾಗುತ್ತಲೆ ಸೂಯರ್ಾಸ್ತದ ವೈಭವವನ್ನು, ಚಂದ್ರ-ತಾರೆ ನರ್ತನವನ್ನೂ ಆನಂದಿಸಬಹುದಿತ್ತು. ನೆಲದ ಮೇಲಿನ ಕೊಳಗಳಲ್ಲಿ ನೀಲಿ ಕಮಲಗಳು, ಕಡು ಕೆಂಪು ಬಣ್ಣದ ಕನಕ ಪುಷ್ಪಗಳೊಂದಿಗೆ ಈಜಾಡುತ್ತಿದ್ದವು. ಹೊರಗಿನ ಅಪೂರ್ವ ಸೌಂದರ್ಯ ಒಳಗಿನ ಕಲಾ ರಸಿಕತೆಗೆ ಸೂಕ್ತ ಸಂವಾದಿಯಾಗಿದ್ದವು’. ಹ್ಯೂಯೆನ್ತ್ಸಾಂಗ್ನ ವರ್ಣನೆ ನಮ್ಮ ಕಲ್ಪನೆಗಳನ್ನೂ ಮೀರಿದ್ದು. ಆತ ನಲಂದಾವನ್ನು ವಣರ್ಿಸುತ್ತ ತನ್ನ ತಾನೇ ಮರೆತುಬಿಡುತ್ತಾನೆ.

8

ಇಷ್ಟಪಟ್ಟು ಬಡತನವನ್ನು ಆಚ್ಛಾದಿಸಿಕೊಂಡ ಬ್ರಾಹ್ಮಣ, ಸದಾ ಭಗವಚ್ಚಿಂತನೆಯಲ್ಲಿದ್ದು ಪುರದ ಹಿತವನ್ನೇ ಚಿಂತಿಸುವ ಪುರೋಹಿತನಾಗಿದ್ದ ಬ್ರಾಹ್ಮಣ, ಕಾಲಕ್ರಮದಲ್ಲಿ ಶೋಷಕನಾಗಿದ್ದು ಹೇಗೆ? ಪ್ರತಿಯೊಬ್ಬರಿಗೂ ಇಂತಹುದೊಂದು ಪ್ರಶ್ನೆ ಸಹಜವೇ. ಇದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರರು ಸೂಕ್ತ, ತರ್ಕಬದ್ಧ ಉತ್ತರ ನೀಡುತ್ತಾರೆ, ‘ಮಗುವಿನ ವರ್ಣ ನಿಧರ್ಾರದ ವ್ಯವಸ್ಥೆಯಲ್ಲಿ ಬ್ರಾಹ್ಮಣ ಧರ್ಮವು ಮೂರು ಮೂಲಭೂತ ಬದಲಾವಣೆಗಳನ್ನು ಮಾಡಿತು. ಮೊದಲನೆಯದಾಗಿ, ಮಕ್ಕಳಿಗೆ ತರಬೇತಿ ನೀಡುವ ಮತ್ತು ತರಬೇತಿಯ ಅವಧಿ ಮುಗಿದ ನಂತರ ಗುರುವೇ ಮಕ್ಕಳ ವರ್ಣ ನಿಧರ್ಾರ ಮಾಡುವ ಗುರುಕುಲ ವ್ಯವಸ್ಥೆಯನ್ನು ರದ್ದು ಮಾಡಲಾಯಿತು. ಮನುವಿಗೆ ಗುರುಕುಲದ ಬಗ್ಗೆ ಗೊತ್ತಿತ್ತು ಮತ್ತು ಗುರುವಿನ ಕೈಕೆಳಗೆ ಕಲಿಯುವ ಹಾಗೂ ನೆಲೆಸುವ ಗುರುವಾಸದ ಉಲ್ಲೇಖವನ್ನೂ ಆತ ಮಾಡುತ್ತಾನೆ. ಆದರೆ ಉಪನಯನಕ್ಕೆ ಸಂಬಂಧಿಸಿದಂತೆ ಅದರ ಹೆಸರೇ ತೆಗೆಯುವುದಿಲ್ಲ. ಉಪನಯನಕ್ಕೆ ಸಂಬಂಧಿಸಿ ಗುರುವಿನ ಉಲ್ಲೇಖವನ್ನೇ ಮಾಡದಿರುವ ಮೂಲಕ ಮನು ಉಪನಯನ ನೆರವೇರಿಸುವ ಗುರುವಿನ ಅಧಿಕಾರವನ್ನೇ ರದ್ದುಗೊಳಿಸುತ್ತಾನೆ’ ಹಾಗೆಂದು ಮನುಸ್ಮೃತಿಯ ಮೇಲೆ ಹರಿಹಾಯ್ದು ಅಂಬೇಡ್ಕರರು ಅದರ ಆಧಾರದ ಮೇಲೆಯೇ ‘ಬ್ರಾಹ್ಮಣಧರ್ಮ ತಂದ ಪ್ರಧಾನ ಬದಲಾವಣೆ ಎಂದರೆ ಉಪನಯನ ಮಾಡುವ ಅಧಿಕಾರವನ್ನು ಗುರುವಿನಿಂದ ತಂದೆಗೆ ವಗರ್ಾಯಿಸಿದ್ದು. ಇದರ ಪರಿಣಾಮವಾಗಿ – ತನ್ನ ಮಗುವಿನ ಉಪನಯನ ಮಾಡುವ ಅಧಿಕಾರ ಪಡೆದ ತಂದೆ, ಮಗುವಿಗೆ ತನ್ನ ವರ್ಣವನ್ನೇ ಕೊಡುವ ಮೂಲಕ ಅದನ್ನು ಅನುವಂಶೀಯಗೊಳಿಸಿದ. ಬ್ರಾಹ್ಮಣಧರ್ಮವು ವರ್ಣನಿಧರ್ಾರದ ಅಧಿಕಾರವನ್ನು ಗುರುವಿನಿಂದ ಕಿತ್ತು ತಂದೆಗೆ ಕೊಡುವ ಮೂಲಕ ಅಂತಿಮವಾಗಿ ವರ್ಣವನ್ನು ಜಾತಿಯಾಗಿ ಬದಲಾಯಿಸಿತು’ ಎಂದು ಅಧಿಕಾರಯುತವಾಗಿ ಮಂಡಿಸಿದ್ದಾರೆ.

ಈ ವಾದವನ್ನು ಅಲ್ಲಗಳೆಯೋದು ಕಠಿಣವೇ. ಅಂಬೇಡ್ಕರರೇ ಪುಷ್ಟೀಕರಿಸುವಂತೆ ಗುರುಕುಲದಲ್ಲಿದ್ದು ಅಧ್ಯಯನ ಮುಗಿಸಿದ ನಂತರ ಹೊರ ಹೋಗುವ ವಿದ್ಯಾಥರ್ಿಗಳಿಗೆ ವರ್ಣನಿರ್ಣಯ ಮಾಡಿ ಕಳಿಸುತ್ತಿದ್ದ ಶ್ರೇಷ್ಠ ಪರಂಪರೆ ತುಕ್ಕು ಹಿಡಿಯಲು ಸ್ವಾರ್ಥವೇ ಕಾರಣವಾಗಿರಬೇಕು. ತನಗೆ ಸಿಕ್ಕ ಗೌರವ ತನ್ನ ಅಯೋಗ್ಯ ಮಗನಿಗೂ ಸಿಗಬೇಕೆಂದರೆ ಅವನಿಗೆ ತಾನೇ ಗಾಯತ್ರಿ ಉಪದೇಶಿಸಿ ಅಧ್ಯಯನ ಮಾಡಿಸಿ ಸ್ನಾತಕನಾದ ಉಪಾಧಿಯನ್ನೂ ದಯಪಾಲಿಸಿ ಬ್ರಾಹ್ಮಣನಾಗಿಸುವ ಹುನ್ನಾರ ಮಾಡಿರಬಹುದು. ಆಗಲೇ ಸಮಾಜದ ಸ್ವಾಸ್ಥ್ಯ ಕಾಪಾಡಿದ್ದ ವಣರ್ಾಶ್ರಮ ಜಾತಿ ಪದ್ಧತಿಯಾಗಿ ಶಿಥಿಲವಾಗಿದ್ದಿರಬಹುದು. ಹಾಗಂತ ಈ ಬದಲಾವಣೆಯೂ ಏಕಾಕಿ ಆದದ್ದಲ್ಲ, ಇದು ದೀರ್ಘಕಾಲದ ಪತನದ ಸಂಕೇತವೇ. ಹೀಗೆ ಸ್ವಯಂಭೂ ಬ್ರಾಹ್ಮಣರಾದವರು ಸಮಾಜಕ್ಕೆ ಕಟ್ಟುಕಟ್ಟಳೆಗಳನ್ನು ಹೇರಲಾರಂಭಿಸಿದರು. ನೀತಿಸಂಹಿತೆ ರೂಪಿಸುವ ಜವಾಬ್ದಾರಿ ಅವರ ಹೆಗಲ ಮೇಲೆಯೇ ಇದ್ದುದರಿಂದ ಅವರು ಇತರ ವರ್ಣದವರನ್ನು ಕ್ರೂರವಾಗಿ ನಡೆಸಿಕೊಳ್ಳಲಾರಂಭಿಸಿದರು. ಯಜ್ಞಬಲಿಗಳೆಲ್ಲ ತೀವ್ರತರವಾದವು. ಸಂಯಮವೇ ಇಲ್ಲದ ಬ್ರಾಹ್ಮಣ ಸಮಾಜವನ್ನು ಮುನ್ನಡೆಸುವ ನಾಯಕನಾದ ಮೇಲೆ ಇಂತಹವೆಲ್ಲ ಸಹಜವೇ ತಾನೇ?

