ಸಾರೇ ಜಹಾಂಸೆ ಅಚ್ಛಾ! ಎಷ್ಟು ಸಚ್ಚಾ?

1905ರಲ್ಲಿ ವಂಗಭಂಗವಾದ ನಂತರ ಹಿಂದೂ-ಮುಸಲ್ಮಾನರ ನಡುವಿನ  ಭೇದ ಕರಗತೊಡಗಿತ್ತು ರಾಷ್ಟ್ರೀಯ ನಾಯಕರನೇಕರು ಇಸ್ಲಾಂ ಪ್ರವಾಹವನ್ನು ಭಾರತೀಯತೆಯೊಳಗೆ ಜೀರ್ಣಗೊಳಿಸುವ  ಮತ್ತು ಭಾರತೀಯ ಇಸ್ಲಾಂನ  ಪರಿಕಲ್ಪನೆಯನ್ನು ಗಟ್ಟಿಮಾಡುವ ಪ್ರಯತ್ನದಲ್ಲಿ ತೊಡಗಿದ್ದರು.ಇದು ಇಕ್ಬಾಲನಿಗೆ ಜೀರ್ಣವಾಗಿಲಿಲ್ಲ. ಆತ ಮುಸಲ್ಮಾನರಿಗೆ ತನ್ನ ಶಾಯರಿಗಳ ಮೂಲಕ ಭಡಕಾಯಿಸಲಾರಂಭಿಸಿದ.ದೇಶಭಕ್ತಿ ಮತ್ತು ಮಾತೃಭೂಮಿಯ ಪ್ರೇಮದ ರೋಗದಿಂದ ಬಚಾವಾಗಿರಿ ಎಂದ.

Sare-Jahan-Se-Acha

ಈ ದೇಶದ ಇತಿಹಾಸವೇ ಹಾಗೆ.ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು. ಮೊಘಲರ ಆಕ್ರಮಣದ ಬಗ್ಗೆ ಮಾತನಾಡಿದರೆ ಮುಸಲ್ಮಾನರಿಗೆ ನೋವಾಗುತ್ತದೆ ಅದಕ್ಕೆ ಅವರು ಮಾಡಿದ ಕೆಟ್ಟ ಕೆಲಸಗಳ ಉಲ್ಲೇಖ ಮಾಡಲೇ ಬೇಡಿ. ರಾಣಾ ಪ್ರತಾಪನ ಬಗ್ಗೆ ಹೇಳಿದರೆ ಅಕ್ಬರನಿಗೆ ಅವಮಾನ ಮಾಡಿದಂತೆ. ಅದಕ್ಕೇ ರಾಣಾಪ್ರತಾಪನ ಪರಿಚಯ ಮಾಡಲೇ ಬೇಡಿ,ಶಿವಾಜಿ ಬಗ್ಗೆ ಒಳ್ಳೆಯದನ್ನು ಹೇಳಬೇಡಿ, ಟಿಪ್ಪೂ ಸುಲ್ತಾನನ ಬಗ್ಗೆ ಕೆಟ್ಟದ್ದನ್ನು ಬರಿಯಬೇಡಿ. ಈ ಪೂರ್ವಗ್ರಹ ಪೀಡಿತ ದೃಷ್ಟಿಯಿಂದಾಗಿಯೇ ವಂದೇ ಮಾತರಂ,ಜನಗಣಮನಗಳೂ ಕಿಟಕಿಯಿಂದ ಹೊರಬರಲಿಲ್ಲ. ನನ್ನ ಪಾಲಿಗೆ ಆ ಸಾಲಿನ ಹೊಸ ಸೇರ್ಪಡೆ ‘ಸಾರೆ ಜಹಾಸೆ ಅಚ್ಚಾ’.
