ಮಹತ್ವಾಕಾಂಕ್ಷೆಯ ಅಲೆಗ್ಸಾಂಡರ್ ಭಾರತದಲ್ಲಿ ಬೆತ್ತಲಾದ!!

ಪುರೂರವ ಸೋತು ಗೆದ್ದಿದ್ದ. ಭಾರತೀಯ ಖಡ್ಗಗಳ ಸಾಮಥ್ರ್ಯವನ್ನು ಗ್ರೀಕರಿಗೆ ತೋರಿಸಿದ್ದ. ಇಲ್ಲಿಂದಾಚೆಗೆ ಅಲೆಗ್ಸಾಂಡರನ ಸೇನೆ ಅನೇಕ ಬಾರಿ ಸೋಲಿನ ದವಡೆಗೆ ಸಿಕ್ಕು ಪಾರಾಗಿ ಬಂತು. ಯಾವ ಸಣ್ಣ ರಾಜ್ಯವನ್ನೂ ಅವನ ಪಡೆ ಘೋರ ಕದನವಿಲ್ಲದೇ ಗೆಲ್ಲಲಾಗಲೇ ಇಲ್ಲ. ಕೈಕಾಲು ಕಳಕೊಂಡು ಶಾಶ್ವತವಾಗಿ ಯುದ್ಧ ಮಾಡಲಾಗದ ಸ್ಥಿತಿಗೆ ಅನೇಕರು ತಲುಪಿದ್ದರು. ಅವರೆಲ್ಲರನ್ನೂ ಮರಳಿ ಕಳಿಸಿ ಹೊಸ ಪಡೆಯನ್ನು ಗ್ರೀಕ್ನಿಂದ ಕರೆಸಿಕೊಂಡಿದ್ದ. ಅಷ್ಟಾದರೂ ಗ್ರೀಕ್ ಪಡೆಯಲ್ಲಿ, ಸೈನಿಕರ ಮನಸ್ಸಿನಲ್ಲಿ ಕವಿಯುತ್ತಿದ್ದ ಸೋಲಿನ ಕಾಮರ್ೋಡದ ಛಾಯೆಯನ್ನು ಸರಿಸಲು ಆತನಿಗೆ ಸಾಧ್ಯವಾಗಲೇ ಇಲ್ಲ.

12ಅಲೆಗ್ಸಾಂಡರ್ ಭಾರತವನ್ನು ಗೆಲ್ಲಬೇಕೆಂದು ಬಂದುದು ಸುಮ್ಮ ಸುಮ್ಮನೆ ಅಲ್ಲ. ಪೀಳಿಗೆಯಿಂದ ಪೀಳಿಗೆಗೆ ಅವನ ನೆಲದಲ್ಲಿ ಹರಡಿದ್ದ ಭಾರತದ ಕಥೆಗಳ ಪ್ರಭಾವ ಅದು. ಗ್ರೀಕರ ಪೂರ್ವಜರು ಭಾರತೀಯರೇ ಎಂಬುದನ್ನು ಅಲ್ಲಿನ ಜನ ಬಲುವಾಗಿ ನಂಬುತ್ತಾರೆ. ಕೆಲವರು ಅನುಮಾನ ವ್ಯಕ್ತಪಡಿಸುವಂತೆ ಕೃಷ್ಣನ ದ್ವಾರಕೆ ಮುಳುಗಿದಾಗ ವಲಸೆ ಹೋದ ಜನರಿವರು. ಅವರ ಪುರಾಣ ಗ್ರಂಥಗಳು, ಕಲ್ಪನೆಗಳೂ ಭಾರತೀಯ ಚಿಂತನೆಗಳಿಗೆ ಬಲು ಹತ್ತಿರ. ಅವರು ಪೂಜಿಸುವ ‘ಅಮುನ್’ ಎಂಬ ದೇವತೆ ನಮ್ಮಲ್ಲಿನ ನಾರಾಯಣನನ್ನು ಹೋಲುವಂಥದ್ದು. ಅವರ ಪಾಲಿಗೆ ‘ಅಮುನ್ ರಾ’ ಎನ್ನುವುದು ನಮ್ಮಲ್ಲಿನ ‘ಸೂರ್ಯ ನಾರಾಯಣ’ನಂತೆ! ನಾರಾಯಣನ ಪಾದಗಳಿಂದ ಗಂಗೆ ಉದ್ಭವವಾಗುವಳೆಂದು ನಾವು ಭಾವಿಸುವಂತೆ ಅವರ ಗಂಗೆಯಾದ ನೈಲ್ ಅಮುನ್ನ ಪಾದಗಳಿಂದ ಉದ್ಭವಿಸಿದವಳು.

ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾರತದ ಬಗ್ಗೆ ಕೇಳಿ-ತಿಳಿದು, ಹೇಳುವ ಕೆಲಸ ಮಾಡುತ್ತಲೇ ಇದ್ದರು ಗ್ರೀಕರು. ಪೈಥಾಗರೋಸ್ ಭಾರತಕ್ಕೆ ಬಂದು ಅಧ್ಯಯನ ನಿರತನಾಗಿದ್ದು, ಇಲ್ಲಿನ ಶುಲ್ಬ ಸೂತ್ರವನ್ನು ತನ್ನ ನಾಡಿನಲ್ಲಿ ವಿವರಿಸಿದ್ದು. ಮುಂದೆ ಅದೇ ಆತನ ಸಿದ್ಧಾಂತವಾಗಿ ಜಗದ್ವಿಖ್ಯಾತವಾಗಿದ್ದು ಈಗ ಇತಿಹಾಸ. ಅರಿಸ್ಟಾಟಲ್ನಂತಹ ಶ್ರೇಷ್ಠ ತತ್ತ್ವಶಾಸ್ತ್ರಜ್ಞ ತನ್ನ ಶಿಷ್ಯರಿಗೆ ಭಾರತವನ್ನು ಭೇಟಿಮಾಡಿ ಎಂದು ಹೇಳುತ್ತಿದ್ದುದು ಕಾರಣವಿಲ್ಲದೇನಲ್ಲ. ಸ್ವತಃ ಅರಿಸ್ಟಾಟಲ್ನ ಗುರು ಸಾಕ್ರಟೀಸ್ ಭಾರತದ ಬೌದ್ಧಿಕ ಸಂಪತ್ತಿಗೆ ಬೆರಗಾಗಿದ್ದನೆಂದು ಗ್ರೀಕ್ ಇತಿಹಾಸಕಾರರೇ ಉಲ್ಲೇಖ ಮಾಡುತ್ತಾರೆ. ಇಡಿಯ ಗ್ರೀಕ್ ಭಾರತದ ಕುರಿತಂತೆ ಕನಸುಕಂಗಳಿಂದ ಕೂಡಿತ್ತು. ಇಲ್ಲಿನ ಸಂಪತ್ತು, ವಿಜ್ಞಾನ-ತಂತ್ರಜ್ಞಾನ, ತತ್ತ್ವ-ದರ್ಶನ, ಸಾಹಸಪ್ರಿಯತೆಗಳ ಕುರಿತಂತೆ ದಂತಕಥೆಗಳೇ ಹರಡಿದ್ದವು. ಇಂತಹ ರಾಷ್ಟ್ರವನ್ನು ತನ್ನ ಅಧೀನವೆಂದು ಹೇಳಿಕೊಳ್ಳಲು ಯಾವ ರಾಜನಿಗೆ ತಾನೇ ಇಷ್ಟವಿರದು ಹೇಳಿ. ಅಲೆಗ್ಸಾಂಡರ್ ಕೂಡ ಆ ಕಾರಣಕ್ಕಾಗಿಯೇ ಭಾರತವನ್ನು ತನ್ನ ಸಾಮ್ರಾಜ್ಯದ ತೆಕ್ಕೆಯೊಳಗೆ ಎಳೆದುಕೊಳ್ಳಲು ಆಸೆಪಟ್ಟ.
ಇದು ಕ್ರಿ.ಪೂ. ನಾಲ್ಕನೇ ಶತಮಾನದ ಘಟನೆ. ಆಗಿನ್ನೂ ಇಂದಿನ ಇಂಗ್ಲೆಂಡು, ಫ್ರಾನ್ಸು, ಜರ್ಮನಿಗಳೆಲ್ಲ ಹುಟ್ಟಿಯೇ ಇರಲಿಲ್ಲ. ಸ್ಪಾಟರ್ಾ, ಅಥೆನ್ಸ್ ಥರದ ಚಿಕ್ಕ ಚಿಕ್ಕ ರಾಜ್ಯಗಳೇ ತಮ್ಮ-ತಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಪ್ರಗತಿ ಸಾಧಿಸಿದ್ದವು. ಆಗಲೇ ಪಷರ್ಿಯಾ ಅಗಾಧವಾಗಿ ಬೆಳೆದು ನಿಂತಿದ್ದು. ಅದನ್ನು ಎದುರಿಸಿ ನಿಲ್ಲಬೇಕೆಂದರೆ ಗ್ರೀಕರ ಸಣ್ಣ ಪುಟ್ಟ ರಾಜ್ಯಗಳು ಒಂದಾಗಿ ನಿಲ್ಲಬೇಕಾದ ಅನಿವಾರ್ಯತೆ ಇದ್ದೇ ಇತ್ತು. ಮೆಸಿಡೋನಿಯಾದ ರಾಜ ಫಿಲಿಪ್ ತಡಮಾಡಲಿಲ್ಲ. ಗ್ರೀಕ್ ಗಣರಾಜ್ಯಗಳ ಮೇಲೆ ಏರಿ ಹೋಗಿ ಏಕಚಕ್ರಾಧಿಪತ್ಯ ಸ್ಥಾಪಿಸಿದ. ಆದರೆ ಮುಂದಿನ ಆಸೆಯನ್ನು ಪೂರ್ಣಗೊಳಿಸುವ ಮುನ್ನ ವಿಧಿವಶನಾದ. ಆಗ ಪಟ್ಟಕ್ಕೆ ಬಂದವನೇ ಫಿಲಿಪ್ನ ಮಗ ಅಲೆಗ್ಸಾಂಡರ್! ಚಿಕ್ಕ ವಯಸ್ಸಿನಲ್ಲಿಯೇ ಗ್ರೀಕರ ದೊರೆಯಾಗಿ ಅಧಿಕಾರ ಪಡೆದ ಅಲೆಗ್ಸಾಂಡರ್ ತಂದೆಗಿಂತ ಹೆಚ್ಚು ಶಕ್ತಿವಂತನೂ, ಚತುರಮತಿಯೂ, ಮಹತ್ವಾಕಾಂಕ್ಷಿಯೂ ಆಗಿದ್ದ. ಇವನ ಪ್ರೇರಣೆಯಿಂದಲೇ ಗ್ರೀಕ್ ಸೈನ್ಯ ಆಕ್ರಮಕಗೊಂಡಿದ್ದು. ದೇಶಭಕ್ತಿಯ ನಶೆ ಏರಿಸಿ ಅದನ್ನು ಸಾಮ್ರಾಜ್ಯ ವಿಸ್ತರಣೆಗೆ ಬಳಸುವ ಸ್ಪಷ್ಟಯೋಜನೆ ಅವನ ತಲೆಯಲ್ಲಿ ಯಾವಾಗಲೂ ಇತ್ತು. ಹೀಗಾಗಿಯೇ ಆತ ತನ್ನ ಶಿಸ್ತುಬದ್ಧ, ವ್ಯವಸ್ಥಿತವಾದ ಸೇನೆಯೊಂದಿಗೆ ಪಷರ್ಿಯಾದ ಮೇಲೆ ಮುಗಿಬಿದ್ದ. ಅಲ್ಲಿನ ಸೇನೆ ವಿಶಾಲವಾದುದಾಗಿತ್ತಾದರೂ ಹರಡಿ-ಹಂಚಿಹೋಗಿತ್ತು. ಗ್ರೀಕರ ಯೋಜನಾಪೂರ್ಣ ದಾಳಿಯೆದುರು ನಿಲ್ಲಲಾಗದೇ ಪಷರ್ಿಯನ್ ಸೇನೆ ಅರಬೆಲಾ ಕದನದಲ್ಲಿ ಶರಣಾಯಿತು. ಈಗ ಅಲೆಗ್ಸಾಂಡರ್ ತನ್ನ ಸಾಮ್ರಾಜ್ಯದ ಗಡಿಯನ್ನು ಪಷರ್ಿಯಾವರೆಗೂ ವಿಸ್ತರಿಸಿಕೊಂಡಿದ್ದ.
ಸಾಮ್ರಾಜ್ಯ ವಿಸ್ತಾರದ ಅಫೀಮನ್ನು ಅಲೆಗ್ಸಾಂಡರ್ ತಿಂದಾಗಿತ್ತು. ಪಷರ್ಿಯಾ ಸಾಮ್ರಾಜ್ಯವನ್ನೇ ಮೆಟ್ಟಿ ನಿಂತವನಿಗೆ ಭಾರತದ ಕನಸುಗಳು ಬೀಳಲಾರಂಭಿಸಿದ್ದವು. ಗಂಗೆಯವರೆಗಿನ ವಿಸ್ತಾರವಾದ ಗ್ರೀಕ್ನ ಕಲ್ಪನೆಯಿಂದ ಅವನು ಅಸುಖಿಯಾಗಿಬಿಟ್ಟಿದ್ದ. ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಜಾಯಮಾನ ಅವನದ್ದು. ತನ್ನ ಸೇನೆಯಲ್ಲಿ ತಾರುಣ್ಯ-ಉತ್ಸಾಹ-ಕೌಶಲ್ಯವುಳ್ಳ ಒಂದೂಕಾಲುಲಕ್ಷ ಜನ ಸೈನಿಕರನ್ನು ಗುರುತಿಸಿದ. ಹದಿನೈದು ಸಾವಿರ ಜನರ ಅಶ್ವದಳ ಕಟ್ಟಿದ. ನೌಕಾಪಡೆಗೆ ಬಲ ತುಂಬಿದ. ಈ ಬೃಹತ್ ಸೈನ್ಯ ಪಡೆಯೊಂದಿಗೆ ಆತ ಊರಿಂದೂರಿಗೆ ಸಾಗುತ್ತ ನಡೆದಿದ್ದರೆ ಜನಸಾಮಾನ್ಯರ ಎದೆಯೊಡೆಯುತ್ತಿತ್ತು. ನೋಡುನೋಡುತ್ತಲೇ ಅವರೆಲ್ಲ ಅಲೆಗ್ಸಾಂಡರ್ನನ್ನು ಸಾಕ್ಷಾತ್ ‘ದೇವರ ಮಗ’ ಎಂದು ಭಾವಿಸಲಾರಂಭಿಸಿದರು. ಗ್ರೀಕ್ ದೇವತೆ ಜಿಯಸ್ನ ಮಗ ಏನು ಬೇಕಿದ್ದರೂ ಸಾಧಿಸಬಲ್ಲ; ಆತ ಸರ್ವಶಕ್ತ, ಸವರ್ಾಂತಯರ್ಾಮಿ ಎಂದು ಅವರು ಆಲೋಚಿಸಲಾರಂಭಿಸಿದರು. ಸ್ವತಃ ಅಲೆಗ್ಸಾಂಡರನಿಗೆ ಆ ಭ್ರಮೆ ಆವರಿಸಿಬಿಟ್ಟಿತ್ತು.
