ದೇಶದ್ರೋಹದ ತಳಿಗಳಿಗೆ ಜೆ.ಎನ್.ಯು ಸೂಕ್ತ ಪರಿಸರ

ನಿಮಗೆ ಅನುಮಾನವಿದ್ದರೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಧರಣಿ ನಿರತರ ಮುಖಗಳನ್ನು ಒಮ್ಮೆ ನೋಡಿ. ರಾಷ್ಟ್ರವಿರೋಧಿಯಾದ ಯಾವ ಕೈಂಕರ್ಯವಿದ್ದರೂ ಅವರವರುಗಳೇ ರಾಜರು. ಹೇಗಿದು? ಇವರಿಗೆಲ್ಲ ಹಣ ಕೊಟ್ಟು ಪ್ರತಿಭಟನೆಗೆ ಕಳಿಸುತ್ತಿರೋದು ಯಾರು? ಕೂಡಂಕುಲಂನಲ್ಲಿ ಅಮೇರಿಕಾ ಚಚರ್್ನ ಮೂಲಕ ಹಣವನ್ನು ಈ ಎನ್.ಜಿ.ಓಗಳಿಗೆ ತಲುಪಿಸುತ್ತಿತ್ತೆಂಬುದು ಈಗ ದೃಢಪಟ್ಟ ಸಂಗತಿ ಹಾಗಿದ್ದರೆ. ಏಷ್ಯಾ ಖಂಡದಲ್ಲಿ ಸಿಂಹದಂತೆ ಮುನ್ನುಗ್ಗುತ್ತಿರುವ ಭಾರತದ ನಡಿಗೆಯನ್ನು ತಡೆಯುವ ದದರ್ು ಯಾರಿಗಿದೆ? ಇವರೆಲ್ಲ ಯಾವ ದೇಶದ ಏಜೆಂಟರು ಹಾಗಿದ್ದರೆ? ಯೋಚಿಸಿದರೆ ಉತ್ತರ ಹುಡುಕೋದು ಕಷ್ಟವಲ್ಲ!

4287.true-life-jnu

ಬಿಳಿಯರು ಭಾರತಕ್ಕೆ ಬಂದೊಡನೆ ಒಂದು ವಿಷಯವನ್ನು ಖಾತ್ರಿ ಮಾಡಿಕೊಂಡರು-‘ಈ ದೇಶವನ್ನು ಇಲ್ಲಿನವರ ಸಹಕಾರವಿಲ್ಲದೇ ಆಳಲು ಸಾಧ್ಯವೇ ಇಲ್ಲ’. ಅದಾದ ಮೇಲೆಯೇ ಅವರು ತಮಗೆ ಬೇಕಾದವರಿಗೆ ಬಿಸ್ಕೆಟ್ಟು ಹಾಕಿ ತಮಗೆ ಬೇಕಾದ ಕೆಲಸಗಳನ್ನೇ ಮಾಡಿಸಿಕೊಂಡರು. ಜಯಚಂದರಿಗೆ, ಮೀರ್ ಜಾಫರರಿಗೆ ಇಲ್ಲಿ ಕೊರತೆಯಂತೂ ಇರಲಿಲ್ಲ. ಬಿಳಿಯರು ಅವರ ಸಂತಾನಗಳನ್ನು ಬೆಳೆ ತೆಗೆಯಲು ಬೇಕಾದ ಪರಿಸರವನ್ನೂ ರೂಪಿಸಿದರು.
ಮೊದಲಿಗೆ ಅವರು ಆಯ್ದುಕೊಂಡಿದ್ದು ಇಲ್ಲಿನ ಇತಿಹಾಸವನ್ನು ತಿರುಚುವ ಪ್ರಕ್ರಿಯೆ. ಅದಕ್ಕೆ ಜರ್ಮನಿಯ ಮ್ಯಾಕ್ಸ್ ಮುಲ್ಲರ್ನನ್ನು ಹಿಡಿದು ತರಲಾಯ್ತು. ಋಗ್ವೇದಕ್ಕೆ ಅನುವಾದವನ್ನು ಮಿಷನರಿಗಳಿಗೆ ಹೊಂದುವಂತೆ ಮಾಡಿಸಲಾಯ್ತು. ಭಾರತದಲ್ಲಿ ಅದಕ್ಕೆ ನಯಾಪೈಸೆಯ ಕಿಮ್ಮತ್ತಿರಲಿಲ್ಲ. ಇಲ್ಲಿನ ಗುರುಕುಲಗಳು ಸಮರ್ಥ ಶಿಕ್ಷಣ ಕೊಟ್ಟು ಬೌದ್ಧಿಕ ಸಾಮಥ್ರ್ಯದ ಸಮರ್ಥ ಬಳಕೆಗೆ ಬೇಕಾದ ವಾತಾವರಣ ರೂಪಿಸಿಕೊಟ್ಟಿತ್ತು. ಇದನ್ನು ಗಮನಿಸಿದ ಬ್ರಿಟೀಷರು ಗುರುಕುಲಗಳನ್ನು ಬಲವಂತದಿಂದ ಮುಚ್ಚಿಸಿದರು. 18ನೇ ಶತಮಾನದ ಭಾರತೀಯ ಶಿಕ್ಷಣ ವ್ಯವಸ್ಥೆ ಅದೆಷ್ಟು ಸಾರ್ವತ್ರಿಕವೂ, ತಲಸ್ಪಶರ್ಿಯೂ ಆಗಿತ್ತೆಂದರೆ ಅದನ್ನು ಅನುಕರಿಸಿ ತಮ್ಮ ಶಿಕ್ಷಣಪದ್ಧತಿಯನ್ನು ಬಿಳಿಯರು ಬದಲಾಯಿಸಿಕೊಂಡರೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಅವರು ಉಲ್ಟಾ ನಮ್ಮ ವ್ಯವಸ್ಥೆಯನ್ನು ತಿದ್ದುವ ಪ್ರಯತ್ನವೆಂದು ಇಂಗ್ಲೀಷ್ ಶಿಕ್ಷಣ ತಂದರು. ಶಾಲೆಗಳನ್ನು ತೆರೆದರು.
ನಂತರದ ಪ್ರಕ್ರಿಯೆಯೇ ಮ್ಯಾಕ್ಸ್ ಮುಲ್ಲರನ ಸಮರ್ಥನೆಗೆ ನಿಲ್ಲಬಲ್ಲ ಬೌದ್ಧಿಕ ಶಕ್ತಿಯ ನಿಮರ್ಾಣ. ಅದಕ್ಕೆಂದೇ ವಿಶ್ವವಿದ್ಯಾಲಯಗಳ ನಿಮರ್ಾಣ ಮಾಡಿದರು. ಅಲ್ಲಿ ಬಿಳಿಯರ ಸಿದ್ಧಾಂತದ ಸಮರ್ಥಕರಿಗೆ ಮಾತ್ರ ಅವಕಾಶ ಕೊಡಲಾಯ್ತು. ಭಾರತದ ತಿರುಚಿದ ಇತಿಹಾಸ, ಪರಂಪರೆಗಳು ಅಲ್ಲಿ ಬೋಧನೆಯ ವಸ್ತುವಾಯಿತು. ಕಾಲಕ್ರಮದಲ್ಲಿ ಸ್ವಾತಂತ್ರ್ಯದ ಕಾಡ್ಗಿಚ್ಚು ಹೇಗೆ ವ್ಯಾಪಕವಾಗಿ ಹಬ್ಬಿತ್ತೆಂದರೆ ದೇಶೀ ಶಿಕ್ಷಣದ ಅವಶ್ಯಕತೆಯನ್ನು ಸಮಾಜ ಮನಗಂಡು ಹಿಂದೂ ವಿಶ್ವವಿದ್ಯಾಲಯಗಳು, ನ್ಯಾಶನಲ್ ಕಾಲೇಜುಗಳು ತಲೆಯೆತ್ತಿದ್ದವು. ಆಂಗ್ಲ ಭಾಷೆಯನ್ನು ಕಲಿತವರೇ ಬಿಳಿಯರ ಮನಸ್ಥಿತಿಯನ್ನು ತೆರೆದಿಟ್ಟು ತರುಣರನ್ನು ರೂಪಿಸುವ ಜವಾಬ್ದಾರಿ ಹೊತ್ತು ಹೊಸ ಪೀಳಿಗೆ ಸೃಷ್ಟಿಸಿದರು.
