ಭಾರತವನ್ನು ಗೆಲ್ಲೋದು ಬೇರೆಯವರನ್ನು ಗೆದ್ದಷ್ಟು ಸುಲಭವಲ್ಲ!!

ಭಾರತವನ್ನು ಗೆಲ್ಲೋದು ಬೇರೆಯವರನ್ನು ಗೆದ್ದಷ್ಟು ಸುಲಭವಲ್ಲ!!

ಶಿಯಾ-ಸುನ್ನಿ ಅನ್ನೋದು ಸ್ಥೂಲ ವಿಂಗಡಣೆಯಷ್ಟೇ. ಇವೆರಡರಲ್ಲೂ ಚಿಂತನೆಗಳ ಮತ್ತು ಅದನ್ನು ಪ್ರತಿಪಾದಿಸಿದ ಮಹನೀಯರ ಆಧಾರದ ಮೇಲೆ ಅನೇಕ ಕವಲುಗಳು ಒಡೆದಿವೆ. ಜಗತ್ತನ್ನು ಬಿಡಿ ಭಾರತದಲ್ಲಿಯೇ ತಮ್ಮನ್ನು ತಾವು ಹನಫಿ, ಶಫಿ, ಮಲಿಕಿ, ಹಂಬಲಿ, ದೇವಬಂದಿ, ಬರೇಲ್ವಿ, ಅಹ್ಲೆ ಹದಿತ್, ಸಲಫಿ, ಸಖಾಫಿ ಹೀಗೆಲ್ಲಾ ಪರಿಚಯಿಸಿಕೊಳ್ಳುವವರಿದ್ದಾರೆ. ಇನ್ನು ಜಗತ್ತಿನ ಕಥೆ ಹೇಗಿರಬೇಕು. ಫ್ರವಾದಿಯವರ ವಿರೋಧದ ನಡುವೆಯೂ ಇಷ್ಟೊಂದು ಕವಲುಗಳಾಗುವುದರ ಹಿಂದೆ ಒಂದು ಕಾರಣವಿದೆ.

15C78DA7-14B9-4DD2-9178-55ABA97F5425

ಒಂದು ಮಹತ್ವದ ವಿಚಾರದ ಜಾಡು ಹಿಡಿದು ಮಿತ್ರನೊಂದಿಗೆ ಕಾಶ್ಮೀರದ ಮಸೀದಿಯೊಂದಕ್ಕೆ ಹೋಗಿದ್ದೆ. ಬಾಯ್ತಪ್ಪಿನಿಂದ ಅಲ್ಲಿನ ಉಲೆಮ್ಮಾಗಳಲ್ಲೊಬ್ಬರು ಸಣ್ಣದೊಂದು ಸುಳಿವು ಬಿಟ್ಟುಕೊಟ್ಟರು. ಅದನ್ನು ಆಧರಿಸಿ, ಟ್ಯಾಕ್ಸಿ ಡ್ರೈವರನನ್ನು ಪುಸಲಾಯಿಸಿ ಆ ಜಾಗ ತಲುಪಿದರೆ ನಮ್ಮನ್ನು ಅನುಮಾನದಿಂದ ನೋಡುವವರೇ ಎಲ್ಲ. ಆ ಮನೆಯ ಹಿರಿಯರು ಬಂದು ನಮ್ಮೊಡನೆ ಮಾತನಾಡಿಸಿ ನಿರಾಳವಾದರು. ‘ಕಾಶ್ಮೀರದಲ್ಲಿ ಮುಸಲ್ಮಾನರಿಗೇಕೆ ಇಷ್ಟೊಂದು ಭಯ?’ ನನ್ನ ಕಂಗಳಲ್ಲಿನ ಪ್ರಶ್ನೆಯನ್ನು ಅವರು ಓದಿಬಿಟ್ಟಿದ್ದರು. ‘ನಮ್ಮನ್ನು ಮುಸಲ್ಮಾನರೆಂದು ಇವರ್ಯಾರೂ ಒಪ್ಪುವುದೇ ಇಲ್ಲ’ ಅಂತ ಅವರು ಹೇಳಿದಾಗ ನಾನು ಗಾಬರಿಯಾಗಿಬಿಟ್ಟೆ.
