ನೌಕೆಗಳ ಮೂಲಕ ಜಗತ್ತನ್ನು ಆಳಿದ ಭಾರತ..

ಭಾರತೀಯರಿಗೆ ನೌಕಾಯಾನ ಅನಿವಾರ್ಯವಾಗಿತ್ತು. ಉತ್ತರದಲ್ಲಿ ಹಿಮಾಲಯ ನಮಗೆ ರಕ್ಷಣೆಯಷ್ಟೇ ಅಲ್ಲ, ವಿಸ್ತಾರಗೊಳ್ಳದಂತೆ ತಡೆಗೋಡೆಯೂ ಆಗಿತ್ತು. ದಕ್ಷಿಣದ ಮೂರೂ ದಿಕ್ಕುಗಳಲ್ಲಿ ವಿಶಾಲವಾಗಿ ಹರಡಿಕೊಂಡ ಸಾಗರ. ಮೈ ಚಳಿ ಬಿಡದೇ ಬೇರೆ ದಾರಿಯೇ ಇರಲಿಲ್ಲ. ಖ್ಯಾತ ಇತಿಹಾಸಜ್ಞ ಡಾ|| ರಾಧಾಕುಮುದ ಮುಖಜರ್ಿಯವರ ಪ್ರಕಾರ ಸಿಂಧೂ ನದಿಯ ಬಯಲಿನಲ್ಲಿ ಸುಮಾರು 6000 ವರ್ಷಗಳಷ್ಟು ಹಿಂದೆ ನೌಕೆ ನಿಮರ್ಾಣದ ತಂತ್ರಜ್ಞಾನ ಹುಟ್ಟಿಕೊಂಡಿತು! ಅದರರ್ಥ ಆಗಿನ್ನೂ ಏಸು ಕ್ರಿಸ್ತರ ಜನನವಾಗಿರಲಿಲ್ಲ; ಇಸ್ಲಾಂ ಕಣ್ ಬಿಟ್ಟಿರಲಿಲ್ಲ.

Vasco da Gama's ships rounding the Cape

ಖಲೀಫಾ ಹರುನ್ ಅಲ್ ರಶೀದ್ ಅನಾರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದರು. ಅರಬ್ ರಾಷ್ಟ್ರಗಳಲ್ಲಿ ಅವರನ್ನು ಗುಣ ಪಡಿಸಬಲ್ಲ ಮತ್ತೊಬ್ಬರು ಸಿಗಲಿಲ್ಲ. ಆಗ ಭಾರತದಿಂದ ಅಲ್ಲಿಗೆ ಹೋದ ಮಣಿಕಾ ಎನ್ನುವ ವೈದ್ಯರು ಖಲೀಫಾರನ್ನು ಸುಲಭವಾಗಿ ಗುಣ ಪಡಿಸಿದರು. ಪರಿವಾರಕ್ಕೆ ಅದೆಷ್ಟು ಖುಷಿಯಾಯಿತೆಂದರೆ ಯಾಹ್ಯಾ ಬಿನ್ ಖಾಲಿದರು ಮಣಿಕಾರನ್ನು ಬಗ್ದಾದಿನ ಆಸ್ಪತ್ರೆಯೊಂದಕ್ಕೆ ನಿದರ್ೇಶಕರಾಗಿ ನಿಯುಕ್ತಿಗೊಳಿಸಿದರು. ತಮ್ಮ ವೈದ್ಯರಿಗೆ ಮಾರ್ಗದರ್ಶನ ಮಾಡುವಂತೆ ಕೋರಿದರು. ರಾಜಕುವರ ಇಬ್ರಾಹೀಂನನ್ನು ಬಗ್ದಾದಿನಲ್ಲಿಯೇ ಇದ್ದ ಭಲ್ಲಾ ಎನ್ನುವ ವೈದ್ಯರು ಗುಣಪಡಿಸಿ ಭಾರತದ ಕೀತರ್ಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಾಡಿಸಿದ್ದರು.