ಆದರೇನು? ಬಿಳಿಯರ ಎಂಜಲು ಕಾಸಿಗೆ ಬಲಿಬಿದ್ದ ಕೆಲವರು ಸಕರ್ಾರಿ ಶಿಕ್ಷಣ ಸಂಸ್ಥೆಗಳಲ್ಲಿ ದೇಶವಿರೋಧಿ ತಾಲೀಮನ್ನು ನೀಡುವುದು ಬಿಡಲೇ ಇಲ್ಲ. ಬಿಳಿಯರೇನು ಸ್ವಂತ ಹಣದಿಂದ ಈ ದ್ರೋಹಿಗಳನ್ನು ಸಾಕಲಿಲ್ಲ. ನಮ್ಮವರೇ ಬೆವರು ಸುರಿಸಿ ಕಟ್ಟಿದ ತೆರಿಗೆ ಹಣವನ್ನು ಇವರಿಗಾಗಿ ಖಚರ್ು ಮಾಡಿದರು. ದೇಶಕ್ಕಾಗಿ ದುಡಿದವರು ತೆರಿಗೆ ಕಟ್ಟಿ ಬಡಕಲಾದರು; ದೇಶವಿರೋಧಿಗಳಾಗಿ ನಿಂತವರು ಕೊಬ್ಬಿ ಬೆಳೆದರು.
ಬ್ರಿಟೀಷರು ಭಾರತ ಬಿಟ್ಟು ಹೋಗಿ ಸುಮಾರು 7 ದಶಕಗಳು ಕಳೆದೇ ಹೋದವು. ಇನ್ನೂ ಈ ಪರಿಸ್ಥಿತಿ ದೂರವಾಗಿಲ್ಲ. ವಿಶ್ವವಿದ್ಯಾಲಯಗಳನ್ನು ಮುಂದಿಟ್ಟುಕೊಂಡು ದೇಶದ್ರೋಹಿ ಚಟುವಟಿಕೆಗಳನ್ನು ಮಾಡಬೇಕೆಂಬ ಪ್ರಯತ್ನ ಅಂದು ಹೇಗೆ ನಡೆದಿತ್ತೋ ಇಂದೂ ಅದು ಮುಂದುವರೆದಿದೆ. ನಮ್ಮ ಬೆವರಿನ ಹಣದಲ್ಲಿ ಈ ದೇಶದ್ರೋಹಿ ಮೀರ್ ಜಾಫರ್ ಸಂತಾನಗಳನ್ನು ಸಲಹುವ ದೌಭರ್ಾಗ್ಯ ಮುಂದುವರಿದೇ ಇದೆ.
ಹೌದು. ನಾನು ಜವಹರಲಾಲ್ ನೆಹರೂ ಯುನಿವಸರ್ಿಟಿಯ ಬಗ್ಗೆಯೇ ಮಾತನಾಡುತ್ತಿರೋದು. ಕಳೆದ ಒಂದು ವಾರದ ಹಿಂದೆ ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಖಾನನನ್ನು ಸಮಥರ್ಿಸಿಕೊಂಡು ಅವನನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ ಡೆಮೊಕ್ರಾಟಿಕ್ ಸ್ಟುಡೆಂಟ್ಸ್ ಯೂನಿಯನ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಬಣ್ಣವನ್ನೂ ಕೊಡಲಾಗಿತ್ತು. ಅದೂ ಸರಿಯೇ. ಎಡಪಂಥೀಯರು ಕವಿಗೋಷ್ಠಿ, ಕ್ರಾಂತಿಗೀತೆ, ನಾಟಕಗಳ ನೌಟಂಕಿ ಮಾಡುವುದರಲ್ಲಿ ನಿಸ್ಸೀಮರಲ್ಲವೇ? ಕಾರ್ಯಕ್ರಮಕ್ಕೆ ಂ ಅಠಣಟಿಣಡಿಥಿ ತಿಣಠಣಣ ಚಿ ಕಠಣ ಠಜಿಜಿಛಿಜ ಎಂಬ ಹೆಸರು ಕೊಡಲಾಯಿತು. ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ಟರ್ರ ಹತ್ಯೆಯನ್ನು ವಿರೋಧಿಸಿ ನಡೆಯುವ ಕಾರ್ಯಕ್ರಮ ಎಂಬ ಪ್ರಚಾರವನ್ನೂ ಕೊಡಲಾಯಿತು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲಿಲ್ಲ. ಅದಕ್ಕೆ ಕಾರಣವೂ ಇತ್ತು. ಈ ವಿದ್ಯಾಥರ್ಿ ಸಮೂಹ ಈ ಹಿಂದೆ ಹಾಸ್ಟೇಲ್ಲಿನಲ್ಲಿ ದನದ ಮಾಂಸ ಪೂರೈಸುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿತ್ತು. ದೇಶವೆಲ್ಲಾ ದುಗರ್ಾ ಪೂಜೆ ನಡೆಸಿ ಆನಂದದಲ್ಲಿ ಮಗ್ನವಾಗಿದ್ದರೆ ಮಹಿಷಾಸುರನನ್ನು ಪೂಜೆ ಮಾಡಿ ಆನಂದ ಭಂಗಕ್ಕೆತ್ನಿಸಿದ ರಾಕ್ಷಸರ ಪೀಳಿಗೆಯವರು ಇವರು. ಇಂಥವರಿಗೆ ಅನುಮತಿ ಕೊಡೋದಾದರು ಹೇಗೆ?
ಹಾಗಂತ ವಿಶ್ವವಿದ್ಯಾಲಯದ ಅನುಮತಿಗೆ ಕಾಯುವ ಜಾಯಮಾನವೂ ಇವರದ್ದಲ್ಲ. ಬಿಟ್ಟಿ ಅನ್ನ ತಿಂದು ಕೊಬ್ಬಿದ ಜೀವಗಳು. ಖಂಡಿತ ಹೌದು. ಇಲ್ಲ ಓದುವ ವಿದ್ಯಾಥರ್ಿಗೆ ಟ್ಯೂಶನ್ ಫೀಸ್ 217 ರೂಪಾಯಿ, ಮೆಡಿಕಲ್ ಫೀಸ್ 9 ರೂಪಾಯಿ, ಸ್ಪೋಟ್ಸರ್್ ಫೀಸ್ 16 ರೂಪಾಯಿಯಾದರೆ, ಲೈಬ್ರರಿ ಫೀಸು 16 ರೂಪಾಯಿ! ವರ್ಷಕ್ಕೆ ಎಲ್ಲಾ ಕೂಡಿದರೂ 400 ರೂಪಾಯಿ ದಾಟಲಾರದು ಅವರ ಖಚರ್ು. ತಿಂಗಳ ವಿದ್ಯಾಥರ್ಿನಿಲಯದ ಫೀಸು ಅದೆಷ್ಟು ಗೊತ್ತಾ? ಬರಿಯ 20 ರೂಪಾಯಿ ಮಾತ್ರ. ಒಬ್ಬ ವಿದ್ಯಾಥರ್ಿಗೆಂದು ಸಕರ್ಾರ ಖಚರ್ು ಮಾಡುವ ಹಣ ಒಟ್ಟಾರೆ 3 ಲಕ್ಷ ರೂಪಾಯಿ! ಪ್ರತೀ ವರ್ಷ ಕನಿಷ್ಠ 250 ಕೋಟಿ ರೂಪಾಯಿ ಇಲ್ಲಿನ ಕಾರಣದಿಂದ ನಮ್ಮ ಬೊಕ್ಕಸಕ್ಕೆ ಹೊರೆ. ಇದನ್ನೇ ದಲಿತರ ಕೇರಿಗಳಿಗೆ ವಗರ್ಾಯಿಸಿದ್ದರೆ ಕಳೆದ 70 ವರ್ಷಗಳಲ್ಲಿ ಅದೆಷ್ಟು ಜನರನ್ನು ಮುಖ್ಯವಾಹಿನಿಗೆ ತರಬಹುದಿತ್ತೋ ದೇವರೇ ಬಲ್ಲ.