ಆಗಲೇ ಸಿಡಿದು ನಿಂತವನು ಶಾಕ್ಯಮುನಿ, ಗೌತಮ ಬುದ್ಧ! ಅತಿ ಕ್ರೂರವಾದ ಆಚರಣೆಗಳ ಭಾರದಿಂದ ನಲುಗುತ್ತಿದ್ದ ಸಾಮಾನ್ಯ ಜನರಿಗೆ ಆತ ದಾರಿದೀಪವಾದ. ಭಗವಂತನ ಬಳಿ ಹೋಗಲು ಈ ಪತಿತ ಬ್ರಾಹ್ಮಣರನ್ನು ಆಶ್ರಯಿಸಲೇಬೇಕಿಲ್ಲವೆಂದರಿತು ತಾನೇ ಹೊಸದೊಂದು ಪಂಥವನ್ನು ಹುಟ್ಟುಹಾಕಿ ಜನರನ್ನು ಜೊತೆಗೊಯ್ದ. ಹಾಗಂತ ಆಗಲೂ ಆತ ಹಳೆಯ ವರ್ಣ ಪ್ರಭಾವದಿಂದ ಹೊರಬಂದಿರಲಿಲ್ಲ. ಬ್ರಾಹ್ಮಣರ ಕುರಿತಂತೆ ಅಪಾರ ಗೌರವದಿಂದಲೇ ಮಾತನಾಡುತ್ತಿದ್ದ. ಆತ ಅಂಗ ದೇಶದಲ್ಲಿ ಸಂಚರಿಸುವಾಗ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಸೋಣದಂಡನೆಂಬ ಬ್ರಾಹ್ಮಣನು ಬುದ್ಧನ ದರ್ಶನಕ್ಕೆಂದು ಹೋಗಿದ್ದ. ಅವನೊಂದಿಗೆ ಮತ್ತೊಂದಷ್ಟು ಬ್ರಾಹ್ಮಣರೂ ಇದ್ದರು. ಚಚರ್ೆ ಶುರುವಾದದ್ದು ಬುದ್ಧನ ಪ್ರಶ್ನೆಯಿಂದಲೇ. ಬ್ರಾಹ್ಮಣನ ಲಕ್ಷಣಗಳನ್ನು ವಿವರಿಸುವಂತೆ ಬುದ್ಧ ಕೇಳಿದ ಪ್ರಶ್ನೆಗೆ ಸೋಣದಂಡನ ಉತ್ತರ ಸಮರ್ಪಕವಾಗಿತ್ತು. ಬುದ್ಧ ಕೇಳುತ್ತ ಹೋದ, ಸೋಣದಂಡ ಉತ್ತರಿಸುತ್ತ ನಡೆದ. ಕೊನೆಗೊಮ್ಮೆ ಶೀಲ ಮತ್ತು ಪ್ರಜ್ಞೆಯ ಕುರಿತಂತೆ ಪ್ರಶ್ನೆ ಎದುರಾದಾಗ ಸೋಣದಂಡ ಕೈಚೆಲ್ಲಿ ಬುದ್ಧನನ್ನೇ ಉತ್ತರಿಸುವಂತೆ ಕೇಳಿಕೊಂಡ. ಆಗ ಬುದ್ಧ ಬ್ರಾಹ್ಮಣನ ಗುಣಲಕ್ಷಣಗಳನ್ನು ವಿವರಿಸುತ್ತಾನಲ್ಲ ಅವು ಅಕ್ಷರಶಃ ಗುರುಕುಲದಲ್ಲಿ ವಿದ್ಯಾಥರ್ಿಗೆ ವಿಧಿಸುತ್ತಿದ್ದ ಕಟ್ಟು ಕಟ್ಟಳೆಗಳ ಸಮರ್ಪಕ ವಿವರಣೆ ಅಷ್ಟೇ! ಬುದ್ಧನ ಧಮ್ಮ ಸೂತ್ರದಲ್ಲಿ ‘ಬ್ರಾಹ್ಮಣವಗ್ಗ’ವೆಂಬ ಅಧ್ಯಾಯವೇ ಇದೆ. ಆತ ಸಮಾಜವನ್ನು ಬ್ರಾಹ್ಮಣವರ್ಣಕ್ಕೇರಿಸುವ ಸಂಕಲ್ಪ ಬದ್ಧನಾಗಿದ್ದ. ಆತ ವೇದವನ್ನು ಉರು ಹೊಡೆಯುವ ಬ್ರಾಹ್ಮಣರನ್ನು ವಿರೋಧಿಸುತ್ತಿದ್ದ ಆದರೆ ಶ್ರೇಷ್ಠ ತತ್ತ್ವವನ್ನು ಅಥರ್ೈಸಿಕೊಂಡು ಅದರಂತೆ ನಡೆಯುವ ಬ್ರಾಹ್ಮಣರಾಗಿ ಪ್ರತಿಯೊಬ್ಬರೂ ರೂಪುಗೊಳ್ಳಬೇಕೆಂದು ಆತ ಪ್ರಯತ್ನಿಸುತ್ತಿದ್ದ.ಕಿದರಿಂದಾಗಿಯೇ ಜೊತೆಗೆ ಬಂದವರನ್ನು ಭಿಖ್ಖುಗಳಾಗಿಸುವ ಅವನ ಕಲ್ಪನೆ ರೂಪುಗೊಂಡಿದ್ದು. ‘ಇಂದ್ರಿಯ ದ್ವಾರಗಳನ್ನು ರಕ್ಷಿಸಿಕೊಂಡು ಸ್ಮೃತಿವಂತನಾದವ ಸಮಣನಾಗುತ್ತಾನೆ, ಅದನ್ನು ವೃದ್ಧಿಪಡಿಸಿಕೊಂಡು ಭಿಖ್ಖುವಾಗುತ್ತಾನೆ’ ಎಂದು ಅವನೇ ಹೇಳಿದ್ದಾನೆ. (ಬುದ್ಧ ಚರಿತೆ, ಧಮ್ಮಪಾದ || 275)