ಭಾರತೀಯ ವೈದ್ಯಕೀಯ ಶಾಸ್ತ್ರದ ಕುರಿತಂತೆ ಅಂದಿನ ದಿನಗಳಲ್ಲಿ ಅರಬ್ ರಾಷ್ಟ್ರಗಳಲ್ಲಿ ಭಾವನೆ ಹೇಗಿತ್ತು ಗೊತ್ತೇನು? ಅನೇಕ ವೈದ್ಯ ವಿಜ್ಞಾನಿಗಳು ‘ಕಠಿಣತಮ ಕಾಯಿಲೆಗಳನ್ನೂ ಗುಣಪಡಿಸಬಲ್ಲವರು ಭಾರತೀಯರು ಮಾತ್ರ’ ಎಂದು ಉದ್ಗಾರವೆತ್ತಿದ್ದಾರೆ. ಸ್ವತಃ ರಾಜನೇ ಭಾರತದ ವೈದ್ಯಕೀಯ ವಿಜ್ಞಾನ ಸಂಬಂಧಿ ಸಂಸ್ಕೃತ ಗ್ರಂಥಗಳನ್ನು ಅರಬ್ಬೀ ಭಾಷೆಗೆ ತಜರ್ುಮೆ ಮಾಡಿಸಲು ಅನುವಾದ ಸಮಿತಿಯೊಂದನ್ನು ರಚಿಸಿ ಭಾರತೀಯ ಪಂಡಿತರೊಬ್ಬರನ್ನು ಅದಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಿದ್ದ. ಖಲೀಫಾ ಮೆಹದಿಯ ಮಂತ್ರಿಯಾಗಿದ್ದ ಯಾಹ್ಯಾ ಇಬ್ನೀ ಖಾಲಿದ್ರಂತೂ ಭಾರತಕ್ಕೆ ಅರಬ್ಬರನ್ನು ಕಳಿಸಿ ಇಲ್ಲಿನ ಗಿಡ ಮೂಲಿಕೆಗಳನ್ನು, ಔಷಧಿಗಳನ್ನು ತರುವಂತೆ ಆಗ್ರಹಿಸಿದ್ದರು. ಆ ವೇಳೆಗಾಗಲೇ ಚರಕ-ಸುಶ್ರುತರ ಸಂಹಿತೆಗಳು, ವಾಗ್ಭಟನ ಕೃತಿಗಳು ಅಲ್ಲೆಲ್ಲಾ ಮನೆಮಾತಿನಂತಾಗಿದ್ದವು! ಮುಂದೆ ಗ್ರೀಕ್-ಅರಬ್ರ ವೈದ್ಯ ಪದ್ಧತಿಯೊಂದಿಗೆ ಭಾರತೀಯ ವಿಧಾನಗಳೂ ಸೇರಿಯೇ ‘ಯುನಾನಿ’ ವೈದ್ಯ ಪರಂಪರೆ ಹುಟ್ಟಿದ್ದು.
ಇಷ್ಟೇ ಅಲ್ಲ. ಭೂಗರ್ಭದಿಂದ ಹಿಡಿದು ಖಗೋಳದವರೆಗೆ ಅರಬ್ ರಾಷ್ಟ್ರಗಳು ಭಾರತದಿಂದ ಎಲ್ಲವನ್ನೂ ಸ್ವೀಕರಿಸಿದವು. ಮೌಲ್ಯಯುತವಾದ ಸಂಸ್ಕೃತ ಸಾಹಿತ್ಯಗಳೂ ಅವರದೇ ರೀತಿಯಲ್ಲಿ ಅನುವಾದಗೊಂಡವು. ಇವೆಲ್ಲವನ್ನೂ ಅರಿತಿದ್ದರಿಂದಲೇ ‘ಮೈ ಹಿಂದ್ ಮೇ ನಹೀ ಹ್ಞೂಂ, ಹಿಂದ್ ಮುಝಮೇ ಹೈ’ (ನಾನು ಹಿಂದೂಸ್ತಾನದಲ್ಲಿಲ್ಲ, ಹಿಂದೂಸ್ತಾನವೇ ನನ್ನೊಳಗಿದೆ) ಅಂತ ಪ್ರವಾದಿ ಮೊಹಮ್ಮದ್ ಪೈಗಂಬರ್ರು ಹೇಳಿದ್ದಿರಬಹುದು. ಹಾಗಂತ ಗುಜರಾತಿನಿಂದ ಬಂದಿದ್ದ ಸೂಫಿ ಚಿಸ್ತಿಯವರು ಬಲು ಹೆಮ್ಮೆಯಿಂದ ನುಡಿಯುತ್ತಿದ್ದರು!
ಇವಿಷ್ಟನ್ನೂ ಹೇಳಿದ್ದೇಕೆ ಗೊತ್ತೇ? ಭಾರತವಿಲ್ಲದೇ, ಹಿಂದೂ ಇಲ್ಲದೇ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಾಗಲಾರದು. ಯಾರೆಲ್ಲ ಇಂದು ಹಿಂದೂ ಜನಾಂಗವನ್ನು ನಾಶಗೈಯ್ಯಲೆಂದು ಸಂಕಲ್ಪ ಬದ್ಧರಾಗಿದ್ದಾರೋ ಅವರಿಗೆ ಇತಿಹಾಸದ ಅರಿವಿನ ಕೊರತೆ ಇದೆ. ದುದರ್ೈವವೆಂದರೆ ತಿಳಿ ಹೇಳಬೇಕಾದವರೂ ಇದೇ ಕೊರತೆಯಿಂದ ನರಳುತ್ತಿದ್ದಾರೆ. ಅದಕ್ಕೇ ಮತ್ತೆ ಸಂಸ್ಕೃತದ ಮೊರೆ ಹೊಕ್ಕಬೇಕು ಅನ್ನೋದು. ಇಲ್ಲವಾದಲ್ಲಿ ಆಸ್ತಿ ಇದ್ದವನನ್ನೇ ಆಸ್ತಿಕನೆನ್ನುವಂತಹ ಪಂಡಿತರ ಸಂತಾನಗಳೇ ತುಂಬಿ ಹೋಗಿಬಿಡುತ್ತವೆ.
