18 ಗಂಟೆ ಕೆಲಸ ಮಾಡೋರು ಎಷ್ಟೊಂದು ಮಂದಿ!

ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ ಚೈನಾದ ಏಕಸ್ವಾಮ್ಯ ಮುರಿಯಲು ಜಂಟಿ ಗಸ್ತು ಯೋಜನೆಗೆ ಭಾರತವನ್ನು ಆಹ್ವಾನಿಸಿತು. ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಭಾರತ ಅವಶ್ಯಕತೆ ಬಿದ್ದರೆ ಕೈ ಜೋಡಿಸುವುದಾಗಿ ಹೇಳಿ ಚೈನಾದ ಆತಂಕ ಹಾಗೆಯೇ ಇರುವಂತೆ ನೋಡಿಕೊಂಡಿತು

manohar-parrikar_759

ಒಂದೆಡೆ ಭಾರತ ತುಂಡಾಗಲೆಂದು ಅರಚಾಡುವ ಯುವ ಸಮಾಜ, ಅವರಿಗೆ ಬೆಂಬಲವಾಗಿ ನಿಂತ ದೇಶದ್ರೋಹಿಗಳು; ಮತ್ತೊಂದೆಡೆ ಕುತ್ತಿಗೆ ಕತ್ತರಿಸಿದರೂ ಭಾರತ ಮಾತೆಗೆ ಜೈ ಎನ್ನಲಾರೆ ಎನ್ನುವವ. ಇವರ ನಡುವೆ ಅತ್ಯಂತ ಶಾಂತವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸಕರ್ಾರದ ಮಂತ್ರಿಗಳು.
ವಿದೇಶ ಮಂತ್ರಿಯಾಗಿ ಕಣ್ಣುಕುಕ್ಕುವಂತೆ ಚಟುವಟಿಕೆಯಲ್ಲಿ ನಿರತರಾಗಿರುವ ಸುಷ್ಮಸ್ವರಾಜ್, ರೈಲು ಯಾನದಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣವಾದ ಸುರೇಶಪ್ರಭು; ರಸ್ತೆ ನಿಮರ್ಾಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ನಿತಿನ್ ಗಡ್ಕರಿ, ವಿನಾಕಾರಣ ಸುದ್ದಿ ಮಾಡುತ್ತಲೇ ಶಾಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯತೆಗೆ ಬದ್ಧವಾಗಿರುವ ಸ್ಮೃತಿ ಇರಾನಿ; ಅನಧಿಕೃತವಾಗಿ ಸಕರ್ಾರಿ ಬಂಗಲೆಗಳಲ್ಲಿ ವಾಸವಾಗಿದ್ದವರನ್ನು ಮುಲಾಜಿಲ್ಲದೇ ಹೊರದಬ್ಬಿದ ವೆಂಕಯ್ಯನಾಯ್ಡು, ವಿದ್ಯುತ್ ಕ್ಷೇತ್ರದಲ್ಲಿ ಮಿಂಚಿನ ವೇಗದಲ್ಲಿ ಫಲಿತಾಂಶ ನೀಡುತ್ತಿರುವ ಪೀಯೂಷ್ ಗೋಯಲ್ ಇವರೆಲ್ಲಾ ಮೋದಿಯವರ ಸಮರ್ಥ ಸೇನಾಪತಿಗಳೇ. ಇವರ ಜೊತೆಜೊತೆಗೇ ನಿಲ್ಲುವ ಮತ್ತೊಬ್ಬ ಸಾಹಸಿಗ ಮನೋಹರ್ ಪರಿಕ್ಕರ್.
