ನೇರ ಯುದ್ಧ ಬಿಡಿ, ಛದ್ಮಯುದ್ಧದಲ್ಲೂ ಪಾಕಿಸ್ತಾನಕ್ಕೆ ಸೋಲೇ!!

ನೇರ ಯುದ್ಧ ಬಿಡಿ, ಛದ್ಮಯುದ್ಧದಲ್ಲೂ ಪಾಕಿಸ್ತಾನಕ್ಕೆ ಸೋಲೇ!!

ಈಗ ಜೆಎನ್ಯು ಪ್ರಕರಣದತ್ತ ಕಣ್ಣು ಹಾಯಿಸಿ ನೋಡಿ. ಜೀಹಾದಿ ಉಗ್ರರನ್ನು ಬೆಂಬಲಿಸುವ ಉಮರ್ ಖಾಲಿದ್ ದೇಶದ ರಾಜಧಾನಿಯಲ್ಲಿ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಿಂತು ದೇಶವಿರೋಧಿ ಘೋಷಣೆ ಕೂಗಿದ್ದಾನೆಂದರೆ ಅದರರ್ಥವೇನು? ಆತನನ್ನು ಇಪ್ಪತ್ನಾಲ್ಕು ತಾಸು ಮಾಧ್ಯಮಗಳಲ್ಲಿ ಬರುವಂತೆ ಮಾಡಿ, ಆತನ ಸಂದರ್ಶನದ ಮೂಲಕ ಅವನ ಕುರಿತಂತೆ ಸದಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಾರ ಪಾತ್ರವಿದೆ? ಉಮರ್ ಖಾಲಿದ್ ನ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳನ್ನು ಸುದ್ದಿಯಲ್ಲಿ ಬಿಂಬಿಸದೇ ಕಾಶ್ಮೀರದ ಜನ ಖಾಲಿದ್ ನ ಬೆಂಬಲಕ್ಕೆ ನಿಂತಿದ್ದನ್ನು ವಿಸ್ತೃತ ವರದಿ ಮಾಡಿದರಲ್ಲ, ಏಕೆ?

 

09pak1

ಸುಮ್ಮನೆ ಹಾಗೆ ಯೋಚನೆ ಮಾಡಿ. ಯಾವತ್ತಾದರೂ ನಮ್ಮೂರಿನ ಮುಸಲ್ಮಾನರು ಕಾಶ್ಮೀರದ ಮುಸಲ್ಮಾನರ ಕುರಿತಂತೆ ಮಾತನಾಡಿದ್ದನ್ನು ಕೇಳಿದ್ದೀರಾ? ಅವರು ಪಾಕೀಸ್ತಾನ ಗೆದ್ದಾಗ ಪಟಾಕಿ ಸಿಡಿಸಿರಬಹುದು. ಆದರೆ ಕಾಶ್ಮೀರದ ಮುಸಲ್ಮಾನರನ್ನು ತಮ್ಮವರೆಂದಿದ್ದು ಕೇಳಿದ್ದು ಅಪರೂಪ. ಪ್ರತ್ಯೇಕತಾವಾದಿಗಳಿಗೆ ಇದೇ ಕಿರಿಕಿರಿ. ಹೌದು. ಸಿಐಎ ಮತ್ತು ಕಮ್ಯುನಿಸ್ಟರ ನಂತರ ಮುಂದಿನ ಚಚರ್ೆ ಪಾಕ್ ಬೆಂಬಲಿತ ಜೀಹಾದಿ ಸಮುದಾಯದ್ದೇ.
ಭಾರತದಲ್ಲಿ ನಡೆಯುವ ಪ್ರತಿಯೊಂದು ಬಾಂಬ್ ಸಿಡಿತದ ಹಿಂದೆಯೂ ಪಾಕೀಸ್ತಾನದ ಐಎಸ್ಐ (ಇಂಟರ್ ಸವರ್ೀಸ್ ಇಂಟಲಿಜೆನ್ಸಿ)ಯ ಮುದ್ರೆ ಇದ್ದೇ ಇರುತ್ತದೆ. ಕಾಶ್ಮೀರದ ಕೊಳ್ಳವಾಗಿರಲಿ, ರಾಜಸ್ಥಾನದ ಮರುಭೂಮಿಯಾಗಿರಲಿ, ಪಂಜಾಬಿನ ಹಳ್ಳಿಗಳಾಗಲಿ, ಈಶಾನ್ಯದ ಬೆಟ್ಟ-ಗುಡ್ಡಗಳಾಗಲಿ ಕೊನೆಗೆ ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತಾದಂತಹ ನಗರಗಳೂ ಸೇರಿದಂತೆ ಎಲ್ಲೆಲ್ಲಿ ಭಯೋತ್ಪಾದಕರ ಅಟ್ಟಹಾಸ ಕೇಳಿಬರುತ್ತದೆಯೋ ಅದರ ಹಿಂದೆ ಪಾಕೀಸ್ತಾನದ ಐಎಸ್ಐ ಕೈವಾಡವಿರುವುದು ಶತಃ ಸಿದ್ಧ. ಪಾಕಿಸ್ತಾನ ಮತ್ತು ಐಎಸ್ಐಗಳು ಒಂದಕ್ಕೊಂದು ಅದೆಷ್ಟು ಬೆಸೆದುಕೊಂಡಿವೆಯೆಂದರೆ ಐಎಸ್ಐ ಒಂದು ರಾಷ್ಟ್ರವಾಗಿಬಿಟ್ಟಿದೆಯೇನೋ ಎನ್ನುವಷ್ಟು.
