ಸೋತಂತೆ ಕಂಡರೂ ಗೆದ್ದದ್ದು ಸಿದ್ದರಾಮಯ್ಯ!!

ಪುನರ್ರಚನೆಯ ಆರಂಭಿಕ ಗೊಂದಲಗಳಿಂದ ಗದ್ದಲವುಂಟಾದಾಗ ಬಿಜೆಪಿ ಸಂಭ್ರಮ ಆಚರಿಸಿತ್ತು. ರೊಟ್ಟಿ ತಾನೇ ಜಾರಿ ತುಪ್ಪಕ್ಕೆ ಬೀಳುತ್ತೇಂತ. ಆದರೆ ಒಂದೇ ದಿನದಲ್ಲಿ ಗಲಾಟೆ ಶಾಂತವಾಯ್ತು. ಭಿನ್ನ ಮತೀಯರ ಕಿರಿಕಿರಿಯ ಸದ್ದೂ ಅಡಗಿತು. ಈಗ ಪೀಕಲಾಟ ಬಿಜೆಪಿಗೇ! ಈಗಾಗಲೇ ಯಡ್ಯೂರಪ್ಪನವರ ಆಗಮನದಿಂದ ಆರಂಭಿಕ ಉತ್ಸಾಹ ಕಂಡುಬಂದಿದ್ದೆಲ್ಲವೂ ಇಳಿದು ಹೋಗಿದೆ. ಕೆಜೆಪಿಯಲ್ಲಿ ಯಡಿಯೂರಪ್ಪನವರಿಗೆ ಆಪ್ತರಾದವರೆಲ್ಲ ಇಲ್ಲಿ ಮಹತ್ವದ ಹುದ್ದೆ ಅಲಂಕರಿಸಿಬಿಟ್ಟಿದ್ದಾರೆ. ಒಳಗೊಳಗೇ ಅಸಹನೆ ಕುದಿಯುತ್ತಿದೆ. ಅತ್ತ ಕಾಂಗ್ರೆಸ್ಸು ಸಿದ್ಧರಾಮಯ್ಯನವರ ಪರಾಖು ಹೇಳುವವರ ಬಳಗದಿಂದ ತುಂಬಿ ಹೋದರೆ ಇತ್ತ ಬಿಜೆಪಿ ಯಡಿಯೂರಪ್ಪನವರ ಜೀವದ ಗೆಳೆಯರಿಂದ ತುಂಬಿ ಹೋಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಸದ್ಯಕ್ಕಂತೂ ಕೊನೆಯುಸಿರೆಳೆದಿವೆ!

s1

ರಾಜ್ಯದ ಮುಖ್ಯಮಂತ್ರಿಯವರನ್ನು ರಾಹುಲ್ ಗಾಂಧಿಗೆ ಹೋಲಿಸಿ ಹಂಗಿಸಿದ್ದೇ ಬಂತು. ಅವರು ನಿದ್ದೆ ಮಾಡುತ್ತಾರೆ, ಯೋಗ ದಿನದ ಸಂಭ್ರಮದಲ್ಲಿ ಅವರು ಬೇರೆ ಲೋಕದಲ್ಲಿ ಮಗ್ನರಾಗಿರುತ್ತಾರೆ ಹೀಗೆಲ್ಲಾ ಫೇಸ್ಬುಕ್ಗಳಲ್ಲಿ ಆಡಿಕೊಂಡವರೇ ಎಲ್ಲಾ. ಆದರೆ ಸಂಪುಟ ಪುನರ್ರಚನೆಯ ನೆಪದಲ್ಲಿ ಅವರು ಕೊಟ್ಟ ಮಾಸ್ಟರ್ ಸ್ಟ್ರೋಕ್ಗೆ ವಿರೋಧ ಪಕ್ಷಗಳು ಈಗ ಮುಟ್ಟಿಕೊಂಡು ನೋಡುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಸಿದ್ಧರಾಮಯ್ಯನವರಿಂದಾದ ಕೆಲಸ ಅಷ್ಟಕ್ಕಷ್ಟೇ. ಅವರ ಭಾಗ್ಯಗಳಿಂದ ನಾಡಿಗೆಷ್ಟು ಲಾಭವಾಯಿತೋ ದೇವರೇ ಬಲ್ಲ. ಆದರೆ ನಾವೇ ಕಟ್ಟಿದ ತೆರಿಗೆ ಹಣ ಸಾಕಷ್ಟು ಪೋಲಾಗಿ ಹೋಯ್ತು. ಜನರಿಗೆ ಈ ಮೂರು ವರ್ಷಗಳಲ್ಲಿ ಆದಷ್ಟು ಕಿರಿಕಿರಿ ಕಳೆದ ಮೂವತ್ತು ವರ್ಷಗಳಲ್ಲಿ ಆದದ್ದು ಅನುಮಾನ. ಜನರೇ ಈ ಸಕರ್ಾರವನ್ನು ಕಿತ್ತೊಗೆಯುತ್ತಾರೆಂದು ಬಿಜೆಪಿ, ಜೆಡಿಎಸ್ಗಳು ಕಾಯುತ್ತ ಕುಳಿತಿದ್ದವು!
