ಆಕೆಯ ಪ್ರಶ್ನೆಗೆ ಉತ್ತರಿಸಬಲ್ಲಿರೇನು?

ಈ ರೀತಿಯ ಜಬರ್ು ತಿಂದು ಕೊಬ್ಬಿದವರಿಗೆ ಮಾತ್ರ. ವಿದೇಶದಿಂದ ಬಂದ ಹಣದಲ್ಲಿ ಚೂರಿ ಕೊಂಡುಕೊಂಡು ಹೆತ್ತ ತಾಯಿಗೇ ಇರಿದು ಬಿಡುವ ಜನ ಇವರು. ಇಂತಹವರ ಕೊಬ್ಬನ್ನು ಕರಗಿಸಿ ಸರಿಯಾದ ಪಾಠ ಕಲಿಸಲು ಇದು ಸಕಾಲ. ದೇಶವನ್ನು ಅಖಂಡವಾಗಿ ಪ್ರೀತಿಸುವವರು ಈಗ ಜೊತೆಯಾಗಿ ನಿಂತು ದ್ರೋಹಿಗಳಿಗೆ ನಾಲ್ಕೇಟು ಬಿಗಿಯಬೇಕಾದ ಸಂದರ್ಭ ಬಂದಿದೆ. ಸಾವರ್ಕರರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ, ಕನ್ಹಯ್ಯಾ, ಉಮರ್ ಖಾಲಿದ್ರ ಕುರಿತಂತೆ ಹೆಮ್ಮೆಯಿಂದ ಬೀಗುವ ರಾಹುಲ್ ಗಾಂಧಿಯಂತಹವರಿಗೆ ಇನ್ನೂ ಸರಿಯಾಗಿ ಬುದ್ಧಿ ಕಲಿಸಲಿಲ್ಲವೆಂದರೆ ಮತ್ತೆ ಯಾವಾಗ?
ಈ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಉತ್ತರಿಸಬಹುದೇನೋ? ಅಂಡಮಾನಿನ ರೋಸ್ ಐಲ್ಯಾಂಡಿನಲ್ಲಿ ‘ಅನುರಾಧಾ ರಾವ್’ ಕೇಳಿದಾಗ ನಮ್ಮಲ್ಲಿ ಯಾರೂ ಉತ್ತರಿಸಲು ಸಮರ್ಥರಾಗಿರಲಿಲ್ಲ.

12800351_1331272683565286_1273492966103927385_n

ಅನುರಾಧಾ ರಾವ್!
ಅಂಡಮಾನಿನ ನೆಲದಲ್ಲಿ ಮರೆಯಲಾಗದ ಹೆಸರು. ಪೋಟರ್್ಬ್ಲೇರ್ ನಿಂದ ಅರ್ಧಗಂಟೆಯಷ್ಟು ದೂರದಲ್ಲಿರುವ ರೋಸ್ ಐಲ್ಯಾಂಡ್ನಲ್ಲಿ ಆಕೆ ಯಾತ್ರಿಕರ ಪ್ರೀತಿಯ ಗೈಡ್. ನೀವು ಅನೇಕ ಐತಿಹಾಸಿಕ ಕ್ಷೇತ್ರಗಳಿಗೆ ತಿರುಗಾಡಿರುತ್ತೀರಿ; ಅಲ್ಲೆಲ್ಲಾ ಅನೇಕ ಗೈಡ್ಗಳು ಹೇಳುವ ಕತೆಯನ್ನೂ ಕೇಳಿರುತ್ತೀರಿ. ಆದರೆ ಅನುರಾಧಾರಂತಹ ತುಡಿತವುಳ್ಳ ಕಥೆಗಾರರು ಸಿಗೋದು ಬಲು ಅಪರೂಪ.
