ಅಡಿಯ ಭೂಮಿ ಕಾಣೆಯಾಗಿರುವುದು ನಮಗೆ ಕಾಣುವುದೇ ಇಲ್ಲ!!

ciaopmockingbirdಆಪರೇಶನ್ ಮಾಕಿಂಗ್ ಬಡರ್್!
1948ರಲ್ಲಿ ಅಮೇರಿಕಾದಲ್ಲಿ ಶುರುವಾದದ್ದು. ಅಮೇರಿಕಾದ ನೌಕಾಸೇನೆಯಲ್ಲಿ ಕೆಲಸ ಮಾಡುತ್ತ, ರಷ್ಯಾಕ್ಕೆ ಗೂಢಚಾರನಾಗಿ ನಿಯುಕ್ತಿಗೊಂಡು ಗುಪ್ತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಫ್ರ್ಯಾಂಕ್ ವಿಸ್ನರ್ನ ಮನಸ್ಸಿನ ಕೂಸು ಅದು. ಆ ವರ್ಷ ಆತ ಅಮೇರಿಕಾದ ಗೂಢಚಾರ ಸಂಸ್ಥೆಯ ವಿಶೇಷ ವಿಭಾಗವೊಂದಕ್ಕೆ ನಿದರ್ೇಶಕನಾಗಿ ನಿಯುಕ್ತನಾಗಿದ್ದ. ಅವನ ಜವಾಬ್ದಾರಿ ಅಮೇರಿಕಾದ ಮಾಧ್ಯಮಗಳನ್ನು ಒಲಿಸಿಕೊಂಡು ಪತ್ರಕರ್ತರ ಮೂಲಕ ಅನ್ಯ ರಾಷ್ಟ್ರಗಳಲ್ಲಿ ಗುಪ್ತ ಮಾಹಿತಿ ಕಲೆಹಾಕುವುದಾಗಿತ್ತು. ಅದನ್ನೇ ಆತ ಆಪರೇಶನ್ ಮಾಕಿಂಗ್ ಬಡರ್್ ಎಂದು ಕರೆದಿದ್ದ. ವಾಷಿಂಗ್ಟನ್ ಪೋಸ್ಟ್ನ ಫಿಲಿಪ್ ಗ್ರಹಾಮ್ ಈ ಕೆಲಸಕ್ಕೆ ಮೊದಲು ಕೈ ಜೋಡಿಸಿದ. ಎರಡೇ ವರ್ಷಗಳಲ್ಲಿ ನ್ಯೂಯಾಕರ್್ ಟೈಮ್ಸ್, ನ್ಯೂಸ್ ವೀಕ್ ಮತ್ತು ಕೊಲಂಬಿಯಾ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ಗಳೂ ವಿಸ್ನರ್ನ ತೆಕ್ಕೆಗೆ ಬಿತ್ತು.
ಇದೊಂದು ಮಾನಸಿಕ ಯುದ್ಧ. ಯಾವ ದೇಶದ ಮೇಲೆ ಆಧಿಪತ್ಯ ಸ್ಥಾಪಿಸಬೇಕೋ ಆ ದೇಶಕ್ಕೆ ಪತ್ರಕರ್ತರನ್ನು ಕಳಿಸೋದು. ಅವರ ಮೂಲಕ ಆ ದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಹೃದಯ ಕರಗುವ ಲೇಖನಗಳನ್ನು ಬರೆಸೋದು. ಜಗತ್ತಿನ ಅನುಕಂಪ ಪಡೆದು ಆ ದೇಶವನ್ನು ನಾಶಮಾಡೋದು. ಸಶಸ್ತ್ರ ಯುದ್ಧಕ್ಕೂ ಮುನ್ನ ಮಾನಸಿಕವಾಗಿ ಕೊಲ್ಲುವ ಸುಲಭದ ಯುದ್ಧ ಇದು.
