ಸಹಿಷ್ಣುತೆಯ CERTIFICATE ನಮಗೆ ಕೊಡ್ತಾರಂತೆ!

ನಿಮಗೆ ಗೊತ್ತಿರಲಿ. ಒಂದು ಪತ್ರಿಕೆ ಅಥವಾ ಚಾನೆಲ್ಲು ನಡೆಸೋದು ಸುಲಭದ ಸಂಗತಿಯಲ್ಲ. ನೂರಾರು ಕೋಟಿಯಿಂದ ಶುರುಮಾಡಿ ಸಾವಿರಾರು ಕೋಟಿಯವರೆಗೆ ಹೂಡಿಕೆ ಇರುವಂತಹ ಉದ್ದಿಮೆ ಅದು. ಹೀಗಾಗಿ ಒಂದೊಂದು ಮಾಧ್ಯಮ ಮನೆಗಳೂ ದೊಡ್ಡ-ದೊಡ್ಡ ಉದ್ದಿಮೆದಾರರ ಕೈಲೇ ಇರುವಂಥದ್ದು; ರಾಜಕಾರಣಿಗಳ ಕೃಪೆಯಿಂದಲೇ ನಡೆಯುವಂಥದ್ದು. ಈ ಮಾಧ್ಯಮಗಳು ವಿದೇಶದ ನೆಲದಲ್ಲಿಯೂ ಹಣ ಸಂಗ್ರಹಣೆಗೆ ಕಸರತ್ತು ನಡೆಸುತ್ತವೆ. ಅಲ್ಲೆಲ್ಲಾ ಇವರಿಗೆ ಭಾರತ ವಿರೋಧಿ ಶಕ್ತಿಗಳದ್ದೇ ಬೆಂಬಲ.

ಜೆಎನ್ಯು ಪ್ರಕರಣದ ಜಾಡು ಹಿಡಿದು ಹೊರಟಿದ್ದಕ್ಕೆ ಎಲ್ಲೆಲ್ಲಿಗೆ ಬಂದು ನಿಂತೆವು ನೋಡಿ. ಯಾವುದು ಕಣ್ಣಿಗೆ ಕಂಡಿತೋ ಅದಷ್ಟೇ ಪ್ರಕರಣವಲ್ಲ. ಅದರ ಹಿಂದೆ ಬಲು ದೊಡ್ಡ ಜಾಲವೇ ಹರಡಿಕೊಂಡಿದೆ. ಚಚರ್ು-ಸಿಐಎಗಳ ಬಲಾಢ್ಯ ನಂಟು, ಅವರ ಆಸಕ್ತಿಯನ್ನು ಈಡೇರಿಸಲು ಭಾರತದೊಳಗೆ ಕೈ ಜೋಡಿಸಿರುವ ಮಾಧ್ಯಮ ಇವೆಲ್ಲವೂ ಎಂಥವನಿಗೂ ಹೆದರಿಕೆ ಹುಟ್ಟಿಸುವಂಥವೇ. ಕಾಕತಾಳೀಯವೋ ಏನೋ? ಈ ಚಚರ್ೆ ನಾವು ಮಾಡುತ್ತಿರುವ ಹೊತ್ತಲ್ಲಿಯೇ ಕೇಂದ್ರ ಸಕರ್ಾರ ಅಮೇರಿಕದ ‘ಅಂತರರಾಷ್ಟ್ರೀಯ ಧಾಮರ್ಿಕ ಸ್ವಾತಂತ್ರ್ಯ ಕಮೀಷನ್’ನ ತಂಡಕ್ಕೆ ಭಾರತಕ್ಕೆ ಬರಲು ವೀಸಾ ನಿರಾಕರಿಸಿ ಗಟ್ಟಿತನವನ್ನು ತೋರಿದೆ!

