ಹರಡಿಕೊಂಡಿರುವ ಚುಕ್ಕಿ ಸೇರಿಸಿ, ಚಿತ್ತಾರ ಕಾಣುತ್ತೆ!!

ಅಮೆರಿಕಾ ಸಕರ್ಾರ ಚಾಲಿತ ಸಿ ಐ ಎ ಮತ್ತು ಚಚರ್ು ಇವೆರಡೂ ಸೇರಿ ಭಾರತವನ್ನು ಬಲವಾಗಿ ಹಿಡಿದುಕೊಂಡುಬಿಟ್ಟಿವೆ. ಲಕ್ಷಾಂತರ ಕೋಟಿ ರೂಪಾಯಿ ಸರಾಗವಾಗಿ ಹರಿದುಬರುತ್ತದೆ. ಕ್ರಿಶ್ಚಿಯನ್ ಸಂಸ್ಥೆಗಳ ಮತ್ತು ಅಮೆರಿಕಾ ಪರವಾದ ಎನ್ಜಿಓ ಗಳ ಮೂಲಕ ಹಳ್ಳಿ ಹಳ್ಳಿಯನ್ನು ಮುಟ್ಟುತ್ತದೆ. ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಸಕರ್ಾರಕ್ಕೆ ಸವಾಲೆಸೆದು ರಾಷ್ಟ್ರವನ್ನು ಆಪೋಶನ ತೆಗೆದುಕೊಂಡುಬಿಡುತ್ತದೆ. ಹೀಗಾಗಿಯೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ 4470 ಎನ್ಜಿಓಗಳ ಪರವಾನಗಿ ರದ್ದು ಮಾಡಿದರು. ಎಂಟೂಮುಕ್ಕಾಲು ಸಾವಿರದಷ್ಟು ಎನ್ಜಿಓಗಳಿಗೆ ನೋಟೀಸು ಕಳಿಸಿದರು. ಪರಿಸರದ ನೆಪ ಮಾಡಿ ಭಾರತದ ಪ್ರಗತಿಗೆ ಅಡ್ಡಗಾಲು ಹಾಕುವ ಗ್ರೀನ್ ಪೀಸ್ ಸಂಸ್ಥೆಯ ವಿರುದ್ಧದ ಬೇಹುಗಾರಿಕೆ ವರದಿಯ ಆಧಾರದ ಮೇಲೆ ಅದನ್ನು ನಿಷೇಧಿಸಿದ್ದಲ್ಲದೇ ಅವರ ಬ್ಯಾಂಕ್ ಅಕೌಂಟುಗಳನ್ನು ವಶಪಡಿಸಿಕೊಳ್ಳಲಾಯಿತು.

BN-LF900_modiuk_G_20151113004252

ಸಪ್ಟೆಂಬರ್ 2000. ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನ ಮಂತ್ರಿಯಾಗಿ ಅಮೇರಿಕದ ಪ್ರವಾಸಕ್ಕೆ ಹೊರಟಿದ್ದರು. ಅವರು ಅಮೇರಿಕಾದಲ್ಲಿರುವ ದಿನವೇ ಅಲ್ಲಿನ ನ್ಯೂಯಾಕರ್್ ಟೈಮ್ಸ್ ಪತ್ರಿಕೆ ಕ್ರಿಶ್ಚಿಯನ್ನರ ಮೇಲೆ ಭಾರತದಲ್ಲಿ ಆಗುತ್ತಿರುವ ದೌರ್ಜನ್ಯಗಳನ್ನು ಮುಂದಿಟ್ಟುಕೊಂಡು ಬಹಿರಂಗ ಪತ್ರವೊಂದನ್ನು ಪ್ರಕಟಿಸಿತ್ತು. ವಾಜಪೇಯಿಯವರಿಗೆ ಮತ್ತು ಭಾರತದ ಅಧಿಕಾರಿಗಳಿಗೆ ಮುಜುಗರ ಉಂಟುಮಾಡುವುದೇ ಆ ಪತ್ರದ ಉದ್ದೇಶವಾಗಿತ್ತು. ಆನಂತರ ಗೊತ್ತಾಯ್ತು ಈ ಪತ್ರವನ್ನು ಪ್ರಕಟಿಸಲು ಆ ಪತ್ರಿಕೆಗೆ ಐವತ್ತು ಸಾವಿರ ಡಾಲರುಗಳ ಬೃಹತ್ ಮೊತ್ತವನ್ನು ಅಮೇರಿಕದ ನ್ಯಾಶನಲ್ ಅಸೋಸಿಯೇಶನ್ ಆಫ್ ಏಷಿಯನ್ ಕ್ರಿಶ್ಚಿಯನ್ಸ್ ಪಾವತಿಸಿತ್ತು! (ಫ್ರಾಂಗ್ವಾ- ವಿಲ್ ಹಿಂದುಯಿಸ್ಮ್ ಸವರ್ೈವ್ ದ ಪ್ರೆಸೆಂಟ್ ಕ್ರಿಶ್ಚಿಯನ್ ಅಫೆನ್ಸೀವ್).
ನವೆಂಬರ್ 2015. ಭಾರತಕ್ಕೆ ಹತ್ತಿರವಿರುವ ರಾಷ್ಟ್ರಗಳನ್ನೆಲ್ಲಾ ಸುತ್ತಾಡಿದ ನರೇಂದ್ರ ಮೋದಿಯವರು ಪಶ್ಚಿಮದ ಪ್ರವಾಸ ಶುರು ಮಾಡಬೇಕೆಂದಾಗಲೇ ಇಲ್ಲಿ ಅಸಹಿಷ್ಣುತೆ ಶುರುವಾಯಿತು. ಬಿಬಿಸಿ ಯುಕೆಯಲ್ಲಿ ಮೋದಿಯವರಿಗೆ ಕೇಳಿದ ಮೊದಲ ಪ್ರಶ್ನೆಯೇ ಈ ಕುರಿತಾದದ್ದು! ನೆನಪಿದೆ ತಾನೇ? ಪ್ರಶಸ್ತಿಗಳನ್ನು ಮರಳಿಸಿ ಜಾತ್ಯಾತೀತತೆಯೇ ಮೈವೆತ್ತವರಂತೆ ಮೆರೆದಿದ್ದವರೆಲ್ಲ ಆನಂತರದ ದಿನಗಳಲ್ಲಿ ತಣ್ಣಗಾಗಿ ಬಿಟ್ಟರಲ್ಲ; ಯಾರದ್ದು ಕರಾಮತ್ತು?