ಈ ಹೊತ್ತಿನದೇ ಅನೇಕ ಕಥೆಗಳು ಇತಿಹಾಸದುದ್ದಕ್ಕೂ ಹರಡಿಕೊಂಡಿವೆ. ಅಲೆಗ್ಸಾಂಡರ್ ಭಾರತವನ್ನು ಗೆದ್ದು ಜಗದ್ವಿಜೇತಾ ಆಗುವ ತನ್ನ ಬಯಕೆಯನ್ನು ಗುರುಗಳಾದ ಅರಿಸ್ಟಾಟಲ್ರ ಮುಂದಿಟ್ಟ. ಭಾರತದಿಂದ ತರಬೇಕಾದ ಉಡುಗೊರೆಗಳ ಕುರಿತಂತೆ ಪ್ರಶ್ನಿಸಿದ. ಅರಿಸ್ಟಾಟಲ್ರು ಭರತ ಭೂಮಿಯ ಮಣ್ಣು, ಗಂಗಾಜಲ ಮತ್ತು ತಪಸ್ವಿಯೋರ್ವನನ್ನು ಕರೆತರುವಂತೆ ಕೇಳಿಕೊಂಡರಂತೆ. ಯುದ್ಧೋನ್ಮಾದಿ ಅಲೆಗ್ಸಾಂಡರನಿಗೆ ಇದು ಅರ್ಥವಾಗಲಿಲ್ಲ. ಭಾರತದ ಮೇಲೆ ದಂಡೆತ್ತಿ ನಡೆದೇ ಬಿಟ್ಟ.
ಆಗೆಲ್ಲ ಭಾರತ ಪಷರ್ಿಯಾದ ಗಡಿಯವರೆಗೂ ವಿಸ್ತಾರವಾಗಿತ್ತು. ಇಂದಿನ ಅಫ್ಘಾನಿನ್ತಾನ ಗಾಂಧಾರವೆಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಭಿನ್ನ ಭಿನ್ನ ಗಣರಾಜ್ಯಗಳು ಸ್ವತಂತ್ರವಾಗಿ ಆಳಲ್ಪಟ್ಟು ಸುಭಿಕ್ಷೆಯಿಂದ ಕೂಡಿದ್ದವು. ಅಲೆಗ್ಸಾಂಡರನ ದೈತ್ಯ ಪಡೆ ಜಗತ್ತನ್ನೇ ನಡುಗಿಸುವಂತೆ ದಾಪುಗಾಲಿಡುತ್ತ ಭಾರತದ ಗಡಿಯೊಳಕ್ಕೆ ಬಂದೊಡನೆ ಗಡಿ ಭಾಗದ ಗಣರಾಜ್ಯಗಳು ಬೆಂಡಾದವು. ಅಲೆಗ್ಸಾಂಡರ್ನ ಸೇನೆಗೆ ವಿಜಯದ ಅಮಲು. ಆ ಉನ್ಮತ್ತ ಸ್ಥಿತಿಯಲ್ಲೂ ಅವರು ಭಾರತದ ಹಿರಿಮೆಯನ್ನು ಮರೆಯಲಿಲ್ಲ. ಇಲ್ಲಿ ನೆಲೆಸಿದ್ದ ತಮ್ಮ ಪೂರ್ವಜರ ಕುರಿತು ಅವರಿಗೆ ಗೌರವ ಇದ್ದೇ ಇತ್ತು. ಹೀಗಾಗಿ ಇಲ್ಲಿ ಗ್ರೀಕರ ಪೂವರ್ಿಕರೆಂದು ಹೇಳಿಕೊಳ್ಳುವ ಸಣ್ಣ ಬುಡಕಟ್ಟಿನೊಂದಿಗೆ ಸಂಧಿಸಿದೊಡನೆ ಇಡಿಯ ಸೇನೆ ಆ ಕೆಲವು ದಿನಗಳ ಕಾಲ ಯುದ್ಧವನ್ನೇ ನಿಲ್ಲಿಸಿ ಹಬ್ಬವನ್ನು ಆಚರಿಸಿತು.