ಪಾಕೀಸ್ತಾನ 1947ರಲ್ಲಿ ಭಾರತದೊಂದಿಗೆ ಯುದ್ಧ ಸೋತಿತಲ್ಲ ಆಗಲೇ ಐಎಸ್ಐಗೆ ಅಡಿಪಾಯ ಬಿತ್ತು. ಜನರಲ್ ಅಯೂಬ್ ಖಾನ್ರಿಗೆ ಆಪ್ತರಾಗಿದ್ದ ಜನರಲ್ ಕಾಥ್ರೋನ್ ನ ಕೂಸು ಅದು. ಆರಂಭದ ದಿನಗಳಲ್ಲಿ ಸೈನ್ಯಕ್ಕೆ ಬೇಕಾದ ಅಗತ್ಯ ಗುಪ್ತ ಮಾಹಿತಿ ಕಲೆ ಹಾಕುವುದಕ್ಕೆ ಸೀಮಿತವಾಗಿತ್ತು ಅದು. ಮುಂದೆ ಅಯೂಬ್ ಖಾನ್ ಪಾಕೀಸ್ತಾನದ ಚುಕ್ಕಾಣಿ ಕೈಗೆತ್ತಿಕೊಂಡ ಮೇಲೆ ರಾಜಕೀಯ ಶತ್ರುಗಳನ್ನು ಮಟ್ಟ ಹಾಕಲು ಐಎಸ್ಐ ಬಳಕೆಯಾಯ್ತು. 1965ರಲ್ಲಿ ಭಾರತದೊಂದಿಗಿನ ಯುದ್ಧ ಸೋತ ಮೇಲೆ ಇಡಿಯ ಐಎಸ್ಐಯನ್ನು ಮರು ರೂಪಿಸಲಾಯ್ತು.
70ರ ದಶಕದಲ್ಲಿ ರಷ್ಯಾವನ್ನು ತುಂಡರಿಸುವ ಹುಚ್ಚಿನೊಂದಿಗೆ ಅಮೇರಿಕಾದ ಗುಪ್ತಚರ ಸಂಸ್ಥೆ ಸಿಐಎ ಚುರುಕಾಗಿತ್ತಲ್ಲ ಆಗ ಐಎಸ್ಐನ ಬೆಂಬಲ ಅದಕ್ಕೆ ಬೇಕಾಗಿತ್ತು. ಅಫ್ಘಾನಿಸ್ತಾನದ ಜೀಹಾದಿಗಳಿಗೆ ತರಬೇತು ನೀಡುವಲ್ಲಿ, ಸ್ಥಳೀಯರೊಂದಿಗೆ ಬೆರೆತು ಮಾಹಿತಿ ಸಂಗ್ರಹಿಸುವಲ್ಲಿ, ರಷ್ಯಾದ ಗಡಿಗಳಲ್ಲಿ ಅಸಹಿಷ್ಣುತೆ ಸೃಷ್ಟಿಸುವಲ್ಲಿ ಐಎಸ್ಐ ಪಾತ್ರ ಬಲು ಮಹತ್ವದ್ದಾಗಿತ್ತು. 1979ರಲ್ಲಿ ರಷ್ಯಾದ ಸೇನೆ ಅಫ್ಘಾನಿಸ್ತಾನಕ್ಕೆ ನುಗ್ಗಿದಾಗ ಅಲ್ಲಿನ ಜನರನ್ನು ಭಡಕಾಯಿಸಿ ರಷ್ಯಾದ ವಿರುದ್ಧ ನಿಲ್ಲಲು ಅವರಿಗೆ ಶಕ್ತಿ ತುಂಬಿದ್ದು ಅಮೇರಿಕಾ, ಬಳಕೆಯಾಗಿದ್ದು ಐಎಸ್ಐ. ಅರಬ್ ರಾಷ್ಟ್ರಗಳೂ ಸೇರಿದಂತೆ ಪಶ್ಚಿಮದ ಅನೇಕ ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ಹಣ ಸುರಿದವು. ದಶಕಗಳ ಕಾಲ ನಡೆದ ಕದನದಲ್ಲಿ ಜಯ ಕಾಣದೇ ರಷ್ಯಾ ಹಿಂದೆಗೆಯಿತು. ಅಮೇರಿಕಾ ಮರೆಯಲ್ಲೇ ನಕ್ಕಿತು. ಐಎಸ್ಐ ಅಮೇರಿಕಾದ ತರಬೇತಿ ಪಡೆದು ಅತ್ಯಂತ ಕಠೋರ ಗೂಢಚಾರ ಸಂಸ್ಥೆಯಾಗಿ ಬೆಳೆಯಿತು. ಜೊತೆ ಜೊತೆಗೇ ಇಸ್ರೇಲಿನ ಮೋಸಾದ್, ಇರಾನಿನ ಸಾವಕ್ ಮತ್ತು ಬ್ರಿಟಿಷ್ ಗೂಢಚರ್ಯ ಸಂಸ್ಥೆಗಳೂ ಅವರಿಗೆ ಬೆಂಬಲ, ತಂತ್ರಜ್ಞಾನ, ತರಬೇತಿಯನ್ನು ಕೊಟ್ಟವು.