ಅಮೇರಿಕಾದ ಬೇಹುಗಾರಿಕಾ ಸಂಸ್ಥೆ ಸಿಐಎ ಜಗತ್ತಿನ ಅತಿ ದೊಡ್ಡ ಗೂಢಚಯರ್ಾ ಸಂಸ್ಥೆ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ, ಎಲ್ಲ ಸಕರ್ಾರಗಳ ಮೇಲೆ ಅದಕ್ಕಿರುವಷ್ಟು ಹಿಡಿತ ಮತ್ತ್ಯಾರಿಗೂ ಇರಲಿಕ್ಕಿಲ್ಲ. ದ್ವಿತೀಯ ಮಹಾಯುದ್ಧದ ನಂತರ ಕಮ್ಯುನಿಸ್ಟ್ ಶಕ್ತಿಯ ದಮನಕ್ಕೆಂದು ಸಿಐಎ ಟೊಂಕ ಕಟ್ಟಿ ನಿಂತುಬಿಟ್ಟಿತ್ತು. ಬಗೆ ಬಗೆಯ ದಾಳಿಗಳನ್ನೆಸೆಯಿತು. ತನ್ನ ಏಜೆಂಟರನ್ನು ಬೇರೆಡೆಗೆ ಕಳಿಸುವ, ಸ್ಥಳೀಯರನ್ನೇ ಏಜೆಂಟರನ್ನಾಗಿ ಬಳಸಿಕೊಳ್ಳುವ ಸಾಂಪ್ರದಾಯಿಕ ಗೂಢಚಯರ್ೆಯೊಂದಿಗೆ ಹೊಸದೊಂದು ಮಾದರಿಯನ್ನು ಅಳವಡಿಸಿಕೊಂಡಿತು.
1967ರಲ್ಲಿ ಮೈಕ್ ವಾಲೇಸ್ ಸಂಶೋಧನಾ ವರದಿಯೊಂದನ್ನು ಜಗತ್ತಿನ ಮುಂದಿರಿಸಿದಾಗಲೇ ಈ ಹೊಸ ಮಾದರಿ ಸ್ಪಷ್ಟ ರೂಪದಲ್ಲಿ ಅನಾವರಣಗೊಂಡದ್ದು. ಸಿಐಎ ತನ್ನ ಅಡಿಯಲ್ಲಿರುವಂತೆ ಒಂದಷ್ಟು ನಕಲಿ ಸಂಸ್ಥೆಗಳನ್ನು ಸೃಷ್ಟಿಸುತ್ತದೆ. ಆ ಸಂಸ್ಥೆಗಳು ಅದಾಗಲೇ ಕಾರ್ಯನಿರ್ವಹಿಸುತ್ತಿರುವ ದಾನ-ದತ್ತಿ ಸಂಸ್ಥೆಗಳಲ್ಲಿ ತನಗೆ ಬೇಕಾದವನ್ನು ಆರಿಸಿಕೊಂಡು ಹಣ ನೀಡುತ್ತದೆ. ಈ ಸಂಸ್ಥೆಗಳು ಬೇರೆ ಬೇರೆ ರಾಷ್ಟ್ರದಲ್ಲಿರುವ ಸಕರ್ಾರೇತರ ಸಂಸ್ಥೆ ಎನ್ಜಿಒಗಳ ಭಿನ್ನ-ಭಿನ್ನ ಯೋಜನೆಗಳಿಗೆ ಹಣ ನೀಡುತ್ತದೆ ಮತ್ತು ಆ ಸಂಸ್ಥೆಗಳನ್ನೇ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತದೆ!
ಅರ್ಥವಾಗಲಿಲ್ಲವೇ? ಇರಲಿ. ಅಮೇರಿಕಾ ಚಾಲಿತ 200 ಸಂಸ್ಥೆಗಳು ಪೋಲಿಯೋ ನಿಮರ್ೂಲನೆಯ ಹೆಸರಲ್ಲಿ ಪಾಕಿಸ್ತಾನದ ಅಬೋಟಾಬಾದಿನಲ್ಲಿ ಕೆಲಸ ಮಾಡಲಾರಂಭಿಸಿದವು. ಡಾ|| ಶಕೀಲ್ ಅಫ್ರಿದಿ ಪಾಕಿಸ್ತಾನದಲ್ಲಿ ಇವರ ಬೆಂಬಲಕ್ಕೆ ನಿಂತ. ಹಳ್ಳಿ-ಹಳ್ಳಿ, ಮನೆ-ಮನೆಗೂ ಕಾರ್ಯಕರ್ತರು ಹೋದರು. ಇದೇ ನೆಪದಲ್ಲಿ ಒಸಾಮಾ ಬಿನ್ ಲಾಡೆನ್ನ ಬಂಗಲೆಯೊಳಕ್ಕೆ ಹೋಗಿ ಮಕ್ಕಳಿಗೆ ಔಷಧಿ ಕುಡಿಸಿ ಡಿಎನ್ಎ ಸ್ಯಾಂಪಲ್ಸ್ ಸಂಗ್ರಹಿಸಿಲಾಯ್ತು. ಲಾಡೆನ್ನ ಇರುವಿಕೆಯನ್ನು ದೃಢಪಡಿಸಿಕೊಂಡರು. ಕೊನೆಗೊಂದು ದಿನ ಲಾಡೆನ್ನ ಹತ್ಯೆ ಮಾಡಿ ಜಗತ್ತಿನೆದುರು ಅಮೇರಿಕಾ ತನ್ನ ಶಕ್ತಿಯನ್ನೂ, ಸಾರ್ವಭೌಮತೆಯನ್ನೂ ಪ್ರದಶರ್ಿಸಿತು. ಕಾಲಕ್ರಮದಲ್ಲಿ ಅಮೇರಿಕಾದ ರಕ್ಷಣಾ ಕಾರ್ಯದಶರ್ಿ ಲಿಯೋನ್ ಪನೇಟ್ಟಾ ಈ ಸಂಗತಿಯನ್ನು ದೃಢಪಡಿಸಿದ್ದನ್ನು ಪಾಕೀಸ್ತಾನದ ಡಾನ್ ಪತ್ರಿಕೆ ವರದಿ ಮಾಡಿತ್ತು.
