ಮತ್ತೆ ಮತ್ತೆ ಅವತರಿಸುತ್ತಾನೆ ಚಾಣಕ್ಯ!

ಮತ್ತೆ ಮತ್ತೆ ಅವತರಿಸುತ್ತಾನೆ ಚಾಣಕ್ಯ!

ಆಯರ್ಾವರ್ತವನ್ನು ಏಕವಾಗಿಸುವ, ಅಖಂಡ ಭಾರತವನ್ನು ನಿಮರ್ಿಸುವ ಆಚಾರ್ಯ ಚಾಣಕ್ಯರ ಕಲ್ಪನೆ ಒಂದು ಹಂತಕ್ಕೆ ಪೂರ್ಣವಾಗಿತ್ತು. ಚಂದ್ರಗುಪ್ತನನ್ನು ಪಟ್ಟಾಭಿಷಿಕ್ತನಾಗಿಸಿ ಸುತ್ತಲಿನ ರಾಜ್ಯಗಳೆಲ್ಲವನ್ನೂ ಅವನಧೀನಕ್ಕೆ ತಂದು ಪೂರ್ಣ ಭಾರತದ ಕನಸನ್ನು ನನಸುಗೊಳಿಸಿಕೊಳ್ಳುವ ಮುಂದಿನ ಹಂತದ ಪ್ರಯತ್ನವಾಗಬೇಕಿತ್ತು. ಅಷ್ಟೇ ಅಲ್ಲ. ಸಮರ್ಥ ಮಂತ್ರಿಯೊಬ್ಬನನ್ನು ನೇಮಿಸಿ ಚಂದ್ರಗುಪ್ತನ ಆಳ್ವಿಕೆಗೆ ಬಲವಾಗಬೇಕೆಂಬ ಬಯಕೆಯೂ ಅವನಿಗಿತ್ತು. ಮತ್ತು ನಿಷ್ಠೆಯಲ್ಲಿ, ಬೌದ್ಧಿಕ ಸಾಮಥ್ರ್ಯದಲ್ಲಿ ರಾಕ್ಷಸನಿಗಿಂತಲೂ ಸಮರ್ಥ ಅಮಾತ್ಯ ಮತ್ತೊಬ್ಬನಿರಲಾರ ಎಂಬುದರ ಅರಿವಿದ್ದುದರಿಂದ ಆತನನ್ನೇ ಆ ಪಟ್ಟಕ್ಕೆ ಕೂರಿಸಬೇಕೆಂಬ ನಿಶ್ಚಯ ಮಾಡಿಯಾಗಿತ್ತು! ಇದನ್ನೇ ಚಾಣಕ್ಯನ ನಡೆ ಅನ್ನೋದು. ಅವನಿಗೆ ಶತ್ರು-ಮಿತ್ರರೆಲ್ಲ ಒಂದೇ. ರಾಷ್ಟ್ರದ ಒಳಿತಿಗೆ ಯಾರನ್ನು ಬೇಕಿದ್ದರೂ ಜೊತೆಗೆಳೆದುಕೊಳ್ಳಬಲ್ಲ.

5ja3hynde6_pcyxpqbj4smsxreqtjmw6-large

ಟಕರ್ಿಯಲ್ಲಿ ಇತ್ತೀಚೆಗೆ ಕ್ಷಿಪ್ರ ಕ್ರಾಂತಿಯ ಪ್ರಯತ್ನವಾಗಿದ್ದನ್ನು ಗಮನಿಸಿದ್ದೀರಾ? ಭಯೋತ್ಪಾದಕರ ಅಟ್ಟಹಾಸದ ನಡುವೆ ಜಗತ್ತಿನ ಗಮನ ಸೆಳೆದ ಸುದ್ದಿ ಅದು. ಅಧ್ಯಕ್ಷ ತಾಯಿಪ್ ಎಡರ್ೋಗನ್ ತೀವ್ರವಾದಿಯಾಗಿ ಬದಲಾಗುತ್ತಿರುವುದನ್ನು ಮತ್ತು ಸವರ್ಾಧಿಕಾರಿ ಧೋರಣೆ ತಾಳುತ್ತಿರುವುದನ್ನು ವಿರೋಧಿಸಿ ಅಮೇರಿಕದಲ್ಲಿ ಕುಳಿತ ಗುಲೆನ್ ರೂಪಿಸಿದ ಕ್ರಾಂತಿ ಅದು. ಈಗ ಹೊರ ಬರುತ್ತಿರುವ ವರದಿಯನ್ನು ನಂಬುವುದಾದರೆ ಇದು ಕೆಳ ಹಂತದ ಸೈನಿಕರು ಮಾಡಿದ ಕ್ರಾಂತಿಯಲ್ಲ. ನಿವೃತ್ತ ಏರ್ ಫೋಸರ್್ ಕಮ್ಯಾಂಡರ್ ಟಕರ್ಿಯ ಸವರ್ೋಚ್ಚ ಮಿಲಿಟರಿ ಕೌನ್ಸಿಲ್ನ ಸದಸ್ಯನೊಬ್ಬನ ಯೋಜನೆ. ಕರಾವಳಿಯ ರೆಸಾಟರ್್ ಒಂದರಲ್ಲಿ ವಿಶ್ರಾಂತಿಗೆ ತೆರಳಿರುವ ಅಧ್ಯಕ್ಷರ ಕುರಿತಂತೆ ಮಾಹಿತಿ ಪಡೆದ ಸೈನಿಕರು ಹೆಲಿಕಾಪ್ಟರಿನ ಮೂಲಕ ಅಲ್ಲಿಗೆ ತಲುಪಿ ಹಗ್ಗ ಹಿಡಿದು ಹೋಟೆಲ್ ಮಾಮರ್ಾರಿಸ್ನ ಮೇಲೆ ಧುಮುಕಿದರು. ಅದಾಗಲೇ ಅಧ್ಯಕ್ಷರು ಹೊಟೇಲು ಖಾಲಿ ಮಾಡಿ ಇಪ್ಪತ್ತು ನಿಮಿಷ ಆಗಿತ್ತು. ಸುದ್ದಿ ಪಡೆದ ಸೈನಿಕರು ಎಫ್-16 ವಿಮಾನಗಳ ಮೂಲಕ ಅಧ್ಯಕ್ಷರ ವಿಮಾನವನ್ನು ಅಟ್ಟಿಸಿಕೊಂಡು ಹೋಗಿ ಧ್ವಂಸ ಮಾಡುವ ಪ್ರಯತ್ನ ವಿಫಲವಾಯ್ತು. ಅಷ್ಟರಲ್ಲಿ ರಾಜಧಾನಿ ಅಂಕಾರದ ಸಕರ್ಾರಿ ಟಿವಿ ಸಂಸ್ಥೆಯನ್ನೂ ವಶಪಡಿಸಿಕೊಂಡ ಸೈನಿಕರು ಟಕರ್ಿ ಕ್ರಾಂತಿಯ ಮಾಹಿತಿ ಹರಡಿಸಲಾರಂಭಿಸಿದರು. ಸಭೆ ಸೇರಿದ್ದ ಒಂಭತ್ತು ಮಂತ್ರಿಗಳು ಇನ್ನು ಹೋರಾಡುತ್ತ ಸಾಯುವುದೊಂದೇ ಅಂತಿಮ ದಾರಿ ಎಂದು ತಂತಮ್ಮ ಪಿಸ್ತೂಲುಗಳನ್ನು ಸರಿ ಮಾಡಿಕೊಂಡರು.

ಕೆಳ ಹಂತದಲ್ಲಿ ಹಾರಾಡುತ್ತ ಬಾಂಬುಗಳನ್ನೆಸೆಯುತ್ತಿದ್ದ ಕ್ರಾಂತಿ ಪಡೆಯ ವಿಮಾನಗಳು ಭಯಾನಕ ವಾತಾವರಣ ಸೃಷ್ಟಿಸಿಬಿಟ್ಟಿದ್ದವು. ಒಂದು ಹಂತದಲ್ಲಂತೂ ಟಕರ್ಿ ಕೈತಪ್ಪಿತೆಂದೇ ಎಲ್ಲರೂ ಭಾವಿಸಿಬಿಟ್ಟಿದ್ದರು. ಮಾರನೇ ದಿನದ ವೇಳೆಗೆ ಮಸೀದಿಗಳ ಮೈಕುಗಳಿಂದ ಅಧ್ಯಕ್ಷರ ಪರವಾಗಿ ಬೀದಿಗೆ ಬರುವಂತೆ ಘೋಷಣೆಗಳು ಹೊಮ್ಮಲಾರಂಭಿಸಿದವು. ಅಧ್ಯಕ್ಷರ ಪರವಾಗಿದ್ದ ಸೇನೆ ತನ್ನೆಲ್ಲ ಚಟುವಟಿಕೆಗಳನ್ನು ತೀವ್ರಗೊಳಿಸಿ ಉನ್ಮತ್ತರಿಗೆ ಹಿಂದಿನಿಂದ ಸಹಕಾರ ಸಿಗದಂತೆ ನೋಡಿಕೊಂಡಿತು. ಒಂದೆಡೆ ಎದುರಿಗೆ ಹಿಂಡು ಹಿಂಡಾಗಿ ಬರುತ್ತಿರುವ ಜನ ಸಮೂಹ, ಮತ್ತೊಂದೆಡೆ ಕಾಣೆಯಾದ ನಾಯಕರು. ಬೇರೆ ಮಾರ್ಗವೇ ಇಲ್ಲದೇ ಸೈನಿಕರು ಶರಣಾಗತರಾಗಲೇಬೇಕಾಯ್ತು. ಮತ್ತೆ ಎಡರ್ೋಗನ್ನ ಸಾಮ್ರಾಜ್ಯ ಅಬಾಧಿತವಾಯ್ತು. ಸಿಕ್ಕು ಬಿದ್ದ ದಂಗೆಯ ಪ್ರಮುಖರು, ಸೈನಿಕರು, ನ್ಯಾಯಾಧೀಶರು ಮತ್ತಿತರರ ಸಂಖ್ಯೆ ಆರು ಸಾವಿರ ದಾಟಿದೆ. ಅವರೆಲ್ಲರನ್ನೂ ವೈರಸ್ಸಿನಂತೆ ನಾಶಗೊಳಿಸಬೇಕೆಂದು ಅಧ್ಯಕ್ಷರು ಹೇಳಿಯಾಗಿದೆ!