ವಿಪಯರ್ಾಸವೆಂದರೆ ಎರಡು ಕ್ರಿಶ್ಚಿಯನ್ ರಾಷ್ಟ್ರಗಳು ಮುಸಲ್ಮಾನ ರಾಷ್ಟ್ರವನ್ನೇ ಬಳಸಿ ಮುಸಲ್ಮಾನರ ಮೇಲೆ ಯುದ್ಧ ಮಾಡಿ, ಸಾವಿರಾರು ಮುಸಲ್ಮಾನರ ಮಾರಣ ಹೋಮ ಮಾಡಿತು!
ಪಾಕೀಸ್ತಾನ ಅಮೇರಿಕಾದ ಡಾಲರುಗಳಿಗಾಗಿ ಎಂತಹ ನೀಚ ಮಟ್ಟಕ್ಕಿಳಿಯಲೂ ಸಿದ್ಧವಾಗಿತ್ತು. ಅದಕ್ಕಾಗಿ ಕಾಯುತ್ತ ಕೂರುವುದು ಕಷ್ಟವಾದಾಗ ತಾನೇ ಹಿಂಸೆಗೆ ಪ್ರಚೋದನೆ ನೀಡುತ್ತಿತ್ತು, ಕಳ್ಳಸಾಗಣೆಯ ಧಂಧೆ ಮಾಡುತ್ತಿತ್ತು, ನುಸುಳುಕೋರರನ್ನು ತಯಾರು ಮಾಡಿ ಅವರ ಕೈಗೆ ಶಸ್ತ್ರಾಸ್ತ್ರ ಕೊಡುತ್ತಿತ್ತು. ಅಮಾಯಕರನ್ನು ಕೊಂದು ಆನಂದಿಸಿ ಅದಕ್ಕೆ ಧರ್ಮದ ಅಂಗರಾಗವನ್ನು ಮೆತ್ತಿ ಶ್ರೇಷ್ಠ ಕಾರ್ಯವೆಂದು ತಮ್ಮವರೆದುರು ಬಿಂಬಿಸುತ್ತಿತ್ತು.

TH15-PAKISTAN_631145g
1971ರಲ್ಲಿ ಇಂದಿರಾಗಾಂಧಿ ಪೂರ್ವ ಪಾಕೀಸ್ತಾನದ ಮೇಲೆ ದಾಳಿಗೈದು ಬಾಂಗ್ಲಾದೇಶವನ್ನು ಪ್ರತ್ಯೇಕ ಮಾಡಿದ್ದು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಆಗಿರಲೇ ಇಲ್ಲ. ತಾನು ಕಲಿತ ಎಲ್ಲ ವಿದ್ಯೆಯನ್ನೂ ಭಾರತದ ಮೇಲೆ ಪ್ರಯೋಗಿಸಲು ಅದು ಕಾಯುತ್ತಲೇ ಇತ್ತು. ಈ ಘಟನೆ ನಡೆವಾಗ ಐಎಸ್ಐ ಬಲಾಢ್ಯವಾಗಿರಲಿಲ್ಲ. ಆಡಳಿತ ಪಕ್ಷದ ಮೂಲಕ ವಿರೋಧ ಪಕ್ಷದವರ ಮೇಲೆ ಗೂಢಚಯರ್ೆ ನಡೆಸುವ ಸಂಸ್ಥೆಯಾಗಿತ್ತು ಅಷ್ಟೇ. ಎಂಭತ್ತರ ದಶಕದ ಕೊನೆಯಲ್ಲಿ ಅಫ್ಘನ್ ಯುದ್ಧ ಮುಗಿವ ವೇಳೆಗೆ ಐಎಸ್ಐ ಬಲಾಢ್ಯವಾಗಿ ಬೆಳೆದುಬಿಟ್ಟಿತ್ತು. ಭಾರತದೊಡನೆ ನೇರ ಯುದ್ಧದಲ್ಲಿ ಗೆಲ್ಲುವುದಕ್ಕಿಂತ ಅಪ್ಘಾನಿಸ್ತಾನದಲ್ಲಿ ಮಾಡಿದಂತೆ ಛದ್ಮ ಯುದ್ಧಕ್ಕೆ ಕೈ ಹಾಕುವುದು ಒಳಿತೆನಿಸಿತ್ತು ಅದಕ್ಕೆ. ಗೇರಿಲ್ಲಾ ಯುದ್ಧ ತಂತ್ರದ ತರಬೇತಿಯಲ್ಲಿ ಅದಕ್ಕೀಗ ನೈಪುಣ್ಯತೆ ಸಿದ್ಧಿಸಿತ್ತಲ್ಲದೇ ಮತದ ಅಫೀಮು ಕುಡಿದು ರಣಾಂಗಣಕ್ಕಿಳಿಯಬಲ್ಲ ಬೇರೆ-ಬೇರೆ ಮುಸಲ್ಮಾನ ರಾಷ್ಟ್ರಗಳ ಜನರೂ ಜೊತೆಗಿದ್ದರು. ಐಎಸ್ಐ ತನ್ನ ಜಾಲ ವಿಸ್ತರಿಸಲಾರಂಭಿಸಿತು.