ಸಿದ್ಧರಾಮಯ್ಯನವರ ರಾಜಕೀಯ ಬುದ್ಧಿ ಬಲು ಚುರುಕು. ದೇವೇಗೌಡರ ಗರಡಿಯಲ್ಲಿಯೇ ಪಳಗಿದವರಾದ್ದರಿಂದ ಅವರ ಎಲ್ಲಾ ರಾಜಕೀಯಪಟ್ಟುಗಳನ್ನು ಹತ್ತಿರದಿಂದ ಕಲಿತಿದ್ದಾರೆ. ಅಷ್ಟೇ ಅಲ್ಲ. ಕಾಂಗ್ರೆಸ್ಸಿನ ರಾಜಕಾರಣವನ್ನೂ ಕಳೆದ ನಾಲ್ಕಾರು ವರ್ಷಗಳಲ್ಲಿ ಜೀಣರ್ಿಸಿಕೊಂಡಿದ್ದಾರೆ. ಹೀಗಾಗಿ ಹೊಳೆಯಲ್ಲಿ ಎಲ್ಲಿ ಎಷ್ಟು ಆಳವಿದೆ ಎಂಬುದರಲ್ಲಿ ಅವರಿಗೆ ಅಜ್ಞಾನವಂತೂ ಇಲ್ಲ. ಇಟ್ಟ ಹೆಜ್ಜೆ ಬಲು ದೃಢವಾಗಿಯೇ ಊರುತ್ತಿದ್ದಾರೆ.
ಮೊದಲನೆಯದಾಗಿ ಗಮನಿಸಬೇಕಾದ ಸಂಗತಿ, ಎಲ್ಲೆಡೆ ಅಧಿಕಾರವನ್ನು ಕಳಕೊಂಡ ಕಾಂಗ್ರೆಸ್ಸಿನ ದುಡಿಯುವ ಕೈ ಕನರ್ಾಟಕ ಮಾತ್ರ! ಹೈಕಮಾಂಡಿನ ಎಲ್ಲಾ ಚಟುವಟಿಕೆಗಳಿಗೂ ಹಣ ಸಂದಾಯವಾಗುತ್ತಿರುವುದು ಇಲ್ಲಿಂದಲೇ. ಇಲ್ಲಿನ ಸಕರ್ಾರ ಬಿತ್ತೆಂದರೆ ಕಾಂಗ್ರೆಸ್ಸು ನೀರಿನಿಂದ ಹೊರತೆಗೆದ ಮೀನಿನಂತೆ. ಅದಾಗಲೇ ಹಿರಿಯ ನಾಯಕರು ಒಬ್ಬೊಬ್ಬರಾಗಿ ಮೋದಿ ಎಸೆದ ದಾಳಗಳಿಗೆ ಬಲಿಯಾಗಿ ಅಧಿನಾಯಕಿಯಿಂದ ದೂರವಾಗುತ್ತಿರುವಾಗ ಕನರ್ಾಟಕದಲ್ಲಿ ಗಟ್ಟಿ ನಿಧರ್ಾರ ತೆಗೆದುಕೊಳ್ಳುವ ತಾಕತ್ತು ಹೈಕಮಾಂಡಿಗಿಲ್ಲ. ಇದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತು. ಪದವಿಯಿಂದ ಕೆಳಗಿಳಿಸಿದರೆ ಸಕರ್ಾರವನ್ನೇ ಉರುಳಿಸುವ ಬೆದರಿಕೆಯೊಂದಿಗೇ ಚೌಕಾಶಿ ಶುರು ಮಾಡೋದು ಅವರು. ಅಲ್ಲಿಗೆ ಹೈಕಮಾಂಡು ಏನೂ ಮಾಡಲಾಗದ ದೈನೇಸಿ ಸ್ಥಿತಿ ತಲುಪಿರುವುದು ಖಾತ್ರಿ.