ಚಾಣಕ್ಯನ ಕಥೆ ನಡುವೆ ಟಕರ್ಿ ಎಲ್ಲಿಂದ ಹೊಕ್ಕಿತೆಂದು ಹುಬ್ಬೇರಿಸಬೇಡಿ. ಈ ಕ್ಷಿಪ್ರ ಕ್ರಾಂತಿಗೂ ಮಗಧದ ಕ್ರಾಂತಿಗೂ ಶೈಲಿಯಲ್ಲಿ ವ್ಯತ್ಯಾಸವಿಲ್ಲ. ಉದ್ದೇಶ, ಹಿನ್ನೆಲೆ, ಮಾರ್ಗ ಇವುಗಳು ಬೇರೆಯಾಗಿರಬಹುದಷ್ಟೇ. ನಂದರ ಆಳ್ವಿಕೆಯ ಕ್ರೌರ್ಯವನ್ನು ಜನರು ಸಹಿಸಿಕೊಂಡಿರುವಾಗ ಚಂದ್ರಗುಪ್ತ ಭರವಸೆಯ ಆಶಾಕಿರಣವಾಗಿ ನಿಂತ. ಆತ ತಾನು ಹಿಂದೆ ನಿಂತು ಸೈನಿಕರಿಗೆ ಕ್ರಾಂತಿ ಮಾಡಿರೆನ್ನಲಿಲ್ಲ. ತನ್ನ ಪಡೆಯನ್ನು ತಾನೇ ರೂಪಿಸಿಕೊಂಡ. ಇವೆಲ್ಲದರ ಯೋಜನೆಯ ಮುಖ್ಯ ರೂವಾರಿಗಳಾದ ಚಾಣಕ್ಯರು ಮತ್ತೊಂದು ರಾಷ್ಟ್ರದಲ್ಲಿ ಕುಳಿತು ತಮ್ಮವರನ್ನು ದಾಳಕ್ಕೆಸೆಯಲಿಲ್ಲ. ತನ್ನ ನಂಬಿಕಸ್ಥರನ್ನು ತಿಂಗಳುಗಟ್ಟಲೆ ನಂದರ ಸುತ್ತಲೇ ತಿರುಗಾಡುವಂತೆ ಮಾಡಿ ಕಾಲಕಾಲಕ್ಕೆ ಜನರ ಮನಸ್ಸಿನಲ್ಲಿ ಚಂದ್ರಗುಪ್ತನ ಕುರಿತಂತೆ ಕನಸು ಬಿತ್ತುವಂತೆ ಮಾಡಿದರು. ನಂದರ ಸುತ್ತಲೂ ಇದ್ದ ಶತ್ರು ರಾಷ್ಟ್ರದ ಬೆಂಬಲ ಪಡೆದುಕೊಂಡರು. ಅಷ್ಟಕ್ಕೂ ತೃಪ್ತಿಯಾಗದೇ ಅಮಾಯಕರು ಸಾಯುವುದನ್ನು ತಡೆಯಬೇಕೆಂಬ ಸಚ್ಚಿಂತನೆಯಿಂದಾಗಿ ನೇರ ಯುದ್ಧದೊಂದಿಗೆ ಛದ್ಮಯುದ್ಧದ ಯೋಜನೆಯನ್ನೂ ರೂಪಿಸಿದರು. ಅದರ ಪ್ರಕಾರವೇ ಕಾಶಿರಾಜನ ಸೈನಿಕರ ವೇಷದಲ್ಲಿ ತಮ್ಮ ಸೈನಿಕರನ್ನೇ ನದಿಯ ಆ ಬದಿಯಲ್ಲಿ ನಿಲ್ಲಿಸಿದ್ದು; ಯಾಗಶಾಲೆಗೆ ನಂದರು ತಾವೇ ತಾವಾಗಿ ಬರುವಂತೆ ರೂಪಿಸಿಕೊಂಡಿದ್ದು, ಸಮರ್ಥ ಸೇನಾಪತಿ ರಾಕ್ಷಸ ಮೈಮರೆಯುವಂತೆ ಮಾಡಿದ್ದು. ಎಲ್ಲ ಪ್ರಯತ್ನದ ಅಂತಿಮ ಫಲಿತಾಂಶದ ಹೊತ್ತು ಈಗ ಬಂದಿತ್ತು.

11
ಟಕರ್ಿಯ ಕ್ರಾಂತಿಗೂ, ಚಾಣಕ್ಯನ ಆಯರ್ಾವರ್ತ ಸ್ಥಾಪನೆಯ ಕನಸಿನ ಇತಿಹಾಸಕ್ಕೂ ಬಹುವಾದ ಸಾಮ್ಯವಿದೆ ಎಂದದ್ದು ಅದಕ್ಕೇ. ಚಾಣಕ್ಯ ಜನ ಮಾನಸವನ್ನು ಗೆದ್ದು ರಕ್ತ ರಹಿತ ಯುದ್ಧವಾಗಿಸುವ ಪ್ರಯತ್ನದಲ್ಲಿ ತೊಡಗಿದ್ದ. ಟಕರ್ಿಯ ದಂಗೆಕೋರರು ಮೊದಲ ದಿನವೇ ಅಮಾಯಕರ ಹತ್ಯೆ ಮಾಡಿ ಜನರ ಕೋಪಕ್ಕೆ ಗುರಿಯಾಗಿಬಿಟ್ಟಿದ್ದರು. ಅಮೇರಿಕದಲ್ಲಿ ಕೂತ ಇವರ ನಾಯಕ ತನಗೂ ದಂಗೆಗೂ ಸಂಬಂಧವೇ ಇಲ್ಲವೆಂದು ಕೈ ತೊಳೆದುಕೊಂಡುಬಿಟ್ಟ.
ನಂದರು ಈಗ ಯಜ್ಞಶಾಲೆಯ ಬಳಿಗೆ ಬಂದಿದ್ದರು. ಅಂಗರಕ್ಷಕರನ್ನೊಯ್ದರೆ ಅಲ್ಲಿನವರು ಕೆಂಡವಾಗುತ್ತಾರೆಂದು ಅರಿತು ಅವರನ್ನೆಲ್ಲಾ ಅರಮನೆಯಲ್ಲಿಯೇ ಬಿಟ್ಟು ಠೀವಿಯಿಂದ ಬಂದರು. ಅವರು ಯಜ್ಞಕುಂಡದ ಬಳಿಗೆ ಬರುವಷ್ಟರಲ್ಲಿ ಕಾಶೀರಾಜನ ಸೈನಿಕರ ವೇಶದಲ್ಲಿದ್ದ ಒಂದಷ್ಟು ಜನ ಪರ್ವತರಾಯನ ಮಗನ ಬಂಧನವಾದ ಸುದ್ದಿಯನ್ನು ತಂದೊಪ್ಪಿಸಿದರು. ನಂದರ ಮುಖ ಅರಳಿತು. ಪಲ್ಲಕ್ಕಿಯಲ್ಲಿದ್ದ ಅವನನ್ನು ನೋಡಲೆಂದು ಧಾವಿಸಿದರು ಅಷ್ಟೇ. ಶಸ್ತ್ರ ಸಜ್ಜಿತರಾಗಿದ್ದ ಚಂದ್ರಗುಪ್ತನ ಸೇನಾಪಡೆ ನಂದರನ್ನು ಸುತ್ತುವರೆದು ನಿಂತುಬಿಟ್ಟಿತು. ನಂದರು ಪರಿಸ್ಥಿತಿಯನ್ನು ಅಥರ್ೈಸಿಕೊಂಡು ಸಿದ್ಧರಾಗುವ ವೇಳೆಗೆ ಚಾಣಕ್ಯ-ಚಂದ್ರಗುಪ್ತರು ಅಲ್ಲಿಗೆ ಆಗಮಿಸಿದರು. ಸೈನಿಕ ತುಕಡಿಯೊಂದು ನಂದರ ಪರವಾಗಿ ಕಾದಾಡಲು ಧಾವಿಸಿಬಂತು. ಚಂದ್ರಗುಪ್ತ ತಾನೇ ಅಡ್ಡಗಟ್ಟಿನಿಂತ. ಈ ಕಾಳಗದಲ್ಲಿ ನಂದರು ಹತರಾಗಿ ಯಾಗ ಶಾಲೆಯಲ್ಲಿ ಅಗ್ನಿಯ ತಾಂಡವ ನೃತ್ಯ ನಡೆಯತೊಡಗಿತು. ಬೆಂಕಿಯ ಕೆನ್ನಾಲಗೆಗಳನ್ನು ನೋಡಿದೊಡನೆ ನದಿಯ ಆ ಬದಿಯಲ್ಲಿ ಕಾಯುತ್ತ ನಿಂತಿದ್ದ ಸೇನೆ ಪುರಪ್ರವೇಶ ಮಾಡಿತು. ಜನರ ನಡುವೆಯೇ ವೇಷಧಾರಿಗಳಾಗಿ ಓಡಾಡಿಕೊಂಡಿದ್ದ ಸೈನಿಕರು ಅರಮನೆ, ಖಜಾನೆ, ಶಸ್ತ್ರಗಾರಗಳನ್ನೆಲ್ಲ ಪೂರ್ವ ನಿರ್ಧರಿತವಾಗಿದ್ದಂತೆ ಸುತ್ತುವರೆದು ನಿಂತರು. ಸೇವಕನಿಂದ ಇಷ್ಟೂ ವಿಷಯವನ್ನು ತಿಳಿದ ರಾಕ್ಷಸ ಶತ್ರುಗಳ ಕೈಗೆ ಸಿಕ್ಕದೇ ಗುಪ್ತ ಮಾರ್ಗದಿಂದ ಪರಾರಿಯಾಗಿಬಿಟ್ಟ!
