ಇನ್ನಾದರೂ ಪ್ರಶ್ನೆ ಕೇಳಲಿಲ್ಲವೆಂದರೆ ಹೇಗೆ?

ತಮೋಗತವಾಗಿರುವ ಮನಸ್ಸನ್ನು ರಜಸ್ಸಿಗೆ ಏರಿಸಬೇಕಿರೋದೇ ಸದ್ಯದ ದೊಡ್ಡ ಸವಾಲು. ಸ್ವಾಮಿ ವಿವೇಕಾನಂದರು ‘ಗೀತೆ ಓದಲು ಬಂದ ತರುಣರನ್ನು ಫುಟ್ ಬಾಲ್ ಆಡು ಆಮೇಲೆ ಗೀತೆ ಓದಿದರಾಯ್ತು’ ಎಂದರಲ್ಲ ಅದು ಇದೇ ಕಾರಣಕ್ಕೇ. ತಮಸ್ಸಿನ ಭಾವದಿಂದ ಗೀತೆ ಓದಿದರೆ ಅದು ಅಪಾರ್ಥವನ್ನೇ ಕೊಡುತ್ತದೆ. ಸ್ವಲ್ಪ ಮೈ ಕೈ ಗಟ್ಟಿಮಾಡಿಕೊಳ್ಳುವ ನೆಪದಲ್ಲಿ ರಜಸ್ಸನ್ನು ಜಾಗೃತಗೊಳಿಸಿಕೊಂಡರೆ ಹೊಸ ಕಾರ್ಯಕ್ಕೆ ಮನಸ್ಸು ಅಣಿಗೊಳ್ಳುತ್ತದೆ. ಹೀಗಾಗಿಯೇ ಪ್ರೇಮಿಗಳ ದಿನವನ್ನು ದೇಶ ಪ್ರೇಮಿಗಳ ದಿನವೆಂದು ಆಚರಿಸುವ ಸಂಕಲ್ಪ. ಈ ನೆಪದಲ್ಲಿ ತರುಣರು ಒಂದಷ್ಟು ಮಹಾಪುರುಷರನ್ನು ಸ್ಮರಿಸಿಕೊಂಡು ಅವರ ಬಗ್ಗೆ ಓದಿಕೊಂಡರೆ, ನಾಲ್ಕು ಮಾತುಗಳಾಡಿದರೆ ಕೊನೆಗೆ ಅವರ ಚಿತ್ರವನ್ನಾದರೂ ಎಫ್ ಬಿಯಲ್ಲಿ, ವಾಟ್ಸಪ್ನಲ್ಲಿ ಹರಿದಾಡಿಸಿದರೆ ರಕ್ತದ ಕಣಕಣಗಳೂ ಚುರುಕಾಗುತ್ತವೆ. ಹಳೆಯ ಇತಿಹಾಸ ಭವ್ಯ ಭವಿಷ್ಯವಾಗುತ್ತದೆ.

Valentines-Day-Date

ಮತ್ತೊಂದು ಫೆಬ್ರವರಿ 14 ಬಂತು. ಪ್ರೇಮದ ಕಲ್ಪನೆಗೆ ಭರಪೂರ ಇಂಬು ಕೊಡುವ ಪಶ್ಚಿಮ ಪ್ರೇರಿತ ದಿನ. ಅಲ್ಲಿಂದಿಲ್ಲಿಗೆ ಕೈಲಿ ರೋಸ್ ಹಿಡಿದು ಪ್ರೇಮ ಭಿಕ್ಷೆ ಬೇಡುವ ತರುಣ-ತರುಣಿಯರ ಭರಾಟೆ. ಸಂತಸದ ಸಂಗತಿ ಎಂದರೆ ಈ ಫೆಬ್ರವರಿ 1 ಭಾನುವಾರ! ಶಾಲಾ- ಕಾಲೇಜುಗಳು ಆ ಮಟ್ಟಿಗೆ ನಿರಾಳ.
ಕಳೆದ ವರ್ಷದಿಂದ ಪ್ರೇಮಿಗಳ ದಿನವನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಸಂಕಲ್ಪ ಕೈಗೊಂಡೆವು. ಮಿಶ್ರ ಪ್ರತಿಕ್ರಿಯೆಯಿತ್ತು. ಒಂದೆಡೆ ಪೂರ್ಣ ಸ್ವಾಗತ. ಮತ್ತೊಂದೆಡೆ ಅಚ್ಚರಿ ಮಿಶ್ರಿತ ಜನ. ನಮಗೂ ಅಚ್ಚರಿ ಯಾವಾಗ ಗೊತ್ತೇ? ಕಾಲೇಜುಗಳಲ್ಲಿ ದೇಶಪ್ರೇಮಿಗಳ ದಿನದ ಕುರಿತು ಹೇಳಿ ಭಾರತ ಮಾತೆಯ ಪಟದೆದುರು ರೋಸ್ ಇಟ್ಟು ಆಕೆಯ ಗುಣಗಾನ ಮಾಡೋಣವೆಂದಾಗ ಮುಗಿಲುಮುಟ್ಟುವ ಕರತಾಡನ ಬೀಳುತ್ತಿತ್ತಲ್ಲ ಅದು ತಾರುಣ್ಯದ ದಿಕ್ಕು ತೋರಿಸುತ್ತಿತ್ತು!
ಹೀಗೊಂದು ಕೂಗು ಇಂದಿನದಲ್ಲ. ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಸ್ವಾತಂತ್ರ್ಯವೀರ ಸಾವರ್ಕರರು ಗುಡುಗಿದ್ದರು. ‘ಜರ್ಮನಿ ಶತ್ರುಗಳೆದುರು ಸೋತಿದ್ದು ಅವರ ಬಯೋನೆಟ್ಟುಗಳಿಗಲ್ಲ; ನಮ್ಮದೇ ಕವಿಗಳ ಸಾನೆಟ್ಟುಗಳಿಗೆ’ ಅಂತ. ಅರ್ಥ ಬಲು ಸ್ಪಷ್ಟವಾಗಿತ್ತು. ಕವಿಗಳು ಸೃಜಿಸಬೇಕಾದ್ದು ಶೃಂಗಾರ ಕಾವ್ಯಗಳನ್ನಲ್ಲ ಬದಲಿಗೆ ಕ್ರಾಂತಿ ಗೀತೆಗಳನ್ನು. ತರುಣರ ರಕ್ತ ಬೆಚ್ಚಗಾಗಿಸಬಲ್ಲ ಸಾಹಿತ್ಯಗಳು ಬರಬೇಕು. ಅವು ಮಾತ್ರ ಬಲಾಢ್ಯ ರಾಷ್ಟ್ರಕ್ಕೆ ಪ್ರೇರಕವಾಗಬಲ್ಲವು.
ಹೌದಲ್ಲವೇ ಮತ್ತೇ? ಸಶಕ್ತ-ಸದೃಢವಾಗಿರಬೇಕಾದ ತರುಣಸಮಾಜ ರಾಷ್ಟ್ರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಪ್ರೇಮದ ಭಿಕ್ಷೆ ಬೇಡುತ್ತ ಹಗಲು ಕನಸು ಕಾಣುತ್ತ ಉಳಿದು ಬಿಟ್ಟರೆ ಭವಿಷ್ಯದ ಗತಿ ಏನು? ಹಾಗೆಯೇ ಭಾಘಾ ಜತಿನ್ – ಫಡ್ಕೆ- ಚಾಫೇಕರ್- ಸಾವರ್ಕರ್-ಭಗತ್- ಆಜಾದ್- ಸುಭಾಷರು ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದರೆ ನಾವಿಂದು ಈ ಸ್ಥಿತಿಯಲ್ಲಿರುತ್ತಿದ್ದೆವೇನು? ಗುರುಗೋವಿಂದ ಸಿಂಹರು ಧಾಮರ್ಿಕವಾಗಿದ್ದ ಪಂಥವೊಂದಕ್ಕೆ ಯುದ್ಧೋನ್ಮಾದವನ್ನೂ ತುಂಬಿ ಅದನ್ನು ಖಾಲ್ವಾ ಪಂಥವಾಗಿ ಪರಿವತರ್ಿಸದಿದ್ದರೆ ಇಂದಿನ ದಿನಗಳ ಕಥೇಯೇ ಬೇರೆಯಾಗಿರುತ್ತಿತ್ತು. ಗುರು ತೇಗ್ ಬಹದ್ದೂರರಿಗೆ ಮುಸ್ಲೀಂ ದೊರೆಗಳು ಕೊಟ್ಟ ಕಾಟಗಳ ನೆನಪಿದೆಯೇನು? ಹೋಗಲಿ ಬಾಗಲಕೊಟೆಯ ಹಲಗಲಿಯ ಬೇಡರು ಬಿಳಿಯರ ವಿರುದ್ಧ ಕಾದಾಡುತ್ತ ಹರಿಸಿದ ರಕ್ತ ಮರೆಯುವುದುಂಟೇ? ಸಿಂಧೂರಲಕ್ಷ್ಮಣ ನಂತಹ ವೀರರಯೋಧರು, ಸುರಪುರದ ವೆಂಕಟಪ್ಪನಾಯಕನಂತಹ ದೃಢಮನಸ್ಕರು, ಅಸಾಮಾನ್ಯ ಶೌರ್ಯ ತೋರಿದ ರಾಯಣ್ಣನಂತಹ ಸಾಮಾನ್ಯ ಸೈನಿಕರು… ಓಹ್ ಎಷ್ಟೊಂದು ಜನ ತಮ್ಮ ಬದುಕನ್ನೇ ಧಾರೆ ಎರೆದು ಈ ನಾಡಿಗೆ ಈ ಸ್ವರೂಪ ಕೊಟ್ಟರು. ನಾವು ಅದನ್ನು ಮರೆತು ಕುಳಿತಿರುವುದು ಸರಿಯೇ? ಅವರೆಲ್ಲರ ಕಾರ್ಯದ ಸಮಾಧಿಯ ಮೇಲೆ ನಾವು ಹೊಸ ನಾಡನ್ನು ಕಟ್ಟುವೆವಾ?
ಹಾಗಂತ ಪ್ರೇಮದ ವಿರೋಧಿಗಳಾ ನಾವು? ಕೃಷ್ಣ-ಗೋಪಿಯರ ಪ್ರೇಮದ ಕಥನಗಳನ್ನು ಕೇಳಿ ಬೆಳೆದಿರುವ ಭಾರತೀಯನಿಗೆ ಪ್ರೇಮ ವಜ್ರ್ಯವಲ್ಲವೇ ಅಲ್ಲ. ರಾಮ ಸೀತೆಯನ್ನು ಪ್ರೀತಿಸುತ್ತಿದ್ದ. ಅದಕ್ಕಾಗಿ ರಾವಣನನ್ನು ಸಂಹಾರಗೈದ. ನಮಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೆ ಅವ್ಯಾವುವೂ ರಾಷ್ಟ್ರ ಕಾರ್ಯಕ್ಕಿಂತ ದೂರವಾದುದಲ್ಲ. ನಮ್ಮ ಪ್ರೇಮವೂ ದೈವಿಕವಾದುದು. ಅಲ್ಲಿ ಕಾಮನೆಗಳಿಗಿಂತ ತೀವ್ರವಾದ ಭಾವವಿತ್ತು. ಆಧ್ಯಾತ್ಮಿಕ ತುಡಿತವಿತ್ತು. ಹೀಗಾಗಿಯೇ ಭಾರತದಲ್ಲಿ ಮದುವೆ ಅನ್ನೋದು ಯಾವಾಗಲೂ ತಂದೆ-ತಾಯಿಯರ ನಿಧರ್ಾರವೇ ಆಗಿರುತ್ತಿತ್ತು. ಮಕ್ಕಳು ತಾತ್ಕಾಲಿಕ ಸುಖದ ಬಯಕೆ ಇಟ್ಟುಕೊಂಡು ವಿವಾಹಾಪೇಕ್ಷಿಗಳಾದರೆ ಹಿರಿಯರು ಭವಿಷ್ಯವನ್ನು ಆಲೋಚಿಸಿ ನಿರ್ಣಯ ಕೈಗೊಳ್ಳುತ್ತಿದ್ದರು. ಅದಕ್ಕೆ ಮದುವೆಗಳು ದೀರ್ಘಬಾಳ್ವೆಯಾಗಿರುತ್ತಿದ್ದವು. ಈಗ ಹಾಗಲ್ಲ. ರೋಸ್ ಹಿಡಿದು, ಕಾಡಿ-ಪೀಡಿಸಿ ಪಡಕೊಂಡ ಹುಡುಗಿ-ಹುಡುಗನ ಮೇಲಿನ ಮನಸ್ಸು ಬಲು ಬೇಗ ವಿಮುಖವಾಗುತ್ತದೆ.