1953ರಲ್ಲಿ ಇರಾನಿನಲ್ಲಿ ಅಮೇರಿಕಾ ಇಂಥದ್ದೊಂದು ಪ್ರಯತ್ನ ಮಾಡಿದ್ದು ಇತಿಹಾಸದಲ್ಲಿ ಭದ್ರವಾಗಿ ದಾಖಲಾಗಿದೆ. ಅಲ್ಲಿನ ಪ್ರಧಾನ ಮಂತ್ರಿ ಮೊಹಮ್ಮದ್ ಮೊಸಾದೆ ತನ್ನ ದೇಶದ ತೈಲ ಕಂಪನಿಗಳು ಲೆಕ್ಕ ಕೊಡುವಂತೆ ಆದೇಶಿಸಿದ್ದು ಅಮೇರಿಕಾ-ಯೂರೋಪುಗಳು ಕಿಡಿ ಕಾರುವಂತೆ ಮಾಡಿತ್ತು. ಏಕೆಂದರೆ ಅಲ್ಲಿನ ತೈಲಕಂಪನಿಗಳನ್ನು ಬಹುಪಾಲು ನಡೆಸುತ್ತಿದ್ದುದು ಅವರೇ. ಮೊಸಾದೆ ಮುಲಾಜು ನೋಡಲಿಲ್ಲ ಆಂಗ್ಲೋ ಇರಾನಿಯನ್ ಆಯಿಲ್ ಕಂಪೆನಿಯನ್ನು ರಾಷ್ಟ್ರೀಕರಣಗೊಳಿಸಿ ಅದರ ಸ್ವತ್ತನ್ನು ದೇಶಕ್ಕೆ ಸೇರಿದ್ದೆಂದು ಘೋಷಿಸಿ ಯೂರೋಪ್-ಅಮೇರಿಕಾದ ಕಂಪನಿಗಳನ್ನು ಹೊರದಬ್ಬಿದ. ಬಿಳಿಯರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅಮೇರಿಕಾ ತನ್ನ ಪತ್ರಕರ್ತರ ಜಾಲವನ್ನು ಬಳಸಿಕೊಂಡಿತು. ಪ್ರಧಾನ ಮಂತ್ರಿಗೆ ಬಲವಾಗಿ ಆತುಕೊಂಡಿದ್ದ ಜನರಲ್ಲಿ ವಿಷಬೀಜ ಬಿತ್ತಿತು. ಸಿಐಎ ವರದಿಯ ಆಧಾರದ ಮೇಲೆ ಜಾಗತಿಕವಾಗಿ ಲೇಖನಗಳು ಪ್ರಕಟಗೊಂಡವು. ಇದ್ದಕ್ಕಿದ್ದಂತೆ ಜನರಿಗೆ ಮೋಸಾದೆ ಕೆಡುಕನಾಗಿ ಕಂಡ. ಜನ ಸಿಡಿದೆದ್ದರು. ಸಿಐಎ ಸ್ಥಳೀಯ ಗೂಂಡಾಗಳಿಗೆ ಹಣಕೊಟ್ಟು ಕರೆತಂದಿತು. ತನ್ನವರನ್ನು ಟ್ರಕ್ಕುಗಳಲ್ಲಿ ತಂದು ಸುರಿಯಿತು. ಸುಮಾರು 300 ರಿಂದ 800 ಜನ ಗಲಭೆಯಲ್ಲಿ ತೀರಿಕೊಂಡರು. ಎಲ್ಲಕ್ಕೂ ಮೋಸಾದೆಯೇ ಕಾರಣವೆಂದು ನಂಬಿಸಲಾಯಿತು. ಅವನನ್ನು ಬಂಧಿಸಿ 3 ವರ್ಷಗಳ ಕಾರಾಗೃಹಕ್ಕೆ ತಳ್ಳಲಾಯ್ತು. ಆನಂತರವೂ ಗೃಹಬಂಧನದಲ್ಲಿಯೇ ಇರಿಸಲಾಗಿತ್ತು. ಅಮೇರಿಕೆಯ ಸಾರ್ವಭೌಮತೆಯನ್ನು ಒಪ್ಪುವ ರಾಜಮನೆತನದ ಸಕರ್ಾರ ಆಳ್ವಿಕೆಗೆ ಬಂತು. ಈಗ ಎಣ್ಣೆ ವ್ಯಾಪಾರಕ್ಕೆ ಯಾವ ನಿರ್ಬಂಧವೂ ಇರಲಿಲ್ಲ. 26 ವರ್ಷಗಳ ಕಾಲ ಮೊಹಮ್ಮದ್ ರೆಜಾ ಪೆಹ್ಲವಿ ಆಳಿದ ನಂತರ ಮತ್ತೊಮ್ಮೆ ಇರಾನ್ ಬಂಡೆದ್ದಿತ್ತು. ರಾಜ ಮನೆತನದಿಂದ ಆಳ್ವಿಕೆ ಕಸಿಯಿತು. ಇರಾನ್ನ ಅಮೇರಿಕಾ ದ್ವೇಷ ಅಂದಿನಿಂದ ಬಲವಾಯ್ತು.