9

ಹಾಗಂತ ಆತನಿಗಿಂತಲೂ ಮುಂಚೆ ಈ ಭಿಖ್ಖುಗಳ ಕಲ್ಪನೆ ಇರಲಿಲ್ಲವೆಂದೇನಿಲ್ಲ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸವೆಂಬ ನಾಲ್ಕು ಆಶ್ರಮಗಳನ್ನು ರೂಪಿಸಿದಾಗ ಇದ್ದ ಚಿಂತನೆ ಇಂತಹುದೇ. ಗುರುಕುಲವಾಸದ ಬ್ರಹ್ಮಚಯರ್ಾವಧಿಯನ್ನು ಮುಗಿಸಿ ಗೃಹಸ್ಥನಾದ ತರುಣ ಮುಂದೆ ಪರಿವ್ರಾಜಕನಾಗಿ ವಾನಪ್ರಸ್ಥಿಯಾಗುತ್ತಾನೆ. ಆಗಲೇ ಆತ ಬ್ರಹ್ಮಚಯರ್ಾವಧಿಯಲ್ಲಿ ಕಲಿತದ್ದನ್ನು, ಗೃಹಸ್ಥಾವಧಿಯಲ್ಲಿ ಅನುಭವ ಪಡೆದಿದ್ದನ್ನು ಸಮಾಜಕ್ಕೆ ಧಾರೆ ಎರೆಯೋದು. ‘ಮಸ್ಕರಿನಃ’ ಎಂದು ಇಂಥವರನ್ನೇ ಪಾಣಿನಿ ಗುರುತಿಸಿರೋದು. ಇವರು ‘ಎಲ್ಲ ಕರ್ಮಗಳಿಂದಲೂ ಮುಕ್ತರಾಗಿ, ಶಾಂತಿಯನ್ನು ಅರಸುವಂಥವರಾಗಿ’ ಎಂದು ಬೋಧಿಸುತ್ತಿದ್ದರೆಂದೂ ಪತಂಜಲಿ ಹೇಳುತ್ತಾನೆ. ಸನ್ಯಾಸಿಗಳಲ್ಲಿ ಅರಣ್ಯವಾಸಿಗಳಾದ ಆರಣ್ಯಕರು ಮತ್ತು ಸಮಾಜದ ನಡುವೆ ಭಿಕ್ಷುಗಳಾಗಿರುವ ನೈಕಟಿಕರೂ ಇರುತ್ತಿದ್ದರೆಂದು ಅಂದಿನ ಸಾಹಿತ್ಯಗಳು ವಿವರಿಸುತ್ತವೆ. ಇದೇ ಪರಿವ್ರಾಜಕರು ಮಂದಿರ ಮಠಗಳಲ್ಲಿ, ಅಗ್ರಹಾರಗಳಲ್ಲಿ ಉಳಿದುಕೊಂಡು ಜ್ಞಾನ ಪ್ರಸರಣ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ತನ್ಮೂಲಕ ಗುರುವಿನಿಂದ ಪಡೆದುಕೊಂಡದ್ದನ್ನು ಮುಂದಿನ ಪೀಳಿಗೆಗೆ ವಗರ್ಾಯಿಸಿ ತಾವು ನಿರ್ಗಮಿಸುತ್ತಿದ್ದರು. ಬುದ್ಧನ ಭಿಕ್ಷುಗಳ ಕೆಲಸದ ವಿಧಾನವೂ ಹೆಚ್ಚು ಕಡಿಮೆ ಹೀಗೆಯೇ.

ಅಂದಹಾಗೆ ನಾವು ಚಚರ್ೆ ಮಾಡುತ್ತಿದ್ದುದು ಶಿಕ್ಷಣ ವ್ಯವಸ್ಥೆಯ ಬಗ್ಗೆ. ಇಡಿಯ ಬುದ್ಧ ಕಾಲದ ಶಿಕ್ಷಣ ಈ ಬುದ್ಧ ಸನ್ಯಾಸಿ ಭಿಕ್ಷುಗಳ ವಶದಲ್ಲಿತ್ತು. ಗುರುಕುಲದ ಅಧ್ಯಯನ ಹೇಗೆ ರೂಪುಗೊಂಡಿತ್ತೋ ಹಾಗೆಯೇ ರೂಪಿಸಲ್ಪಟ್ಟಿದ್ದು ಬೌದ್ಧ ಶಿಕ್ಷಣ ವ್ಯವಸ್ಥೆ ಕೂಡ. ಈಗಲೂ ಬೌದ್ಧರು ವಾಸಿಸುವ ಜಾಗದಲ್ಲಿ ಈ ಬಗೆಯ ಶಿಕ್ಷಣ ನೀವು ಗಮನಿಸಬಹುದು. ದೂರದೂರುಗಳಿಂದ ಸನ್ಯಾಸಿ ಮಠದಲ್ಲಿದ್ದು ಅಧ್ಯಯನ ಮಾಡಲೆಂದು ವಿದ್ಯಾಥರ್ಿಗಳು ಸೇರಿಸಿಕೊಳ್ಳುತ್ತಾರೆ. ಅಲ್ಲಿ ಅವರು ಗುರುಕುಲದಂತೆಯೇ ಕಟ್ಟುನಿಟ್ಟಿನ ಬದುಕು ನಡೆಸುತ್ತಾ ಶಿಕ್ಷಣ ಪಡೆಯುತ್ತಾರೆ. ಆನಂತರ ಅವರು ತಾವೂ ಭಿಕ್ಷುಗಳಾಗಿ ಬದುಕು ಸವೆಸಬಹುದು ಇಲ್ಲವೇ ಸಾಮಾನ್ಯರಂತೆ ಮದುವೆಯಾಗಿ ಸಾಂಸಾರಿಕ ಜೀವನ ನಡೆಸಬಹುದು. ಸಹಜವಾಗಿಯೇ ಬುದ್ಧ ಸಂಘದ ವಿಸ್ತಾರಕ್ಕೆ ಅಪರ್ಿಸಿಕೊಂಡವನಿಗೆ ಒಂದು ತೂಕ ಗೌರವ ಹೆಚ್ಚು, ಗುರುಕುಲದಿಂದ ಹೊರಬಂದ ಬ್ರಾಹ್ಮಣನಿಗಿದ್ದಂತೆ!