ಸದ್ಯಕ್ಕೆ ಅಮೇರಿಕಾದ ಸಿಐಎ ಬಳಿಕ ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಗೂಢಚಾರ ಜಾಲ ಪಾಕೀಸ್ತಾನದ ಐಎಸ್ಐಯದ್ದೇ. ಆಮೇಲಿನ ಸ್ಥಾನ ರಷ್ಯಾ ಮತ್ತು ಚೀನಿ ಗೂಢಚಾರರದ್ದು. ಈಗ ಗೊತ್ತಾಯಿತಲ್ಲ, ಕ್ರಿಶ್ಚಿಯನ್ನರ ಮೂಲಕ ಅಮೇರಿಕಾ, ಮುಸಲ್ಮಾನರ ಮೂಲಕ ಪಾಕೀಸ್ತಾನ ಮತ್ತು ಕಮ್ಯುನಿಸ್ಟರ ಮೂಲಕ ರಷ್ಯಾ-ಚೀನಾಗಳು ಹೇಗೆ ಭಾರತದ ಮೇಲೆ ಸದಾ ಹದ್ದುಗಣ್ಣಿಟ್ಟಿವೆ ಅಂತ!
ಐಎಸ್ಐ ಇಂದು ಬಲು ಶಕ್ತ ಸಂಸ್ಥೆ. ಶುರುವಾದಾಗ ಕೈ ಬೆರಳೆಣಿಕೆಯಷ್ಟಿದ್ದ ಅಧಿಕಾರಿಗಳು ಈಗ ಸಾವಿರ-ಸಾವಿರಗಳಾಗಿಬಿಟ್ಟಿದ್ದಾರೆ. ಸೈನ್ಯದಲ್ಲಿ ಸೇವೆ ಸಲ್ಲಿಸಿದ ಆಯ್ದ ಅಧಿಕಾರಿಯೇ ಇದರ ಮುಖ್ಯಸ್ಥನಾಗುವುದರಿಂದ ಸೇನೆಯೊಂದಿಗೆ ಘನಿಷ್ಠ ಸಂಬಂಧವಿದೆ. ಹೀಗಾಗಿ ಪ್ರಧಾನ ಮಂತ್ರಿಗೆ ವರದಿ ನೀಡುವಾಗ ಸೈನ್ಯ ಬಯಸಿದ್ದಷ್ಟನ್ನೇ ಒಪ್ಪಿಸುವುದು ಅವರ ರೂಢಿ. ದುಡ್ಡಿನ ಹರಿವು ತೀವ್ರಗೊಂಡಂತೆ, ಕೆಲಸದ ವ್ಯಾಪ್ತಿ ವಿಸ್ತಾರಗೊಂಡಂತೆ ಐಎಸ್ಐ ಪ್ರಭಾವವೂ ವಿಸ್ತರಿಸಿತು. ಈಗ ಅದು ಸೇನೆಗಿಂತ ದೊಡ್ಡದಾಗಿ, ಸಕರ್ಾರಕ್ಕಿಂತ ಅಗಾಧವಾಗಿ ಬೆಳೆದು ನಿಂತಿದೆ. ತನಗೆ ಬೇಕಾದ ಹಣವನ್ನು ಡ್ರಗ್ಸ್ ಕಳ್ಳಸಾಗಣೆಯ ಮೂಲಕ ತಾನೇ ಹೊಂದಿಸಿಕೊಳ್ಳಲಾರಂಭಿಸಿದೆ. ಅದಕ್ಕೇ ಪ್ರಧಾನಿಯಾದವನ ಮಾತನ್ನು ಕೇಳಲೇಬೇಕೆಂಬ ದದರ್ು ಇಲ್ಲವಾಗಿದೆ. ಈ ಕಾರಣಕ್ಕಾಗಿಯೇ ಸಕರ್ಾರ ಬದಲಾದಾಗಲೆಲ್ಲ ಐಎಸ್ಐನ ಮುಖ್ಯಸ್ಥರೂ ಬದಲಾಗುತ್ತಾರೆ. ತನಗೆ ಬೇಕಾದವರನ್ನೇ ಅಲ್ಲಿಗೆ ತಂದು ಕೂರಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಧಾನಿಯ ಅನಿವಾರ್ಯತೆ!