ಹಾಗಂತ ಬರಿಯ ಬೆದರಿಕೆಯ ಆಟವಲ್ಲ ಅವರದ್ದು. ಕನರ್ಾಟಕದ ಎದುರಾಳಿಗಳಲ್ಲಿ ಒಬ್ಬೊಬ್ಬರನ್ನೇ ಮಟ್ಟ ಹಾಕುವ ಕಾಯಕವನ್ನೂ ಯಶಸ್ವಿಯಾಗಿ ಮಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯೋದು ಕಠಿಣವೆಂದು ಖಾತ್ರಿಯಾದಾಗ ಅದನ್ನು ತ್ರಿಭಜಿಸುವ ಸೂತ್ರ ಮುಂದಿಟ್ಟು ಅಧಿಕಾರ ನಡೆಸುವ ಆಲೋಚನೆ ಮಾಡಿದರು. ಅದನ್ನು ನ್ಯಾಯಾಲಯ ನಿರಾಕರಿಸಿದಾಗ ಅನಿವಾರ್ಯವಾಗಿ ಚುನಾವಣೆಗೆ ಹೋದರು. ಭಾಜಪ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರದ ಚುಕ್ಕಾಣಿ ಕೈಗೆ ತೆಗೆದುಕೊಳ್ಳುವುದು ಖಾತ್ರಿಯಾಯ್ತು. ಸ್ವತಃ ಅಮಿತ್ ಶಾಹ್ ಎಲ್ಲಾ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿನ ನಾಯಕರ ಕೈಗೆ ಹೂಗುಚ್ಛ ಕೊಟ್ಟು ಅಭಿನಂದಿಸಿದರು. ಅಧಿಕಾರ ಮರಳಿ ಪಡೆಯುವ ಮೊದಲ ಹೆಜ್ಜೆಯಾಗಿತ್ತು ಅದು. ಭಾಜಪದ ನಾಯಕರ ಧಿಮಾಕು ಮಿತಿಮೀರಿತ್ತು. ಮುಂದಿನ ಮುಖ್ಯಮಂತ್ರಿಯಾಗಿ ಗುರುತಿಸಿಕೊಳ್ಳುವ ತವಕದಲ್ಲಿ ಬೆಂಗಳೂರಿನ ನಾಯಕರು ಎಡವಿದರು. ಸಿಕ್ಕ ಅವಕಾಶ ಬಳಸಿಕೊಂಡ ಸಿದ್ಧರಾಮಯ್ಯ ದಳವನ್ನೇ ಒಡೆದರು. ಅಲ್ಲಿನ ಕೆಲವು ನಾಯಕರು ದೇವೇಗೌಡರ ಮೇಲೆ ಒತ್ತಡ ತಂದು ಕಾಂಗ್ರೆಸ್ಸಿನೊಂದಿಗೆ ಒಟ್ಟುಗೂಡುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದರು. ಅಲ್ಲಿಗೆ ದಳದ ಮೇಲಿನ ಜನರ ಭರವಸೆ ಕೊಚ್ಚಿ ಹೋಗಿತ್ತು. ಮುಂದೆ ಈ ಒತ್ತಡ ಹೇರಿದ ನಾಯಕರ ಮೂಲಕವೇ ದೇವೇಗೌಡರಿಗೆ ಮಮರ್ಾಘಾತ ಕೊಟ್ಟು ಅವರ ಪಕ್ಷ ಮತ್ತೆ ಎದ್ದು ನಿಲ್ಲದಂತೆ ಮಾಡಿದರು ಸಿದ್ಧರಾಮಯ್ಯ. ಒಬ್ಬ ಎದುರಾಳಿ ಜೆಡಿಎಸ್ ತನ್ನೊಳಗಿನ ಕಿರಿಕಿರಿಗಳಿಂದಲೇ ಅವಸಾನದ ಅಂಚಿಗೆ ಬರುವಂತೆ ಮಾಡಿದ್ದು ಸಿದ್ಧರಾಮಯ್ಯನವರ ರಾಜಕೀಯ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ. ಪಕ್ಷ ಒಡೆಯೋದು ಬಿಡಿ, ಇಂದು ದೇವೇಗೌಡರ ಮನೆಯೇ ಮುರಿದು ಬಿದ್ದಿದೆ. ಅಣ್ಣ-ತಮ್ಮಂದಿರು ಕಾದಾಡುವ ಸ್ಥಿತಿಗೆ ಬಂದಿದೆ.