ಆಯರ್ಾವರ್ತವನ್ನು ಏಕವಾಗಿಸುವ, ಅಖಂಡ ಭಾರತವನ್ನು ನಿಮರ್ಿಸುವ ಆಚಾರ್ಯ ಚಾಣಕ್ಯರ ಕಲ್ಪನೆ ಒಂದು ಹಂತಕ್ಕೆ ಪೂರ್ಣವಾಗಿತ್ತು. ಚಂದ್ರಗುಪ್ತನನ್ನು ಪಟ್ಟಾಭಿಷಿಕ್ತನಾಗಿಸಿ ಸುತ್ತಲಿನ ರಾಜ್ಯಗಳೆಲ್ಲವನ್ನೂ ಅವನಧೀನಕ್ಕೆ ತಂದು ಪೂರ್ಣ ಭಾರತದ ಕನಸನ್ನು ನನಸುಗೊಳಿಸಿಕೊಳ್ಳುವ ಮುಂದಿನ ಹಂತದ ಪ್ರಯತ್ನವಾಗಬೇಕಿತ್ತು. ಅಷ್ಟೇ ಅಲ್ಲ. ಸಮರ್ಥ ಮಂತ್ರಿಯೊಬ್ಬನನ್ನು ನೇಮಿಸಿ ಚಂದ್ರಗುಪ್ತನ ಆಳ್ವಿಕೆಗೆ ಬಲವಾಗಬೇಕೆಂಬ ಬಯಕೆಯೂ ಅವನಿಗಿತ್ತು. ಮತ್ತು ನಿಷ್ಠೆಯಲ್ಲಿ, ಬೌದ್ಧಿಕ ಸಾಮಥ್ರ್ಯದಲ್ಲಿ ರಾಕ್ಷಸನಿಗಿಂತಲೂ ಸಮರ್ಥ ಅಮಾತ್ಯ ಮತ್ತೊಬ್ಬನಿರಲಾರ ಎಂಬುದರ ಅರಿವಿದ್ದುದರಿಂದ ಆತನನ್ನೇ ಆ ಪಟ್ಟಕ್ಕೆ ಕೂರಿಸಬೇಕೆಂಬ ನಿಶ್ಚಯ ಮಾಡಿಯಾಗಿತ್ತು! ಇದನ್ನೇ ಚಾಣಕ್ಯನ ನಡೆ ಅನ್ನೋದು. ಅವನಿಗೆ ಶತ್ರು-ಮಿತ್ರರೆಲ್ಲ ಒಂದೇ. ರಾಷ್ಟ್ರದ ಒಳಿತಿಗೆ ಯಾರನ್ನು ಬೇಕಿದ್ದರೂ ಜೊತೆಗೆಳೆದುಕೊಳ್ಳಬಲ್ಲ.
ಹಾಗಂತ ರಾಕ್ಷಸ ಸುಮ್ಮನಿರುವ ಜೀವವಲ್ಲ. ತನ್ನ ಒಡೆಯರ ಹತ್ಯೆ ಮಾಡಿದ ಚಂದ್ರಗುಪ್ತನನ್ನು ಹೇಗಾದರೂ ಸರಿ, ಕೊಲ್ಲಬೇಕೆಂದು ಆತ ನಿಶ್ಚಯಿಸಿಯಾಗಿತ್ತು. ಅಡಗಿ ಕುಳಿತ ಸ್ಥಳದಿಂದಲೇ ಅವನ ಹತ್ಯೆಗೆ ವಿಷಕನ್ಯೆ ಕಳಿಸಿದ, ಸುರಂಗ ಮಾರ್ಗದ ಮೂಲಕ ಕೊಲ್ಲುವ ಯೋಜನೆ ರೂಪಿಸಿದ. ಕೊನೆಗೆ ಪಟ್ಟಾಭಿಷೇಕದ ದಿನ ಚಂದ್ರಗುಪ್ತ ಸಾಗುವ ಹಾದಿಯಲ್ಲಿ ಅವಘಡ ಸಂಭವಿಸಿ ಆತ ಸಾಯುವಂತೆಯೂ ವ್ಯವಸ್ಥೆ ಮಾಡಿದ. ಚಾಣಕ್ಯ ಇವನ್ನೆಲ್ಲ ಊಹಿಸಿದ್ದರಿಂದಲೇ ಮೈ ಮರೆಯದೇ ತನ್ನ ಶತ್ರುಗಳ ನಾಶಕ್ಕೆ ಅದನ್ನು ಬಳಸಿಕೊಂಡ. ವಿಷಕನ್ಯೆಯ ಸಂಗಕ್ಕೆಳಸಿದ ಪರ್ವತರಾಜ ಹತನಾದ. ಸುರಂಗಮಾರ್ಗ ರೂಪಿಸಿದವರನ್ನು ತನ್ನೆಡೆಗೆ ತಿರುಗಿಸಿಕೊಂಡು ರಾಕ್ಷಸನ ಚಲನವಲನ ಅರಿಯಲು ಬಳಸಿಕೊಂಡ. ಪಟ್ಟಾಭಿಷೇಕದ ದಿನ ಮುಂದೆ ಕಂಟಕವಾಗಬಹುದಾಗಿದ್ದವನನ್ನು ಆನೆಯ ಮೇಲೆ ಕುಳ್ಳಿರಿಸಿ ರಾಕ್ಷಸನ ಉಪಾಯಕ್ಕೆ ಆತ ಬಲಿಯಾಗುವಂತೆ ಮಾಡಿದ. ಒಟ್ಟಾರೆ ರಾಕ್ಷಸನ ಯೋಜನೆಗಳೇ ಅವನಿಗೆ ವಿರೋಧವಾಗಿ ಚಂದ್ರಗುಪ್ತನ ಪಟ್ಟ ಅಬಾಧಿತವಾಗುವಂತೆ ನೋಡಿಕೊಂಡ.
