ಥಾಯ್ಲ್ಯಾಂಡಿನ ರಾಮಾಯಣದ ಕಥನ ಬಲು ರೋಚಕ, ರಮಣೀಯ!

ಕಾಂಬೋಡಿಯಾದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಭಾರತದ ವ್ಯಾಪಾರಿಗಳು ಅದರ ಸುತ್ತಲೂ ಇರುವ ಪ್ರದೇಶಗಳ ಮೇಲೆ ಸಾಂಸ್ಕೃತಿಕವಾಗಿ ಪ್ರಭಾವ ಬೀರುತ್ತಾ ನಡೆದರು. ಈ ಪ್ರದೇಶಗಳೆಲ್ಲ ಚೀನಿಯನ್ನರ ದೃಷ್ಟಿಯಿಂದಲೂ ಅನಾಗರಿಕರೆನ್ನಿಸಿಕೊಂಡವರಿಂದ ಕೂಡಿದಂಥವೇ. ಮೀನು ಹಿಡಿಯೋದು, ಕಾಡಿನಲ್ಲಿ ಬೇಟೆಯಾಡೋದು ಇಷ್ಟೇ ಅವರ ಬದುಕಾಗಿತ್ತು. ಭಾರತೀಯರು ಕಾಲಿಟ್ಟ ಮೇಲೆಯೇ ಇಲ್ಲಿ ಕೃಷಿಗೆ ಜೀವ ಬಂತು. ಲಜ್ಜೆ ಜಾಗೃತವಾಯ್ತು. ಚೀನಾದ ಸಂಸ್ಕೃತಿ ಎಷ್ಟು ಪ್ರಾಚೀನವಾದರೂ ತಮ್ಮ ಗಡಿ ಪ್ರದೇಶದ ಜನರನ್ನು ಸುಸಂಸ್ಕೃತವಾಗಿಸುವಲ್ಲಿಯೂ ಅವರು ಸೋತು ಹೋಗಿದ್ದರು. ಭಾರತೀಯರು ದೂರದೂರಕ್ಕೆ ಹೋಗಿಯೂ ವಿಶ್ವವನ್ನೇ ಆರ್ಯವನ್ನಾಗಿಸುವ ಸಂಕಲ್ಪ ಪೂರ್ಣಗೊಳಿಸಿದ್ದರು.

thai1

ಭಾರತ ಮತ್ತು ಇತರ ರಾಷ್ಟ್ರಗಳೊಂದಿಗಿನ ಸಂಬಂಧ ಇವತ್ತು ನಿನ್ನೆಯದಲ್ಲ. ಗುಪ್ತರ ಕಾಲದಲ್ಲಿ ಆಗ್ನೇಯ ಏಷ್ಯಾದ ಮೇಲೆ ಪ್ರಭುತ್ವ ಸ್ಥಾಪಿಸಿದ್ದೆವು; ಅದಕ್ಕೂ ಮುನ್ನ ಪಲ್ಲವರ, ಚೋಳರ ಕಾಲದಲ್ಲಿ ನಮ್ಮ ಪ್ರಭಾವ ಈ ದ್ವೀಪ ಸಮೂಹಗಳ ಮೇಲಿತ್ತು. ಇನ್ನೂ ಒಂದು ಹೆಜ್ಜೆ ಹಿಂದಿಡುವುದಾದರೆ ಬುದ್ಧನ ಅನುಯಾಯಿಗಳು ತಮ್ಮ ಪ್ರಭಾವವನ್ನು ಬೀರಿದ್ದರು. ಆದರೆ ಈ ದ್ವೀಪ ಸಮೂಹಗಳ ಇತಿಹಾಸವನ್ನು ಕೆದಕಿ ನೋಡಿದರೆ ಊಹೆಗೂ ನಿಲುಕದಷ್ಟು ಹಿಂದಿನ ಕಾಲದಿಂದಲೂ ಭಾರತದ ಸಂಪರ್ಕ, ಪ್ರಭುತ್ವ ಇದೆ!
ಸೀತೆಯನ್ನು ಅರಸುತ್ತಾ ಪೂರ್ವದಿಕ್ಕಿಗೆ ಹೊರಟಿದ್ದರಲ್ಲ ವಾನರರು ಅವರನ್ನು ಉದ್ದೇಶಿಸಿ ವಾನರರಾಜ ಸುಗ್ರೀವ
ಯವದ್ವೀಪಮತಿಕ್ರಮ್ಯ ಶಿಶಿರೋ ನಾಮಪರ್ವತಃ|
ದಿವಂ ಸ್ಪೃಶತಿ ಶೃಂಗೇಣ ದೇವದಾನವ ಸೇವಿತಃ|| ಎನ್ನುತ್ತಾನೆ.
