ಒಂದೂರಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ…

ಒಂದೂರಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ…

ಅಂದಿನ ಶಿಕ್ಷಣ ಪದ್ಧತಿಯ ಸೌಂದರ್ಯವೇ ಇದು. ಶಿಕ್ಷಣ ಮಾರಾಟದ ಸರಕಾಗಿರಲಿಲ್ಲ. ಶಿಕ್ಷಕರು ಸಂಬಳಕ್ಕೆ ದುಡಿಯುವವರಾಗಿರಲಿಲ್ಲ. ಹಣಗಳಿಸಿ ಶ್ರೀಮಂತಿಕೆಯ ಕನಸು ಕಾಣುತ್ತಿದ್ದವ ಈ ವೃತ್ತಿಗೆ ಕಾಲಿಡುತ್ತಲೇ ಇರಲಿಲ್ಲ. ಅವನು ಸೇನೆಗೆ ಸೇರುತ್ತಿದ್ದ, ವ್ಯಾಪಾರಿಯಾಗುತ್ತಿದ್ದ ಅಥವಾ ಇತರೆ ನೌಕರಿ ಮಾಡಿಕೊಂಡು ಹಾಯಾಗಿರುತ್ತಿದ್ದ. ಸರಳವಾಗಿ ಹೇಳಬೇಕೆಂದರೆ ಐಷಾರಾಮಿ ಬದುಕು ಬಯಸುವವ ಇಚ್ಛೆಯಿಂದಲೇ ಬ್ರಾಹ್ಮಣ ವರ್ಣದಿಂದ ದೂರವಾಗಿ ಅನ್ಯ ವರ್ನಗಳನ್ನು ಆಶ್ರಯಿಸುತ್ತಿದ್ದ. ಏಕೆಂದರೆ ಸಕಲ ವಿದ್ಯೆಯ ಮೇಲೂ ಆಧಿಪತ್ಯ ಸ್ಥಾಪಿಸಿ ಅದನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವ ಕಾರಣಕ್ಕಾಗಿಯೇ ಇಷ್ಟ ಪಟ್ಟು ಬಡವನಾಗಿರುತ್ತಿದ್ದವ ಬ್ರಾಹ್ಮಣ ಮಾತ್ರ!

1

ವೇದ ಕಾಲದ ಶಿಕ್ಷಣ ಜಾತಿ-ಮತ-ಪಂಥಗಳನ್ನು ಮೀರಿದ್ದಾಗಿತ್ತು ಎಂಬುದನ್ನು ಅನೇಕರಿಗೆ ಜೀಣರ್ಿಸಿಕೊಳ್ಳಲಾಗುತ್ತಿಲ್ಲ. ಭಾರತವನ್ನು ಸರ್ವದಾ ಆಳುತ್ತಿರಬೇಕೆಂಬ ಬಯಕೆಯಿಂದ ಬಿಳಿಯರು ರಚಿಸಿದ ಇತಿಹಾಸಕ್ಕೆ, ಮುಂದಿಟ್ಟ ಸುಳ್ಳು ಸಿದ್ಧಾಂತಗಳಿಗೆ ಜೋತಾಡುತ್ತಾ ಭಾರತವನ್ನು ಹೀಗಳೆಯುತ್ತಾ ಕುಳಿತಿದ್ದೇವೆ. ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಮಹಾವಾಕ್ಯಕ್ಕೆ ನಾಂದಿಯಾದ ಋಷಿಗಳ ಹೃದಯದಲ್ಲಿ ಭೇದಕ್ಕೆ ಅವಕಾಶವಿರಲು ಸಾಧ್ಯವೇ ಇಲ್ಲ. ಅಥವಾ ಭೇದವನ್ನೇ ಯೋಚಿಸುವ ಕಶ್ಮಲ ಹೃದಯದಲ್ಲಿ ಅಂತಹದೊಂದು ಶ್ರೇಷ್ಠ ತತ್ತ್ವ ಇಣುಕಿ ನೋಡಲೂ ಸಾಧ್ಯವಿಲ್ಲ.

