ಚಂದ್ರಗುಪ್ತನ ಮಹಾ ಸಾಮ್ರಾಜ್ಯದ ಹಿಂದೆ ಚಾಣಕ್ಯ!

ಚಂದ್ರಗುಪ್ತನ ಮಹಾ ಸಾಮ್ರಾಜ್ಯದ ಹಿಂದೆ ಚಾಣಕ್ಯ!

ಜನರಿಗೆ ಸೂಕ್ತ ವೇದಿಕೆ ಮತ್ತು ಸಮರ್ಥ ನಾಯಕ ಬೇಕಿತ್ತು. ಪ್ರತಿಯೊಬ್ಬರ ಹೃದಯ ವೇದನೆ ಚಾಣಕ್ಯರ ಹೃದಯಕ್ಕೆ ಬಡಿಯುತ್ತಲೇ ಇತ್ತು. ರಾಷ್ಟ್ರವನ್ನು ಪ್ರಗತಿ ವಿಮುಖಗೊಳಿಸುವ ಚಿಂತನೆಗಳಿಂದ ದೂರಗೊಳಿಸಿ ಅದನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಓಡಿಸುವ ತವಕ ಅವರಿಗಿತ್ತು. ವೈದಿಕ ಧರ್ಮ ಕಳೆದುಕೊಂಡ ಘನತೆಯನ್ನು ಮರಳಿ ತಂದುಕೊಟ್ಟು ವಿಶ್ವ ಪೀಠದಲ್ಲಿ ಮತ್ತೆ ಭಾರತ ಆರೂಢವಾಗುವಂತೆ ಮಾಡುವ ಹುಚ್ಚು ನಶೆ ಅವರಿಗೆ ಏರುತ್ತಲೇ ಇತ್ತು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಅಷ್ಟೇ. ಅಗೋ! ಆ ಸಮಯವೂ ಬಂತು

2

ಹಿಂದೆಯೂ ಒಮ್ಮೆ ಚಚರ್ೆ ಮಾಡಿದ್ದೆವು. ಮಗಧದ ವಿಸ್ತಾರ ಸಾಮ್ರಾಜ್ಯವನ್ನು ನಾಲ್ಕು ಪ್ರಮುಖ ವಂಶಗಳು ಆಳಿದವು. ಐದನೆಯದೇ ಚಾಣಕ್ಯ ಪ್ರಣೀತ ಚಂದ್ರಗುಪ್ತ ಮೌರ್ಯನದು. ಕಲಿ ಶಕೆ ಆರಂಭವಾದ ಹೊಸತರಲ್ಲಿಯೇ ಬೃಹದ್ರಥನ ಆಳ್ವಿಕೆ. ಅವನ ಪರಿವಾರದ 22 ರಾಜರು ಆಳಿದ ನಂತರ ಪ್ರದ್ಯೋತನ ವಂಶಜರು, ಶಿಶುನಾಗನ ವಂಶಜರು ಆಳಿದರು. ಆಮೇಲೆಯೇ ಮಗಧ ಸಾಮ್ರಾಜ್ಯ ನಂದರ ಕೈ ಸೇರಿದ್ದು. ಶಿಶುನಾಗ ವಂಶದ ಕೊನೆಯ ದೊರೆ ಮಹಾನಂದಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳು ಸುನಂದಾ ದೇವಿ, ಎರಡನೆಯವಳು ಮೋರಿಯಾ ಕುಲಕ್ಕೆ ಸೇರಿದ ಮೂರಾದೇವಿ. ಇದಲ್ಲದೇ ಆತನಿಗೊಬ್ಬ ಪ್ರೇಮಿಕೆ ಕೂಡ. ಸುನಂದಾ ದೇವಿಗೆ ಇಬ್ಬರು ಮಕ್ಕಳು, ಮೂರಾದೇವಿಗೆ ಒಬ್ಬ ಮತ್ತು ಪ್ರೇಮಿಕೆಗೊಬ್ಬ. ಮೂರಾದೇವಿಗೆ ಜನಿಸಿದವ ರವಿಗುಪ್ತನಾದರೆ, ಪ್ರೇಮಿಕೆಗೆ ಹುಟ್ಟಿದವನೇ ಮಹಾಪದ್ಮನಂದ.