ಹೌದು. ಅದು ಕಾದಿಯಾನಿ ಪಂಥ. ಅಹ್ಮದಿಯಾ ಅಂತಾನೂ ಕರೀತಾರೆ. ಜಗತ್ತಿನ ಎಲ್ಲೆಡೆ ಈ ಜನಾಂಗ ಅಲ್ಪಸಂಖ್ಯಾತವೇ. ಒಂದೋ ಅವರು ತಮ್ಮ ಪಂಥದ ಗುರುತು ಎಲ್ಲಿಯೂ ಬಿಟ್ಟು ಕೊಡದೇ ಬದುಕಿಬಿಡುತ್ತಾರೆ ಅಥವಾ ತಾವೂ ಪ್ರಮುಖ ಪಂಥಕ್ಕೆ ಸೇರಿದವರೆಂದು ನಾಟಕ ಮಾಡುತ್ತಾರೆ. ಹಾಗಂತ ಅವರೂ ದಿನಕ್ಕೈದು ಬಾರಿ ನಮಾಜು ಮಾಡುತ್ತಾರೆ, ಹಜ್ ಯಾತ್ರೆಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ, ರೋಜಾ, ಝಕಾತ್ ಎಲ್ಲವನ್ನೂ ಅನುಸರಿಸುತ್ತಾರೆ. ಆದರೂ…
ಈ ವಿಚಾರ ತಲೆಗೆ ಹೊಕ್ಕ ನಂತರ ನನ್ನೆಲ್ಲಾ ಮಿತ್ರರನ್ನು ಪ್ರಶ್ನಿಸಿ, ಓದಿಕೊಂಡ ಮೇಲೆ ಕಣ್ಣೆದುರಿನ ಪೊರೆ ಕಳಚಿದ್ದು. ಮುಸಲ್ಮಾನರಲ್ಲಿ ಭಿನ್ನ ಭಿನ್ನ ವಿಚಾರಧಾರೆಯ ನೂರೆಂಟು ಪಂಗಡಗಳಿವೆ. ಕೆಲವು ಪಂಗಡಗಳು ಒಂದಕ್ಕೊಂದು ಪೂರಕವಾದರೆ ಇನ್ನೊಂದಷ್ಟು ಬದ್ಧ ವೈರಿಗಳು. ಸ್ಥೂಲವಾಗಿ ಶಿಯಾ ಮತ್ತು ಸುನ್ನಿಗಳು ಪ್ರಮುಖ ಎರಡು ಮಹಾ ಪ್ರವಾಹಗಳು. ಪ್ರವಾದಿ ಮಹಮ್ಮದರು ಕಾಲವಾದ ನಂತರ ಅವರ ವಾರಸುದಾರ ಅಥವಾ ‘ಖಲೀಫಾ’ ಆಗುವ ಕುರಿತಂತೆ ಉಂಟಾದ ಗೊಂದಲದಲ್ಲಿ ಈ ಎರಡು ಪಂಗಡಗಳು ಉದ್ಭವಿಸಿದವು. ಪ್ರವಾದಿಯವರಿಗೆ ಗಂಡು ಸಂತಾನವಿರಲಿಲ್ಲ. ಹೀಗಾಗಿ ಅವರ ಸೋದರ ಸಂಬಂಧಿ ಮತ್ತು ಮಗಳಾದ ಫಾತಿಮಾಳನ್ನು ವರಿಸಿದ ಅಲಿಯವರ ಮೇಲೆ ಬಲುವಾದ ಪ್ರೀತಿಯಿತ್ತು. ಅವರೇ ಮುಂದಿನ ‘ಖಲೀಫಾ’ ಆಗಬೇಕೆಂದು ಕೆಲವರ ಇಚ್ಛೆಯೂ ಇತ್ತು. ಹಾಗಾಗಲಿಲ್ಲ. ಪ್ರವಾದಿಯವರು ತೀರಿಕೊಂಡ ಮೇಲೆ ಸಭೆ ಸೇರಿದ ಕೆಲವರು ಅವರ ಮಾವ ಅಬೂಬಕರ್ರನ್ನು ಖಲೀಫಾ ಆಗಿ ಆರಿಸಿದರು. ತಮ್ಮ ಸಾವಿಗೂ ಮುನ್ನವೇ ಅಬೂಬಕರ್ ತನ್ನ ಪ್ರಮುಖ ಅನುಯಾಯಿ ಮತ್ತು ಬೆಂಬಲಿಗನಾಗಿದ್ದ ಒಮರ್ರನ್ನು ಖಲೀಫಾ ಎಂದು ಘೋಷಿಸಿದ. ಹತ್ತು ವರ್ಷಗಳ ರಾಜ್ಯಭಾರ ಮಾಡಿದ ಒಮರ್ ಕೊನೆಗೆ ಹತ್ಯೆಯಾಗಿಹೋದರು. ಆನಂತರ ಖಲೀಫಾ ಆಗಿ ಅಧಿಕಾರಕ್ಕೇರಿದ್ದು ಉತ್ತಮನ್. ಆತನ ಆಯ್ಕೆಯ ವಿರುದ್ಧ ಗೊಂದಲಗಳೇರ್ಪಟ್ಟು ಕದನಗಳೂ ಆಗಿಹೋದವು. ಕೊನೆಗೆ ಉತ್ತಮನ್ ಹತ್ಯೆಯೊಂದಿಗೆ ಮದೀನಾದ ಮುಸಲ್ಮಾನರು ನಾಲ್ಕನೇ ಖಲೀಫಾ ಆಗಿ ಪದವಿಗೇರುವಂತೆ ಪ್ರವಾದಿಯವರ ಅಳಿಯ ಅಲಿಯವರನ್ನು ಕೇಳಿಕೊಂಡರು. ಇರಾಕ್ನ ‘ಕುಫಾ’ವನ್ನು ರಾಜಧಾನಿಯಾಗಿಸಿಕೊಂಡು ಅಲಿ ಹೆಚ್ಚೆಂದರೆ ಐದು ವರ್ಷ ಆಳಿರಬಹುದಷ್ಟೇ. ಅಷ್ಟರಲ್ಲೂ ಅವರ ವಿರುದ್ಧ ಅನೇಕ ಕದನಗಳು ಜರುಗಿದವು. ಕೊನೆಗೆ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದ ಅಲಿಯವರನ್ನು ಹತ್ಯೆಗೈದು ಅವರ ಶತ್ರು ಮುವೈಯ್ಯಾ ಖಲೀಫಾ ಆಗಿ ಅಧಿಕಾರ ಸ್ವೀಕರಿಸಿದರು. ಆಮೇಲಿನ ಕಥೆ ಆಂತರಿಕ ಸಂಘರ್ಷದ್ದೇ. ಅಲಿಯ ಹಿರಿಯ ಮಗ ಖಲೀಫಾ ವಿರೋಧಿ ಗುಂಪಿನ ನಾಯಕನಾದ. ಆತನ ಹತ್ಯೆಯ ನಂತರ ಅವನ ಕಿರಿಯ ಸೋದರ ಹುಸೇನ್ ಮುಂಚೂಣಿಗೆ ಬಂದ. ಕಬರ್ಾಲಾದ ಭೀಕರ ಯುದ್ಧದಲ್ಲಿ ಆತನೂ ಸೇರಿದಂತೆ ಅವನ ಅನೇಕ ಅನುಯಾಯಿಗಳು ಹುತಾತ್ಮರಾದರು. ಅಲ್ಲಿಂದಾಚೆಗೆ ಎರಡು ಪ್ರತ್ಯೇಕ ಸೀಳುಗಳು ಬೆಳಕೊಂಡು ಬಂದೇ ಇವೆ. ಅಬೂಬಕರ್ರಿಂದ ಪ್ರಣೀತ ಖಲೀಫಾ ಪರಂಪರೆಯನ್ನು ಒಪ್ಪಿದವರು ಸುನ್ನಿಗಳೆನಿಸಿಕೊಂಡರೆ ಅಲಿಯವರನ್ನೇ ಮೊದಲ ಖಲೀಫಾ ಎಂದು ಗಣಿಸುವ ಮುಸಲ್ಮಾನರು ಶಿಯಾಗಳಾದರು. ಕಬರ್ಾಲಾದ ಯುದ್ಧದ ನಂತರ ಅವರ ವೈರತ್ವ ಶಮನವಾಗುವುದಿರಲಿ, ಅದು ದಿನೇ-ದಿನೇ ಹೆಚ್ಚುತ್ತಲೇ ಹೋಯಿತು. ಇಂದಂತೂ ಒಬ್ಬರ ಪ್ರಭುತ್ವವನ್ನು ಮತ್ತೊಬ್ಬರು ಒಪ್ಪಿಕೊಳ್ಳುವುದು ಬಿಡಿ, ಸಹಿಸಿಕೊಳ್ಳುವುದೂ ಇಲ್ಲ!