1998ರಲ್ಲಿ ಅಮೇರಿಕಾ ಅಂತರರಾಷ್ಟ್ರೀಯ ಧಾಮರ್ಿಕ ಸ್ವಾತಂತ್ರ್ಯ ಕಾಯಿದೆಯ ಅಡಿಯಲ್ಲಿ ತಾನು ಈ ಕಮೀಷನ್ ರಚಿಸಿತು. ಇದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಭೇಟಿಕೊಟ್ಟು ಅಲ್ಲಿನ ಜನರ ಧಾಮರ್ಿಕ ಸಹಿಷ್ಣುತೆಯ ಬಗ್ಗೆ ವರದಿ ಕೊಡುವುದೆಂದು ಜಗತ್ತನ್ನು ಒಪ್ಪಿಸಿತು. ಒಪ್ಪಿಸುವುದೇನು ಬಿಡಿ. ಅದು ಹೇಳಿತು, ಜಗತ್ತು ಕೇಳಿತು ಅಷ್ಟೇ! ಯಾವ ದೇಶ ಜಗತ್ತಿನ ಅಶಾಂತಿಗೆ ನೇರ ಕಾರಣವಾಗಿದೆಯೋ ಅದು ಬೇರೆಯವರ ಸಹಿಷ್ಣುತೆಯ ಮಾಪನ ಮಾಡೋದಂತೆ! ಧಾಮರ್ಿಕ ಸಮಾನತೆಯ ಬೋಧನೆ ಮಾಡುವುದಂತೆ! ಇಷ್ಟಕ್ಕೂ ಈ ಕಮೀಷನ್ನಿನ ಅಧ್ಯಕ್ಷನಾಗುವವ ಚಚರ್ಿನ ಹಿತಾಸಕ್ತಿಗಳಿಗಾಗಿ ದುಡಿಯುವವನಾಗಿರಬೇಕು. ಹಾಗಿದ್ದರೆ ಮಾತ್ರ ಅವನನ್ನು ಆ ಸ್ಥಾನಕ್ಕೆ ಹೆಸರಿಸಲಾಗುತ್ತದೆ. ಈಗಿನ ಅಧ್ಯಕ್ಷ ರಾಬಟರ್್ ಜಾಜರ್್ ರೋಮನ್ ಕ್ಯಾಥೋಲಿಕನಾಗಿದ್ದು, ಕಟ್ಟರ್ವಾದಿ ಕ್ರಿಶ್ಚಿಯನ್ ಎಂಬ ಹೆಸರಿಗೆ ಪಾತ್ರನಾದವ. ನ್ಯೂಯಾಕರ್್ ಟೈಮ್ಸ್ನಲ್ಲಿ ಡೇವಿಡ್ ಪ್ಯಾಟ್ರಿಕ್ ಈತನ ಬಗ್ಗೆ ‘ಸಂಪ್ರದಾಯವಾದಿ ಕ್ರಿಶ್ಚಿಯನ್ ಚಿಂತಕ’ ಎಂದು ಹೊಗಳಿರುವುದರಲ್ಲಿಯೇ ಆತನ ಉದ್ದೇಶ ಏನಿರಬಹುದೆಂದು ಊಹಿಸಿಕೊಳ್ಳಬಹುದು.

USCIRF
ಈ ಕಮೀಷನ್ ಭಾರತಕ್ಕೆ ಬಂದು ಕೊಟ್ಟು ಹೋದ ವರದಿಗಳೆಲ್ಲವೂ ಕ್ರಿಶ್ಚಿಯನ್ಗಳ ಮೇಲೆ ಆಕ್ರಮಣ, ಮುಸಲ್ಮಾನ-ಸಿಖ್ಖರ ಮೇಲೆ ಆಕ್ರಮಣ ಎಂಬುದರ ವಿಸ್ತೃತ ರೂಪವಷ್ಟೇ. 2015ನೇ ಇಸವಿಯ ವರದಿಯನ್ನು ನೋಡಿ. (http://www.uscirf.gov/sites/default/files/India%202015.pdf) 2014ರ ನವೆಂಬರ್-ಡಿಸಂಬರ್ ಗಳಲ್ಲಿಯೇ ಕ್ರಿಶ್ಚಿಯನ್ನರ ವಿರುದ್ಧ 38 ಪ್ರಕರಣಗಳು ದಾಖಲಾಗಿವೆಯಂತೆ. ಕ್ಯಾಥೋಲಿಕ್ಕರ ಮೇಲೂ ಬಗೆಬಗೆಯ ದಾಳಿಗಳಾಗಿವೆಯಂತೆ. ದೆಹಲಿಯ ಅಂಗಡಿಯೊಂದರಲ್ಲಿ ಜೀಸಸರ ಚಿತ್ರ ತೂಗು ಹಾಕಿದ್ದಕ್ಕೆ 25 ಹಿಂದೂ ಮೂಲಭೂತವಾದಿಗಳು ಆಕ್ರಮಣ ಮಾಡಿ ಅಂಗಡಿ ಧ್ವಂಸ ಮಾಡಿದ್ದಾರಂತೆ. ಭಾರತವನ್ನು ಎಂದಿಗೂ ನೋಡದ ವ್ಯಕ್ತಿ ಈ ವರದಿಯನ್ನಷ್ಟೇ ಓದಿದರೆ ಅವನಿಗೆ ಹಿಂದೂಗಳೆಂದರೆ ರಾಕ್ಷಸರೆಂಬ ಅಭಿಪ್ರಾಯ ಖಂಡಿತ ಬಂದು ಬಿಡುತ್ತದೆ.
