ದೇಹದಿಂದ ಮುಸಲ್ಮಾನ, ಹೃದಯ ಮಾತ್ರ ಹಿಂದೂ!

ಬಹುಶಃ ಜಗತ್ತಿನ ಅತ್ಯಂತ ಸಹಿಷ್ಣು ಮುಸಲ್ಮಾನರನ್ನು ನೋಡಬೇಕೆಂದರೆ ನೀವು ಇಂಡೋನೇಷ್ಯಾಕ್ಕೆ ಹೋಗಬೇಕು. ಏಕೆಂದರೆ ಅವರು ಆಚರಣೆಯ ದೃಷ್ಟಿಯಿಂದ ಮಾತ್ರ ಮುಸಲ್ಮಾನರು, ಸಾಂಸ್ಕೃತಿಕವಾಗಿ ಹಿಂದೂಗಳೇ!

borobudur2

ಇದನ್ನು ಕಾಕತಾಳೀಯ ಎನ್ನಬೇಕೋ, ಅನಿರೀಕ್ಷಿತ ಎನ್ನಬೇಕೋ ಗೊತ್ತಾಗುತ್ತಿಲ್ಲ. ನಾವು ಭಾರತದ ವಿಶ್ವಯಾತ್ರೆಯ ಕುರಿತಂತೆ ಚಚರ್ಿಸುತ್ತಿರುವಾಗಲೇ, ಒರಿಸ್ಸಾದಲ್ಲಿ ‘ಬಾಲಿಜಾತ್ರಾ’ ಹಬ್ಬ ನಡೆಯುತ್ತಿದೆ. ಇದು ಒರಿಸ್ಸಾದ ಅತ್ಯಂತ ದೊಡ್ಡ ಉತ್ಸವಗಳಲ್ಲೊಂದು. ಈ ಹಬ್ಬದ ವೇಳೆ ಜನ ಸುಂದರವಾದ ದೋಣಿಗಳನ್ನು ಮಾಡಿ ಕೊಳ, ಸರೋವರ, ನದಿಗಳಲ್ಲಿ ತೇಲಿ ಬಿಡುತ್ತಾರೆ. ಉದ್ದೇಶವೇನು ಗೊತ್ತೇ? ತಮ್ಮ ಪೂರ್ವಜರು ದೋಣಿಗಳಲ್ಲಿ ಇಂಡೋನೇಷ್ಯಾ ದ್ವೀಪ ಸಮೂಹದತ್ತ ಸಾಹಸಯಾತ್ರೆ ಕೈಗೊಂಡದ್ದನ್ನು ಸ್ಮರಿಸಿಕೊಳ್ಳಲು ಅಷ್ಟೇ! ಇದು ಬರಿಯ ಸಾಹಸ ಯಾತ್ರೆಯಲ್ಲ; ಸಂಸ್ಕೃತಿ ಯಾತ್ರೆಯೂ ಹೌದು. ಹೀಗಾಗಿ ಈ ದೋಣಿಗಳಲ್ಲಿ ಪುಟ್ಟ ಪುಟ್ಟ ಹಣತೆ ಇಟ್ಟು ಜ್ಞಾನವನ್ನು ಪಸರಿಸುವುದರ ಸಂಕೇತವನ್ನೂ ಬಿಂಬಿಸಲಾಗುತ್ತದೆ.

ಇಂಡೋನೇಷಿಯಾ ಅಂದರೆ ಜಾವಾ, ಬಾಲಿ, ಸುಮಾತ್ರಾ, ಬೋನರ್ಿಯಾ ಇತ್ಯಾದಿಗಳನ್ನೊಳಗೊಂಡ 17 ಸಾವಿರಕ್ಕೂ ಹೆಚ್ಚು ದ್ವೀಪಗಳ ಗುಚ್ಛ. ಅದರಲ್ಲಿ ಆರು ಸಾವಿರಕ್ಕೂ ಹೆಚ್ಚು ದ್ವೀಪಗಳಲ್ಲಿ ಜನವಸತಿ ಇದೆ.