ಅಲ್ಲಿಂದ ಮುಂದುವರಿದ ಗ್ರೀಕ್ ಸೇನೆ ತಕ್ಷಶಿಲೆಯ ಎದುರಿಗೆ ನಿಂತಿತು. ಅಲ್ಲಿನ ರಾಜ ಅಂಭಿ ಯಾವ ಪ್ರತಿರೋಧವನ್ನೂ ವ್ಯಕ್ತಪಡಿಸದೇ ಶರಣಾಗತನಾಗಿಬಿಟ್ಟ. ಅವನೇ ಪಷರ್ಿಯಾ ಗೆದ್ದ ಅಲೆಗ್ಸಾಂಡರನನ್ನು ಆಹ್ವಾನಿಸಿದ್ದಿರಬಹುದೆಂಬ ಗುಮಾನಿಯನ್ನೂ ಕೆಲವು ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ. ಅಂಭಿಯ ಈ ಹೇಡಿತನ ಭಾರತೀಯ ರಾಜರುಗಳನ್ನು ಕೆಣಕಿಬಿಟ್ಟಿತ್ತು. ಸೇನೆ ಬಲಾಢ್ಯವಾಗಿದ್ದರೇನು? ಹೋರಾಟವಿಲ್ಲದೇ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡಲಾರೆವೆಂದು ನಿಶ್ಚಯಿಸಿಬಿಟ್ಟಿತು ಭಾರತ. ಪುರೂರವ ತಕ್ಷಶಿಲಾದ ಪಕ್ಕದಲ್ಲಿಯೇ ಇದ್ದ. ಅಂಭಿಯೊಂದಿಗೆ ಅವನ ತಿಕ್ಕಾಟ ಇದ್ದೇ ಇತ್ತು. ಆದರೆ ಈಗ ಅಂಭಿ ಅಲೆಗ್ಸಾಂಡರ್ನೊಂದಿಗೆ ಸೇರಿ ಪಿತೂರಿ ನಡೆಸಿರುವ ಸಂಗತಿ ದೃಗ್ಗೋಚರ. ಅಲೆಗ್ಸಾಂಡರ್ ಅಕ್ಕಪಕ್ಕದ ಎಲ್ಲ ರಾಜ್ಯಗಳಿಗೂ ಶರಣಾಗುವ ಆದೇಶ ಕಳಿಸಿದ್ದ. ಅದು ಪುರೂರವನಿಗೂ ಬಂದಿತ್ತು. ಆತ ಧಿಕ್ಕರಿಸಿದ. ಕದನ ಭೂಮಿಯಲ್ಲಿಯೇ ನಿರ್ಣಯವಾಗಲೆಂದು ತನ್ನ ಸೇನೆ ಸಜ್ಜುಗೊಳಿಸಲಾರಂಭಿಸಿದ.
ಪುರೂರವ ಆನೆ ಮತ್ತು ರಥಗಳ ಮೇಲೆ ನಿರ್ಭರವಾಗಿದ್ದ. ಅಲೆಗ್ಸಾಂಡರನ ಸೇನೆ ಬಲಾಢ್ಯ ಅಶ್ವದಳದ ಆಧಾರದ ಮೇಲೆ ನಿಂತಿತ್ತು. ಇವರಿಬ್ಬರ ಸೇನೆಯನ್ನೂ ಬೇರ್ಪಡಿಸಿದ್ದು ಝೀಲಂ ನದಿ. ಮಹಾಕದನಕ್ಕೆ ತಯಾರಿ ನಡೆಯುತ್ತಿರುವಾಗಲೇ ನದಿಯ ಇಕ್ಕೆಲಗಳಲ್ಲಿ ಧೋ ಧೋ ಮಳೆ ಸುರಿಯಲಾರಂಭಿಸಿತು. ಅಲೆಗ್ಸಾಂಡರ್ ಚಡಪಡಿಸಲಾರಂಭಿಸಿದ. ಪುರೂರವನಿಗೆ ಹೆಚ್ಚು ಸಮಯ ಕೊಟ್ಟಷ್ಟೂ ಹೆಚ್ಚು ತಯಾರಿ ಮಾಡಿಕೊಳ್ಳುತ್ತಾನೆಂಬುದು ಅವನಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅಂಭಿಯ ಸಹಕಾರ ಪಡೆದ. ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಸಲೀಸಾದ ಮಾರ್ಗ ಅರಸಿದ. ನದಿಯ ಹರಿವು ಕಡಿಮೆಯಿದ್ದ ಸ್ಥಳದಿಂದ ತನ್ನ ಸೇನೆಯನ್ನು ಅತ್ತಲಿನ ದಡಕ್ಕೆ ನುಗ್ಗಿಸಿದ.