ಬಿಡಿ. ಸುಮ್ಮನೆ ತರ್ಕಕ್ಕೆ ಇರಲಿ ಅಂತ. ‘ಆರು ವರ್ಷವಾದ ಮೇಲೆಯೇ ಒಂದನೇ ತರಗತಿಗೆ ಸೇರಿಸಬೇಕು’ ಎಂಬ ಇಂದಿನ ಸಕರ್ಾರಿ ನಿಯಮವನ್ನು 500 ವರ್ಷಗಳ ನಂತರ ಯಾರಾದರೂ ಬಂದು ‘ಭಾರತದಲ್ಲಿ ಆರು ವರ್ಷಕ್ಕಿಂತ ಕೆಳಗಿನವರಿಗೆ ಶಿಕ್ಷಣ ನಿರಾಕರಿಸಲಾಗಿತ್ತು’ ಎಂದುಬಿಟ್ಟರೆ. ‘ಆರು ವರ್ಷಕ್ಕೆ ಶಾಲೆಗೆ ಬಂದು ಓದುವ ಮನಸ್ಥಿತಿಯನ್ನು ಮಕ್ಕಳು ಪಡೆಯುತ್ತಾರೆ’ ಎಂಬ ಸಮಜಾಯಿಷಿ ಕೊಟ್ಟಾಗ ತೃಪ್ತರಾಗದೇ ‘ಆರು ವರ್ಷಕ್ಕಿಂತಲೂ ಕಡಿಮೆ ವಯೋಮಾನದವರ ಮನಸ್ಥಿತಿ ಸರಿಯಿರುವುದಿಲ್ಲ ಅವರೆಲ್ಲ ಹುಚ್ಚರೆಂದು ಭಾವಿಸಲಾಗುತ್ತಿತ್ತು’ ಎಂದು ಯಾರಾದರು ಸಂಶೋಧನಾ ಪ್ರಬಂಧ ಮಂಡಿಸಿದರೆ. ಕೊನೆಗೆ ಬುದ್ಧಿಮಟ್ಟ ಆರಕ್ಕೆ ಪಕ್ವವಾಗುತ್ತವೆಂದು ಹೇಳಿದಾಗ ಹತ್ತು ವರ್ಷಕ್ಕೆ ಇನ್ನೂ ಹೆಚ್ಚಿರುತ್ತದಾ? ಇಪ್ಪತ್ತಕ್ಕೆ ಮತ್ತೂ ಹೆಚ್ಚಾ? ಅವರನ್ನೇ ಒಂದನೇ ತರಗತಿಗೆ ಸೇರಿಸಿಕೊಳ್ಳಿರೆಂದು ಒಂದಷ್ಟು ಆತ್ಮಗಳು ಊಳಿಟ್ಟರೆ ಏನು ಮಾಡುವಿರಿ? ನೆನಪಿಡಿ. ಭಯೋತ್ಪಾದಕರನ್ನು ಹೀರೋಗಳಾಗಿಸಿಬಿಡುವ, ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲೆಗಡುಕರೆಂದು ನಂಬಿಸಿಬಿಡುವ ಸುಳ್ಳು ಇತಿಹಾಸಕಾರರು ಏನನ್ನೂ ಮಾಡಿಬಿಡಬಲ್ಲರು.

ಇತಿಹಾಸಕಾರರ ಸೋಗಿನಲ್ಲಿರುವ ಸೋಗಲಾಡಿಗಳ ಕನ್ನಡಕ ಬದಿಗಿರಿಸಿ ಒಮ್ಮೆ ಪ್ರಾಚೀನ ಭಾರತದ ಮೇಲೆ ಕಣ್ಣಾಡಿಸಿ. ಬ್ರಾಹ್ಮಣರಿಗೆ ಮಾತ್ರ ಶಿಕ್ಷಣವೆಂಬುದು ಭಾರತೀಯ ಪರಂಪರೆಯೆ ಆಗಿರಲಿಲ್ಲ. ಬಹುಶಃ ವೇದ ಶಿಕ್ಷಣ ಪಡೆದು ಅದನ್ನು ಸಾಕ್ಷಾತ್ಕರಿಸಿಕೊಂಡ ವ್ಯಕ್ತಿಯನ್ನು ಬ್ರಾಹ್ಮಣನೆಂದು ಕರೆದಿರಬಹುದು. ಅಂಥವನಿಗೆ ಆನಂತರ ಸಮಾಜದಲ್ಲಿ ಅಪಾರ ಗೌರವವನ್ನು ಕೊಡುತ್ತಿದ್ದರು. ಹಾಗಂತ ಗುರುಕುಲಕ್ಕೆ ಎಲ್ಲರೂ ಸೇರಿಕೊಂಡುಬಿಡುವ ಸಾರ್ವತ್ರಿಕ ಶಿಕ್ಷಣ ಖಂಡಿತ ಇರಲಿಲ್ಲ. ಅದೇ ವೇಳೆಗೆ ಹಣದ ಥೈಲಿಯ ಆಧಾರದ ಮೇಲೆ ಶಾಲೆಗೆ ಸೇರಿಸಿಕೊಳ್ಳುವ ಶಾಲೆಗಳೂ ಅವುಗಳಾಗಿರಲಿಲ್ಲ. ಹೇಗೆ ಇಂದಿನ ಶಾಲೆಗಳಲ್ಲಿ ನಾಲ್ಕು ವರ್ಷದ ಮಗುವನ್ನು ಶಾಲೆಗೆ ಸೇರಿಸಿಕೊಳ್ಳಲು ತಂದೆ-ತಾಯಿಯರ ಸಂದರ್ಶನ ಮಾಡಿ ಮನೆಯಲ್ಲಿನ ಕಲಿಕೆಯ ವಾತಾವರಣವನ್ನು ಅಂದಾಜು ಮಾಡುವರೋ ಅಂದಿನ ದಿನಗಳಲ್ಲಿ ಗೋತ್ರ-ಕುಲಗಳನ್ನು ಕೇಳಿ ಹುಡುಗನ ಸಾಮಥ್ರ್ಯ ನಿಶ್ಚಯಿಸುತ್ತಿದ್ದರು. ಅಂದ ಮಾತ್ರಕ್ಕೆ ಅದೂ ಅಂತಿಮವಾಗಿರಲಿಲ್ಲ. ಕಮಲವೂ ಕೆಸರಿನಲ್ಲಿಯೇ ಹುಟ್ಟೋದೆಂಬ ಸತ್ಯ ಗೊತ್ತಿಲ್ಲದವರಲ್ಲ ಋಷಿಗಳು. ಸತ್ಯಕಾಮ ಜಾಬಾಲನ ಕಥೆ ನೆನಪಿಲ್ಲವೇ? ಗುರುವಿನ ಬಳಿ ಸಾರಿದ ಅವನಿಗೆ ಎದುರಾದ ಮೊದಲ ಪ್ರಶ್ನೆಯೇ ಯಾವ ಕುಟುಂಬಕ್ಕೆ ಸೇರಿದವನೆಂಬುದು. ಹುಡುಗನ ಉತ್ತರವೇನಿತ್ತು ಗೊತ್ತೇ? ‘ಅಮ್ಮನಿಗೆ ನನ್ನ ಹುಟ್ಟಿಗೆ ಕಾರಣವಾದ ವ್ಯಕ್ತಿ ಯಾರೆಂದು ಗೊತ್ತಿಲ್ಲವಂತೆ’ ಅಂತ! ಸತ್ಯಕಾಮನ ಸತ್ಯ ಸಂಧತೆಯನ್ನು ಅಚ್ಚರಿಯಿಂದ ಗಮನಿಸಿದ ಋಷಿ ‘ಬ್ರಹ್ಮಜ್ಞಾನವನ್ನು ಶ್ರದ್ಧೆಯಿಂದ ಪಡೆಯಲೆತ್ನಿಸಿದವನೇ ಬ್ರಾಹ್ಮಣ’ ಎನ್ನುತ್ತಾ ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು.