ಅದರರ್ಥ ಯವದ್ವೀಪವನ್ನು ದಾಟಿದ ಮೇಲೆ ಶಿಶಿರವೆಂಬ ಪರ್ವತವಿದೆ. ಆಕಾಶವನ್ನೇ ಮುಟ್ಟುವಷ್ಟು ಎತ್ತರವಿರುವ ಈ ಪರ್ವತದ ಮೇಲೆ ದೇವತೆಗಳು, ರಾಕ್ಷಸರು ಇಬ್ಬರೂ ವಾಸಿಸುತ್ತಾರೆ ಅಂತ. ಇಲ್ಲಿ ಯವ ದ್ವೀಪವೆಂದರೆ ಇಂಡೋನೇಶಿಯಾದ ದ್ವೀಪ ಸಮೂಹಗಳಲ್ಲಿ ಒಂದಾದ ಜಾವಾ. ಅದನ್ನು ದಾಟಿದರೆ ಬಾಲಿ. ಅಲ್ಲಿಯೇ ಇರೋದು ಗುನುಂಗ್ ಅಗುಂಗ್ ಪರ್ವತ!
ವಾಲ್ಮೀಕಿ ರಾಮಾಯಣದಲ್ಲಿ ಯವದ್ವೀಪ, ಸುವರ್ಣರೂಪ್ಯಕ ದ್ವೀಪಗಳೆಲ್ಲ ಉಲ್ಲೇಖಗೊಂಡಿವೆ. ಭೂ ಮಾರ್ಗದಿಂದ ಸಾಗಿದರೆ ಸಿಗುವ ಮಾಯನ್ಮಾರ್(ಬ್ರಹ್ಮದೇಶ), ಥಾಯ್ಲ್ಯಾಂಡ್(ಶ್ಯಾಮ), ಕಾಂಬೋಡಿಯಾ(ಕಂಬುಜ), ವಿಯೆಟ್ನಾಂ(ಚಂಪಾ) ಇವುಗಳೊಟ್ಟಿಗೆ ಸುಮಾತ್ರ, ಜಾವಾ, ಮಲಯ, ಬೋನರ್ಿಯೋಗಳನ್ನು ಸೇರಿಸಿ ಸುವರ್ಣ ದ್ವೀಪವೆಂದು ಕರೆಯಲಾಗುತ್ತಿತ್ತು. ಇಂದಿಗೂ ಇವೆಲ್ಲವುಗಳನ್ನೂ ಒಳಗೊಂಡಂತಹ ರಾಷ್ಟ್ರವನ್ನು ಗ್ರೇಟರ್ ಇಂಡಿಯಾ ಅಂತನೇ ಕರೆಯೋದು. ಧಾಮರ್ಿಕ ವಿಧಿ ವಿಧಾನಗಳ ವೇಳೆ ಜಂಬೂದ್ವೀಪೆ, ಭರತವಷರ್ೆ, ಭರತಖಂಡೇ ಎನ್ನುವಲ್ಲಿ ಭರತ ಖಂಡವು ಈಗಿನ ಅಪ್ಘಾನಿಸ್ತಾನ, ಪಾಕಿಸ್ತಾನಗಳನ್ನೊಳಗೊಂಡ ಭಾರತವಾದರೆ ಭರತವರ್ಷ ಗ್ರೇಟರ್ ಇಂಡಿಯಾ. ಜಂಬೂದ್ವೀಪ ಬಹುಶಃ ಏಷ್ಯಾಖಂಡದ ಕಲ್ಪನೆ ಇರಬಹುದು.
ಇದರರ್ಥ ಬಲು ಸ್ಪಷ್ಟ. ಹಿಂದೂ ಅತ್ಯಂತ ಪ್ರಾಚೀನ ಕಾಲದಿಂದಲೂ ಈ ದ್ವೀಪಗಳನ್ನು, ಜಗತ್ತನ್ನು ನೋಡಿದ್ದ; ಅರಿತಿದ್ದ ಮತ್ತು ಆಳ್ವಿಕೆಯನ್ನೂ ನಡೆಸಿದ್ದ. ವಾಯು ಪುರಾಣವಂತೂ ನಮ್ಮ ಸುತ್ತಲೂ ಹಬ್ಬಿರುವ ನವ ದ್ವೀಪಗಳ ಉಲ್ಲೇಖ ಮಾಡಿದೆ. ಕಥಾ ಸರಿತ್ಸಾಗರ ಬೇರೆ ಬೇರೆ ದ್ವೀಪಗಳನ್ನು ಕೇಂದ್ರವಾಗಿರಿಸಿಕೊಂಡು ಕಥೆಗಳನ್ನು ಹೆಣೆದಿದೆ. ಒಟ್ಟಾರೆ ಅಭಿಪ್ರಾಯ ಇಷ್ಟೇ. ಭಾರತದ ಋಷಿಯೊಬ್ಬ ವಸುಧೈವ ಕುಟುಂಬಕಂ ಎಂದು ಉದ್ಘೋಷಿಸುವಾಗ ಆತನ ಕಲ್ಪನೆ ಸೀಮಿತವಾಗಿರಲಿಲ್ಲ. ಆತ ಅಕ್ಷರಶಃ ವಿಶ್ವವನ್ನೇ ಯೋಚಿಸುತ್ತಿದ್ದ.