SunniShiaedited
ಈ ವಿಚಾರ ನಿಮಗೆ ಸರಿಯಾಗಿ ಅರಿವಾಗಬೇಕೆಂದರೆ ಒಮ್ಮೆ ಕಾಶ್ಮೀರ ಪ್ರವಾಸ ಮಾಡಬೇಕು. ಇಡಿಯ ಕಾಶ್ಮೀರ ಮೇಲ್ನೋಟಕ್ಕೆ ಮೂರು ಭಾಗ, ಹಿಂದೂ ಬಾಹುಳ್ಯದ ಜಮ್ಮು, ಮುಸಲ್ಮಾನ್ ಬಾಹುಳ್ಯದ ಕಾಶ್ಮೀರ ಕಣಿವೆ ಮತ್ತು ಬುದ್ಧಾನುಯಾಯಿಗಳ ಲಡಾಖ್. ಆದರೆ ಮುಸಲ್ಮಾನರ ದೃಷ್ಟಿಯಿಂದಲೇ ನೋಡಿದರೆ ಅಲ್ಲಿ ಎರಡು ವಿಭಾಗವಿದೆ. ಕಣಿವೆಯ ತುಂಬಾ ಸುನ್ನಿಗಳ ದಬರ್ಾರು, ಸೋನ್ ಮಾಗರ್್ ದಾಟಿದೊಡನೆ ಶಿಯಾಗಳ ಕಾರುಬಾರು. ಕಾಗರ್ಿಲ್ ಇರೋದು ಶಿಯಾಗಳ ನಡುವೆ. ಈಗ ಒಟ್ಟಾರೆ ಚಿತ್ರಣ ಕಣ್ಮುಂದೆ ತಂದುಕೊಳ್ಳಿ. ಪಾಕೀಸ್ತಾನದಲ್ಲಿ ಬಹುಸಂಖ್ಯಾತರು ಸುನ್ನಿಗಳೇ. ಅದಕ್ಕೇ ಕಣಿವೆಯ ಜನ ಯಾವಾಗಲೂ ಭಾರತ ವಿರೋಧಿ ಪಾಕೀ ಪರ ವಿಚಾರಧಾರೆಯವರು. ಸೈನಿಕರ ಮೇಲೆ ಕಲ್ಲಿನ ದಾಳಿಯಾಗೋದು ಇಲ್ಲಿಯೇ. ಇಲ್ಲಿಂದಲೇ ಸೈನ್ಯವನ್ನು ತೆಗೆಯಬೇಕೆಂದು ಪಿಡಿಪಿ ಗಲಾಟೆ ಮಾಡುತ್ತಿರೋದು. ಆದರೆ ಕಾಗರ್ಿಲ್ ಭಾಗ ಹಾಗಿಲ್ಲ. ಇಲ್ಲಿನ ಮುಸಲ್ಮಾನರಿಗೂ ಭಾರತೀಯ ಸೈನಿಕರಿಗೂ ಅವಿನಾಭಾವ ನಂಟು. ಪಾಕೀಸ್ತಾನದ ದಾಳಿ 1999ರಲ್ಲಿ ಆದಾಗ ಸೈನ್ಯದೊಂದಿಗೆ ಬೆಂಬಲಕ್ಕೆ ನಿಂತಿದ್ದ ಜನಾಂಗ ಇದು. ಅಷ್ಟೇ ಅಲ್ಲ. ದಂಪತಿಗಳಿಬ್ಬರು ಶಸ್ತ್ರಾಸ್ತ್ರಗಳನ್ನು ನಮ್ಮ ಸೈನಿಕರಿಗೆ ಒಯ್ದುಕೊಡುವಾಗ ಗುಂಡೇಟಿಗೆ ಬಲಿಯಾಗಿ ತೋಲೋಲಿಂಗ್ ಭೂಮಿಯಲ್ಲಿ ಗೌರವಕ್ಕೂ ಪಾತ್ರರಾಗಿದ್ದಾರೆ. ಕಾಗರ್ಿಲ್ ಯುದ್ಧದ ಹೊತ್ತಲ್ಲಿ ಮಾಡಿದ ಈ ಕೆಲಸಕ್ಕೆ ಕೊಟ್ಟ ಸಂಬಳವನ್ನೂ ನಿರಾಕರಿಸಿದ ಜನಾಂಗದವರಿವರು! ಸೈನ್ಯವೂ ಕೂಡ ಸದ್ಭಾವನಾ ಹೆಸರಲ್ಲಿ ಇವರ ನಡುವೆ ಬಲು ತೀವ್ರವಾಗಿ ಕೆಲಸ ಮಾಡುತ್ತಿದೆ. ಕಾಗರ್ಿಲ್ ಪಟ್ಟಣದಲ್ಲಿ ನನ್ನೊಂದಿಗೆ ಒಂದಿಡೀ ದಿನ ಇದ್ದ ಪತ್ರಕರ್ತನನ್ನು ನಾನೇ ಕೇಳಿದ್ದೆ ‘ಈ ನಿಮ್ಮ ಭಾರತ ಪ್ರೇಮ ಪಾಕೀಸ್ತಾನದ ವಿರೋಧದಿಂದ ಹುಟ್ಟಿದ್ದಾ?’ ಅಂತ. ಆತ ವ್ಯಾವಹಾರಿಕವಾದ ನಗೆ ನಕ್ಕು ‘ಶಿಯಾಗಳಿಗೆ ಭಾರತದಲ್ಲಿರುವಷ್ಟು ಭದ್ರತೆ ಮತ್ತೆಲ್ಲೂ ಇಲ್ಲ’ ಅಂದ. ನಿಜವೇ. ಒಟ್ಟಾರೆ ಜಗತ್ತಿನಲ್ಲಿ ಮುಸಲ್ಮಾನರ ಸಂಖ್ಯೆಯಲ್ಲಿ ಶೇಕಡಾ ಹತ್ತೋ ಹನ್ನೆರಡೋ ಇರೋ ಈ ಜನರಿಗೆ ಭಾರತಪ್ರೇಮ ಅದೆಷ್ಟಿದೆಯೋ ಗೊತ್ತಿಲ್ಲ, ಪಾಕೀಸ್ತಾನ ಮತ್ತು ಅರಬ್ ರಾಷ್ಟ್ರಗಳೊಂದಿಗಿನ ಪ್ರೇಮಗಳು ಇಲ್ಲವೇ ಇಲ್ಲ! ಇದು ಒಂದೂವರೆ ಸಾವಿರ ವರ್ಷಗಳ ಹಿಂದಿನ ಕಬರ್ಾಲಾ ಯುದ್ಧದ ಪರಿಣಾಮ.