ಪಟ್ಟದರಸಿ ಬಿಟ್ಟರೆ ಮತ್ತಿಬ್ಬರು ಕ್ಷತ್ರಿಯ ಕುಲದವರಾಗಿರದೇ ಕೆಳಮಟ್ಟದವರೇ ಆಗಿದ್ದರಿಂದ ಸಹಜವಾಗಿಯೇ ರಾಜ್ಯ ಸುನಂದಾದೇವಿಯ ಮಕ್ಕಳಿಗೇ ಹೋಗಬೇಕಿತ್ತು. ಆದರೆ ವಿಧಿಲಿಖಿತ ಬೇರೆಯೇ ಇತ್ತು. ತನ್ನ ಪ್ರೇಮಿಕೆಯ ಪುತ್ರ ಮಹಾಪದ್ಮನಂದನನ್ನು ದೂರವಿಟ್ಟು ಸಾಕುವಂತೆ ರಾಜನ ಗುಪ್ತ ಆಜ್ಞೆಯಿತ್ತು. ಅದನ್ನು ಸರಿಯಾಗಿ ಪಾಲಿಸುತ್ತಿಲ್ಲವೆಂಬ ಆಕ್ರೋಶಕ್ಕೆ ಮಹಾಪದ್ಮ ಕತ್ತಿ ಮಸೆಯಲಾರಂಭಿಸಿದ್ದ. ಅದೊಮ್ಮೆ ಅವಕಾಶ ಪಡೆದು ದೊರೆಯೆದುರು ತನ್ನ ಯುದ್ಧ ಕೌಶಲ ಪ್ರದಶರ್ಿಸಿ ಸೇನಾ ತುಕಡಿಯೊಂದಕ್ಕೆ ನಾಯಕನಾದ ಕೊನೆಗೊಮ್ಮೆ ಸೇನಾಧಿಪತಿಯೂ ಆಗಿ ವಿಶಾಲ ಸೇನೆಯ ಮೇಲೆ ಹಿಡಿತ ಸ್ಥಾಪಿಸಿದ. ಅಷ್ಟೇ ಅಲ್ಲ. ಸಮಯ ಸಾಧಿಸಿ ರಾಜನನ್ನೇ ಕೊಂದು ಪಟ್ಟಕ್ಕೇರಿ ಕೂತುಬಿಟ್ಟ. ಕೆಳಜಾತಿಯವನೆಂದು ಮೂದಲಿಸಿದವರೆಲ್ಲರಿಗೂ ಈಗ ತಕ್ಕ ಶಾಸ್ತಿ ಆಗಲೇಬೇಕಿತ್ತು. ಅದಕ್ಕೆ ತನ್ನ ಸಾಮ್ರಾಜ್ಯ ವಿಸ್ತಾರ ಮಾಡುವ ನೆಪದಲ್ಲಿ ಕ್ಷತ್ರಿಯ ಕುಲದವರ ಮೇಲೆ ಏರಿ ಹೋದ. ಕಾಶಿ, ಕುರು, ಪಾಂಚಾಲ, ಕೋಸಲ, ಹೈಹಯ, ಕಳಿಂಗ, ಅಶ್ವಕರನ್ನೆಲ್ಲಾ ಗೆದ್ದು ವಿಜೃಂಭಿಸಿದ. ಮಗಧ ಈಗ ಪೂರ್ವಜರು ಬಿಟ್ಟುಕೊಟ್ಟಿದುದಕ್ಕಿಂತ ಅಗಾಧವಾಗಿ ನಿಂತಿತ್ತು. ಅವನ ವಿರುದ್ಧ ಮಾತನಾಡುವವರೇ ಇಲ್ಲವಾಗಿತ್ತು. ಕ್ಷತ್ರಿಯ ಕುಲದ ಮೇಲಿನ ಅವನ ಸೇಡು ತೀರಿತ್ತು. ಇನ್ನು ವೈಶ್ಯ ಸಂಕುಲಕ್ಕೆ ಪಾಠ ಕಲಿಸಲೆಂದು ಅಪಾರ ಕರಭಾರ ಹೇರಿ ಅವರು ಎದೆಯೆತ್ತಿ ತಿರುಗದಂತೆ ಮಾಡಿದ. ಉಳಿದದ್ದು ಬ್ರಾಹ್ಮಣರು ಮಾತ್ರ. ಅವರ ಸಾರ್ವಭೌಮತ್ವ ಕಸಿಯಲು ಇದ್ದ ಮಾರ್ಗವೆಂದರೆ ಬೌದ್ಧ, ಜೈನ ಮತಗಳಿಗೆ ಆದ್ಯತೆ ಕೊಟ್ಟು ವೈದಿಕ ಪರಂಪರೆಯನ್ನು ಧಿಕ್ಕರಿಸಿಬಿಡುವುದು ಅಷ್ಟೇ. ಯಾವ ಮತಕ್ಕೆ ರಾಜನ ಆಶ್ರಯ ಮತ್ತು ಸ್ವಾತಂತ್ರ್ಯ ದೊರೆಯುವುದೋ ಸಾಮಾನ್ಯ ಜನ ಅತ್ತ ಸರಿದುಬಿಡುತ್ತಾರೆ. ಅಂತಿಮವಾಗಿ ಎಲ್ಲರಿಗೂ ಬದುಕು ಮುಖ್ಯ ಅಷ್ಟೇ. ಆಗ ಸಹಜವಾಗಿಯೇ ಬೌದ್ಧ, ಜೈನ ಮತಗಳತ್ತ ಜನ ವಾಲುವುದರಿಂದ ಬ್ರಾಹ್ಮಣರಿಗೆ ಸಿಗುವ ಗೌರವ ಮತ್ತು ಅವಕಾಶ ಎರಡೂ ಕಡಿಮೆಯಾಗಿ ಅವರು ಕಾಲಕ್ರಮದಲ್ಲಿ ರಾಜನಿಗೆ ಪರಾಖು ಹಾಕಿಕೊಂಡು ಉಳಿದುಬಿಡುತ್ತಾರೆಂಬುದು ಮಹಾಪದ್ಮನಂದನಿಗೆ ಗೊತ್ತೇ ಇತ್ತು.