ಇವುಗಳನ್ನು ಸಮಥರ್ಿಸುವ ಒಂದು ಸಂಗತಿ ನಿಮಗಾಗಿ. ಇಂಗ್ಲೀಷಿನ Navigation ಪದ ಕೇಳಿದ್ದೀರಲ್ಲ; ಜಲಸಂಚಾರ ಅಂತ ಅದರರ್ಥ. ಈ ಪದದ ಮೂಲ ಸಂಸ್ಕೃತ ‘ನೌಗತಿ’ ಅನ್ನುವ ಪದ. ಇನ್ನು ಸರಳವಾಗಿ ಹೇಳಬೇಕೆಂದರೆ ನೌಕೆಗೂ ನೇವಿಗೂ ಹತ್ತಿರದ ಸಂಬಂಧ ಮೇಲ್ನೋಟಕ್ಕೇ ಗೋಚರಿಸುತ್ತದೆ. ಒಟ್ಟಾರೆ ಅರ್ಥ ಇಷ್ಟೇ. ‘ನೌಕೆಗಳ ನಿಮರ್ಾಣ, ಬಳಕೆಯಲ್ಲಿ ಭಾರತೀಯರ ಜ್ಞಾನ ಅಪ್ರತಿಮವಾಗಿತ್ತು’.
ರಾಯಲ್ ಏಷಿಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ ಸರ್ ಜಾನ್ ಮಾಲ್ಕಮ್ ಈ ಕುರಿತಂತೆ ಬರೆಯುತ್ತಾ, ‘ಭಾರತೀಯ ನೌಕೆಗಳು ಅಗತ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ಸಾಮಥ್ರ್ಯ ಹೊಂದಿದ್ದವು. ಎರಡು ಶತಮಾನಗಳಷ್ಟು ದೀರ್ಘಕಾಲ ಭಾರತೀಯರ ಸಂಪರ್ಕದಲ್ಲಿದ್ದ ನಂತರವೂ ತಮ್ಮ ತಂತ್ರಜ್ಞಾನ ಶ್ರೇಷ್ಠತೆ ಮೆರೆದು ಈ ನೌಕೆಗಳಿಗೆ ಒಂದಂಶದ ಸುಧಾರಣೆಯನ್ನು ತರಲೂ ಯುರೋಪಿಯನ್ನರಿಗೆ ಸಾಧ್ಯವಾಗಲಿಲ್ಲ’ ಎಂದು ಉದ್ಗರಿಸಿದ್ದರು.
ಭಾರತೀಯರಿಗೆ ನೌಕಾಯಾನ ಅನಿವಾರ್ಯವಾಗಿತ್ತು. ಉತ್ತರದಲ್ಲಿ ಹಿಮಾಲಯ ನಮಗೆ ರಕ್ಷಣೆಯಷ್ಟೇ ಅಲ್ಲ, ವಿಸ್ತಾರಗೊಳ್ಳದಂತೆ ತಡೆಗೋಡೆಯೂ ಆಗಿತ್ತು. ದಕ್ಷಿಣದ ಮೂರೂ ದಿಕ್ಕುಗಳಲ್ಲಿ ವಿಶಾಲವಾಗಿ ಹರಡಿಕೊಂಡ ಸಾಗರ. ಮೈ ಚಳಿ ಬಿಡದೇ ಬೇರೆ ದಾರಿಯೇ ಇರಲಿಲ್ಲ. ಖ್ಯಾತ ಇತಿಹಾಸಜ್ಞ ಡಾ|| ರಾಧಾಕುಮುದ ಮುಖಜರ್ಿಯವರ ಪ್ರಕಾರ ಸಿಂಧೂ ನದಿಯ ಬಯಲಿನಲ್ಲಿ ಸುಮಾರು 6000 ವರ್ಷಗಳಷ್ಟು ಹಿಂದೆ ನೌಕೆ ನಿಮರ್ಾಣದ ತಂತ್ರಜ್ಞಾನ ಹುಟ್ಟಿಕೊಂಡಿತು! ಅದರರ್ಥ ಆಗಿನ್ನೂ ಏಸು ಕ್ರಿಸ್ತರ ಜನನವಾಗಿರಲಿಲ್ಲ; ಇಸ್ಲಾಂ ಕಣ್ ಬಿಟ್ಟಿರಲಿಲ್ಲ.