ಲಿಬಿಯಾದ ಅಧ್ಯಕ್ಷ ಗದ್ದಾಫಿಯ ಕ್ರೌರ್ಯದ ರಂಗುರಂಗಿನ ವರದಿಗಳು ಮಾಧ್ಯಮಗಳಲ್ಲಿ ರಾರಾಜಿಸಿದ್ದವಲ್ಲ ಅದರ ಹಿಂದೆಯೂ ಅಮೇರಿಕಾ ಬೆಂಬಲಿತ ಎನ್ಜಿಓಗಳೇ ಇದ್ದವೆಂದು ಇಂದು ಜಗಜ್ಜಾಹೀರಾಗಿರುವ ಸಂಗತಿಯೇ. ತನ್ನ ಹಿತಾಸಕ್ತಿಗೆ ಪೂರಕವಾಗಿ ನಿಲ್ಲದ ಗದ್ದಾಫಿಯನ್ನು ಕೆಳಗಿಳಿಸಲು ಸಿಐಎ ತನಗೆ ಬೇಕಾದ ಸಂಘ ಸಂಸ್ಥೆಗಳನ್ನು ಆರಿಸಿಕೊಂಡು ಗದ್ದಾಫಿಯ ವಿರುದ್ಧ ಕೂಗಾಡಲು ಬಿಟ್ಟುಬಿಟ್ಟಿತು. ಅದನ್ನು ಜಗತ್ತಿನಾದ್ಯಂತ ಸುದ್ದಿಯಾಗಿಸಲು ಕಾಯುತ್ತಿದ್ದ ಮಾಧ್ಯಮಗಳಿಗೆ ಆಹಾರ ಮಾಡಿಕೊಡಲಾಯಿತು. ಆಮೇಲಿನ ಕತೆ ನಿಮಗೆ ಗೊತ್ತೇ ಇದೆ.
ವೆನಿಜುವೆಲಾದ ಅಧ್ಯಕ್ಷ ಶಾವೇಜ್ ಹೀಗೆ ಅಮೇರಿಕಾದ ಭಯೋತ್ಪಾದನೆಯ ವಿರುದ್ಧದ ನೀತಿಯನ್ನು ಖಂಡಿಸುತ್ತಲೇ ಬಂದ. ಸದ್ದಾಂ, ಗದ್ದಾಫಿ, ಕ್ಯಾಸ್ಟ್ರೋರಂತಹ ಅಮೇರಿಕ ವಿರೋಧಿಗಳೊಂದಿಗೆ ಘನಿಷ್ಠ ಸಂಬಂಧ ಇಟ್ಟುಕೊಂಡಿದ್ದ. ಸಿಐಎ ಬಲೆ ಬೀಸಿತು. ಶಾವೇಜ್ನ ವಿರೋಧಿಗಳಿಗೆ ಎನ್ಜಿಓಗಳ ಮೂಲಕ ಹಣ ಸುರಿಯಿತು. ಮುಂದಿನ ದಿನಗಳಲ್ಲಿ ಆಗಬೇಕಿದ್ದುದರ ಟೈಮ್ ಟೇಬಲ್ ತಯಾರು ಮಾಡಿತು. ಏಪ್ರಿಲ್ ಮೊದಲ ವಾರದಲ್ಲಿ ವಿರೋಧ ಶುರು, ಎರಡನೇ ವಾರದಲ್ಲಿ ವಿರೋಧಿಗಳ ಮೆರವಣಿಗೆ ಹಿಂಸಾರೂಪಕ್ಕೆ ತಿರುಗಲಿದೆ ಮತ್ತು ಅಧ್ಯಕ್ಷ ಮತ್ತು ಅವನ ಸಹೋದ್ಯೋಗಿಗಳು ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಬರೆದಿಟ್ಟಿತು. ಮುಂದೇನು? ಸಿಐಎ ಊಹಿಸಿದಂತೆಯೇ ನಡೆಯಿತು. ಮಾಧ್ಯಮಗಳು ಭಡಕಾಯಿಸಿದ್ದರಿಂದ ಜನ ಬೀದಿಗೆ ಬಂದರು. ಒಂದಷ್ಟು ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿಯಾದರು. ಕೆಲವು ಗಂಟೆಗಳಲ್ಲಿ ಸೈನ್ಯದ ಪ್ರಮುಖರು ಬಂಡೆದ್ದು ಅಧ್ಯಕ್ಷರನ್ನು ಬಂಧಿಸಿಬಿಟ್ಟರು! ಕಥೆ, ಚಿತ್ರಕಥೆ, ನಿದರ್ೇಶನ ಎಲ್ಲವೂ ಸಿಐಎಯದ್ದೇ! ನಿಮರ್ಾಪಕರೂ ಅವರೇ. ಬಳಸಿಕೊಂಡದ್ದು ಮಾತ್ರ ಸ್ಥಳೀಯ ಎನ್ಜಿಓಗಳನ್ನು.