ಕಳೆದ ಮೇ ತಿಂಗಳ ಕೊನೆಯ ಮೂರು ದಿವಸ ಪಶ್ಚಿನ ಬಂಗಾಳದಲ್ಲಿ ಒಂದು ಸರ್ಕಾರಿ ಉತ್ಸವ ಬಲು ವಿಜೃಂಭಣೆಯಿಂದ ನಡೆಯಿತು. ಅದಕ್ಕೆ ಜಶ್ನ್-ಇ-ಇಕ್ಬಾಲ್ ಎಂಬ ಹೆಸರು ಬೇರೆ.ಅಷ್ಟೇ ಅಲ್ಲ ಮೊಹಮ್ಮದ್ ಇಕ್ಬಾಲರಿಗೆ ‘ತರಾನಾ-ಎ-ಹಿಂದ್’ ಎಂಬ ಮರಣೋತ್ತರ ಪ್ರಶಸ್ತಿ ಕೊಡಲಾಯಿತು. ಆಜಾದ್ ವಿಶ್ವ ವಿದ್ಯಾಲಯದಲ್ಲಿ ಉರ್ದು ವಿಭಾಗದಲ್ಲಿ ಇಕ್ಬಾಲ್ ಪೀರ್ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆಯನ್ನು ತೋರಿತು. ಅವರ ಮೊಮ್ಮಗನನನ್ನು ಕರೆಸಿ ಸನ್ಮಾನ ಮಾಡಲಾಗಿತ್ತು.ಇಷ್ಟಕ್ಕೂ ಅವರ ಮೊಮ್ಮಗ ಜಮಾತೆ ಇಸ್ಲಾಮಿ ಎಂಬ ಭಾರತ ವಿರೋಧಿ ಕಟ್ಟರ್ ಪಂಥಿಗಳ ಬೆಂಬಲಕ್ಕಾಗಿ ನಿಂತ ತೆಹ್ರಿಕೆ ಇಂಸಾಫ್ ಪಕ್ಷದ ನೇತಾರ ಕೂಡ ಹೌದು! ಇಂತಹವನನ್ನು ಪಶ್ಚಿಮ ಬಂಗಾಳದಲ್ಲಿ ಕರೆದು ಸನ್ಮಾನಿಸಿ,ಅವರ ತಾತನನ್ನು ಹೊಗಳಿ ಅಟ್ಟಕ್ಕೇರಿಸುವುದು ಅದ್ಯಾವ ದೃಷ್ಟಿಯ ರಾಜಕಾರಣವೋ ದೇವರೇ ಬಲ್ಲ.ದೇಶದ್ರೋಹವೆನಿಸಿದರೂ ಸರಿ ಓಟಿಗಾಗಿ ಏನನ್ನೂ ಬೇಕಾದರೂ ಮಾಡುತ್ತೇವೆಂದು ಹೊರಟವರಿಗೆ ಏನನ್ನಬೇಕು ಹೇಳಿ.
ಇಲ್ಲಿ ಚರ್ಚೆ ಮಮಕಾರದ್ದಲ್ಲ, ಇಕ್ಬಾಲ್ ಅಹಮ್ಮದರದ್ದು, ಅವರು ಬರೆದ ‘ಸಾರೆ ಜಹಾಸೆ ಅಚ್ಚಾ’ ನಮಗೆ ಶ್ರೇಷ್ಠ ದೇಶ ಭಕ್ತಿ ಎನಿಸುತ್ತದೆ. ಏಕೆಂದರೆ ಅದನ್ನು ನಾವು ಪೂರ್ತಿ ಹಾಡದೇ ಅದರಲ್ಲಿರುವ ಕೆಲವು ಪಂಕ್ತಿಗಳನ್ನಷ್ಟೇ ಹಾಡಿಬಿಡುತ್ತೇವೆ.ಬಿಟ್ಟು ಬಿಟ್ಟಿರುವ ಒಂದೆರಡು ಸಾಲುಗಳು.