ಈ ದ್ವೀಪಗಳೊಂದಿಗೆ ಭಾರತದ ಗೆಳೆತನ ಬಲು ಪುರಾತನವಾದುದು. ಬಹುಶಃ ಅಗಸ್ತ್ಯರ ಕಾಲದ್ದೆಂದರೆ ಅಚ್ಚರಿ ಪಡಬೇಕಿಲ್ಲ. ಅಗಸ್ತ್ಯರು ಉತ್ತರದಿಂದ ದಕ್ಷಿಣ ಭಾರತದವರೆಗೆ ಸಂಸ್ಕೃತಿ ಪ್ರಸಾರಕರಾಗಿ ಬಂದದ್ದು ನಮಗೆಲ್ಲ ತಿಳಿದಿರುವ ಅಂಶವೇ. ಈ ಎರಡು ಭಾಗವನ್ನು ಬೇರ್ಪಡಿಸುವ ವಿಂಧ್ಯ ಪರ್ವತವನ್ನೂ ಏರಿ ಬಂದುದರ ಕಾರಣದಿಂದಾಗಿಯೇ ವಿಂಧ್ಯವನ್ನು ಗೆದ್ದವರೆಂಬಂತೆ ಕಥೆ ಹೆಣೆಯಲಾಗಿದೆ. ಅಷ್ಟೇ ಅಲ್ಲ. ಅಗಸ್ತ್ಯರು ಸಾಗರವನ್ನೇ ಆಪೋಶನ ತೆಗೆದುಕೊಂಡವರೆಂದೂ ಹೇಳುತ್ತಾರೆ. ಏಕಿರಬಹುದು ಗೊತ್ತೇ? ಸಾಗರವನ್ನು ತಮ್ಮ ವಶಕ್ಕೆ ಪಡೆದು ಅದರ ಸವಾಲುಗಳನ್ನು ಎದುರಿಸಿ ಗೆದ್ದು ಅನ್ಯಾನ್ಯ ದ್ವೀಪಗಳಿಗೆ ಮೊದಲು ಯಾತ್ರೆ ಕೈಗೊಂಡರೆಂಬ ಕಾರಣಕ್ಕೆ! ಜಾವಾದಲ್ಲಂತೂ ಅಗಸ್ತ್ಯರ ಪೂಜೆ ಈಗಲೂ ನಡೆಯುತ್ತದೆ. ಜಟಾಧಾರಿ, ಎದೆವರೆಗೂ ಇಳಿಬಿಟ್ಟಿರುವ ಶ್ವೇತ-ಶುಭ್ರ ಗಡ್ಡದ ಕೂದಲುಗಳು, ಕಮಂಡಲು ಹಿಡಿದ ಅಗಸ್ತ್ಯರ ಮೂತರ್ಿ ಅಲ್ಲಿ ಅನೇಕ ಕಡೆ ಕಾಣ ಸಿಗುತ್ತದೆ. ಅಷ್ಟೇ ಅಲ್ಲ, ‘ಅಗಸ್ತ್ಯ ಪರ್ವ’ವೆಂಬ ಕೃತಿಗೆ ಅಲ್ಲಿ ಬಲವಾದ ಮಾನ್ಯತೆ ಇದೆ.

ಇಂಡೋನೇಷಿಯಾದ ನೃತ್ಯ, ನಾಟಕಗಳ ಮೇಲೆ ಒರಿಸ್ಸಾದ ಪ್ರಭಾವ ಬಲು ಜೋರಾಗಿದೆ. ಇಲ್ಲಿ ಈಗಲೂ ಭಾರತೀಯ ಮೂಲದ ಜನರನ್ನು ‘ಕ್ಲಿಂಗ್’ ಎಂದು ಸಂಬೋಧಿಸುತ್ತಾರೆ. ಕ್ಲಿಂಗ್ ಎನ್ನೋದು ಕಳಿಂಗದ ಅಪಭ್ರಂಶ ಅನ್ನೋದು ಎಲ್ಲರಿಗೂ ಅರ್ಥವಾಗೋ ಸಂಗತಿ. ಆಶ್ಚರ್ಯವೆಂದರೆ ಮಣಿಪುರದ ಮತ್ತು ಇಂಡೋನೇಷಿಯಾದ ಜನರ ಸಂಸ್ಕೃತಿಗೂ ಬಲುವಾದ ಸಾಮ್ಯವಿದೆ. ಅವರ ಆಕಾರ, ರೂಪ, ಭಾಷೆ, ಜೀವನ ವಿಧಾನಗಳೂ ಹೋಲುತ್ತವೆ!