ಆತನಿಗಷ್ಟೇ ಅಲ್ಲ. ಪ್ರತಿಯೊಬ್ಬ ಆಳುವವನೂ ಆಂತರಿಕ ಶತ್ರುಗಳನ್ನು ಮೆಟ್ಟಿ ನಿಲ್ಲುವ ಉಪಾಯ ಕಂಡುಕೊಂಡೇ ಇರುತ್ತಾನೆ. ಬ್ರಿಟೀಷರು ಹಿಂದೂಗಳನ್ನು ಮೆಟ್ಟಿ ನಿಲ್ಲಲು ಮುಸಲ್ಮಾನರನ್ನು ಹತ್ತಿರಕ್ಕೆ ಸೆಳೆದುಕೊಂಡರು. ಸ್ವಾತಂತ್ರ್ಯಾನಂತರವೂ ಈ ತುಷ್ಟೀಕರಣ ಮುಂದುವರಿದ ಹಿನ್ನೆಲೆ ಇದೇ ಅಲ್ಲದೇ ಮತ್ತೇನು? ಎಲ್ಲಾ ಬಿಡಿ. ಕನರ್ಾಟಕದಲ್ಲಿ ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಬಹುಸಂಖ್ಯಾತರ ತೆರಿಗೆ ಹಣ ಚಚರ್್ ನಿಮರ್ಾಣಕ್ಕೆ, ರಿಪೇರಿಗೆ ಹೋಗುತ್ತಿದೆಯಲ್ಲ. ಪರಿಣಾಮವೇನು? ಬಹುಸಂಖ್ಯಾತರ ಒಂದು ವರ್ಗ ಸದ್ದಿಲ್ಲದೇ ಆ ಮತಗಳತ್ತ ಜಾರುತ್ತಿದೆ. ಮಹಾಪದ್ಮನಂದರು ಯಾವಾಗಲೂ ಇರುತ್ತಾರೆ. ಆದರೆ ಚಾಣಕ್ಯರ ಕೊರತೆ ಮಾತ್ರ ಸದಾ ಎದ್ದು ಕಾಣುತ್ತದೆ ಅಷ್ಟೇ!
ಮಹಾಪದ್ಮನಂದನಿಗೆ ಒಂಭತ್ತು ಮಕ್ಕಳು. ಧನನಂದನೇ ಕೊನೆಯವನು. ಅಷ್ಟು ಜನ ರಾಜಕುಲಕ್ಕೆ ಭೂಷಣವಾದ ಯುದ್ಧ ವಿದ್ಯೆಯನ್ನು ಬಿಟ್ಟು ಬೇರೆಲ್ಲವನ್ನೂ ಜೀಣರ್ಿಸಿಕೊಂಡಿದ್ದರು. ಅವರಿಗೆಲ್ಲ ರಾಜ್ಯದ ಚುಕ್ಕಾಣಿಗಿಂತ ಸಮಯಕ್ಕೆ ಸರಿಯಾಗಿ ಸುಖ ಭೋಗಕ್ಕೆ ಬೇಕಾದ ವ್ಯವಸ್ಥೆ ಇದ್ದರೆ ಸಾಕಿತ್ತು. ತಂದೆಯ ಮರಣಾನಂತರ ಒಬ್ಬೊಬ್ಬರಾಗಿ ಆಳಿದಂತೆ ಕಂಡರೂ ಧನನಂದನ ತೆಕ್ಕೆಗೆ ಮಗಧ ಸಾಮ್ರಾಜ್ಯ ಬಿತ್ತು. ಅಧಿಕಾರದ ಮದ, ಸದಾ ಸುಖ ಬಯಕೆ ಅಪ್ಪನಿಂದ ಬಳುವಳಿಯಾಗಿ ಬಂದ ಮೇಲ್ವರ್ಗದವರ ಮೇಲಿನ ದ್ವೇಷ ಎಲ್ಲವೂ ಹಾಗೆಯೇ ಇತ್ತು. ಇಂತಹ ಬಲಹೀನನನ್ನು ಅಕ್ಕಪಕ್ಕದ ರಾಜ್ಯಗಳು ಮುಗಿಸಿಯೇ ಹಾಕಬೇಕಿತ್ತು. ಆದರೆ ಧನನಂದನ ಮಂತ್ರಿ ಅಮಾತ್ಯ ರಾಕ್ಷಸನ ಬುದ್ಧಿ ಕೌಶಲ, ಯುದ್ಧ ನೈಪುಣ್ಯದಿಂದಾಗಿ ಮಗಧ ಉಳಿಯಿತು.