ಬಿಡಿ. ಕಳೆದವಾರ ಕಾಂಬೋಡಿಯಾದಲ್ಲಿ ಹಿಂದೂ ಸಂಸ್ಕೃತಿ ಬೇರು ಬಿಟ್ಟಿದ್ದನ್ನು ಓದಿದ್ದೀರಲ್ಲ ಈ ಬಾರಿ ಥಾಯ್ಲ್ಯಾಂಡ್-ಲಾವೋಸ್-ವಿಯೆಟ್ನಾಂಗಳ ಕಥೆ. ಹಾಗೆ ನೋಡಿದರೆ ಕಾಲ ಕಳೆದಂತೆ ರಾಷ್ಟ್ರಗಳೆಲ್ಲ ಹೊಸ ಆಕ್ರಮಣಕಾರಿಗಳ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತ ನಡೆದವು. ಆದರೆ ಥಾಯ್ಲ್ಯಾಂಡ್ ಮಾತ್ರ ತನ್ನ ಮೂಲ ಭಾರತೀಯ ಸಂಸ್ಕೃತಿಯಿಂದ ದೂರವಾಗಲೇ ಇಲ್ಲ. ಅಲ್ಲಿನ ಪೂಜಾ ಪದ್ಧತಿಯಲ್ಲಿ ಇಂದಿಗೂ ಹಿಂದೂಗಳ ಆಚರಣೆ ಇದೆ. ಭಾಷೆಯಲ್ಲಿ ಸಂಸ್ಕೃತ-ತಮಿಳುಗಳ ಮಿಶ್ರಣ ಇದೆ. ರಾಮನಿಲ್ಲದ ಸಾಂಸ್ಕೃತಿಕ ಚಟುವಟಿಕೆಗಳೇ ಇಲ್ಲ. ಕೊನೆಗೆ ತಿಥಿ ಗಣನೆಯೂ ಹಿಂದೂ ಶೈಲಿಯದ್ದೇ ಆಗಿ ಉಳಿದಿದೆ.
ಥಾಯ್ಲ್ಯಾಂಡಿನ ಮೂಲ ಹೆಸರೇನು ಗೊತ್ತೇ? ಶ್ಯಾಮ ದೇಶ ಅಂತ. ಭವಿಷ್ಯಪುರಾಣದಲ್ಲಿಯೂ ಶ್ಯಾಮ ದೇಶದ ಉಲ್ಲೇಖಗಳಿವೆ. ಶ್ಯಾಮವೆನ್ನುವ ಜನಾಂಗ ಅಲ್ಲಿತ್ತು. ಮುಂದೆ ಥಾಯ್ ಜನಾಂಗ ಬಲಾಢ್ಯವಾಯಿತು. ಆನಂತರವೇ ಅದಕ್ಕೆ ಥಾಯ್ಲ್ಯಾಂಡ್ ಎಂಬ ಹೆಸರು ಬಂದದ್ದು. ಸುಮಾರು 2 ಸಾವಿರ ವರ್ಷಗಳ ಹಿಂದೆ ಹಿಂದೂಗಳು ಈ ದೇಶಕ್ಕೆ ಕಾಲಿಟ್ಟಿದುದರ ಉಲ್ಲೇಖ ಸಿಗುತ್ತದೆ. ಥಾಯ್ಲ್ಯಾಂಡಿನ ಜನಪದ ಕಥೆಗಳ ಪ್ರಕಾರ ಇಂದ್ರ, ವೃತ್ರನೊಂದಿಗೆ ಯುದ್ಧ ಮಾಡುವಾಗ ಅವನ ಆಯುಧ ಕೈ ಜಾರಿ ಬಿದ್ದ ಜಾಗವಂತೆ ಇದು. ಇಲ್ಲಿಯೇ ತನ್ನ ಪತ್ನಿಯೊಂದಿಗೆ ಅನೇಕ ದಿನಗಳು ಆತ ವಿಹಾರ ಮಾಡಿದ್ದನೆಂದೂ ಹೇಳುತ್ತಾರೆ. ಈ ಪ್ರದೇಶದ ಸೌಂದರ್ಯಕ್ಕೆ ಸೋತು ಆತ ಭಾರತ, ಮಯನ್ಮಾರ್, ಮಲಯಾ, ಚೀನಾಗಳ ಜನರನ್ನು ತಂದು ಇಲ್ಲಿ ನೆಲೆಸುವಂತೆ ಮಾಡಿ ರಾಷ್ಟ್ರವನ್ನು ಕಟ್ಟಿಕೊಟ್ಟನೆಂದು ಅವರು ನಂಬುತ್ತಾರೆ. ಥಾಯ್ಲ್ಯಾಂಡಿನ ಜನರಿಗೆ ಇಂದ್ರನ ಮೇಲೆ ಅಪಾರ ಭಕ್ತಿ.