14proxy-war4
ಐಎಸ್ಐ ಮೂರು ವಿಭಾಗದಲ್ಲಿ ಕೆಲಸ ಮಾಡುತ್ತೆ. ಮೊದಲನೆಯದು ಕ್ರಿಯಾಂಗ. ಇದು ಪ್ರತಿ ದಿನದ ಯೋಜನೆಗಳನ್ನು ರೂಪಿಸುತ್ತದೆ. ಮತಾಂಧ ಮುಜಾಹಿದ್ ಗಳಿಗೆ ತರಬೇತಿ ಕೊಡುತ್ತದೆ. ಆಕ್ರಮಣದ ರೂಪುರೇಷೆಗಳನ್ನು ತಯಾರಿಸಿ ಗುರಿಯನ್ನು ನಿರ್ಧರಿಸಿ ಅವರ ಮುಂದಿಡುತ್ತದೆ. ಎರಡನೆಯದು ಸಾಗಾಟದ ಅಂಗ. ಶಸ್ತ್ರಾಸ್ತ್ರಗಳನ್ನು ತರೋದು, ಸೂಕ್ತ ಜಾಗಕ್ಕೆ ತಲುಪಿಸೋದು ಇವರ ಹೊಣೆ. ಇನ್ನು ಮೂರನೆಯದು ಅತ್ಯಂತ ಪ್ರಮುಖ ಅಂಗ. ಇದೇ ಮಾನಸಿಕ ಯುದ್ಧದ್ದು. ಗಡಿ ಭಾಗದಲ್ಲಿ ರೇಡಿಯೋ ಸ್ಟೇಷನ್ನುಗಳನ್ನು ನಡೆಸೋದು, ಕರಪತ್ರಗಳನ್ನು ಹಂಚೋದು ಮತ್ತು ಭಯೋತ್ಪಾದಕರ ಸಂದರ್ಶನ ಪ್ರಮುಖ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಳ್ಳೋದು ಈ ವಿಭಾಗದವರ ಕೆಲಸ. ಹಾಗೆ ನೋಡಿದರೆ ಭಯೋತ್ಪಾದನಾ ಕೃತ್ಯ ನಡೆಸೋದು ಬಲು ಸಲೀಸು. ಅದಕ್ಕೆ ಬೇಕಾದ ಸ್ಥಳೀಯ ಮಾನಸಿಕತೆ ತಯಾರು ಮಾಡೋದು ಬಲು ಕಷ್ಟದ ಕೆಲಸ. ಐಎಸ್ಐ ಅಮೇರಿಕಾದ ತರಬೇತಿ ಪಡೆದಿರುವುದರಿಂದ ಭಾರತದಲ್ಲಿ ಈ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ.