ಪಶ್ಚಿಮದ ಸಾಂಸ್ಕೃತಿಕ ಆಕ್ರಮಣ ಅದೆಷ್ಟು ತೀವ್ರವಾಗಿ ಹೊಕ್ಕಿದೆಯೆಂದರೆ, ಕಾಲೇಜುಗಳಲ್ಲಿ ದಾರಿ ತಪ್ಪಿಸುವ ಚಟುವಟಿಕೆಗಳು ಜೋರಾಗುತ್ತಿವೆ. ಹೆಣ್ಣು ಮಕ್ಕಳಂತೂ ತಂದೆ-ತಾಯಿ, ಬಂಧು-ಬಳಗ ಬಿಡಿ, ಪ್ರೇಮದ ನೆಪದಲ್ಲಿ ಪರಂಪರಾಗತವಾಗಿ ಬಂದ ಧರ್ಮವನ್ನೂ ಬಿಡಲು ಸಜ್ಜಾಗಿಬಿಟ್ಟಿರುತ್ತಾರೆ. ಇವೆಲ್ಲಾ ಟಿ.ವಿ, ಸಿನಿಮಾಗಳಲ್ಲಿನ ಶೃಂಗಾರದ ರಸ ಹೆಚ್ಚಾದುದರ ಪರಿಣಾಮವೇ. ದೈಹಿಕ ಆಕರ್ಷಣೆಗಳನ್ನು ಮೀರಿ ನಿಲ್ಲಲಾಗದ ಪರಿಸ್ಥಿತಿಯ ಕಾರಣವೇ!

ತಮೋಗತವಾಗಿರುವ ಮನಸ್ಸನ್ನು ರಜಸ್ಸಿಗೆ ಏರಿಸಬೇಕಿರೋದೇ ಸದ್ಯದ ದೊಡ್ಡ ಸವಾಲು. ಸ್ವಾಮಿ ವಿವೇಕಾನಂದರು ‘ಗೀತೆ ಓದಲು ಬಂದ ತರುಣರನ್ನು ಫುಟ್ ಬಾಲ್ ಆಡು ಆಮೇಲೆ ಗೀತೆ ಓದಿದರಾಯ್ತು’ ಎಂದರಲ್ಲ ಅದು ಇದೇ ಕಾರಣಕ್ಕೇ. ತಮಸ್ಸಿನ ಭಾವದಿಂದ ಗೀತೆ ಓದಿದರೆ ಅದು ಅಪಾರ್ಥವನ್ನೇ ಕೊಡುತ್ತದೆ. ಸ್ವಲ್ಪ ಮೈ ಕೈ ಗಟ್ಟಿಮಾಡಿಕೊಳ್ಳುವ ನೆಪದಲ್ಲಿ ರಜಸ್ಸನ್ನು ಜಾಗೃತಗೊಳಿಸಿಕೊಂಡರೆ ಹೊಸ ಕಾರ್ಯಕ್ಕೆ ಮನಸ್ಸು ಅಣಿಗೊಳ್ಳುತ್ತದೆ.