ಭಾರತದೊಂದಿಗೆ ಈ ರಾಷ್ಟ್ರವನ್ನು ಬಲುವಾಗಿ ಬೆಸೆದಿರುವ ಅಂಶ ಎರಡೇ. ಒಂದು ರಾಮಾಯಣ. ಮತ್ತೊಂದು ಬುದ್ಧ. ಇಂಡೋನೇಷ್ಯಾದ ವಾಲ್ಮೀಕಿ ಎಂದೇ ಕರೆಸಿಕೊಳ್ಳಲ್ಪಡುವ ಯೋಗೇಶ್ವರ ಎಂಬ ಕವಿಯನ್ನು ನೆನಪಿಸಿಕೊಳ್ಳಲೇಬೇಕು. ಈತನಿಂದ ರಚಿತ ‘ರಾಮಾಯಣ ಕಕ್ವಿನ್’ ಶಾದರ್ೂಲ ವಿಕ್ರೀಡಿತ, ಸ್ರಗ್ಧರಾ ಮೊದಲಾದ ಛಂದಸ್ಸುಗಳನ್ನು ಒಳಗೊಂಡಿದೆ. ಜಾವಾ ಭಾಷೆಯಲ್ಲಿ ಇವುಗಳ ಬಳಕೆ ಮಾಡಿ ತೋರುವಷ್ಟು ನಿಪುಣನಾಗಿದ್ದ ಆತ.

ಜಾವಾದಲ್ಲಿ ಭೀಷ್ಮ, ದ್ರೋಣ, ಕರ್ಣ ಮತ್ತು ಶಲ್ಯ ಪರ್ವಗಳನ್ನು ಹೊಂದಿರುವ ಭಾರತ ಕಥೆಯೂ ಪ್ರಚಲಿತದಲ್ಲಿದೆ.

indo ram

ಇಲ್ಲಿನ ಸಂಗೀತ ನೃತ್ಯಗಳ ಮೇಲೆ ಭಾರತದ ಪ್ರಭಾವ ಬಲು ಜೋರು. ಇಂದು ಇಂಡೋನೇಷಿಯಾದ ಬಹು ಪಾಲು ಜನ ಮುಸಲ್ಮಾನರೇ ಆದರೂ ಅವರನ್ನು ಹಿಂದೂ ಸಂಸ್ಕೃತಿಯಿಂದ ಬೇರ್ಪಡಿಸಲು ಸಾಧ್ಯವೇ ಆಗಲಿಲ್ಲ. ಬೆದರಿಕೆಗೆ ಮಣಿದ ದೇಹ ಮತ ಬದಲಿಸಬಹುದು. ಆದರೆ ಭಾವುಕ ಹೃದಯ ಹಿಂದೂ ಸಂಸ್ಕೃತಿಯನ್ನು ಬಿಡಲೊಪ್ಪಲಿಲ್ಲ. ಹೀಗಾಗಿ ಇಲ್ಲಿ ಮುಸಲ್ಮಾನರೇ ರಾಮನ-ಸೀತೆಯ ಕಥೆಗಳನ್ನು ರಾತ್ರಿಯಿಡೀ ಹಾಡಿ, ಕುಣಿಯುತ್ತಾರೆ! ಹನುಮಂತನಂತೂ ಇಲ್ಲಿನ ನಾಟ್ಯದ ಕೇಂದ್ರಬಿಂದು. ವಿಷ್ಣುವಿನ ವಾಹನ ಗರುಡ ಇಲ್ಲಿನ ರಾಜ ಲಾಂಛನ. ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಸರಸ್ವತಿಯ ಅರ್ಚನೆ ಸವರ್ೇ ಸಾಮಾನ್ಯ. ಇಲ್ಲಿನ ನೋಟಿನ ಮೇಲೆ ಗಣಪತಿಯ ಚಿತ್ರ ಮುದ್ರಿತವಾಗಿರುತ್ತಿತ್ತು. ಮುರಾಕಾಮಂಗ್ ನ ಉತ್ತರಕ್ಕೆ ಹರಿಯುವ ತೆಲೆನ್ ನದಿಯ ಹತ್ತಿರದ ಗುಹೆಯೊಂದರಲ್ಲಿ ಸಿಕ್ಕ ಶಿವ, ಗಣೇಶ, ಅಗಸ್ತ್ಯ, ಬ್ರಹ್ಮ, ನಂದೀ, ನಂದೀಶ್ವರ, ಸ್ಕಂದ, ಮಹಾಕಾಲರ ಮೂತರ್ಿಗಳು ಇಲ್ಲಿನ ಜನರ ಧಾಮರ್ಿಕ ಒಲವಿನ ಸಂಕೇತ. ದಾರಿಯುದ್ದಕ್ಕೂ ಕಂಡು ಬರುವ ರಾಮಾಯಣ ಮಹಾಭಾರತಗಳ ಹಿನ್ನೆಲೆಯ ಶಿಲ್ಪಗಳು ಈ ಜನರ ಈಗಿನ ಮಾನಸಿಕತೆಯ ದ್ಯೋತಕ. ರಾಜಧಾನಿ ಜಕಾತರ್ಾದ ವಿಮಾನ ನಿಲ್ದಾಣದಲ್ಲಿಳಿದೊಡನೆ ಕಣ್ಣಿಗೆ ರಾಚುವಂತೆ ಇರೋದು ಸಮುದ್ರ ಮಂಥನದ ಕಥೆ  ಹೇಳುವ ಶಿಲ್ಪ. ಬೋರೋಬುದ್ದೂರ್ನ ಬೌದ್ಧ ಸ್ತೂಪವನ್ನು ಯಾವಾಗಲಾದರೊಮ್ಮೆ ನೋಡಿ. ಗಾಬರಿಯಾಗಿಬಿಡುತ್ತೀರಿ. ಇಷ್ಟು ಭವ್ಯವಾದ, ಮನಮೋಹಕ ಸ್ತೂಪವನ್ನು ಬುದ್ಧನ ಜನ್ಮದೇಶ ಭಾರತದಲ್ಲಿ ನಾವೂ ಕಟ್ಟಲಾಗಿಲ್ಲ! ಇನ್ನು ಫ್ರಂಬನ್ನ ಸುಂದರ ಮಂದಿರವೂ ಅಷ್ಟೇ. ನೋಡುಗರ ಮನ ಸೆಳೆದು ಅಪ್ಪಿಕೊಂಡು ಬಿಡುತ್ತದೆ. ಅದರ ನಿಮರ್ಾಣ ಶೈಲಿ, ಶಿಲ್ಪದ ಕೆತ್ತನೆ, ವೈಭವ ಅಬ್ಬಬ್ಬ ನೋಡಲೆರಡು ಕಣ್ಣು ಸಾಲದು.