312E6B8E00000578-3445983-image-a-1_1455407359500
Students of the jawaharlal Nehru university Protesting demand release of JNUSU president in new delhi on saturday Photo by-K Asif 13/02/16

ಬಿಡಿ. ಅದು ಬೇರೆಯೇ ಚಚರ್ೆ. ಇಷ್ಟೆಲ್ಲಾ ದೇಶದ ತೆರಿಗೆ ಹಣದಿಂದ ಚರ್ಮ ದಪ್ಪ ಮಾಡಿಕೊಂಡಿರುವ ಈ ಅಯೋಗ್ಯರ ಗುಂಪಿಗೆ ಒಂದಷ್ಟು ಪತ್ರಕರ್ತರ, ಲೇಖಕರ, ವಕೀಲರ, ರಾಜಕಾರಣಿಗಳ ಸಂಪರ್ಕವಿದೆ. ಇಲ್ಲಿ ಕುಳಿತು ಇವರೆಲ್ಲ ಈ ದೇಶದ ನಾಶಕ್ಕೆ ಸೂಕ್ತ ಯೋಜನೆ ರೂಪಿಸುತ್ತಾರೆ. 2010ರಲ್ಲಿ ದಾಂತೇವಾಡಾದಲ್ಲಿ ನಕ್ಸಲ್ ಉಗ್ರಗಾಮಿಗಳು 76 ಜನ ಸಿ.ಆರ್.ಪಿ.ಎಫ್ ಸೈನಿಕರ ಹತ್ಯೆ ಮಾಡಿದಾಗ ಇವರುಗಳೆಲ್ಲ ಸೇರಿ ಸಂಭ್ರಮಿಸಿದ್ದರು. ನಕ್ಸಲರ ಕೃತ್ಯವನ್ನು ಸಮಥರ್ಿಸಿದ್ದರು. ಅವತ್ತು ಕೇಂದ್ರದಲ್ಲಿದ್ದುದು ಮನಮೋಹನ ಸಿಂಗರ ಸಕರ್ಾರ. ದೇಶಕ್ಕೆ ನಕ್ಸಲರೇ ಮೊದಲ ಶತ್ರುಗಳು ಎಂದು ಅವರು ದೆಹಲಿಯಲ್ಲಿ ಹೇಳುವಾಗಲೇ ಈ ಕೃತ್ಯ ನಡೆದಿತ್ತು. ಕಾಂಗ್ರೆಸ್ಸಿನ ವಿದ್ಯಾಥರ್ಿ ಗುಂಪು ಆಖಗ ವಿರುದ್ಧ ಪ್ರತಿಭಟನೆಯನ್ನೂ ಮಾಡಿತ್ತು. ಮುಂದೆ ಇದೇ ಕಾಂಗ್ರೆಸ್ ಸಕರ್ಾರ ಅಫ್ಜಲ್ ಖಾನನನ್ನು ನೇಣಿಗೇರಿಸಿದಾಗ ಮತ್ತೊಮ್ಮೆ ಆಖಗ ರೊಚ್ಚಿಗೆದ್ದಿತ್ತು. ಕಾಂಗ್ರೆಸ್ಸಿಗೆ ಚಿವುಟಿ ಅಳಿಸುವುದೂ ಗೊತ್ತು; ಸಮಾಧಾನ ಮಾಡುವುದೂ ಗೊತ್ತು.
ಇಂದು ರಾಹುಲ್ ಗಾಂಧಿ ಈ ವಿದ್ಯಾಥರ್ಿಗಳ ನಡುವೆ ನಿಂತು ‘ನಾನು ನಿಮ್ಮೊಂದಿಗೆ ಇದ್ದೇನೆ’ ಅಂತಾನಲ್ಲ ಇವರೆಲ್ಲರೂ ದೇಶ ಕಟ್ಟುವ ಬಯಕೆ ಇದೆಯಾ? ಅಥವಾ ತನ್ನ ಮುತ್ತಾತನಂತೆ ಇನ್ನೊಂದಷ್ಟು ಪಾಕಿಸ್ತಾನಗಳನ್ನು ನಿಮರ್ಿಸುವ ಹುನ್ನಾರ ಇದೆಯಾ? ಬಿಡಿ. ದಿನಗಳೆದಂತೆ ವಿಶ್ವವಿದ್ಯಾಲಯದ ದೇಶದ್ರೋಹಿಗಳ ಅಡ್ಡಾ ಆಗುತ್ತಿದೆ ಎಂಬುದು ವಿದ್ಯಾಥರ್ಿಗಳ ಕಣ್ಣಿಗೆ ರಾಚತ್ತಿತ್ತು. ಸಹಜವಾಗಿಯೇ ದೇಶದ ಪರವಾಗಿ ನಿಂತಿದ್ದ ವಿದ್ಯಾಥರ್ಿಗಳು ಗುಂಪುಗೂಡಿದರು. ಅವರ ಶಕ್ತಿ ಹೆಚ್ಚುತ್ತ ಬಂತು. ಸುಮಾರು 38 ವರ್ಷಗಳ ಎಡಪಂಥೀಯ ಏಕಸ್ವಾಮ್ಯ ಕುಸಿದು ಬೀಳುವುದು ಕಂಡಾಗ ಅನೇಕರು ಪತರಗುಟ್ಟಿದರು.
ಹೌದು. ಸ್ವಾತಂತ್ರ್ಯಾನಂತರ ಈ ದೇಶದ ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಎಡಪಂಥೀಯರದ್ದೇ. ಅದು ಜವಹರಲಾಲ್ ನೆಹರೂ ವಿವಿಯೇ ಇರಲಿ, ದೆಹಲಿ ವಿವಿಯೇ ಇರಲಿ, ಕೊನೆಗೆ ಕನರ್ಾಟಕದ ಮಂಗಳೂರು ವಿಶ್ವವದ್ಯಾಲಯವೇ ಇರಲಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವೇ ಇರಲಿ ಇಲ್ಲೆಲ್ಲಾ ಎಡ ಪಂಥದ ಗಬ್ಬು ವಾಸನೆಯೇ. ಇವರು ಬರೆದಿದ್ದೇ ಇತಿಹಾಸ; ಇವರು ಹೇಳಿದ್ದೇ ಪರಂಪರೆ. ದೇಶವನ್ನು ಒಗ್ಗೂಡಿಸಿ ಏಕಭಾರತ ನಿಮರ್ಿಸುವ ದೂರದ ಕನಸೂ ಇವರಿಗಿಲ್ಲ. ಜಾತಿ-ಮತಗಳ ಹೆಸರಲ್ಲಿ, ಭಾಷೆ-ಸಂಸ್ಕೃತಿಗಳ ಹೆಸರಲ್ಲಿ ದೇಶವನ್ನೂ ತುಂಡು-ತುಂಡು ಮಾಡಿ ಬಿಸಾಡುವುದಷ್ಟೇ ಇವರ ಮುಖ್ಯ ಗುರಿ.
ನನಗೆ ಚೆನ್ನಾಗಿ ನೆನಪಿದೆ. ಮಂಗಳೂರಿನ ಯೂನಿವಸರ್ಿಟಿ ಕಾಲೇಜಿನಲ್ಲಿ ದೇಶಭಕ್ತರ ಕುರಿತಂತಹ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ಸರಿಯಾದ ಹೊತ್ತಲ್ಲಿ ಸಭಾಂಗಣದ ಬೀಗ ತೆರೆಯಲು ಪ್ರಾಂಶುಪಾಲರು ನಿರಾಕರಿಸಿದಾಗ ರಸ್ತೆಯಲ್ಲಿ ನಿಂತು ಭಾರತದ ಗುಣಗಾನ ಮಾಡಬೇಕಾಗಿ ಬಂದಿತ್ತು. ನಮ್ಮ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಕೊಠಡಿಯ ತುಂಬಾ ಲೆನಿನ್, ಮಾಕ್ಸರ್್ರ ಪುಸ್ತಕಗಳು ರಾರಾಜಿಸುತ್ತವೆಯೇ ಹೊರತು ವಿವೇಕಾನಂದರ, ಅರವಿಂದರ ಸಾಹಿತ್ಯಗಳಿಲ್ಲ. ಹಾಗಂತ ಇವರಿಗೆ ಎಡಪಂಥೀಯ ಸಿದ್ಧಾಂತವೂ ಪೂರಾ ಅರ್ಥವಾಗಿದೆ ಎಂದೇನಿಲ್ಲ. ಇವರದ್ದು ಅವಕಾಶವಾದಿ ಸಿದ್ಧಾಂತ ಮಾತ್ರ! ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹಿ ಶಿಕ್ಷಕರ ವಿರುದ್ಧ ಕೇಂದ್ರ ಸಕರ್ಾರ ಸರಿಯಾದ ಕ್ರಮ ತೆಗೆದುಕೊಂಡರೆಂದರೆ ಇವರೆಲ್ಲ ಉಳಿದವರಿಗಿಂತ ಹೆಚ್ಚು ದೇಶಭಕ್ತಿಯ ಮಾತನಾಡಲಾರಂಭಿಸಿಬಿಡುತ್ತಾರೆ!