1954ರಲ್ಲಿ ಗ್ವಾಟೆಮಾಲಾದಲ್ಲೂ ಇದೇ ಕತೆ ಪುನರಾವರ್ತನೆಯಾಯ್ತು. ಅಭಿವೃದ್ಧಿ ಕಾರ್ಯಗಳಿಂದ, ಸ್ವಾಭಿಮಾನ ಜಾಗೃತಿಯಿಂದ ಮನೆಮಾತಾದ ಅಧ್ಯಕ್ಷ ಜಾಕೋಬೋ ಅಬರ್ೆಂಜ್ನ ದೇಶಭಕ್ತ ವರ್ತನೆ ಅಮೇರಿಕಾ ಸಹಿಸಲಿಲ್ಲ. ಕ್ಯಾಸ್ಟಿಲೋ ಆರಮಾಸ್ನ ನೇತೃತ್ವದಲ್ಲಿ ಸ್ಥಳೀಯ ಪಡೆ ಬಂಡೇಳುವಂತೆ ಪ್ರೇರಣೆ ಕೊಟ್ಟಿತು. ಅದಕ್ಕೆ ಬೇಕಾದ ಜನ ಬೆಂಬಲವನ್ನೂ ಗಳಿಸಿಕೊಡುವ ವಾಗ್ದಾನ ಮಾಡಿತು. ಮಾನಸಿಕ ಯುದ್ಧವನ್ನು ಶುರುಮಾಡಿತು. ಆರಮಾಸ್ನ ಬಳಿ ಇದ್ದ ಪಡೆ 480 ಜನರದ್ದು. ಇದಕ್ಕೆ ಯುದ್ಧ ಗೆಲ್ಲುವ ಸಾಮಥ್ರ್ಯವಿರಲಿಲ್ಲ. ಈಗ ಈ ಸಂಖ್ಯೆಯನ್ನು ವಿಸ್ತಾರಗೊಳಿಸಲು ಸಿಐಎ ತನ್ನ ಪತ್ರಕರ್ತರ ಬಳಗವನ್ನು ಬಳಸಿಕೊಂಡಿತು. ಯುನೈಟೆಡ್ ಸ್ಟೇಟ್ಸ್ ಇನ್ಫರ್ಮೇಶನ್ ಏಜೆನ್ಸಿ ಅನೇಕ ಲೇಖನಗಳನ್ನು ಬರೆಸಿತು. ಕರಪತ್ರಗಳನ್ನು ಮುದ್ರಿಸಿ ಗ್ವಾಟೆಮಾಲಾದಲ್ಲಿ ಹಂಚಿಸಿತು. ವಾಯ್ಸ್ ಆಫ್ ಲಿಬರೇಶನ್ ಎಂಬ ರೇಡಿಯೋ ಕೇಂದ್ರ ಶುರುವಾಯಿತು. ಅದರಲ್ಲಿ ಅಧ್ಯಕ್ಷರ ದೌರ್ಜನ್ಯದ ವರದಿಗಳು ಮತ್ತೆ ಮತ್ತೆ ಪ್ರಕಟಗೊಂಡವು. ಆರಂಭದಲ್ಲಿ ಅದು ನಗರಗಳಲ್ಲಿ ಮಾತ್ರ ಕೇಳುವಂತಿತ್ತು. ಈಗ ಸಿಐಎ ಅದರ ತರಂಗ ಶಕ್ತಿಯನ್ನು ವೃದ್ಧಿಸಿ ಹಳ್ಳಿ-ಹಳ್ಳಿಗೂ ಮುಟ್ಟುವಂತೆ ಮಾಡಿತು. ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುತ್ತಿದ್ದ ಈ ಬಾನುಲಿ ಮತ್ತು ಪತ್ರಿಕೆಯ ವಾತರ್ೆಗಳು ಜನರ ಆತ್ಮ ವಿಶ್ವಾಸವನ್ನು ಕದಡಿಬಿಟ್ಟವು. ಹೋರಾಡಬೇಕಿದ್ದ ಸೈನಿಕರ ಆತ್ಮಸ್ಥೈರ್ಯವನ್ನು ಕಸಿದವು.

Jacobo-Arbenz
ಆಮೇಲೇನು? ಅಮೇರಿಕದ ಸೈನಿಕರು ಗ್ವಾಟೆಮಾಲಾದ ನೆಲದಲ್ಲಿ ಕದನಕ್ಕೆಂದು ನಿಂತಾಗ ಪ್ರತಿರೋಧವೇ ಇರಲಿಲ್ಲ. ಅಬರ್ೆಂಜ್ನ ಪದಚ್ಯುತಿಯಾಗಿ ಆರಮಸ್ ಅಧಿಕಾರಕ್ಕೇರಿದ. ಅಮೇರಿಕಾದ ಆಕಾಂಕ್ಷೆಗಳು ನಿಭರ್ೀತಿಯಿಂದ ನೆರವೇರಲಾರಂಭಿಸಿದವು.
ಆಪರೇಷನ್ ಮಾಕಿಂಗ್ ಬಡರ್್ನ ಯಶಸ್ಸಿನಿಂದ ಬೀಗಿದ ಅಮೇರಿಕಾದ ಅಧ್ಯಕ್ಷ ಐಸನ್ ಹೋವರ್ ಇದನ್ನು ಅಮೇರಿಕದ ವಿದೇಶ ನೀತಿಯೊಂದಿಗೆ ಬಲವಾಗಿ ಬೆಸೆಯುವ ಯೋಜನೆಯನ್ನೂ ಮಾಡಿದ್ದ. ಆ ವೇಳೆಗಾಗಲೇ ಜಗತ್ತಿನ ನೂರಾರು ಪತ್ರಕರ್ತರನ್ನು ಸಿಐಎ ಕೊಂಡುಕೊಂಡುಬಿಟ್ಟಿತ್ತು. ಕೆಲವು ಪತ್ರಿಕೆಗಳಂತೂ ಸಿಐಎ ಹೇಳಿದವರ ಕುರಿತಂತೆ ಸಂಪಾದಕೀಯವನ್ನೂ ಬರೆದು ಸಾಷ್ಟಾಂಗವೆರಗುತ್ತಿತ್ತು!