borobudur2

ಇಂಡೋನೇಷಿಯಾದ ಹೆಸರುಗಳೂ ಸಂಸ್ಕೃತಕ್ಕೆ ಹತ್ತಿರ. ರಾಜಧಾನಿ ಜಕಾತರ್ಾ ‘ಜಯಕತರ್ಾ’ ಎಂಬ ಪದದ ಅಪಭ್ರಂಶ. ಅದರ ಮೊದಲ ಪ್ರಧಾನಿ ‘ಸುಕಣರ್ೋ’ ಮಹಾಭಾರತದಿಂದ ಪ್ರಭಾವಿತ ಹೆಸರು. ಆತನ ನಂತರ ಬಂದ ‘ಸುಹಾತರ್ೊ’ವಿನ ಹೆಸರು ‘ಸುಹೃತ್’ ಪದದ ಅಪಭ್ರಂಶವೇ! ಭಾರತ ಇಲ್ಲಿನ ಜನಜೀವನದಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆಯೆಂದರೆ ಇವರ ಪಶ್ಚಿಮಕ್ಕೆ ಭಾರತ ಇರುವುದರಿಂದ ಬೋನರ್ಿಯಾದಲ್ಲಿ ಪಶ್ಚಿಮವನ್ನೇ ಭಾರತವೆಂದು ಸಂಬೋಧಿಸುತ್ತಾರೆ!

ಬಹುಶಃ ಜಗತ್ತಿನ ಅತ್ಯಂತ ಸಹಿಷ್ಣು ಮುಸಲ್ಮಾನರನ್ನು ನೋಡಬೇಕೆಂದರೆ ನೀವು ಇಂಡೋನೇಷ್ಯಾಕ್ಕೆ ಹೋಗಬೇಕು. ಏಕೆಂದರೆ ಅವರು ಆಚರಣೆಯ ದೃಷ್ಟಿಯಿಂದ ಮಾತ್ರ ಮುಸಲ್ಮಾನರು, ಸಾಂಸ್ಕೃತಿಕವಾಗಿ ಹಿಂದೂಗಳೇ!