ಇವರಿಗೆ ಭಾರತದ ಮಾಧ್ಯಮಗಳ ಸಾಥು ಬೇರೆ. ಕಮೀಷನ್ ಇಲ್ಲಿಗೆ ಬರುವ ಕೆಲವು ದಿನಗಳ ಮುನ್ನ ಇಲ್ಲಿನ ಸಣ್ಣ ಘಟನೆಯನ್ನೂ ದೊಡ್ಡದು ಮಾಡಿಡುತ್ತಾರೆ. ಇಲ್ಲಿಗೆ ಬಂದ ಕಮೀಷನ್ ಆ ವಿಷಯದ ಕುರಿತಂತೆ ಜಗತ್ತಿನ ಗಮನ ಸೆಳೆಯುತ್ತದೆ. ಗಾಬರಿಗೊಂಡ ಸಕರ್ಾರ ತನ್ನ ಗೌರವವುಳಿಸಿಕೊಳ್ಳಲು ಇಲ್ಲಿನ ಕ್ರಿಶ್ಚಿಯನ್ನರಿಗೆ ಮತಪ್ರಚಾರಕ್ಕೆ ಇನ್ನೂ ಹೆಚ್ಚಿನ ಅನುಕೂಲಮಾಡಿಕೊಡುತ್ತದೆ. ಇಲ್ಲವಾದರೆ ಯಾವುದೋ ಲೆಕ್ಕಕ್ಕಿಲ್ಲದ ಚಚರ್ೊಂದರ ಚಿಲಕವನ್ನು ಕಳ್ಳನೊಬ್ಬ ಮುರಿದು ಹಾಕಿದರೂ ದೇಶದಲ್ಲಿ ಕ್ರಿಶ್ಚಿಯನ್ನರ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತೆಂದು ಬೊಬ್ಬಿಡುವ ಮಾಧ್ಯಮಗಳು, ಹಾಡುಹಗಲೇ ಹಿಂದೂ ತರುಣರ ಹತ್ಯೆಯಾಗಿ ಹೋದರೂ ಮಾತೇ ಆಡುವುದಿಲ್ಲವಲ್ಲ! ಏಕೆಂದು ಈಗ ಗೊತ್ತಾಯ್ತೆ?

201510301831589992_Godhra-train-carnage-wanted-accused-held_SECVPF
ಇದಕ್ಕೆ ಅದ್ಭುತವಾದ ನಿದರ್ಶನ ಗುಜರಾತಿನ ದಂಗೆಯೇ. 2002ರಲ್ಲಿ ಗೋಧ್ರಾ ದುರಂತ ನಡೆದಾಗ ಇಲ್ಲಿನ ಮಾಧ್ಯಮಗಳು ಹೆತ್ತಮ್ಮನನ್ನೇ ಕಳಕೊಂಡಂತೆ ಚೀರಾಡಿದವಲ್ಲ; ಅದರ ಹಿಂದೆಯೂ ಇಂಥದ್ದೇ ಆಮಿಷವಿತ್ತು. ರೈಲಿನ ಬೋಗಿಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಕರ ಸೇವಕರನ್ನು ಕೊಂದಿದ್ದು ಅವರಿಗೊಂದು ಮನಕಲಕುವ ಸಂಗತಿ ಎನಿಸಲೇ ಇಲ್ಲ. ಪ್ರತಿಕ್ರಿಯೆಯಿಂದ ನಡೆದ ಘಟನೆಗಳನ್ನು ವೈಭವೀಕರಿಸಿ ಜಗತ್ತಿನ ಮುಂದೆ ಹೇಗೆ ಪ್ರಸ್ತುತ ಪಡಿಸಿದರೆಂದರೆ ಇಲ್ಲಿ ಧಾಮರ್ಿಕ ಸಹಿಷ್ಣುತೆಗೆ ಜಾಗವೇ ಇಲ್ಲವೆಂಬಂತೆ ಬಿಂಬಿಸಿದರು. ಅದಾದ ಮೇಲೆ ಈ ಕಮಿಷನ್ಗಳು ವರದಿ ಮಂಡಿಸಿದವು. ಅದನ್ನು ಮುಂದಿಟ್ಟುಕೊಂಡು ಚಚರ್ುಗಳಿಗೆ ಅಪಾರ ಪ್ರಮಾಣದ ಹಣ ಹರಿದು ಬಂತು. ಸಹಜವಾಗಿಯೇ ಉಪಕರಿಸಿದ ಮಾಧ್ಯಮಗಳಿಗೂ ಪ್ರತ್ಯುಪಕಾರ ಸಂದಿರಬೇಕು.
ಈ ವೇಳೆಗೇ ಕಮೀಷನ್ ಎದುರಿಗೆ ಅಮೇರಿಕದಲ್ಲಿಯೇ ಹಾಜರಾದ ಕಮಲ್ ಮಿತ್ರ ಚಿನಾಯ್ ಇಡಿಯ ಘಟನೆಯನ್ನು ತನ್ನ ಮೂಗಿನ ನೇರಕ್ಕೇ ವಿವರಿಸಿದ. ಹಿಂದೂಗಳು ಕೂಡಿ ಬಾಳಲು ಯೋಗ್ಯರಲ್ಲ ಎಂಬಂತೆ ವಾದ ಮಂಡಿಸಿದ. ನರೇಂದ್ರ ಮೋದಿಯವರನ್ನು ಕಂಠಮಟ್ಟ ಜರಿದ. (http://indiafacts.org/treasonous-testimony-kamal-mitra-chenoy/) ಅದಾದ ಮೇಲೆಯೇ ಭಾರತ ಸಕರ್ಾರದ ಮೇಲೆ ಮಿಶನರಿಗಳು ಒತ್ತಡ ಹೇರಿದ್ದು, ಅಮೇರಿಕಾ ಮೋದಿಯವರಿಗೆ ವೀಸಾ ನಿರಾಕರಿಸಿದ್ದು!