ಇದೇ ಮಾತನ್ನು ಸಿವಿಲೈಸೇಷನ್ಸ್ ಆಫ್ ಏನ್ಶಿಯೆಂಟ್ ಅಮೇರಿಕಾ ಕೃತಿಯೂ ಹೆಮ್ಮೆಯಿಂದ ಹೇಳುತ್ತದೆ. ‘ಭಾರತದಿಂದ ಚೀನಾಕ್ಕೆ ಫಾಹಿಯಾನ್ನ್ನು ಬಿರುಗಾಳಿಯ ನಡುವೆಯೂ ತಲುಪಿಸಿದ ಹಡಗುಗಳಿಗೆ ಫೆಸಿಫಿಕ್ ಸಾಗರ ದಾಟಿ ಮೆಕ್ಸಿಕೋ, ಪೆರುಗಳಿಗೆ ಬರುವುದು ಅಸಾಧ್ಯವೇನೂ ಆಗಿರಲಿಲ್ಲ. ಕೋಲಂಬಸ್ ಹುಟ್ಟುವ ಸಾವಿರ ವರ್ಷಗಳಿಗಿಂತಲೂ ಮುಂಚೆ ನಿಮರ್ಿತ ಭಾರತೀಯ ಹಡಗುಗಳು 18ನೇ ಶತಮಾನದ ಯೂರೋಪಿನ ಹಡಗುಗಳಿಗಿಂತ ಉತ್ಕೃಷ್ಟವಾಗಿದ್ದವು’.
ಇಷ್ಟಕ್ಕೂ ಇಲ್ಲಿ ಉಲ್ಲೇಖಗೊಂಡಿರುವ ಹಡಗು ಹೇಗಿತ್ತು ಗೊತ್ತೇನು? ಶ್ರೀಲಂಕೆಯಿಂದ ಜಾವಾಕ್ಕೆ ಸಾಗರದ ನಡುವಲ್ಲೇ ಸಾಗಿದ ಹಡಗು ಇನ್ನೂರಕ್ಕೂ ಹೆಚ್ಚು ಯಾತ್ರಿಕರನ್ನು, ವ್ಯಾಪಾರಿಗಳನ್ನೊಯ್ದಿತ್ತು. ಅಂದ ಮೇಲೆ ಹಡಗು ಅದೆಷ್ಟು ದೊಡ್ಡದಿತ್ತು ಊಹಿಸಿ. ಜಾವಾದಿಂದ ಇಷ್ಟೇ ವಿಶಾಲವಾಗಿದ್ದ ಮತ್ತೊಂದು ಹಡಗು ಮತ್ತೆ ಚೀನೀ ಸಮುದ್ರದ ನಟ್ಟ ನಡುವೆ ಸಾಗಿಹೋಯಿತು. ಸಮುದ್ರದ ಅಲೆಗಳ ತಳಮಳವನ್ನು, ಗಾಳಿಯ ಹೊಡೆತವನ್ನು ತಡೆದುಕೊಂಡು ಮುನ್ನುಗ್ಗುವ ಸಾಮಥ್ರ್ಯವಿದ್ದ ಈ ಬಗೆಯ ಹಡಗುಗಳನ್ನು ನಿಮರ್ಿಸಿದ ಭಾರತ ಅದನ್ನು ಚೀನಾಕ್ಕೆ ಹೋಗಲೆಂದು ಮಾತ್ರ ಬಳಸುತ್ತಿತ್ತೆಂದುಕೊಂಡಿರೇನು? ಖಂಡಿತ ಇಲ್ಲ. ಈ ಹಡಗುಗಳ ಮೂಲಕ ಭಾರತ ಜಗತ್ತಿನ ಮೂಲೆ ಮೂಲೆ ತಲುಪಿತ್ತು. ಹೀಗಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂದು ಭಾರತೀಯ ಸಂಸ್ಕೃತಿ-ಸಭ್ಯತೆ ಕಣ್ಣಿಗೆ ರಾಚುವಂತೆ ಕಂಡುಬರೋದು. ಅದಕ್ಕೆ ಅಮೇರಿಕಾ ಕಂಡು ಹಿಡಿದಿದ್ದು ಕೊಲಂಬಸನಲ್ಲ; ಸಾಹಸ ಪ್ರಿಯನಾಗಿದ್ದ ಭಾರತದ ವ್ಯಾಪಾರಿ ಎಂದರೆ ಅಚ್ಚರಿ ಪಡಬೇಡಿ.