ರೋಸ್ ದ್ವೀಪ ಬ್ರಿಟೀಷರನ್ನು ಬಲುವಾಗಿ ಕಾಡಿದ ದ್ವೀಪ. ಇದರ ಸೌಂದರ್ಯಕ್ಕೆ ಮರುಳಾಗಿಯೇ ಅವರು ಇದನ್ನು ತಮ್ಮ ರಾಜಧಾನಿಯಾಗಿಸಿಕೊಂಡರು. ಅಲ್ಲಿಗೆ ಬಂದು ನೆಲೆಸಿದರು. ಇಲ್ಲಿನ ಕೈದಿಗಳನ್ನು ಬಳಸಿಕೊಂಡು ಭವ್ಯ ಬಂಗಲೆ ಕಟ್ಟಿಕೊಂಡರು. ಕುಡಿಯಲು ಸಿಹಿ ನೀರು ಬೇಕಾದ್ದರಿಂದ ಶುದ್ಧೀಕರಣ ಘಟಕ ಸ್ಥಾಪಿಸಿಕೊಂಡರು. ಸಮುದ್ರದ ಉಪ್ಪು ನೀರನ್ನು ಕಾಯಿಸಿ, ನೀರನ್ನು ಕುಡಿಯಲು ಯೋಗ್ಯವಾಗಿಸಿ ಅದನ್ನು ಕುಡಿಯುವುದಕ್ಕಷ್ಟೇ ಅಲ್ಲದೇ, ಸ್ನಾನಕ್ಕೆ-ಈಜಾಟಕ್ಕೂ ಬಳಸುತ್ತಿದ್ದುದು ಅಚ್ಚರಿ ಹುಟ್ಟಿಸುವಂಥದ್ದು.
ಹೌದು. ಇವ್ಯಾವುವೂ ವಿಶೇಷ ಸಂಗತಿಗಳಲ್ಲ. ಆದರೆ ಇವುಗಳನ್ನು ನಮಗೆ ಕಟ್ಟಿಕೊಡುವ ಅನುರಾಧಾ ಮಾತ್ರ ನಿಜಕ್ಕೂ ವಿಶೇಷವೇ. ಆಕೆಯ ತಂದೆ ರೋಸ್ ಐಲ್ಯಾಂಡಿನಲ್ಲಿಯೇ ಹುಟ್ಟಿದವರು. ಹೀಗಾಗಿ ಆಕೆಗೆ ಈ ನೆಲದ ಮೇಲೆ ವಿಶೇಷ ಪ್ರೀತಿ ಇದೆ. ಈ ದ್ವೀಪದ ಕತೆ ಹೇಳುವಾಗ ಆಕೆ ಭಾವುಕಳಾಗುತ್ತಾಳೆ, ಆಕೆಯ ಕಣ್ಣಂಚು ಅನೇಕ ಬಾರಿ ಒದ್ದೆಯಾಗುತ್ತದೆ. ಬ್ರಿಟೀಷರು ದೇಶೀಯರ ಮೇಲೆ ಮಾಡಿದ ಶೋಷಣೆಯನ್ನು ವಿವರಿಸುವಾಗ ಆಕೆ ಕೆಂಡ ಕೆಂಡವಾಗುತ್ತಾಳೆ. ಸುನಾಮಿಯಿಂದ ಇಡಿಯ ಅಂಡಮಾನನ್ನು ಇಂದಿನ ಸ್ಥಿತಿಯಲ್ಲಿ ಉಳಿಸಿದ್ದು ‘ನನ್ನ ರೋಸ್ ಐಲ್ಯಾಂಡ್’ ಎನ್ನುವಾಗ ಆಕೆಯ ಹೃದಯದ ತುಂಬಾ ತುಂಬಿಕೊಂಡ ಹೆಮ್ಮೆಯ ಭಾವ ಹೊರ ಚೆಲ್ಲುತ್ತದೆ!
ಉಫ್. ನಿಜಕ್ಕೂ ಅನುರಾಧಾ ವಿಶೇಷವೇ.