ಈ ಘಟನೆ ವಿಶೇಷವಾಗಿ ಈಗ ಹಂಚಿಕೊಳ್ಳಲು ಕಾರಣವೇನು ಗೊತ್ತೇ? ಕಮಲ್ ಮಿತ್ರ ಚೆನಾಯ್ ಜೆಎನ್ಯುನಲ್ಲಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರೊಫೆಸರ್ ಆಗಿದ್ದವರು. ಕಮ್ಯುನಿಸ್ಟ್ ಪಾಟರ್ಿ ಆಫ್ ಇಂಡಿಯಾದ ಕೇಂದ್ರ ಸಮಿತಿಯ ಸದಸ್ಯರಾಗಿದ್ದವರು. ಜೊತೆಗೆ ಸಿಐಎ ಬೆಂಬಲಿತ ಫೋಡರ್್ ಸಂಸ್ಥೆಯಿಂದ ಹಣ ಸ್ವೀಕಾರದ ಆರೋಪಕ್ಕೆ ಗುರಿಯಾಗಿದ್ದ ಆಮ್ ಆದ್ಮಿ ಪಾಟರ್ಿಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದವರು!!

kamalmitrachenoy-uniteagainstindianstate
ಅಂದರೆ ಸಿಐಎ, ಆ ಮೂಲಕ ಚಚರ್ು ಜೊತೆಗೆ ಕಮ್ಯುನಿಸ್ಟರು ಎಲ್ಲರೂ ಸೇರಿ ದೇಶ ತುಂಡರಿಸುವ ಸಂಚು ಜೆಎನ್ಯುನಲ್ಲಿ! ಎಲ್ಲಕ್ಕೂ ಕೊಂಡಿ ಕಮಲ್ ಮಿತ್ರ ಚೆನಾಯ್! ಈ ಬಗೆಯ ಕೊಂಡಿಗಳು ಅಲ್ಲಿ ಅನೇಕ ಇವೆ. ಬಹುಶಃ ಈಗ ಸ್ಪಷ್ಟವಾಗಿರಬೇಕು. ಈ ಗಲಾಟೆಗಳನ್ನು ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿ ರಾಡಿ ಎಬ್ಬಿಸಬೇಕು. ಅದರ ಹಿಂದುಹಿಂದೆಯೇ ಅಮೇರಿಕದ ಈ ಕಮೀಷನ್ ಭಾರತಕ್ಕೆ ಬಂದು ಜೆಎನ್ಯುಗೆ ಹೋಗಿ ಉಮರ್ ಮತ್ತವನ ಗೆಳೆಯರನ್ನು ಮಾತನಾಡಿಸಿ ಭಾರತದಲ್ಲಿ ಹಿಂದೂಗಳು ಅನ್ಯಮತೀಯರನ್ನು ದಮನಿಸುತ್ತಿದ್ದಾರೆಂದು ಜಗತ್ತಿಗೆ ಡಂಗುರ ಹೊಡೆಯಬೇಕು. ಭಾರತದ ಕುರಿತಂತೆ ಅದಾಗಲೇ ಜಗತ್ತಿನಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಸದ್ಭಾವನೆಯನ್ನು ಹತ್ತಿಕ್ಕಬೇಕು. ಕೊನೆಗೆ ಮತ್ತೆ ನರೇಂದ್ರ ಮೋದಿ ಮಿಶನರಿಗಳೆದುರು ತಲೆಬಾಗಿ ನಿಮಗೆ ತೊಂದರೆ ಕೊಡಲಾರೆನೆಂದು ಗೋಗರೆಯಬೇಕು. ಇಷ್ಟೂ ಯೋಜನೆಯಾಗಿತ್ತು. ಮೋದಿ ಒಂದು ಹೆಜ್ಜೆ ಮುಂದಿಟ್ಟು ಆ ಕಮೀಷನ್ನಿನ ಸದಸ್ಯರಿಗೆ ವೀಸಾ ನಿರಾಕರಿಸಿಬಿಟ್ಟರು. ಅಲ್ಲಿಗೆ ಎಲ್ಲಕ್ಕೂ ಫುಲ್ಸ್ಟಾಪ್ ಇಟ್ಟಂತಾಯ್ತು!