ನೆನಪು ಮಾಡಿಕೊಳ್ಳಿ. ಕಾಶ್ಮೀರದ ಕೊಳ್ಳದಲ್ಲಿ ನಿಂತು ಬಖರ್ಾದತ್ ಉಗ್ರರ ಕುರಿತಂತೆ ಮಾಡಿದ ವರದಿಗಳು, ಅರುಂಧತಿರಾಯ್ ಈಶಾನ್ಯ ರಾಜ್ಯಗಳಿಗೆ ಹೋಗಿ ನಕ್ಸಲರನ್ನು ಮಾತನಾಡಿಸಿ ಆಧುನಿಕ ಗಾಂಧಿಗಳೆಂದು ಅವರನ್ನು ಹೊಗಳಿದ್ದು ಇವೆಲ್ಲ ಇದರದ್ದೇ ಪರಿಣಾಮಗಳು. ಇಂತಹ ಪತ್ರಕರ್ತರಿಗೆ ಪಶ್ಚಿಮ ರಾಷ್ಟ್ರಗಳ ಪ್ರವಾಸವೂ ಲಭ್ಯ, ಪಾಕೀಸ್ತಾನದ ಯಾತ್ರೆಯೂ ಸಲೀಸು! ಈ ಪತ್ರಕರ್ತರು ಮಾಧ್ಯಮಗಳ ಮೂಲಕ ಭಯೋತ್ಪಾದಕರ ಕುರಿತಂತೆ ಧನಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಾರೆ, ಪುಸ್ತಕಗಳನ್ನೂ ಬರೆದು ಅವರ ಕುರಿತಂತೆ ಹೃದಯ ತಟ್ಟುವ ಅಂಶಗಳನ್ನು ಜನಕ್ಕೆ ಮುಟ್ಟಿಸುತ್ತಾರೆ. ಗಡಿ ಭಾಗದ ಸಮಸ್ಯೆಗಳನ್ನು, ಸಕರ್ಾರದ ವೈಫಲ್ಯಗಳನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಅದನ್ನೋದಿ ನಮ್ಮೊಳಗಿನ ಮಾನವೀಯತೆ ಜಾಗೃತವಾಗಿಬಿಡುತ್ತದೆ. ನಮಗೇ ಅರಿವಿಲ್ಲದಂತೆ ನಾವು ಸಕರ್ಾರದ ವಿರೋಧಿಗಳಾಗಿಬಿಡುತ್ತೇವೆ. ನಕ್ಸಲರ ಕೃತ್ಯಗಳನ್ನು, ಭಯೋತ್ಪಾದಕರ ಕೃತ್ಯಗಳನ್ನು ಸಮಥರ್ಿಸಲಾರಂಭಿಸುತ್ತೇವೆ. ಈಶಾನ್ಯ ರಾಜ್ಯಗಳೂ ಹೋಗಲಿ, ಕಾಶ್ಮೀರವೂ ಹೋಗಲಿ ಮಾನವೀಯತೆ ಉಳಿಯಲಿ ಎಂದು ಬೀದಿಗಿಳಿಯುತ್ತೇವೆ! ಈ ಷಡ್ಯಂತ್ರದ ಹಿಂದಿನ ಅಮಾನವೀಯ ಮುಖಗಳು ಮರೆಯಲ್ಲಿ ನಿಂತು ನಗುತ್ತಿರುತ್ತವೆ!
ಇದು ಒಂದೆರಡು ದಿನದಲ್ಲಿ ಆಗಿಬಿಡುವಂಥದ್ದಲ್ಲ. ಸತತ ಪರಿಶ್ರಮದಿಂದ ಗೂಢಚಾರರು ತಮಗೆ ಬೇಕಾದ ವ್ಯಕ್ತಿಗಳನ್ನು ಆರಿಸಿಕೊಳ್ಳುತ್ತಾರೆ, ಹಣದ ಆಮಿಷ ಒಡ್ಡುತ್ತಾರೆ. ಕೆಲವೊಮ್ಮೆ ಹೆಣ್ಣನ್ನೂ ಮುಂದಿರಿಸಲಾಗುತ್ತದೆ. ಐಎಸ್ಐಗೆ ಆರಂಭದಲ್ಲಿ ಪೂರ್ಣಬೆಂಬಲ ದೊರೆತದ್ದು ಇಲ್ಲಿನ ಮುಸಲ್ಮಾನರಿಂದಲ್ಲ. ಬದಲಿಗೆ ಎಲ್ಲೆಡೆ ಹರಡಿಕೊಂಡಿದ್ದ ಸಿಐಎ ಏಜೆಂಟರಿಂದ. ಜೊತೆಗೆ ಭಾರತದ ನಾಶಕ್ಕೆ ನಿಂತಿದ್ದ ಕಮ್ಯುನಿಸ್ಟರಿಂದ. ಹೀಗಾಗಿ ಯುನಿವಸರ್ಿಟಿಗಳು ಅವರ ಪರವಾಗಿ ಮಾತನಾಡಲಾರಂಭಿಸಿದವು. ಪತ್ರಿಕೆಗಳು ಉಗ್ರರ ಬೆಂಬಲಕ್ಕೆ ನಿಂತವು. ಸಂಜಯ್ ದತ್ ಮುಂಬೈ ಸ್ಫೋಟದ ನಂತರ ಸಿಕ್ಕಿ ಬಿದ್ದಾಗ ನ್ಯಾಯಾಲಯದಲ್ಲಿ ತನ್ನ ಹೆಂಡತಿ-ಮಕ್ಕಳ ಕುರಿತಂತೆ ಆಡಿದ ಮಾತುಗಳನ್ನು ಪತ್ರಕರ್ತರು ಮನೋಜ್ಞವಾಗಿ ನಮ್ಮ ಮುಂದಿರಿಸಿದರಲ್ಲ ಅದು ಇದರದ್ದೇ ಮುಂದುವರಿದ ಭಾಗ.