13
ಪುರೂರವ ಇದನ್ನೆಣಿಸಿರಲಿಲ್ಲ. ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ನೆಲವೆಲ್ಲ ಅಂಟಿದಂತಾಗಿ ರಥ ಮತ್ತು ಆನೆಗಳು ಅಪೇಕ್ಷೆಗೆ ತಕ್ಕಂತೆ ರಣಾಂಗಣದಲ್ಲಿ ಸಾಧನೆ ತೋರಲಿಲ್ಲ. ಆದರೂ ಪುರೂರವನ ಕೆಚ್ಚಿಗೆ ಬರವಿರಲಿಲ್ಲ. ಆತ ಮನದಣಿಯೆ ಕಾದಾಡಿದ. ಆನೆಯ ಮೇಲೆ ಕುಳಿತು ಗ್ರೀಕ್ ಸೇನೆಗೆ ತಡೆಗೋಡೆಯಾಗಿಯೇ ನಿಂತು ಬಡಿದಾಡಿದ. ವೀರಾಧಿವೀರನೆನಿಸಿಕೊಂಡಿದ್ದ ಅಲೆಗ್ಸಾಂಡರನೂ ಬೆರಗಾಗುವಂತಹ ಹೋರಾಟ ಅವನದ್ದು. ಆದರೇನು? ಗ್ರೀಕರ ಕರಗದ ಸೇನೆಯ ಕಾರಣದಿಂದಾಗಿ ಅಲೆಗ್ಸಾಂಡರನ ಕೈ ಮೇಲಾಗಿತ್ತು. ಒಂದು ವಿಕಟ ಸನ್ನಿವೇಶದಲ್ಲಿ ಶತ್ರುಪಡೆಯ ದಾಳಿಗೆ ಬಲುವಾಗಿ ಘಾಸಿಗೊಂಡ ಪುರೂರವ ಆನೆಯ ಮೇಲಿಂದ ಕುಸಿದು ಬಿದ್ದ. ಕದನದಲ್ಲಿ ಗ್ರೀಕ್ ಪಡೆಗೆ ಗೆಲುವಾಯ್ತು.
ಆಮೇಲಿನದ್ದೆಲ್ಲಾ ನಾವು ಇತಿಹಾಸದ ಪಠ್ಯದಲ್ಲಿ ಓದಿರುವಂಥದ್ದೇ. ಪುರೂರವನನ್ನು ಬಂಧಿಸಿ ದೊರೆಯೆದುರು ನಿಲ್ಲಿಸಲಾಯ್ತು. ಆತ ಪ್ರಶ್ನೆ ಕೇಳಿದನಂತೆ, ‘ನಾನು ನಿನ್ನ ಹೇಗೆ ನೋಡಿಕೊಳ್ಳಬೇಕೆಂದು ಬಯಸುವೆ?’ ಪುರೂರವ ಜಬರ್ದಸ್ತಿನಿಂದಲೇ ಉತ್ತರಿಸಿದನಂತೆ ‘ರಾಜನಂತೆ’. ಬಹುಶಃ ‘ಕೈದಿಯಂತಲ್ಲ. ನಿನ್ನೊಂದಿಗೆ ಸಮ-ಸಮಕ್ಕೆ ಕಾದಾಡಿದ ರಾಜನಂತೆ ಗೌರವಿಸು’ ಎಂಬ ಅಂತರಾರ್ಥ ಇದ್ದಿರಬೇಕು. ಈ ಉತ್ತರದಿಂದ ಪ್ರೇರೇಪಿತನಾದ ಅಲೆಗ್ಸಾಂಡರ್, ಪುರೂರವನನ್ನು ಗೌರವದಿಂದ ಬಿಳ್ಕೊಟ್ಟು ರಾಜ್ಯವನ್ನೂ ಮರಳಿಸಿದನಂತೆ. ಸಾವರ್ಕರರು ಈ ಐತಿಹಾಸಿಕ ಕಥನವನ್ನು ಆಡಿಕೊಂಡು ನಗುತ್ತಾರೆ. ಕನಸಲ್ಲಿ ಮಾಡಿದ ವಾಗ್ದಾನಕ್ಕೆ ರಾಜ್ಯವನ್ನೇ ಬಿಟ್ಟ ಹರಿಶ್ಚಂದ್ರನಂಥವನಲ್ಲ ಅಲೆಗ್ಸಾಂಡರ್ ಎಂದು ಲೇವಡಿ ಮಾಡುತ್ತಾರೆ.
ಹೌದು. ಅಲೆಗ್ಸಾಂಡರ್ಗೆ ದೂರ ದೃಷ್ಟಿಯಿತ್ತು. ಪುರೂರವನ ರಾಜ್ಯ ಸ್ವಾಭಿಮಾನಿಗಳದ್ದು. ಅವನ ಪ್ರಜೆಗಳು ಅಂಭಿಯ ಪ್ರಜೆಗಳಂತಲ್ಲ. ಪುರೂರವನ ಕೈಯಿಂದ ರಾಜ್ಯ ಕಸಿದು ತನ್ನ ಪ್ರತಿನಿಧಿಯ ಕೈಲಿಟ್ಟರೆ ಈ ಜನರೆಲ್ಲ ದಂಗೆಯೇಳುವುದು ಖಾತ್ರಿ. ಅದರ ಬದಲು ತಾನು ಇದುವರೆಗೂ ಗೆದ್ದ ಸಣ್ಣ ಪುಟ್ಟ ರಾಜ್ಯಗಳನ್ನೂ ಪುರೂರವನ ಕೈಲಿಟ್ಟು ಪಾಟಲೀಪುತ್ರದವರೆಗೂ ಮುನ್ನುಗ್ಗುವ ತನ್ನ ಕನಸಿಗೆ ಅವನ ಸಹಕಾರ ಪಡೆವ ಯೋಚನೆ ಮಾಡಿದ. ಅದೂ ಸರಿಯೇ. ಅಂಭಿಯಂತಹ ನೂರು ಜನ ಇರುವುದಕ್ಕಿಂತ ಪುರೂರವನಂತಹ ಒಬ್ಬರು ಸಾಕು. ಹಾಗಂತ ಬುದ್ಧಿವಂತ ಅಲೆಗ್ಸಾಂಡರ್ ಯೋಚಿಸಿಯೇ ಇದ್ದ.
ಪುರೂರವ ಸೋತು ಗೆದ್ದಿದ್ದ. ಭಾರತೀಯ ಖಡ್ಗಗಳ ಸಾಮಥ್ರ್ಯವನ್ನು ಗ್ರೀಕರಿಗೆ ತೋರಿಸಿದ್ದ. ಇಲ್ಲಿಂದಾಚೆಗೆ ಅಲೆಗ್ಸಾಂಡರನ ಸೇನೆ ಅನೇಕ ಬಾರಿ ಸೋಲಿನ ದವಡೆಗೆ ಸಿಕ್ಕು ಪಾರಾಗಿ ಬಂತು. ಯಾವ ಸಣ್ಣ ರಾಜ್ಯವನ್ನೂ ಅವನ ಪಡೆ ಘೋರ ಕದನವಿಲ್ಲದೇ ಗೆಲ್ಲಲಾಗಲೇ ಇಲ್ಲ. ಕೈಕಾಲು ಕಳಕೊಂಡು ಶಾಶ್ವತವಾಗಿ ಯುದ್ಧ ಮಾಡಲಾಗದ ಸ್ಥಿತಿಗೆ ಅನೇಕರು ತಲುಪಿದ್ದರು. ಅವರೆಲ್ಲರನ್ನೂ ಮರಳಿ ಕಳಿಸಿ ಹೊಸ ಪಡೆಯನ್ನು ಗ್ರೀಕ್ನಿಂದ ಕರೆಸಿಕೊಂಡಿದ್ದ. ಅಷ್ಟಾದರೂ ಗ್ರೀಕ್ ಪಡೆಯಲ್ಲಿ, ಸೈನಿಕರ ಮನಸ್ಸಿನಲ್ಲಿ ಕವಿಯುತ್ತಿದ್ದ ಸೋಲಿನ ಕಾಮರ್ೋಡದ ಛಾಯೆಯನ್ನು ಸರಿಸಲು ಆತನಿಗೆ ಸಾಧ್ಯವಾಗಲೇ ಇಲ್ಲ.