ಹೀಗಾಗಿಯೇ ಪ್ರೇಮಿಗಳ ದಿನವನ್ನು ದೇಶ ಪ್ರೇಮಿಗಳ ದಿನವೆಂದು ಆಚರಿಸುವ ಸಂಕಲ್ಪ. ಈ ನೆಪದಲ್ಲಿ ತರುಣರು ಒಂದಷ್ಟು ಮಹಾಪುರುಷರನ್ನು ಸ್ಮರಿಸಿಕೊಂಡು ಅವರ ಬಗ್ಗೆ ಓದಿಕೊಂಡರೆ, ನಾಲ್ಕು ಮಾತುಗಳಾಡಿದರೆ ಕೊನೆಗೆ ಅವರ ಚಿತ್ರವನ್ನಾದರೂ ಎಫ್ ಬಿಯಲ್ಲಿ, ವಾಟ್ಸಪ್ನಲ್ಲಿ ಹರಿದಾಡಿಸಿದರೆ ರಕ್ತದ ಕಣಕಣಗಳೂ ಚುರುಕಾಗುತ್ತವೆ. ಹಳೆಯ ಇತಿಹಾಸ ಭವ್ಯ ಭವಿಷ್ಯವಾಗುತ್ತದೆ.
ಈ ಬಾರಿಯಂತೂ ತರುಣರಿಗೆ ನೆನಪಿಸಿಕೊಳ್ಳಲು ಯೋಗ್ಯ ವ್ಯಕ್ತಿಯೇ ಇದ್ದಾರೆ. ಸುಭಾಷ್ ಚಂದ್ರ ಬೋಸರು! ಸ್ವಾತಂತ್ರ್ಯ ಬಂದ ಸುಮಾರು 7 ದಶಕಗಳ ನಂತರ ಅವರ ಸಾವಿನ ಕುರಿತಂತಹ ಗುಪ್ತ ವರದಿ ಬಿಡುಗಡೆಯಾಗಿದೆ. ಶ್ರೇಷ್ಠ ನಾಯಕನೊಬ್ಬನ ಸಾವನ್ನು ಮುಚ್ಚಿಟ್ಟು ರಾಜ್ಯಭಾರ ನಡೆಸುವ ದಯನೀಯ ಸ್ಥಿತಿ ಭಾರತಕ್ಕೆ ಯಾಕಾದರೂ ಬಂತು ಎನ್ನುವ ಪ್ರಶ್ನೆ ಈ ಹೊತ್ತಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಜವಹರ್ ಲಾಲ್ ನೆಹರೂ ಬ್ರಿಟೀಷರಿಗೆ ಪತ್ರ ಬರೆದು ಸುಭಾಷರನ್ನು ರಾಜಕೀಯ ಕೈದಿಯೆಂದು ಕರೆದು ಬೇಗ ಬಂಧಿಸಿರೆಂದು ತಾಕೀತು ಮಾಡಿ ಪತ್ರ ಬರೆದಿದ್ದೇಕೆ? ಸುಭಾಷರ ಐ.ಎನ್.ಎ ನಿಧಿಯನ್ನು ಕಬಳಿಸಿದವರನ್ನೇ ಸಕರ್ಾರದ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿದ್ದೇಕೆ?
ಹೋಗಲಿ. ಸ್ವಾತಂತ್ರ್ಯ ಬರುವಲ್ಲಿ ನೌಕಾ ಬಂಡಾಯದ ಪಾತ್ರವೇನು? ಶಾಂತಿ-ಕ್ರಾಂತಿಗಳ ಮಿಶ್ರಣದಲ್ಲಿ ಸ್ವಾತಂತ್ರ್ಯ ಗಳಿಕೆಗೆ ಕ್ರಾಂತಿಯ ಪಾತ್ರವೇನಿತ್ತು? ಇವೆಲ್ಲ ಕಾಡುವ ಪ್ರಶ್ನೆಗಳಲ್ಲವೇ? ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹ ಪ್ರಶ್ನೆಗಳನ್ನು ಕೇಳಲಿಲ್ಲವೆಂದೇ ಆಳುವ ಧಣಿಗಳು ಚೆನ್ನಾಗಿ ಮೆರೆದುಬಿಟ್ಟರು. ತಾರುಣ್ಯ ಮೈಮರೆತುಕೂತಿದ್ದರಿಂದಲೇ ನಾವು ದಾರಿ ತಪ್ಪಿ ಬಿಟ್ಟೆವು.