ಏಜೆಂಟೊಬ್ಬನನ್ನು ಮತ್ತೊಂದು ದೇಶಕ್ಕೆ ಕಳಿಸಿ ಗೂಢಚಾರನಂತೆ ಬಳಸಿಕೊಳ್ಳುವುದಕ್ಕಿಂತ ಖ್ಯಾತನಾಮ ಪತ್ರಿಕೆಗಳ ಪತ್ರಕರ್ತರಾಗಿ ಕಳಿಸಿ ಗುಪ್ತ ಮಾಹಿತಿ ಸಂಗ್ರಹಿಸುವುದು ಸುಲಭವಾಗಿತ್ತು. ಈ ಪತ್ರಕರ್ತರಿಗೆ ಎಲ್ಲಿ ಹೋಗಲೂ ಅಡ್ಡಿಯಿರಲಿಲ್ಲ. ಅವರು ಸೇನಾ ನೆಲೆಗೆ, ವಿಜ್ಞಾನಿಗಳ ಮೀಟಿಂಗಿಗೆ, ರಾಜಕಾರಣಿಗಳ ಮನೆಗೆ ಎಲ್ಲಿಗೆ ಬೇಕಾದರೂ ಹೋಗಬಲ್ಲರು; ಬೇಕಾದ ಮಾಹಿತಿ ಸಂಗ್ರಹಿಸಬಲ್ಲರು ಎಂಬುದು ಅರಿವಾಗದ ಸಂಗತಿಯಲ್ಲ. ಹೀಗಾಗಿ ಅಮೇರಿಕಾದ ಎಲ್ಲ ಪ್ರಮುಖ ಪತ್ರಿಕೆಗಳನ್ನೂ ತೆಕ್ಕೆಗೆ ತೆಗೆದುಕೊಂಡ ಸಿಐಎ ತನ್ನ ಬಾಹುಗಳನ್ನು ವಿಸ್ತರಿಸಿತು. ಪತ್ರಕರ್ತರ ಮೇಲೆ ಹಲ್ಲೆಯಾದರೆ, ಸಕರ್ಾರಗಳು ಅವರನ್ನು ದೇಶವಿರೋಧಿ ಚಟುವಟಿಕೆಗಾಗಿ ಬಂಧಿಸಿದರೆ ಜಾಗತಿಕ ಮಟ್ಟದಲ್ಲಿ ಬೊಬ್ಬೆ ಹಾಕಲು ಸಿದ್ಧವಾದ ಎನ್ಜಿಓಗಳಿಗೂ ತಾನೇ ಹಣಕೊಟ್ಟು ಸಾಕಿಕೊಂಡಿತ್ತು. ಈ ಪತ್ರಕರ್ತರು ಅನ್ಯ ರಾಷ್ಟ್ರದಲ್ಲಿ ಸಿಐಎಗೆ ಬೇಕಾದ ಏಜೆಂಟುಗಳನ್ನು ಗುರುತಿಸುವ, ಗುಪ್ತ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ. ಸುಳ್ಳು ಸುದ್ದಿಗಳನ್ನು ಹರಡಿಸುವ ಕೆಲಸದಲ್ಲೂ ಅವರು ನಿಸ್ಸೀಮರಾಗಿರುತ್ತಿದ್ದರು.
ಕಾಲಕ್ರಮದಲ್ಲಿ ಸಿಐಎ ತನ್ನ ಕೆಲಸದ ರೀತಿಯನ್ನು ಬದಲಾಯಿಸಿತು. ಬೇರೆ ಬೇರೆ ರಾಷ್ಟ್ರಗಳಿಂದಲೇ ಯುವ ಪತ್ರಕರ್ತರನ್ನು ಆಯ್ದುಕೊಳ್ಳಲಾರಂಭಿಸಿತು. ಅವರನ್ನು ಅಮೇರಿಕಾಕ್ಕೆ ಕರೆದು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟಿತು. ಅವರಿಗೆ ಅನೇಕ ಪತ್ರಿಕಾ ದಿಗ್ಗಜರ ಪರಿಚಯ ಮಾಡಿಸಿಕೊಟ್ಟಿತು. ಇಷ್ಟಕ್ಕೆ ಉಬ್ಬಿಹೋದ ಆ ತರುಣ ಪತ್ರಕರ್ತನ ಬರಹವೊಂದಕ್ಕೆ ಪುಲಿಟ್ಜರ್ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನೂ ಕೊಟ್ಟು ಅವನ ಕಿರೀಟಕ್ಕೊಂದು ಪ್ಲಾಸ್ಟಿಕ್ ಗರಿಯನ್ನೂ ಸೇರಿಸಿತು. ಅಲ್ಲಿಗೆ ಆ ಪತ್ರಕರ್ತನ ಕತೆ ಮುಗಿಯಿತು. ಆತನೀಗ ಅಮೇರಿಕದ ದೊರೆಗಳು ಮೆಚ್ಚುವಂತಹ ಬರಹದಲ್ಲಿ ತಲ್ಲೀನ. ತನ್ನ ದೇಶವನ್ನು ತೆಗಳುವುದು, ತನ್ನ ಜನಾಂಗವನ್ನು ನಿಂದಿಸುವುದು ಅವನಿಗೆ ಹೆಮ್ಮೆಯ ಸಂಗತಿ.