ಈ ದ್ವೀಪದೊಂದಿಗೆ ಆಕೆಯ ಕರುಳ ಸಂಬಂಧ ಅದೆಷ್ಟು ಗಟ್ಟಿಯಾಗಿದೆಯೆಂದರೆ, ಇಲ್ಲಿರುವ ಜನರನ್ನು, ಕಟ್ಟಡಗಳನ್ನು ಬಿಡಿ ಪ್ರಾಣಿ-ಪಕ್ಷಿಗಳ ಸಂಖ್ಯೆಯನ್ನೂ ಆಕೆ ಹೇಳುತ್ತಾಳೆ. ಅವುಗಳನ್ನು ಮಾತನಾಡಿಸುತ್ತಾಳೆ. ನೀವು ನಂಬಲಾರಿರಿ. ಈ ದ್ವೀಪದ ಅತ್ಯಂತ ಪ್ರಾಚೀನ ಕಟ್ಟಡವೊಂದರ ಬಳಿ ನಿಂತು ಆಕೆ ‘ಆವೊ ಬೇಟಾ’ ಅಂತ ಕರೆದರೆ ಸುತ್ತಲೂ ಅಡಗಿಕೊಂಡಿದ್ದ ಅಳಿಲುಗಳು ಧಾವಿಸಿ ಬರುತ್ತವೆ. ಆಕೆ ಹೇಳಿದೆಡೆಯಲ್ಲಿ ಕೂರುತ್ತವೆ. ಆಕೆ ಕೊಟ್ಟ ತಿಂಡಿ ತಿನ್ನುತ್ತವೆ. ಕಣ್ಣಿಲ್ಲದ ಜಿಂಕೆಯೊಂದು ಆಕೆಯನ್ನು ಹಿಂಬಾಲಿಸಿ ಬರುವುದು ನೋಡಿದಾಗ ಎಂಥವನಿಗೂ ಅಚ್ಚರಿ ಸಹಜವೇ. ಪ್ರಾಣಿ ಸಂಕುಲವಷ್ಟೇ ಅಲ್ಲ. ಆಕೆಯ ಒಂದು ಕೂಗಿಗೆ ನವಿಲು-ಮೈನಾಗಳೂ ಬಂದು ಕುಳಿತು ಬ್ರೆಡ್ಡು ತಿಂದು ಹೋಗುತ್ತವೆ. ಸುನಾಮಿಯಲ್ಲಿ ನನ್ನ ಗಂಡ ಮತ್ತು ಮಕ್ಕಳನ್ನು ಕಳಕೊಂಡ ಮೇಲೆ ಇವೇ ನಮ್ಮ ಪರಿವಾರ ಎಂದು ಆಕೆ ನಿಭರ್ಾವುಕಳಾಗಿ ಹೇಳುವಾಗ ಒಮ್ಮೆ ಗಾಬರಿಯಾದದ್ದು ನಿಜ.

12376772_1329218647104023_5856157996555731435_n
ಇಡಿಯ ಅಂಡಮಾನ್ ದ್ವೀಪದ ವೈಶಿಷ್ಟ್ಯವೇ ಈ ಜನರ ಭಾರತ ಪ್ರೇಮ. ಭಾರತವನ್ನು ಅವರು ಮೇನ್ ಲ್ಯಾಂಡ್ ಅಂತಾರೆ. ನಮ್ಮ ಪಾಲಿಗೆ ಅವರು ಐಲ್ಯಾಂಡ್! ಇಲ್ಲಿನ ಮೂಲನಿವಾಸಿಗಳು ಬುಡಕಟ್ಟು ಜನಾಂಗದವರು. ಆರೇಳು ಬಗೆಯ ಆದಿವಾಸಿಗಳು ಇಲ್ಲಿದ್ದಾರೆ. ಅದು ಬಿಟ್ಟರೆ ಬ್ರಿಟೀಷರ ಕಾಲಕ್ಕೆ ಬಂದ ಕೈದಿಗಳ ಪರಿವಾರ, ಸಕರ್ಾರಿ ಉದ್ಯೋಗ ಮತ್ತು ಇತರೆ ಉದ್ಯೋಗಾವಕಾಶಗಳನ್ನು ಅರಸಿ ಬಂದ ಬೇರೆ-ಬೇರೆ ಜನಾಂಗದವರೇ ಇಲ್ಲಿ ಸೇರಿಕೊಂಡಿರುವುದರಿಂದ ‘ಭಾರತಪ್ರೇಮ’ ಬಲು ಸಹಜ. ಇದು ಬರಿಯ ಇಷ್ಟಕ್ಕೇ ನಿಲ್ಲದೇ ಅಂತಜರ್ಾತೀಯ ವಿವಾಹಗಳೂ ಇಲ್ಲಿ ಯಾವುದೇ ಅಡೆತಡೆಯಿಲ್ಲದೇ ನಡೆಯುವುದರಿಂದ ಜಾತಿ, ಮತ, ಪಂಥಗಳ ಗಲಾಟೆ ಇಲ್ಲಿ ಇಲ್ಲವೇ ಇಲ್ಲ. ಒಂದೇ ಮನೆಯಲ್ಲಿ ಹಿಂದೂ-ಮುಸ್ಲೀಂ-ಕ್ರೈಸ್ತರೂ ಒಟ್ಟಾಗಿರುವ ಪ್ರಸಂಗಗಳಿವೆಯಂತೆ. ಎಲ್ಲಾ ಹಬ್ಬಗಳಿಗೂ ಎಲ್ಲರೂ ಸೇರುವುದರ ಮೂಲ ಕಾರಣ ಅದೇ.