ಇತ್ತ ಬಿಜೆಪಿಯ ಕಥೆ ಭಿನ್ನವೇನಲ್ಲ. ಕನರ್ಾಟಕದಲ್ಲಿ ಕಾಂಗ್ರೆಸ್ಸಿನ ವಿರುದ್ಧ ನೇರ ಹಣಾಹಣಿಯಲ್ಲಿ ಗೆಲ್ಲುವ ಸಾಮಥ್ರ್ಯ ಬಿಜೇಪಿಗಿಲ್ಲ. ಶಕ್ತಿಯುತ ‘ದಳ’ ಇದ್ದು, ಹಿಂದುಳಿದ ಮತ್ತು ಮುಸಲ್ಮಾನರ ಮನಗಳನ್ನು ಸೆಳೆದರೆ ಮಾತ್ರ ಗೆಲ್ಲುವ ಅವಕಾಶ ಇವರಿಗೆ. ಈಗ ದಳದ ಶಕ್ತಿ ಹ್ರಾಸವಾಗಿರುವುದರಿಂದ ಬಿಜೆಪಿಯ ಗೆಲುವು ಸುಲಭ ಸಾಧ್ಯವಲ್ಲ. ಅದರಲ್ಲೂ ಮೊನ್ನೆ ಸಂಪುಟ ಪುನರ್ರಚನೆಯಾದ ಮೇಲಂತೂ ರಾಜ್ಯದಲ್ಲಿ ಬಿಜೆಪಿಯ ಶಕ್ತಿ ಬಿಡಿ, ಕಾಂಗ್ರೆಸ್ಸೂ ಸತ್ತು ಹೋಗಿದೆ. ಜೀವಂತ ಇರೋದು ಸಿದ್ಧರಾಮಯ್ಯ ಮಾತ್ರ.

s3
ಹಾಗೇ ಯೋಚಿಸಿ. ದಲಿತ ಮುಖ್ಯಮಂತ್ರಿಯ ಮಾತನಾಡುತ್ತಿದ್ದ ಪರಮೇಶ್ವರಪ್ಪನವರಿಗೆ ಈ ಹಿಂದೆಯೇ ಗೃಹ ಸಚಿವ ಸ್ಥಾನ ಕೊಟ್ಟು ಅವರ ಕತೆ ಮುಗಿಸಿದ್ದರು ಸಿದ್ಧರಾಮಯ್ಯ. ಮುಖ್ಯಮಂತ್ರಿ ಪದವಿ ಕೊಡುವವರೆಗೆ ಏನನ್ನೂ ಒಪ್ಪಿಕೊಳ್ಳಬೇಡಿರೆಂದು ಆಪ್ತರು ಕೊಟ್ಟ ಸಲಹೆಗೆ ಪರಮೇಶ್ವರ್ ‘ಈತ ಕುಚರ್ಿ ಬಿಡುವುದು ಅಸಾಧ್ಯ. ಮುಂದೆ ನಾವು ಅಧಿಕಾರಕ್ಕೆ ಬರುವುದೂ ಕಷ್ಟ. ಹೀಗಾಗಿ ಸಿಕ್ಕಿದ್ದನ್ನು ಎರಡು ವರ್ಷ ಅನುಭವಿಸಿಬಿಡುತ್ತೇನೆ’ ಎಂದಿದ್ದರಂತೆ. ಇನ್ನು ಅವರಿಗೆ ಎದುರಾಗಿ ನಿಂತಿದ್ದು ಮಲ್ಲಿಕಾಜರ್ುನ ಖಗರ್ೆ ಮಾತ್ರ. ಪದೇ ಪದೇ ಕೇಂದ್ರದಲ್ಲಿ ತನ್ನ ವಿರುದ್ಧ ವರದಿ ಒಪ್ಪಿಸುತ್ತಾ, ಕನರ್ಾಟಕದಲ್ಲೂ ತನ್ನ ಆಪ್ತರ ಮೂಲಕ ಬೆದರಿಸುತ್ತ ಕುಳಿತಿದ್ದ ಖಗರ್ೆಗೆ ಸಿದ್ಧರಾಮಯ್ಯ ಕೊಟ್ಟ ಕರೆಂಟ್ ಶಾಕ್ ಯಾವುದು ಗೊತ್ತೇ? ಅವರ ಆಪ್ತರನ್ನು ಮಂತ್ರಿ ಮಂಡಲದಿಂದ ಕಿತ್ತು