ಇಲ್ಲಿನ ಹಿಂದೂ ಮೂಲದ ಬೇರುಗಳು ನಮಗೆ ಪಾಂಡವ ವಂಶದ ರಾಜ ಆಜೀಶಕನ ಮೂಲಕ ಸಿಗುತ್ತವೆ. ಆತನೇ ಇಲ್ಲಿಗೆ ಬಂದು ನಾಗರಿಕತೆಯನ್ನು ಪಸರಿಸಿದನೆಂದು ಇಲ್ಲಿನ ಜಾನಪದ ಕಥೆಗಳು ಹೇಳುತ್ತವೆ. ಅವನೊಟ್ಟಿಗೆ ಬಂದ ಋಷಿ-ಮುನಿಗಳು ಇಲ್ಲಿ ಆಶ್ರಮಗಳನ್ನು ಸ್ಥಾಪಿಸಿ ಸಂಸ್ಕೃತಿಯ ಪ್ರಸಾರ ಶುರು ಮಾಡಿದರಂತೆ. ಆಮೇಲೆ ಹೊಸ-ಹೊಸ ನಗರಗಳು ಹುಟ್ಟಿಕೊಂಡಿದ್ದು. ಕೃಷಿಯನ್ನು ಅನುಸರಿಸಿ ಜನ ನೆಮ್ಮದಿಯ ಬದುಕು ನಡೆಸಲಾರಂಭಿಸಿದ್ದು. ಆನಂತರ ಅನೇಕ ರಾಜರುಗಳ ಉಲ್ಲೇಖ ಕೇಳಿ ಬರುತ್ತಾದರೂ ಸುಮಾತ್ರಾದಾ ಶೈಲೇಂದ್ರ ಕಾಲ ಸುವರ್ಣಯುಗವಾಗಿತ್ತೆಂದು ಇತಿಹಾಸ ಹೇಳುತ್ತದೆ. ‘ಶ್ರೀ ವಿಜಯ’ ಶೈಲೇಂದ್ರನ ರಾಜಧಾನಿಯಾಗಿತ್ತು. ಇದು ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವೀ ಕೇಂದ್ರವಾಗಿತ್ತು. ಹಿಂದೂ ಮತ್ತು ಬೌದ್ಧ ಸಂಸ್ಕೃತಿಗಳ ಕುರಿತಂತಹ ಅಧ್ಯಯನಕ್ಕೆ ಸೂಕ್ತ ತಾಣವಾಗಿತ್ತು. ಇಲ್ಲಿನ ಅಸಂಖ್ಯರು ನಲಂದಾದಂತಹ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದ್ದರು. ಅಷ್ಟೇ ಅಲ್ಲ. ಇಲ್ಲಿನ ಆಚಾರ್ಯ ಧರ್ಮಕೀತರ್ಿಯವರಲ್ಲಿ ಹತ್ತು ವರ್ಷಗಳ ಕಾಲ ಅಧ್ಯಯನ ನಡೆಸಿದ್ದ ಆಚಾರ್ಯ ಅನೀಶ ದೀಪಂಕರರು ವಿಕ್ರಮಶಿಲಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆಯಾಗಿದ್ದರು. ಅಂದ ಮೇಲೆ ಎರಡೂ ರಾಷ್ಟ್ರಗಳ ನಡುವಣ ಸಂಬಂಧಗಳ ಹಿನ್ನೆಲೆಯಲ್ಲಿದ್ದ ಬೌದ್ಧಿಕ ಅಡಿಪಾಯ ಹೇಗಿರಬಹುದು ಊಹಿಸಿ.

ಚೀನಾದ ಯಾತ್ರಿಕ ಇತ್ಸಿಂಗ್ ನಲಂದಾದಲ್ಲಿ ಅಧ್ಯಯನ ನಡೆಸುವ, ತನ್ಮೂಲಕ ಭಾರತವನ್ನು ಅರಿಯುವ ಇಚ್ಛೆ ಹೊಂದಿದ್ದ. ಆದರೆ ನಲಂದಾದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಗಿಟ್ಟಿಸುವುದು ಸುಲಭವಾಗಿರಲಿಲ್ಲ. ಆತ ಪೂರ್ವಭಾವಿಯಾಗಿ ಶ್ರೀವಿಜಯಕ್ಕೆ ಬಂದ. ಆರು ತಿಂಗಳು ಅಲ್ಲಿನ ಆಚಾರ್ಯರ ಬಳಿ ಸಂಸ್ಕೃತಾಧ್ಯಯನ ನಡೆಸಿದ. ಅವರಿಂದ ಸೈ ಎನಿಸಿಕೊಂಡ ಮೇಲೆಯೇ ನಲಂದಾದಲ್ಲಿ ಆತನಿಗೆ ಅಧ್ಯಯನಕ್ಕೆ ಅವಕಾಶ ಸಿಕ್ಕಿದ್ದು. ಹದಿನಾಲ್ಕು ವರ್ಷಗಳ ಕಾಲ ಭಾರತದಲ್ಲಿದ್ದು ಸುಮಾತ್ರಾಕ್ಕೆ ಮರಳಿದ. ಇತ್ಸಿಂಗ್ ಭಾರತದ ವಾಯುಮಂಡಲ, ಧರ್ಮ, ನಡೆನುಡಿ, ಪರಂಪರೆ, ಹಬ್ಬ, ವೇಷಭೂಷಣ, ಭಾಷೆ ಯಥಾವತ್ತು ಇಲ್ಲಿದೆ ಎಂದು ಉದ್ಗರಿಸಿದ್ದ. ಆರು ವರ್ಷಗಳ ಕಾಲ ಅಲ್ಲಿದ್ದು ಭಾರತದಿಂದ ತಂದ ಅನೇಕ ಸಂಸ್ಕೃತ ಗ್ರಂಥಗಳನ್ನು ಚೀನೀ ಭಾಷೆಗೆ ಅನುವಾದಿಸಿದ. ಅದಕ್ಕೆ ಬೇಕಾದ ಎಲ್ಲ ಸಹಕಾರಗಳನ್ನೂ ಸ್ಥಳೀಯ ಆಚಾರ್ಯರುಗಳಿಂದ ಪಡೆದುಕೊಂಡ.