Pakistan-NGOs-and-forgotten
ಈಜಿಪ್ಟ್ನಲ್ಲಿ ಮುಬಾರಕ್ನ ಸಕರ್ಾರವನ್ನೂ ಕಿತ್ತೆಸೆಯುವಲ್ಲಿಯೂ ಇದೇ ಮಾದರಿಯನ್ನು ಅನುಸರಿಸಿತ್ತು ಸಿಐಎ. (ಟೆಲಿಗ್ರಾಫ್, 28 ಜನವರಿ 2011).
ಅಮೇರಿಕಾದ ಕಾರ್ಯಶೈಲಿ ಈಗ ನಿಚ್ಚಳವಾಗಿರಲಿಕ್ಕೆ ಸಾಕು ಅಲ್ಲವೇ? ತೆರಿಗೆಯಿಂದ ಸಂಗ್ರಹಗೊಂಡ ಹಣವನ್ನು ಗೂಢಚರ್ಯ ಸಂಸ್ಥೆ ಹತ್ತಾರು ದತ್ತಿ ಸಂಸ್ಥೆಗಳ ಮೂಲಕ ಬೇರೆ-ಬೇರೆ ರಾಷ್ಟ್ರಗಳ ಎನ್ಜಿಓಗಳಿಗೆ ವಗರ್ಾಯಿಸುತ್ತದೆ. ಅಲ್ಲಿ ಸೇವಾ ಚಟುವಟಿಕೆಗಳನ್ನು, ಮಾನವ ಹಕ್ಕುಗಳ ರಕ್ಷಣೆಯನ್ನು ಮಾಡುವ ನೆಪದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತದೆ. ಕೊನೆಗೆ ಅಲ್ಲೊಂದು ಪಯರ್ಾಯ ಸಕರ್ಾರದಂತೆ ಬೆಳೆದು ನಿಂತು ತನ್ನಿಚ್ಛೆಗೆ ತಕ್ಕಂತೆ ಚುನಾಯಿತ ಸಕರ್ಾರವನ್ನೂ ಬೆರಳ ತುದಿಯಲ್ಲಿ ಕುಣಿಸುತ್ತದೆ!
ನೆನಪು ಮಾಡಿಕೊಳ್ಳಿ. ಮನ್ ಮೋಹನ್ಸಿಂಗರ ಅಧಿಕಾರಾವಧಿಯಲ್ಲಿ ತಮಿಳುನಾಡಿನ ಕೂಡಂಕುಲಂನಲ್ಲಿ ರಷ್ಯಾ ಸಹಯೋಗದೊಂದಿಗೆ ಸಾವಿರ ಮೆಗಾವ್ಯಾಟ್ಗಳ ನ್ಯೂಕ್ಲಿಯರ್ ರಿಯಾಕ್ಟರ್ ಸ್ಥಾಪನೆಗೆ ಕೆಲವರು ಅಡ್ಡಗಾಲು ಹಾಕಿದ್ದರು. ಆರಂಭದಲ್ಲಿ ಪರಿಸರವಾದಿಗಳೇ ಕೂಗಾಡುತ್ತಿದ್ದಾರೆಂದು ದೇಶ ಭಾವಿಸಿತ್ತು. ಎಂದಿಗೂ ಮಾತನಾಡದ ಮನಮೋಹನ್ ಸಿಂಗರು ಗುಪ್ತಚರ ವರದಿಗಳ ಆಧಾರದ ಮೇಲೆ ‘ನಮ್ಮ ರಾಷ್ಟ್ರದ ಅಭಿವೃದ್ಧಿಯನ್ನು ಸಹಿಸದ ಕಾಣದ ಕೈಗಳು ಇದರ ಹಿಂದಿವೆ’ ಎಂದು ಆಕ್ರೋಶಗೊಂಡಿದ್ದರು. ಅಷ್ಟೇ ಅಲ್ಲ. ಆನಂತರದ ದಿನಗಳಲ್ಲಿ ಟ್ಯುಟಿಕೋರನ್ ಚಚರ್್ ಬಿಶಪ್ ಯೌನ್ ಆಂಬ್ರೋಸ್ರಿಗೆ ಈ ವೇಳೆಯಲ್ಲಿ 54 ಕೋಟಿಯಷ್ಟು ಬೃಹತ್ ಮೊತ್ತದ ವಿದೇಶೀ ಹಣ ಕೈ ಸೇರಿತ್ತೆಂದು ಬಹಿರಂಗಗೊಂಡಿತ್ತು. ಇದೇ ಬಿಶಪ್ ಜನರನ್ನು ಒಂದುಗೂಡಿಸಿ, ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆಸಿ ಜನರನ್ನು ಎತ್ತಿಕಟ್ಟಿದ್ದು ಜಗಜ್ಜಾಹೀರಾಗಿತ್ತು. ರಷ್ಯಾ ಭಾರತದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದನ್ನು ಸಹಿಸದ ಅಮೇರಿಕದ ಕೃತ್ಯವಿದಾಗಿತ್ತು. ಕೂಡಲೇ ಎಚ್ಚೆತ್ತ ಅಂದಿನ ಸಕರ್ಾರ ಆಂಬ್ರೋಸ್ ಮಾರ್ಗದರ್ಶನದಂತೆ ನಡೆಯುತ್ತಿದ್ದ ಎರಡು ಎನ್ಜಿಓಗಳನ್ನು ನಿಷೇಧಿಸಿ ವಿದೇಶೀ ಹಣ ಸ್ವೀಕರಿಸದಂತೆ ತಡೆಯೊಡ್ಡಿತು.