ಐಎಸ್ಐ ಈ ಭೇದವನ್ನು ಅರಿತೂ ಕಾಗರ್ಿಲ್ನಲ್ಲಿ ಸಾಹಸ ಮಾಡಿತು. ಸೋತು ಹೋಯಿತು. ತನ್ನೆಲ್ಲಾ ಜಾಲವನ್ನು ಬಳಸಿಯೂ ಈ ಜನರನ್ನು ತನ್ನೆಡೆಗೆ ಸೆಳೆಯುವಲ್ಲಿ ಅದು ಸೋತಿದೆ. ಅದಕ್ಕೇ ಅವರನ್ನು ಹಿಂದೂ ವಿರೋಧಿಗಳನ್ನಾಗಿಸಿ ಕೊನೆಯ ಪಕ್ಷ ಅಲ್ಲಲ್ಲಿ ಸ್ಫೋಟ ನಡೆಸುವಲ್ಲಿ ಸಹಾಯಕರಾದರೆ ಸಾಕೆಂದು ಪ್ರಯತ್ನ ಹಾಕುತ್ತಲೇ ಇದೆ.
ಅಂದಹಾಗೆ ಶಿಯಾ-ಸುನ್ನಿ ಅನ್ನೋದು ಸ್ಥೂಲ ವಿಂಗಡಣೆಯಷ್ಟೇ. ಇವೆರಡರಲ್ಲೂ ಚಿಂತನೆಗಳ ಮತ್ತು ಅದನ್ನು ಪ್ರತಿಪಾದಿಸಿದ ಮಹನೀಯರ ಆಧಾರದ ಮೇಲೆ ಅನೇಕ ಕವಲುಗಳು ಒಡೆದಿವೆ. ಜಗತ್ತನ್ನು ಬಿಡಿ ಭಾರತದಲ್ಲಿಯೇ ತಮ್ಮನ್ನು ತಾವು ಹನಫಿ, ಶಫಿ, ಮಲಿಕಿ, ಹಂಬಲಿ, ದೇವಬಂದಿ, ಬರೇಲ್ವಿ, ಅಹ್ಲೆ ಹದಿತ್, ಸಲಫಿ, ಸಖಾಫಿ ಹೀಗೆಲ್ಲಾ ಪರಿಚಯಿಸಿಕೊಳ್ಳುವವರಿದ್ದಾರೆ. ಇನ್ನು ಜಗತ್ತಿನ ಕಥೆ ಹೇಗಿರಬೇಕು. ಫ್ರವಾದಿಯವರ ವಿರೋಧದ ನಡುವೆಯೂ ಇಷ್ಟೊಂದು ಕವಲುಗಳಾಗುವುದರ ಹಿಂದೆ ಒಂದು ಕಾರಣವಿದೆ.