. ಸುವರ್ಣದ್ವೀಪ ಭಾರತಕ್ಕೆ ಬಲು ನಿಷ್ಠವಾಗಿತ್ತು. ಅದು ಸೈನಿಕರ ಭಯದಿಂದಲ್ಲ; ಇಲ್ಲಿನ ಧರ್ಮದ ಅಭಿಮಾನದಿಂದ. ಹೀಗಾಗಿಯೇ ಅವರು ನಾಗಪಟ್ಟಣದಲ್ಲಿ, ನಲಂದಾದಲ್ಲೂ ವಿಹಾರಗಳ ನಿಮರ್ಾಣ ಮಾಡಿ ತಮ್ಮ ಸಂಬಂಧವನ್ನು ಬಲಗೊಳಿಸಿದ್ದರು. ಅದೊಮ್ಮೆ ನಲಂದಾದ ಕುಲಗುರು ಆಚಾರ್ಯ ಧರ್ಮಪಾಲರು ಬರುವ ಸುದ್ದಿಯಿಂದ ಇಡಿಯ ಶ್ರೀ ವಿಜಯ ಅದೆಷ್ಟು ಪುಳಕಗೊಂಡಿತ್ತೆಂದರೆ ನಗರಕ್ಕೆ ನಗರವೇ ನವವಧುವಿನಂತೆ ಸಿಂಗಾರಗೊಂಡಿತ್ತು. ಉತ್ಸವದ ವಾತಾವರಣ ಏರ್ಪಟ್ಟಿತ್ತು. ಅಷ್ಟರ ಮಟ್ಟಿಗೆ ಭಾರತವಾಗಿತ್ತು ಸುಮಾತ್ರ.

ಮುಂದೆ ದಕ್ಷಿಣ ಭಾರತದ ಚೋಳ ವಂಶದ ದೊರೆಗಳ ಆಕ್ರಮಣಕ್ಕೆ ಸುವರ್ಣದ್ವೀಪ ತುತ್ತಾಯ್ತು. ದೀರ್ಘ ಕದನದ ನಂತರ ಶೈಲೇಂದ್ರ ವಂಶದ ರಾಜ ವಿಜಯೋತ್ತುಂಗ ವಮರ್ಾ ಸೋತುಹೋದ. ಸುಮಾತ್ರಾ ಲೂಟಿಗೊಳಗಾಯ್ತು. ಅದರ ವೈಭವ ಮತ್ತೆ ಮರಳಲೇ ಇಲ್ಲ. ಮುಂದೆ ಆಕ್ರಮಣಕಾರಿಗಳಾಗಿ ಬಂದ ಅನೇಕರಿಗೆ ಸುಲಭದ ತುತ್ತಾಯ್ತು. ಇದು ನಿಜಕ್ಕೂ ದುಭರ್ಾಗ್ಯಪೂರ್ಣ ಘಟನೆಯೇ ಸರಿ. ಆಥರ್ಿಕ ಕಾರಣಕ್ಕಾಗಿ ಶೈಲೇಂದ್ರ ಸಾಮ್ರಾಜ್ಯವನ್ನು ಧ್ವಂಸಗೊಳಿಸಲು ಹೋಗಿ ನಾವು ಅಲ್ಲಿದ್ದ ಸಾಂಸ್ಕೃತಿಕ ಅಡಿಪಾಯವನ್ನೇ ನಷ್ಟಗೊಳಿಸಿದಂತಾಯ್ತು. ತಾಯಿಯೇ ತನ್ನ ಮಗುವಿಗೆ ವಿಷವುಣಿಸಿದಂತೆ ಇದು. ಅದರ ಮನೋಸ್ಥೈರ್ಯ ಕುಸಿಯಿತು. ಮುಂದೆ ಇಸ್ಲಾಂನ, ಆನಂತರ ಡಚ್ಚರ ಆಕ್ರಮಣಕ್ಕೆ ಒಳಗಾಗಿ ಕೇಂದ್ರದಿಂದ ಸಾಕಷ್ಟು ದೂರ ಸರಿಯುವಂತಾಯಿತು!