ಇಕ್ಬಾಲರ ಮನಸ್ಥಿತಿಯನ್ನು ತೆರೆದಿಡುತ್ತದೆ. ’ಏ ಆಬೇರುದೇ ಗಂಗಾ ವಹ್ ದಿನ್ ಹೈ ಯಾದ್ ತುಝಕೋ, ಉತರಾ ತೆರೆ ಕಿನಾರೆ ಜಬ್ ಕಾರವಾ ಹಮಾರಾ’ ಈ ಎರಡು ಸಾಲುಗಳು ಆಗೀತೆಯ ನಟ್ಟನಡುವೆ ಬರುವಂಥದ್ದು. ಇದರರ್ಥ ಏನು ಗೊತ್ತೇ? ’ಏಲೈ ಗಂಗೆ! ನಮ್ಮ ಹಡಗುಗಳು ನಿನ್ನ ತಟಕ್ಕೆ ಬಂದು ನಿಂತಿದ್ದು ನಿನಗೆ ನೆನಪಿದೆಯೇ? ಅಂತ. ಹಾಗೆ ಗಂಗಾ ತಟಕ್ಕೆ ಬಂದು ನಿಂತ ನೆನಪಿಡಬೇಕಾದ ಶತ್ರು ಸೇನೆ ಇಸ್ಲಾಂ ನಲ್ಲರದ್ದೇ ಮತ್ಯಾರದ್ದು.ಇದನ್ನು ಹೃದಯಕ್ಕೆ ತಂದುಕೊಂಡರೆ ಇಡಿಯ ಗೀತೆಯೇ ಅರಬ್ಬರ ಝಂಡಾ ಹಾರಿಸುವ ಬುದ್ಧಿವಂತ  ಷಡ್ಯಂತ್ರ ಅನ್ನಿಸುತ್ತದೆ.
ಇಷ್ಟಕ್ಕೂ! ಮೊಹಮ್ಮದ್ ಇಕ್ಬಾಲರನ್ನು ಸರಿಯಾಗಿ ಅರ್ಥೈಸಿಕೊಂಡರೆ ಪಾಕಿಸ್ತಾನದ ಕಲ್ಪನೆಯ ಜನಕರೇ ಆತ. ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಾರದು.1909 ರಲ್ಲಿ ಇಕ್ಬಾಲ್ ‘ಶಿಕವಾ’ ಎಂಬ ಕವನ ಸಂಕಲನವೊಂದನ್ನು ಬರೆದು ಅದನ್ನು ಅಂಜುಮನ್-ಎ-ಹಿಮಾಯತೆ-ಇಸ್ಲಾಂ ಹಾಲ್ ನಲ್ಲಿ ಬಿಡುಗಡೆ ಮಾಡಿದ್ದರು. ಆ ಇಡಿಯ ಕವನ ಸಂಕಲನ ಅಲ್ಲಾಹನ ಬಳಿ ಇಕ್ಬಾಲನ ದೂರಿನ ರೂಪದಲ್ಲಿತ್ತು. ‘ಮುಸಲ್ಮಾನರು ಖೈಬರ್ ಗೆದ್ದರು, ಕೈಸರನ ನಗರ ಸಿಂಗಂರಿಸಿದರು. ಇರಾನಿನ ಕಥೆ ಮುಗಿಸಿದರು. ಜಗತ್ತಿನೆಲ್ಲೆಡೆ ಅಲ್ಲಾಹನ ಧ್ವಜ ಹಾರಾಡಿಸಿದರು. ಹೀಗೆ ಹೇಳುತ್ತ ಇಕ್ಬಾಲ್ ನೊಂದುಕೊಳ್ಳುತ್ತಾನೆ.ನಿನಗಾಗಿ  ಇಷ್ಟೆಲ್ಲಾ ಬಲಿದಾನ ಮಾಡಿದ ಮುಸಲ್ಮಾನರಿಗೆ ನೀನೇನು ಕೊಟ್ಟೆ? ಕೊಡುವುದು ಬಿಡು;ಕಾಫಿರರನ್ನು ಜಗತ್ತಿನಾದ್ಯಂತ ಆನಂದದಿಂದಿಟ್ಟಿರುವೆ.