ರಕ್ಷಣಾ ಸಚಿವರಾಗೋದು ಅನೇಕ ರಾಜಕಾರಣಿಗಳ ಕನಸು. ಗೃಹಸಚಿವರನ್ನು ಬಿಟ್ಟರೆ ಬಲು ಬೇಡಿಕೆ ಇರುವ ಕುಚರ್ಿ ಅದು. ಅಲ್ಲಿ ಲಕ್ಷ-ಕೋಟಿಗಳ ವ್ಯವಹಾರವೇ ಇಲ್ಲ. ಬರಿ ಲಕ್ಷಾಂತರ ಕೋಟಿಗಳ ವ್ಯವಹಾರ ಮಾತ್ರ! ಅಷ್ಟೇ ಮಟ್ಟಿಗೆ ಅಪಪ್ರಚಾರದ ಭಯ ಕೂಡ. ಜಾಜರ್್ ಫನರ್ಾಂಡೀಸ್ರನ್ನೂ ಬಿಡಲಿಲ್ಲ ಈ ಭ್ರಷ್ಟಾಚಾರದ ಭೂತ. ಅದಕ್ಕೆ ಶುದ್ಧ ಹಸ್ತದ ಆಂಟನಿ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳಲೇ ಇಲ್ಲ. ಹೀಗಾಗಿಯೇ ಯುಪಿಎ ಹತ್ತು ವರ್ಷಗಳ ಅವಧಿಯಲ್ಲಿ ಚೀನಾ ಎದುರಿಗೆ ಭಾರತ ಕನಿಷ್ಠ ಐವತ್ತು ವರ್ಷಗಳಷ್ಟು ಹಿಂದೆ ಹೋಗಿ ನಿಂತುಬಿಟ್ಟಿತು. ಭಾರತದ ಮೇಲೆ ಏಷ್ಯನ್ ರಾಷ್ಟ್ರಗಳಿಗೆ ಭರವಸೆಯೇ ಉಳಿದಿರಲಿಲ್ಲ.
ಈ ವೇಳೆಗೆ ರಕ್ಷಣಾ ಇಲಾಖೆಗೆ ಶುದ್ಧ ಹಸ್ತದವರಷ್ಟೇ ಅಲ್ಲ, ಚತುರ, ಕ್ರಿಯಾಶೀಲ ವ್ಯಕ್ತಿಯೇ ಬೇಕಾಗಿತ್ತು. ಆಗಲೇ ಮೋದಿ ಆಯ್ದುಕೊಂಡದ್ದು ಪರಿಕ್ಕರರನ್ನು. ಗೋವಾದ ಮುಖ್ಯಮಂತ್ರಿ ಹುದ್ದೆ ಬಿಡಿಸಿ ಕೇಂದ್ರ ಮಂತ್ರಿ ಮಾಡಿದರೆಂದರೆ ಅಂದಾಜು ಹಾಕಿ. ಅವರ ವಿಶ್ವಾಸಾರ್ಹತೆ ಎಷ್ಟಿರಬೇಕು. ಇವಿಷ್ಟನ್ನೂ ಈಗ ಹೇಳಲಿಕ್ಕೆ ಕಾರಣವಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದ ಪರಿಕ್ಕರರು ಅಚ್ಚರಿಯ, ಗಾಬರಿ ಹುಟ್ಟಿಸುವ ಸಂಗತಿಯೊಂದನ್ನು ಎಲ್ಲರೊಡನೆ ಹಂಚಿಕೊಂಡರು. ಹಳೆಯ ಸಕರ್ಾರಗಳು ಅಮೇರಿಕಾದಿಂದ ಶಸ್ತ್ರ ಖರೀದಿಗೆಂದು 3 ಬಿಲಿಯನ್ ಡಾಲರುಗಳಷ್ಟು ಹಣವನ್ನು ಅಮೆರಿಕಾಕ್ಕೆ ಪಾವತಿಸಿ ಮರೆತು ಕುಳಿತು ಬಿಟ್ಟಿತ್ತು. ಅದರ ಜಾಡು ಹಿಡಿದ ಪರಿಕ್ಕರರು ಆ ಹಣವನ್ನು ಈ ಬಾರಿಯ ಬಜೆಟ್ಗೆ ಸರಿತೂಗಿಸುವ ಮೂಲಕ ಕೇಂದ್ರ ಬೊಕ್ಕಸಕ್ಕೆ ಸಾವಿರಾರು ಕೋಟಿ ಲಾಭ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ. ಶಸ್ತ್ರಾಸ್ತ್ರ ಖರೀದಿಯಲ್ಲಿ ಹಣ ಪಾವತಿಸುವ ವಿಧಾನ, ಚೌಕಶಿಗಳ ಮೂಲಕ ಸುಮಾರು 3 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ಬರಿಯ ಉಳಿಕೆಯಷ್ಟೇ ಅವರ ಸಾಧನೆಯಲ್ಲ.
