ಏಸು ಕ್ರಿಸ್ತನಿಗೂ ಭಾರತಕ್ಕೂ ಸಂಬಂಧ ಇದೆಯಾ?

ಬೈಬಲ್ಲಿನಲ್ಲಿ ಎರಡು ಭಾಗ. ಒಂದು ಹಳೆಯ ಒಡಂಬಡಿಕೆಯಾದರೆ ಮತ್ತೊಂದು ಹೊಸತು. ಯೇಸು ಕ್ರಿಸ್ತನಿಗಿಂತಲೂ ಮುಂಚಿನ ಪ್ರವಾದಿಗಳ ವಿವರಣೆ ಹಳೆಯದೆನಿಸಿದರೆ ಯೇಸುಕ್ರಿಸ್ತನ ಕುರಿತಂತಹ ಸುವಾತರ್ೆಗಳ ಸಂಗ್ರಹ ಹೊಸತು. ಹೊಸ ಒಡಂಬಡಿಕೆ ಮ್ಯಾಥ್ಯೂ, ಮಾಕರ್್, ಲ್ಯೂಕ್ ಮತ್ತು ಜಾನ್ರ ಸುವಾತರ್ೆಗಳು. ಈ ಆಧಾರದ ಮೇಲೆಯೇ ಒಂದಷ್ಟು ಸಮಾನ ರೇಖೆಗಳನ್ನೆಳೆದರೆ ಅಚ್ಚರಿಯ ಸಂಗತಿಗಳು ಅನಾವರಣಗೊಳ್ಳುತ್ತವೆ.

jesus1

ಈ ಮುಂದೆ ಹೇಳಲಿರೋದನ್ನು ಸ್ವಲ್ಪ ಗಂಭೀರವಾಗಿ ಓದಿಕೊಳ್ಳಿ. ಬಹುಶಃ ಈ ಸಾಲುಗಳು ನಿಮ್ಮಲ್ಲಿ ಅಚ್ಚರಿಯನ್ನು, ಕುತೂಹಲವನ್ನೂ ಹುಟ್ಟಿಸಬಹುದು! ‘ದಿವ್ಯ ಶಿಶುವೊಂದು ದೂರದ ಇಸ್ರೇಲಿನಲ್ಲಿ ಜನ್ಮ ತಾಳಿತು. ಅದಕ್ಕೆ ಈಶ ಎಂದು ನಾಮಕರಣ ಮಾಡಲಾಯಿತು. ಆ ಮಗು ಬೆಳೆದು ತನ್ನ 14ನೇ ವಯಸ್ಸಿನಲ್ಲಿ ಕೆಲವು ವ್ಯಾಪಾರಿಗಳೊಂದಿಗೆ ಭಾರತದೆಡೆಗೆ ಬಂತು. ದೇವರಿಗೆ ಅತ್ಯಂತ ಪ್ರಿಯವಾದ ಭಾರತದಲ್ಲಿ, ಬುದ್ಧನ ಚಿಂತನೆಗಳಿಂದ ತನ್ನ ಬದುಕನ್ನು ಸುಂದರಗೊಳಿಸಿಕೊಳ್ಳುವ ಪ್ರಯತ್ನದೊಂದಿಗೆ ಉಳಿದುಕೊಂಡಿತು. ತರುಣ ಈಶ ಪಂಜಾಬಿನ ಮೂಲಕ ಹಾದು ಜೈನರ ಸಾಹಚರ್ಯದಲ್ಲಿ ಕೆಲವು ಕಾಲ ಇದ್ದ. ಆನಂತರ ಜಗನ್ನಾಥ ಮಂದಿರಕ್ಕೆ ಹೋದ. ಅಲ್ಲಿ ಆತನಿಗೆ ವಿಶೇಷ ಸ್ವಾಗತ ದಕ್ಕಿತು. ಆತನ ವೇದಾಧ್ಯಯನದ ಆಸೆಗೆ ಜಾತಿ ವಿವಾದಗಳನ್ನೆಬ್ಬಿಸಿದ ಪಂಡಿತರು ತಣ್ಣೀರೆರೆಚಿದರು. ರಾಜಗೃಹ, ವಾರಣಾಸಿಯಂತಹ ತೀರ್ಥಕ್ಷೇತ್ರಗಳಲ್ಲಿ ನಾಲ್ಕಾರು ವರ್ಷ ಕಳೆದವ ಹಿಮಾಲಯದ ತಪ್ಪಲಿನ ನೇಪಾಳದಲ್ಲಿ ನೆಲೆ ನಿಂತು ಬುದ್ಧ ತತ್ತ್ವಗಳ ಅಧ್ಯಯನ ಮಾಡಿದ. ಮೂವತ್ತನೆಯ ವಯಸ್ಸಿಗೆ ತನ್ನ ದೇಶಕ್ಕೆ ಮರಳಿ ಬುದ್ಧನ ತತ್ತ್ವಗಳನ್ನು ಉಪದೇಶಿಸಿದ’.