vasco da gama
ಇದನ್ನು ಈ ರೀತಿಯಲ್ಲಿ ಅಧ್ಯಯನ ಮಾಡಬೇಕಿದ್ದ ನಾವು ಉಲ್ಟಾ ಭಾರತವನ್ನೇ ವಾಸ್ಕೋಡಗಾಮ ಕಂಡು ಹಿಡಿದನೆಂದು ಮಕ್ಕಳಿಗೆ ಪಾಠ ಮಾಡುತ್ತೇವೆ. ನಿಮಗೆ ಗೊತ್ತಿರಲಿ. ಭಾರತವನ್ನು ಅರಸಿ ಹೊರಟ ವಾಸ್ಕೋಡಗಾಮ ತನ್ನ ಪುಟ್ಟ ದೋಣಿಯಲ್ಲಿ ಕಡಲ ತೀರವನ್ನೇ ಬಳಸಿ ಆಫ್ರಿಕಾದ ಕೆಳ ತುದಿ ಮುಟ್ಟಿದ. ಅಲ್ಲಿಂದ ಭಾರತಕ್ಕೆ ಬರಬೇಕೆಂದರೆ ಸಾಗರದ ನಡುವೆಯೇ ಹಾದು ಬರಬೇಕಿತ್ತು. ಪೋಚರ್ುಗೀಸರ ನಾವೆಗೆ ಅಷ್ಟೆಲ್ಲಾ ಸಾಮಥ್ರ್ಯವಿಲ್ಲವೆಂದರಿತಿದ್ದ ಆತ ಮರಳುವ ತಯಾರಿ ನಡೆಸಿದ್ದ. ಆಗಲೇ ವ್ಯಾಪಾರಕ್ಕೆಂದು ಅಲ್ಲಿ ಬೀಡುಬಿಟ್ಟಿದ್ದ ಭಾರತದ ವ್ಯಾಪಾರಿಗಳು ಆತನನ್ನು ತಮ್ಮ ವಿಶಾಲ ಹಡಗಿನಲ್ಲಿ ಕೂರಿಸಿಕೊಂಡು ಭಾರತಕ್ಕೆ ತಂದು ಬಿಟ್ಟರು.
ಈ ವಿಚಾರವನ್ನು ಭಾರತೀಯರು ಕಟ್ಟುಕತೆಯೆಂದು ತಳ್ಳಿ ಹಾಕಿಬಿಡುತ್ತಾರೆ, ಪೋಚರ್ುಗೀಸರು ಒಪ್ಪುತ್ತಾರೆ. ಅಲ್ಲದೇ ಮತ್ತೇನು? ತರ್ಕ ಬದ್ಧವಾಗಿ ಯೋಚಿಸಲು ಕುಳಿತರೂ ನೌಕೆಗಳ ತಯಾರಿಕೆಯಲ್ಲಿ ಎಳಸುಗಳಾಗಿದ್ದ ಪಶ್ಚಿಮದ ಜನತೆ ಭಾರತೀಯ ಸಾಗರವನ್ನು ದಾಟುವ ಕಲ್ಪನೆ ಊಹಿಸಲೂ ಅಸಾಧ್ಯ!
ಬಿಡಿ. ಚಿಂತನಾ ಪ್ರಕ್ರಿಯೆಯನ್ನೇ ಪಶ್ಚಿಮದ ಬುಡದಲ್ಲಿಟ್ಟು ಕುಳಿತವರೆದುರಿಗೆ ತುಂಬಾ ಚಚರ್ೆ ಮಾಡೋದು ವ್ಯರ್ಥ. ಸಂಸ್ಕೃತದ ಕೃತಿ ‘ಯುಕ್ತಿಕಲ್ಪತರು’ ನೌಕೆಯ ನಿಮರ್ಾಣದ ಕುರಿತಂತೆ ಸಮಗ್ರ ಮಾಹಿತಿ ಒದಗಿಸುವ ಗ್ರಂಥ. ಗ್ರಂಥಕರ್ತನ ಪ್ರಕಾರ ನಾಲ್ಕು ಬಗೆಯ ಮರಗಳನ್ನು ನೌಕೆಯ ತಯಾರಿಕೆಗೆ ಬಳಸಬಹುದು. ಹಗುರ ಮತ್ತು ಮೆದುವಾದುದು, ಹಗುರ ಆದರೆ ಗಟ್ಟಿಯಾದುದು; ಭಾರ ಮತ್ತು ಮೆದುವಾದುದು. ಕೊನೆಗೆ ಭಾರ ಮತ್ತು ಗಟ್ಟಿಯಾದುದು ಅಂತ ನಾಲ್ಕುಬಗೆ. ಹಗುರವಾಗಿದ್ದೂ ಬಲು ಗಟ್ಟಿಯಾಗಿರುವ ಎರಡನೇ ಜಾತಿಯವು ಅತ್ಯಂತ ಸೂಕ್ತವಾದುದಂತೆ. ಮರದ ಹಲಗೆಗಳನ್ನು ಜೋಡಿಸಲು ಕಬ್ಬಿಣ ಬಳಸದಿರುವಂತೆ ಎಚ್ಚರಿಕೆಯೂ ಇದೆ; ಸಮುದ್ರದೊಳಗಿನ ಆಯಸ್ಕಾಂತೀಯ ತರಂಗಗಳು ತೊಂದರೆ ಮಾಡಬಹುದೆನ್ನುವ ಕಾರಣಕ್ಕೆ!