ರಾಕ್ಷಸನೊಳಗಿನ ಕೋಪ ನೂರ್ಮಡಿಯಾಯ್ತು. ಅವನನ್ನು ಎಳತಂದು ಕೂಡಿ ಹಾಕಿಕೊಳ್ಳುವ ಎಲ್ಲಾ ಸಾಮಥ್ರ್ಯವೂ ಚಾಣಕ್ಯ ಚಂದ್ರಗುಪ್ತರಿಗಿತ್ತು. ಚಾಣಕ್ಯ ಹಾಗೆ ಮಾಡಲಿಲ್ಲ. ಚಾಣಕ್ಯನ ರಣನೀತಿಯ ಮಹತ್ವ ಇಲ್ಲಿಯೇ ಇರೋದು. ಪರ್ವತರಾಜನ ಸಾವಿನಿಂದ ಕಂಗಾಲಾದ ಅವನ ಮಗ ಚಂದ್ರಗುಪ್ತನ ವಿರುದ್ಧ ಕತ್ತಿ ಮಸೆಯೋದು ಸಹಜ. ಅದನ್ನು ಊಹಿಸಿ ರಾಕ್ಷಸ ಅವನೊಂದಿಗೆ ಸೇರಿಕೊಳ್ಳುವನೆಂಬುದನ್ನು ಚಾಣಕ್ಯ ಸ್ಪಷ್ಟವಾಗಿ ಅಥರ್ೈಸಿಕೊಂಡಿದ್ದ. ಅಂದುಕೊಂಡಂತೆ ಆಯಿತು. ತನ್ನೆಲ್ಲ ರಾಜನೀತಿಯನ್ನೂ ದಾಳವಾಗಿ ಎಸೆದ ರಾಕ್ಷಸ ಚಂದ್ರಗುಪ್ತನನ್ನು ಸೋಲಿಸಲು ಎಲ್ಲಾ ವಿರೋಧಿ ಸೇನೆಯನ್ನೂ ಒಟ್ಟುಗೂಡಿಸಿದ. ಚಾಣಕ್ಯ ಅವರ ನಡುವೆಯೇ ಕೈಯ್ಯಾಡಿಸಿ ರಾಕ್ಷಸನ ಮೇಲೆಯೇ ಅಪನಂಬಿಕೆ ಹುಟ್ಟುವಂತೆ ಮಾಡಿದ. ಬೇಸತ್ತ ರಾಕ್ಷಸ ಮುಂದೇನೂ ಮಾಡಲಾಗದೆಂದು ಕೈ ಚೆಲ್ಲಿ ಕುಳಿತಾಗ ಅವನನ್ನು ಬಂಧಿಸಿ ತಂದು ಗೌರವಿಸಿ ಚಂದ್ರಗುಪ್ತನ ಮಹಾಮಂತ್ರಿಯಾಗುವಂತೆ ಕೇಳಿಕೊಂಡ.
ಚಾಣಕ್ಯನ ಶಕ್ತಿಯೇ ಅದು. ಮೇಲ್ನೋಟಕ್ಕೆ ಆತ ಅಹಂಕಾರಿ ಎನಿಸುತ್ತಾನೆ; ಸವರ್ಾಧಿಕಾರಿ ಎಂತಲೂ ಕಾಣಿಸುತ್ತಾನೆ. ಆತನ ಹೃದಯ ಮಾತ್ರ ಬೆಣ್ಣೆಯಷ್ಟು ಮೃದು. ರಾಷ್ಟ್ರಕಾರ್ಯಕ್ಕೆ ಪೂರಕವಾದವರನ್ನು ತನ್ನೊಂದಿಗೆ ಜೋಡಿಸಿಕೊಳ್ಳಲು ಆತ ಎಂತಹ ಹಂತಕ್ಕೆ ಬೇಕಿದ್ದರೂ ಹೋಗಲು ಸಿದ್ಧ. ರಾಕ್ಷಸನನ್ನು ಆತ ಕಂಠಮಟ್ಟ ವಿರೋಧಿಸುತ್ತಾನೆನಿಸಿದರೂ ಆತನಿಗಿಂತ ಸೂಕ್ತವಾದ ಮಂತ್ರಿ ಆಯರ್ಾವರ್ತಕ್ಕೆ ಮತ್ತೊಬ್ಬ ಸಿಗಲಾರ ಎಂಬ ಅರಿವಿದ್ದುದರಿಂದ ಆತನನ್ನು ಒಪ್ಪಿಸಿ ಆ ಪದವಿಯಲ್ಲಿ ಕುಳ್ಳಿರಿಸಿ ಗೌರವಿಸಿದ.