ಈ ಸಾಲುಗಳು ರಷ್ಯನ್ ಲೇಖಕ ನಿಕೋಲಸ್ ನೋಚೋವಿಚ್ ಸಂಪಾದಿಸಿದಂಥವು. ಇಲ್ಲಿ ಈಶ ಹೆಸರಿನ ತರುಣ ಯಾರು ಗೊತ್ತೇನು? ಈಸಾ ಅಂತ ಕರೆಯಲ್ಪಡುವ ಸದ್ಯಕ್ಕೆ ಜಗತ್ತಿನ ಅತಿ ದೊಡ್ಡ ಮತದ ಸ್ಥಾಪಕಾಚಾರ್ಯ ಜೀಸಸ್ ಕ್ರಿಸ್ತ!
ಒಂದಂತೂ ಸತ್ಯ. ಏಸು ಕ್ರಿಸ್ತನ ಕುರಿತು ತೆರೆದಿಟ್ಟಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು. ಏಸುಕ್ರಿಸ್ತ ಹುಡುಕಾಡಲೆತ್ನಿಸಿದ ‘ಪರಮ ಸತ್ಯ’ ಆತನ ಅನುಯಾಯಿಗಳ ಕೈಗೆ ಸಿಕ್ಕು ಅದೆಷ್ಟು ಬಾರಿ ಸತ್ತಿತೋ ಏನೋ?
ಈ ಎಲ್ಲಾ ಚಚರ್ೆ ಶುರುವಾಗಿದ್ದು 1887ರಲ್ಲಿ. ರಷ್ಯನ್ ಇತಿಹಾಸಕಾರ ನಿಕೋಲಸ್ ನೋಟೋವಿಚ್ ಹಿಮಾಲಯ ತಪ್ಪಲಿನ ಪ್ರವಾಸಕ್ಕೆಂದು ಬಂದಿದ್ದ. ಆತನಿಗೆ ಲದ್ದಾಖಿಗಳ ಬುದ್ಧಾಶ್ರಮದಲ್ಲಿ ವಿಶೇಷ ಗೌರವ ದೊರೆಯಿತು. ಹೀಗೇಕೆಂದು ಕೇಳಿದಾಗ ಆ ಸನ್ಯಾಸಿ ‘ನೀವೂ ನಮ್ಮವರೇ’ ಎಂದ. ‘ಬುದ್ಧನ ಚಿಂತನೆಗಳನ್ನು ಪಸರಿಸಲೆಂದೇ ಯೇಸು ಪಶ್ಚಿಮದತ್ತ ಪಯಣ ಬೆಳೆಸಿದ್ದು’ ಎಂದು ಸೇರಿಸಲು ಮರೆಯಲಿಲ್ಲ. ಅವಾಕ್ಕಾದ ನೋಟೋವಿಚ್ ಈ ಕುರಿತಂತಹ ಸುಳಿವನ್ನು ಅರಸುತ್ತಲೇ ಲೇಹ್ನ ಬಳಿ ಇರುವ ಹೆಮಿಸ್ ಆಶ್ರಮಕ್ಕೆ ಬಂದ. ಅಲ್ಲಿನ ಗ್ರಂಥಾಲಯದಲ್ಲಿ ಸಿಕ್ಕ ಮಾಹಿತಿಗಳ ಜಾಡು ಹಿಡಿದು ಹೊರಟ ನೋಚೋವಿಚ್ ಯೇಸುವಿನ ಭಾರತ ಸಂಬಂಧವನ್ನು ದೃಢವೆಂದು ಸಾಧಿಸಿಯೇ ಬಿಟ್ಟ. ಆನಂತರವಂತೂ ಒಂದಾದ ಮೇಲೊಂದು ನಡೆದ ಸಂಶೋಧನೆಗಳು ಇದನ್ನು ಪುಷ್ಟೀಕರಿಸುತ್ತ ಹೋದವು. ಡೆಡ್ಸೀ ಸ್ಕ್ರಾಲ್ನ ಸಂಶೋಧನೆಗಳಂತೂ ಚಚರ್್ನ ಅಭಿಮಾನದ ಮೇಲೆ ಶಾಶ್ವತವಾಗಿ ಚಪ್ಪಡಿ ಎಳೆದೇ ಬಿಟ್ಟವು!