ನದಿಯಲ್ಲಿ ಓಡಾಡಲು ಬಳಸುವ ದೋಣಿಗಳನ್ನು ಸಾಮಾನ್ಯವೆಂದು, ಸಮುದ್ರ ದಾಟಲು ಬಳಕೆಯಾಗೋದು ವಿಶೇಷವೆಂದೂ ಅವರು ಗುರುತಿಸಿದ್ದರು. ಅಷ್ಟೇ ಅಲ್ಲ. ನೌಕೆಯೊಂದು ನೀರಿನಲ್ಲಿ ತನ್ನ ಸಮತೋಲನ ಕಳೆದುಕೊಳ್ಳದಿರಲು ಅದರ ಉದ್ದ, ಅಗಲ, ಎತ್ತರಗಳು ಎಷ್ಟೆಷ್ಟಿದ್ದರೆ ಚೆನ್ನ ಎಂದೂ ಅವರು ಅಧ್ಯಯನ ನಡೆಸಿಯಾಗಿತ್ತು. ವಿಶೇಷ ವಸ್ತುಗಳನ್ನು ಸಾಗಿಸಲು ಬಳಸುವ ಸರ್ವಮಂದಿರ ನೌಕೆಗಳಲ್ಲಿ ಇಡಿಯ ನೌಕೆಗೆ ಕ್ಯಾಬಿನ್ ಇರುತ್ತಿತ್ತು. ಮಳೆಗಾಲದ ಬಳಕೆಗೆಂದು ಮಧ್ಯದಲ್ಲಷ್ಟೇ ಕ್ಯಾಬಿನ್ ಇರುವ ಮಧ್ಯಮಂದಿರ ನೌಕೆಯಾದರೆ, ಬೇಸಗೆಯ ಕಾಲಕ್ಕೆ ಮತ್ತು ದೀರ್ಘಯಾತ್ರೆಗೆ ಬಳಸುತ್ತಿದ್ದ ಅಗ್ರಮಂದಿರ ನೌಕೆಗಳು. ಸಾವಿರ ಜನರನ್ನು ಒಯ್ಯಬಲ್ಲ ನೌಕೆಗಳ ವಿವರಣೆಯೂ ಪ್ರಾಚೀನ ಗ್ರಂಥಗಳಲ್ಲಿ ದೊರಕುತ್ತದೆ.
ಹಾಗೆ ಗ್ರಂಥಗಳನ್ನೇ ಅರಸಬೇಕೆಂದರೆ ಋಷಿ ಅಂಗೀರಸರು ಅಗ್ನಿಗೆ ಮಾಡುವ ಪ್ರಾರ್ಥನೆಯಲ್ಲಿ ಹಡಗಿನ ಉಲ್ಲೇಖವಿದೆ. ರಾಮ ಕಾಡಿಗೆ ಹೋಗುವಾಗ ಗುಹ ಮಹಾರಾಜ ಅವರನ್ನು ನದಿ ದಾಟಿಸಿದ್ದು ದೋಣ ಯಲ್ಲಿಯೇ ಅಲ್ಲವೇನು? ಮುಂದೆ ಭರತ ಅಣ್ಣನನ್ನು ಕರೆದೊಯ್ಯಲು ಬಂದಾಗ ಅನುಮಾನಿಸಿದ ಗುಹ ನೂರು ನೂರು ಜನರನ್ನು ಹೊರಬಲ್ಲ ಐದುನೂರು ಹಡಗುಗಳನ್ನು ಯುದ್ಧ ಸನ್ನದ್ಧವಾಗಿರಿಸಿದ್ದನಂತೆ. ಭರತನ ಶುದ್ಧ ಹೃದಯದಿಂದ ಸಂಪ್ರೀತರಾದ ಗುಹ ಅವೇ ಐದು ನೂರು ಹಡಗುಗಳಲ್ಲಿ ರಾಜ ಪರಿವಾರವನ್ನು ಸಾಗಿಸಿದನಂತೆ. ಈ ಹಡಗುಗಳ ವರ್ಣನೆ ಕೇಳಿ ಬಿಟ್ಟರೆ ಕಾಶ್ಮೀರದ ದಾಲ್ ಲೇಕ್ನ ದೋಣ ಗಳು ಮಕ್ಕಳಾಟಿಕೆ ಎನಿಸಿಬಿಡುತ್ತವೆ. ಇನ್ನು ಮಹಾಭಾರತದಲ್ಲಿ ಪಾಂಡವರು ತಪ್ಪಿಸಿಕೊಳ್ಳಲು ವಿಧುರ ರೂಪಿಸಿಕೊಟ್ಟ ಹಡಗಿಗೆ ಸುಂಟರಗಾಳಿಯನ್ನು ಎದುರಿಸುವ ಸಾಮಥ್ರ್ಯ ಇದ್ದುದಲ್ಲದೇ ಅನೇಕ ಬಗೆಯ ಯಂತ್ರಗಳ ಜೋಡಣೆಯೂ ಆಗಿದ್ದುದರ ಉಲ್ಲೇಖವಿದೆ.