ಮಸಲ್ಮಾನರಿಗೆ 72 ನಾರಿಯರು ಸ್ವರ್ಗಕ್ಕೆ  ಹೋದ ಮೇಲೆ ಸಿಗುವ ಭರವಸೆ ಕೊಟ್ಟಿರುವೆ,ಕಾಫೀರರು ಅದನ್ನು ಇಲ್ಲಿಯೇ ಅನುಭವಿಸುತ್ತಿದ್ದಾರೆ. ಹೀಗಾಗಿಯೇ ಕಾಫೀರರು ಇಸ್ಲಾಮನ್ನು ಮುಗಿದ ಅಧ್ಯಾಯವೆಂದು ಭಾವಿಸುತ್ತಿದ್ದಾರೆ. ಅವರ ಮಂದಿರದ ಮೂರ್ತಿಗಳು ನಿರ್ಭಯವಾಗಿ ನಗುತ್ತಿವೆ!’  ಹೀಗೆ ಪದೇ ಪದೇ ಅಲ್ಲಾಹರ ನಿಂದೆ ಮಾಡುತ್ತಲೇ ಮತ್ತೆ ಇಸ್ಲಾಂ ಅನ್ನು ಜಗದ್ವ್ಯಾಪಿಗೊಳಿಸುವಂತೆ ಕೇಳಿಕೊಳ್ಳುತ್ತಾರೆ.
ಇದೇ ಕವನದ ಮುಂದಿನ ಸಾಲುಗಳಲ್ಲಿ ಸ್ವತಃ ಅಲ್ಲಾಹ ಮಾತನಾಡಿ ತನ್ನ ನೋವನ್ನು ತೋಡಿಕೊಳ್ಳುತ್ತಾರೆ.’ನನಗಾಗಿ ಕೊಲೆ ಸುಲಿಗೆ ಮಾಡುವವರು ಈಗೆಲ್ಲಿದ್ದಾರೆ? ನನ್ನ ಹೆಸರಲ್ಲಿ ಕತ್ತಿ ಹಿರಿದು ಇಸ್ಲಾಂನ್ನು ಹರಡಿಸಬಲ್ಲ,ಅದೇ ಆವೇಶದಲ್ಲಿ ಎಲ್ಲರನ್ನು ಮುಸಲ್ಮಾನರಾಗಿಸಬಲ್ಲವರು ಇಲ್ಲವೇ ಇಲ್ಲ.ಅವರೆಲ್ಲ ದೇಶ,ರಾಷ್ಟ್ರೀಯತೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.ಅವರ ಕತ್ತಿ ತುಕ್ಕು ಹಿಡಿದಿವೆ. ಈಗಿನ ಮುಸಲ್ಮಾನ ಸಾಯುವುದಕ್ಕೆ ಅಂಜುತ್ತಿದ್ದಾನೆ. ಅವನು ಬದುಕುವ ರೀತಿ-ರಿವಾಜುಗಳಲ್ಲಿ ಕ್ರಿಶ್ಚಿಯನ್ನನಂತೆ, ಸಂಸ್ಕೃತಿಯಲ್ಲಿ ಹಿಂದೂವಿನಂತೆ ಮತ್ತು ಹೇಡಿತನದಲ್ಲಿ ಯಹೂದ್ಯರಂತೆ ಆಗಿಬಿಟ್ಟಿದ್ದಾನೆ.ಅವನೀಗ ಭಾರತವೆಂಬ ಮೂರ್ತಿಯ ಪೂಜೆ ಮಾಡಿತ್ತಿದ್ದಾನೆ. ಹಾಗೆಂದು ಅಲ್ಲಾಹ್ ನೋವಿನಿಂದ ಹೇಳಿಕೊಳ್ಳುತ್ತಾರೆ.