ಇದು ಸುಮ್ಮನೆ ಆಡುತ್ತಿರುವ ಮಾತುಗಳಲ್ಲ. ಜರ್ಮನಿಯ ಪತ್ರಕಾರ ಉಡೋ ಉಲ್ಫ್ಕಾಟ್ ಸಿಐಎಯ ಏಜೆಂಟನಾಗಿದ್ದು, ಬೇಸತ್ತು ಬಿಟ್ಟು ಬಂದು ಅವರ ಮನೋಗತ ಬಯಲು ಮಾಡಿದಾಗ ಹೇಳಿದ್ದು. ಆತನ ಪ್ರಕಾರ ಸಿಐಎಯ ಗಾಳಕ್ಕೆ ಸಿಲುಕಿದ ಅನೇಕ ತರುಣ ಪತ್ರಕರ್ತರಿಗೆ ಮಹತ್ವದ ಪತ್ರಿಕಾ ಕಚೇರಿಗಳಲ್ಲಿ ಕೆಲಸ ಕೂಡ ಅವರೇ ಕೊಡಿಸುತ್ತಾರಂತೆ. ಒಮ್ಮೆಯಂತೂ ಒಂದಷ್ಟು ಗುಪ್ತ ಮಾಹಿತಿಗಳನ್ನು ಅವನ ಟೇಬಲ್ಲಿನ ಮೇಲೆ ಹರವಿ ಲೇಖನ ಮಾಡುವಂತೆ ಕೇಳಿಕೊಂಡಿತು ಸಿಐಎ. ಅವನು ಬರೆದ ಲೇಖನ ಜಗತ್ತಿನ ಖ್ಯಾತನಾಮ ಪತ್ರಿಕೆಗಳಲ್ಲಿ ಮರು ಮುದ್ರಣವಾಗುವಂತೆ ನೋಡಿಕೊಂಡಿತು.
ಭಾರತದ ಕುರಿತಂತೆ ಹೆಮ್ಮೆಯ ಮಾತುಗಳನ್ನಾಡುವ ಪತ್ರಕರ್ತರು ದೇಶದ ಗಡಿಯನ್ನೇ ದಾಟುವುದಿಲ್ಲ; ತೆಗಳುವ ಮಂದಿ ಜಾಗತಿಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಹೊಮ್ಮುವುದು ಹೇಗೆಂದು ಈಗ ಅರ್ಥವಾಗಿರಬೇಕು!
ಇವಿಷ್ಟನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಕಾರಣವಿದೆ. ಸಿಐಎಯ ಈ ಬಂಧದೊಳಕ್ಕೆ ಭಾರತವೂ ಸಿಕ್ಕು ವಿಲವಿಲನೆ ಒದ್ದಾಡುತ್ತಿದೆ. ಚಚರ್ು ಮತ್ತು ಸಿಐಎಗಳು ಭಾರತದ ಮಾಧ್ಯಮವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ದೇಶವನ್ನೇ ತಮಗೆ ಬೇಕಾದಂತೆ ಆಡಿಸುತ್ತಿರುವುದು ಅರಿವಾಗದ ಸಂಗತಿಯೇನಲ್ಲ. ಪ್ರತಿಯೊಂದು ಮಾಧ್ಯಮ ಮನೆಯಲ್ಲೂ ಒಂದೇ ಬಗೆಯಲ್ಲಿ ಆಲೋಚಿಸುವ ಪತ್ರಕರ್ತರಿರುವುದಂತೂ ಬಲು ಅಚ್ಚರಿಯ ಸಂಗತಿ. ಅಲ್ಲವೇ ಮತ್ತೆ? ರಾಹುಲ್ ಗಾಂಧಿ ಜೆಎನ್ಯುಗೆ ಕಾಲಿಟ್ಟದ್ದನ್ನು ಕ್ರಾಂತಿಕಾರಿ ಬೆಳವಣಿಗೆ ಎಂಬಂತೆ ಬಹುತೇಕ ಮಾಧ್ಯಮಗಳು ಬಿಂಬಿಸುತ್ತವೆ. ಕನ್ಹಯ್ಯನ ಬಿಡುಗಡೆಗೆ ಒಂದು ಸಾವಿರ ಜನ ಸೇರಿದ್ದನ್ನು ದೇಶದ ಜನದನಿ ಎಂದು ಹೊಗಳುತ್ತವೆ. ನಾಲ್ಕಾರು ದಿನಗಳಲ್ಲಿಯೇ ಅದನ್ನು ವಿರೋಧಿಸಿ ದೆಹಲಿಯಲ್ಲಿ ಬೀದಿಗಿಳಿದ ಒಂದು ಲಕ್ಷ ಕಾಲೇಜು ವಿದ್ಯಾಥರ್ಿಗಳ ಸುದ್ದಿಯನ್ನು ಅವೇ ಮಾಧ್ಯಮಗಳು ಬ್ಲ್ಯಾಕ್ ಔಟ್ ಮಾಡುತ್ತವೆ. ಕನ್ಹಯ್ಯನ ಭಾಷಣಕ್ಕೆ ಎಲ್ಲಾ ಮಾಧ್ಯಮಗಳೂ ನೇರಪ್ರಸಾರದ ಭಾಗ್ಯ ಒದಗಿಸಿದರೆ, ಅದಕ್ಕೆ ಪ್ರತ್ಯುತ್ತರವಾಗಿ ಅನುಪಮ್ ಖೇರ್ ಆಡಿದ ಮಾತುಗಳನ್ನು ಪ್ರಕಟಿಸುವಂತಿಲ್ಲ ಎನ್ನುತ್ತದೆ ಎಬಿಪಿ ನ್ಯೂಸ್. ಯಾವುದೋ ಊರಿನಲ್ಲಿ ಎರಡೇ ಎರಡು ಮುಸ್ಲೀಂ ಕುಟುಂಬದ ಮನೆಗೆ ಹಚ್ಚಿದ ಬೆಂಕಿ ಅಸಹಿಷ್ಣು ಭಾರತವೆನ್ನಲು ಸಾಕು. ಆದರೆ ಉತ್ತರ ಪ್ರದೇಶದಲ್ಲಿ ಅಮರ್ ಜವಾನ್ನ್ನು ಕಾಲಿನಿಂದ ಒದೆಯುವ ಮುಸಲ್ಮಾನ ಪುಂಡರ ಗುಂಪು; ಮಾಲ್ಡಾದಲ್ಲಿ ಮುಸ್ಲೀಂ ದಾಳಿಗೆ ಧ್ವಂಸಗೊಂಡ ಹಿಂದೂ ಮನೆಗಳದ್ದು ಮಾಧ್ಯಮಗಳಲ್ಲಿ ಸದ್ದೇ ಇಲ್ಲ. ದಾರಾಸಿಂಗ್ ಗ್ರಹಾಂಸ್ಟೇನ್ಸ್ನ ಕೊಲೆ ಮಾಡಿದನೆಂದು ವರದಿ ಮಾಡುವ ಮಾಧ್ಯಮಗಳು, ಕಾಶ್ಮೀರದ ಪಂಡಿತರು ಮಾಡುತ್ತಿದ್ದ ಶೋಷಣೆಗೆ ಪ್ರತಿಯಾಗಿ ಅಲ್ಲಿನ ಮುಸಲ್ಮಾನರು ಪ್ರತಿರೋಧ ವ್ಯಕ್ತಪಡಿಸಿ ಅವರ ಹತ್ಯೆ ಮಾಡಿದರೆನ್ನತ್ತಾರೆ.
ಹಿಂದೂ ಧರ್ಮಕ್ಕೊ, ಮುಸ್ಲೀಂ-ಕ್ರಿಶ್ಚಿಯನ್ ಪಂಥಗಳಿಗೋ ನಿಷ್ಠರಾಗಿರಬೇಕಿಲ್ಲ ಅವರು. ಕೊನೆಯ ಪಕ್ಷ ಪತ್ರಿಕಾ ಧರ್ಮಕ್ಕಾದರೂ! ಅವರಿಗೆಲ್ಲ ಗೊತ್ತಿರುವುದು ಹಣವೆಂಬ ಮಾರ್ಗವೊಂದೇ. ಆ ದಾರಿಯಲ್ಲಿ ನಡೆವಾಗ ದೇಶ, ಧರ್ಮಗಳಾವುವೂ ಕಾಣುವುದಿಲ್ಲ. ಮ್ಯಾಕ್ಸ್ ಮುಲ್ಲರ್ ಲಂಡನ್ನಿನಲ್ಲಿ ಕುಳಿತು ಯಾವ ಕೆಲಸ ಮಾಡಿದನೋ ಇವರೆಲ್ಲ ಭಾರತದೊಳಗೇ ಇದ್ದು ಆ ಕೆಲಸವನ್ನು ಸಮರ್ಥವಾಗಿ ಮುಂದುವರೆಸುತ್ತಿದ್ದಾರೆ.