ಇದೋ ಸಮಯ ಬಂದಿದೆ. ಪ್ರೇಮ-ಪ್ರೀತಿ ಎಲ್ಲವೂ ಇರಲಿ. ಆದರೆ ಯಾವುದೂ ರಾಷ್ಟ್ರದ ಹಿತವನ್ನು ಮೀರದಂತಿರಲಿ. ಪಶ್ಚಿಮದ ಸಂಸ್ಕೃತಿಗೆ ಬಲಿಯಾಗಿ ಭಾರತ ಮಾತೆಯನ್ನು ಕಳೆದುಕೊಂಡ ಜನಾಂಗವಾಗಿ ನಾವಾದರೂ ಆಗದಿರೋಣ.
ನಿಮಗೆಲ್ಲರಿಗೂ ದೇಶಪ್ರೇಮಿಗಳ ದಿನದ ಶುಭಾಶಯಗಳು!

2 thoughts on “ಇನ್ನಾದರೂ ಪ್ರಶ್ನೆ ಕೇಳಲಿಲ್ಲವೆಂದರೆ ಹೇಗೆ?

  1. ತಮಗರಿವಿರದೆಯೇ ತಮ್ಮ ಅಸ್ಥಿತ್ವವನ್ನು ಅತಿ ಸಹಜ ಎನಿಸುವ ರೀತಿಯಲ್ಲಿ ಕಳೆದು ಕೊಳ್ಳುತ್ತಿರುವ ಯುವ ಜನರ ಪ್ರಜ್ಞೆಯನ್ನು ಜಾಗ್ರುತಗೊಳಿಸುವಲ್ಲಿ ಕಾರ್ಯಕ್ರಮ ಯಶಸ್ಸನ್ನು ಸಾಧಿಸಿತ್ತು… ಯಾವುದು ಸರಿ ಯಾವುದು ತಪ್ಪು… ಯಾವುದರ ಸ್ವೀಕೃತಿ ಹೇಗಿರಬೇಕು ಎಂಬ ವಿವೇಚನೆ ಇಲ್ಲದೆ ಮನಸ್ಸಿಗೆ ಹಿತವೆನಿಸುವ ಎಲ್ಲ ಹೊಸ ವಿಚಾರಗಳನ್ನು ಮುಕ್ತವಾಗಿ ಅನುಕರಿಸುವ ಒಂದು ವರ್ಗವನ್ನು(ಇಡಿ ಯುವ ಸಮೂಹ ಎನ್ನುವುದು ಪ್ರಸ್ತುತ) ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಅರ್ಥಪೂರ್ಣವಾಗಿ ಜರುಗಿತು….. ಅಲ್ಲಿ ನೆರೆದ ಜನ ಸಾಗರವನ್ನು ಹಾಗು ಕಾರ್ಯಕ್ರಮಕ್ಕೆ ದೊರೆತ ಅಭೂತಪೂರ್ವ ಸ್ಪಂದನೆಯನ್ನು ನೋಡಿದಾಗ ಖಂಡಿತ ಭವಿಷ್ಯ ಭಾರತದ ವಿಶ್ವ ಗುರುವಿನ ಕಲ್ಪನೆ ಸಾಕಾರವಾಗುವ ದಿಕ್ಕಿನೆಡೆಗೆ ಸಾಗುತ್ತಿರುವುದು ಮನವರಿಕೆಯಾಗುತ್ತದೆ..

    ಭರವಸೆಯ ಬೆಳಕು ಮೂಡುತ್ತಿದೆ…

    ನಮ್ಮಂತೆಯೇ ಯೋಚಿಸುವ ಮನಸ್ಥಿತಿವುಳ್ಳ ಹಲವು ಮಂದಿಯನ್ನು ನೋಡಿ ಖುಷಿಯಾಗಿತ್ತು.. ಆಶಾಭಾವನೆ ಮತ್ತಷ್ಟು ಗಟ್ಟಿಯಾಯ್ತು….

    ಧನ್ಯವಾದಗಳೊಂದಿಗೆ…. ನಮಸ್ಕಾರಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s