Gurukula-system-of-Education

ನಿಜವಾದ ಪರೀಕ್ಷೆ ಶುರುವಾಗುತ್ತಿದ್ದುದು ಶಿಷ್ಯನಾದ ನಂತರವೇ. ವೇದಾಧ್ಯಯನ ಅಂದಿನ ದಿನಗಳಲ್ಲಿ ಸವಾಲೇ ಆಗಿತ್ತು. ಹತ್ತಾರು ಸಾವಿರ ಶ್ಲೋಕಗಳನ್ನು ಸ್ವರಸಹಿತ ಕಂಠಸ್ಥ ಮಾಡಿಕೊಳ್ಳಬೇಕಿತ್ತು. ಅದನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಕೂಡ. ಶಾಸ್ತ್ರಾರ್ಥಗಳಲ್ಲಿ ಸ್ಪಧರ್ಿಸಬೇಕಿತ್ತು ಕೊನೆಗೆ ತಾನು ಅರಿತುಕೊಂಡ ಸತ್ಯವನ್ನು ಇತರರಿಗೆ ಪಸರಿಸಬೇಕಿತ್ತು. ಇದರ ಹಂತವಾಗಿಯೇ ಮೊದಲು ಉಪನಯನ ಮಾಡಿಕೊಂಡು ದ್ವಿಜನಾಗೋದು, ಆಮೇಲೆ ಶಾಸ್ತ್ರದ ಅಧ್ಯಯನ ಮಾಡಿಕೊಂಡು ವಿಪ್ರನಾಗೋದು ಮತ್ತು ಕೊನೆಗೆ ಬ್ರಹ್ಮ ಸಾಕ್ಷಾತ್ಕಾರ ಪಡಕೊಂಡು ಬ್ರಾಹ್ಮಣನಾಗೋದು. ಹೇಗೆ ಸೈನ್ಯದ ಅಧಿಕಾರಿಯ ಮಗನಿಗೆ ಸೈನಿಕನಿಗಿರಬೇಕಾದ ಗುಣಗಳು ಸಹಜವಾಗಿ ಹರಿದು ಬಂದಿರುತ್ತವೋ ಹಾಗೆಯೇ ಬ್ರಹ್ಮ ದರ್ಶನವಾದ ಬ್ರಾಹ್ಮಣನ ಪುತ್ರನಿಗೆ ಈ ಪರಂಪರೆಯನ್ನು ಮುಂದುವರೆಸುವ ಅರ್ಹತೆಗಳು ಹುಟ್ಟಿನಿಂದಲೇ ಇರುತ್ತಿದ್ದುದು ಅಚ್ಚರಿಯೇನಲ್ಲ. ಹೀಗಾಗಿ ಆತ ವೇದಾಧ್ಯಯನಕ್ಕೆ ಗುರುವಿನ ಮೊದಲ ಆಯ್ಕೆ ಆಗಿದ್ದಿರಬಹುದಷ್ಟೇ. ಉಳಿದಂತೆ ಬ್ರಾಹ್ಮಣತ್ವವನ್ನು ಅಪ್ಪ-ಮಗನಿಗೆ ಧಾರೆಯೆರೆವುದು ವೇದಕಾಲದಲ್ಲಿಯಂತೂ ಸಾಧ್ಯವಿರಲಿಲ್ಲ.