ಕೌಟಿಲ್ಯನ ಅರ್ಥಶಾಸ್ತ್ರವಂತೂ ನೌಕೆಗಳನ್ನು ನಿಭಾಯಿಸಬಲ್ಲ ನೌಕಾಧ್ಯಕ್ಷನ ಜವಾಬ್ದಾರಿಗಳನ್ನು ಸಮರ್ಥವಾಗಿ ಬಣ ್ಣಸುತ್ತದೆ. ಇವಿಷ್ಟೇ ಅಲ್ಲದೇ ಸಂಸ್ಕೃತದ ಅನೇಕ ಸಾಹಿತ್ಯಗಳು ಅಂದಿನ ಕಾಲದ ಭಾರತದ ನೌಕಾ ಸಾಮಥ್ರ್ಯದ ಮಾಹಿತಿಗಳನ್ನು ಬಿಚ್ಚಿಡುತ್ತವೆ.
ಖ್ಯಾತ ಇತಿಹಾಸಕಾರ ಸ್ಟ್ರಾಬೋ ‘ಅಲೆಕ್ಸಾಂಡರನ ಕಾಲಕ್ಕೆ ಆಕ್ಸಸ್ ನದಿಯನ್ನು ಭಾರತೀಯ ನೌಕೆಗಳು ಅದೆಷ್ಟು ಸಲೀಸಾಗಿ ದಾಟುತ್ತಿದ್ದವೆಂದರೆ ಅಲ್ಲಿಂದ ಕಾಸ್ಪಿಯನ್ ಮತ್ತು ಯೂಶೀನ್ ನದಿಗಳನ್ನು ಬಳಸಿಕೊಂಡು ಮೆಡಿಟರೇನಿಯನ್ ಸಮುದ್ರದ ಮೂಲಕ ರೋಮ್ ತಲುಪುತ್ತಿದ್ದವು. ಆಮರ್ೇನಿಯಾ ಆ ವೇಳೆಗೆ ಭಾರತದ ವಸಾಹತ್ತಾಗಿತ್ತು! ಭಾರತದ ವಸ್ತುಗಳ ಕಾರಣದಿಂದಾಗಿ ಸಿರಿವಂತಿಕೆಯಿಂದ ಬೀಗುತ್ತಿದ್ದ ಆಮರ್ೇನಿಯಾ ವಶಪಡಿಸಿಕೊಳ್ಳಲೆಂದೇ ರೋಮ್ ಮತ್ತು ಪಶರ್ಿಯಾಗಳ ನಡುವೆ ಕದನ ನಡೆಯತು’ ಎಂದು ಬರೆಯುತ್ತಾರೆ.

About-ship
ಜೂಲಿಯಸ್ ಸೀಸರ್ ಭಾರತದೊಂದಿಗೆ ವ್ಯಾಪಾರ ಸಂಬಂಧ ಬೆಳೆಸುವ ಕನಸು ನನಸು ಮಾಡಲಾಗದೇ ಹೋದ. ಮುಂದೆ ಆಗಸ್ಟಸ್ ಈಜಿಪ್ಟನ್ನು ಗೆದ್ದು ಮೆಡಿಟರೇನಿಯನ್ ಭಾಗದಲ್ಲಿದ್ದ ದರೋಡೆಕೋರರನ್ನು ಮಟ್ಟ ಹಾಕಿದ ಮೇಲೆ ಭಾರತದ ಹಡಗುಗಳು ಮುಕ್ತವಾಗಿ ಸಂಚರಿಸಲಾರಂಭಿಸಿದವು. ಭಾರತದಿಂದ ಸಾಂಬಾರು ಪದಾರ್ಥಗಳು, ಅಮೂಲ್ಯ ರತ್ನಗಳು ಅತ್ತ ಹೋದವಷ್ಟೇ ಅಲ್ಲ. ಇಲ್ಲಿನ ಹುಲಿ, ಸಿಂಹಗಳು, ಘೇಂಡಾಮೃಗಗಳೂ ಕೂಡ ಪ್ರದರ್ಶನಕ್ಕೆಂದು ಹಡಗಿನ ಮೂಲಕ ಹೋಗುತ್ತಿದ್ದವು. ರೋಮನ್ನರಿಗೆ ಭಾರತದ ಗಿಣಿಗಳನ್ನು ಕಂಡರೆ ಪಂಚಪ್ರಾಣವಂತೆ.