ಇಸ್ಲಾಂನ ಆಕ್ರಮಣದ ಹೊತ್ತಲ್ಲಿ ಸಂಸ್ಕೃತಿಯ ರಕ್ಷಣೆಗಾಗಿ ಅನೇಕ ಆಚಾರ್ಯರು, ಪಂಡಿತರು, ರಾಜವಂಶದ ವ್ಯಕ್ತಿಗಳು ಬಾಲಿ ದ್ವೀಪಕ್ಕೆ ಹೋಗಿ ಅಡಗಿಕೊಂಡರು. ಈ ಕಾರಣದಿಂದಾಗಿಯೇ ಇಸ್ಲಾಂ ಪೂರ್ಣ ದ್ವೀಪ ಸಮೂಹವನ್ನು ಆವರಿಸಿಕೊಂಡರೂ ಬಾಲಿ ಮಾತ್ರ ಭಾರತದ ಪ್ರತಿರೂಪವಾಗಿ ಉಳಿಯಿತು. ಇಲ್ಲಿನ ನೆಲದಲ್ಲಿ ವೇದದ ಸುವಾಸನೆ ಈಗಲೂ ಇದೆ. ವೇದದ ನಂತರ ಅತ್ಯಂತ ಗೌರವಕ್ಕೆ ಪಾತ್ರವಾಗಿರೋದು ಬ್ರಹ್ಮಾಂಡ ಪುರಾಣ. ಆನಂತರ ಅನೇಕ ತಾತ್ವಿಕ ಗ್ರಂಥಗಳು. ಸಂಸ್ಕೃತ ಸಾಹಿತ್ಯಗಳು ಇಲ್ಲಿನ ಭಾಷೆಗೆ ಅನುವಾದಗೊಂಡಿವೆ. ಉಪಾಸನಾ ಪದ್ಧತಿ ಈಗಲೂ ಬಹುತೇಕ ವೈದಿಕವೇ. ಹ್ಞಾಂ! ಆಧುನಿಕತೆಯ ಸೋಂಕಿನೊಂದಿಗೆ ಬದಲಾವಣೆಗಳು ಕಂಡು ಬರುತ್ತಿವೆಯಾದರೂ ಮೂಲ ಭಾರತೀಯ ಸಂಸ್ಕೃತಿ ಬಾಲಿಯಲ್ಲಿ ಇಂದಿಗೂ ಜೀವಂತವಾಗಿದೆ. ಈ ಘಟನೆ ಇದಕ್ಕೆ ನಿದರ್ಶನ. 1979ರಲ್ಲಿ ಯುನೆಸ್ಕೋದ ಸಭೆಯೊಂದು ಕೌಲಾಲಂಪುರದಲ್ಲಿ ನಡೆದಿತ್ತು. ಅದಕ್ಕೆ ಅಂದಿನ ಮಂತ್ರಿಯಾಗಿದ್ದ ಅಡ್ವಾಣಿಯವರು ಭಾರತದ ಪರವಾಗಿ ಭಾಗವಹಿಸಿದ್ದರು. ಅದೇ ಸಭೆಯಲ್ಲಿದ್ದ ಇಂಡೋನೇಷಿಯಾದ ಮುಸ್ಲೀಂ ಮಂತ್ರಿ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ್ದನ್ನೂ ಕಂಡು ಅಡ್ವಾಣಿ ಕಕ್ಕಾಬಿಕ್ಕಿಯಾಗಿದ್ದರು.