ಬಿಡಿ. ನೇರ ಬೈಬಲ್ಲಿಗೆ ಬರೋಣ. ಬೈಬಲ್ಲಿನಲ್ಲಿ ಎರಡು ಭಾಗ. ಒಂದು ಹಳೆಯ ಒಡಂಬಡಿಕೆಯಾದರೆ ಮತ್ತೊಂದು ಹೊಸತು. ಯೇಸು ಕ್ರಿಸ್ತನಿಗಿಂತಲೂ ಮುಂಚಿನ ಪ್ರವಾದಿಗಳ ವಿವರಣೆ ಹಳೆಯದೆನಿಸಿದರೆ ಯೇಸುಕ್ರಿಸ್ತನ ಕುರಿತಂತಹ ಸುವಾತರ್ೆಗಳ ಸಂಗ್ರಹ ಹೊಸತು. ಹೊಸ ಒಡಂಬಡಿಕೆ ಮ್ಯಾಥ್ಯೂ, ಮಾಕರ್್, ಲ್ಯೂಕ್ ಮತ್ತು ಜಾನ್ರ ಸುವಾತರ್ೆಗಳು. ಈ ಆಧಾರದ ಮೇಲೆಯೇ ಒಂದಷ್ಟು ಸಮಾನ ರೇಖೆಗಳನ್ನೆಳೆದರೆ ಅಚ್ಚರಿಯ ಸಂಗತಿಗಳು ಅನಾವರಣಗೊಳ್ಳುತ್ತವೆ.
ಯೇಸುವಿನ ತಂದೆ ಜೋಸೆಫ್ ತನ್ನ ಪತ್ನಿ ಮೇರಿಯನ್ನು ಕೂಡುವ ಮುನ್ನವೇ ಆಕೆ ಗಭರ್ಿಣಿಯಾಗಿದ್ದನ್ನು ಕಂಡು ಕುಪಿತನಾಗಿದ್ದ. ಆಕೆಯನ್ನು ದೂರ ತಳ್ಳಿದ್ದ. ಆಗಲೇ ಭಗವಂತನ ದೂತನೊಬ್ಬ ಕನಸಲ್ಲಿ ಕಂಡು ಜೋಸೇಫನಿಗೆ ಸಮಾಧಾನ ಮಾಡಿದ. ಮೇರಿಯದ್ದು ಅನೈತಿಕವಾದುದಲ್ಲ; ಪವಿತ್ರವಾದ ಗರ್ಭ ಎಂದ. ಹುಟ್ಟುವ ಮಗುವಿಗೆ ಏಸುವೆಂದು ನಾಮಕರಣ ಮಾಡಬೇಕೆಂದೂ ಆದೇಶಿಸಿದ. ಮುಂದಿನದ್ದು ಬಲು ಆಕರ್ಷಣೀಯ ಘಟನೆ. ಯೇಸು ಹುಟ್ಟಿದೊಡನೆ ಪೂರ್ವದೇಶದ ಜ್ಯೋತಿಷಿಗಳೊಂದಷ್ಟು ಜನ ಅಲ್ಲಿಗೆ ಬಂದರು. ಯಹೂದ್ಯರ ಅರಸನಾಗುವ ಶಿಶು ಜನನದ ನಕ್ಷತ್ರದ ಜಾಡು ಹಿಡಿದು ಅವರು ಅಲ್ಲಿಗೆ ಧಾವಿಸಿದ್ದರು. ಈ ಕೂಸನ್ನು ಕಂಡು ಅದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ಒಂದಷ್ಟು ಕಾಣಿಕೆಗಳನ್ನಿತ್ತು ತಮ್ಮೂರಿಗೆ ಹೊರಟರು. ನೆನಪಿಡಿ. ಬೈಬಲ್ಲಿನ ಪ್ರಕಾರ ಹೀಗೆ ಬಂದ ಜ್ಯೋತಿಷಿಗಳು ಪೂರ್ವದ ರಾಷ್ಟ್ರದವರು!