unnamed-600x370
ಜೆ.ಎನ.ಯೂನಲ್ಲಿ ಆರಂಭದಿಂದಲೂ ಎಡಚರದ್ದೇ ಮೇಲುಗೈ. ಬೇರೆ ಚಿಂತನೆಯವರನ್ನು ಒಂದೋ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ಇಲ್ಲವೇ ಕಿರಿಕಿರಿ ಮಾಡಿ ಓಡಿಸಲಾಯ್ತು. ಸಕರ್ಾರದ ಅಂಕೆಯಲ್ಲಿರದ ಮುಕ್ತ ಚಿಂತನೆಯ ತಾಣ ಎನ್ನುತ್ತಲೇ ಕಮ್ಯುನಿಸ್ಟ್ ಪಾಟರ್ಿಗಳು ತಮಗೆ ಬೇಕಾದ ಬೆಳೆ ತೆಗೆಯಲಾರಂಭಿಸಿದವು. ಜಾಗತಿಕವಾಗಿ ಎಡಪಂಥೀಯ ಶಕ್ತಿ ಕುಂದುತ್ತಿದ್ದಂತೆ ಮತ್ತು ಮಧ್ಯಮ ವರ್ಗದ ಜನ ಅಧ್ಯಯನದಲ್ಲಿ ಆಸಕ್ತಿ ತೋರಿ ಬದುಕು ರೂಪಿಸಿಕೊಳ್ಳುವ ಹಟಕ್ಕೆ ಬೀಳುತ್ತಿದ್ದಂತೆ ಭಾರತದ ಎಡಚರು ರಂಗು ಕಳೆದುಕೊಳ್ಳಲಾರಂಭಿಸಿದರು. ಆಮೇಲೆಯೇ ಅವರು ಭಾರತದಲ್ಲಿ ನಡೆಯುವ ಸಣ್ಣ-ಸಣ್ಣ ಸಂಗತಿಗಳನ್ನೂ ದೊಡ್ಡದೆಂದು ಬಿಂಬಿಸಿ ಬೊಬ್ಬೆ ಹಾಕುವ ಕಾರ್ಯ ಶುರುಮಾಡಿದ್ದರು.
ಇವುಗಳ ನಡುವೆ ಅರ್ಥವಾಗದ ಸಂಗತಿ ಒಂದೇ. ಇವರೆಲ್ಲ ಹೊಟ್ಟೆಗೆ ಅದೇನು ತಿಂತಾರೆ ಅಂತ. ಉಮರ್ ಖಾಲಿದ್ ಮತ್ತು ಕನ್ಹಯ್ಯಾ ಇಬ್ಬರೂ ‘ಅಫ್ಜಲ್ ಗುರುವಿನ ಕನಸನ್ನು ನನಸು ಮಾಡುತ್ತೇವೆ, ಭಾರತವನ್ನು ಚೂರು ಚೂರು ಮಾಡುತ್ತೇವೆ’ ಎಂಬುದನ್ನು ಯಾವ ದಿಕ್ಕಿನಿಂದ ಸಮಥರ್ಿಸಿಕೊಳ್ಳುತ್ತಾರೆ. ಈಗ ಮಾತ್ರ ಅಲ್ಲಿ ಇವರದ್ದು ಯಾವಾಗಲೂ ಒಂದೇ ರಾಗ. ಜೊತೆಗೆ ಒಂದೇ ಗುಂಪು ಕೂಡ. ಭಾರತವನ್ನು ದ್ವೇಷಿಸುವ ಯಾವ ಅವಕಾಶವನ್ನೂ ಅವರು ಬಿಟ್ಟವರೇ ಅಲ್ಲ. ನಕ್ಸಲರ ಪರವಾಗಿ ಇರಲಿ, ಭಯೋತ್ಪಾದಕರ ಪರವಾಗಿ ಇರಲಿ, ದನದ ಮಾಂಸ ತಿಂದು ಬಹುಸಂಖ್ಯಾತರನ್ನು ಕಾಡುವ ಸಂಗತಿ ಇರಲಿ ಕೊನೆಗೆ ದೀಪಿಕಾಳ ಮೈಚಾಯ್ಸ್ ವೀಡಿಯೋನೇ ಇರಲಿ ಒಂದೇ ಗುಂಪು ಎಲ್ಲೆಡೆ. ಮತ್ತೂ ಆಶ್ಚರ್ಯದ ಸಂಗತಿ ಏನು ಗೊತ್ತೇ? ಕೂಡಂಕುಲಂನಲ್ಲಿ ಅಣುಶಕ್ತಿ ಘಟಕ ಸ್ಥಾಪನೆ ವಿರೋಧಕ್ಕೂ ಇದೇ ಗುಂಪು!
ನಿಮಗೆ ಅನುಮಾನವಿದ್ದರೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಧರಣಿ ನಿರತರ ಮುಖಗಳನ್ನು ಒಮ್ಮೆ ನೋಡಿ. ರಾಷ್ಟ್ರವಿರೋಧಿಯಾದ ಯಾವ ಕೈಂಕರ್ಯವಿದ್ದರೂ ಅವರವರುಗಳೇ ರಾಜರು. ಹೇಗಿದು? ಇವರಿಗೆಲ್ಲ ಹಣ ಕೊಟ್ಟು ಪ್ರತಿಭಟನೆಗೆ ಕಳಿಸುತ್ತಿರೋದು ಯಾರು? ಕೂಡಂಕುಲಂನಲ್ಲಿ ಅಮೇರಿಕಾ ಚಚರ್್ನ ಮೂಲಕ ಹಣವನ್ನು ಈ ಎನ್.ಜಿ.ಓಗಳಿಗೆ ತಲುಪಿಸುತ್ತಿತ್ತೆಂಬುದು ಈಗ ದೃಢಪಟ್ಟ ಸಂಗತಿ ಹಾಗಿದ್ದರೆ. ಏಷ್ಯಾ ಖಂಡದಲ್ಲಿ ಸಿಂಹದಂತೆ ಮುನ್ನುಗ್ಗುತ್ತಿರುವ ಭಾರತದ ನಡಿಗೆಯನ್ನು ತಡೆಯುವ ದದರ್ು ಯಾರಿಗಿದೆ? ಇವರೆಲ್ಲ ಯಾವ ದೇಶದ ಏಜೆಂಟರು ಹಾಗಿದ್ದರೆ? ಯೋಚಿಸಿದರೆ ಉತ್ತರ ಹುಡುಕೋದು ಕಷ್ಟವಲ್ಲ!
ಈ ಬಾರಿ ಕೇಂದ್ರದಲ್ಲಿರುವ ಸಕರ್ಾರ ಈ ವಿಚಾರದಲ್ಲಿ ಕಠೋರವಾಗಿದೆ. ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ತಲೆ ಬಾಗಿಸುವ ಪ್ರಶ್ನೆಯೇ ಇಲ್ಲ. ಜೆ.ಎನ್.ಯು ಪ್ರಕರಣ ದೇಶದ್ರೋಹಿಗಳ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳಾಗಲಿ. ದೇಶದಲ್ಲೀಗ ರಾಷ್ಟ್ರೀಯ ವಾದಿಗಳು ಮತ್ತು ರಾಷ್ಟ್ರದ್ರೋಹಿಗಳ ನಡುವಿನ ಅಂತರ ಸ್ಪಷ್ಟವಾಗಲಾರಂಭಿಸಿದೆ. ಒಮ್ಮೆ ಈ ದ್ರೋಹಿಗಳನ್ನು ಪ್ರತ್ಯೇಕವಾಗಿಸಿಕೊಂಡರೆ ಆಮೇಲೆ ನೆಟ್ಟಗಾಗಿಸೋದು ಸುಲಭ.
ಒಟ್ಟಾರೆ ಅಚ್ಛೇದಿನಗಳು ಖಂಡಿತ ಬರುತ್ತಿವೆ!!

13 thoughts on “ದೇಶದ್ರೋಹದ ತಳಿಗಳಿಗೆ ಜೆ.ಎನ್.ಯು ಸೂಕ್ತ ಪರಿಸರ

 1. ಮೂಲಕ್ಕೆ ಪೆಟ್ಟು ಕೊಟ್ಟರೆ ಭವ್ಯ ಭಾರತದ ಭವಿಷ್ಯದ ಕಲ್ಪನೆ ಮುರಿದುಬಿದ್ದಂತೆ… ಇಂತಹ ವಿಶ್ವವಿದ್ಯಾನಿಲಯಗಳು ಇದೇ ಪ್ರಯತ್ನ ಮಾಡುತ್ತಿವೆ.. ಯುವ ಜನತೆಗೆ ಸರಿಯಾದ ಮಾರ್ಗವನ್ನು ಸೂಚಿಸುವ ಬದಲು ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿ ನಮ್ಮ ಅಂತಸತ್ವವನ್ನು ಪರಿಚಯಿಸುವ / ಅದರ ಶಕ್ತಿಯ ಆಳದ ಅರಿವು ಹೊರಗೆಡುಹುವ ಮಹತ್ವದ ಕೆಲಸಕ್ಕೆ ಪರೋಕ್ಷವಾಗಿ ಕಾರಣವಾದದ್ದಕ್ಕೆ ಧನ್ಯವಾದ ಹೇಳಲೇಬೇಕು….ಎಡಪಂಥಿಯ ವರ್ಗ ಜಾಗೃತವದಷ್ಟು ನಮ್ಮ ವಿಚಾರಧಾರೆಗಳ ಬಲವರ್ಧನೆ ತೀವ್ರತರವಾಗಿ ಬೆಳೆದುನಿಲ್ಲುವುದು ಸ್ವಾಗತಾರ್ಹ… ಆದರೆ ಎಡಪಂಥಿಯ ವರ್ಗ ತನ್ನ ಅಸ್ತಿತ್ವ ಆದಷ್ಟು ಬೇಗ ಕಳೆದುಕೊಳ್ಳಲಿ… ಆತ್ಮವಲೋಕನದ ಪ್ರಕ್ರಿಯೆ ಪ್ರಾರಂಭವಾಗಲಿ… ಸದಾಚಾರದ ಜಾಗೃತ ಮನಸ್ಸುಗಳಿಗೆ ನಿಮ್ಮ ವಿಚಾರಧಾರೆಯ ಪರಿಕಲ್ಪನೆ ವಿಸೃತವಾಗಲಿ…

  ಧನ್ಯವಾದಗಳು… ನಮಸ್ತೆ…

 2. ಮೂಲಕ್ಕೆ ಪೆಟ್ಟು ಕೊಟ್ಟರೆ ಭವ್ಯ ಭಾರತದ ಭವಿಷ್ಯದ ಕಲ್ಪನೆ ಮುರಿದುಬಿದ್ದಂತೆ… ಇಂತಹ ವಿಶ್ವವಿದ್ಯಾನಿಲಯಗಳು ಇದೇ ಪ್ರಯತ್ನ ಮಾಡುತ್ತಿವೆ.. ಯುವ ಜನತೆಗೆ ಸರಿಯಾದ ಮಾರ್ಗವನ್ನು ಸೂಚಿಸುವ ಬದಲು ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿ ನಮ್ಮ ಅಂತಸತ್ವವನ್ನು ಪರಿಚಯಿಸುವ / ಅದರ ಶಕ್ತಿಯ ಆಳದ ಅರಿವು ಹೊರಗೆಡುಹುವ ಮಹತ್ವದ ಕೆಲಸಕ್ಕೆ ಪರೋಕ್ಷವಾಗಿ ಕಾರಣವಾದದ್ದಕ್ಕೆ ಧನ್ಯವಾದ ಹೇಳಲೇಬೇಕು….ಎಡಪಂಥಿಯ ವರ್ಗ ಜಾಗೃತವದಷ್ಟು ನಮ್ಮ ವಿಚಾರಧಾರೆಗಳ ಬಲವರ್ಧನೆ ತೀವ್ರತರವಾಗಿ ಬೆಳೆದುನಿಲ್ಲುವುದು ಸ್ವಾಗತಾರ್ಹ… ಆದರೆ ಎಡಪಂಥಿಯ ವರ್ಗ ತನ್ನ ಅಸ್ತಿತ್ವ ಆದಷ್ಟು ಬೇಗ ಕಳೆದುಕೊಳ್ಳಲಿ… ಆತ್ಮವಲೋಕನದ ಪ್ರಕ್ರಿಯೆ ಪ್ರಾರಂಭವಾಗಲಿ… ಸದಾಚಾರದ ಜಾಗೃತ ಮನಸ್ಸುಗಳಿಗೆ ನಿಮ್ಮ ವಿಚಾರಧಾರೆಯ ಪರಿಕಲ್ಪನೆ ವಿಸೃತವಾಗಲಿ…
  ಧನ್ಯವಾದಗಳು… ನಮಸ್ತೆ…