ಸಿಐಎ ಮತ್ತು ಚಚರ್ುಗಳ ಸಂಬಂಧವೂ ಬಲವಾಗಿರುವಂಥದ್ದೇ! 1957ರಲ್ಲಿ ಗ್ಲೋರಿಯಾ ಸ್ಟೀನಂ ಎಂಬ ಹೆಣ್ಣುಮಗಳು ಕೇರಳಕ್ಕೆ ಭೇಟಿಕೊಟ್ಟು ಅಲ್ಲಿನ ಪ್ರೊಟೆಸ್ಟೆಂಟ್ ಚಚರ್ುಗಳ ಮೂಲಕ ವಿಭಿನ್ನ ತಳಿಯ ಗಿಡಗಳ ಸಂಶೋಧನೆಗೆ ತೊಡಗಿದ್ದಳು. ಅದು ನೆಪ ಮಾತ್ರ. ಆಕೆ ಈ ಭಾಗದ ಸ್ತ್ರೀಯರನ್ನೂ ಭೇಟಿ ಮಾಡಿ ಒಂದಷ್ಟು ಉಪಯುಕ್ತ ಮಾಹಿತಿ ಸಂಗ್ರಹಿಸಿದ್ದಳು. ಇದೇ ಹೊತ್ತಲ್ಲಿ ವಿದೇಶದಿಂದ ಬಂದ ಗಣ್ಯರೊಂದಿಗೆ ಆಕೆಯ ಮಾತುಕತೆ ನಡೆದಿತ್ತು. ಆನಂತರ ಹೊರ ಬಂದ ಫೆಮಿನಿಸ್ಟ್ ರೆವಲ್ಯೂಷನ್ ಎಂಬ ಕೃತಿಯಲ್ಲಿ ಗ್ಲೋರಿಯಾಳನ್ನೂ ಸಿಐಎ ಏಜೆಂಟಳೆಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಫೋಡರ್್ ಫೌಂಡೇಶನ್ನು ಗಲಾಟೆ ಮಾಡಿ ಪ್ರಕಟಣೆಗೆ ಮುನ್ನ ಆ ಅಧ್ಯಾಯವನ್ನು ಬಿಡುವಂತೆ ಪ್ರಕಾಶಕರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಕೊಟ್ಟ ದೊಡ್ಡ ಮೊತ್ತದ ಗೌರವ ವೇತನ ಪಡೆದು ಭಾರತಕ್ಕೆ ಬಂದ ವೆಂಡಿ ಡೋನಿಯರ್ಳದ್ದೂ ಅದೇ ಕಥೆ. ಆಕೆ ಭಾರತಕ್ಕೆ ಬಂದು ಅಧ್ಯಯನ ನಿರತಳಾದದ್ದೂ ಅಲ್ಲದೇ ಹಿಂದೂ ಧರ್ಮವನ್ನು ಕಂಠಮಟ್ಟ ಟೀಕಿಸಿದಳು. ಅವಳು ಬರೆದ ಸಾಹಿತ್ಯವನ್ನು ನಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವುದಲ್ಲದೇ ಆಕೆಯ ಅಭಿಮಾನಿ ವರ್ಗವೂ ಇಲ್ಲಿ ಸೃಷ್ಟಿಯಾಯ್ತು! ಆಮೇಲೆಯೇ ಗೊತ್ತಾಗಿದ್ದು ಆಕೆಗೆ ಗೌರವ ವೇತನ ಕೊಟ್ಟು ಕಳಿಸಿದ್ದ ಸಂಸ್ಥೆ ನೇರವಾಗಿ ಸಿಐಎಯಿಂದ ಹಣ ಸ್ವೀಕರಿಸುವಂಥದ್ದು ಅಂತ!

Wendy-Doniger-2
ಇಂದಿಗೂ ವೆಂಡಿ ಡೋನಿಯರ್ಳನ್ನು ಆದರ್ಶವೆಂದು ಸ್ವೀಕರಿಸುವ ಜೆಎನ್ಯುನ ಪ್ರೊಫೆಸರುಗಳಿಗೆ 1972ರಲ್ಲಿ ಇಂದಿರಾಗಾಂಧಿ ಇಂತಹ ಶಿಷ್ಯವೇತನ ಪಡೆದು ಭಾರತಕ್ಕೆ ಬರುವವರ ಮೇಲೆ ನಿಷೇಧ ಹೇರಿದ್ದು ನೆನಪಿದೆಯಾ? ಅವತ್ತು ಭಾರತದ ಈ ಕ್ರಮದ ಕುರಿತಂತೆ ‘ದ ನ್ಯೂಯಾಕರ್್ ಟೈಮ್ಸ್’ ಹುಳ್ಳಗೆ ಪ್ರತಿಕ್ರಿಯಿಸಿದ್ದನ್ನು ಮರೆಯಲಾದೀತೇನು?
ಹೌದು. ಅದೊಂದು ವಿಷ ವತರ್ುಲ. ಚಚರ್ು ಮತ್ತು ಸಿಐಎ ಸಮಾಂತರವಾಗಿ ಆಲೋಚಿಸುತ್ತವೆ. ಸೇವೆಯ ನೆಪದಲ್ಲಿ ಚಚರ್ು ಮೊದಲು ಒಳನುಗ್ಗುತ್ತದೆ. ಭೂಕಂಪವೇ ಇರಲಿ, ಸುನಾಮಿಯೇ ಇರಲಿ. ಕೋಟ್ಯಂತರ ಡಾಲರು ಸಂಗ್ರಹಿಸಿ ಹಿಡಿಯಷ್ಟು ಖಚರ್ು ಮಾಡುತ್ತದೆ. ಉಳಿದುದನ್ನು ಜಮೀನು ಖರೀದಿಸಲು, ಚಚರ್ು ಕಟ್ಟಲು ಬಳಸುತ್ತದೆ. ಆ ಮೂಲಕ ಅದರ ಆಧಾರ ಬಲಗೊಂಡಿತು. ಈಗ ಸಿಐಎ ತನ್ನ ಏಜೆಂಟರನ್ನು ಮತಪ್ರಚಾರಕರಾಗಿ, ಸಾಂಸ್ಕೃತಿಕ ಅಧ್ಯಯನಕ್ಕೆ ವಿದ್ಯಾಥರ್ಿಗಳಾಗಿ ಕಳಿಸಿಕೊಡುತ್ತದೆ. ಇಲ್ಲಿ ಮಾಧ್ಯಮಗಳನ್ನು ಖರೀದಿಸಲು ಹಣ ಕೊಡುತ್ತದೆ. ಪತ್ರಕರ್ತರನ್ನು ತನಗೆ ಬೇಕಾದಂತೆ ರೂಪಿಸುತ್ತದೆ. ಕೊನೆಗೆ ಬೇಕಾದಾಗ ಜನಾಂದೋಲನಗಳನ್ನೂ ಮಾಡಿಸುತ್ತದೆ; ಬೇಕಾದ ಸಕರ್ಾರವನ್ನೂ ಕೂರಿಸುತ್ತದೆ.