ಮನೆಯಿಂದ ಶಿಕ್ಷಣ ಪಡೆಯಲು ಹೊರ ನಡೆಯುವುದನ್ನೇ ಪಬ್ಬಜ್ಜಾ (ಪ್ರವೃಜ್ಯ) ಎನ್ನಲಾಗಿದೆ. ಈತ ಹಳದಿ ವಸ್ತ್ರಧಾರಿಯಾಗಿ ಹಿರಿಯರೆದುರು ನಿಂತು ಸಂಘ ದೀಕ್ಷೆ ಪಡೆಯುತ್ತಾನೆ. ಗುರುಕುಲದ ಮಾದರಿಯಂತೇ ಅವನಿಗೆ ಕಟ್ಟುನಿಟ್ಟಿನ ನಿಯಮಾವಳಿಗಳು. ಆನಂತರ 12 ವರ್ಷಗಳ ಕಾಲ ಶಿಕ್ಷಣ ಪಡೆದು ಆತ ಉಪಸಂಪದವೆಂಬ ಆಚರಣೆಯ ನಂತರ ಪೂರ್ಣಪ್ರಮಾಣದ ಭಿಕ್ಷುವಾಗಿ ರೂಪುಗೊಳ್ಳುತ್ತಾನೆ. ಗುರುಕುಲದಲ್ಲಿ ಸ್ನಾತಕನಿಗೆ ಗುರುಗಳು ಆಶೀರ್ವದಿಸಿ ಬೀಳ್ಕೊಡುವ ಪ್ರಸಂಗವನ್ನು ಶಿಕ್ಷಾವಲ್ಲಿಯಲ್ಲಿ ವಣರ್ಿಸಿದ್ದಾರೆ. ‘ಸತ್ಯಂ ವದ, ಧರ್ಮಂ ಚರ’ ಎಂದೆಲ್ಲ ಅಧ್ಯಯನಾನಂತರದ ಚೌಕಟ್ಟನ್ನು ನೆನಪಿಸಿಕೊಡುತ್ತಾರೆ. ಬುದ್ಧನ ಸಂಘದಲ್ಲೂ ಹಾಗೆಯೇ.

10

ಗೃಹಸ್ಥರಾದವರೂ ಶಿಕ್ಷಣಕ್ಕೆ ಸಂಘವನ್ನೇ ಅವಲಂಬಿಸಬೇಕಿತ್ತು. ಹೀಗಾಗಿಯೇ ಭಿಕ್ಷುಗಳು ಅನುಮಾನಕ್ಕೆಡೆಯಿಲ್ಲದಂತೆ ಸಮಾಜದ ಮೇಲೆ ಏಕಸ್ವಾಮ್ಯ ಹೊಂದಿದ್ದರು. ಬಹುಸಂಖ್ಯಾತರ ಮೇಲೆ ನಿಯಂತ್ರಣ ಪಡೆದಿದ್ದರಿಂದಾಗಿ ಸಹಜವಾಗಿಯೇ ರಾಜನೂ ಅವರಿಗೆ ತಗ್ಗಿ ಬಗ್ಗಿ ನಡೆಯಬೇಕಾಗಿತ್ತು. ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಮತ-ಪಂಥಗಳಲ್ಲೂ ಇರುವಂಥದ್ದೇ. ಬ್ರಾಹ್ಮಣನಿಗೆ ಗೌರವ ಕೊಟ್ಟ ಆಳುವ ಧಣಿಗಳು ಆನಂತರದ ದಿನಗಳಲ್ಲಿ ಬೌದ್ಧ ಭಿಕ್ಷುಗಳನ್ನು ಗೌರವಿಸಲಾರಂಭಿಸಿದರು. ಮುಂದೆ ಈ ಅವಕಾಶ ಮೌಲ್ವಿಗಳಿಗೆ ದಕ್ಕಿತು. ಈಗಲೂ ಕೆಲವು ಮಠಾಧೀಶರು, ಮೌಲ್ವಿಗಳು ಕರೆದರೆ ಮುಖ್ಯಮಂತ್ರಿಯೂ ಮಂಡಿಯೂರಿ ಕುಳಿತುಕೊಂಡು ಅವರು ಹೇಳಿದಂತೆ ಕೇಳುವುದಿಲ್ಲವೇ? ಥೇಟು ಹಾಗೆಯೇ.