ಗಡಿಕಾಯುವ ಸೈನಿಕನಿಗೆ, ಉಗ್ರರ ಗುಂಡಿಗೆ ಎದೆ ಕೊಡುವ ಯೋಧನಿಗೆ ಬುಲೆಟ್ ಪ್ರೂಫ್ ಜಾಕೆಟನ್ನು ಒದಗಿಸುವಲ್ಲಿ ಹಿಂದಿನ ಸಕರ್ಾರಗಳು ವಿಫಲವಾಗಿದ್ದವು. 2009ರಿಂದಲೇ ಖರೀದಿಯ ಮಾತುಕತೆಗಳು ನಡೆದಿದ್ದರೂ ವೇಗ ಪಡಕೊಂಡಿದ್ದು ಮಾತ್ರ ಈ ಅವಧಿಯಲ್ಲಿಯೇ. ಸುಮಾರು 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಸೈನಿಕನಿಗೆ ಒದಗಿಸುವ ಮಾತುಕತೆ ಮುಗಿದಿದೆ.
ಅಷ್ಟೇ ಅಲ್ಲ. ಕಳೆದ ಆರು ತಿಂಗಳಲ್ಲಿ ಐದೂವರೆ ಬಿಲಿಯನ್ ಡಾಲರುಗಳಷ್ಟು ಶಸ್ತ್ರಾಸ್ತ್ರಗಳ ಒಪ್ಪಂದಗಳನ್ನು 28 ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 18 ಒಪ್ಪಂದಗಳು ಭಾರತೀಯ ಕಂಪನಿಗಳೊಂದಿಗೇ ಆಗಿರುವುದು ವಿಶೇಷ.
ಹೌದು. ಮೋದಿ ಸಕರ್ಾರ ಇಟ್ಟಿರುವ ಮಹತ್ವದ ಹೆಜ್ಜೆಯೇ ಅದು. ‘ಮೇಕ್ ಇನ್ ಇಂಡಿಯಾ’ ಕಲ್ಪನೆಯ ಛತ್ರಛಾಯೆಯಲ್ಲಿ ಭಾರತ 250 ಬಿಲಿಯನ್ ಡಾಲರುಗಳನ್ನು ಹೂಡಿ ಭಾರತೀಯ ಕಂಪನಿಗಳು ಶಸ್ತ್ರಾಸ್ತ್ರಗಳನ್ನು ತಯಾರಿಸುವಂತೆ ಶಕ್ತಿ ತುಂಬುವಲ್ಲಿ ಪ್ರಯತ್ನಶೀಲವಾಗಿದೆ. ಈಗಾಗಲೇ ಟಾಟಾ, ಮಹೀಂದ್ರ, ರಿಲಯನ್ಸ್ಗಳು ಮುಖ್ಯ ಭೂಮಿಕೆಯಲ್ಲಿ ದುಡಿಯಲು ಸಜ್ಜಾಗಿವೆ ಕೂಡ. ವಿದೇಶೀ ಕಂಪನಿಗಳೊಂದಿಗೆ ತಂತ್ರಜ್ಞಾನ ಸಹಕಾರವನ್ನು ಹೊಂದಿ ಸಹಯೋಗದಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳನ್ನು ಹೊಂದುವ ಮತ್ತು ಇತರೆ ರಾಷ್ಟ್ರಗಳಿಗೆ ಮಾರುವ ಈ ಯೋಜನೆ ದೂರಗಾಮಿ ಪರಿಣಾಮವನ್ನು ಖಂಡಿತ ಹೊಂದಿದೆ. ಗಳಿಕೆಯಾಗುವುದು ಬಿಡಿ, ಕೊನೆಯ ಪಕ್ಷ ಇತರೆ ರಾಷ್ಟ್ರಗಳಿಂದ ಶಸ್ತ್ರ ಕೊಳ್ಳುವಲ್ಲಿ ವ್ಯಯಿಸುವ ಹಣದ ಉಳಿಕೆಯಾದರೂ ಸಾಕು ನಾವು ಬಲಾಢ್ಯ ಆಥರ್ಿಕ ಶಕ್ತಿಯಾಗುತ್ತೇವೆ.