ಪವಿತ್ರ ಗ್ರಂಥ ಕುರಾನ್ ಮತ್ತು ಹದಿತ್ಗಳನ್ನು ಪಂಡಿತರು ಭಿನ್ನಭಿನ್ನವಾಗಿ ವ್ಯಾಖ್ಯಾನಿಸಿ ದಿನನಿತ್ಯದ ಬದುಕಿಗೆ ಅಳವಡಿಸುವಂತೆ ಪ್ರೇರೇಪಿಸಿದ್ದಾರಲ್ಲ ಅವರವರದ್ದೇ ಬೇರೆ-ಬೇರೆ ಕವಲುಗಳಾದವು. ಭಗವದ್ಗೀತೆ-ಉಪನಿಷತ್ತು- ಬ್ರಹ್ಮಸೂತ್ರಗಳನ್ನೇ ಬೇರೆ ಬೇರೆ ರೀತಿಯಲ್ಲಿ ಆಚಾರ್ಯರು ವ್ಯಾಖ್ಯಾನಿಸಿ ಮೂರು ಮುಖ್ಯ ಪಂಥಗಳನ್ನು ಹುಟ್ಟುಹಾಕಲಿಲ್ಲವೇ ಹಾಗೆಯೇ ಇದು. ಮೂಲ ಗ್ರಂಥಗಳು ಒಂದೇ ಆದರು ಅವುಗಳಿಂದ ಹೊರಟ ಸತ್ಯವನ್ನು ಬೇರೆ ಬೇರೆಯವರು ಬೇರೆ ಬೇರೆ ರೀತಿ ಗ್ರಹಿಸಿದ್ದರಿಂದ ಪಂಥಗಳೇ ಬೆಳೆದುಬಿಟ್ಟವು. ಈ ಪಂಥಗಳು ಕೆಲವು ಸಂಗತಿಗಳಲ್ಲಿ ಸಮಾನ ಅಂಶಗಳನ್ನೇ ಹೊಂದಿದ್ದರೆ ಕೆಲವೆಡೆ ಪೂರ್ಣ ವಿರುದ್ಧ! ಒಟ್ಟಾರೆ ಎಲ್ಲರ ಅಂತಿಮ ನಿಧರ್ಾರ ‘ನಾವು ಮಾತ್ರ ಸತ್ಯ. ಉಳಿದವರು ಸುಳ್ಳು’ ಅಂತ.

fb80f0b28055c625f184e1208a72bea1
ಹಳ್ಳಿಹಳ್ಳಿಗಳಲ್ಲಿ ಹಿರಿಯರ, ಪೂಜ್ಯರ ಗೋರಿಗಳಿಗೆ(ದಗರ್ಾಹ) ಚದ್ದರ್ ಹಾಸಿ, ಅಗರಬತ್ತಿ ತೋರಿ ಅದನ್ನು ತೊಳೆದ ನೀರನ್ನು ಸೇವಿಸುವ ಸೂಫಿ ಪಂಥಕ್ಕೆ ಸೇರಿದ ಮುಸಲ್ಮಾನರನ್ನು ಕಂಠಮಟ್ಟ ವಿರೋಧಿಸುವವರಿದ್ದಾರೆ. ಒಬ್ಬನೇ ಒಬ್ಬ ಇಂತಹ ದಗರ್ಾ ಗೌರವಿಸುವ ವ್ಯಕ್ತಿ ಸ್ವರ್ಗಕ್ಕೆ ಹೋಗುವುದು ನಿಜವಾದರೆ, ಹಿಂದೂವೂ ಸ್ವರ್ಗಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲವೆಂದು ದೇವ್ಬಂದಿ ಪಂಥಕ್ಕೆ ಸೇರಿದ ಭಾಷಣಕಾರನೊಬ್ಬ ಹೇಳೋದನ್ನು ನೀವು ವಿಡಿಯೋದಲ್ಲಿ ನೋಡಿರಬೇಕು. ‘ಹಿಂದೂ ನಿಂತ ಮೂತರ್ಿಯನ್ನು ಪೂಜಿಸುತ್ತಾನೆ, ನೀವು ಮಲಗಿದ ಮೂತರ್ಿ ಪೂಜಿಸುತ್ತೀರಿ’ ಎಂದು ಆತ ಜರಿಯುವುದೂ ಇದೆ. ಸೂಫಿಗಳನ್ನು ವಿರೋಧಿಸುವ ಈ ಪಂಥವನ್ನು ವಿರೋಧಿಸುವ ಕಟ್ಟರ್ಪಂಥಿ ಮುಸಲ್ಮಾನರಿದ್ದಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮದೇ ಸರಿ ಎಂದು ವಾದಿಸುವುದರಲ್ಲಿಯೇ ಮಗ್ನರು. ಇವರನ್ನು ಏಕರಸವಾಗಿಸುವುದೇ ಈಗ ಜಗತ್ತಿನಲ್ಲಿರುವ ಮುಸಲ್ಮಾನರ ಬಹುದೊಡ್ಡ ಸವಾಲು.