ಬುದ್ಧನ ಅನುಯಾಯಿಗಳಲ್ಲಿ ಇಂತಹುದೊಂದು ಸಂಪ್ರದಾಯವಿದೆ. ತೀರಿಕೊಂಡ ಲಾಮಾ ಮತ್ತೆಲ್ಲಿಯೋ ಜನ್ಮತಾಳುತ್ತಾನೆಂಬುದನ್ನು ಅವರು ನಂಬುತ್ತಾರೆ. ಅಷ್ಟೇ ಅಲ್ಲ. ಸಾಕಷ್ಟು ತಪಸ್ಸಿನಿಂದ ಆತನನ್ನು ಗುರುತಿಸಿಕೊಳ್ಳುತ್ತಾರೆ. ತಾನು ತೀರಿಕೊಳ್ಳುವ ಕೆಲವು ದಿನಗಳ ಮುನ್ನ 13ನೇ ದಲಾಯಿ ಲಾಮಾ ತಮ್ಮ ಭವಿಷ್ಯದ ಜನ್ಮದ ಕುರಿತು ಒಂದು ಸುಳಿವು ಕೊಟ್ಟಿದ್ದರು. ಅವರು ತೀರಿಕೊಂಡ ನಂತರ ಅವರ ದೇಹ ದಕ್ಷಿಣದಿಂದ ಪೂರ್ವದೆಡೆಗೆ ತಿರುಗಿಬಿಟ್ಟಿತು. ಅಷ್ಟೇ ಅಲ್ಲ. ನಕ್ಷತ್ರಾಕಾರದ ಆಲ್ಗೆಯೊಂದು ಅದೇ ದಿಕ್ಕಿನ ಗೋಪುರದ ಮೇಲೆ ಬೆಳೆದು ನಿಂತು ಎಲ್ಲರನ್ನು ಅಚ್ಚರಿಗೆ ತಳ್ಳಿತು. ತಕ್ಷಣ ಸನ್ಯಾಸಿಯೋರ್ವನನ್ನು ಕರೆತಂದು ಅವನನ್ನು ಸಮ್ಮೋಹಕ್ಕೊಳಪಡಿಸಿ ಪ್ರಶ್ನಿಸಿದರು. ಅಪರೂಪದ ಮೋಡದ ಗುಚ್ಛವೊಂದು ಲಾಸಾದ ಮೇಲ್ಭಾಗದಲ್ಲಿ ಕಾಣಿಸಿತು ಅಷ್ಟೇ! ಮುಂದೇನೆಂದು ತಿಳಿಯದಾದಾಗ ಲಾಮಾಗಳ ಹಿರಿಯರೊಬ್ಬರು ಧ್ಯಾನಕ್ಕೆ ಕುಳಿತರು. ಮನಸ್ಸು ಸ್ಥಿರಗೊಂಡ ಆ ಹೊತ್ತಲ್ಲಿ ಮೂರಂತಸ್ತಿನ ಬುದ್ಧಾಶ್ರಮದ ಪಕ್ಕದಲ್ಲಿಯೇ ತೋಟದ ಮನೆ ಅಸ್ಪಷ್ಟವಾಗಿ ಕಂಡಿತು. ಒಂದಷ್ಟು ಅಕ್ಷರಗಳೂ ಕಂಡು ಬಂದವು. ಅದನ್ನು ಜ್ಯೋತಿಷಿಗಳು, ಪಂಡಿತರು ವಿಶ್ಲೇಷಿಸಿ ಅದರ ಆಧಾರದ ಮೇಲೆ ಶಿಶುವಿನ ಹುಡುಕಾಟಕ್ಕೆ ನಡೆದರು. ಸಾವಿರಾರು ಮೈಲು ದೂರದ ಹಳ್ಳಿಯೊಂದರ ಬುದ್ಧ ಮಠದ ಬಳಿ, ತೋಟದ ಮನೆಯಲ್ಲಿನ ಶಿಶು ತನ್ನ ಹುಡುಕಲು ಬಂದ ಜ್ಯೋತಿಷಿಗಳನ್ನು ತಾನೇ ಗುರುತಿಸಿ ಅವರ ಕೈಲಿದ್ದ ಪೂರ್ವ ಗುರುಗಳ ಮಣಿಸರ ಬೇಕೆಂದು ಹಠ ಮಾಡಿತು. ಮುಂದೆ ಅದೇ ಶಿಶು 14ನೇ ದಲೈ ಲಾಮಾ ಆಗಿ ರೂಪುಗೊಂಡಿದ್ದು ಇತಿಹಾಸ!