ಇಸ್ಲಾಮಿನ ದೃಷ್ಟಿಯಲ್ಲಿ ಮುಸಲ್ಮಾನರು ಭಾರತೀಯ  ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳುವುದು ತಪ್ಪು ಜೊತೆಗೆ ಬಾರತಮಾತೆಯನ್ನು ಆರಾಧಿಸುವುದೂ ಕೂಡ! ಇಲ್ಲಿನ ಮುಸಲ್ಮಾನರು ಅರಬ್ ರಾಷ್ಟ್ರದಿಂದ ಬಂದವರೇನು? ಇವರು ಆಚರಿಸುವ ಪೂಜಾ ಪದ್ಧತಿ ಅಲ್ಲಿನದೇ ಹೊರತು ಇವರೆಲ್ಲರ ಸಂಸ್ಕೃತಿ ಅಕ್ಷರಶ: ಭಾರತೀಯವೇ! ನಮ್ಮಷ್ಟೇ ಇವರೂ ಭಾರತ ಮಾತೆಯ ಮಕ್ಕಳೇ. ಇಕ್ಬಾಲ್ ಇದನ್ನು ಧಿಕ್ಕರಿಸಿದ.1905ರಲ್ಲಿ ವಂಗಭಂಗವಾದ ನಂತರ ಹಿಂದೂ-ಮುಸಲ್ಮಾನರ ನಡುವಿನ  ಭೇದ ಕರಗತೊಡಗಿತ್ತು ರಾಷ್ಟ್ರೀಯ ನಾಯಕರನೇಕರು ಇಸ್ಲಾಂ ಪ್ರವಾಹವನ್ನು ಭಾರತೀಯತೆಯೊಳಗೆ ಜೀರ್ಣಗೊಳಿಸುವ  ಮತ್ತು ಭಾರತೀಯ ಇಸ್ಲಾಂನ  ಪರಿಕಲ್ಪನೆಯನ್ನು ಗಟ್ಟಿಮಾಡುವ ಪ್ರಯತ್ನದಲ್ಲಿ ತೊಡಗಿದ್ದರು.ಇದು ಇಕ್ಬಾಲನಿಗೆ ಜೀರ್ಣವಾಗಿಲಿಲ್ಲ. ಆತ ಮುಸಲ್ಮಾನರಿಗೆ ತನ್ನ ಶಾಯರಿಗಳ ಮೂಲಕ ಭಡಕಾಯಿಸಲಾರಂಭಿಸಿದ.ದೇಶಭಕ್ತಿ ಮತ್ತು ಮಾತೃಭೂಮಿಯ ಪ್ರೇಮದ ರೋಗದಿಂದ ಬಚಾವಾಗಿರಿ ಎಂದ.ಇಕ್ಬಾಲನ ಕೋರಿಕೆ ಅಲ್ಲಾಹನ ಬಳಿ ಒಂದೇ ಆಗಿತ್ತು, ‘ಹಿಂದ್ ಕೇ ದೈರನ್ ಶಿನೋಂಕೀ ಮುಸಲ್ಮಾಂ ಕರ್ ದೇ’ ಹಿಂದೂಗಳನ್ನು ಮುಸಲ್ಮಾನರನ್ನಾಗಿಸಲು ಶಕ್ತಿಕೊಡೆಂದು ಪ್ರಾರ್ಥಿಸುತ್ತಿದ್ದರು ಮುಸಲ್ಮಾನರ ಹಿಂದಿ ಪ್ರೇಮದ ಕುರಿತಂತೆಯೂ ಅವರಿಗೆ ವಿಪರೀತ ಕೋಪ ಇತ್ತು. ಒಟ್ಟಿನಲ್ಲಿ ಮುಸಲ್ಮಾನರು ಯಾವ ಕಾರಣಕ್ಕೂ ಭಾರತೀಯ ಸಂಸ್ಕೃತಿಯೊಳಗೆ ಏಕಪ್ರವಾಹವಾಗದಂತೆ ತಡೆಯುವುದು ಅವರ ನಿಶ್ಚಿತ ಉದ್ದೇಶವಾಗಿತ್ತು.ಒಟ್ಟಾರೆ ಸ್ಪಷ್ಟವಾಗಿ ಹೇಳಬೇಕೆಂದರೆ ಮುಸಲ್ಮಾನರಿಗಾಗಿ ಪ್ರತ್ಯೇಕ ರಾಷ್ಟ್ರದ ಕಲ್ಪನೆ ಕಟ್ಟಿಕೊಟ್ಟ ಅಗ್ರಣಿ ಇಕ್ಬಾಲ್ ಅಹ್ಮದ್.