ಗುರುಕುಲದಲ್ಲಿ ವೇದಾಧ್ಯಯನಕ್ಕೆ ತೊಡಗಿಕೊಂಡ ಹುಡುಗನ ಪರಿಸ್ಥಿತಿ ಸುಲಭವಾಗಿರಲಿಲ್ಲ. ಮನುಸ್ಮೃತಿಯನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ, ಶಿಷ್ಯನಾದವನು ಸೂಯರ್ೋದಯಕ್ಕೂ ಮುಂಚಿತವಾಗಿ ಅಥವಾ ಗುರುಗಳು ಏಳುವುದಕ್ಕೂ ಮುಂಚೆ ಏಳಬೇಕಿತ್ತು, ಅವರು ಮಲಗಿದ ನಂತರ ಮಲಗಬೇಕಿತ್ತು. ನಿತ್ಯಸ್ನಾನ ಕಡ್ಡಾಯವಾಗಿತ್ತು. ಹಾಗಂತ ನದಿಯಲ್ಲಿ ಸದ್ದು ಮಾಡುತ್ತ ಈಜಾಡುವಂತಿರಲಿಲ್ಲ. ಅವನು ಅಭ್ಯಂಜನ, ಕಾಡಿಗೆ ಹಚ್ಚಿಕೊಳ್ಳುವುದು, ಪಾದರಕ್ಷೆ ತೊಡುವುದು ಮಾಡುವಂತಿರಲಿಲ್ಲ. ವಾದ್ಯ, ಗಾಯನ, ನರ್ತನದಲ್ಲಿ ಭಾಗಿಯಾಗುವಂತಿರಲಿಲ್ಲ. ಕಾಮ, ಕ್ರೋಧ, ಲೋಭಾದಿಗಳನ್ನು ವಜರ್ಿಸಬೇಕಿತ್ತು. ಬೆಳಗಿನ ಸಂಧ್ಯಾವಂದನೆಯಲ್ಲಿ ನಿಂತುಕೊಂಡು ಸೂರ್ಯದರ್ಶನವಾಗುವವರೆಗೆ, ಸಾಯಂ ಸಂಧ್ಯಾವಂದನೆಯಲ್ಲಿ ಕುಳಿತುಕೊಂಡು ನಕ್ಷತ್ರಗಳು ಕಾಣುವವರೆಗೆ ಗಾಯತ್ರಿ ಜಪ ಮಾಡಬೇಕಿತ್ತು. ಭಿಕ್ಷೆ ಬೇಡಿ ಗುರುವಿಗೆ ಅದನ್ನು ಅಪರ್ಿಸಿ ಅವರ ಆಜ್ಞೆಯ ನಂತರವೇ ಉಣ್ಣಬೇಕಿತ್ತು. ಅಧ್ಯಯನದ ಆರಂಭ ಮತ್ತು ಕೊನೆಯಲ್ಲಿ ಗುರುವಿನ ಪಾದ ಮುಟ್ಟಿ ನಮಸ್ಕಾರ ಮಾಡಬೇಕು. ಗುರುಗಳಿಗಿಂತಲೂ ಕಡಿಮೆ ದಜರ್ೆಯ ಅನ್ನ, ವಸ್ತ್ರ ಮತ್ತು ಅಲಂಕಾರವುಳ್ಳವನಾಗಬೇಕು. ದಿನದಲ್ಲಿ ಮಲಗುವಂತಿರಲಿಲ್ಲ. ಗುರು ಹೇಳದಿದ್ದರೂ ನಿತ್ಯ ಅಧ್ಯಯನ ಬಿಡುವಂತಿರಲಿಲ್ಲ. (ಮನುಸ್ಮೃತಿ ಅಧ್ಯಾಯ 2, ಅನುವಾದ ಶೇಷ ನವರತ್ನ)

ಉಫ್! ಇಂದಿನ ದಿನಗಳಲ್ಲಿ ಈ ಬಗೆಯ ವಿಧಿ-ನಿಷೇಧಗಳನ್ನು ಹೇರಿಬಿಟ್ಟರೆ ಅದನ್ನೇ ಶೋಷಣೆಯೆಂದು ಕರೆದು ರಂಪಾಟ ಮಾಡಿಬಿಡುತ್ತಿದ್ದರೇನೋ. 12 ರಿಂದ 14 ವರ್ಷಗಳ ಕಾಲ ಈ ಬಗೆಯ ಕಠಿಣ ಸಾಧನೆ ಮಾಡಿದ ನಂತರವೇ ಒಬ್ಬ ವೇದಾಧ್ಯಯನ ಪೂರ್ಣಗೊಳಿಸಲು ಸಾಧ್ಯವಾಗುತ್ತಿದ್ದುದು. ಅಕ್ಷರಶಃ ಅದೊಂದು ಸುದೀರ್ಘ ತಪಸ್ಸೇ. ಈ ತಪಸ್ಸಿನೊಂದಿಗೆ ಆತ ಬ್ರಹ್ಮಸಾಕ್ಷಾತ್ಕಾರದ ಆಂತರಿಕ ಯಜ್ಞವನ್ನು ಪೂರ್ಣಗೊಳಿಸಿ ತೇಜೋವಂತನಾದರೆ ಸುತ್ತಲ ಸಮಾಜ ಅವನನ್ನು ಗೌರವಿಸುತ್ತದೆ. ಧರ್ಮಸೂಕ್ಷ್ಮಗಳನ್ನು ವಿವರಿಸುವಂತೆ ರಾಜನೂ ಅವನೆದುರಿಗೆ ಬಂದು ಕುಳಿತುಕೊಳ್ಳುತ್ತಾನೆ. ಮನುವಂತೂ ಒಂದೆಡೆ ಸ್ಪಷ್ಟವಾಗಿ ಹೇಳಿದ್ದಾನೆ ರಾಜ ಮತ್ತು ಅಧ್ಯಯನ ಮುಗಿಸಿದ ಸ್ನಾತಕರು ಎದುರಾದರೆ ಅವರಿಬ್ಬರಲ್ಲೂ ಸ್ನಾತಕನೇ ಹೆಚ್ಚು ಮಾನ್ಯನು ಅಂತ. ಹೀಗಾಗಿಯೇ ರಾಜನಿಗಿಂತಲೂ ರಾಜಷರ್ಿಯಾದವನಿಗೆ ಹೆಚ್ಚಿನ ಗೌರವವಿತ್ತು ಭಾರತದಲ್ಲಿ. ಏಕೆಗೊತ್ತೇ? ಜಗತ್ತಿನ ಎಲ್ಲವನ್ನೂ ನಶ್ವರವೆಂಬುದನ್ನು ಅರಿತು ದರ್ಶನ ಮಾಡಿಕೊಂಡ ಇಂತಹ ಜ್ಞಾನಿಗೆ ರಾಜನ ಸಂಪತ್ತು-ಅಧಿಕಾರಗಳು ಗೌಣವಾಗಿಯೇ ಕಾಣುತ್ತಿದ್ದುದರಿಂದ ಆತ ಅವೆಲ್ಲವನ್ನೂ ಮೀರಿ ನಿಂತಿರುತ್ತಿದ್ದ.