Dalai-Lama-006
ಅಷ್ಟೇಕೆ ಉತ್ತರ ಕನ್ನಡದ ಹಳದೀಪುರ ಮಠಕ್ಕೆ ಗುರುಗಳಿರಲಿಲ್ಲವೆಂಬ ಕೊರಗು ಕಾಡಿದಾಗ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ಕರಾರುವಾಕ್ಕಾದ ನಿದರ್ೇಶನದಂತೆ ಹುಡುಕುತ್ತ ಹೊರಟ ಭಕ್ತರಿಗೆ ದೂರದ ಕೇರಳದಲ್ಲಿ ಪ್ರಶ್ನೆಗೆ ನೀಡಿದ ಉತ್ತರವನ್ನು ಹೋಲುವ ಜಾತಕವುಳ್ಳ ಬಾಲಕ ಸಿಕ್ಕಿದ್ದು ಈಗಲೂ ಕಣ್ಣೆದುರಿಗಿನ ಸಾಕ್ಷಿ!
ಬಾಲಕ ಯೇಸುವನ್ನು ಅರಸಿ ಹೋಗಿದ್ದರಲ್ಲಿ ಒಮ್ಮೆ ಈ ಎಲ್ಲ ಸಂಗತಿಗಳನ್ನು ತಾಳೆ ಹಾಕಿ ನೋಡಬಹುದು. ಹಿಂದೂ ಸಂಪ್ರದಾಯದವರೋ ಅಥವಾ ಬುದ್ಧನ ಅನುಯಾಯಿಗಳೋ ಈ ಕೆಲಸದ ಹಿಂದಿದ್ದಲ್ಲಿ ಅಚ್ಚರಿ ಪಡಬೇಕಾದ್ದೇನೂ ಇಲ್ಲ.
ಅದು ಒತ್ತಟ್ಟಿಗಿರಲಿ. ಮತ್ತೆ ಬೈಬಲ್ಲಿಗೆ ಬನ್ನಿ. ಹುಟ್ಟಿದೊಡನೆ ರಾಜನ ಭಯದಿಂದ ಯೇಸುವನ್ನು ದೂರ ದೇಶಕ್ಕೆ ಒಯ್ಯಲಾಯ್ತು. ಹನ್ನೆರಡನೆ ವಯಸ್ಸಿನ ಆಸುಪಾಸಿಗೆ ಆತ ಮರಳಿ ಬಂದ. ಪವಿತ್ರ ನೀರಿನಿಂದ ಅವನಿಗೆ ಸ್ನಾನ ಮಾಡಿಸಲಾಯ್ತು. ನಲವತ್ತು ದಿನಗಳ ಸಾಧನೆಗಾಗಿ ಹೊರಟ ಈ ಬಾಲಕ ಮುಂದೆ ಮತ್ತೆ ಆ ಊರನ್ನು ಬಿಟ್ಟು ಹೊರಡಬೇಕಾಗಿ ಬಂತು. ತನಗೆ ಪವಿತ್ರ ಸ್ನಾನ ಮಾಡಿಸಿದ ಜಾನ್ನನ್ನೇ ಸೆರೆಮನೆಗೆ ತಳ್ಳಿರುವುದರಿಂದ ಕ್ರೂರ ದೊರೆಗಳಿಂದ ಪಾರಾಗಲು ಆತ ಸಹಜವಾಗಿಯೇ ವ್ಯಾಪಾರಿಗಳ ಸಂಗ ಮಾಡಿ ಬೆಳಕಿನ ನಾಡು ಭಾರತಕ್ಕೆ ಬಂದಿರಬಹುದು. ಇಲ್ಲಿನ ಧರ್ಮ, ಆಚರಣೆ ಚಿಂತನೆಗಳಿಂದ ಆತ ಸಾಕಷ್ಟು ಪ್ರಭಾವಿತನಾಗಿ ತನ್ನೂರನ್ನೇ ಮರೆತು ತಪೋನಿರತನಾಗಿ ಇದ್ದುಬಿಟ್ಟ!