ಸಂಘ, ಬಿಜೆಪಿಗಳು ಕಾಲಿಟ್ಟರೆ ಪ್ರತ್ಯೇಕವಾದ ಕಾಲಿಡುತ್ತೆ, ಮುಸಲ್ಮಾನರು ಬದುಕುವುದು ದುಸ್ತರವಾಗುತ್ತದೆಂದು ಬೊಬ್ಬೆಯಿಡುವ ಜನ ಒಮ್ಮೆ ಅಂಡಮಾನಿಗೆ ಬಂದು ನೋಡಬೇಕು. ಇಲ್ಲಿನ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಂಪಿಯವರೆಗೆ ಎಲ್ಲರೂ ಬಿಜೆಪಿಯೇ. ಇಲ್ಲಿನ ಪ್ರತಿ ಮನೆಯೂ ಬಿಜೆಪಿಯದ್ದೇ ಎನ್ನುವಷ್ಟರ ಮಟ್ಟಿಗೆ ಹವಾ ಇದೆ. ಅಂದ ಮೇಲೆ ಪ್ರತ್ಯೇಕತೆಯ ಬೀಜ ಮತ್ತೆಲ್ಲೋ ಇರಬೇಕೆನ್ನುವುದು ಖಾತ್ರಿಯೇ.
ಅಂಡಮಾನಿಗಳ ಪಾಲಿಗೆ ಸೆಲ್ಯೂಲರ್ ಜೈಲು ಅತ್ಯಂತ ಹೆಮ್ಮೆ. ವೀರ ಸಾವರ್ಕರ್ರಂತಹ ಅನೇಕ ದೇಶಭಕ್ತರು ಹಿಂಸೆಗೆ, ಕ್ರೌರ್ಯಕ್ಕೆ ಒಳಗಾಗಿದ್ದ ಜೈಲು ಅದು. ಅದರ ನೆನಪೇ ಇಲ್ಲಿನ ಜನರನ್ನು ದೇಶದ ಕುರಿತಂತೆ ಶ್ರೇಷ್ಠ ಭಾವನೆ ತಳೆಯುವಂತೆ ಮಾಡಿರಬೇಕು. ರಾಷ್ಟ್ರೀಯ ಹಬ್ಬಗಳಿಗೆ ಅಂಡಮಾನಿನಲ್ಲಿ ಅಪಾರ ಗೌರವವಿದೆ ಎನ್ನುತ್ತಾರೆ. ಇಡಿಯ ದ್ವೀಪ ಸಮೂಹವೇ ವಧುವಿನಂತೆ ಸಿಂಗಾರಗೊಳ್ಳುವುದಂತೆ. ಬಹುಶಃ ಮತ-ಪಂಥಗಳಿಗಿಂತ ರಾಷ್ಟ್ರೀಯತೆ ಮಿಗಿಲಾದುದೆನ್ನುವ ಭಾವ ಬಲಿತಿರುವುದರಿಂದಲೇ ಇವರು ಹೀಗಿರಬಹುದೆನ್ನಿಸುತ್ತೆ. ಮೇನ್ ಲ್ಯಾಂಡ್ ಭಾರತ ಐಲ್ಯಾಂಡ್ ಅಂಡಮಾನಿನಿಂದ ಕಲಿಯಬೇಕಾದ ಮಹತ್ವದ ಪಾಠ ಇದು.