ಭಯೋತ್ಪಾದಕರನ್ನು ಗುಂಡಿಟ್ಟು ಕೊಂದುಬಿಡಬಲ್ಲ ಸಕರ್ಾರಕ್ಕೆ ಈ ಮಾನಸಿಕ ಯುದ್ಧವನ್ನೆದುರಿಸುವುದು ಸುಲಭವಲ್ಲ. ಹೀಗೆ ಬರೆಯುವ ಪತ್ರಿಕೆಗಳ ಮೇಲೆ, ಪತ್ರಕರ್ತರ ಮೇಲೆ ಸಕರ್ಾರ ನಿರ್ಬಂಧ ಹೇರಿದರೆ ಅದು ಮತ್ತಷ್ಟು ವಿಷಮ ಪರಿಸ್ಥಿತಿಗೆ ಒಯ್ಯುತ್ತದೆ. ಸರಿ. ಅವರನ್ನು ಹಿಡಿತಕ್ಕೆ ತರುವ ದೃಷ್ಟಿಯಿಂದ ಸ್ವಲ್ಪ ಆಚೀಚೆಯಾಗಿಬಿಟ್ಟರೆ ಸಾಮಾಜಿಕ ದಂಗೆಗಳಾಗಿಬಿಡುತ್ತವೆ. ಒಟ್ಟಾರೆ ದೇಶದ ಅಮೂಲ್ಯ ಸಮಯ ಗಡಿ ಸಮಸ್ಯೆ, ಆಂತರಿಕ ಸುರಕ್ಷತೆಯ ಸಮಸ್ಯೆಗಳಿಂದ ದೂರವಾಗಿ ಇಂತಹ ಕ್ಷುಲ್ಲಕ ವಿಚಾರಗಳಲ್ಲಿ ಕಳೆದು ಹೋಗಿಬಿಡುತ್ತದೆ. ಆಗ ಐಎಸ್ಐ ತನ್ನೆಲ್ಲ ಕೆಲಸಗಳನ್ನೂ ಸಲೀಸಾಗಿ ಪೂರೈಸಿಕೊಳ್ಳುತ್ತದೆ.
ಇಷ್ಟನ್ನೂ ಕೇಳಿದ ಮೇಲೆ, ಈಗ ಜೆಎನ್ಯು ಪ್ರಕರಣದತ್ತ ಕಣ್ಣು ಹಾಯಿಸಿ ನೋಡಿ. ಜೀಹಾದಿ ಉಗ್ರರನ್ನು ಬೆಂಬಲಿಸುವ ಉಮರ್ ಖಾಲಿದ್ ದೇಶದ ರಾಜಧಾನಿಯಲ್ಲಿ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಿಂತು ದೇಶವಿರೋಧಿ ಘೋಷಣೆ ಕೂಗಿದ್ದಾನೆಂದರೆ ಅದರರ್ಥವೇನು? ಆತನನ್ನು ಇಪ್ಪತ್ನಾಲ್ಕು ತಾಸು ಮಾಧ್ಯಮಗಳಲ್ಲಿ ಬರುವಂತೆ ಮಾಡಿ, ಆತನ ಸಂದರ್ಶನದ ಮೂಲಕ ಅವನ ಕುರಿತಂತೆ ಸದಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಾರ ಪಾತ್ರವಿದೆ? ಉಮರ್ ಖಾಲಿದ್ ನ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳನ್ನು ಸುದ್ದಿಯಲ್ಲಿ ಬಿಂಬಿಸದೇ ಕಾಶ್ಮೀರದ ಜನ ಖಾಲಿದ್ ನ ಬೆಂಬಲಕ್ಕೆ ನಿಂತಿದ್ದನ್ನು ವಿಸ್ತೃತ ವರದಿ ಮಾಡಿದರಲ್ಲ, ಏಕೆ?