ಅಮೇರಿಕದ ಧಾಷ್ಟ್ರ್ಯವನ್ನು ಮೆಚ್ಚಲೇಬೇಕು ಬಿಡಿ. ಇರಾಕ್ನ ಮೇಲೆ ಏಕಪಕ್ಷೀಯ ದಾಳಿನಡೆಸಿ ಸದ್ದಾಂ ಹುಸೇನನನ್ನು ಕೊಂದದ್ದು ಅಮೇರಿಕಾ; ಅಫ್ಘಾನಿಸ್ತಾನದ ಮೇಲೆರಗಿ ಸಾವಿರಾರು ಜನರ ಮಾರಣ ಹೋಮ ನಡೆಸಿದ್ದು ಅಮೇರಿಕಾ. ಕೊನೆಗೆ ಒಸಾಮಾ ಬಿನ್ ಲಾಡೇನನಿಗೆ ಸಾಕಷ್ಟು ಹಣ ಕೊಟ್ಟು ಬೆಳೆಸಿ ಅವನಿಂದ ಇನ್ನು ಉಪಯೋಗವಾಗಲಾರದೆಂದಾಗ ಅವನನ್ನೂ ಮುಗಿಸಿದ್ದು ಅಮೇರಿಕಾ. ಇಷ್ಟೇ ಅಲ್ಲ. ಜಗತ್ತಿನ ಅನೇಕ ರಾಜಕೀಯ ಹತ್ಯೆಗಳಲ್ಲಿ ಅಮೇರಿಕಾದ ಕೈವಾಡ ದೃಗ್ಗೋಚರ. ಜಗತ್ತಿನಲ್ಲೆಲ್ಲಾ ರಕ್ತದೋಕುಳಿಯಾಡಿದ ರಾಷ್ಟ್ರವೊಂದು ಸಹಿಷ್ಣುತೆಯ ಸಟರ್ಿಫಿಕೇಟ್ ಕೊಡುವ ಅಧಿಕಾರ ಪಡೆದಿರುವುದು ಹಾಸ್ಯಾಸ್ಪದವೆನಿಸುವುದಿಲ್ಲವೇ?
ಅವರನ್ನು ಬಿಡಿ. ನಮ್ಮ ದೇಶದ ಮಾಧ್ಯಮಗಳಿಗೇನಾಗಿದೆ. ಇಲ್ಲಿನ ಅನ್ನ ತಿಂದ ಪತ್ರಕರ್ತರೇಕೆ ಪಶ್ಚಿಮದ ತಾಳಕ್ಕೆ ತಕ್ಕಂತೆ ನತರ್ಿಸುತ್ತಾರೆ?
ನೆನಪುಮಾಡಿಕೊಳ್ಳಿ. ಗುಜರಾತಿನ ರಸ್ತೆಯಲ್ಲಿ ಇಶ್ರತ್ ಜಹಾನ್ ಪೊಲೀಸರ ಎನ್ಕೌಂಟರಿಗೆ ಬಲಿಯಾಗಿ ಅಂಗಾತ ಬಿದ್ದುಕೊಂಡಿದ್ದಳು. ಆಕೆ ಗುಜರಾತಿನ ಮುಖ್ಯಮಂತ್ರಿಯವರ ಹತ್ಯೆಗೆಂದೇ ಬಂದಿದ್ದಳು. ಅದಕ್ಕೆ ಬೇಕಾದ ಸಾಕ್ಷಿ-ಪುರಾವೆಗಳು ವಿಪುಲವಾಗಿ ಸಿಕ್ಕವು. ಅಷ್ಟಾದರೂ ಮಾಧ್ಯಮಗಳು ಬಿಡಲಿಲ್ಲ. ಆಕೆಯ ಮನೆಗೆ ಹೋಗಿ ಸಂದರ್ಶನ ನಡೆಸಿದವು. ಇಶ್ರತ್ಳ ತಾಯಿ ‘ನನ್ನ ಮಗಳು ನಿರಪರಾಧಿ’ ಎಂದು ಹೇಳುವುದನ್ನು ಮತ್ತೆ ಮತ್ತೆ ಪ್ರಸಾರ ಮಾಡಿದವು. ಮುಗ್ಧರನ್ನು ಹಿಂದೂಶಕ್ತಿಗಳು ಹತ್ಯೆ ಮಾಡುತ್ತಿವೆ ಎಂದು ಜಗತ್ತಿನ ಮುಂದೆ ಅಲವತ್ತುಕೊಂಡವು. ಆಮೇಲೇನು? ಸಹಿಷ್ಣುತೆಯ ಸಟರ್ಿಫಿಕೇಟ್ ಕೊಡುವ ಅಮೇರಿಕದ ಕಮೀಷನ್ನು ಭಾರತದಲ್ಲಿ ಮುಸಲ್ಮಾನರನ್ನು ಭಯೋತ್ಪಾದಕರೆಂದು ಕರೆದು ಹಿಂಸಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂದು ತಾನೇ ತೀಪರ್ು ಕೊಟ್ಟುಬಿಟ್ಟಿತು!