ಸಂಘದೀಕ್ಷೆ ಸ್ವೀಕರಿಸಿದ ತರುಣರು ಪರಿವ್ರಾಜಕರಾಗಿ ಅಲೆದಾಡುತ್ತ ಬುದ್ಧ ಧಮ್ಮವನ್ನು ಪಸರಿಸಲಾರಂಭಿಸಿದ ಮೇಲೆ ಅತ್ತ ಒಲವು ತೋರಿ ಧಾವಿಸಿ ಬಂದವರು ಅಸಂಖ್ಯ. ಅನೇಕ ಬ್ರಾಹ್ಮಣರೂ ತಮ್ಮ ಪಂಥದಲ್ಲಿನ ಪತನವನ್ನು ಗುರುತಿಸಿ ಬುದ್ಧನತ್ತ ಆಕಷರ್ಿತರಾದರು. ಸಂಖ್ಯೆ ವಿಸ್ತಾರವಾಯ್ತು. ಆಗಲೇ ಶಿಕ್ಷಣ ವ್ಯವಸ್ಥೆ ಆಶ್ರಮಗಳಿಂದ ಆಚೆಗೂ ವಿಸ್ತರಿಸಿದ್ದು. ಅದಾಗಲೇ ಸ್ಥಾಪಿತಗೊಂಡಿದ್ದ ವಿಶ್ವವಿದ್ಯಾಲಯಗಳಿಗೆ ಬುದ್ಧ ತತ್ತ್ವದ ಗಾಳಿ ಬೀಸಿತು. ತಕ್ಷಶಿಲಾ, ಪಾಟಲೀಪುತ್ರಗಳು ಬುದ್ಧ ಸಂಸ್ಕೃತಿಯ ಪಸರಿಸುವ ಕೇಂದ್ರವಾಗುವಲ್ಲಿ ಸಾಕಷ್ಟು ಘರ್ಷಣೆಗಳಾದವು. ಆನಂತರವೇ ನಲಂದಾ ಆ ಕಾಲದ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ ಜಗತ್ತಿಗೆ ತೆರೆದುಕೊಂಡು ನಿಂತಿತು.

ನಲಂದಾ ಬುದ್ಧ ಚಿಂತನೆಯನ್ನು ಪ್ರಚುರ ಪಡಿಸುವ ಪ್ರಾಚೀನ ಭಾರತದ ಸಮರ್ಥ ಶಿಕ್ಷಣ ಕೇಂದ್ರ. ನಲಂದಕ್ಕೆ ಫಾಹಿಯಾನ, ಹ್ಯುಯೆನ್ತ್ಸಾಂಗರಾದಿಯಾಗಿ ಅನೇಕ ಯಾತ್ರಿಕರೂ ಭೇಟಿ ನೀಡಿದ್ದಾರೆ. ಪ್ರತಿಯೊಬ್ಬರೂ ಈ ಕ್ಷೇತ್ರದ ಕುರಿತಂತೆ ಇಲ್ಲಿನ ಶಿಕ್ಷಣ ಸಂಸ್ಥೆಯ ಕುರಿತಂತೆ ಮನದುಂಬಿ ಹೊಗಳಿದ್ದಾರೆ. ಹೆಸರೇ ಹೇಳುವಂತೆ ನ-ಅಲಂ-ದಾ ‘ಕೊಟ್ಟಷ್ಟೂ ತೃಪ್ತಿಯಾಗದ ವಿದ್ಯಾಕ್ಷೇತ್ರ’ ಅದು. ಈ ಸಂಘ ನಿಮರ್ಾಣಕ್ಕೆ ಕೆಲವು ವರ್ತಕರು ಬುದ್ಧನಿಗೆ ಹತ್ತು ಕೋಟಿ ಚಿನ್ನದ ನಾಣ್ಯಗಳನ್ನು ಕೊಟ್ಟಿದ್ದರೆಂದು ಒಂದು ಉಲ್ಲೇಖವಿದೆ. ಆನಂತರ ಬೇರೆ ಬೇರೆ ರಾಜಪ್ರಭುತ್ವದ ಕಾಲದಲ್ಲಿ ಸಾಕಷ್ಟು ನಿಧಿ ಹರಿದು ಬಂದು ಅವೆಲ್ಲ ಕಟ್ಟಡಗಳಾಗಿ ಬೆಳೆದು ನಿಂತವು. ಸುತ್ತಮುತ್ತಲಿನ ಹಳ್ಳಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಈ ವಿಶ್ವವಿದ್ಯಾಲಯ ಧನ ಸಂಪತ್ತಿನ ಕೊರತೆಯಿಲ್ಲದಂತೆ ನಡೆಯಲಾರಂಭಿಸಿತು.