5-2012-1-naval-lca
ಅದಕ್ಕೆ ಪೂರಕವಾಗಿ ಅದಾಗಲೇ ಭಾರತವೇ ತಯಾರಿಸಿದ ಲೈಟ್ ಕಂಬ್ಯಾಟ್ ಹೆಲಿಕಾಪ್ಟರುಗಳಿಗೆ ಬಲುವಾದ ಬೇಡಿಕೆ ಬಂದಿದೆ. ಸಿಯಾಚಿನ್ಗೆ 400 ಕೆಜಿ ಪೇಲೋಡ್ ಹೊತ್ತೊಯ್ದ ನಂತರ ಅದರ ನಸೀಬು ಖುಲಾಯಿಸಿದೆ. ಸಮುದ್ರ ಮಟ್ಟದಿಂದ ನಾಲ್ಕೂಮುಕ್ಕಾಲು ಕಿಮೀನಷ್ಟು ಎತ್ತರಕ್ಕೆ ಹಾರುವ ಹೆಲಿಕಾಪ್ಟರ್ ಎಂಬ ಜಾಗತಿಕ ದಾಖಲೆ ಬೇರೆ ಅದರ ಹೆಸರಿಗೆ ಈಗ. ಭಾರತೀಯ ಸೇನೆ ಈ ಹೆಲಿಕಾಪ್ಟರಿಗೆ ಬೇಡಿಕೆ ಇಟ್ಟಿರುವುದಷ್ಟೇ ಅಲ್ಲ, ಸ್ವತಃ ಜಪಾನ್ ಇವುಗಳನ್ನು ಕೊಂಡುಕೊಳ್ಳಲು ಮುಂದೆ ಬಂದಿದೆ. ಈ ಅವಕಾಶ ಬಿಡುವುದುಂಟೆ? ಇವುಗಳ ಉತ್ಪಾದನೆಗೆಂದು 187 ದಶಲಕ್ಷ ಡಾಲರುಗಳನ್ನು ಹೂಡಿ ಹೆಚ್ ಎ ಎಲ್ನ ಉತ್ಪಾದನಾ ಸಾಮಥ್ರ್ಯ ವಿಸ್ತರಿಸುವ ಕುರಿತಂತೆ ಸಕರ್ಾರ ಯೋಚಿಸಿದೆ. ಈಗಿನ ಸಾಮಥ್ರ್ಯವನ್ನು ದ್ವಿಗುಣಗೊಳಿಸಲು ಈ ಹಣ ಸಾಕೆಂಬುದು ಅಭಿಮತ! ಅಂದುಕೊಂಡಂತೆ ನಡೆದು ಖಾಸಗಿ ಕಂಪನಿಗಳೂ ಹೂಡಿಕೆಗೆ ಮುಂದೆ ಬಂದರೆ ಭಾರತ ಜಗತ್ತಿಗೇ ಈ ಹೆಲಿಕಾಪ್ಟರುಗಳನ್ನು ಮಾರಲು ನಿಂತರೆ ಯಾರೂ ಅಚ್ಚರಿ ಪಡಬೇಕಿಲ್ಲ.
ಶಕ್ತಿ ಗಳಿಸುವವರೆಗೂ ಜಗತ್ತು ನಿಮ್ಮನ್ನು ಒಪ್ಪಲಾರದು. ಶಸ್ತ್ರದ ಬಲವೇ ಜಗತ್ತಿನ ಭೂಪಟದಲ್ಲಿ ನಿಮ್ಮ ತೂಕವನ್ನು ಹೆಚ್ಚಿಸೋದು. ಅದರಲ್ಲೂ ಚೀನಾ, ಪಾಕೀಸ್ತಾನಗಳಂತಹ ಶತ್ರುರಾಷ್ಟ್ರಗಳನ್ನು ಹೊಂದಿರುವಂತಹ ಭಾರತ ಶಸ್ತ್ರ ಸನ್ನದ್ಧವಾಗದೇ ಶಾಂತಿಯ ಮಂತ್ರ ಜಪಿಸುವುದು ಒಪ್ಪಿಕೊಳ್ಳಬಹುದಾದ ಸಂಗತಿಯೇ ಅಲ್ಲ.

453224-lca-tejas
ಹೌದು ಮತ್ತೇ. ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ ಚೈನಾದ ಏಕಸ್ವಾಮ್ಯ ಮುರಿಯಲು ಜಂಟಿ ಗಸ್ತು ಯೋಜನೆಗೆ ಭಾರತವನ್ನು ಆಹ್ವಾನಿಸಿತು. ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಭಾರತ ಅವಶ್ಯಕತೆ ಬಿದ್ದರೆ ಕೈ ಜೋಡಿಸುವುದಾಗಿ ಹೇಳಿ ಚೈನಾದ ಆತಂಕ ಹಾಗೆಯೇ ಇರುವಂತೆ ನೋಡಿಕೊಂಡಿತು.