ವಹಾಬಿ ಚಳುವಳಿಯ ಬೀಜ ಇರೋದು ಅದರಲ್ಲಿಯೇ. ಇಸ್ಲಾಂನಲ್ಲಿ ನುಸುಳಿರುವ ಒಪ್ಪಲಾಗದ ಆಚರಣೆಗಳನ್ನು ತೆಗೆದು ಶುದ್ಧ ಇಸ್ಲಾಂನ್ನು ಮರಳಿ ಸ್ಥಾಪಿಸುವ ಕಲ್ಪನೆಯೊಂದಿಗೆ 18ನೇ ಶತಮಾನದಲ್ಲಿ ಆರಂಭವಾದದ್ದು ಈ ಚಿಂತನೆ. ಮೊಹಮ್ಮದ್ ಬಿನ್ ಅಬ್ದ್ ಅಲ್ ವಹಾಬ್ ಹುಟ್ಟುಹಾಕಿದ ಸಾಮಾಜಿಕ ಚಳವಳಿ ಇದು. ಸೌದಿ ದೊರೆಗಳ ಸಹಕಾರ ಸಿಕ್ಕನಂತರ ಈ ಚಳವಳಿ ವ್ಯಾಪಕವಾಯ್ತು. 20ನೇ ಶತಮಾನದ ಆರಂಭದಲ್ಲಿ ಈ ಸಿದ್ಧಾಂತವನ್ನು ಒಪ್ಪಿ ‘ಶುದ್ಧ ಇಸ್ಲಾಂ’ನ ಬಾಹುಗಳೊಳಗೆ ಆಗಮಿಸಲೊಪ್ಪದವರ ಮಾರಣ ಹೋಮವೂ ಆಯ್ತು. ಕೊನೆಗೆ 20ನೇ ಶತಮಾನದ ಉತ್ತರಾರ್ಧದಲ್ಲಿ ಪೆಟ್ರೋಲಿನ ನಿಧಿ ದೊರೆತ ಮೇಲೆ ವಹಾಬಿ ಚಳವಳಿಗೆ ರಂಗು ಬಂದುಬಿಟ್ಟಿತು. ಇಂದು ಜಗತ್ತೆಲ್ಲವನ್ನೂ ಈ ಕಲ್ಪನೆಯೆಡೆಗೆ ತರಬೇಕೆಂಬ ಪ್ರಯತ್ನಕ್ಕೆ ಅದು ನಿಂತುಬಿಟ್ಟಿದೆ. ಪೆಟ್ರೋ ಡಾಲರುಗಳನ್ನು ಇದಕ್ಕೆಂದೇ ಸುರಿಯುತ್ತಿವೆ. ಅದೇ ಹಣ ಪಾಕೀಸ್ತಾನಕ್ಕೂ ತನ್ಮೂಲಕ ಭಾರತಕ್ಕೂ ಹರಿಯುತ್ತಿರೋದು. ಇಲ್ಲಿ ಶಾಂತಯುತವಾಗಿ, ಎಲ್ಲರೊಂದಿಗೆ ಬೆರೆತು ಬದುಕಿದ್ದ ಮುಸಲ್ಮಾನನೂ ಅಶಾಂತನಾಗಿಬಿಟ್ಟಿದ್ದಾನೆ. ಹೀಗಾಗಿಯೇ ಸೂಫಿಗಳ ವಿಶ್ವ ಸಮ್ಮೇಳನ ನಡೆದಾಗ ಅದರ ವಿರೋಧ ಹಿಂದೂಗಳ ಪಾಳಯದಿಂದ ಬಂದಿರಲಿಲ್ಲ ಬದಲಿಗೆ ಕಟ್ಟರ್ ಮುಸಲ್ಮಾನರೇ ಅದನ್ನು ಧಿಕ್ಕರಿಸಿದ್ದರು. ಜಾಕಿರ್ ನಾಯ್ಕರಂತಹ ಮತಪ್ರಚಾರಕನನ್ನು ಹಿಂದೂಗಳು ವಿರೋಧಿಸುವುದು ಸಹಜವೇ. ಬಹುಸಂಖ್ಯೆಯ ಮುಸಲ್ಮಾನರೂ ಅವನನ್ನು ಧಿಕ್ಕರಿಸುತ್ತಾರೆ.