ಆದರೆ ಆಶ್ಚರ್ಯದ ಸಂಗತಿ ಏನು ಗೊತ್ತೇ? ಇಕ್ಬಾಲರ ತಾತ-ಅಜ್ಜಿ ಕಾಶ್ಮೀರಿ ಪಂಡಿತರ ಕುಟುಂಬದವರು. ಮುಂದೆ ಇಸ್ಮಾಂಗೆ ಮತಾಂತರಗೊಂಡರು. ಕಾಶ್ಮೀರವನ್ನು ಸಿಖ್ಖರು ವಶಪಡಿಸಿಕೊಂಡಾಗ ಪಂಜಾಬಿನೆಡೆಗೆ ವಲಸೆ ಬಂದು ಬಿಟ್ಟರು, ತಂದೆ  ಟೈಲರಿಂಗ್  ಮಾಡುತ್ತಿದ್ದರು.ವಿದ್ಯಾವಂತರಲ್ಲದಿದ್ದರೂ ಪಂಥದ ಮೇಲಿನ ಆಸ್ಥೆ ಜೋರಾಗಿಯೇ ಇತ್ತು. ತಾಯಿಯೂ ಕೂಡಾ ಶ್ರದ್ದಾವಂತ ಮುಸ್ಲಿಂ ಆಗಿದ್ದಳು.ಇಕ್ಬಾಲರಿಗೆ ಮದರಸಾ ಶಿಕ್ಷಣ ದೊರೆಯಿತು.ಪಂಜಾಬಿನಲ್ಲೇ ಎಂ.ಎ. ಮುಗಿಸಿ ಲಂಡನಿನ್ನಲ್ಲಿ ಬ್ಯಾರಿಸ್ಟರ್ ಗಿರಿ ಪಡೆದರು. ವಕಾಲತ್ತು ಹಿಡಿಸಲಿಲ್ಲ,ಸಾಹಿತ್ಯದ ಕೈಕಂರ್ಯಕ್ಕೆ ನಿಂತರು.ಭೋಪಾಲದ ನವಾಬ ಅವರಿಗೆ ಸಹಾಯ ಧನ ನೀಡುತ್ತಿದ್ದ. ಮುಂದೆ ಇಸ್ಲಾಂ ನ ಪ್ರಚಾರಕ್ಕೆಂದು ಸಂಘಟನೆ ಕಟ್ಟಿ ಅದರ ಸಂಚಾಲಕರೂ ಆದರು.1930 ರಲ್ಲಿಯೇ ಪಾಕಿಸ್ತಾನದ ಕಲ್ಪನೆಯ ಕೂಸನ್ನೇ ಹೊರಗಿಟ್ಟ. ಇಕ್ಬಾಲರ ಕನಸನ್ನು ಅರ್ಥೈಸಿಕೊಂಡು ಜಿನ್ನಾ ಮಾತನಾಡಲು ಶುರುಮಾಡಿದ್ದು 1940 ರ ನಂತರ. ಅವರ ಆ ವೇಳೆಗಾಗಲೇ ಮಾಡಿದ ಭಾಷಣದಲ್ಲಿ ಸೆಕ್ಯೂಲರಿಸಂ ನ ಕಲ್ಪನೆಯನ್ನೆ ತಿರಸ್ಕರಿಸಿದ್ದಲ್ಲರೇ ಬಹುಸಂಖ್ಯಾತ ಹಿಂದೂಗಳು ಮುಸಲ್ಮಾನರನ್ನೇ ತುಳಿದುಬಿಡುತ್ತಾರೆಂಬ ಭಯದ ಬೀಜವನ್ನು ಬಿತ್ತು ಬಿಟ್ಟಿದ್ದರು ಇದೇ ಭಯದ ಬೀಜ ಮುಂದೆ ಹೆಮ್ಮರವಾಗಿ ನಿಂತು ದೇಶವನ್ನು ಹರಿದು ಹಂಚಿಬಿಟ್ಟಿತು.ಈತ ಬರೆದ ಗೀತೆ ಸಾರೆ ಜಹಾಂಸೆ ಅಚ್ಛಾ!