ಅಲ್ಲದೇ ಮತ್ತೇನು? ಚೆನ್ನೈಯಿಂದ ಕನಿಷ್ಠ ಪಕ್ಷ 1000 ಕಿ.ಮೀ ದೂರದಲ್ಲಿರುವ ಈ ದ್ವೀಪ ಸಮೂಹ ಭಾರತವನ್ನು ಪ್ರೀತಿಯಿಂದ ಆಲಿಂಗಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಅತ್ತ ನಮ್ಮೊಂದಿಗೆ ಅಂಟಿಕೊಂಡು ಇರುವ ಕಾಶ್ಮೀರ ಭಾರತವನ್ನು ಬಿಟ್ಟು ದೂರ ಹೋಗಲು ಯತ್ನಿಸುತ್ತದೆ. ದೆಹಲಿಯ ಮಧ್ಯೆ ಕುಳಿತ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು, ಪ್ರೊಫೆಸರುಗಳು, ಪತ್ರಕರ್ತರು ಈ ದೇಶದ ಕುರಿತಂತೆ ಅವಹೇಳನಕಾರಿಯಾದ ಮಾತುಗಳನ್ನಾಡುತ್ತಿರುತ್ತಾರೆ. ಸುಪ್ರೀಂ ಕೋಟರ್ಿನಿಂದ ಚೆನ್ನಾಗಿ ಉಗಿಸಿಕೊಂಡು ಬೇಲ್ ಪಡೆದು ಬಂದಿರುವ ಕನ್ಹಯ್ಯಾನನ್ನು ಮಾಧ್ಯಮಗಳು ಭಗತ್ ಸಿಂಗ್ನೊಂದಿಗೆ ಸಮೀಕರಿಸಿಬಿಡುತ್ತವೆ. ಅವನನ್ನು ಸಮಥರ್ಿಸಿಕೊಳ್ಳುವ ಭರದಲ್ಲಿ ಅಫ್ಜಲ್, ಯಾಕೂಬ್, ಇಶ್ರತ್ರನ್ನೂ ತಮ್ಮವರೆಂದು ಮಾತಾಡಿಬಿಡುತ್ತವೆ. ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ನಾವುಗಳು ಸುಮ್ಮನಾಗಿಬಿಡುತ್ತೇವೆ. ಹೊಟ್ಟೆಯೊಳಗಿನ ಬೆಂಕಿಯನ್ನು ಆರಿಸಲಾಗದೇ ಮೈ ಪರಚಿಕೊಳ್ಳುತ್ತೇವೆ.
ಇಂತಹ ಹೊತ್ತಲ್ಲಿಯೇ ಅನುರಾಧಾ ರಾವ್ ಬಲು ಆಪ್ಯ ಅನಿಸೋದು. ಜೀವನದಲ್ಲಿ ಒಮ್ಮೆ ಮಾತ್ರ ಮುಖ್ಯ ಭಾರತಕ್ಕೆ ಬಂದಿರಬಹುದು ಆಕೆ. ಆದರೆ ದೇಶದ ಕುರಿತಂತೆ ಆಕೆಯ ಭಕ್ತಿ ಮಾತ್ರ ವಣರ್ಿಸಿ ಮುಗಿಸಲಾರದಂಥದ್ದು. ಅಂಡಮಾನಿನಲ್ಲಿ ಇಂಟನರ್ೆಟ್ ಕನೆಕ್ಷನ್ ವ್ಯವಸ್ಥೆ ಬಲು ಕೆಟ್ಟದಾಗಿದೆ. ಆದರೆ ದೇಶವಿಡೀ ಡಿಜಿಟಲ್ ಇಂಡಿಯಾದ ಮಾತನಾಡುತ್ತಿದೆ. ಹಾಗಂತ ಆಕೆ ಎಂದಿಗೂ ‘ಆಜಾದಿ’ ಎಂದು ಘೋಷಣೆ ಕೂಗಲಿಲ್ಲ. ಅಂಡಮಾನಿನ ಜನಗಳನ್ನು ಮನುಷ್ಯರ ತಿನ್ನುವ ಬುಡಕಟ್ಟು ಜನಾಂಗದವರೆಂದು ಮುಖ್ಯ ಭಾರತದ ಜನ ಆಡಿಕೊಳ್ಳುತ್ತಾರೆ. ಹಾಗಿದ್ದಾಗಲೂ ನಮಗೆ ‘ಆಜಾದಿ’ ಬೇಕೆಂದು ಅವರು ಕೇಳುವುದಿಲ್ಲ. ನೌಕಾ ನೆಲೆಯ ಜೊತೆಗೆ ಭೂಸೇನೆಯೂ ಸದಾ ಯುದ್ಧ ಸನ್ನದ್ಧವಾಗಿಯೇ ಇಲ್ಲಿ ನಿಂತಿದ್ದರೂ ಈ ಜನರಿಗೆ ಅವರಿಂದ ಕಿರಿಕಿರಿ ಎನಿಸುವುದಿಲ್ಲ. ಅವರೆಂದಿಗೂ ನೌಕಾನೆಲೆ ತೆಗಿಯಿರೆಂದು ಪ್ರತಿಭಟನೆ ಮಾಡಿದ್ದು ಯಾರಿಗೂ ಗೊತ್ತಿಲ್ಲ.