ಈಗಿನ ಥಾಯ್ಲ್ಯಾಂಡಿನ ರಾಜಧಾನಿ ಬ್ಯಾಂಗ್ಕಾಕ್ನ ಉತ್ತರಕ್ಕೆ ನಿಮರ್ಿತ ನಗರದ ಹೆಸರು ಲವಪುರಿ ಎಂದಾಗಿತ್ತು. ಹಾಗೆಯೇ ಪಾಸಾಕ್ ಮತ್ತು ಮೀನಾಮ್ ನದಿಗಳ ನಡುವಿನ ಪ್ರದೇಶದಲ್ಲಿ ನಿಮರ್ಿತ ನಗರಿಗೆ ಅಯೋಧ್ಯೆಯೆಂದು ಹೆಸರಿತ್ತು. ರಾಮ್ ಮಿಮೆಂಗ್ನ ಮಗ ಲೋಥಿಯ. ಅವನ ಮಗ ಲುಥಾಯಿ ಪಟ್ಟಕ್ಕೆ ಬಂದಾಗ ತನ್ನ ರಾಜ ಪಂಡಿತನನ್ನು ಲಂಕೆಗೆ ಕಳಿಸಿ ಬೌದ್ಧ ಪಂಡಿತನೊಬ್ಬನನ್ನು ತನ್ನ ರಾಷ್ಟ್ರಕ್ಕೆ ಕರೆತಂದ. ಆತನೆದುರು ನಿಂತು ನಾನು ಚಕ್ರವತರ್ಿ ಪದವಿಯನ್ನಾಗಲಿ ಇಂದ್ರ, ಬ್ರಹ್ಮರ ಸಂಪತ್ತನ್ನಾಗಲಿ ಬೇಡುವುದಿಲ್ಲ. ಭವಸಾಗರದಲ್ಲಿ ಈಜುತ್ತಿರುವ ಜೀವಿಗಳ ಸೇವೆ ಮಾಡುವ ಬುದ್ಧನಾಗುವಂತೆ ಅನುಗ್ರಹಿಸಿರಿ ಎಂದು ಬೇಡಿಕೊಂಡಿದ್ದ. ಇದು ಪಕ್ಕಾ ಭಾರತೀಯ ಮನಸ್ಸು!!
ಥಾಯ್ ನಾಡು ಸದಾ ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಕಾದಾಡುತ್ತಲೇ ಇತ್ತು. ಹೀಗಾಗಿ ಅದು ಸ್ವತಂತ್ರ ಸಾಮ್ರಾಜ್ಯವಾಗಿ ಬೆಳೆಯಲು ಸಾಧ್ಯವೇ ಆಗಲಿಲ್ಲ. ಈ ನಡುವೆ ಚಕ್ರೀ ಎಂಬೊಬ್ಬ ಸೇನಾಪತಿ ಕಂಬುಜ, ಚಂಪಾ, ಅನಾಮ್, ಲಾವೋಸ್ಗಳ ಸೈನ್ಯವನ್ನು ಸೋಲಿಸಿ ರಾಜನಾದ. ಅಲ್ಲಿಂದಾಚೆಗೆ ಅಲ್ಲಿ ರಾಮರಾಜ್ಯ ಶುರುವಾಯ್ತು. ಹೌದು. ಅಧಿಕಾರ ಸ್ವೀಕರಿಸಿದ ರಾಜ ತನ್ನ ತಾನು ರಾಮ ಎಂದು ಘೋಷಿಸಿಕೊಂಡ. ಅಲ್ಲಿಂದಾಚೆಗೆ ಥಾಯ್ಲ್ಯಾಂಡಿನ ರಾಜನನ್ನು ರಾಮನೆಂದು ಕರೆಯುವುದು ರೂಢಿಯಾಯ್ತು. ಇಂದಿನ ರಾಜನನ್ನು ಒಂಭತ್ತನೇ ರಾಮ ಎಂದು ಕರೆಯಲಾಗುತ್ತದೆ. ಚಕ್ರಿಯ ಕಾಲಕ್ಕೆ ನಿಮರ್ಿತ ನಗರ ಬಂಗಕೋಕವೇ ಇಂದಿನ ಬ್ಯಾಂಗ್ಕಾಕ್ ಆಗಿ ರೂಪುಗೊಂಡಿದ್ದು.
ಚಕ್ರಿಯ ಆಳ್ವಿಕೆಯೊಂದಿಗೆ ರಾಜ ಕುಲ ಬದಲಾದರೂ, ಪರಂಪರೆ ಬದಲಾಗಲಿಲ್ಲ. ಇಂದಿಗೂ ಅಷ್ಟೇ. ಅಲ್ಲಿನ ಜನ ಬೌದ್ಧ ಧಮರ್ೀಯರು. ಅವರ ದೇವಾಲಯಗಳಲ್ಲಿ ಎಲ್ಲ ಹಿಂದೂ ದೇವರೂ ಕಾಣಸಿಗುತ್ತಾರೆ. ಇಂದಿಗೂ ಪ್ರತಿ ಮನೆಯ ಹೊರಗೆ ಗೃಹದೇವತೆಯ ರೂಪದಲ್ಲಿ ಪುಟ್ಟ ಮನೆಯಂತಹ ಆಕೃತಿ ನಿಮರ್ಾಣ ಮಾಡಿ ಪೂಜೆ ಮಾಡುತ್ತಾರೆ. ವೈದಿಕರು ವಾಸ್ತು ದೇವತೆಯ ಪೂಜೆ ಮಾಡಿದಂತಯೇ ಇದು.
ಥಾಯ್ ಭಾಷೆಯಲ್ಲಿ ಸುಮಾರು ಅರ್ಧದಷ್ಟು ಶಬ್ದಗಳು ಸಂಸ್ಕೃತದ್ದೇ. ನಾಟಕದ ವಿಚಾರಕ್ಕೆ ಬಂದರೆ ಎರಡು ಪ್ರಕಾರಗಳು ಒಂದು ಖೋನ್. ಮತ್ತೊಂದು ಲಖೋನ್. ಖೋನ್ ರಾಮಾಯಣವನ್ನೇ ಆಧಾರವಾಗಿರಿಸಿಕೊಂಡು ರೂಪಿಸಿದ ಕಥಕ್ಕಳಿಯ ಶೈಲಿಯ ನೃತ್ಯ ರೂಪಕ. ಮುಖವಾಡಗಳನ್ನೆಲ್ಲಾ ಧರಿಸಿಕೊಂಡು ರಾಮ-ರಾವಣರನ್ನೆಲ್ಲ ಆಕರ್ಷಕವಾಗಿ ತೋರಿಸುವ ಪ್ರಯತ್ನ ಇಲ್ಲಿದೆ. ಲಖೋನ್ ಮಹಾಭಾರತ, ಜಾತಕ ಕಥೆಗಳಲ್ಲದೇ ದೇವ-ದೇವಿಯರ ಕಥೆಗಳನ್ನೇ ಆಧರಿಸಿದ ನೃತ್ಯ ಶೈಲಿ.

Thai-folklore1
ಥಾಯ್ಲ್ಯಾಂಡಿನಲ್ಲಿ ರಾಮಾಯಣಕ್ಕೆ ಬಲುವಾದ ಬೇಡಿಕೆ. ರಾಮಾಯಣವನ್ನು ಆಧರಿಸಿದ ಉತ್ಸವಗಳು ಈಗಲೂ ನಡೆಯುತ್ತವೆ. ಅಲ್ಲಿ ರಾಮಾಯಣವನ್ನು ರಾಮಕಿಯೆನ್ ಎನ್ನುತ್ತಾರೆ. ಅವರ ರಾಮಾಯಣದಲ್ಲಿ ಅಂತ್ಯ ಸುಖಮಯ. ಅಯೋಧ್ಯೆಗೆ ಮರಳಿ ಬಂದ ರಾಮ ಸೀತೆಯೊಂದಿಗೆ ಸುಖವಾಗಿರುವಾಗಲೇ ಛದ್ಮವೇಷದ ರಾಕ್ಷಸಿಯೊಬ್ಬಳು ಅಂತಃಪುರ ಪ್ರವಾಶಿಸುತ್ತಾಳೆ. ಸೀತೆಯ ಮನ ಗೆಲ್ಲುತ್ತಾಳೆ. ರಾವಣನ ಚಿತ್ರ ಬರೆಯುವಂತೆ ಪುಸಲಾಯಿಸುತ್ತಾಳೆ. ಅವನ ಕಾಲಿನ ಹೆಬ್ಬೆರಳನ್ನು ಮಾತ್ರ ನೋಡಿದ್ದ ಸೀತೆ ಆಕೆಯ ಒತ್ತಾಯಕ್ಕೆ ಮಣಿದು ರಾವಣನ ಚಿತ್ರ ಬಿಡಿಸುತ್ತಾಳೆ. ಅಷ್ಟರೊಳಗೆ ಅಂತಃಪುರಕ್ಕೆ ರಾಮನ ಆಗಮನ. ಗಾಬರಿಗೊಂಡ ಸೀತೆ ಚಿತ್ರವನ್ನು ಮಂಚದಡಿಗೆ ತಳ್ಳುತ್ತಾಳೆ. ನಿದ್ದೆ ಬರದೆ ಹೊರಳಾಡುವ ರಾಮನ ಕಣ ್ಣಗೆ ರಾವಣನ ಈ ಚಿತ್ರ ಬಿದ್ದಾಗ ಆತ ದುಃಖ ತಪ್ತನಾಗುತ್ತಾನೆ. ಅಲ್ಲಿಗೆ ಸೀತೆಯ ಮೇಲಿನ ಅಭಿಮಾನ ಕರಗಿ ಲಕ್ಷ್ಮಣನನ್ನು ಕರೆದು ಶಿರಚ್ಛೇದ ಮಾಡುವಂತೆ ಆಜ್ಞಾಪಿಸುತ್ತಾನೆ. ತುಮುಲಕ್ಕೊಳಗಾದ ಲಕ್ಷ್ಮಣ ಅತ್ತಿಗೆಯನ್ನೋಯ್ದು ಕಾಡಲ್ಲಿ ಬಿಟ್ಟು ಬಿಡುತ್ತಾನೆ. ಮುಂದೆ ಲವಕುಶರ ಬಾಯಲ್ಲಿ ಈ ಕಥನವನ್ನು ಕೇಳಿದ ರಾಮನಿಗೆ ಸೀತೆಯನ್ನು ಪಡೆಯುವ ಹಂಬಲ ಜಾಗೃತವಾಗುತ್ತದೆ. ಆದರೆ ಈ ಬಾರಿ ಸೀತೆ ನಿರಾಕರಿಸುತ್ತಾಳೆ. ರಾಮ ವಿಭೀಷಣನ ಸಲಹೆಯಂತೆ ಮತ್ತೆ ವನವಾಸಕ್ಕೆ ತೆರಳಿ ಒಂದು ವರ್ಷ ಮತ್ತಷ್ಟು ರಾಕ್ಷಸರ ನಿನರ್ಾಮ ಮಾಡಿ ಮರಳುತ್ತಾನಲ್ಲ ಆಗ ಮಹಾದೇವ ಕರಗಿ ಸೀತೆಯನ್ನು ಒಲಿಸಿ ರಾಮನೊಂದಿಗೆ ಕೂಡಿಸುತ್ತಾನೆ.