ಇದೇ ಸಮಯಕ್ಕೆ ಚೈನಾಕ್ಕೆ ಹೊಂದಿಕೊಂಡ ಗಡಿ ಭಾಗದ ರಸ್ತೆಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿ ಸವಾಲೆಸೆಯಿತು. ಒಂದೂಮುಕ್ಕಾಲು ಸಾವಿರ ಕಿಮೀ ಉದ್ದದ ರಸ್ತೆ ನಿಮರ್ಾಣವಾಗಬೇಕಿದ್ದು ಅದಾಗಲೇ ಆರುನೂರ ಐವತ್ತು ಕಿಮೀ ಉದ್ದದ ರಸ್ತೆ ತಯಾರಾಗಿಬಿಟ್ಟಿದೆ. ಗಡಿಗೆ ಹೊಂದಿಕೊಂಡಂತೆ ಚೀನಾ ಅತ್ಯಾಧುನಿಕ ರಸ್ತೆ ಮಾಡಿಕೊಂಡಿದೆ ಎಂದು ಕಣ್ಣೀರಿಡುತ್ತಿದ್ದೆವಲ್ಲ ಈಗ ನಾವು ಸಮರ್ಥ ರಸ್ತೆ ನಿಮರ್ಾಣ ಮಾಡಿಯಾಗಿದೆ! ಕೇಂದ್ರ ಸಕರ್ಾರದ ಈ ಅವಧಿ ಮುಗಿಯುವಲ್ಲಿ ಗಡಿರಸ್ತೆಗೆ ಸಂಬಂಧಪಟ್ಟಂತೆ ಭಾರತ ಚೀನಾಕ್ಕೆ ಸಮ-ಸಮ ನಿಲ್ಲಲಿದೆ!
ಹಾಗಂತ ಡ್ರ್ಯಾಗನ್ ಸುಮ್ಮನಿರುತ್ತೆ ಅಂತ ಭಾವಿಸಿಬಿಡಬೇಡಿ. ಅದಾಗಲೇ ತನ್ನ ಪೀಪಲ್ಸ್ ಲಿಬರೇಶನ್ ಆಮರ್ಿಯನ್ನು ಪಾಕ್ ಆಕ್ರಮಿತ ಕಾಶ್ಮೀರದ ಗಡಿಯ ಗುಂಟ ಜಮಾವಣೆಗೊಳಿಸುತ್ತ ಭಾರತಕ್ಕೆ ಹೆದರಿಸುವ ಪ್ರಯತ್ನ ಶುರುಮಾಡಿಬಿಟ್ಟಿದೆ. ಅದಕ್ಕೆ ಭಾರತದ ಉತ್ತರ ಹೇಗಿದೆ ಗೊತ್ತೇ? ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಜಪಾನಿನೊಂದಿಗೆ ಸೇರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ನ್ಯೂಯಾಕರ್್ ಟೈಮ್ಸ್ನ ವರದಿಯ ಪ್ರಕಾರ ‘ಇಲ್ಲಿ ಜಪಾನಿನ ಚಟುವಟಿಕೆಗಳು ಚೈನಾದ ಅತ್ಯಂತ ಬಲಹೀನ ಸಮುದ್ರ ತೀರದ ಪ್ರದೇಶಗಳ ಮೇಲೆ ಭಾರತದ ಶಕ್ತಿ ವೃದ್ಧಿಸುತ್ತದೆ’. ಹೇಗಿದೆ? ಏಷಿಯಾದಲ್ಲಿನ ಚೀನಾದ ಶತ್ರುಗಳನ್ನೆಲ್ಲಾ ಕಲೆಹಾಕಿ ಭಾರತ ಚೀನಾದ ಶಕ್ತಿಯನ್ನು ಕುಂದಿಸುತ್ತಲೇ ಇದೆ.