ಕಳೆದ ಆರೇಳು ದಶಕಗಳಿಂದಲೂ ಇದನ್ನು ಸರಿತೂಗಿಸಲು ಪಾಕೀಸ್ತಾನದ ಗುಪ್ತಚರ ಪಡೆ ಬೆಟ್ಟದಷ್ಟು ಸಾಹಸ ಮಾಡುತ್ತಲೇ ಇದೆ. ಏಕಸೂತ್ರದಡಿ ಎಲ್ಲರನ್ನೂ ತರಲೆಂದೇ ಅನೇಕ ಮತಪ್ರಚಾರಕರನ್ನು ತಯಾರು ಮಾಡಿ ಊರೂರಿಗೆ ಕಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ಪ್ರಯೋಗಗಳ ನಂತರವೂ ಕಾಶ್ಮೀರಿ ಮುಸಲ್ಮಾನ ನಮ್ಮೂರಿನ ಮುಸಲ್ಮಾನನಿಗೆ ಹತ್ತಿರವೆನಿಸುತ್ತಿಲ್ಲ. ಅಷ್ಟೇ ಅಲ್ಲ. ಕಾಶ್ಮೀರದ ಮುಸಲ್ಮಾನರೂ ಇಲ್ಲಿನವರನ್ನು ತಮ್ಮ ಸಮವೆಂದು ಪರಿಗಣಿಸಲಾರ. ಹಾಗಾಗಿಯೇ ಕಾಶ್ಮೀರದಲ್ಲಿ ನೆರೆಹಾವಳಿ ಬಂದಾಗ ಪ್ರಧಾನಮಂತ್ರಿ ನಿಧಿಗೆ ಹಣಕೊಟ್ಟವರಲ್ಲಿ ಬಹುಪಾಲು ಹಿಂದೂಗಳೇ ಆಗಿದ್ದರು.
ಇವೆಲ್ಲವನ್ನೂ ಇಷ್ಟೆಲ್ಲಾ ಸೂಕ್ಷ್ಮವಾಗಿ ವಿವರಿಸೋದಕ್ಕೆ ಒಂದು ಕಾರಣವಿದೆ. ಸೇನೆಯೊಳಗೆ ಇಣುಕಿದ ಭ್ರಷ್ಟಾಚಾರ, ಸಕರ್ಾರದ ಕೈಗೊಂಬೆಯಾಗಿದ್ದ ಗೂಢಚಾರ ಸಂಸ್ಥೆಗಳು, ಎಲ್ಲ ಗೊತ್ತಿದ್ದೂ ಭಯೋತ್ಪಾದಕರನ್ನು ಅಮಾಯಕರೆಂದು ಕರೆವ ಗೃಹಮಂತ್ರಿ, ಅಧಿಕಾರದಾಸೆಗೆ ಬಲಿಯಾಗಿ ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸಿ ಪಾಕೀಸ್ತಾನಕ್ಕೆ ಕ್ಲೀನ್ ಚಿಟ್ ಕೊಡುವ ಸಕರ್ಾರ, ಇವುಗಳೊಟ್ಟಿಗೆ ಸುಮಾರು 20 ಪ್ರತಿಶತ ಮುಸಲ್ಮಾನರೇ ದೇಶದೊಳಗೆ ಇದ್ದಾಗ್ಯೂ ಕಳೆದ ಹತ್ತು ವರ್ಷಗಳಲ್ಲಿ ಐಎಸ್ಐ ಬಯಸಿದ್ದನ್ನು ಸಾಧಿಸಲಾಗಲಿಲ್ಲವಲ್ಲ, ಹೇಗೆ? ಕಾರಣಗಳನ್ನು ಹುಡುಕೋದು ಕಷ್ಟವೇನಲ್ಲ.
ಇದು ಅರ್ಥವಾಗಿರೋದರಿಂದಲೇ ಐಎಸ್ಐ ಈಗ ಸ್ಥಳೀಯ ಹಿಂದೂಗಳ ಮೇಲೆ ಕೋಪ ಹುಟ್ಟುವಂತಹ ವಿಡಿಯೋಗಳನ್ನು, ಭಾಷಣಗಳನ್ನು ಸಂಗ್ರಹಿಸಿ ವಾಟ್ಸಾಪ್ನಲ್ಲಿ ಹರಿದಾಡುವಂತೆ ಮಾಡೋದು. ಸಿದ್ಧವಾಗಿರುವ ಪಡೆಯನ್ನು ಎಲ್ಲಿಂದಲೋ ಕರೆತಂದು ಹಿಂದೂಗಳ ಮೇಲೆ ಆಕ್ರಮಣ ಮಾಡಿಸಿ ದಂಗೆಯೆಬ್ಬಿಸೋದು. ಸಾಮರಸ್ಯ ಕದಡಿದರೆ ಏಕತೆ ತರೋದು ಸುಲಭ ಅನ್ನೋದು ಅವರು ಕಂಡುಕೊಂಡ ಸತ್ಯ. ಕೆಲವೆಡೆ ಅವರು ಯಶಸ್ಸು ಪಡೆದಿರಬಹುದು, ಮತ್ತೆ ಕೆಲವೆಡೆ ಸೋತಿದ್ದಾರೆ.
ಇವೆಲ್ಲಕ್ಕೂ ಹಣದ ಸ್ರೋತವಾಗಿದ್ದ ತೈಲದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಈಗ ಬದಲಾವಣೆ ಶತಃಸಿದ್ಧ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s