prambanan1

ಹೌದು. ಅದು ಸಾಮಾನ್ಯ ಸಾಹಸವಲ್ಲ. ಕಾಲಿಟ್ಟೆಡೆಯಲ್ಲಿ ಮೂಲ ಸಂಸ್ಕೃತಿಯನ್ನು ನಾಶ ಮಾಡಿರುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ದಾಳಿಕೋರರ ಆಕ್ರಮಣವನ್ನು, ಅಸಹಿಷ್ಣುತೆಯನ್ನೂ ಸಹಿಸಿಕೊಂಡು ಶ್ರೇಷ್ಠ ಸಂಸ್ಕೃತಿಯೊಂದನ್ನು ಉಳಿಸುವ ಪ್ರಯತ್ನ ಮಾಡಿದರಲ್ಲ ಇಂಡೋನೇಷಿಯಾದ ಜನ ನಿಜಕ್ಕೂ ಅದು ಸಾಧನೆಯೇ. ಆದರೆ ಸ್ವಾತಂತ್ರ್ಯಾನಂತರ ಭಾರತದ ನಿರ್ಲಕ್ಷ್ಯಕ್ಕೆ ಒಳಗಾದ ಈ ದ್ವೀಪ ಸಮೂಹ 1965 ರ ಯದ್ಧದಲ್ಲಿ ಪಾಕಿಸ್ತಾನಕ್ಕೆ ಸಹಕಾರ ಕೊಡುವ ಮಾತನ್ನೂ ಆಡಿತ್ತು. ರಾಮ ನಲಿದಾಡಿದ, ಬುದ್ಧ ತಿರುಗಾಡಿದ ಭೂಮಿಯನ್ನು ಬಿಟ್ಟು ಅದರ ಶತ್ರುಗಳಿಗೆ ಸಹಾಯ ಮಾಡುವ ಮನೋಭೂಮಿಕೆಗೆ ಇಂಡೋನೇಷಿಯಾ ತಯಾರಾಗಿತ್ತೆಂದರೆ ಸ್ವಾತಂತ್ರ್ಯಾನಂತರ ಭಾರತ ಅದರೊಟ್ಟಿಗೆ ಹೇಗೆ ನಡೆದುಕೊಂಡಿರಬೇಕು ಹೇಳಿ. ವಿವೇಕಾನಂದರ ಜನ್ಮ ಶತಮಾನೋತ್ಸವಕ್ಕೆ ಪ್ರಕಟಗೊಂಡ ‘ಸ್ವರ ವಿವೇಕಾನಂದ’ ಪುಸ್ತಕಕ್ಕೆ ಮುನ್ನುಡಿ ಬರೆದ ಅಧ್ಯಕ್ಷ ಸುಕಣರ್ೋ ‘ವಿವೇಕಾನಂದರನ್ನು ಓದಿದ ನಂತರವೇ ನನ್ನ ಜನರನ್ನೂ, ನನ್ನ ದೇಶವನ್ನೂ ಪ್ರೀತಿಸುವುದು ಹೇಗೆಂದು ಅರಿತದ್ದು’ ಎಂದಿದ್ದ. ಅಷ್ಟೊಂದು ಭಾರತಕ್ಕೆ ಇಲ್ಲಿನ ವ್ಯಕ್ತಿಗಳಿಗೆ ಹತ್ತಿರವಿರುವ ಜನಾಂಗ ಅದು.

ಮತ್ತೊಮ್ಮೆ ಜಗತ್ತಿನೊಂದಿಗಿನ ನಮ್ಮ ಬಾಂಧವ್ಯ ಗಟ್ಟಿ ಮಾಡಬೇಕು. ಜಗತ್ತನ್ನೆಲ್ಲ ಸಹಿಷ್ಣು ಜನಾಂಗ ಆವರಿಸುವಂತೆ ಪ್ರೇರಣೆ ನೀಡಬೇಕು. ಸದ್ಯ! ಪ್ರಧಾನಿ ನರೇಂದ್ರ ಮೋದಿ ಅದನ್ನು ಮಾಡುತ್ತಿದ್ದಾರೆ.

4 thoughts on “ದೇಹದಿಂದ ಮುಸಲ್ಮಾನ, ಹೃದಯ ಮಾತ್ರ ಹಿಂದೂ!

  1. Indonesia is worlds largest Islam country. Their tolerance is commendable. Apart Bali there are big temples in Yogyakarta. The Prambanan temple complex has temples of BRAHMA VISHNU AND MAHESHWAR temples constructed around 10th century are maintained well. GANESHA AND SARASWATHI ARE MOST POPULAR. One should visit INDONESIA in life time at least once.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s