ಇವಿಷ್ಟನ್ನೂ ನಾನೇನೋ ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ. ಆದರೆ ಥಾಯ್ನ ರಾಮಾಯಣ ಸಾಹಿತ್ಯ ಪ್ರತಿಯೊಂದನ್ನೂ ಸವಿಸ್ತಾರವಾಗಿ ಬಣ್ಣಿಸುತ್ತದೆ. ಎರಡನೇ ವನವಾಸದ ಕಲ್ಪನೆ ಮತ್ತು ವರ್ಣನೆ ಎರಡೂ ರೋಚಕವಾದುದು.
ಥಾಯ್ಲ್ಯಾಂಡಿಗೆ ಹೊಂದಿಕೊಂಡಂತೆ ಇರುವ ರಾಷ್ಟ್ರ ಲಾವೋಸ್. ಇದರ ಪೂರ್ವ ಹೆಸರು ಲವದೇಶ. ಲವ, ಲವಸ್ ಆಗಿ ಕೊನೆಗೆ ಲಾವೋಸ್ ಆಯಿತಷ್ಟೇ. ಅದು ಸಹಜವೂ ಕೂಡ. ಇಂಗ್ಲಿಷಿನಲ್ಲಿ ವಕಾರ ಬರೆಯಲು ವಿ, ಡಬ್ಲ್ಯೂ ಅಥವಾ ಓ ಬಳಸುತ್ತಾರೆ. ಓದುವಾಗ ಬೇರೆಯಾಗಿಯೇ ಓದುತ್ತಾರೆ. ಹೀಗಾಗಿ ಚೀನಿಗಳ ಗ್ರಂಥದಲ್ಲು ಲವ ಎಂದೇ ಉಲ್ಲೇಖಗೊಳ್ಳುವ ರಾಷ್ಟ್ರ ಇಂದು ಲಾವೋಸ್ ಆಗಿದೆ ಅಷ್ಟೇ. ಇಲ್ಲಿ ಹರಿಯುವ ನದಿಯ ಹೆಸರೂ ಮಾ ಗಂಗಾ ಎಂದಿದ್ದು ಅಪಭೃಂಶ ಮೆಕಾಂಗ ಎಂದಾಗಿದೆ.
ಶಿವ ಮತ್ತು ವಿಷ್ಣು ಇಬ್ಬರನ್ನೂ ಇಲ್ಲಿ ವಿಶೇಷವಾಗಿ ಆರಾಧಿಸಲಾಗುತ್ತಿತ್ತು. ಬೌದ್ಧಧರ್ಮದ ಪ್ರಭಾವದ ನಂತರವಂತೂ ಬುದ್ಧನ ಆರಾಧನೆಯೂ ಶುರುವಾಯ್ತು. ಸಂಸ್ಕೃತ ಮತ್ತು ಪಾಲಿ ಮಿಶ್ರಿತ ಭಾಷೆ ಇಲ್ಲಿನದು. ಪೌರಾಣಿಕ ಪರಂಪರೆಯೂ ನಮ್ಮದೇ. ಇಲ್ಲಿನ ಸಾಹಿತ್ಯ ಶ್ರೀಮಂತಿಕೆಯ ಹಿಂದೆ ಸಂಸ್ಕೃತ ಪ್ರಭಾವ ಬಲು ಜೋರಾಗಿಯೇ ಕಾಣುತ್ತದೆ. ಜ್ಯೋತಿಷ್ಯ, ಹಸ್ತ ಸಾಮುದ್ರಿಕ ಮುಂತಾದವನ್ನು ಇವರೂ ಕೂಡ ಹೋರಾ ಶಾಸ್ತ್ರವೆಂದೇ ಕರೆಯುತ್ತಾರೆ. ಪಂಚತಂತ್ರದ ಆಧಾರಿತ ಗ್ರಂಥ ಲಾವೋಸ್ನಲ್ಲಿ ವಿಖ್ಯಾತವಾದುದು. ನಾಟ್ಯ ಶೈಲಿ ಭಾರತೀಯವಾದುದು. ಅಷ್ಟೇ ಅಲ್ಲ. ಅವರ ಕಾಲಗಣನೆಯ ಪದ್ಧತಿಯೂ ನಮ್ಮದೇ. ನಾವು ಶಾಲಿವಾಹನ ಶಕೆ ಎಂದಂತೆ ಇವರೂ ಶಕ ರಾಜನ ಹೆಸರಿನಲ್ಲಿಯೇ ಕಾಲಗಣನೆ ಮಾಡೋದು!