allama-iqbal
ಮುಸಲ್ಮಾರನ್ನೂ ಮುಖ್ಯವಾಹಿನಿಯಿಂದ ದೂರಕ್ಕೆಳೆದು, ಅವರನ್ನು ಭಾರತದಿಂದ,ಭಾರತೀಯರಿಂದ ಆಚೆಗೆ ನೂಕುವ ಇಂಥವರನ್ನು ಬಂಗಾಳ ಸರ್ಕಾರ ಕರೆದು ಸನ್ಮಾನಿಸುತ್ತಲ್ಲ ಅದು ದುರಂತ. ನಮ್ಮ ಇತಿಹಾಸದ ಪುಸ್ತಕಗಳೆಲ್ಲ ಇಕ್ಬಾಲನನ್ನು ಹೊಗಳಿದವೇ ಹೊರತು ಈ ಅಂಶಗಳನ್ನು ದಾಖಲಿಸಲೇ ಇಲ್ಲ.ನಾನೂ ಜಾಗೋ ಭಾರತ್ ನಲ್ಲಿ ಅನೇಕ ಬಾರಿ ಹೆಮ್ಮೆಯಿಂದ  ಹಾಡಿದ ಗೀತೆ ಇದು. ಆದರೆ ಈ ಹಾಡಿನ ಮತ್ತು ಇದನ್ನು ಬರೆದವರ ಹಿನ್ನಲೆ ಹೀಗೆ ಎಂದು ಗೊತ್ತಾಗಿದಾಗಿನಿಂದ  ಯಾಕೋ ಮನಸಿಗೆ ಕಿರಿಕಿರಿ. ಕಾಶ್ಮೀರಿ ಪಂಡಿತನೊಬ್ಬ ಮಹಮ್ಮದ ಇಕ್ಬಾಲನಾಗಿ ದೇಶವಿರೋಧಿಯಾಗಿ ನಿಂತ ಆ ಮಾಯಾ ಲೋಕ ನೆನೆದಾಗಲೆಲ್ಲ, ಮೈ ಜುಂ ಎನ್ನುತ್ತದೆ.
ಇಂದು ಜಗತ್ತಿನಾದ್ಯಂತ ಹರಡಿರುವ ಇಸ್ಲಾಂ ಭಯೋತ್ಪಾದನೆಯ ಸ್ವರೂಪವನ್ನು ಇಕ್ಬಾಲ್ ಅಂದು ಕ್ರೋಢಿಕರಿಸಿ ಬೀಜರೂಪದಲ್ಲಿ ನಮ್ಮೆದುರಿಗಿಟ್ಟಿದ್ದರು. ನಾವು ಅದನ್ನು ಗುರುತಿಸುವಲ್ಲಿ ಎಡವಿದೆವು.ಇಂತಹವರನ್ನು ಹುಡುಕಿ ಈಗಲೂ ಸನ್ಮಾನ ಮಾಡುವ, ಉತ್ಸವ ಮಾಡುವ ನಾಗರಿಕರಿದ್ದಾರಲ್ಲ ಇಂತಹವರಿಗೆ ಏನನ್ನಬೇಕು ಹೇಳಿ!

3 thoughts on “ಸಾರೇ ಜಹಾಂಸೆ ಅಚ್ಛಾ! ಎಷ್ಟು ಸಚ್ಚಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s