ಸಂಬಂಧ ಇದ್ದುದು ವ್ಯಾಪಾರದಲ್ಲಿ ಮಾತ್ರವಲ್ಲ. ಭಾರತದ ತತ್ತ್ವಶಾಸ್ತ್ರಜ್ಞರೂ ರಾಯಭಾರಿಗಳಾಗಿ ಅಲ್ಲಿಗೆ ಹೋಗುತ್ತಿದ್ದರು. ಇಲ್ಲಿನ ಅಖಂಡ ಶ್ರೀಮಂತಿಕೆಯುಳ್ಳ ಸಂಸ್ಕೃತಿಗೆ ಅಲ್ಲಿನ ಜನ ಮಾರು ಹೋಗಿದ್ದರು. ಅರಬ್ಬರಿಗಿಂತ ಭಾರತೀಯರು ಬಲು ಹತ್ತಿರದವರೆನಿಸಿತ್ತು ಅವರಿಗೆ.
ಅಚ್ಚರಿ ಏನು ಗೊತ್ತೇ? ಅತ್ಯಂತ ಸಿರಿವಂತವಾಗಿದ್ದ ರೋಮನ್ ಸಾಮ್ರಾಜ್ಯವೂ ಭಾರತದಿಂದ ಒಯ್ದ ಪದಾರ್ಥಗಳಿಗೆ ಪ್ರತಿಯಾಗಿ ಏನನ್ನೂ ಕೊಡಲಾಗದೇ ಕೈ ಚೆಲ್ಲಿತ್ತು. ಹೀಗಾಗಿ ನಮ್ಮ ವಸ್ತುಗಳಿಗೆ ಪ್ರತಿಯಾಗಿ ಚಿನ್ನದ ನಾಣ್ಯಗಳನ್ನು ಕೊಟ್ಟು ಕಳಿಸುತ್ತಿದ್ದರು. ಮುಂದೊಂದು ದಿನ ಸೂಕ್ತ ಧನ ಪಾವತಿಸಿ ಮರಳಿ ಪಡೆಯುವ ಭರವಸೆಯೊಂದಿಗೆ. ಆದರೆ ರೋಮನ್ ಸಾಮ್ರಾಜ್ಯ ಹೀಗೆ ಭಾರತಕ್ಕೆ ಕೊಟ್ಟ ಒಂದೇ ಒಂದು ನಾಣ್ಯವನ್ನೂ ಮರಳಿ ಪಡೆಯಲಾಗಲಿಲ್ಲ! ಭಾರತದೆಡೆಗೆ ಯಾತ್ರೆ ಬೆಳೆಸಿದ ಅಂದಿನ ಸಾವಿರಾರು ನಾಣ್ಯಗಳು ಈಗಲೂ ಇಲ್ಲಿನ ಭೂಮಿಯಲ್ಲಿ ಹೂತು ಹೋಗಿವೆ. ಅಗೆದಾಗಲೆಲ್ಲ ಸಿಗುತ್ತಿರುತ್ತವೆ.
ನೋಡಿದಿರಾ? Navigation ಅನ್ನುವ ಒಂದು ಸಂಸ್ಕೃತ ಪದದ ಮೂಲ ಹುಡುಕುತ್ತಾ ಎಲ್ಲಿಗೆ ಬಂದು ನಿಂತುಬಿಟ್ಟೆವು. ನಮ್ಮ ಹಡಗು ನಿಮರ್ಾಣದ ಸಾಮಥ್ರ್ಯ ಕೆದಕಿ ತೆಗೆಯುತ್ತಿದ್ದಂತೆ ನಮ್ಮ ವ್ಯಾಪಾರ ಮಾಡುವ ಶಕ್ತಿ ಬೆಳಕಿಗೆ ಬಂತು. ಅದರೊಟ್ಟಿಗೆ ಭಾರತದ ಶ್ರೀಮಂತಿಕೆ ಕೂಡ! ಮತ್ತೊಮ್ಮೆ ಭಾರತ ಅದೇ ದಿಕ್ಕಿನಲ್ಲಿ ಪಯಣ ಬೆಳೆಸಬೇಕಿದೆ. ವಿಶ್ವಗುರುವಾಗಬೇಕಿದೆ. ಅದಕ್ಕೇ ಇಷ್ಟಲ್ಲಾ ಕಸರತ್ತು.

One thought on “ನೌಕೆಗಳ ಮೂಲಕ ಜಗತ್ತನ್ನು ಆಳಿದ ಭಾರತ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s