ಚೈತ್ರ ಪ್ರತಿಪದೆ, ವ್ಯಾಸ ಪೂಣರ್ಿಮೆ, ವಿಜಯದಶಮಿ ಇಲ್ಲಿನ ಪ್ರಖ್ಯಾತ ಉತ್ಸವಗಳಾಗಿದ್ದವು. ಈ ಸಂದರ್ಭಗಳಲ್ಲಿ ಶಿವ-ವಿಷ್ಣು-ಬುದ್ಧರ ಮೂತರ್ಿಗಳಿಗೆ ಸ್ನಾನ ಮಾಡಿಸಿ ಉತ್ಸವ ಮಾಡಿಸಲಾಗುತ್ತಿತ್ತು. ವ್ಯಾಸ ಪೂಣರ್ಿಮೆಗಂತೂ ಆಶ್ರಮಗಳಿಗೆ ಹೋಗಿ ಆಚಾರ್ಯರಿಂದ ಆಶಿವರ್ಾದ ಪಡೆಯಲು ಜನರ ಜಾತ್ರೆಯೇ ಇರುತ್ತಿತ್ತು. ಈಗಲೂ ಉತ್ಸವಗಳು ನಡೆಯುತ್ತವಾದರೂ ರೂಪ ಮೊದಲಿಗಿಂತ ಭಿನ್ನವಾಗಿದೆ. ಬುದ್ಧಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಚೈತ್ರಮಾಸದ ಅಷ್ಟಮಿಯ ದಿನದಿಂದ ಹಿಡಿದು ಹುಣ್ಣಿಮೆಯವರೆಗೆ ವಸಂತೋತ್ಸವ ಈಗಲೂ ನಡೆಯುತ್ತದೆ. ಆಗೆಲ್ಲ ತರುಣ-ತರುಣಿಯರ ಉತ್ಸಾಹ ಹೇಳತೀರದು.
ಇನ್ನು ಸದಾ ಕಾಲ ಚೀನಾ ಹದ್ದುಕಣ್ಣಿಟ್ಟು ಕೂತಿರುವ ವಿಯೆಟ್ನಾಂ ಕೂಡ ಒಂದು ಕಾಲದಲ್ಲಿ ಭಾರತದ್ದೇ ವಸಾಹತಾಗಿತ್ತು! ಕಾಂಬೋಡಿಯಾದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಭಾರತದ ವ್ಯಾಪಾರಿಗಳು ಅದರ ಸುತ್ತಲೂ ಇರುವ ಪ್ರದೇಶಗಳ ಮೇಲೆ ಸಾಂಸ್ಕೃತಿಕವಾಗಿ ಪ್ರಭಾವ ಬೀರುತ್ತಾ ನಡೆದರು. ಈ ಪ್ರದೇಶಗಳೆಲ್ಲ ಚೀನಿಯನ್ನರ ದೃಷ್ಟಿಯಿಂದಲೂ ಅನಾಗರಿಕರೆನ್ನಿಸಿಕೊಂಡವರಿಂದ ಕೂಡಿದಂಥವೇ. ಮೀನು ಹಿಡಿಯೋದು, ಕಾಡಿನಲ್ಲಿ ಬೇಟೆಯಾಡೋದು ಇಷ್ಟೇ ಅವರ ಬದುಕಾಗಿತ್ತು. ಭಾರತೀಯರು ಕಾಲಿಟ್ಟ ಮೇಲೆಯೇ ಇಲ್ಲಿ ಕೃಷಿಗೆ ಜೀವ ಬಂತು. ಲಜ್ಜೆ ಜಾಗೃತವಾಯ್ತು. ಚೀನಾದ ಸಂಸ್ಕೃತಿ ಎಷ್ಟು ಪ್ರಾಚೀನವಾದರೂ ತಮ್ಮ ಗಡಿ ಪ್ರದೇಶದ ಜನರನ್ನು ಸುಸಂಸ್ಕೃತವಾಗಿಸುವಲ್ಲಿಯೂ ಅವರು ಸೋತು ಹೋಗಿದ್ದರು. ಭಾರತೀಯರು ದೂರದೂರಕ್ಕೆ ಹೋಗಿಯೂ ವಿಶ್ವವನ್ನೇ ಆರ್ಯವನ್ನಾಗಿಸುವ ಸಂಕಲ್ಪ ಪೂರ್ಣಗೊಳಿಸಿದ್ದರು.