 3. ನಮ್ಮ ದೇಶ ಮತ್ತೆ ಹಳೇ ವೈಭವಕ್ಕೆ ಮುನ್ನುಗ್ಗುತ್ತಿದ್ದರೆ…ಹುನ್ನಾರಗಳ ಮೊಲಕ ನಮ್ಮ ದೇಶದ ಜನರ ದಾರಿ ತಪ್ಪಿಸುತ್ತಿರುವ ಈ ದೇಶದ್ರೋಹಿಗಳನ್ನು ಹೊರ ಹಾಕಬೇಕು..ಮತ್ತು ಅಂತಹ ವಿಶ್ವವಿದ್ಯಾಲಯಗಳನ್ನು ಮುಚ್ಚಿಸಬೇಕು… ಈ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದಕ್ಕೆ ದನ್ಯವಾದಗಳು…ಅದಷ್ಟೆ ಅಡ್ಡಗಾಲು ಬಂದರು…ಅವೆಲ್ಲವನ್ನು ಮೆಟ್ಟಿ ನಮ್ಮ ದೇಶ ಪರಮವೈಭವಕ್ಕೆ ಹೋಗುವದಂತು ಸತ್ಯ…

 4. ಪ್ರಜಾಪ್ರಭುತ್ವ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನ ಹಾಕಿರುವ ಮಿತಿಯಲ್ಲಿಯೇ ಒಬ್ಬ ಪ್ರಜೆಯಾಗಿ ನಾನು ಮಾತನಾಡಲು ಆಗುವುದಿಲ್ಲ ಎಂದರೆ ಏನು? ‘ನೀನು ಹೀಗೆಯೇ ಮಾತನಾಡಬೇಕು, ಇಲ್ಲವಾದರೆ ನಿನಗೆ ದೇಶದ್ರೋಹಿ ಎಂಬ ಪಟ್ಟಕಟ್ಟಿ ನೇಣಿಗೆ ಏರಿಸಿ ಬಿಡುತ್ತೇವೆ’ ಎಂದರೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತ ಬಂತು ಎಂದು ಹೇಗೆ ನಂಬುವುದು?
  ಈಗ ದೇಶದಲ್ಲಿ ನಡೆದಿರುವ ವಿದ್ಯಮಾನಗಳು ವಿಚಿತ್ರವಾಗಿವೆ; ಸರ್ವಸ್ವತಂತ್ರವಾಗಿ ಯೋಚಿಸುವವರನ್ನು ತಲ್ಲಣಗೊಳಿಸುವಷ್ಟು ಆತಂಕಕಾರಿಯಾಗಿವೆ.

  ಯಾರೋ ದೂರದಲ್ಲಿ, ಮರೆಯಲ್ಲಿ ನಿಂತು ನೀವು ಹೀಗೆಯೇ ಯೋಚಿಸಬೇಕು, ಹೀಗೆಯೇ ಮಾತನಾಡಬೇಕು ಎಂದು ನಿರ್ಬಂಧ ಹೇರುತ್ತಿರುವಂತೆ ಭಾಸವಾಗುತ್ತದೆ; ಉಸಿರು ಕಟ್ಟಿದಂತೆ ಆಗುತ್ತಿದೆ. ಇದು ನೈಜ, ಜೀವಂತ ಪ್ರಜಾಪ್ರಭುತ್ವದ ರೀತಿ ಅಲ್ಲವೇ ಅಲ್ಲ ಎಂದು ಅನಿಸತೊಡಗಿದೆ. ಆದರೆ ಎಲ್ಲವೂ ರಾಷ್ಟ್ರಪ್ರೇಮ, ದೇಶಪ್ರೇಮ ಮತ್ತು ರಾಷ್ಟ್ರಧ್ವಜದ ಹೆಸರಿನಲ್ಲಿಯೇ ನಡೆಯುತ್ತಿದೆ. ಬಹುಪಾಲು ಮಾಧ್ಯಮಗಳು ಇದೇ ‘ವಾದ್ಯಗೋಷ್ಠಿ’ಯಲ್ಲಿ ಮತ್ತು ಅದೇ ಉಸುರಿನಲ್ಲಿ ಹಾಡುತ್ತಿರುವಂತೆಯೂ ಕಾಣುತ್ತದೆ. ಮತ್ತೆ, ಇಡೀ ಪ್ರಕರಣದಲ್ಲಿ ಕಣ್ಣಿಗೆ ಕಾಣುವಂತೆಯೇ ಹಿಂಸೆ ತಾಂಡವವಾಡುತ್ತಿದೆ.

  ದೆಹಲಿಯ ಜೆ.ಎನ್‌.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್‌ ಅವರನ್ನು ಪಟಿಯಾಲ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ. ದಾರಿಯಲ್ಲಿ ಕೆಲವರು ವಕೀಲರ ವೇಷದಲ್ಲಿ ಇರುವವರು ಅಥವಾ ಸ್ವತಃ ವಕೀಲರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು, ‘ಆತನಿಗೆ ಗುಂಡು ಹಾಕಿ’, ‘ಅವನನ್ನು ನೇಣಿಗೆ ಏರಿಸಿ’ ಎಂದು ಕನ್ಹಯ್ಯ ಕಡೆಗೆ ಓಡಿ ಬರುತ್ತಾರೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಥಳಿಸುತ್ತಾರೆ. ಥಳಿಸುತ್ತ ‘ಭಾರತ್‌ ಮಾತಾ ಕೀ ಜೈ’ ಎನ್ನುತ್ತಾರೆ. ಕನ್ಹಯ್ಯ ವಿರುದ್ಧ ಇರುವ ಆರೋಪ ಏನು ಎಂದು ತೀರಾ ಈಚಿನವರೆಗೆ ದೆಹಲಿ ಪೊಲೀಸ್‌ ಕಮಿಷನರ್ ಆಗಿದ್ದ ಬಸ್ಸಿ ಅವರಿಗೇ ಗೊತ್ತಿದ್ದಂತೆ ಕಾಣುವುದಿಲ್ಲ. ನ್ಯಾಯಾಲಯದಲ್ಲಿ ಬರೀ ಸರ್ಕಾರದ ಪರವಾಗಿ ಮಾತ್ರವಲ್ಲ ಆರೋಪಿ ಪರವಾಗಿಯೂ ವಾದಿಸಿ ಆತ ತಪ್ಪಿತಸ್ಥ ಅಲ್ಲ ಎಂದು ಮನವರಿಕೆ ಮಾಡಿಕೊಡಬೇಕಾದ ವಕೀಲರೇ, ‘ಗುಂಡು ಹಾರಿಸುವ’,‘ನೇಣಿಗೆ ಏರಿಸುವ’ ಮಾತು ಆಡುತ್ತಿದ್ದಾರೆ.

  ಇದೇ ಸಮಯದಲ್ಲಿ ದೇಶದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಇದ್ದಕ್ಕಿದ್ದಂತೆ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆಯಬೇಕು ಎಂದು ಅನಿಸುತ್ತದೆ. ಸಭೆಯಲ್ಲಿ ಅವರು ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇದೆಯೇ ಎಂದೇನೂ ಕೇಳುವುದಿಲ್ಲ, ಪಾಠಗಳು ಸರಿಯಾಗಿ ನಡೆದಿವೆಯೇ ಎಂದೂ ವಿಚಾರಿಸುವುದಿಲ್ಲ. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ 207 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸಬೇಕು ಎಂದು ಒಂದೇ ಒಂದು ದಿಕ್ಖತ್ತು ಕೊಟ್ಟು ಸಭೆಯನ್ನು ಬರ್ಖಾಸ್ತು ಮಾಡುತ್ತಾರೆ.