ಬಿಸಾಡಿದ್ದು. ಅದಕ್ಕೆ ಪ್ರತಿಯಾಗಿ ಅವರ ಮಗನನ್ನೇ ಮಂತ್ರಿ ಮಾಡಿ ಖಗರ್ೆಯ ವಿರೋಧದ ದನಿಯನ್ನು ಪೂತರ್ಿ ಅಡಗಿಸಿಬಿಟ್ಟರು. ಖಗರ್ೆಯ ಆಪ್ತರೆಲ್ಲ ಈಗ ಸಿಡಿದು ಬಿದ್ದದ್ದು ಮುಖ್ಯಮಂತ್ರಿಯ ವಿರುದ್ಧವಲ್ಲ. ಸ್ವತಃ ಖಗರ್ೆಯ ವಿರುದ್ಧ. ಅಲ್ಲಿಗೆ ಖಗರ್ೆಯ ‘ಜಿಗರ್ಥಂಡಾ!’ ಇನ್ನು ಮುಂದೆ ಖಗರ್ೆ ಮುಖ್ಯಮಂತ್ರಿ ಪದವಿಯ ಬಗ್ಗೆ ಮಾತಾಡುವುದಿರಲಿ, ಕಲಬುಗರ್ಿಯ ತನ್ನ ಸಾಮ್ರಾಜ್ಯ ಉಳಿಸಿಕೊಂಡರೆ ಸಾಕೆಂಬ ಅವಸ್ಥೆಗೆ ತಲುಪಿದ್ದಾರೆ.
ಅಂಬರೀಷ್ರನ್ನು ಮುಟ್ಟಬಾರದಿತ್ತು ಅಂತಾರೆ ಕೆಲವರು. ಆದರೆ ಅವರನ್ನು ಮನೆಗೆ ಕಳಿಸುವ ಮೂಲಕ ಹೈಕಮಾಂಡಿನ ಪ್ರಮುಖ ವ್ಯಕ್ತಿಯೊಬ್ಬರ ಮನಸ್ಸನ್ನೇ ಗೆದ್ದಿರುವ ಸಿದ್ಧರಾಮಯ್ಯ ದೆಹಲಿಯಲ್ಲಿ ಗಟ್ಟಿಯಾಗಿಬಿಟ್ಟಿದ್ದಾರೆ. ಅಂಬಿ ಮತ್ತು ಶ್ರೀನಿವಾಸ್ ಪ್ರಸಾದರ ಸುತ್ತ ತನ್ನ ಪಡೆಯನ್ನು ಬಿಟ್ಟು ಅವರಿಂದ ಏನೂ ಮಾಡಲಾಗದಂತಹ ಪರಿಸ್ಥಿತಿಗೆ ಇಳಿಸಿ ನಿಲ್ಲಿಸಿದ್ದಾರೆ. ಅವರಿಬ್ಬರಿಗೂ ಇರೋದು ಒಂದೇ ದಾರಿ. ದಳಕ್ಕೋ ಬಿಜೇಪಿಗೋ ಸೇರಿ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕು. ಕೆಲಸ ಸರಿಯಾಗಿ ನಿರ್ವಹಿಸಿಲ್ಲವೆಂದು ಒಂದು ಕಂಪೆನಿಯಿಂದ ಹೊರದಬ್ಬಲ್ಪಟ್ಟ ನೌಕರನನ್ನು ಮತ್ತೊಂದು ಕಂಪೆನಿ ತೆಗೆದುಕೊಂಡರೆ ಈ ಕಂಪೆನಿಯ ಮಾರುಕಟ್ಟೆ ಮೌಲ್ಯ ಕುಸಿಯೋದರಲ್ಲಿ ಯಾವ ಅನುಮಾನವೂ ಇಲ್ಲ. ಅಂತಹ ಸಾಹಸಕ್ಕೆ ಯಾವ ಪಕ್ಷಗಳೂ ಕೈ ಹಾಕಲಾರವು. ಅಲ್ಲಿಗೆ ಅಂಬರೀಷ್- ಶ್ರೀನಿವಾಸ್ ಪ್ರಸಾದ್ರನ್ನು ಹೊರದಬ್ಬಿಯೂ ಗಟ್ಟಿಯಾಗಿದ್ದು ಸಿದ್ಧರಾಮಯ್ಯರೇ!