ishrat-jahan
ಈ ಕಾರಣಕ್ಕಾಗಿಯೇ ದೆಹಲಿಯಲ್ಲಿ ಶ್ರೀ ರವಿಶಂಕರ್ ಗುರೂಜಿ ವಿಶ್ವ ಸಾಂಸಕೃತಿಕ ಸಮ್ಮೇಳನ ಆಯೋಜಿಸಿದ್ದನ್ನು ಮಾಧ್ಯಮಗಳು ವರದಿ ಮಾಡಲೇ ಇಲ್ಲ. ಭಾರತದ ಎಲ್ಲ ಜಾತಿ-ಮತ-ಪಂಥಗಳ ಜನ ಜಗತ್ತಿನ ಜನರೊಂದಿಗೆ ಸಮಸಮಕ್ಕೆ ನಿಂತು ಶಾಂತಿಯ ಸಂದೇಶ ಸಾರಿದ್ದನ್ನು ಜಗತ್ತಿನ ಮುಂದಿರಿಸಿದರೆ ಸಹಿಷ್ಣುತೆಯ ಸಟರ್ಿಫಿಕೇಟ್ ಕೊಡುವವರ ತಲೆ ಕೆಟ್ಟೀತು ಅಂತ. ಅವರು ಇಷ್ಟು ದಿನ ಹೇಳಿದ್ದು ಅಪ್ಪಟ ಸುಳ್ಳು ಅಂತ ಜಗತ್ತಿಗೆ ಗೊತ್ತಾದೀತು ಅಂತ. ಅಬ್ಬ! ಬಲು ಮೋಸಗಾರರಪ್ಪ ಇವರು.
2014 ರಲ್ಲಿ ಎನ್.ಎಸ್.ಎ ಯ ಮುಖ್ಯಸ್ಥ ಅಜಿತ್ ದೋವಲ್, ತವ್ಲೀನ್ ಸಿಂಗ್ ಮೊದಲಾದವರು ಸೇರಿ ಇಶ್ರತ್ಳ ಕುರಿತಂತೆ ರೂಪಿಸಿದ ಕಿರು ಚಿತ್ರ ಈ ವಿಚಾರದಲ್ಲಿ ಬಹುಮೂಲ್ಯ ಮಾಹಿತಿಯನ್ನೂ, ಸಾಕ್ಷ್ಯವನ್ನೂ ಒದಗಿಸಿತ್ತು. ಆದರೆ ಯಾವ ಮಾಧ್ಯಮಗಳೂ ಈ ಮುಕ್ಕಾಲುಗಂಟೆಯ ವಿಡಿಯೋ ಪ್ರದರ್ಶನಕ್ಕೆ ಒಪ್ಪಲೇ ಇಲ್ಲ. ( https://youtu.be/g7kkrRAoZYM) ಸ್ವತಃ ಅಜಿತ್ ದೋವಲ್ರೇ ಕೇಳಿಕೊಂಡ ನಂತರವೂ. ಈ ಕಿರು ಚಿತ್ರದ ಹಿಂದೆ ಸಾಕಷ್ಟು ಶ್ರಮ ಹಾಕಿದ್ದ ಕಬೀರ್ ಸಿಂಗ್ ಮತ್ತು ಮನೀಶ್ ಪಂಡಿತ್ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡು ಸುಮ್ಮನಾದರು. ಅಷ್ಟೇ!
ಎರಡು ವರ್ಷಗಳ ನಂತರ ಡೇವಿಡ್ ಹೆಡ್ಲಿ ಅಮೇರಿಕದಲ್ಲಿ ಬಾಯ್ಬಿಟ್ಟ ಸತ್ಯಗಳನ್ನು ಕೆಲವು ಮಾಧ್ಯಮಗಳು ಹಿಡಿದು ಸಂಶೋಧಿಸಲಾರಂಭಿಸಿದವು. ಆಗ ಬಯಲಾಯ್ತು ಸತ್ಯ. ಆಕೆ ಭಯೋತ್ಪಾದಕ ಕೃತ್ಯಕ್ಕೆಂದೇ ಗುಜರಾತ್ಗೆ ಹೋಗಿರುವುದು ಖಾತ್ರಿಯಾಗಿದ್ದಾಗಲೂ ಅಂದಿನ ಸಕರ್ಾರ ಅದನ್ನು ಮರೆಮಾಚಿತ್ತು. ವರದಿಯನ್ನು ತಿರುಚಿತ್ತು. ಕೆಲವು ಸುಪ್ರಸಿದ್ಧ ಮಾಧ್ಯಮ ಮನೆಗಳೂ ಇದರಲ್ಲಿ ಕೈಯ್ಯಾಡಿಸಿದ್ದವು. ಕಾರಣ ಒಂದೇ. ನರೇಂದ್ರ ಮೋದಿಯನ್ನು ಕೇಂದ್ರ ಗಾದಿಯಿಂದ ದೂರಸರಿಸಬೇಕಿತ್ತು.