the-topmost-yoga-system

ಅದನ್ನು ಮುಂದಿನ ದಿನಗಳಲ್ಲಿ ಚಚರ್ಿಸೋಣ. ಆದರೆ ವಸ್ತುಸ್ಥಿತಿಗೆ ಬನ್ನಿ. ಇಷ್ಟು ಕಠಿಣ ವ್ರತವನ್ನು ಪಾಲಿಸಲಾಗದವ ಕೆಲವೊಮ್ಮೆ ಗುರುಕುಲವನ್ನು ಬಿಟ್ಟು ನಡೆದು ಬಿಡುತ್ತಿದ್ದ. ಅಥವಾ ಬೇರೊಬ್ಬ ಗುರುವನ್ನು ಅರಸಿ ಹೊರಟು ಬಿಡುತ್ತಿದ್ದ. ಪಾಣಿನಿಯ ಸೂತ್ರವೊಂದು ‘ಧ್ವಾಂಕ್ಷೇಣ ಕ್ಷೇಪೆ’ ಎಂದಿದೆ. ಇದನ್ನು ಆಧರಿಸಿ ಹೀಗೆ ಗುರುವಿನಿಂದ ಗುರುವಿಗೆ ಒಂದೆಡೆ ನಿಲ್ಲದೇ ಅಲೆದಾಡುತ್ತಿದ್ದ ಶಿಷ್ಯನನ್ನು ‘ತೀರ್ಥಕಾಕ’ನೆಂದು ಕರೆಯುತ್ತಿದ್ದರೆಂದು ಹೇಳಲಾಗುತ್ತದೆ. ಕಾಗೆ ಹೇಗೆ ಒಂದೆಡೆ ದೃಢವಾಗಿ ನೆಲೆ ನಿಲ್ಲಲಾರದೋ ಹಾಗೆಯೇ ಅಲೆಮಾರಿ ಶಿಷ್ಯನೀತ ಎಂಬುದರ ಸಂಕೇತ ಅದು. ಗುರುಗಳೊಂದಿಗೆ ಸದಾ ವಾಸಿಸುತ್ತ ಗುರಿಯೆಡೆಗೆ ಹೆಜ್ಜೆ ಇಡುವ ಶಿಷ್ಯನನ್ನು ‘ಅಂತೇವಾಸಿ’ಗಳೆಂದು ಕರೆದಿದ್ದು. ಹೀಗೆ ಅತ್ಯಂತ ಕಠಿಣ ಮಾರ್ಗದ ಮೂಲಕ ವೇದಾಧ್ಯಯನ ಮುಗಿಸಿಕೊಂಡು ಗುರುತ್ವವನ್ನು ಹೊಂದಿ ಗುರುಕುಲದಿಂದ ಹೊರಬಿದ್ದವ ಬ್ರಾಹ್ಮಣನಾಗುತ್ತಿದ್ದ. ಇಷ್ಟನ್ನೂ ಪಾಲಿಸಲಾಗದೇ ಭಿನ್ನ ಭಿನ್ನ ಹಂತಗಳಲ್ಲಿದ್ದವರು ಬೇರೆ ಬೇರೆ ವರ್ಣದವರಾಗುತ್ತಿದ್ದರು. ಶಿಕ್ಷಣವನ್ನು ಪೂರ್ಣಗೊಳಿಸಲಾಗದವರು ಸೇವಾ ಮಾರ್ಗದವರಾಗಿ ಶಿಕ್ಷಣ ಪಡೆದವರ ಕೆಳಗೆ ಕೆಲಸ ಮಾಡುತ್ತಿದ್ದರು. ಬ್ರಾಹ್ಮಣ-ವೈಶ್ಯಾದಿ ಪದಗಳ ಬಳಕೆಯಿಂದ ಕಿರಿಕಿರಿ ಎನ್ನಿಸಬಹುದು. ಆದರೆ ಜಗತ್ತು ನಡೆಯುತ್ತಿರೋದು ಹೀಗೆಯೇ. ಕಷ್ಟಪಟ್ಟು ಬಿಕಾಂ ಮಾಡಿ ಬ್ಯಾಂಕ್ ಪರೀಕ್ಷೆ ಮುಗಿಸಿದವ ಮ್ಯಾನೇಜರ್ ಆದರೆ ಶಾಲೆಯನ್ನು ಅರ್ಧಕ್ಕೇ ಬಿಟ್ಟವ ಅದೇ ಬ್ಯಾಂಕಿನಲ್ಲಿ ಬಾಗಿಲು ಕಾಯುತ್ತ ನಿಂತುಬಿಡುತ್ತಾನೆ. ಮ್ಯಾನೇಜರ್ನ ಮಗನಿಗೆ ಅಧ್ಯಯನಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಕಾವಲುಗಾರನ ಮಗ ಸವಾಲುಗಳನ್ನೆದುರಿಸಿ ತನ್ನ ಸಾಮಥ್ರ್ಯವನ್ನು ಸಾಬೀತು ಮಾಡಬೇಕು. ಕಾಲ ಬದಲಾಗಿಲ್ಲ ಆದರ ನೋಡುವ, ಅರಿಯುವ ದೃಷ್ಟಿಕೋನ ಬದಲಾಗಿದೆ ಅಷ್ಟೇ. ಬಿಡಿ. ಅದನ್ನೇ ಹೆಚ್ಚು ಹೆಚ್ಚು ಚಚರ್ಿಸಿದರೆ ಸುಳ್ಳು ಇತಿಹಾಸಕಾರರು ತೋಡಿದ ಖೆಡ್ಡಾದೊಳಕ್ಕೇ ನಾವೂ ಬಿದ್ದು ವಿಲವಿಲ ವದ್ದಾಡಬೇಕಾದೀತು!