‘ವಿಶ್ವವಿದ್ಯಾಲಯ ಆರಂತಸ್ತಿನ ಕಟ್ಟಡವಾಗಿತ್ತು. ಸುತ್ತಲೂ ಎತ್ತರದ ಕಾಂಪೌಂಡು ಗೋಡೆ. ಇಡಿಯ ವಿಶ್ವವಿದ್ಯಾಲಯಕ್ಕೆ ಒಂದೇ ದ್ವಾರ. ಅದನ್ನು ತೆರೆದೊಡನೆ ವಿಶಾಲ ಕಾಲೇಜಿನೊಳಕ್ಕೆ ಹೊಕ್ಕಬಹುದಿತ್ತು, ಅಲ್ಲಿಂದ ಎಂಟು ವಿಸ್ತಾರ ಕೊಠಡಿಗಳಿಗೆ! ಪ್ರತೀ ಕೊಠಡಿಗಳೂ ಅನೇಕ ಅಂತಸ್ತುಗಳಿಂದ ಕೂಡಿದ್ದು ಮುಗಿಲ ಚುಂಬಿಸುವ ಗಿರಿ ತುದಿಯಂತೆ ಕಾಣುತ್ತಿದ್ದವು. ಮೇಲಿನ ಕೋಣೆ ಮೋಡದ ಮೇಲೆಯೇ ನಿಮರ್ಿಸಿದಂತೆ ಕಾಣುತ್ತಿತ್ತು. ಈ ಕೋಣೆಗಳಲ್ಲಿ ಕುಳಿತವರು ಕಿಟಕಿಗಳ ಮೂಲಕ ಮೋಡಗಳು ಗಾಳಿಯೊಂದಿಗೆ ಸೇರಿ ನತರ್ಿಸುವುದನ್ನು ನೋಡಬಹುದಿತ್ತು. ಸಂಜೆಯಾಗುತ್ತಲೆ ಸೂಯರ್ಾಸ್ತದ ವೈಭವವನ್ನು, ಚಂದ್ರ-ತಾರೆ ನರ್ತನವನ್ನೂ ಆನಂದಿಸಬಹುದಿತ್ತು. ನೆಲದ ಮೇಲಿನ ಕೊಳಗಳಲ್ಲಿ ನೀಲಿ ಕಮಲಗಳು, ಕಡು ಕೆಂಪು ಬಣ್ಣದ ಕನಕ ಪುಷ್ಪಗಳೊಂದಿಗೆ ಈಜಾಡುತ್ತಿದ್ದವು. ಹೊರಗಿನ ಅಪೂರ್ವ ಸೌಂದರ್ಯ ಒಳಗಿನ ಕಲಾ ರಸಿಕತೆಗೆ ಸೂಕ್ತ ಸಂವಾದಿಯಾಗಿದ್ದವು’. ಹ್ಯೂಯೆನ್ತ್ಸಾಂಗ್ನ ವರ್ಣನೆ ನಮ್ಮ ಕಲ್ಪನೆಗಳನ್ನೂ ಮೀರಿದ್ದು. ಆತ ನಲಂದಾವನ್ನು ವಣರ್ಿಸುತ್ತ ತನ್ನ ತಾನೇ ಮರೆತುಬಿಡುತ್ತಾನೆ. ಇತ್ಸಿಂಗನೂ 8 ವಿಶಾಲ ಕೊಠಡಿಗಳನ್ನು 300 ವಾಸದ ಕೊಠಡಿಗಳನ್ನೂ ಕಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಈ ಜಾಗದಲ್ಲಿ ಉತ್ಖನನ ನಡೆದ ನಂತರ ಆಕರ್ಿಯಾಲಾಜಿಕಲ್ ಸವರ್ೇ ವರದಿಯಲ್ಲಿ ಡಿ ಬಿ ಸ್ಪೂನರ್, ಗೋಡೆಗಳ ಅಳತೆಯನ್ನೆಲ್ಲ ಉಲ್ಲೇಖಿಸಿ ‘ತಿಳಿ ಹಳದಿ ಬಣ್ಣದ, ಮನಮೆಚ್ಚುವ ನೆಯ್ಗೆಯ ಇಟ್ಟಿಗೆಗಳನ್ನು ಎಷ್ಟು ಸಮರ್ಪಕವಾಗಿ ಜೋಡಿಸಲಾಗಿದೆಯೆಂದರೆ ಕೆಲವೆಡೆ ಕಣ್ಣಿಗೆ ಕುಕ್ಕುವಂತಿದೆ’ ಎಂದಿದ್ದಾರೆ. ಅಷ್ಟೇ ಅಲ್ಲ. ‘ಕಟ್ಟಡ ನಿಮರ್ಾಣ ಅದೆಷ್ಟು ಅದ್ಭುತವಾಗಿದೆಯೆಂದರೆ ಈಚಿನ ದಿನಗಳಲ್ಲಿ ನಿಮರ್ಾಣಗೊಂಡ ಕಟ್ಟಡಗಳಿಗಿಂತ ಶ್ರೇಷ್ಠವಾಗಿದೆ’ ಎಂದು 1915 ರಲ್ಲಿ ಉದ್ಗರಿಸಿದ್ದರು.

5
Photograph of the rear view of the ruins of the Baladitya Temple at Nalanda, Bihar, taken by Joseph David Beglar in 1872.