jesus2
ಬೈಬಲ್ ಈ ವಿಚಾರದಲ್ಲಿ ಪೂರ್ಣ ಮೌನ. ಆತ ಎಲ್ಲಿಗೆ ಹೋದ? ಅಲ್ಲಿ ಏನು ಮಾಡಿದ ಎಂಬುದನ್ನು ಪೂರ್ಣ ಮುಚ್ಚಿಟ್ಟಿದೆ. ಬೈಬಲ್ನ ಸಂಶೋಧಕರ ಪ್ರಕಾರವೇ ಸುಮಾರು 16 ವರ್ಷಗಳ ಆ ಸುವರ್ಣ ಪುಟಗಳು ಕಾಣೆಯಾಗಿಬಿಟ್ಟಿವೆ.
ಭವಿಷ್ಯ ಪುರಾಣವನ್ನು ಒಪ್ಪುವುದಾದರೆ ಹಿಮಾಲಯದಲ್ಲಿ ತಪೋನಿರತ ಶ್ವೇತ ವರ್ಣದ ಸಾಧುವನ್ನು ಕಂಡ ಶಾಲಿವಾಹನ ಆತನನ್ನು ಪ್ರೇರೇಪಿಸಿ ಮರಳಿ ಹೋಗಿ ತನ್ನ ನಾಡಿನ ಜನಕ್ಕೆ ಇಲ್ಲಿನ ಸಂದೇಶ ಪಸರಿಸುವಂತೆ ಕೇಳಿಕೊಂಡ. ಆಗ ಯೇಸುವಿನ ಮರುಯಾತ್ರೆ ಶುರುವಾಯಿತು. ಆತ ಮರಳಿ ತನ್ನೂರಿಗೆ ಬಂದ.
ಇಲ್ಲಿಗೆ ಬೈಬಲ್ ಮತ್ತೆ ಕೂಡಿಕೊಳ್ಳುತ್ತದೆ, ‘ಪರಲೋಕದ ರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿ ಎಂದು ಯೇಸು ಸಾರಿ ಹೇಳಲು ಪ್ರಾರಂಭಿಸಿದನು’ ಎನ್ನುತ್ತಾನೆ ಮ್ಯಾಥ್ಯೂ. ಆನಂತರ ಯೇಸು ತನ್ನ ಶಿಷ್ಯರನ್ನು ಆರಿಸಿಕೊಂಡ. ಅನೇಕ ಪವಾಡಗಳನ್ನು ಮಾಡಿದ. ಅಲ್ಲಿಂದಾಚೆಗೆ ಅವನ ಬದುಕು ಬಲುವಾಗಿ ಬುದ್ಧನನ್ನು ಹೋಲುವಂಥದ್ದು. ಆತ ತನ್ನ ಶಿಷ್ಯರನ್ನು ಆರಿಸಿಕೊಂಡ ರೀತಿ, ಅವರೊಂದಿಗೆ ನಾಡೆಲ್ಲ ಸುತ್ತುತ್ತಿದ್ದುದು, ಕಥೆಗಳ ಮೂಲಕ ಜನರಿಗೆ ತಿಳಿ ಹೇಳುತ್ತಿದ್ದುದು ಎಲ್ಲವೂ ಬುದ್ಧನಂತೆಯೇ. ದೇವರನ್ನು ಕಂಡರೆ ಹೆದರಬೇಕಿಲ್ಲ, ಪ್ರೀತಿಸಬಹುದೆಂಬ ಕಲ್ಪನೆ ಅಕ್ಷರಶಃ ಬೌದ್ಧ ಧರ್ಮದ ಎರವಲೇ. ‘ಯಾರನ್ನೂ ಹಿಂಸಿಸುವುದು ತರವಲ್ಲ’ ಎಂಬ ಬುದ್ಧನ ಮಾತುಗಳೇ ಯೇಸುವಿನ ಬಾಯಲ್ಲಿ ‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿ’ ಎಂದಾಗಿದ್ದು.