ಮನುಸ್ಮೃತಿಯಂತೆ ಪಾಣಿನಿಯ ಅಷ್ಟಾಧ್ಯಾಯಿಯೂ ಅಂದಿನ ಶಿಕ್ಷಣ ಪದ್ಧತಿಯನ್ನು ಅರಿಯುವಲ್ಲಿ ಮಹತ್ವದ ಕೃತಿಯೇ ಪ್ರೊ. ಮಾವೇಳಿಕರ ಅಚ್ಯುತನ್ರವರ Educational practices in Manu, Panini and Kautilya ಈ ನಿಟ್ಟಿನಲ್ಲಿ ಗಮನಿಸಲೇಬೇಕಾದ ಕೃತಿ. ಪಾಣಿನಿ ತಕ್ಷಶಿಲೆಯಲ್ಲಿ ಓದಿದವನೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಅದಕ್ಕೆ ತನ್ನ ಸೂತ್ರವೊಂದರಲ್ಲಿ ಆತ ತಕ್ಷಶಿಲೆಯ ಹೆಸರನ್ನು ಉಲ್ಲೇಖಿಸುವುದೇ ಸಾಕ್ಷಿ ಎನ್ನುತ್ತಾರೆ. ಅದು ಪಟ್ಟಣದ ಹೆಸರೂ ಆಗಿರುವುದರಿಂದ ಅದಕ್ಕೂ ಮುನ್ನವೇ ಆತ ಇದ್ದಿರಲೂಬಹುದು. ಅದು ಈ ಹೊತ್ತಿನ ಚಚರ್ೆಯಲ್ಲ ಬಿಡಿ. ಪಾಣಿನಿ ತನ್ನ ಅಧ್ಯಯನದ ವೇಳೆಗೆ ಇದ್ದ ಸಾಹಿತ್ಯವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಿದ್ದಾನೆ. ಋಷಿಗಳು ಸಾಕ್ಷಾತ್ಕರಿಸಿಕೊಂಡ ಸಾರ್ವಕಾಲಿಕ ಸತ್ಯಗಳನ್ನು ‘ದೃಷ್ಟಾ’ ಎಂದು, ಈ ಸತ್ಯಗಳನ್ನು ಇತರರು ಪುನರುಚ್ಚರಿಸಿದಾಗ ನಿಮರ್ಿತ ಸಾಹಿತ್ಯಗಳನ್ನು ‘ಪ್ರೋಕ್ತಾ’ ಎಂದೂ, ಹೀಗೆ ಪುನರುಚ್ಚರಿತ ಸಾಹಿತ್ಯಗಳನ್ನು ಅಧ್ಯಯನ ಮಾಡುವಾಗ ಅರಿತ ಸತ್ಯಗಳ ಸಾಹಿತ್ಯ ರಾಶಿಯನ್ನು ‘ಉಪಜ್ಞಾತ’ ಎಂದೂ ಕೊನೆಗೆ ಇತರೆ ಸಾಮಾನ್ಯ ಲೇಖಕರ ಎಲ್ಲಾ ಸಾಹಿತ್ಯಗಳನ್ನು ‘ಕೃತ’ ಎಂದೂ ಕರೆದಿದ್ದಾನೆ.

ಅಷ್ಟಾಧ್ಯಾಯಿಯನ್ನು ತಿರುವಿ ಹಾಕುತ್ತಾ ಹೋದಂತೆ ಪಾಣಿನಿಯ ಅಧ್ಯಯನದ ವಿಸ್ತಾರ ಬೆರಗುಗೊಳಿಸಿಬಿಡುತ್ತದೆ. ಅಷ್ಟನ್ನೂ ಅಂದಿನ ದಿನಮಾನಗಳಲ್ಲಿ ವಿದ್ಯಾಥರ್ಿಗಳಿಗೆ ಕಲಿಸಲಾಗುತ್ತಿತ್ತೆಂಬುದು ಮತ್ತೂ ಅಚ್ಚರಿಯ ವಿಷಯ. ‘ತೀರ್ಥಕಾಕ’ರಿದ್ದಂತೆ ಗುರುವಿನ ಛತ್ರಛಾಯೆಯಲ್ಲಿದ್ದು ಸಕಲ ವಿದ್ಯಾಪಾರಂಗತರಾಗುವ ಹಂಬಲದ ಛಾತ್ರರೂ ಇರುತ್ತಿದ್ದರು. ಇವರು ಹಗಲು ರಾತ್ರಿ ಅಧ್ಯಯನಶೀಲರಾಗಿದ್ದು ದೀಪಕ್ಕೆ ಎಣ್ಣೆಯ ಕೊರತೆಯಾದಾಗ ಸೆಗಣಿಯ ಬೆರಣಿ ಒಣಗಿಸಿ ಅದಕ್ಕೆ ಹಚ್ಚಿದ ಬೆಂಕಿಯ ಬೆಳಕಿನಲ್ಲಿ ಅಭ್ಯಾಸ ಮಾಡುತ್ತಿದ್ದರಂತೆ. ಹಾಗೆಂದು ಪತಂಜಲಿಯ ಕೃತಿ ಅಂದಿನ ವಿದ್ಯಾಥರ್ಿಗಳ ಅಧ್ಯಯನ ಕೌಶಲವನ್ನು ಬಣ್ಣಿಸುತ್ತದೆ.