ಇಡಿಯ ವಿಶ್ವವಿದ್ಯಾಲಯ ಒಬ್ಬ ರಾಜನ ಕಾಲದಲ್ಲಿ ನಿಮರ್ಾಣಗೊಂಡಿದ್ದಲ್ಲ. ಅದು ದೀರ್ಘಕಾಲದ ಪ್ರಕ್ರಿಯೆ. ಅನೇಕ ರಾಜರು ಬಗೆ ಬಗೆಯ ಕೊಡುಗೆಗಳನ್ನು ಕೊಟ್ಟಿದ್ದಾರೆ. ಕೆಲವರು ಹಳ್ಳಿಗಳನ್ನೇ ಬಿಟ್ಟುಕೊಟ್ಟು ಅದರ ಆದಾಯವಷ್ಟನ್ನೂ ವಿಶ್ವವಿದ್ಯಾಲಯಕ್ಕೆ ಸೇರುವಂತೆ ಮಾಡಿದ್ದಾರೆ. ಹೀಗಾಗಿ 200 ಕ್ಕೂ ಹೆಚ್ಚು ಹಳ್ಳಿಗಳು ನಲಂದಾವನ್ನು ಸಲಹುತ್ತಿದ್ದವಂತೆ. ಹೀಗೆ ಬಂದ ಹಣದಿಂದ ವಿದ್ಯಾಥರ್ಿಗಳ ಅನ್ನ, ವಸ್ತ್ರ, ವಾಸ ಮತ್ತು ಔಷಧಿಗಳ ಖಚರ್ು ನಿಭಾಯಿಸಲಾಗುತ್ತಿತ್ತು. ಹ್ಯುಯೆನ್ತ್ಸಾಂಗನ ಪ್ರಕಾರ ಒಂದು ಹಂತದಲ್ಲಿ ಹತ್ತು ಸಾವಿರ ವಿದ್ಯಾಥರ್ಿಗಳು ಅಲ್ಲಿ ಅಧ್ಯಯನ ನಿರತರಾಗಿದ್ದರಂತೆ! ಆತ ಅಲ್ಲಿ ಅಧ್ಯಯನಶೀಲನಾಗಿದ್ದಾಗ ಪ್ರತಿ ದಿನ 120 ಹಣ್ಣು, 20 ಅಡಿಕೆ, ಒಂದು ಔನ್ಸ್ ಕಪರ್ೂರ ಜೊತೆಗೆ ಹಿಡಿಯಷ್ಟು ಸುವಾಸನೆಯುಕ್ತ ಅಕ್ಕಿಯನ್ನು ಕೊಡಲಾಗುತ್ತಿತ್ತಂತೆ. ಇದಲ್ಲದೇ ತಿಂಗಳಿಗಿಷ್ಟು ಕೊಡುವ ಎಣ್ಣೆ, ಬೆಣ್ಣೆ ಬೇರೆ! ಇಷ್ಟೆಲ್ಲಾ ಅನುಗ್ರಹದ ಹಿಂದಿರುವ ಏಕೈಕ ಕಾರಣ ಇವುಗಳ ಕೊರತೆಯಿಂದಾಗಿ ವಿದ್ಯಾಥರ್ಿ ಏಕಾಗ್ರತೆ ಕಳೆದುಕೊಳ್ಳಬಾರದೆಂಬುದು ಮಾತ್ರ. ನಲಂದಾ ಜಗತ್ತಿನ ಅಧ್ಯಯನಾಸಕ್ತರ ಪಾಲಿಗೆ ಕಾಶಿಯಾಗಿದ್ದು ಸುಮ್ಮಸುಮ್ಮನೆ ಅಲ್ಲ.
ಇಂದು ವಿಶ್ವವಿದ್ಯಾಲಯಗಳ ಮೇಲೆ ವಿಶ್ವವಿದ್ಯಾಲಯ ಕಟ್ಟುತ್ತಿದ್ದೇವೆ. ಏಳನೇ ವೇತನ ಆಯೋಗಕ್ಕೆ ಅನುಮತಿ ಕೊಟ್ಟು ಸಂಬಳವನ್ನು ಸಿಕ್ಕಾಪಟ್ಟೆ ಏರಿಸಿದ್ದೇವೆ. ಸವಲತ್ತುಗಳೂ ಲೆಕ್ಕವಿಲ್ಲದಷ್ಟು. ಇಷ್ಟಿದ್ದರೂ ಜಾಗತಿಕ ಮಟ್ಟದಲ್ಲಿ ಸ್ಪಧರ್ಿಸುವಲ್ಲಿ ಸೋಲುತ್ತಿದ್ದೇವೆ. ಏಕಿರಬಹುದು ಗೊತ್ತೆ? ನಮಗೀಗ ‘ಕೊಟ್ಟಷ್ಟು ತೃಪ್ತಿಯಿಲ್ಲ’ ಎನ್ನುವುದಕ್ಕಿಂತ ‘ಪಡೆದಷ್ಟೂ ತೃಪ್ತಿಯಿಲ್ಲ’ ಎಂದಾಗಿಬಿಟ್ಟಿದೆ. ಸರಿ ಹೋಗುವುದು ಹೇಗೆ ಹೇಳಿ!

One thought on “ಜಗದ ಕಣ್ ಕುಕ್ಕಿದ ನಲಂದಾ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s