ವಿಯೆಟ್ನಾಂ ಈಗಿನ ಹೆಸರು. ಅದನ್ನು ಚಂಪಾ ಎಂದೇ ಕರೆಯಲಾಗುತ್ತಿತ್ತು. ಅಲ್ಲಿನ ಜನರಿಗೆ ಬದುಕುವ ಕಲೆಯನ್ನು, ರೀತಿ-ನೀತಿಗಳನ್ನು ಕಲಿಸಿಕೊಟ್ಟ ಭಾರತೀಯರು ಕ್ರಮೇಣ ಅವರನ್ನು ರಾಷ್ಟ್ರವನ್ನಾಗಿ ರೂಪಿಸಿದರು. ಚೀನಿಯರೊಂದಿಗೆ ಬಡಿದಾಡುತ್ತಲೇ ಚಂಪಾ ಬಲಾಢ್ಯವಾಗಿ ಬೆಳೆದು ನಿಂತುಬಿಟ್ಟಿತು. ಶೈವ ಸಂಪ್ರದಾಯಕ್ಕೆ ತೆರೆದುಕೊಂಡಿತು. ಅಸಂಖ್ಯ ಶಿವ ಮಂದಿರಗಳು ತಲೆಯೆತ್ತಿದವು. ಅಲ್ಲಿನ ಧರ್ಮ, ಭಾಷೆ, ವೇಷ-ಭೂಷಣ, ಊಟ-ತಿಂಡಿ, ರಾಜಕೀಯ, ವ್ಯವಹಾರ ಇವುಗಳನ್ನು ನೋಡಿದರೆ ಅದೊಂದು ಪುಟ್ಟ ಭಾರತವೇ ಎನಿಸುತ್ತಿತ್ತು. ಮನು, ನಾರದ ಮತ್ತು ಭಾರ್ಗವ ಸ್ಮೃತಿಗಳ ಪ್ರಯೋಗವಾಗುತ್ತಿತ್ತು. ಸ್ಮೃತಿ ಮತ್ತು ಶಾಸ್ತ್ರಗಳನ್ನು ಅರೆದು ಕುಡಿದ ಆಚಾರ್ಯರು ನ್ಯಾಯಾಧೀಶರಾಗಿರುತ್ತಿದ್ದರು.
ಎಲ್ಲಕ್ಕೂ ಮಿಗಿಲಾಗಿ ಭಾರತದ ಕುರಿತಂತೆ ಅಪಾರ ಶ್ರದ್ಧೆ ಇತ್ತು. ಚಂಪಾ ರಾಜ ಗಂಗ ವಾನಪ್ರಸ್ಥಿಯಾಗಿ ಭಾರತಕ್ಕೆ ಬಂದು ಗಂಗಾ ತೀರದಲ್ಲಿ ನೆಲೆನಿಂತು ತನ್ನ ಆಯುಷ್ಯವನ್ನು ಕಳೆದನೆಂದು ಅಲ್ಲಿನ ಗ್ರಂಥಗಳು ಉಲ್ಲೇಖಿಸುತ್ತವೆ.
ಲೇಖನದ ವ್ಯಾಪ್ತಿ ಮುಗಿಯಿತು. ಆದರೆ ವಿಶ್ವವನ್ನೇ ವ್ಯಾಪಿಸಿಕೊಂಡಿದ್ದ ಭಾರತದ ಕಥನ ಮುಗಿಯಲಾರದು. ಇಷ್ಟನ್ನೂ ಅದೇಕೆ ಹೇಳಬೇಕಾಯಿತು ಗೊತ್ತೇ? ಭಾರತವೆಂದಾಗ ಬರಿ ಈಗ ಕಾಣುವ ಭೂಪಟವಷ್ಟೇ ಅಲ್ಲ; ಒಂದು ಕಾಲದಲ್ಲಿ ಅದು ವಿಶ್ವವೇ ಆಗಿತ್ತು ಎಂಬುದನ್ನು ನೆನಪಿಸಲು ಮಾತ್ರ. ಹಳೆಯದನ್ನು ಸ್ಮರಿಸುತ್ತ ಮತ್ತೀಗ ನಾವು ಜಗತ್ತಿಗೆ ಹೊರಡಬೇಕಿದೆ. ಇತರರ ಕೊಲ್ಲುವುದೇ ಧರ್ಮವೆಂದು ಭಾವಿಸಿರುವ ನಾಗರಿಕತೆಯ ಅರಿವಿಲ್ಲದ ಜನಕ್ಕೆ ಸಂಸ್ಕೃತಿಯ ಪಾಠ ಹೇಳಿಕೊಡಬೇಕಿದೆ. ಕೃಣ್ವಂತೋ ವಿಶ್ವಮಾರ್ಯಂ ಮತ್ತೆ ಮೊಳಗಬೇಕಿದೆ. ಇದು ಅದಕ್ಕೆ ಸಿದ್ಧತೆ ಅಷ್ಟೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s