s2
ಪುನರ್ರಚನೆಯ ಆರಂಭಿಕ ಗೊಂದಲಗಳಿಂದ ಗದ್ದಲವುಂಟಾದಾಗ ಬಿಜೆಪಿ ಸಂಭ್ರಮ ಆಚರಿಸಿತ್ತು. ರೊಟ್ಟಿ ತಾನೇ ಜಾರಿ ತುಪ್ಪಕ್ಕೆ ಬೀಳುತ್ತೇಂತ. ಆದರೆ ಒಂದೇ ದಿನದಲ್ಲಿ ಗಲಾಟೆ ಶಾಂತವಾಯ್ತು. ಭಿನ್ನ ಮತೀಯರ ಕಿರಿಕಿರಿಯ ಸದ್ದೂ ಅಡಗಿತು. ಈಗ ಪೀಕಲಾಟ ಬಿಜೆಪಿಗೇ! ಈಗಾಗಲೇ ಯಡ್ಯೂರಪ್ಪನವರ ಆಗಮನದಿಂದ ಆರಂಭಿಕ ಉತ್ಸಾಹ ಕಂಡುಬಂದಿದ್ದೆಲ್ಲವೂ ಇಳಿದು ಹೋಗಿದೆ. ಕೆಜೆಪಿಯಲ್ಲಿ ಯಡಿಯೂರಪ್ಪನವರಿಗೆ ಆಪ್ತರಾದವರೆಲ್ಲ ಇಲ್ಲಿ ಮಹತ್ವದ ಹುದ್ದೆ ಅಲಂಕರಿಸಿಬಿಟ್ಟಿದ್ದಾರೆ. ಒಳಗೊಳಗೇ ಅಸಹನೆ ಕುದಿಯುತ್ತಿದೆ. ಅತ್ತ ಕಾಂಗ್ರೆಸ್ಸು ಸಿದ್ಧರಾಮಯ್ಯನವರ ಪರಾಖು ಹೇಳುವವರ ಬಳಗದಿಂದ ತುಂಬಿ ಹೋದರೆ ಇತ್ತ ಬಿಜೆಪಿ ಯಡಿಯೂರಪ್ಪನವರ ಜೀವದ ಗೆಳೆಯರಿಂದ ತುಂಬಿ ಹೋಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಸದ್ಯಕ್ಕಂತೂ ಕೊನೆಯುಸಿರೆಳೆದಿವೆ!
ಮುಂದಿನದನ್ನು ಕಾದು ನೋಡಬೇಕಷ್ಟೇ! ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಿದ್ಧರಾಮಯ್ಯ ಮೊದಲಿಗಿಂತ ಬಲಾಢ್ಯರಾಗಿದ್ದಾರೆ. ಕಾಲ ಉಳಿದದ್ದನ್ನು ತೀಮರ್ಾನಿಸಬೇಕಷ್ಟೇ.

2 thoughts on “ಸೋತಂತೆ ಕಂಡರೂ ಗೆದ್ದದ್ದು ಸಿದ್ದರಾಮಯ್ಯ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s