ಹೌದು. ಜೀಹಾದಿ ಶಕ್ತಿಗಳಿಗೆ ಮೋದಿ ಶತ್ರು. ಏಕೆಂದರೆ ಗುಜರಾತಿನಲ್ಲಿ ಆತ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತಂದು ದೇಶಕ್ಕಾಗಿ ದುಡಿಯುವಂತೆ ಮಾಡಿದ್ದಾರೆ. ಮಿಶನರಿಗಳಿಗೆ ಅವರು ಶತ್ರು. ಏಕೆಂದರೆ ಇವರು ಭಾರತದ ಕುರಿತಂತೆ ಹೇಳುತ್ತಿರುವ ಸುದ್ದಿಯೆಲ್ಲ ಸುಳ್ಳೆಂದು ಅವರು ಜಗತ್ತಿನ ಮುಂದೆ ಬಲವಾಗಿ ಪ್ರತಿಪಾದಿಸಬಲ್ಲರು. ಹಾಗೇನಾದರೂ ಆಗಿಬಿಟ್ಟರೆ ಎಲ್ಲೆಡೆ ಸಂಗ್ರಹವಾಗುತ್ತಿರುವ ಹಣ ನಿಂತೀತು. ಮತಾಂತರದ ಕಾರ್ಯಕ್ಕೆ ತಡೆಯಾದೀತು. ಅದು ಇಲ್ಲಿನ ಮಾಧ್ಯಮಗಳ ಮೇಲೂ ವಿಪರೀತ ಪರಿಣಾಮ ಬೀರಬಲ್ಲದು! ಅವರಿಬ್ಬರೂ ಶತಾಯಗತಾಯ ಮೋದಿಯನ್ನು ಗಾದಿಯಿಂದ ದೂರವಿರಿಸಲು ಯತ್ನಿಸುವವರೇ. ಭಾರತೀಯ ಮಾಧ್ಯಮಗಳಿಗೇಕೆ ಮೋದಿಯ ವಿರೋಧ? ಯೋಚಿಸಲೇಬೇಕಾದ ಸಂಗತಿ.
ಹ್ಞಾಂ. ನೆನಪಿಡಿ. ಮಾಧ್ಯಮಗಳು ಎನ್ನುವಾಗ ನನ್ನ ದೃಷ್ಟಿ ಇಂಗ್ಲೀಷ್ ಚಾನೆಲ್ಗಳು ಮತ್ತು ಪತ್ರಿಕೆಗಳ ಮೇಲೆಯೇ! ಜಗತ್ತಿಗೆ ಭಾರತವನ್ನು ತೋರಿಸುವ ಕಿಂಡಿ ಇವುಗಳೇ. ಹೀಗಾಗಿಯೇ ಇವರು ಒಪಿನಿಯನ್ ಮೇಕರ್ಗಳು. ಇಲ್ಲವಾದರೆ ಕೆಲವು ಲಕ್ಷದಷ್ಟೂ ವೀಕ್ಷಕರಿಲ್ಲದ ಈ ಚಾನೆಲ್ಗಳು ಇಷ್ಟು ಮೆರೆಯೋದು ಸಾಧ್ಯವೇ ಇರಲಿಲ್ಲ. ಅಷ್ಟೂ ಇಂಗ್ಲೀಷ್ ಚಾನೆಲ್ಲುಗಳಿಗೆ ಸೇರಿ ಎಷ್ಟು ವೀಕ್ಷಕರಿದ್ದಾರೋ ಅಷ್ಟು ವೀಕ್ಷಕರು ಒಂದು ಹಿಂದಿ ಚಾನೆಲ್ಲಿಗಿರುತ್ತಾರೆ. ಆದರೆ ದುರಂತವೇನು ಗೊತ್ತೇ? ದೆಹಲಿಯಲ್ಲಿ ಕುಳಿತ ಇಂಗ್ಲೀಷ್ ಚಾನೆಲ್ಲುಗಳು ಅಜೆಂಡಾ ನಿರ್ಧರಿಸುತ್ತವೆ; ಬೆಪ್ಪರಂತೆ ಬೆಂಗಳೂರಿನಲ್ಲಿ ಕುಳಿತ ಕನ್ನಡ ಚಾನಲ್ಲೂ ಅದನ್ನೇ ಪ್ರಸಾರ ಮಾಡುತ್ತದೆ! ಇದೇ ಕಥೆ ಪತ್ರಿಕೆಗಳಿಗೂ ಅನ್ವಯವಾಗುತ್ತದೆ. ಸದ್ಯ. ಸಾಮಾಜಿಕ ಜಾಲತಾಣಗಳು ಚುರುಕಾಗಿ ಸ್ಪಂದಿಸುತ್ತವೆಂಬ ಕಾರಣಕ್ಕೆ ನಾವು ಬದುಕಿದ್ದೇವೆ. ಇಲ್ಲವಾದಲ್ಲಿ ಇವರು ಹೇಳಿದ ಸುಳ್ಳುಗಳನ್ನೇ ಸತ್ಯವೆಂದು ನಾವೆಲ್ಲ ನಂಬಬೇಕಿತ್ತು.