ಈ ರೀತಿಯ ಜಬರ್ು ತಿಂದು ಕೊಬ್ಬಿದವರಿಗೆ ಮಾತ್ರ. ವಿದೇಶದಿಂದ ಬಂದ ಹಣದಲ್ಲಿ ಚೂರಿ ಕೊಂಡುಕೊಂಡು ಹೆತ್ತ ತಾಯಿಗೇ ಇರಿದು ಬಿಡುವ ಜನ ಇವರು. ಇಂತಹವರ ಕೊಬ್ಬನ್ನು ಕರಗಿಸಿ ಸರಿಯಾದ ಪಾಠ ಕಲಿಸಲು ಇದು ಸಕಾಲ. ದೇಶವನ್ನು ಅಖಂಡವಾಗಿ ಪ್ರೀತಿಸುವವರು ಈಗ ಜೊತೆಯಾಗಿ ನಿಂತು ದ್ರೋಹಿಗಳಿಗೆ ನಾಲ್ಕೇಟು ಬಿಗಿಯಬೇಕಾದ ಸಂದರ್ಭ ಬಂದಿದೆ. ಸಾವರ್ಕರರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ, ಕನ್ಹಯ್ಯಾ, ಉಮರ್ ಖಾಲಿದ್ರ ಕುರಿತಂತೆ ಹೆಮ್ಮೆಯಿಂದ ಬೀಗುವ ರಾಹುಲ್ ಗಾಂಧಿಯಂತಹವರಿಗೆ ಇನ್ನೂ ಸರಿಯಾಗಿ ಬುದ್ಧಿ ಕಲಿಸಲಿಲ್ಲವೆಂದರೆ ಮತ್ತೆ ಯಾವಾಗ?
ಈ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಉತ್ತರಿಸಬಹುದೇನೋ? ಅಂಡಮಾನಿನ ರೋಸ್ ಐಲ್ಯಾಂಡಿನಲ್ಲಿ ‘ಅನುರಾಧಾ ರಾವ್’ ಕೇಳಿದಾಗ ನಮ್ಮಲ್ಲಿ ಯಾರೂ ಉತ್ತರಿಸಲು ಸಮರ್ಥರಾಗಿರಲಿಲ್ಲ.
ನಿಮಗೇನಾದರೂ ಉತ್ತರಿಸುವ ಧೈರ್ಯವಿದೆಯಾ?

2 thoughts on “ಆಕೆಯ ಪ್ರಶ್ನೆಗೆ ಉತ್ತರಿಸಬಲ್ಲಿರೇನು?

 1. Thanks

  2016-03-17 14:58 GMT+05:30 “ನೆಲದ ಮಾತು” :

  > Chakravarty posted: “ಈ ರೀತಿಯ ಜಬರ್ು ತಿಂದು ಕೊಬ್ಬಿದವರಿಗೆ ಮಾತ್ರ. ವಿದೇಶದಿಂದ ಬಂದ
  > ಹಣದಲ್ಲಿ ಚೂರಿ ಕೊಂಡುಕೊಂಡು ಹೆತ್ತ ತಾಯಿಗೇ ಇರಿದು ಬಿಡುವ ಜನ ಇವರು. ಇಂತಹವರ ಕೊಬ್ಬನ್ನು
  > ಕರಗಿಸಿ ಸರಿಯಾದ ಪಾಠ ಕಲಿಸಲು ಇದು ಸಕಾಲ. ದೇಶವನ್ನು ಅಖಂಡವಾಗಿ ಪ್ರೀತಿಸುವವರು ಈಗ
  > ಜೊತೆಯಾಗಿ ನಿಂತು ದ್ರೋಹಿಗಳಿಗೆ ನಾಲ್ಕೇಟು ಬಿಗಿಯಬೇಕಾದ ಸಂದರ್ಭ ಬಂದ”
  >

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s