ಹಾಗಂತ ಕೆಳವರ್ಗದ ವ್ಯಕ್ತಿ ರಾಜನಾಗಬಾರದೆಂದು ರಾಜ್ಯ ಬಯಸಿತ್ತೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಯೋಗ್ಯತೆಯನುಸಾರ ಋಷಿಯಾದ ಮಾತಂಗರು, ಬ್ರಹ್ಮಷರ್ಿಯಾದ ವಿಶ್ವಾಮಿತ್ರರ ಉದಾಹರಣೆಯೇ ಇದೆ. ಬಹಳ ಹಳೆಯದೆನ್ನಿಸಿದರೆ ಧನನಂದನ ಕಿತ್ತೊಗೆದು ಅಧಿಕಾರ ವಶಪಡಿಸಿಕೊಂಡ ಸಾಹಸಿ ಚಂದ್ರಗುಪ್ತ ಮೌರ್ಯನೇನು ಕ್ಷತ್ರಿಯ ಕುಲದವನಲ್ಲ. ಮಹಾನಂದಿಯಿಂದ ಮೂರಾದೇವಿಗೆ ಹುಟ್ಟಿದ ರವಿಗುಪ್ತ ಮೌರ್ಯ ಪಿಪ್ಪಲವನದ ಪ್ರಾಂತ್ಯವನ್ನು ಆಳಿಕೊಂಡು ಮಗಧಕ್ಕೆ ನಿಷ್ಠನಾಗಿದ್ದವ. ಅವನ ಮಗ ಚಂದ್ರಗುಪ್ತ ಮೌರ್ಯ. ನವನಂದರಿಗೂ ಮೌರ್ಯರ ಸಾಮಥ್ರ್ಯ ಕಣ್ಣು ಕುಕ್ಕುತ್ತಲೇ ಇತ್ತು. ಚಂದ್ರಗುಪ್ತ ಒಂದಲ್ಲಾ ಒಂದು ದಿನ ಸಿಂಹಾಸನಕ್ಕೆ ಹತ್ತಿರ ಬಂದೇ ಬಿಡುತ್ತಾನೆಂಬ ಅರಿವಿದ್ದುದರಿಂದಲೇ ರವಿಗುಪ್ತ ಮೌರ್ಯನ ಸಾವಿನ ನಂತರ ಅವನನ್ನು ಕರೆಸಿಕೊಂಡು ಮಗಧ ಸೇನೆಯಲ್ಲಿ ಸಣ್ಣದೊಂದು ಹುದ್ದೆ ಕೊಟ್ಟು ಸುಮ್ಮನಾಗಿಸಿದರು. ಪಿಪ್ಪಲವನದ ರಾಜನಾಗಿ ಮೆರೆಯಬೇಕಿದ್ದ ಚಂದ್ರಗುಪ್ತ ಮಗಧ ಸೇನೆಯಲ್ಲಿ ಸಹಾಯಕನಾಗಿ ದುಡಿಯುತ್ತಿದ್ದ. ಪ್ರತಿಭಟಿಸುವ ಅವಕಾಶವೂ ಇಲ್ಲದೇ ಒಳಗೊಳಗೇ ಕುದಿಯುತ್ತ ಮಗಧ ಸಾಮ್ರಾಜ್ಯದ ಅಧಿಪತಿಯಾಗುವ ಕನಸು ಕಾಣುತ್ತಿದ್ದ.