ಈ ಹೊತ್ತಿನಲ್ಲಿಯೇ ಅಲೆಗ್ಸಾಂಡರ್ ತಪಸ್ವಿಯೊಬ್ಬನನ್ನು ಅರಸಿಕೊಂಡು ಹೋಗಿದ್ದು. ಭಾರತವೆಂದರೆ ಋಷಿಗಳ ಭೂಮಿ ಎಂದು ಕೇಳಿದ್ದ ಆತ ಅಂಥವರುಗಳೊಂದಿಗೆ ಮಾತುಕತೆ ನಡೆಸಬೇಕೆಂದು ಬಯಸಿದ. ಅದೊಮ್ಮೆ ಶ್ರೇಷ್ಠ ಆಚಾರ್ಯ ದಂಡಮೀಶರನ್ನು ಕರೆತರಲು ಹೋದ ಸೈನಿಕರು ರಿಕ್ತ ಹಸ್ತರಾಗಿ ಬಂದರು. ಅಲೆಗ್ಸಾಂಡರನ ಆಪ್ತ ಅಧಿಕಾರಿ ಒನ್ಸ್ಕ್ರೀಟೋಸ್ ತಾನೇ ಹೋಗಿ ‘ಜಗತ್ತಿನ ಚಕ್ರವತರ್ಿ, ದೇವರ ಮಗ ಅಲೆಗ್ಸಾಂಡರ್ ನಿಮ್ಮನ್ನು ಕರೆಯುತ್ತಿದ್ದಾನೆ’ ಎಂದು ಆಗ್ರಹಿಸಿದ. ಭೂಮಿ ಬಿರಿಯುವಂತೆ ಗಹಗಹಿಸಿ ನಕ್ಕ ಆಚಾರ್ಯರು ‘ನಿಮ್ಮ ದೊರೆ ಯಾವ ಕಾರಣಕ್ಕೆ ದೇವರ ಮಗನೋ ನಾನೂ ಅದೇ ಕಾರಣಕ್ಕೆ ದೇವರ ಮಗ’ ಎಂದ. ಅಷ್ಟೇ ಅಲ್ಲ. ‘ಜಗತ್ತಿನ ಒಡೆಯ ಯಾವ ಲೆಕ್ಕಕ್ಕೆ? ಆತ ಇನ್ನೂ ನದಿಯ ಒಂದು ದಡವನ್ನಷ್ಟೇ ನೋಡಿದ್ದಾನೆ, ಮತ್ತೊಂದು ದಡಕ್ಕೆ ಹೋದರೆ ಗೊತ್ತಾದೀತು. ಮಗಧ ಸಾಮ್ರಾಜ್ಯವನ್ನು ಎದುರಿಸಿಯೂ ಬದುಕುಳಿದರೆ ಜಗತ್ತಿನ ಚಕ್ರವತರ್ಿ ಯಾರೆಂದು ಕುಳಿತು ಚಚರ್ಿಸೋಣ’ ಎಂದು ಗಾಬರಿ ಹುಟ್ಟಿಸಿದ. ಒನ್ಸ್ಕ್ರೀಟೋಸ್ ಬೆದರಿಸಿದ, ‘ಬರಲಿಲ್ಲವಾದರೆ ಕತ್ತು ಉರುಳುತ್ತದೆ’. ನಗುಮೊಗದಿಂದಲೇ ಉತ್ತರಿಸಿದ ಆಚಾರ್ಯ ದಂಡಮೀಶ ‘ಪಂಚಭೂತಗಳಿಂದಾದ ದೇಹ ಪಂಚಭೂತದಲ್ಲಿಯೇ ಲೀನವಾಗಬೇಕು. ನಿಮ್ಮ ದೊರೆ ನನ್ನನ್ನು ಕೊಲ್ಲಬಹುದಷ್ಟೇ, ನನ್ನಾತ್ಮವನ್ನಲ್ಲ’ ಎಂದ.
ಆತನ ಮಾತುಗಳು ಇಲ್ಲಗೇ ನಿಲ್ಲುವುದಿಲ್ಲ. ಆತ ತನಗನ್ನಿಸಿದ್ದನ್ನು ನಿರ್ಭಯವಾಗಿ ಮಂಡಿಸುತ್ತಲೇ ಸಾಗುತ್ತಾನೆ. ಅನೇಕ ಗ್ರೀಕ್ ಬರಹಗಾರರು ಆತನ ಮಾತುಗಳ ಚಚರ್ೆಯನ್ನು ತಮ್ಮ ಕೃತಿಗಳಲ್ಲಿ ಸುದೀರ್ಘವಾಗಿಯೇ ಮಾಡಿದ್ದಾರೆ. ಓಶೋ ತಮ್ಮ ಕೃತಿಯಲ್ಲಿ ಈ ಸಾಧುವಿನೊಂದಿಗೆ ಅಲೆಗ್ಸಾಂಡರನ ಸಂವಾದವನ್ನೂ ವಿವರಿಸಿದ್ದಾರೆ. ಹೇಗೇ ಇರಲಿ.
ಒಂದಂತೂ ಸತ್ಯ. ಜಗತ್ತನ್ನೇ ಗೆದ್ದ ಅಲೆಗ್ಸಾಂಡರನ್ನು ರಾಜರು ಬಿಡಿ. ಭಾರತದ ಸನ್ಯಾಸಿಗಳೂ ಬೆತ್ತಲಾಗಿ ನಡುರಸ್ತೆಯಲ್ಲಿ ನಿಲ್ಲಿಸಿಬಿಟ್ಟಿದ್ದರು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s