  ಅಂದೇ ಸಂಜೆ ಒಂದು ಪ್ರಬಲ ರಾಷ್ಟ್ರೀಯ ವಾಹಿನಿಯಲ್ಲಿ ಸರ್ಕಾರದ ಈ ತೀರ್ಮಾನವನ್ನು ಘನಘೋರವಾಗಿ ಸಮರ್ಥಿಸುವ ಏಕಮುಖದ ವಾಗ್ಝರಿ ಶುರುವಾಗುತ್ತದೆ. ಬರೀ ರಾಷ್ಟ್ರಧ್ವಜ ಹಾರಿಸುವುದು ಮಾತ್ರ ದೇಶಭಕ್ತಿಯಲ್ಲ ಎಂದು ಹೇಳಲು ಪ್ರಯತ್ನಿಸುವವರ ಬಾಯಿಯನ್ನು ನಿರ್ದಯವಾಗಿ ಮುಚ್ಚಿಸಲಾಗುತ್ತದೆ. ಎಲ್ಲವೂ ಪೂರ್ವನಿರ್ಧರಿತ ನಾಟಕದಂತೆ ಕಾಣುತ್ತದೆ. ಹಾಗಾದರೆ ಭಿನ್ನವಾಗಿ ಯೋಚಿಸುವುದು ರಾಷ್ಟ್ರಪ್ರೇಮ ಅಲ್ಲವೇ? ಹಾಗೆ ಸ್ವತಂತ್ರವಾಗಿ ಯೋಚಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸಿ ಬಾಯಿ ಮುಚ್ಚಿಸಿ ಬಿಟ್ಟರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ, ಏನು ಬೆಲೆ? ಈ ಸ್ವಾತಂತ್ರ್ಯವನ್ನು ದೇಶ ಎಷ್ಟು ಕಷ್ಟಪಟ್ಟು ಗಳಿಸಿದೆಯಲ್ಲವೇ? ನಾವೆಲ್ಲ ಹೆಮ್ಮೆಪಡುವ ಸಂವಿಧಾನವನ್ನು ಎಷ್ಟೆಲ್ಲ ಯೋಚಿಸಿ ನಮ್ಮ ಹಿರಿಯರು ಬರೆದರು ಅಲ್ಲವೇ?

  ಜೆ.ಎನ್‌.ಯುವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಎಲ್ಲ ವಿದ್ಯಮಾನ ನಡೆಯುತ್ತಿರುವುದು ಕೂಡ ಕುತೂಹಲಕಾರಿ ಮಾತ್ರವಾಗಿಲ್ಲ; ಇದರ ಹಿಂದೆ ಆಳವಾದ ರಾಜಕೀಯ ಹುನ್ನಾರವೂ ಇದ್ದಂತೆ ತೋರುತ್ತದೆ. ಜೆ.ಎನ್‌.ಯು ರಾಷ್ಟ್ರದ ರಾಜಧಾನಿಯಲ್ಲಿ ಇದೆ ಮತ್ತು ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಾಗೂ ಮುಕ್ತ ಚಿಂತನೆಯ ಒಂದು ಬಹುದೊಡ್ಡ ವೇದಿಕೆ ಎನಿಸಿದೆ. ‘ಮುಕ್ತ ಚಿಂತನೆಗೆ ಅಲ್ಲಿಯೇ ಕಡಿವಾಣ ಹಾಕಿಬಿಟ್ಟರೆ ಆಯಿತು’ ಎಂದು ಅಧಿಕಾರದಲ್ಲಿ ಇದ್ದವರು ಯೋಚಿಸುತ್ತಿದ್ದಾರೆ. ‘ಜೆ.ಎನ್‌.ಯು ವಿದ್ಯಾರ್ಥಿ ಸಂಘದ ನಾಯಕನನ್ನೇ ಬಲಿ ಹಾಕಿಬಿಟ್ಟರೆ ಬಾಕಿಯವರೆಲ್ಲ ಮುಚ್ಚಿಕೊಂಡು ಇರುತ್ತಾರೆ’ ಎಂದು ಸರ್ಕಾರ ಭಾವಿಸಿದಂತಿದೆ.

  ಅದು ಉಳಿದ ವಿಶ್ವವಿದ್ಯಾಲಯಗಳಲ್ಲಿನ ಸ್ವತಂತ್ರ ಚಿಂತನೆಗೂ ಮೂಗುದಾಣ ಹಾಕಿದಂತೆ ಆಗುತ್ತದೆ ಎಂದೂ ಸರ್ಕಾರ ಭಾವಿಸಿರಬಹುದು. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಸೂಚನೆಯ ಹಿಂದೆ ಇದೇ ಹುನ್ನಾರ ಇದೆ. ಜೆ.ಎನ್‌.ಯು ಎಷ್ಟು ಸ್ವತಂತ್ರ ಚಿಂತನೆಯ ಕೇಂದ್ರ ಎನಿಸುತ್ತದೆ ಎಂದರೆ ಅಲ್ಲಿನ ನಾಲ್ವರು ಎಬಿವಿಪಿ ಮುಖಂಡರು ಕೂಡ ತಮ್ಮ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ. ‘ಜೆ.ಎನ್.ಯು ವಿದ್ಯಮಾನವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ ಸರಿಯಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದರೆ ಅವರೂ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಲು ಆಗುತ್ತದೆಯೇ?

  ನಮಗೆ ಪ್ರತ್ಯೇಕ ದೇಶ ಬೇಕು ಎಂದು ಕೇಳುವುದು ಈ ದೇಶಕ್ಕೆ ಹೊಸದೇನೂ ಅಲ್ಲ. ಕಾಶ್ಮೀರದಲ್ಲಿ ಈಗ ಅದು ನಿತ್ಯವೂ ಕೇಳಿಬರುತ್ತಿರುವ ಕೂಗು. ಹಾಗೆಂದು ಅಂಥ ಕೂಗು ಹಾಕುತ್ತಿರುವ ಎಲ್ಲರ ವಿರುದ್ಧವೂ ರಾಷ್ಟ್ರದ್ರೋಹದ ಪ್ರಕರಣ ಹಾಕಿ ಜೈಲಿಗೆ ಕಳುಹಿಸಲು ಆಗುತ್ತದೆಯೇ? ಈಶಾನ್ಯದ ಅನೇಕ ರಾಜ್ಯಗಳಲ್ಲಿ ಭಾರತದ ವಿರುದ್ಧ ಕೂಗು ಕೇಳಿಬರುತ್ತಿಲ್ಲವೇ? ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳಲಿಲ್ಲವೇ? ಈಗಲೂ ಕೊಡಗಿನ ಮಂದಿ ಕೇಳುತ್ತಿಲ್ಲವೇ? ಅವರ ವಿರುದ್ಧ ರಾಜ್ಯದ್ರೋಹದ ಪ್ರಕರಣ ಜಡಿದು ಒಳಗೆ ಹಾಕಲು ಆಗುತ್ತದೆಯೇ? ಎಲ್ಲಿಯವರೆಗೆ ಇಂಥ ಕೂಗುಗಳು ಅಹಿಂಸಾತ್ಮಕವಾಗಿ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇರುತ್ತವೆಯೋ ಅಲ್ಲಿಯವರೆಗೆ ಅವುಗಳನ್ನು ಪ್ರಜಾಪ್ರಭುತ್ವದಲ್ಲಿ ಲಭ್ಯ ಇರುವ ಕಾನೂನಿನ ಚೌಕಟ್ಟಿನಲ್ಲಿಯೇ ನಿಭಾಯಿಸಬೇಕು.

  ಜೆ.ಎನ್‌.ಯುದಲ್ಲಿ ಯಾರೋ ಕೆಲವರು ಹುಡುಗರು, ಅವರು ಪ್ರತ್ಯೇಕ ಕಾಶ್ಮೀರದ ಪರವಾಗಿಯೇ ಇದ್ದಾರೆ ಎಂದುಕೊಳ್ಳೋಣ, ಪ್ರತ್ಯೇಕ ದೇಶದ ಪರವಾಗಿ ಕೂಗು ಹಾಕಿದರೆ ಅವರನ್ನು ಕಾಶ್ಮೀರದಲ್ಲಿ ನಿರಂತರವಾಗಿ ಇದೇ ಕೂಗು ಹಾಕುತ್ತಿರುವವರಿಗಿಂತ ಭಿನ್ನವಾಗಿ ಹೇಗೆ ಪರಿಗಣಿಸುವುದು? ‘ಕಾಶ್ಮೀರದಲ್ಲಿ ಅವರು ಬಹುಸಂಖ್ಯಾತರು. ಆದರೆ, ಇಲ್ಲಿ ನಾಲ್ಕೈದು ಜನ ಸಿಕ್ಕಿದ್ದಾರೆ ಅವರನ್ನು ಬಡಿದು ಬಿಡೋಣ’ ಎಂದು ಸರ್ಕಾರ ಯೋಚನೆ ಮಾಡುತ್ತಿದೆಯೇ? ಹಾಗೆ ಮಾಡಿದರೆ ಆ ಕೂಗನ್ನೇ ಅಡಗಿಸಿದಂತೆ ಆಗುತ್ತದೆ ಎಂದು ತಿಳಿದುಕೊಳ್ಳುವುದು ಎಂಥ ಆತ್ಮವಂಚನೆ ಅಲ್ಲವೇ? ಅಥವಾ ಜೆ.ಎನ್.ಯುದಲ್ಲಿ ಉಳಿದ ಯಾರಿಗೂ ದೇಶಪ್ರೇಮ ಇಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಹೇಗೆ ಬರುತ್ತದೆ? ಅವರೆಲ್ಲ ಈ ಕಾಶ್ಮೀರಿ ಹುಡುಗರನ್ನು ನೋಡಿ ನಕ್ಕು ಸುಮ್ಮನಾಗಿಬಿಟ್ಟಿರಬಹುದಲ್ಲ? ದೇಶಪ್ರೇಮ ಎಂಬುದು ಯಾರದಾದರೂ ಕೆಲವರ ಗುತ್ತಿಗೆ ಅಲ್ಲವಲ್ಲ!