ಗುರುವಿನ ಕುರಿತಂತೆಯೂ ಅಂದಿನ ದಿನಗಳ ನೀತಿ ನಿಯಮಗಳು ಬಲು ಸ್ಪಷ್ಟ. ವೇದವನ್ನು ಹೇಳಿಕೊಡುವುದನ್ನು ಜೀವನೋಪಾಯದ ಅಂಗವಾಗಿ ಸ್ವೀಕರಿಸಿದವ ಉಪಾಧ್ಯಾಯನೆನಿಸಿಕೊಳ್ಳುತ್ತಿದ್ದ. ಸಂಸ್ಕಾರ ಕರ್ಮಗಳನ್ನು ವಿಧಿಪೂರ್ವಕವಾಗಿ ಮಾಡಿಸುತ್ತ ಶಿಷ್ಯನಿಗೆ ಅನ್ನವಿತ್ತು ಸಲಹಿದವ ಗುರುವಾದರೆ, ಶಿಷ್ಯನಿಗೆ ಉಪನಯನ ಮಾಡಿ ವೇದ-ವೇದಾಂಗಗಳ ಅಂತರಾರ್ಥವನ್ನೂ ಬಿಚ್ಚಿಡುತ್ತಿದ್ದವನನ್ನು ಆಚಾರ್ಯನೆನ್ನಲಾಗುತ್ತಿತ್ತು. ಉಪಾಧ್ಯಾಯನಿಗಿಂತ, ಗುರು ಮತ್ತು ಗುರುವಿಗಿಂತ ಆಚಾರ್ಯರು ಶ್ರೇಷ್ಠರೆಂದು ಭಾವಿಸಲಾಗುತ್ತಿತ್ತು. ಪಾಣಿನಿ, ಪತಂಜಲಿ, ಚಾಣಕ್ಯರನ್ನೆಲ್ಲ ಆಚಾರ್ಯರೆಂದು ಗೌರವಿಸುವುದು ಅದಕ್ಕೇ.

ಆಪಸ್ತಂಭನ ಪ್ರಕಾರ ಗುರುವಾಗುವುದೂ ಸುಲಭವಾಗಿರಲಿಲ್ಲ. ವೇದಾಧ್ಯಯನ ಪರಂಪರಾಗತವಾಗಿ ಬಂದಿದ್ದು ಮನೆಯಲ್ಲಿ ನಿತ್ಯಾಧ್ಯಯನ ನಡೆಸುವಂತಹ ಕುಟುಂಬಕ್ಕೆ ಸೇರಿದವನೇ ಗುರುವಾಗಬೇಕಿತ್ತು. ನಿಯಮಗಳಿಂದ ಪಕ್ಕಕ್ಕೆ ಸರಿದವ ಗುರುವಾಗಿ ಮುಂದುವರೆಯಲು ಯೋಗ್ಯತೆ ಹೊಂದಿರುತ್ತಿರಲಿಲ್ಲ. ಶಿಷ್ಯನ ಅಭ್ಯುದಯದ ವಿಷಯದಲ್ಲಿ ಬೇಜವಾಬ್ದಾರಿತನ ತೋರಿದರೆ ಅದನ್ನು ಮೊದಲು ಗುರುವಿನ ಗಮನಕ್ಕೆ ತರುವ ಶಿಷ್ಯ ಆತ ತಿದ್ದುಕೊಳ್ಳಲಿಲ್ಲವಾದರೆ ಅವನನ್ನು ತೊರೆಯುವ ಸ್ವಾತಂತ್ರ್ಯವನ್ನು ಹೊಂದಿದ್ದ. ಶಿಷ್ಯ ಗುರುಗಳ ಸೇವೆ ಮಾಡುತ್ತ ಅವರನ್ನು ಒಲಿಸಬೇಕಾದ್ದು ನಿಜವೇ ಆದರೂ ಗುರುವಾದವನು ಶಿಷ್ಯನನ್ನು ಈ ಹಿನ್ನೆಲೆಯಲ್ಲಿ ಶೋಷಿಸುವಂತಿರಲಿಲ್ಲ. ವಿದ್ವತ್ ಸಭೆಗಳಲ್ಲಿ ಈ ಕುರಿತಂತೆ ಚಚರ್ೆಯಾಗುತ್ತಿತ್ತು. ನಿಯಮದ ಚೌಕಟ್ಟು ಮುರಿದ ಗುರುವಿಗೆ ರಾಜ ಶಿಕ್ಷೆ ವಿಧಿಸಬಹುದಿತ್ತು!