ಈ ನಡುವೆ ಚಂದ್ರಗುಪ್ತ ಚಕ್ರವತರ್ಿ ಪಟ್ಟವನ್ನೇರಿ, ರಾಕ್ಷಸ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ಚಾಣಕ್ಯರೇ ಮಹಾಮಾತ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹದಗೆಟ್ಟಿದ್ದ ತೆರಿಗೆ ವ್ಯವಸ್ಥೆಯನ್ನು ಸರಿದಾರಿಗೆ ತಂದಿದ್ದರು. ತೆರಿಗೆ ವಂಚಿಸುತ್ತಿದ್ದವರನ್ನು ಹೆಡೆಮುರಿಕಟ್ಟಿ ತೆರಿಗೆ ವಸೂಲಿ ಮಾಡುತ್ತಿದ್ದರು. ಬಡವನಿಗೂ ಬೊಕ್ಕಸದ ಲಾಭ ಸಿಗುವಂತೆ, ಶ್ರಮವಿಲ್ಲದೇ ಯಾರೂ ಉಣ್ಣದಿರುವಂತೆ ನೋಡಿಕೊಂಡಿದ್ದರು. ದೇವಸ್ಥಾನಗಳು, ಆಸ್ಪತ್ರೆಗಳು, ಪಾಠಶಾಲೆಗಳು ಸುಸೂತ್ರವಾಗಿ ಸಕರ್ಾರದ ಒತ್ತಡವಿಲ್ಲದಂತೆ ತಾವೇ ತಾವಾಗಿ ನಡೆಯುತ್ತಿದ್ದವು. ನ್ಯಾಯವ್ಯವಸ್ಥೆ ಚುರುಕಾಗಿತ್ತು ಮತ್ತು ಆರಕ್ಷಕ ಭಟರು ಕ್ಷಿಪ್ರವಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಒಟ್ಟಾರೆ ಚಂದ್ರಗುಪ್ತನ ಬಲಗೈಯಾಗಿ ನಿಂತು ರಾಜ್ಯ ವ್ಯವಸ್ಥೆಯನ್ನು ಸುಧಾರಿಸಿ ನೆಮ್ಮದಿಯ ಬದುಕನ್ನು ಜನರಿಗೆ ರೂಪಿಸಿಕೊಟ್ಟಿದ್ದರು ಚಾಣಕ್ಯ. ಸ್ವತಃ ರಾಜಾ ಚಂದ್ರಗುಪ್ತ ಅವರ ಪದತಲದಲ್ಲಿ ಕುಳಿತು ಸದಾ ಮಾರ್ಗದರ್ಶನ ಬೇಡುತ್ತಿದ್ದ.
ಈ ರೀತಿಯ ಗೌರವವಿರುವ ವ್ಯಕ್ತಿಯೊಬ್ಬ ಹೇಗೆ ಐಷಾರಾಮಿ ಬದುಕು ಸವೆಸಬಹುದು ಯೋಚಿಸಿ. ಆದರೆ ಚಾಣಕ್ಯ ನದಿ ತೀರದಲ್ಲಿ ಕುಟೀರವೊಂದನ್ನು ಕಟ್ಟಿಸಿಕೊಂಡು ಅಲ್ಲಿಯೇ ಉಳಿದಿದ್ದರು. ಶಿಷ್ಯರು ತಂದ ಭಿಕ್ಷಾನ್ನವನ್ನೇ ಉಣ್ಣುತ್ತಿದ್ದರು. ಸ್ವತಃ ರಾಜನೂ ಭೇಟಿಯಾಗಲು ಅಲ್ಲಿಯೇ ಬರಬೇಕಿತ್ತು. ಅವನೊಂದಿಗೆ ರಾಜ್ಯಾಡಳಿತದ ಕುರಿತಂತೆ ಅನೇಕ ಬಾರಿ ತಾರಕಕ್ಕೇರಿದ ವಾದ-ವಿವಾದಗಳು ನಡೆಯುತ್ತಿದ್ದವು. ಚಂದ್ರಗುಪ್ತನಿಗೆ ಚಾಣಕ್ಯರ ಆಲೋಚನೆ ಸ್ವಲ್ಪ ತಡವಾಗಿ ಅರ್ಥವಾಗುತ್ತಿತ್ತು. ಆಗ ಮತ್ತೆ ಮತ್ತೆ ನಮಸ್ಕರಿಸಿ ತೆರಳುತ್ತಿದ್ದ. ಹೀಗಿರುವಾಗಲೂ ರಾಕ್ಷಸನ ಕೈಗೆ ಅಧಿಕಾರ ಕೊಟ್ಟು ರಾಜ್ಯದ ಆಡಳಿತ, ಆಯರ್ಾವರ್ತದ ಘನತೆ ಇನ್ನು ಕುಂದಲಾರದೆಂಬ ಭರವಸೆ ಸಿಕ್ಕೊಡನೆ ಚಾಣಕ್ಯ ತಕ್ಷಶಿಲೆಗೆ ಮರಳಿ ಶಿಕ್ಷಕನಾಗಿ ಪಾಠ ಬೋಧಿಸಲಾರಂಭಿಸಿದರು.