1976 ರಲ್ಲಿಯೇ ಭಾರತ ಸಕರ್ಾರ ವಿದೇಶದಿಂದ ಬರುವ ಹಣದ ಮೇಲೆ ಕಣ್ಗಾವಲಿಡಲು ಕಾನೂನನ್ನು ರೂಪಿಸಿತ್ತು. ಇದನ್ನೇ ಫಾರಿನ್ ಕಾಂಟ್ರಿಬ್ಯೂಷನ್ಸ್ ರೆಗ್ಯುಲೇಶನ್ ಆಕ್ಟ್ ಅನ್ನೋದು. ಗೃಹ ಸಚಿವಾಲಯ ಹೀಗೆ ಬರುವ ಹಣ, ಅದರ ಮೂಲ, ಸ್ವೀಕಾರ ಮಾಡುವ ಸಂಸ್ಥೆಗಳನ್ನು ಆಗಿಂದಾಗ್ಗೆ ಪರಿಶೀಲನೆಗೊಳಪಡಿಸುತ್ತಲೇ ಇರುತ್ತದೆ. ಹಳತಾಗಿ ಹೋಗಿದ್ದ ಈ ಕಾಯ್ದೆಗೆ 2001ರಲ್ಲಿ ಪರಿಷ್ಕರಣೆ ತರಲು ಎನ್ಡಿಎ ಸಕರ್ಾರ ಪ್ರಯತ್ನಿಸಿದೊಡನೆ ಕ್ರಿಶ್ಚಿಯನ್ ಮಿಶನೆರಿಗಳು ಪ್ರತಿಭಟಿಸಿದರು. ಭಾರತ ಸಕರ್ಾರದ ವಿರುದ್ಧವೇ ಅಂತರ ರಾಷ್ಟ್ರೀಯ ಕಮೀಷನ್ಗಳಲ್ಲಿ ದೂರು ಸಲ್ಲಿಸಿದವು. ವಾಜಪೇಯಿಯವರ ಅಧಿಕಾರಾವಧಿಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿದ್ದ ಸಂಸ್ಥೆಗಳನ್ನು ಗುರುತಿಸಿ ಎಂಟುನೂರಕ್ಕೂ ಹೆಚ್ಚು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇವುಗಳಲ್ಲಿ ಬಹುತೇಕ ಸಂಸ್ಥೆಗಳು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸೇರಿದ್ದವೇ ಆಗಿದ್ದರಿಂದ ಅವುಗಳನ್ನು ಮುಕ್ತವಾಗಿ ಘೋಷಿಸುವುದೂ ಕಷ್ಟವಾಗಿತ್ತು. ಮುಂದಿನ ಹತ್ತು ವರ್ಷಗಳ ಯುಪಿಎ ಸಕರ್ಾರದ ಅವಧಿಯಲ್ಲಿ ಈ ಸಂಸ್ಥೆಗಳು ಆಳವಾಗಿ ಬೇರು ಬಿಟ್ಟವಷ್ಟೇ ಅಲ್ಲ ಸಾವಿರಾರು ಹೊಸ ಸಂಸ್ಥೆಗಳನ್ನೂ ಹುಟ್ಟು ಹಾಕಿ ನಿಯಂತ್ರಣವನ್ನು ಅಸಾಧ್ಯವೆನ್ನಿಸುವಂತೆ ಮಾಡಿಬಿಟ್ಟವು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರೊ. ವೈದ್ಯನಾಥನ್ ಈ ಎನ್.ಜಿ.ಓಗಳ ಆಳಕ್ಕಿಳಿಯಲು ಯತ್ನಿಸಿ ಬರೆದ ಲೇಖನ (ವೇರ್ ಆರ್ ಎನ್ಜಿಓ ಫಾರೀನ್ ಫಂಡ್ಸ್ ರಿಯಲಿ ಗೋಯಿಂಗ್ ಇನ್ ಇಂಡಿಯಾ)ಕಣ್ತೆರೆಸುವಂಥದ್ದು. 2001 ರಿಂದ 2010ರ ಅವಧಿಯಲ್ಲಿ ಭಾರತೀಯ ಎನ್ಜಿಓಗಳು ಪಡೆದ ವಿದೇಶೀ ಹಣ 70 ಸಾವಿರ ಕೋಟಿ. ಗೃಹಸಚಿವಾಲಯವೇ ಹೇಳುವಂತೆ ಈ ದೇಣಿಗೆ ಮಂಜುಗಡ್ಡೆಯ ತುದಿ ಮಾತ್ರ! 2008ರವರೆಗೆ ಸುಮಾರು ಅರ್ಧದಷ್ಟು ಎನ್ಜಿಓಗಳು ಲೆಕ್ಕ ಪತ್ರವನ್ನು ಸಕರ್ಾರಕ್ಕೆ ಒಪ್ಪಿಸಿರಲಿಲ್ಲವಾದ್ದರಿಂದ ಕನಿಷ್ಠ ಪಕ್ಷ ಈ ಮೊತ್ತದ ನಾಲ್ಕಾರು ಪಟ್ಟು ಹಣವಾದರೂ ಭಾರತದೆಡೆಗೆ ಹರಿದು ಬಂದಿರಬೇಕು.