ಹೇಗೆ ಬುದ್ಧ ರೂಢಿಗತ ಆಚರಣೆಗಳನ್ನು ವಿರೋಧಿಸಿ, ಪ್ರತಿಭಟಿಸಿದನೋ ಹಾಗೆ ಯೇಸುವೂ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿದ್ದ ಆಚರಣೆಗಳನ್ನು ಧಿಕ್ಕರಿಸಿದನು. ಬುದ್ಧನಿಗೆ ರಾಜಾಶ್ರಯ ದಕ್ಕಿದ್ದರಿಂದ ಆತ ಬೀದಿಯಲ್ಲಿ ನಿಂತು ಕದನಕ್ಕಿಳಿಯಬೇಕಾದ ಪ್ರಸಂಗ ಬರಲಿಲ್ಲ. ಆದರೆ ಯೇಸು ಜನರನ್ನು ಒಪ್ಪಿಸಲು ಪ್ರಾರ್ಥನಾ ಮಂದಿರದ ಹೊರಗೆ ವಾದ ಮಾಡಬೇಕಾಗಿ ಬಂತು. ಕೊನೆಗೆ ಶಿಷ್ಯರೊಂದಿಗೆ ಕೂಡಿ ಅದನ್ನು ವಶಪಡಿಸಿಕೊಳ್ಳಬೇಕಾಯ್ತು.
ಒಟ್ಟಾರೆ, 14ನೇ ವಯಸ್ಸಿನ ಆಸುಪಾಸಿಗೆ ಭಾರತಕ್ಕೆ ಹೊರಟ ಯೇಸು 30 ರ ವೇಳೆಗೆ ಮರಳಿ ಬಂದ. ಮೂರ್ನಾಲ್ಕು ವರ್ಷ ಪ್ರೇಮದಿಂದ ಜನರ ಮನ ಗೆದ್ದ. ಆಳುವವರ ದರ್ಪ ವೃದ್ಧಿಯಾದಂತೆ ಕ್ರೌರ್ಯ ಮೆಟ್ಟಿ ನಿಲ್ಲಲು ತಾನೇ ಮುಂಚೂಣಿಗೆ ಬಂದ. ಬಂಧನಕ್ಕೊಳಗಾದ, ಕೊನೆಗೆ ಶಿಲುಬೆಗೇರಿಸುವ ಶಿಕ್ಷೆಯನ್ನೂ ಪಡೆದ.
‘ಬೈ ಎನ್ ಐ ವಿಟ್ನೆಸ್’ ಎಂಬ ಕೃತಿ ಈ ನಿಟ್ಟಿನಲ್ಲಿ ಬಲು ಮಹತ್ವದ ಅಂಶವನ್ನು ಮುಂದಿಡುತ್ತದೆ. ಏಸುವಿನ ಜನಾಂಗಕ್ಕಿಂತ ಮುನ್ನವೇ ಇದ್ದ ಎಸೀನ್ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಕೃತಿ ಅದು. ಸಾರ್ವಜನಿಕ ಚಚರ್ೆಗೂ ಆ ಕೃತಿ ಬರದಿರುವಂತೆ ಮಾಡುವಲ್ಲಿ ಚಚರ್್ ಸಫಲವಾಯ್ತು. ನಿಕೋಲಸ್ ನೋಚೋವಿಚ್ರು ತಮ್ಮ ಭಾರತ ಪ್ರವಾಸದ ಸ್ಫೋಟಕ ಸಂಶೋಧನೆಯ ನಂತರ ಬರೆದ ಕೃತಿಯನ್ನು ವ್ಯಾಟಿಕನ್ನಲ್ಲಿ ಪೋಪ್ನ ಆತ್ಮೀಯರೊಬ್ಬರು ನೋಡಿ ‘ಇದನ್ನು ಪ್ರಕಟಿಸುವುದರಿಂದ ನಿನಗೆ ಶತ್ರುಗಳೇ ಹೆಚ್ಚುತ್ತಾರೆ. ನೀನಿನ್ನೂ ತರುಣ. ಹಣದ ವಿಚಾರವಿದ್ದರೆ ಹೇಳು. ನಿನ್ನ ಟಿಪ್ಪಣಿ ಪುಸ್ತಕಕ್ಕೆ ಪ್ರತಿಯಾಗಿ ನಾನು ಸಾಕಷ್ಟು ಹಣ ಕೊಡಬಲ್ಲೆ’ ಎಂದಿದ್ದರು. ಈ ಕೊಡುಗೆ ನಿರಾಕರಿಸಿದ ನೋಚೋವಿಚ್ ತಮ್ಮ ಕೃತಿ ‘ದ ಅನ್ಸೀನ್ ಲೈಫ್ ಆಫ್ ಕ್ರೈಸ್ತ್’ ನ್ನು ಪ್ರಕಟ ಪಡಿಸಿದರು. ಆದರೆ ಚಚರ್್ ತನ್ನೆಲ್ಲ ಸಾಮಥ್ರ್ಯ ಬಳಸಿ ಈ ಕೃತಿ ಮೂಲೆಗುಂಪಾಗುವಂತೆ ನೋಡಿಕೊಂಡಿತು. ಈ ಕೃತಿ ಪ್ರಕಟಗೊಂಡ ಕೆಲವು ಸಮಯದಲ್ಲಿಯೇ ಲೇಖಕರನ್ನು ಬಂಧಿಸಲಾಯ್ತು. ‘ಸಮಾಜದ ಸ್ವಾಸ್ಥ್ಯ ಕೆಡಿಸುವ ಬರಹ’ ಎಂಬ ಆರೋಪದಡಿ ವಿಚಾರಣೆಯನ್ನೂ ನಡೆಸದೇ ಸೈಬೀರಿಯಾಕ್ಕೆ ದಬ್ಬಲಾಯ್ತು. ಎರಡು ವರ್ಷಗಳ ಕಾಲ ಅಲ್ಲಿದ್ದ ಮೇಲೂ ಅವರು ಬರೆಯುವುದು ನಿಲ್ಲಿಸಲಿಲ್ಲ. ಗುಪ್ತನಾಮದಿಂದ ಜೀಸಸ್ನ ಕಥೆಗಳನ್ನು ಬರೆದೇ ಬರೆದರು. ಕಾಲಕ್ರಮದಲ್ಲಿ ಬಿಡುಗಡೆಯಾಗಿ ಬಂದ ಮೇಲೆ ಅವರನ್ನು ಅಲ್ಲಿನ ‘ಇತಿಹಾಸ ಲೇಖಕ ಮತ್ತು ರಾಜತಾಂತ್ರಿಕರ ಸಂಘ’ಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯ್ತು. ಆದರೆ ಆನಂತರ ಅವರ ಸುಳಿವು ಸಿಗಲಿಲ್ಲ. ಚಚರ್ಿನ ದೌರ್ಜನ್ಯಕ್ಕೆ ಹೆದರಿ ಅವರು ಕೊನೆಯವರೆಗೂ ಅಗೋಚರವಾಗಿಯೇ ಉಳಿಯುವ ನಿರ್ಣಯ ಕೈಗೊಂಡರು. ಯೇಸುವಿನ ಅಜ್ಞಾತ ಬದುಕನ್ನು ಬೆಳಕಿಗೆ ತಂದವ ಸ್ವತಃ ಕತ್ತಲೆಗೆ ದೂಡಲ್ಪಟ್ಟಿದ್ದ!
ವಿಜ್ಞಾನದ ಶಾಖೆಗಳು ಬೆಳೆದಂತೆಲ್ಲ, ವ್ಯಾಟಿಕನ್ನ್ನು ಎದುರು ಹಾಕಿಕೊಳ್ಳುವ ತಾಕತ್ತು ವೃದ್ಧಿಸಿದಂತೆಲ್ಲ ಹೊಸ-ಹೊಸ ಸಂಶೋಧನೆಗಳಾದವು. ಈ ಸಂಶೋಧನೆಗಳ ನಂತರ ಜೀಸಸ್ ಭಾರತಕ್ಕೆ ಬಂದಿದ್ದಷ್ಟೇ ಅಲ್ಲ, ಸತ್ತಿದ್ದೂ ಶಿಲುಬೆಯ ಮೇಲಲ್ಲ ಬದಲಿಗೆ ತನ್ನ ನೆಚ್ಚಿನ ನಾಡಾದ ಭಾರತದಲ್ಲಿಯೇ ಎಂಬುದು ಬೆಳಕಿಗೆ ಬಂತು. ಅದು ಮತ್ತೂ ರೋಚಕವಾದ ಘಟನೆಗಳ ಸರಮಾಲೆ. ಮುಂದಿನ ವಾರಕ್ಕಿರಲಿ!

9 thoughts on “ಏಸು ಕ್ರಿಸ್ತನಿಗೂ ಭಾರತಕ್ಕೂ ಸಂಬಂಧ ಇದೆಯಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s