ನಾವು ಬೆಪ್ಪು ತಕ್ಕಡಿಗಳಂತೆ ಕನ್ಹಯ್ಯಾ ಎಷ್ಟು ಚೆನ್ನಾಗಿ ಮಾತನಾಡುತ್ತಾನಲ್ಲ! ಎಂದು ಹುಬ್ಬೇರಿಸುತ್ತಿರುತ್ತೇವೆ. ಅಷ್ಟರೊಳಗೆ ಅಡಿಯ ಭೂಮಿ ಕಾಣೆಯಾಗಿರುವುದು ನಮಗೆ ಕಾಣುವುದೇ ಇಲ್ಲ!!

2 thoughts on “ಅಡಿಯ ಭೂಮಿ ಕಾಣೆಯಾಗಿರುವುದು ನಮಗೆ ಕಾಣುವುದೇ ಇಲ್ಲ!!

 1. OMG… not just NGO’s…

  ಇವರು ಎಲ್ಲ ರೀತಿಯ ಅವಕಾಶಗಳನ್ನು ಬಿಡದೆ ಬಳಸಿಕೊಳ್ಳುತ್ತಾರೆ… ಅವಕಾಶವಿಲ್ಲದ ಪಕ್ಷದಲ್ಲಿ ತಾವೇ ಅವಕಾಶಗಳನ್ನು ಸೃಷ್ಟಿಸುತ್ತಾರೆ…ಬಹುಶಃ ಅವರು ಈ ರೀತಿಯ ಕಾರ್ಯಗಳಿಗೆ ಹಣ ವ್ಯಾಯ ಮಾಡುವ ಬದಲು ವವಿಶ್ವದ ದೊಡ್ಡನ ಎಂದು ನೆಪ ಮಾತ್ರಕ್ಕೆ ಕರೆಸಿಕೊಳ್ಳದೆ ತನ್ನ ಘನತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರೆ ಅದಕ್ಕೆ ನಿಜವಾದ ಗೌರವ ಸಂದಯವಗುತ್ತಿತ್ತು… ಅಮೇರಿಕೆ ಯಾವ ರೀತಿಯು ನಂಬಿಕೆ ಅರ್ಹವಾದ ದೇಶವಾಗಿ ಕಾಣುತ್ತಿಲ್ಲ…

  ಮತಾಂತರ.. ರಾಷ್ಟ್ರಂತರ…ಹಿಂದೊಮ್ಮೆ ಬ್ರಿಟಿಷ್ನವರಿಗೆ ಪ್ರಪಂಚವನ್ನಳುವ ತನ್ನ ಕೈಗೊಂಬೆಯಾಗಿ ಕುಣಿಸುವ ಹುಚ್ಚಿತ್ತು… ಈಗ ಅದು ವರ್ಗಾವನೆಯಾದಂತೆ ತೋರುತ್ತದೆ… ಇದು ತನ್ನ ಅಸ್ಥಿತ್ವದ ಕುರಿತಾದ ಭಯವೋ ಅಥವಾ ಪ್ರಪಂಚ ತನ್ನನ್ನು ಅತಿ ಹೆಚ್ಚು ಗೌರವ ಮರ್ಯದೆಗಳಿಂದ ಕಾಣಬೇಕೆಂಬ ಹಂಬಲವೋ…
  ಆದರೆ… ಸ್ವಾಭಿಮಾನಿ ಭಾರತೀಯ ಈ ವರ್ತುಲದಲ್ಲಿ ಸಿಕ್ಕಿರುವುದು… ಅಸಹನೀಯ…ದುಗುಡವೆನಿಸುತ್ತದೆ… ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ ಭಾರತದಲ್ಲಿ… ಈ ರೀತಿ ನಮ್ಮ ಸರ್ಕಾರಗಳ ಮೇಲೆ ಅಧಿಪತ್ಯ ಸಾಧಿಸುವ ಕೆಲಸ ನಿಶ್ಯಬ್ಧವಾಗಿ ಸಾಗುತ್ತಿರುವುದು ಅಧೀರರನ್ನಾಗಿಸುತ್ತದೆ…

  ಕ್ವಿಟ್ ಮಾರ್ಚ್ ನ ಅವಶ್ಯಕತೆ ನಿಜಕ್ಕೂ ಅನಿವಾರ್ಯವಾಗಿದೆ… awareness is the mantra…..

  ಜಾಗೋ ಭಾರತ್…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s