ಪರಿಕ್ಕರರ ನೇತೃತ್ವದಲ್ಲಿ ಭಾರತ ಎಚ್ಚರಿಕೆಯ, ದೃಢವಾದ ಹೆಜ್ಜೆಯನ್ನು ಊರುತ್ತಲೇ ಇದೆ. ಇಷ್ಟೆಲ್ಲಾ ಮುಸುಕಿನ ಗುದ್ದಾಟದ ನಂತರವೂ ಅವರು ಬರುವ ತಿಂಗಳು ಚೀನಾಕ್ಕೆ ಪ್ರವಾಸ ಮಾಡಲಿದ್ದಾರೆ. ಅಲ್ಲಿಗೆ ಹೋಗುವ ಮುನ್ನವೇ ಸಬ್ಮೆರೀನ್ನಿಂದ ಹಾರಿಸಲ್ಪಡುವ ಬಾಲಿಸ್ಟಿಕ್ ಮಿಸೈಲ್ನ ಯಶಸ್ವಿ ಪರೀಕ್ಷೆ ಮಾಡಿಸಿಯಾಗಿದೆ. ಈ ಸುದ್ದಿಯನ್ನೂ ಬಲು ವಿಶೇಷವಾಗಿ ಜಗತ್ತಿನೊಂದಿಗೆ ಹಂಚಿಕೊಳ್ಳುವ ಮೂಲಕ ಚೀನಾದ ನಾಯಕರಿಗೆ ಬಿಸಿ ಮುಟ್ಟಿಸಿಯೂ ಆಗಿದೆ. ಅಷ್ಟೇ ಅಲ್ಲ. ಚೀನಾ ಭೇಟಿಗೂ ಮುನ್ನ ಪರಿಕ್ಕರ್ ಅಮೇರಿಕಾದ ರಕ್ಷಣಾ ಕಾರ್ಯದಶರ್ಿ ಅಶ್ಟೋನ್ ಕಾರ್ಟರ್ರೊಂದಿಗೆ ಮಾತುಕತೆಯಾಡಲಿದ್ದಾರೆ. ಅಲ್ಲಿಗೆ ಮಾತುಕತೆಗೆ ಮುನ್ನವೇ ಚೀನಾಕ್ಕೆ ಸಮರ್ಥ ಸಂದೇಶ ಕೊಡಲಿದ್ದಾರೆ ಪರಿಕ್ಕರ್!
ವಾವ್! ಕೇಂದ್ರ ಸಕರ್ಾರದಲ್ಲಿ 18 ಗಂಟೆ ಕೆಲಸ ಮಾಡುತ್ತಿರೋದು ಮೋದಿ ಮಾತ್ರವಲ್ಲ; ಅನೇಕರಿದ್ದಾರೆ. ಮೈಯೆಲ್ಲಾ ಕಣ್ಣಾಗಿ ದುಡಿಯುತ್ತಿದ್ದಾರೆ. ಭಾರತವನ್ನು ಬಲಾಢ್ಯ ರಾಷ್ಟ್ರವಾಗಿ ಕಟ್ಟುವ ಅನೇಕ ವರ್ಷಗಳ ಕನಸನ್ನು ನನಸು ಮಾಡುತ್ತಿದ್ದಾರೆ.
ಇತ್ತ ಮಾಧ್ಯಮಗಳು ಇವೆಲ್ಲವನ್ನೂ ಬಿಟ್ಟು ದೇವಸ್ತಾನ ಪ್ರವೇಶಕ್ಕೆ ಆಗ್ರಹಿಸಿ ಹಠ ಹಿಡಿದ ಮಹಿಳೆಯರು, ವಿಶ್ವವಿದ್ಯಾಲಯದಲ್ಲಿ ರಸ್ತೆಯಲ್ಲಿ ಉಚ್ಚೆ ಹೋಯ್ದು ದಂಡ ಹಾಕಿಸಿಕೊಂಡ ವಿದ್ಯಾಥರ್ಿಗಳ ಭಾಷಣಗಳನ್ನು ತೋರಿಸುತ್ತ ಕಾಲಹರಣ ಮಾಡುತ್ತಿವೆ. ಅತ್ತ ಕೇಂದ್ರ ಸಕರ್ಾರ ಈ ದೇಶವನ್ನು ಇನ್ನು ತುಂಡರಿಸಲಾಗದಂತೆ ಬಲಾಢ್ಯವಾಗಿ ಕಟ್ಟುತ್ತಿದೆ!

9 thoughts on “18 ಗಂಟೆ ಕೆಲಸ ಮಾಡೋರು ಎಷ್ಟೊಂದು ಮಂದಿ!

  1. We want to hear more on our beloved PM and his trusted team. We are very much thrilled reading the effective action undertaken.. It is our sincere hope that our nation will be invincible under the able guidance of Modiji. Jai Bharat mats ki Jai 👍👌✊🏾👊

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s