ಹೌದು. ಐಎಸ್ಐನ ಮೂರನೇ ಅಂಗ ಭಾರತದಲ್ಲಿ ಬಲವಾಗಿಯೇ ಕೆಲಸ ಮಾಡುತ್ತಿದೆ. ಜಾಯಿಂಟ್ ಇಂಟಲಿಜೆನ್ ನಾಥರ್್(ಜೆಐಎನ್) ತೀವ್ರತರವಾಗಿ ಭಾರತದಲ್ಲಿ ತನ್ನ ಬಾಹುಗಳನ್ನು ಚಾಚಿದ್ದು ಪತ್ರಕರ್ತರನ್ನಷ್ಟೇ ಅಲ್ಲ ಅಧಿಕಾರಿಗಳು, ವ್ಯಾಪಾರಿಗಳು, ವಕೀಲರನ್ನೂ ಬುಟ್ಟಿಗೆ ಹಾಕಿಕೊಂಡಿದೆ. ಆ ಮೂಲಕವೇ ಉಗ್ರನ ಪರವಾಗಿ ವಾದ ಮಾಡುವ, ಅವನಿಗೆ ನಿರೀಕ್ಷಣಾ ಜಾಮೀನು ಕೊಡಿಸುವ, ಹೇಬಿಯಸ್ ಕಾರ್ಪಸ್ ಅಜರ್ಿ ಹಾಕಿಸುವ ಕೆಲಸ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅವರಿಗೆ ಸುಲಭ! ಕ್ರಿಮಿನಲ್ ಚಟುವಟಿಕೆ ಮಾಡಿ ಜೈಲಿನ ಒಳ ಹೊಕ್ಕವನನ್ನು ಭೇಟಿ ಮಾಡಿ ಅವನಿಗೆ ಊಟ-ತಿಂಡಿ-ಹಣ ಕೊಟ್ಟು ಬರುವ ತಂಡಗಳೂ ತಯಾರಾಗಿವೆ. ಹೊರಬಂದೊಡನೆ ಅವನ ಮೂಲಕ ಮತ್ತಷ್ಟು ಕೆಲಸ ಮಾಡಿಸುವ ದೂರಾಲೋಚನೆ ಅದು. ಇಷ್ಟಕ್ಕೂ ಇಂದು ಈ ಎಲ್ಲ ಕೆಲಸಗಳಿಗಾಗಿ ಹಣವನ್ನೂ ಇಲ್ಲಿಯೇ ಒಟ್ಟು ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಐಎಸ್ಐ.
ಆದರೆ ಒಂದಂತೂ ಸತ್ಯ. ಸಕರ್ಾರದ ಬದಲಾವಣೆಯ ನಂತರ ಐಎಸ್ಐನ ಬೆನ್ನು ಮೂಳೆ ಮುರಿದಂತಾಗಿದೆ. ಭಾರತದೊಳಗೆ ಆಂತರಿಕ ಸಂಘರ್ಷವನ್ನು ತೀವ್ರಗೊಳಿಸಿ ಸೈನಿಕರು ಗಡಿ ಬಿಟ್ಟು ಬರುವಂತೆ ಮಾಡುವ ಸತತ ಪ್ರಯತ್ನ ಮಾಡಿತ್ತು ಅದು. ಭಾರತದ ಗೂಢಚಾರ ಪಡೆಯ ಚುರುಕುಮತಿಯಿಂದಾಗಿ ಅನೇಕ ಆತಂಕವಾದಿಗಳು ಒಬ್ಬೊಬ್ಬರಾಗಿ ಸಿಕ್ಕಿಬೀಳುತ್ತಿದ್ದಾರೆ. ಅತ್ತ ಗಡಿಯುದ್ದಕ್ಕೂ ಲೇಸರ್ ಬೇಲಿಗಳನ್ನು ಹಾಕಿದ ನಂತರ ನುಸುಳುಕೋರರು ಒಳಬರುವುದೂ ಸುಲಭವಿಲ್ಲ. ಅನಿವಾರ್ಯವಾಗಿ ಕಾಶ್ಮೀರದಿಂದ ದೂರದ ಪಠಾನ್ ಕೋಟ್ನಲ್ಲಿ ದಾಳಿ ನಡೆಸಬೇಕಾಯ್ತು ಐಎಸ್ಐ. ಪ್ರತ್ಯಕ್ಷ ಸೋಲುತ್ತಿರುವ ಕದನವನ್ನೂ ಬೌದ್ಧಿಕ ಯುದ್ಧದಿಂದ ಗೆಲ್ಲಲೆಂದೇ ಉಮರ್ ಖಾಲಿದ್ ಮತ್ತು ಗೆಳೆಯರು ಕಾಶ್ಮೀರದೆಡೆಗೆ ದೇಶದ ಜನರನ್ನು ಸೆಳೆದದ್ದು. ಆದರೆ ಹಿಂದೂಗಳು ಬಿಡಿ ಮುಸಲ್ಮಾನರಿಗೂ ಕಾಶ್ಮೀರಿ ಮುಸಲ್ಮಾನರ ಕುರಿತಂತೆ ಒಲವಿಲ್ಲ. ಹೀಗಾಗಿ ಮಾಧ್ಯಮಗಳು ಉಮರ್ ಖಾಲಿದ್ನನ್ನು ಈ ಘಟನೆಯ ‘ಹೀರೋ’ ಆಗಿ ಬಿಂಬಿಸಲೇ ಇಲ್ಲ.
ಐಎಸ್ಐ ಸೋತಿದ್ದೆಲ್ಲಿ? ಯೋಚಿಸಲೇಬೇಕಲ್ಲವೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s