ಚಂದ್ರಗುಪ್ತ ಬಂದು ಧನನಂದನಲ್ಲಿ ಕೆಲಸಕ್ಕಿದ್ದ ಎನ್ನುವುದನ್ನು ಯಾವ ಇತಿಹಾಸಕಾರರೂ ಅಲ್ಲಗಳೆಯುವುದಿಲ್ಲ. ಆದರೆ ಅಲ್ಲಿಯವರೆಗೂ ಎಲ್ಲಿದ್ದ ಎಂಬುದರಲ್ಲಿ ಅನೇಕ ಗೊಂದಲಗಳಿವೆ. ಬಾಲ್ಯದಲ್ಲಿಯೇ ತನ್ನ ತಂದೆಯನ್ನು ನಂದರ ಮೋಸದಿಂದ ಕಳಕೊಂಡ ಚಂದ್ರಗುಪ್ತ ರಸ್ತೆಯಲ್ಲಿ ಆಡುತ್ತಿರುವಾಗ ತಕ್ಷಶಿಲೆಯ ಪ್ರಾಧ್ಯಾಪಕ ಚಾಣಕ್ಯನ ಕಣ್ಣಿಗೆ ಬಿದ್ದ. ಚಂದ್ರಗುಪ್ತನ ರಾಜಗಾಂಭೀರ್ಯ, ನ್ಯಾಯ ಪದ್ಧತಿ, ತೀಪರ್ು ವಿಶ್ಲೇಷಣೆ ಇವುಗಳಿಂದ ಪ್ರಭಾವಿತನಾಗಿ ಮನೆಯವರನ್ನೊಪ್ಪಿಸಿ ತನ್ನೊಂದಿಗೆ ತಕ್ಷಶಿಲೆಗೆ ಕರೆದೊಯ್ದ. ರಾಜ್ಯಶಾಸ್ತ್ರದ ಅಧ್ಯಯನ ಮಾಡಿಸಿದ. ಪ್ರಜೆಗಳ ಕುರಿತಂತೆ ರಾಜನೊಬ್ಬನಿಗಿರಬೇಕಾದ ಕರ್ತವ್ಯದ ಪರಿಚಯ ಮಾಡಿಸಿಕೊಟ್ಟ. ಅವನು ರಾಜನಾಗಲು ಯೋಗ್ಯನಾಗಿದ್ದಾನೆಂದೆನಿಸಿದಾಗ ಮಾತ್ರ ತಾನು ಅಖಾಡಕ್ಕಿಳಿದು ಪ್ರಜಾಪೀಡಕ ಧನನಂದನ ಅಧಿಕಾರದಿಂದ ಕಿತ್ತೊಗೆಯಲು ನಿಶ್ಚಯಿಸಿದ.

4
ಚಾಣಕ್ಯನ ಯುಗದ ಸೌಂದರ್ಯವೇ ಅದು. ಅಲ್ಲಿ ರಾಜನಾಗುವ ಮುನ್ನ ತರಬೇತಿ ಇತ್ತು. ಯೋಗ್ಯತೆ ಗುರುವಿಗೆ ಖಾತ್ರಿಯಾದ ನಂತರವಷ್ಟೇ ಅಧಿಕಾರ. ಈಗಿನಂತೆ ಪ್ರಜಾರಂಜಕರಲ್ಲದವರೆಲ್ಲ ಬಂದುಕೂಡುವ ಸಿಂಹಾಸನವಾಗಿ ರೂಪಿಸಲು ಚಾಣಕ್ಯ ಸಿದ್ಧನಿರಲಿಲ್ಲ. ಪ್ರತಿಭಟನೆಯೊಂದರ ನೇತೃತ್ವ ವಹಿಸಿದ ಮಾತ್ರಕ್ಕೆ ರಾಜ್ಯವೊಂದರ ಚುಕ್ಕಾಣಿ ಹಿಡಿದು ಬಿಡುವುದು, ಅಪ್ಪ ರಾಜನಾಗಿದ್ದನೆಂಬಷ್ಟಕ್ಕೆ ಮಗನನ್ನೂ ಸಿಂಹಾಸನಾಧೀಶನಾಗಿಸಿಬಿಡುವುದು ಇವೆಲ್ಲಾ ಸುತರಾಂ ಒಪ್ಪುವಂತಹುದಲ್ಲ. ನಾಯಕನಾಗುವವನು ಪ್ರಜೆಗಳ ಹಿತ, ಏಳ್ಗೆಯನ್ನು ಸಾಧಿಸಲು ತನ್ನನ್ನೇ ಅಪರ್ಿಸಿಕೊಳ್ಳಲು ಸಿದ್ಧನಿರಬೇಕು. ಹಗಲು-ರಾತ್ರಿ ರಾಷ್ಟ್ರದ ಅಭ್ಯುದಯಕ್ಕಾಗಿ ಸ್ವಂತ ಸುಖವನ್ನೂ ಮರೆತು ಚಿಂತಿಸುವವನಾಗಿರಬೇಕು. ಮಂತ್ರಿ ಮಂಡಲದ ಸಲಹೆ ಪಡೆದು, ಅಧಿಕಾರಿ ವರ್ಗವನ್ನು ಸ್ಫೂತರ್ಿಯಿಂದ ದುಡಿಯುವಂತೆ ಮಾಡುವ ಚಾಕ ಚಕ್ಯತೆಯುಳ್ಳವನಾಗಿರಬೇಕು. ಅಂಥವನು ಮಾತ್ರ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಯೋಗ್ಯ. ರಾಜನಾಗಬೇಕೆಂಬ ಬಯಕೆ ಇರುವವನು ಇದನ್ನು ಅಧ್ಯಯನ ಮಾಡಲು ಉತ್ಸುಕನಾಗಲೇಬೇಕು.