ಸೇವಾ ಚಟುವಟಿಕೆಗಳು ನಡೆದರೆ ಒಳ್ಳೆಯವೇ. ಅದರಲ್ಲೇಕೆ ಹುಳುಕು ಹುಡುಕಬೇಕು? ಪ್ರಶ್ನೆ ಸಹಜವೇ. ಆದರೆ ಸೇವೆಯ ಹೆಸರಲ್ಲಿ ಪಡಕೊಂಡ ಹಣವನ್ನು ಈ ಸಂಸ್ಥೆಗಳು ಬಳಸುವುದು ಹೇಗೆ ಗೊತ್ತಾ? ಸುಮಾರು ಮುಕ್ಕಾಲು ಪಾಲು ಹಣ ಜಮೀನುಕೊಳ್ಳುವ, ಕಟ್ಟಡಗಳನ್ನು ನಿಮರ್ಿಸುವ, ಮೊಬೈಲು – ಲ್ಯಾಪುಟಾಪುಗಳ ಖರೀದಿ, ಸಂಬಳ, ವಿದೇಶೀ ಯಾತ್ರೆಗಳಿಗೆಂದೇ ಮೀಸಲು. ಉಳಿದ ಅಲ್ಪ ಮೊತ್ತವನ್ನು ಅವರು ಸೇವಾ ಚಟುವಟಿಕೆಗಳಿಗೆ ಬಳಸಿದ ನಾಟಕವಾಡುತ್ತಾರೆ ಅಷ್ಟೇ. ಸ್ಪಷ್ಟವಾಗಿ ಹೇಳಬೇಕೆಂದರೆ ಒಂದೂರಿನಲ್ಲಿ ಒಬ್ಬೇ ಒಬ್ಬ ಕ್ರಿಸ್ತನ ಅನುಯಾಯಿ ಇಲ್ಲದಿದ್ದರೂ ಅಲ್ಲಿ ಈ ಸ್ವಯಂ ಸೇವಾ ಸಂಸ್ಥೆ ಜಮೀನು ಖರೀದಿಸುತ್ತದೆ. ಬೃಹತ್ತಾದ ಚಚರ್ುಗಳನ್ನು ಕಟ್ಟುತ್ತದೆ. ತನ್ಮೂಲಕ ಪ್ರತ್ಯೇಕತಾವಾದದ ಅಥವಾ ಉಗ್ರ ಇವ್ಯಾಂಜಲಿಕಲ್ ಚಟುವಟಿಕೆ ನಡೆಸುತ್ತದೆ. ಇದನ್ನು ಕಂಡುಹಿಡಿಯಲು ಭಾರೀ ದೊಡ್ಡ ಬುದ್ಧಿವಂತಿಕೆ ಬೇಕಿಲ್ಲ. ಯಾವ ರಾಜ್ಯಕ್ಕೆ ವಿದೇಶೀ ಹಣ ಹೆಚ್ಚು ಹರಿಯುವುದೋ ಅಲ್ಲಿ ಕಾಲ ಕ್ರಮದಲ್ಲಿ ದೇಶದಿಂದ ಬೇರಾಗುವ ಚಿಂತನೆಗಳೂ ಬಲವಾಗುತ್ತಿರುವುದು ದೃಗ್ಗೋಚರವೇ ಆಗಿರುತ್ತದೆ. ತಮಿಳುನಾಡು, ಒರಿಸ್ಸಾ, ಆಂಧ್ರಗಳೆಲ್ಲಾ ಇದೇ ಸಾಲಿನಲ್ಲಿರುವಂಥವು!
ಅಮೆರಿಕಾ ಸಕರ್ಾರ ಚಾಲಿತ ಸಿ ಐ ಎ ಮತ್ತು ಚಚರ್ು ಇವೆರಡೂ ಸೇರಿ ಭಾರತವನ್ನು ಬಲವಾಗಿ ಹಿಡಿದುಕೊಂಡುಬಿಟ್ಟಿವೆ. ಲಕ್ಷಾಂತರ ಕೋಟಿ ರೂಪಾಯಿ ಸರಾಗವಾಗಿ ಹರಿದುಬರುತ್ತದೆ. ಕ್ರಿಶ್ಚಿಯನ್ ಸಂಸ್ಥೆಗಳ ಮತ್ತು ಅಮೆರಿಕಾ ಪರವಾದ ಎನ್ಜಿಓ ಗಳ ಮೂಲಕ ಹಳ್ಳಿ ಹಳ್ಳಿಯನ್ನು ಮುಟ್ಟುತ್ತದೆ. ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಸಕರ್ಾರಕ್ಕೆ ಸವಾಲೆಸೆದು ರಾಷ್ಟ್ರವನ್ನು ಆಪೋಶನ ತೆಗೆದುಕೊಂಡುಬಿಡುತ್ತದೆ. ಹೀಗಾಗಿಯೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ 4470 ಎನ್ಜಿಓಗಳ ಪರವಾನಗಿ ರದ್ದು ಮಾಡಿದರು. ಎಂಟೂಮುಕ್ಕಾಲು ಸಾವಿರದಷ್ಟು ಎನ್ಜಿಓಗಳಿಗೆ ನೋಟೀಸು ಕಳಿಸಿದರು. ಪರಿಸರದ ನೆಪ ಮಾಡಿ ಭಾರತದ ಪ್ರಗತಿಗೆ ಅಡ್ಡಗಾಲು ಹಾಕುವ ಗ್ರೀನ್ ಪೀಸ್ ಸಂಸ್ಥೆಯ ವಿರುದ್ಧದ ಬೇಹುಗಾರಿಕೆ ವರದಿಯ ಆಧಾರದ ಮೇಲೆ ಅದನ್ನು ನಿಷೇಧಿಸಿದ್ದಲ್ಲದೇ ಅವರ ಬ್ಯಾಂಕ್ ಅಕೌಂಟುಗಳನ್ನು ವಶಪಡಿಸಿಕೊಳ್ಳಲಾಯಿತು.