ಇವೆಲ್ಲ ಸರಿ. ಮಾಧ್ಯಮಗಳಿಗೆ ಇದರಿಂದಾಗುವ ಲಾಭವಾದರೂ ಏನು? ನಿಮಗೆ ಗೊತ್ತಿರಲಿ. ಒಂದು ಪತ್ರಿಕೆ ಅಥವಾ ಚಾನೆಲ್ಲು ನಡೆಸೋದು ಸುಲಭದ ಸಂಗತಿಯಲ್ಲ. ನೂರಾರು ಕೋಟಿಯಿಂದ ಶುರುಮಾಡಿ ಸಾವಿರಾರು ಕೋಟಿಯವರೆಗೆ ಹೂಡಿಕೆ ಇರುವಂತಹ ಉದ್ದಿಮೆ ಅದು. ಹೀಗಾಗಿ ಒಂದೊಂದು ಮಾಧ್ಯಮ ಮನೆಗಳೂ ದೊಡ್ಡ-ದೊಡ್ಡ ಉದ್ದಿಮೆದಾರರ ಕೈಲೇ ಇರುವಂಥದ್ದು; ರಾಜಕಾರಣಿಗಳ ಕೃಪೆಯಿಂದಲೇ ನಡೆಯುವಂಥದ್ದು. ಈ ಮಾಧ್ಯಮಗಳು ವಿದೇಶದ ನೆಲದಲ್ಲಿಯೂ ಹಣ ಸಂಗ್ರಹಣೆಗೆ ಕಸರತ್ತು ನಡೆಸುತ್ತವೆ. ಅಲ್ಲೆಲ್ಲಾ ಇವರಿಗೆ ಭಾರತ ವಿರೋಧಿ ಶಕ್ತಿಗಳದ್ದೇ ಬೆಂಬಲ. ಇತ್ತೀಚೆಗೆ ಎನ್ಡಿಟಿವಿ ಈ ಕಲುಷಿತ ಸಂಬಂಧಗಳಿಂದಲೇ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದ್ದು ಬೆಳಕಿಗೆ ಬಂತು. ಫೇಮಾ (ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್) ಕಾನೂನುಗಳನ್ನು ಉಲ್ಲಂಘಿಸಿ ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಹೇರಾಫೇರಿ ಮಾಡಿದ್ದನ್ನು ಈಡಿ (ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್) ಗುರುತಿಸಿತು. ಬೇರೆ ಬೇರೆ ಕಂಪನಿಗಳ ಹೆಸರಲ್ಲಿ ಮಾರಿಶಸ್ನಿಂದಲೂ ಭಾರತಕ್ಕೆ ಹಣ ತರಲು ಬೆಂಬಲವಾಗಿ ನಿಂತ ಎನ್ಡಿಟಿವಿ ವಿದೇಶದಲ್ಲಿದ್ದ ಕಪ್ಪು ಹಣವನ್ನು ಮತ್ತೆ ಭಾರತದಲ್ಲಿ ಹೂಡಲು ಸಹಕಾರಿಯಾಗಿರುವುದನ್ನೂ ತಳ್ಳಿ ಹಾಕುವಂತಿಲ್ಲ!
ಅನೇಕ ಬಾರಿ ನಾವು ಟಿವಿಯಲ್ಲಿ ಬರುವ ಸುದ್ದಿಗಳ ಆಧಾರದ ಮೇಲೆ ವ್ಯಕ್ತಿಯೊಬ್ಬರ ಬದುಕನ್ನು ನಿರ್ಧರಿಸುತ್ತೇವೆ, ಸಕರ್ಾರವೊಂದರ ಯೋಗ್ಯತೆಯನ್ನು ಅಳೆಯುತ್ತೇವೆ. ಕೊನೆಗೆ ದೇಶದ ಭವಿಷ್ಯವನ್ನೂ ಕುಳಿತಲ್ಲೇ ಹೇಳಿಬಿಡುತ್ತೇವೆ. ಆದರೆ ಇವೆಲ್ಲದರ ಹಿಂದೆ ಕುಳಿತಿರುವ ಜನ ಎಷ್ಟರ ಮಟ್ಟಿಗೆ ನಂಬಿಕೆಗೆ ಅರ್ಹರು ಎಂಬುದನ್ನೇ ಮರೆತು ಬಿಡುತ್ತೇವೆ. ನಮ್ಮ ಪುಣ್ಯ. ಒಂದಷ್ಟು ರಾಷ್ಟ್ರಮಟ್ಟದ ವಾಹಿನಿಗಳು ಕಳೆದ ಕೆಲವಾರು ತಿಂಗಳಿಂದ ರಾಷ್ಟ್ರೀಯತೆಯ ಕಡೆಗೆ ವಾಲಿಕೊಂಡಿವೆ. ಇಲ್ಲವಾದಲ್ಲಿ ರೋಹಿತ್ ವೇಮುಲ ಮತ್ತು ಕನ್ಹಯ್ಯಾ ಇಬ್ಬರ ಘಟನೆಗಳು ಕೇಂದ್ರ ಸಕರ್ಾರವನ್ನೇ ಉರುಳಿಸಲು ಸಾಕಾಗಿತ್ತು! ಅತಿಶಯೋಕ್ತಿ ಎನಿಸಬಹುದು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಇವೇ ಮಾಧ್ಯಮಗಳು ಈ ಹಿಂದೆ ಮಾಡಿದ ಕರಾಮತ್ತುಗಳನ್ನು ನೆನಪಿಸಿಕೊಳ್ಳಿ. ಹೌದೆನಿಸೀತು!

3 thoughts on “ಸಹಿಷ್ಣುತೆಯ CERTIFICATE ನಮಗೆ ಕೊಡ್ತಾರಂತೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s