  ಬಿಜೆಪಿಯವರು ಇದು ತಮ್ಮದೇ ಗುತ್ತಿಗೆ ಎನ್ನುತ್ತಿದ್ದಾರೆ. ಅವರು ಮೂರು ದಿನಗಳ ‘ಜನ ಸ್ವಾಭಿಮಾನ ಅಭಿಯಾನ’ವನ್ನು ದಿಢೀರ್‌ ಎಂದು ಈಗಲೇ ಹಮ್ಮಿಕೊಳ್ಳುವ ಕಾರಣ ಏನಿರಬಹುದು? ಬಿಜೆಪಿಯವರು ತಾವು ಮಾತ್ರ ದೇಶಪ್ರೇಮಿಗಳು ಮತ್ತು ದೇಶಪ್ರೇಮದ ವ್ಯಾಖ್ಯಾನವನ್ನು ‘ನಾವು ಮಾತ್ರ ಮಾಡಬಲ್ಲೆವು ಅಥವಾ ಮಾಡುತ್ತೇವೆ’ ಎಂದು ಅಂದುಕೊಂಡಿದ್ದಾರೆ. ಹಾಗೂ ಎಲ್ಲರೂ ಅದಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕು ಎಂದು ಅವರು ನಿರ್ಬಂಧ ವಿಧಿಸುತ್ತಾರೆ. ‘ನೀವು ಹೇಳುವುದೇ  ಮಾತ್ರ ದೇಶಪ್ರೇಮ ಅಲ್ಲ’ ಎಂದಕೂಡಲೇ ನಿಮಗೆ ‘ದೇಶದ್ರೋಹಿ’ ಪಟ್ಟ ಸಿಕ್ಕು ಬಿಡುತ್ತದೆ. ಹಾಗೂ ಅವರ ಧ್ವನಿ ಎಷ್ಟು ಜೋರಾಗಿದೆ ಎಂದರೆ ನಿಮ್ಮ ಧ್ವನಿ ಕೇಳುವುದೇ ಇಲ್ಲ. ಇದು ಒಂದು ರೀತಿಯಲ್ಲಿ ದೇಶದ ಹೆಸರಿನಲ್ಲಿ ನಡೆಸುವ ಮತ್ತು ನಡೆಯುತ್ತಿರುವ ಭಯೋತ್ಪಾದನೆ.

  ಇಲ್ಲಿ ಬರೀ ರಾಜಕಾರಣಿಗಳು ಮಾತ್ರ ಇರುವುದಿಲ್ಲ. ಪೊಲೀಸರು ಇರುತ್ತಾರೆ, ವಕೀಲರು ಇರುತ್ತಾರೆ, ಮಾಧ್ಯಮದವರು ಇರುತ್ತಾರೆ ಮತ್ತು ಕೈಯಲ್ಲಿ ಬಡಿಗೆ ಹಿಡಿದುಕೊಂಡ ಗೂಂಡಾಗಳೂ ಇರುತ್ತಾರೆ. ಎಲ್ಲರೂ ಸೇರಿಕೊಂಡು ಬಾಯಿಮುಚ್ಚಿಸಲು, ‘ಧ್ವನಿ ಅಡಗಿಸಲು’ ಪ್ರಯತ್ನ ಮಾಡುತ್ತಾರೆ. ಇಡೀ ಪ್ರಕರಣದುದ್ದಕ್ಕೂ ದೆಹಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಒಂದು ಅಂಗ ಎಂದೇ ನಮಗೆ ಅನಿಸಲಿಲ್ಲ. ಜೆ.ಎನ್‌.ಯು ವಿದ್ಯಾರ್ಥಿಗಳ ಮೇಲೆ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಅವರು ಬಿಟ್ಟ ಕಣ್ಣು ಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಮಾಧ್ಯಮದವರ ಮೇಲೆ ಹಲ್ಲೆ ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಎಂದು ಸರ್ಕಾರಕ್ಕೆ ಅರ್ಥವಾಗಬೇಕಿತ್ತು. ‘ಮಾಧ್ಯಮದವರಿಗೆ ಚೆನ್ನಾಗಿ ಒದೆಯಲಿ’ ಎಂದು ಸರ್ಕಾರದಲ್ಲಿ ಇದ್ದವರು ಯೋಚಿಸಿರಲಾರರು ಎಂದು ಹೇಗೆ ಹೇಳುವುದು?

  ಇಲ್ಲೆಲ್ಲ ಒಂದೋ ಇಂಥ ದೈಹಿಕ ಹಿಂಸೆ ಇದೆ. ಅಥವಾ ಭಾರತೀಯ ದಂಡ ಸಂಹಿತೆಯ ರಾಷ್ಟ್ರದ್ರೋಹದ ಕಲಮಿನ ದುರ್ಬಳಕೆ(?)ಯ ಕಾನೂನಾತ್ಮಕ ಹಿಂಸೆ ಇದೆ. ಕನ್ಹಯ್ಯಕುಮಾರ್‌ ಏನು ಮಾತನಾಡಿದ್ದಾರೆ ಎಂದು ಗೊತ್ತೇ ಇಲ್ಲದಿರುವಾಗ ಅವರ ವಿರುದ್ಧ ರಾಷ್ಟ್ರದ್ರೋಹದ ಕಲಮಿನ ಪ್ರಕಾರ ಪ್ರಕರಣ ದಾಖಲಿಸುವುದು ಹೇಗೆ ಸಾಧ್ಯ? ಕನ್ಹಯ್ಯ ಅಪರಾಧ ಮನೋಭಾವದ ವ್ಯಕ್ತಿಯಲ್ಲ ಎನ್ನುವುದಕ್ಕೆ ಪುರಾವೆಯಾಗಿ ಅವರು ತಾವು ಈ ದೇಶದ ಸಂವಿಧಾನದ ವಿರೋಧಿಯಲ್ಲ ಎಂದು ಸಾರಿ ಸಾರಿ ಹೇಳಿದ್ದಾರಲ್ಲ, ಇನ್ನೇನು ಮಾಡಬೇಕು? ಹಾಗೆ ನೋಡಿದರೆ ಪೊಲೀಸರ ನಡವಳಿಕೆಯೇ ಅಪ್ರಾಮಾಣಿಕವಾಗಿತ್ತು. ಇನ್ನೇನು ನಿವೃತ್ತರಾಗಲಿರುವ ದೆಹಲಿಯ ಹಿಂದಿನ ಪೊಲೀಸ್‌ ಮುಖ್ಯಸ್ಥರಿಗೆ ಈ ಸರ್ಕಾರದಿಂದ ಇನ್ನೇನೋ ಆಗಬೇಕಿದೆ.

  ಯಾವುದಾದರೂ ಹುದ್ದೆಯ ಮೇಲೆ ಕಣ್ಣು ಇಟ್ಟವರು ಈಗಿರುವ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ. ಬಸ್ಸಿ ಕೂಡ ಹಾಗೆಯೇ ನಡೆದುಕೊಂಡರು. ಅವರು ಕನ್ಹಯ್ಯಕುಮಾರ್‌ ಅವರನ್ನು ಒಳಗೆ ಹಾಕಿ ಅಧಿಕಾರದಲ್ಲಿ ಇದ್ದವರನ್ನು ಸಂಪ್ರೀತಗೊಳಿಸಲು ನೋಡಿದರು. ತಕ್ಷಣ ದೇಶದ ಗೃಹಸಚಿವರು ಜೆ.ಎನ್‌.ಯು ವಿದ್ಯಾರ್ಥಿಗಳ ವಿರುದ್ಧ ಎಲ್‌.ಇ.ಟಿ ಸಂಪರ್ಕದಂಥ ಕಪೋಲಕಲ್ಪಿತ ಸಂಗತಿಗಳನ್ನು ಬಿತ್ತರಿಸಲು ಆರಂಭಿಸಿದರು. ಅಂತರರಾಷ್ಟ್ರೀಯ ಮಟ್ಟದ ಚಿಂತಕರು, ವಿಜ್ಞಾನಿಗಳು ಮತ್ತು ರಾಜಕೀಯ ವಿಶ್ಲೇಷಕರು, ಜೆ.ಎನ್‌.ಯು ವಿದ್ಯಮಾನವನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಹೀನಾಮಾನವಾಗಿ ಟೀಕಿಸಿದರೂ ದೇಶದ ಪ್ರಧಾನಿ ದಿವ್ಯಮೌನ ತಾಳಿದ್ದಾರೆ. ಈಗ ನಡೆಯುತ್ತಿರುವುದೆಲ್ಲ ಅವರಿಗೆ ಇಷ್ಟವಿಲ್ಲದ್ದು ಎಂದು ಹೇಗೆ ಹೇಳುವುದು? ಇಷ್ಟವಿದ್ದುದೇ ಇರಬೇಕೇ?