ಸಕರ್ಾರದ ಪ್ರಹಾರಕ್ಕೆ ಒಳಗಾದ ಮತ್ತೊಂದು ಮಹತ್ವದ ಸಂಸ್ಥೆ ‘ಫೋಡರ್್ ಫೌಂಡೇಶನ್’ 1936ರಲ್ಲಿ ಅಮೇರಿಕದಲ್ಲಿ ಶುರುವಾದ ಈ ದತ್ತಿ ಸಂಸ್ಥೆ 1950 ರ ವೇಳೆಗೆ ಬೃಹದಾಕಾರಕ್ಕೆ ಬೆಳೆದು ನಿಂತಿತು. ಆ ವೇಳೆಗಾಗಲೇ ಈ ಸಂಸ್ಥೆ ಅಮೆರಿಕಾ ಸಕರ್ಾರದ ಸಾಂಸ್ಕೃತಿಕ ಅಂಗವೆಂದೇ ಹೆಸರಾಗಿಬಿಟ್ಟಿತ್ತು. ಈ ಸಂಸ್ಥೆಯ ಅಧ್ಯಕ್ಷರು ಮತ್ತು ಸಿಐಎ ಮುಖ್ಯಸ್ಥರು ಆಗಾಗ ಭೇಟಿಯಾಗಿ ಚಚರ್ಿಸಿ ಜಂಟಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದು ಹೊಸತೇನೂ ಆಗಿರಲಿಲ್ಲ. ದೀರ್ಘಕಾಲವಾದರೂ ಸರಿ ಜನರ ಮಾನಸಿಕತೆಯನ್ನು ಕಲೆಯ ಮೂಲಕ ಬದಲಾಯಿಸುವಲ್ಲಿ ಈ ಸಂಸ್ಥೆ ಸಾಕಷ್ಟು ಹಣ ವ್ಯಯಿಸಿದೆ. ವಿಶೇಷವಾಗಿ ಚಿತ್ರಕಲೆಯಲ್ಲಿ, ನಾಟಕದಲ್ಲಿ ಆಧುನಿಕತೆಯನ್ನು ಪ್ರೋತ್ಸಾಹಿಸಿ ಅದನ್ನು ಹೊಗಳುವ ಬಾಡಿಗೆ ಪತ್ರಕಾರರನ್ನು ತಯಾರು ಮಾಡಿ ಅಂತಹ ಕಲಾವಿದರಿಗೆ ಗೌರವ ಕೊಡಿಸುವಲ್ಲಿ ಅದರ ಪ್ರಯತ್ನ ಹೇಳ ತೀರದ್ದು. ಈ ಪರಿಯ ಅಭಿವ್ಯಕ್ತಿ ಮಾಧ್ಯಮಗಳನ್ನು ತಮ್ಮ ಚಿಂತನೆಗೆ ತಕ್ಕಂತೆ ರೂಪಿಸಿ ಅದಕ್ಕೊಂದು ವೇದಿಕೆ ದೊರಕಿಸಿಕೊಟ್ಟರೆ ಆಮೇಲಿನ ದಿನಗಳಲ್ಲಿ ಈ ಬೌದ್ಧಿಕ ವರ್ಗದ ಮೂಲಕ ರಾಷ್ಟ್ರವನ್ನಾಳಬಹುದೆಂಬುದು ಅವರ ಆಲೋಚನೆ. ಈಚಿಚಿಗಂತೂ ಫೋಡರ್್ ಮಾನವ ಹಕ್ಕುಗಳ ಕುರಿತಂತೆ ಹೋರಾಡುವ ಸಂಘಟನೆಗಳಿಗೆ ಹಣಕೊಟ್ಟು ಇವ್ಯಾಂಜಲಿಕಲ್ ಶಕ್ತಿಗಳ ವಿರುದ್ಧ ಕೆಲಸ ಮಾಡುವವರನ್ನು ಕಾನೂನಿನ ಮೂಲಕ ಕಟ್ಟಿಹಾಕುವಲ್ಲಿ ದುಡಿಯುತ್ತಿದೆ. ಇದನ್ನು ಗ್ರಹಿಸಿದ ಈಗಿನ ಸಕರ್ಾರ ಫೋಡರ್್ನಿಂದ ಉಪಕೃತ ಸಂಸ್ಥೆಗಳನ್ನು ನಿಷೇಧದ ಪಟ್ಟಿಗೆ ಸೇರಿಸಿತು. ಇವುಗಳಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ಕಬೀರ ಮತ್ತು ತೀಸ್ತಾ ಸೇತಲ್ವಾಡ್ಳ ಸಬರಂಗ್ ಪ್ರಮುಖವಾದವು.

48071500
ಈಗ ನಿಚ್ಚಳವಾಯಿತೇ? ತೀಸ್ತಾ ಸೇತಲ್ವಾಡ್ ಗೋಧ್ರಾ ನೆಪದಲ್ಲಿ ಗುಜರಾತ್ ಸಕರ್ಾರವನ್ನು ಉರುಳಿಸುವ ಪ್ರಯತ್ನ ಮಾಡಿದ್ದವಳು; ಇಶ್ರತ್ ಜಹಾನ್ಳದು ದ್ವೇಷಪೂರಿತ ಎನ್ಕೌಂಟರ್ ಎಂದು ಸಾಬೀತುಪಡಿಸಲು ಹೆಣಗಾಡಿದವಳು. ಇವಳಿಗೆ ಅನೇಕ ಪತ್ರಕರ್ತರು, ಲೇಖಕರು ಬೆಂಬಲವಾಗಿ ನಿಂತರು. ಜೆಎನ್ಯುಥರದ ವಿಶ್ವವಿದ್ಯಾಲಯಗಳು ಕರೆದು ಉಪನ್ಯಾಸ ಮಾಡಿಸಿದವು!!
ನಿಜ. ಚುಕ್ಕಿಗಳು ಹರಡಿಕೊಂಡು ಬಿದ್ದಿವೆ. ಜೋಡಿಸಬೇಕಷ್ಟೇ!