ವಿದ್ಯಾಥರ್ಿಗಳ ಮೇಲೆ ಮನಸೋ ಇಚ್ಛೆ ಪ್ರಹಾರ ಮಾಡುವ ಅಧಿಕಾರ ಗುರುವಿಗಿರಲಿಲ್ಲ. ಆಪಸ್ತಂಭನ ಪ್ರಕಾರ ಹೆದರಿಸುವುದು, ಉಪವಾಸ ಕೆಡವೋದು, ತಣ್ಣೀರಿನ ಸ್ನಾನ, ತನ್ನೆದುರಿಗೆ ಬರದಿರುವಂತೆ ಆದೇಶಿಸುವುದು ಇವೆಲ್ಲವನ್ನೂ ಉಪಯೋಗಿಸಬಹುದು. ಇನ್ನು ಸಾಧ್ಯವೇ ಇಲ್ಲವೆಂದಾಗ ಹಗ್ಗ ಅಥವಾ ಸೀಳಿದ ಬಿದಿರು ಕೋಲಿನಿಂದ ಹಿಂಬದಿಗೆ ಮಾತ್ರ ಹೊಡೆಯಬಹುದೆಂದು ಮನು ಆದೇಶಿಸುತ್ತಾನೆ.

ಇನ್ನು ಸಂಬಳದ ವಿಚಾರಕ್ಕೆ ಬಂದರೆ ವಿದ್ಯಾಥರ್ಿ ಶಿಕ್ಷಣ ಮುಗಿಸಿ ಹೊರಡುವಾಗ ‘ಗುರುದಕ್ಷಿಣೆ’ ಕೊಟ್ಟು ತೆರಳುತ್ತಿದ್ದ. ಉಪಾಧ್ಯಾಯರಾದವರು ಹೊಟ್ಟೆಪಾಡಿಗೆ ಶಿಕ್ಷಣ ನೀಡುತ್ತಿದ್ದರಿಂದ ಅವರು ಅದನ್ನು ಸ್ವೀಕರಿಸುತ್ತಿದ್ದರು. ಆಚಾರ್ಯರಾದವರು ತಾವು ಕೊಟ್ಟ ವಿದ್ಯೆಗೆ ಪ್ರತಿಯಾಗಿ ಏನನ್ನೂ ಸ್ವೀಕರಿಸುತ್ತಿರಲಿಲ್ಲ. ತಮ್ಮ ಬಳಿ ಉಪನಯನ ಮಾಡಿಸಿಕೊಂಡ ಮಾತ್ರದಿಂದಲೇ ಶಿಷ್ಯ ಅವರಿಗೆ ಪುತ್ರನಾಗಿಬಿಡುತ್ತಿದ್ದ. ಅವನಿಗೆ ತಮ್ಮಲ್ಲಿನ ವಿದ್ಯೆ ಧಾರೆ ಎರೆವುದೇ ಅವರಿಗೆ ಆನಂದದಾಯಕ ಸಂಗತಿಯಾಗಿತ್ತು. ಅಧ್ಯಯನಕ್ಕೆ ನಿಗದಿತ ಶುಲ್ಕ ನಿಗದಿಪಡಿಸುವುದಂತೂ ಅಕ್ಷಮ್ಯ ಅಪರಾಧವೇ ಆಗಿತ್ತು.

ಅಂದಿನ ಶಿಕ್ಷಣ ಪದ್ಧತಿಯ ಸೌಂದರ್ಯವೇ ಇದು. ಶಿಕ್ಷಣ ಮಾರಾಟದ ಸರಕಾಗಿರಲಿಲ್ಲ. ಶಿಕ್ಷಕರು ಸಂಬಳಕ್ಕೆ ದುಡಿಯುವವರಾಗಿರಲಿಲ್ಲ. ಹಣಗಳಿಸಿ ಶ್ರೀಮಂತಿಕೆಯ ಕನಸು ಕಾಣುತ್ತಿದ್ದವ ಈ ವೃತ್ತಿಗೆ ಕಾಲಿಡುತ್ತಲೇ ಇರಲಿಲ್ಲ. ಅವನು ಸೇನೆಗೆ ಸೇರುತ್ತಿದ್ದ, ವ್ಯಾಪಾರಿಯಾಗುತ್ತಿದ್ದ ಅಥವಾ ಇತರೆ ನೌಕರಿ ಮಾಡಿಕೊಂಡು ಹಾಯಾಗಿರುತ್ತಿದ್ದ. ಸರಳವಾಗಿ ಹೇಳಬೇಕೆಂದರೆ ಐಷಾರಾಮಿ ಬದುಕು ಬಯಸುವವ ಇಚ್ಛೆಯಿಂದಲೇ ಬ್ರಾಹ್ಮಣ ವರ್ಣದಿಂದ ದೂರವಾಗಿ ಅನ್ಯ ವರ್ನಗಳನ್ನು ಆಶ್ರಯಿಸುತ್ತಿದ್ದ. ಏಕೆಂದರೆ ಸಕಲ ವಿದ್ಯೆಯ ಮೇಲೂ ಆಧಿಪತ್ಯ ಸ್ಥಾಪಿಸಿ ಅದನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವ ಕಾರಣಕ್ಕಾಗಿಯೇ ಇಷ್ಟ ಪಟ್ಟು ಬಡವನಾಗಿರುತ್ತಿದ್ದವ ಬ್ರಾಹ್ಮಣ ಮಾತ್ರ!

ಬಹುಶಃ ಪ್ರತೀ ಕಥೆಯಲ್ಲೂ ‘ಬಡ ಬ್ರಾಹ್ಮಣನೊಬ್ಬನಿದ್ದ’ ಎಂಬ ವಾಕ್ಯ ಇದ್ದಿದ್ದೇಕೆಂದು ಈಗ ಅರ್ಥವಾಗಿರಬೇಕು!

2 thoughts on “ಒಂದೂರಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s