ಚಂದ್ರಗುಪ್ತ ಅಧ್ಯಯನ ಮುಗಿಸಿಯೇ ಮಗಧಕ್ಕೆ ಮರಳಿ ಬಂದವ. ಆದರೆ ನಂದರು ಗೌರವ ಕೊಡದೇ ಅವನನ್ನು ಅತ್ಯಂತ ಸಾಮಾನ್ಯ ಕೆಲಸಕ್ಕೆ ನೇಮಿಸಿ ಅವಮಾನಿಸಿದರು. ಅದೂ ಒಳ್ಳೆಯದೇ ಆಯ್ತೆನ್ನಿ. ಚಂದ್ರಗುಪ್ತ ಜನರ ಕಣ್ಣಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಮಹಾಪದ್ಮನಂದನ ಮೊಮ್ಮಗನಾಗಿ ರಾಜ್ಯದ ಗದ್ದುಗೆ ಏರಬೇಕಿದ್ದ ಸಮರ್ಥನೊಬ್ಬನಿಗೆ ಈ ಗತಿ ಬಂತಲ್ಲ ಎಂಬ ಕರುಣೆ, ಸಹಾನುಭೂತಿ ಅವನ ಬೆನ್ನಿಗಿತ್ತು. ಸೂಕ್ತ ಸಮಯಕ್ಕೆ ಅದು ಫಲ ಕೊಡುವುದು ಖಾತ್ರಿ ಎಂಬುದೂ ಅರಿವಿತ್ತು! ಅದೂ ಆಚಾರ್ಯ ಚಾಣಕ್ಯರ ಕುಟಿಲ ನೀತಿಗಳಲ್ಲೊಂದು.
ಹೌದು. ಆ ಕಾರಣಕ್ಕೇ ಜನ ಅವರನ್ನು ಕೌಟಿಲ್ಯ ಎಂದು ಕರೆದಿರಬೇಕು. ವಾಸ್ತವವಾಗಿ ಕುಟಲ ಗೋತ್ರದಲ್ಲಿ ಹುಟ್ಟಿದವನಾದ್ದರಿಂದ ಕೌಟಲನೆಂಬ ಹೆಸರು ಸರಿ. ಜನರ ಮಾತಿನಲ್ಲಿ ಅದು ಹಾಗಾಗಿರಬಹುದು. ತಂದೆ ಆಚಾರ್ಯ ಚಣಕರಾದ್ದರಿಂದ ಚಾಣಕ್ಯನೆಂಬ ಹೆಸರೂ ಅವರಿಗಿತ್ತು. ಇನ್ನು ವಿಷ್ಣುವಿನ ಭಕ್ತಿಯ ಸಂಕೇತವಾಗಿ ಮನೆಯಲ್ಲಿ ವಿಷ್ಣುಗುಪ್ತ ಎಂಬ ಹೆಸರೂ ಇತ್ತು. ತಕ್ಷಶಿಲೆ ಆಗಿನ ಕಾಲದ ಪ್ರಸಿದ್ಧ ವಿಶ್ವವಿದ್ಯಾಲಯ. ಅಲ್ಲಿ ಆಚಾರ್ಯ ಚಣಕರೂ ಅಧ್ಯಾಪಕರಾಗಿದ್ದರು; ಅವರ ಪುತ್ರ ಚಾಣಕ್ಯನೂ ಕೂಡ. ಅವರ ಕಥೆಗಳನ್ನು ಓದಿದರೆ ಅವರು ಬಲು ಮುಂಗೋಪಿ ಎನಿಸುವುದು ಸಹಜ. ಕಠೋರವಾದ ದಂಡನೀತಿ ಶಾಸ್ತ್ರದ ರಚನೆ ಮಾಡಿರುವ ವ್ಯಕ್ತಿ ನಿತ್ಯ ಜೀವನದಲ್ಲೂ ಸದಾ ಹುಬ್ಬುಗಂಟಿಕ್ಕಿಕೊಂಡಿರುವವನೇ ಆಗಿರಬೇಕೆಂದು ಭಾವಿಸುವುದಾದರೆ ನೆನಪಿಡಿ, ಕಾಮಸೂತ್ರ ಬರೆದ ವಾತ್ಸಾಯನನೂ ಚಾಣಕ್ಯನೇ ಎಂಬ ಅಭಿಪ್ರಾಯವೂ ಇದೆ!