ಬಾಬಾ ರಾಮ್ದೇವ್ ಕಪ್ಪುಹಣದ ಕುರಿತಂತೆ ಜನಜಾಗೃತಿ ಮೂಡಿಸಿದರು. ಇದರ ಪ್ರಭಾವ ಗ್ರಹಿಸಿದ ಕೆಲವರು ಅಣ್ಣಾ ಹಜಾರೆಯನ್ನು ಮುಂದೆ ತಂದು ನಿಲ್ಲಿಸಿ ಭ್ರಷ್ಟಾಚಾರದ ವಿರುದ್ಧದ ಕಾಳಗವನ್ನು ಜನ ಲೋಕಪಾಲ್ಗೆ ಸೀಮಿತಗೊಳ್ಳುವಂತೆ ಮಾಡಿದರು. ಬಾಬಾ ಬಿಡಲಿಲ್ಲ. ರಾಮ್ಲೀಲಾ ಮೈದಾನದಲ್ಲಿ ಸತ್ಯಾಗ್ರಹಕ್ಕೆ ಕುಳಿತರು. ಅವರ ಮೇಲೆ ಪೊಲೀಸರಿಂದ ವ್ಯವಸ್ಥಿತ ಹಲ್ಲೆಯಾಯ್ತು. ಕನ್ಹಯ್ಯನ ಮೇಲೆ ಲಾಯರ್ಗಳ ಅಪ್ರಚೋದಿತ ದಾಳಿಯ ಬಗ್ಗೆ ಗಂಟೆಗಟ್ಟಲೆ ಚಚರ್ೆ ಮಾಡಿದ ಪತ್ರಕರ್ತರು ಅಂದು ಏಟುತಿಂದ ಬಾಬಾರನ್ನೇ ಕಳ್ಳರೆಂಬಂತೆ ಬಿಂಬಿಸಿ ಅನ್ಯ ಮಾರ್ಗವಿಲ್ಲದೇ ಅಣ್ಣಾಜಿಯನ್ನು ಮುಂಚೂಣಿಗೆ ತಂದರು. ಕೊನೆಗೆ ಇಡಿಯ ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ಪಕ್ಷಕಟ್ಟುವಿಕೆಯಲ್ಲಿ ಸಮಾಪ್ತಿಗೊಳಿಸಿದರು. ಅಂದಹಾಗೆ ಹೀಗೆ ಪಕ್ಷಕಟ್ಟಿದವರೆಲ್ಲರೂ ಹೆಚ್ಚುಕಡಿಮೆ ಒಂದೊಂದು ಎನ್ಜಿಓಗಳ ಮುಖ್ಯಸ್ಥರಾಗಿದ್ದರು. ಕೆಲವರು ನೇರ ಫೋಡರ್್ ಫೌಂಡೇಶನ್ನಿನಿಂದ ಹಣ ಸ್ವೀಕರಿಸಿದ್ದರು!!
ನಾನು ಚುಕ್ಕೆಗಳನ್ನು ಸೇರಿಸಿದ್ದೇನೆ ಅಷ್ಟೇ. ಚಿತ್ತಾರ ಎಂಥದ್ದೆಂದು ನೀವು ನಿರ್ಣಯಿಸಬೇಕು.

3 thoughts on “ಹರಡಿಕೊಂಡಿರುವ ಚುಕ್ಕಿ ಸೇರಿಸಿ, ಚಿತ್ತಾರ ಕಾಣುತ್ತೆ!!

 1. ಎಂತಹ ಸಮಾಜದಲ್ಲಿ ನಾವಿದ್ದೇವೆ ಎಂದು ಕ್ಷಣ ಬೆಚ್ಚಿಬೀಳುವಂತಾಗುತ್ತದೆ…ನಮ್ಮ ಸುತ್ತಣ ನಡೆಯುತ್ತಿರುವ ವಿದ್ಯಮಾನಗಳು ನಮ್ಮ ಅರಿವಿಗೂ ಬರದೆ ಎಷ್ಟು ಭಯಂಕರ ಬದಲಾವಣೆಗೆ ಸದ್ದಿಲ್ಲದೇ ಕಾರ್ಯ ಪ್ರವೃತ್ತವಾಗಿದೆ…
  ಸದಾ ಹಸನ್ಮುಖಿಗಳಾಗಿ ಜನರ ಕಷ್ಟ-ಸುಖಗಳಿಗೆ ಸೇವಾ ಮನೋಭಾವದಿಂದ ಸ್ಪಂದಿಸುವ ಕ್ರಿಶ್ಚಿಯನ್ ಮಿಷನರಿ ಹಾಗು ಏನ್.ಜಿ.ಓ.ಗಳ ಹಿಂದಿನ ಉದ್ದೇಶ ಅರಿವಾದಾಗ ಗೋಮುಖ ವ್ಯಾಘ್ರರಂತೆ ಕಾಣುತ್ತಾರೆ… ಇಷ್ಟೆಲ್ಲಾ ಮಾಡಿ ಏನಾದ್ರು ಸಾಧನೆ ಮಾಡುತ್ತಾರೋ….
  ಸ್ವಧರ್ಮ ಪಾಲನೆಯನ್ನು ಎತ್ತಿ ಹಿಡಿವ – ಅನ್ಯ ಧರ್ಮವನ್ನು ಗೌರವದಿಂದ ಕಾಣುವ ನಮ್ಮ ಧರ್ಮ ಎಷ್ಟು ಚೆನ್ನ ಎನಿಸುತ್ತೆ…

  ಹರಡಿಕೊಂಡಿರುವ ಚುಕ್ಕಿ ಸೇರಿಸಿ..ಚುಕ್ಕಿಗಳು ಯಾವ ಎಗ್ಗಿಲ್ಲದೆ ತಮ್ಮ ಆಟದಲ್ಲಿ ನಿರತವಾಗಿವೆ… ರಬ್ಬರ್ ಬೇಕೇ ಬೇಕು ಚುಕ್ಕಿಗಳನ್ನು ಇಲ್ಲವಾಗಿಸಲು…

  ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಎನ್ನುವುದೇ ಇಲ್ಲವೇ…
  ಅರಿವೊಂದೆ ಎಲ್ಲ ಸಮಸ್ಯೆಗಳಿಗೂ ಪರಿಹಾರ… ಅದು ಕಾರ್ಯಪ್ರವ್ರುತ್ತವಾದಾಗ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s