  ಇದೆಲ್ಲ ಭಾವುಕ ಎಂದು ಅನಿಸಬಹುದು: ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ. ಪ್ರಜಾಪ್ರಭುತ್ವದಲ್ಲಿ ಅವರಂಥ ಭಿನ್ನಮತೀಯ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಅವರ ಎಲ್ಲ ಅಸಹಕಾರವೂ ಅಹಿಂಸಾತ್ಮಕವಾಗಿಯೇ ಇರುತ್ತಿತ್ತು. ಪ್ರಭುತ್ವದ ಜೊತೆಗೆ ತಮಗೆ ಇರುವ ಎಲ್ಲ ಅಸಮ್ಮತಿಯನ್ನು ಅವರು ಅಹಿಂಸಾತ್ಮಕವಾಗಿಯೇ ವ್ಯಕ್ತಪಡಿಸುತ್ತಿದ್ದರು. ಪ್ರಭುತ್ವ ಎನ್ನುವುದು ಅದು ನಮ್ಮದಾದರೂ ಇರಲಿ, ಪರಕೀಯರದಾದರೂ ಇರಲಿ. ಅದು ಹಿಂಸಾತ್ಮಕವಾಗಿಯೇ ಇರುತ್ತದೆ ಎಂದು ಕಾಣುತ್ತದೆ. ಈಗಲಂತೂ ಅದು ಹಿಂಸಾತ್ಮಕವಾಗಿಯೇ ಇದೆ. ಮತ್ತು ಹಿಂಸಾತ್ಮಕವಾಗಿಯೇ ನಡೆದುಕೊಳ್ಳುತ್ತಿದೆ. ಸ್ವತಂತ್ರವಾಗಿ ಯೋಚಿಸುವವರಿಗೆ ಈಗಿರುವ ಮಾನಸಿಕ ಹಿಂಸೆ ಹಿಂದೆ ಎಂದೂ ಇರಲಿಲ್ಲ ಎಂದೂ ಭಾಸವಾಗುತ್ತದೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್‌ ಅಂಕ್ಲೆಸಾರಿಯಾ ಅಯ್ಯರ್‌ ತಮ್ಮ ಈಚಿನ ಅಂಕಣವನ್ನು, ‘ದೇಶಪ್ರೇಮ ಎಂಬುದು ಫಟಿಂಗರ ಕೊನೆಯ ಆಸರೆ’ ಎಂದು ಶುರು ಮಾಡಿದ್ದರು. ‘ರಾಜಕೀಯ, ಫಟಿಂಗರ ಕೊನೆಯ ಅಸರೆ’ ಎನ್ನುವ ಮಾತು ಇತ್ತು. ಎಂಥ ವಿಪರ್ಯಾಸ ಅಲ್ಲವೇ?

  Desha premada certificategalannu taavu innobbarige koduvudannu bittu kelagina prashnegalige dayamaadi uttarisi ,

  1. Ee Deshadalli Bharatada Dwajavannu harisiddakke “Rashtrapremi Yuva Dal” da mooru janaru 12 varsha Jailu anubhavisiddare , hagiddare RSS navaru Desha drohigalallave ?

  2. Yaaru Afjal guruvannu Hutatma endu bimbisuttaro, pratyekata vaadavannu bembalisuttaro varondige sarkaravanne rachisiruva neevugalu desha drohigalallave ?

  3. Quit India movement samayadalli Ambedkar , Communist yaaru Gandhiyavarige saath neediralilla hagendu Gandhi avarannu deshadrohigalu endu kareyalilla . Ashte yeke nimma RSS navaru Britishara gooda charike madiddu maretu hoyite ?

  4. Sadvi pragya singh , aseemananda rannu samrathisi bharatada karala dina ennuva nimma postgalu eshtu beku ? ivarella enu desha bhaktare ? mahatmare ?

  5. Ashte yeke namma August 15th annu karaladina endu aacharisa beku enda kalladka prabhakarara jothe stage share maduva neevu yarige desh bhaktiya paata madta iddira ?

  6. Bharatada samvidhanavannu , Dwajavannu yava mattake nimma RSS kadeganiside haagu adara bagge Golvarkar enu heliddare anta swalpa vivarisi , naavu avara desha premada bagge tilidu kollona .

  7. JNU nalli bhandisiruva yuva nayakana mele yavude sakhya adharagalu sigade ingu tinda manganantagiruva sarkarada kaalu nekkuva kelasa bittubidi .

  8. JNU da koduge enu embudannu adara alumni list nodi tilukolli.

 5. ಮೋಹನ ಅವರೇ, ಸೂಲಿಬೇಲಿಯವರು ಹೇಳಿದ್ದು ನಿಮ್ಮ ಬಗ್ಗೆನೇ. ನೀವು ಮಾಡಿದ್ದು ನಮಗೆಲ್ಲ ತಿಳಿಯುವಂತೆ ಹೇಳಿದ್ದಾರೆ. ನಿಮ್ಮ ಬರವಣಿಗೆಯಲ್ಲಿ ಕಾಣುವ ಸಿಟ್ಟು ಸ್ವಾಭಾವಿಕ. ಕಂಡದ್ದನ್ನಾಡಿದರೆ ಕೆಂಡದಂತಹ ಕೋಪವಂತೆ. ಕಳ್ಳ ಸಾಮಾನ್ಯ ಜನಕ್ಕಿಂತ ಹೆಚ್ಚು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ನೀವೇನೂ ಅದಕ್ಕೆ ಹೊರತಲ್ಲ. ಹೋಗಲಿ ಬಿಡಿ. ಏನಾದರೂ ಪ್ರಶಸ್ತಿ ಸಿಕ್ಕಿದ್ದರೆ ಅದನ್ನು ಹಿಂತಿರಿಗಿಸಿಬಿಡಿ. ಎಲ್ಲಾ ಸರಿ ಹೋಗುತ್ತೆ.

 6. MOHAN good that you are following sir’s blog…. took time to read this article & wrote lengthy comment…. well I didnt do that mistake… just read few lines of your updates… n the points updated…

  ಇಲ್ಲಿ ಪ್ರಸ್ತುತ ಸಮಸ್ಯೆಗೆ ಚರ್ಚೆ ನಡೆದಿದೆ…. ಯಾರನ್ನು ಸಮರ್ಥಿಸಲು ಸರ್ ನಿಂತಿಲ್ಲ… i hope u get it

 7. Krishna Hegde ,
  Nimage Nanna baravanigeyalli sittu mattu Sulibeleyavara baravanigeya prashantateya tamma arivige nimage ondu award kodisabeku .
  Naanu kelida 8 prashnegalalli nimage kandaddanu kandante heli . Nimma vakya ” ಕಳ್ಳ ಸಾಮಾನ್ಯ ಜನಕ್ಕಿಂತ ಹೆಚ್ಚು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ” nanna matannu samarthisuttade
  ‘ದೇಶಪ್ರೇಮ ಎಂಬುದು ಫಟಿಂಗರ ಕೊನೆಯ ಆಸರೆ….’

 8. Prema Lakshminarayan,
  ಇಲ್ಲಿ ಪ್ರಸ್ತುತ ಸಮಸ್ಯೆಗೆ ಚರ್ಚೆ ನಡೆದಿದೆ…. ಯಾರನ್ನು ಸಮರ್ಥಿಸಲು ಸರ್ ನಿಂತಿಲ್ಲ…
  Well contradicting above statement your comments says that wring lengthy comment is mistake ,That shows that you are not interested in discussion. ಚರ್ಚೆ ಆಗೋದು ಎರಡು ಭಿನ್ನ ಅಭಿಪ್ರಾಯಗಳಿದ್ದಾಗಲೇ ಅಲ್ಲವೇ ? ಯಾರ ಸಮರ್ಥನೆಗೂ ನಿಂತಿಲ್ಲದವರು ಒಂದು ವರ್ಗವನ್ನು ಸಮರ್ಥಿಸಿ ಕೊಳ್ಳುವುದೇಕೆ ? ನನಗೆ ಗೋಡ್ಸೆ ಮತ್ತು ಅಫ್ಜಲ್ ನಾ ಮದ್ಯ ಯಾವುದೇ difference ಕಾಣಿಸೋಲ್ಲ . ಯಾಕೂಬ್ ಮತ್ತು ಸಾದ್ವಿ ಪ್ರಗ್ಯಾ ಮದ್ಯೆಯೂ ಅಷ್ಟೇ .. ಆದರೆ ನಿಮಗೆ ಅವರಲ್ಲಿ ಕಾಣಿಸುತ್ತೆ . ಹಾಗೂ ಇದನ್ನು ಹೇಳಿದವರು ನಿಮಗೆ ದೇಷ್ಡ್ರೋಹಿಗಳಂತೆ ಕಾಣಿಸುತ್ತಾರೆ.

 9. Mr mohan your point saying that ambedkar wasn’t supported gandhiji. A few years ago you different mentality patriot ppl used his card for dalith encroaching. Now you fed up and said he not supported. Where is the physical evidence they RSS served as secret agency of british. We had enough of your proofless words. We can show that Nehru acted as secret agent and spied on subhash Chandra Bose.
  The British officer who came India to announce freedom was asked for reason of giving the freedom. He mentioned lose of naval confidence and the act of subhash Chandra Bose. And the judge who questioned desperate asked the effect of Gandhi’s non violence movement for that general answered mi-ni-mal.
  and you ppl all claimed the cause of getting freedom in the name of gandhiji and jawaharlal Nehru. The shameless dynasty that offered bharathratna to himself. Now explain why you people did kept your mouth shut in all the decade of UPA govt??
  And now linking every bad thing to modiji??

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s