ಬಿಂಬಸಾರ, ಅಜಾತ ಶತ್ರುಗಳ ಕಾಲಕ್ಕೆ ಹುಟ್ಟಿಕೊಂಡ ಬೌದ್ಧಧರ್ಮ ನಿಧಾನವಾಗಿ ಉತ್ತರ ಭಾರತವನ್ನೆಲ್ಲಾ ಆಕ್ರಮಿಸಿಕೊಳ್ಳಲಾರಂಭಿಸಿತ್ತು. ಅದರೊಟ್ಟಿಗೆ ಸಮಸಮಕ್ಕೆ ಕಾದಾಡುತ್ತ ಜೈನ ಧರ್ಮವೂ ಹರಡಿಕೊಳ್ಳಲಾರಂಭಿಸಿತು. ಇವೆರಡೂ ನೇರವಾಗಿ ಘಾಸಿಗೊಳಿಸಿದ್ದು ವೈದಿಕ ಧರ್ಮವನ್ನೇ. ಬುದ್ಧ ಪಂಥವಂತೂ ಬುದ್ಧನ ಕಾಲಾನಂತರ ವಿಸ್ತಾರಗೊಳ್ಳುವ ಹಂಬಲಕ್ಕೆ ಬಲಿ ಬಿತ್ತು. ಭಿಕ್ಷುಗಳ ಸಂಖ್ಯೆ ಹೆಚ್ಚುವುದರಿಂದ ರಾಷ್ಟ್ರದ ಏಳ್ಗೆಗೆ ಲಾಭವಿಲ್ಲ ಎಂಬುದನ್ನು ಯಾರೂ ಅಥರ್ೈಸಿಕೊಳ್ಳಲೇ ಇಲ್ಲ. ಉಕ್ಕಿ ಬರುವ ಆಸೆಯನ್ನು ನಿಯಂತ್ರಿಸಿಕೊಂಡಂತೆ ಮಾಡಿ ಆನಂತರ ಅನಾಚಾರದೆಡೆಗೆ ತಿರುಗುವ ಸ್ಥಿತಿ ಅನೇಕರಿಗೆ ಬಂತು. ವಿಹಾರಗಳು ಅಕ್ಷರಶಃ ವಿಹಾರ ಕೇಂದ್ರಗಳಾಗಿಬಿಟ್ಟವು. ಸ್ವಾಮಿ ವಿವೇಕಾನಂದರೂ ಈ ಕುರಿತಂತೆ ಗಮನ ಸೆಳೆದು ಬೌದ್ಧ ಧರ್ಮದ ಅವನತಿಗೆ ಕಾರಣವಾದ ಸಂಗತಿಗಳನ್ನು ವಿಶ್ಲೇಷಿಸುತ್ತಾರೆ.
ಗುರುವಿನೊಡನೆ ಭಿಕ್ಷುವಾಗಿ ಹೊರಟು ಸದಾ ಪರತತ್ತ್ವದ ಚಿಂತನೆ ಮಾಡುವುದು, ರಾಜಾಶ್ರಯ ಇದ್ದಲ್ಲಿ ಭೋಜನ ಪಡೆದು ಹಾಯಾಗಿರಿವುದು ಇಷ್ಟೇ ಕೆಲಸವಾಗಿಬಿಟ್ಟಿತ್ತು. ಇದೊಂಥರಾ ಜನ ಕಟ್ಟಿದ ತೆರಿಗೆಯಲ್ಲಿ ಉಚಿತ ಅಕ್ಕಿ, ಟಿವಿ, ಫ್ರಿಜ್ಜು ಕೊಟ್ಟು ದುಡಿಯಬಲ್ಲವರನ್ನು ಮೈಗಳ್ಳರಾಗಿಸುವ ಇಂದಿನ ವ್ಯವಸ್ಥೆಯಂತೆಯೇ. ಬಹುತೇಕರಿಗೆ ಈ ಮಾರ್ಗ ಸುಲಭವೆನಿಸಿದ್ದರಿಂದ ಅತ್ತ ಒಲಿದರು. ಅವರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಭ್ಯವಾಗಿ ಬದುಕುವವರಿಗೆ ಕಷ್ಟವಾಗಲಾರಂಭಿಸಿತು. ಬಹುಸಂಖ್ಯೆ ಆ ದಿಕ್ಕಿನಲ್ಲಿಯೇ ಇದ್ದುದರಿಂದ ರಾಜನೂ ಬಾಯ್ಮುಚ್ಚಿಕೊಂಡೇ ಆಡಳಿತ ನಡೆಸುತ್ತಿದ್ದ. ವೈದಿಕ ಮತಾನುಯಾಯಿಗಳಿಗೆ ಸಾಕಷ್ಟು ಕಿರುಕುಳವೂ ಆಗಲಾರಂಭಿಸಿತ್ತು. ದುಡಿದು ತೆರಿಗೆ ಕಟ್ಟುವವರೊಬ್ಬರಾದರೆ ದುಡಿಯದೇ ಅದನ್ನು ಅನುಭವಿಸುವವರು ಮತ್ತಷ್ಟು ಜನ ಎಂಬುದೇ ಅನೇಕರನ್ನು ಕೆರಳಿಸಿತ್ತು. ತುಷ್ಟೀಕರಣದ ನೀತಿ ಇಂದಿನದಲ್ಲ ಅದು ಅವತ್ತೂ ಇತ್ತು.