ಓಹ್! ಸಮರ್ಥ ಸಾಮ್ರಾಜ್ಯವನ್ನು ಕಟ್ಟಿದ ಮಹಾತಪಸ್ವಿ ಎಂಬ ಲವಲೇಶದಷ್ಟೂ ಹಮ್ಮು-ಬಿಮ್ಮುಗಳಿಲ್ಲದ ಮಹಾ ಬ್ರಾಹ್ಮಣ ಆತ. ಹೌದು. ಸದಾ ಪರಬ್ರಹ್ಮ ಚಿಂತನೆಯಲ್ಲಿದ್ದು, ಕಾಲ ಕಾಲಕ್ಕೆ ಸಮಾಜಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತ, ಹಳಿ ತಪ್ಪಿದ ರಾಷ್ಟ್ರವನ್ನು ಮತ್ತೆ ಹಳಿಗೆ ಕೂರಿಸಬಲ್ಲವನೇ ಬ್ರಾಹ್ಮಣ. ಇನ್ನೂ ಒಂದು ಮಾತು ಹೇಳುತ್ತಾರೆ. ಎಲ್ಲಾ ಸಾಮಥ್ರ್ಯವಿದ್ದೂ ಇಷ್ಟಪಟ್ಟು ಬಡವನಾಗಿರುವವನೇ ಬ್ರಾಹ್ಮಣ ಅಂತ. ಯಾವ ದಿಕ್ಕಿನಿಂದಾದರೂ ನೋಡಿ. ತ್ಯಾಗದ ಮಹೋದಧಿ ಚಾಣಕ್ಯ. ಅವರನ್ನು ಸೂಕ್ತವಾಗಿ ಅಥರ್ೈಸಿಕೊಳ್ಳಬೇಕಿದೆ.
ಹೌದು. ಹತ್ತಾರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿಕೊಂಡು, ತಮ್ಮ ತನವನ್ನಷ್ಟೇ ಅಲ್ಲದೇ ದೇಶವನ್ನೂ ಮಾರಿಬಿಡುವ ಮಂತ್ರಿಗಳಿಗೆ ಚಾಣಕ್ಯ ಅಚ್ಚರಿಯ ವಸ್ತುವೇ. ರಾಷ್ಟ್ರದ ಬೊಕ್ಕಸಕ್ಕೆ ಸೇರಬೇಕಾದ ಆದಾಯವನ್ನು ಭ್ರಷ್ಟಾಚಾರದಿಂದಲೇ ಕಸಿದು ನುಂಗಿಬಿಡುವ ಅಧಿಕಾರಿಗಳಿಗೆ ಚಾಣಕ್ಯ ಪುರಾಣದ ಕಥೆ ಎನಿಸಲೂಬಹುದು. ಅನ್ಯದೇಶದ ಎಂಜಲು ಕಾಸಿಗೆ ದೇಶದ ಸಾರ್ವಭೌಮತೆಯನ್ನು ಬಲಿಕೊಡುವ ಪತ್ರಕರ್ತರು, ಬುದ್ಧಿ ಜೀವಿಗಳಿಗೆಲ್ಲ ಆತ ಆಡಿಕೊಳ್ಳುವ ವಸ್ತುವೂ ಆಗಬಹುದು.
ಆದರೆ ಒಂದಂತೂ ಸತ್ಯ. ನೀವು ಯಾರನ್ನಾದರೂ ಸಮರ್ಥ ನಾಯಕನೆಂದು ಗುರುತಿಸಿ, ಗೌರವಿಸಿದರೆ ಆತನ ನಡೆ-ನುಡಿಗಳಲ್ಲಿ ಚಾಣಕ್ಯನ ಛಾಪು ಎದ್ದು ಕಾಣುತ್ತದೆ. ಚಾಣಕ್ಯನ ಅಂಶ ಕಾಲ-ಕಾಲಕ್ಕೆ ಬೇರೆ ಬೇರೆ ವ್ಯಕ್ತಿಗಳ ಮೂಲಕ ಅನಾವರಣಗೊಳ್ಳುವುದೇನೋ ಎಂದು ನಂಬಿಕೆ ಹುಟ್ಟುವಷ್ಟರ ಮಟ್ಟಿಗೆ ಆತ ಪ್ರಕಟಗೊಳ್ಳುತ್ತಾನೆ. ಹಾಗೆಂದೇ ಹತ್ತಾರು ಸಾವಿರ ವರ್ಷಗಳಿಂದಲೂ ಈ ದೇಶ ಬಲವಾಗಿ ಉಳಿದಿದೆ. ಕಿತ್ತು ತಿನ್ನುವವರ ಆಕ್ರಮಣಕ್ಕೂ ಜಗ್ಗದೇ, ಒಳಗಿನ ಕುತಂತ್ರಕ್ಕೂ ಬಗ್ಗದೇ ಈಗಲೂ ಈ ದೇಶ ಉಳಿದಿದೆಯೆಂದರೆ ಅದು ಚಾಣಕ್ಯರೂಪೀ ಶಕ್ತಿಯದ್ದೇ ಕಾರಣದಿಂದಲ್ಲವೇನು?
ಏನಂತೀರಿ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s