1
ಜನರಿಗೆ ಸೂಕ್ತ ವೇದಿಕೆ ಮತ್ತು ಸಮರ್ಥ ನಾಯಕ ಬೇಕಿತ್ತು. ಪ್ರತಿಯೊಬ್ಬರ ಹೃದಯ ವೇದನೆ ಚಾಣಕ್ಯರ ಹೃದಯಕ್ಕೆ ಬಡಿಯುತ್ತಲೇ ಇತ್ತು. ರಾಷ್ಟ್ರವನ್ನು ಪ್ರಗತಿ ವಿಮುಖಗೊಳಿಸುವ ಚಿಂತನೆಗಳಿಂದ ದೂರಗೊಳಿಸಿ ಅದನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಓಡಿಸುವ ತವಕ ಅವರಿಗಿತ್ತು. ವೈದಿಕ ಧರ್ಮ ಕಳೆದುಕೊಂಡ ಘನತೆಯನ್ನು ಮರಳಿ ತಂದುಕೊಟ್ಟು ವಿಶ್ವ ಪೀಠದಲ್ಲಿ ಮತ್ತೆ ಭಾರತ ಆರೂಢವಾಗುವಂತೆ ಮಾಡುವ ಹುಚ್ಚು ನಶೆ ಅವರಿಗೆ ಏರುತ್ತಲೇ ಇತ್ತು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಅಷ್ಟೇ. ಅಗೋ! ಆ ಸಮಯವೂ ಬಂತು.
ಗಾಂಧಾರದ ರಾಜನ ಪಕ್ಷಪಾತ ನೀತಿಯಿಂದ ಬೇಸತ್ತು ತಕ್ಷಶಿಲೆಯನ್ನು ಬಿಟ್ಟು ಹೊರಟಿದ್ದರು ಆಚಾರ್ಯ ಚಾಣಕ್ಯ. ಅವರ ಕಾಲ್ಗಳು ಮಗಧದ ರಾಜಧಾನಿ ಪಾಟಲಿಪುತ್ರದೆಡೆಗೆ ಸಾಗಿದ್ದವು. ಹರಿದು ಛಿದ್ರಗೊಂಡಿರುವ ರಾಜ್ಯಗಳನ್ನೆಲ್ಲ ಒಂದು ಮಾಡಿ ಅಖಂಡ ಆಯರ್ಾವರ್ತ ಮಾಡಬೇಕೆಂಬ ಚಿಂತನೆ ತಲೆಯೊಳಗೆ ಕೆಲಸ ಮಾಡುತ್ತಲೇ ಇತ್ತು. ಸ್ವಾರ್ಥ ಭಾವನೆಯಿಂದ ರಾಷ್ಟ್ರ ಕಾಳಜಿ ಮರೆತ ರಾಜರುಗಳನ್ನು ಮಟ್ಟ ಹಾಕಿ ಸಮಾಜದಲ್ಲಿ ಮತ್ತೊಮ್ಮೆ ಕ್ರಿಯಾ ಶೀಲತೆಯನ್ನು ತರಬೇಕೆಂಬ ತುಡಿತ ಅವರನ್ನು ಹಿಂಡುತ್ತಿತ್ತು. ದಾರಿಯುದ್ದಕ್ಕೂ ಸನಾತನ ಧರ್ಮಕ್ಕೆ ಎರಗಿರುವ ದುಃಸ್ಥಿತಿಯಿಂದ ಅವರ ಮನಸ್ಸು ನೊಂದಿತ್ತು. ಭಾರವಾದ ಹೃದಯದಿಂದಲೇ ಆಚಾರ್ಯರು ಪಾಟಲಿಪುತ್ರ ತಲುಪಿದರು.
ಪಾಟಲೀಪುತ್ರದಲ್ಲಿನ ಆಡಳಿತದ ದುದರ್ೆಶೆ ನೋಡಿದ ಆಚಾರ್ಯರು ಬದಲಾವಣೆಯ ಪರ್ವದ ತಂಪು ಗಾಳಿಯನ್ನು ಆಸ್ವಾದಿಸಲಾರಂಭಿಸಿದರು. ಭವಿಷ್ಯದ ಕಲ್ಪನೆಗಳು ಗರಿಬಿಚ್ಚಿದವು. ಆಹ್ಲಾದವೆನಿಸಿತು. ದೂರದ ಪ್ರಯಾಣದಿಂದ ಹಸಿವೂ ಶುರುವಾಗಿತ್ತು. ಪಕ್ಕದಲ್ಲೇ ಇದ್ದ ಧರ್ಮಛತ್ರ ಹೊಕ್ಕಿದರು.
ಮಹತ್ವದ ಬದಲಾವಣೆಗೆ ವೇದಿಕೆ ಸಜ್ಜಾಯಿತು.

4 thoughts on “ಚಂದ್ರಗುಪ್ತನ ಮಹಾ ಸಾಮ್ರಾಜ್ಯದ ಹಿಂದೆ ಚಾಣಕ್ಯ!

  1. Why did Chandragupta maurya embrace Jainism and led his last days in shravanabelagola following bhadra bahu… Instead of following his guru chanakya and vaidic religion. Hence u r giving a tinted view of history to suit ur thinking. No doubt chanakya helped Chandragupta maurya ascend the throne but he had his own reasons for it too…. History suggests Chandragupta maurya was a shepherd boy…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s