ಕಂಪ್ಯೂಟರ್ಗೆ ಸಂಸ್ಕೃತವನ್ನು ಕಂಡರೆ ಪ್ರೀತಿ ಅದೇಕೆ ಗೊತ್ತಾ?

ನಮ್ಮದೆನ್ನುವ ವಿಚಾರಗಳ ಮೇಲೆ ನಾವು ಅಸಡ್ಡೆ ತೋರಿದರೆ ಬೇರೆಯವರು ಅದನ್ನು ಏಕಾದರೂ ಒಪ್ಪಬೇಕು? ಹಾಗಂತ ಕುರುಡು ಅಭಿಮಾನವೂ ಬೇಕಿಲ್ಲ. ಭಾರತೀಯವಾದುದರ ಎಲ್ಲದರ ಹಿಂದೆಯೂ ಇರುವ ದೂರದೃಷ್ಟಿ, ವೈಜ್ಞಾನಿಕ ಅಭಿಪ್ರಾಯ, ಕಾಳಜಿ ಇವೆಲ್ಲವನ್ನೂ ತಿಳಿದೇ ಅನುಮೋದಿಸೋಣ. ಸುಖಾಸುಮ್ಮನೆ ಜರಿಯುವುದಕ್ಕೇನೂ ಹಾದಿಗೊಬ್ಬರು, ಬೀದಿಗೊಬ್ಬರು ಸಿಗುತ್ತಾರೆ. ನಾವಾದರೂ ಅರಿತು ಆಚರಿಸೋಣ.

27fr_Panini_jpg_2361051f

ಕೆಲವರಿರುತ್ತಾರೆ. ಪ್ರಸ್ಥಾಪಿತ ಸತ್ಯವನ್ನು ಧಿಕ್ಕರಿಸಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅವರಿಗೆ ಸಮಷ್ಟಿಯ ವಿಕಾಸ ಬೇಕಿಲ್ಲ, ತಮ್ಮ ಬೆಳವಣ ಗೆ ಆದರೆ ಸಾಕು. ಇಂಥವರನ್ನೇ ಬಹುಶಃ ಬುದ್ಧಿ ಜೀವಿಗಳೆನ್ನುತ್ತಾರೇನೋ? ಇವರಲ್ಲಿ ಕಾವಿಧಾರಿಯಾದ ಕೆಲವು ಸಂತರೂ ಇದ್ದಾರೆಂಬುದೇ ಆಘಾತಕಾರಿ. ಅವರು ಪೀಠಗಳನ್ನು ಶೋಷಣೆಯೆಂದು ಜರಿಯುತ್ತಾರೆ, ತಾವು ಜನರನ್ನು ಕಾಲಿಗೆ ಬೀಳಿಸಿಕೊಳ್ಳುತ್ತಾರೆ; ಅಡ್ಡ ಪಲ್ಲಕ್ಕಿ ಬೇಡವೆನ್ನುತ್ತಾರೆ, ಹೆಲಿಕಾಪ್ಟರುಗಳಿಂದ ಪುಷ್ಪಾರ್ಚನೆ ಮಾಡಿಸಿಕೊಳ್ಳುತ್ತಾರೆ. ಎರಡೂ ಬಗೆಯೂ ಕಂಟಕವೇ. ಇಂತಹುದೇ ಸಂತರೊಬ್ಬರು ಇತ್ತೀಚೆಗೆ ಹಿಂದೂಧರ್ಮವನ್ನು ವಾಚಾಮಗೋಚರವಾಗಿ ಬೈದು ವಿಜ್ಞಾನ ಯುಗದಲ್ಲಿ ತರುಣ ಕೇಳುವ ಪ್ರಶ್ನೆಗೆ ಉತ್ತರಿಸಲಾರಿರಿ ಎಂದು ಉತ್ಕಂಠದಲ್ಲಿ ಹೇಳಿದರು. ನಕ್ಕು ಸುಮ್ಮನಾಗದೇ ಬೇರೆ ದಾರಿಯೇ ಇರಲಿಲ್ಲ. ವಿಜ್ಞಾನದ ಸಂಶೋಧನೆಗಳೆಲ್ಲಾ ವೇದಾಂತಕ್ಕೆ ನತಮಸ್ತಕವಾಗುತ್ತಿರುವ ಕಾಲದಲ್ಲಿ ಇವರೆಲ್ಲ ಅದೇನನ್ನು ಗಮನಿಸುತ್ತಿದ್ದಾರೋ ದೇವರೇ ಬಲ್ಲ.

ಹೌದು. ನಾನು ಚಚರ್ಿಸಬೇಕಿರೋದು ಅಕ್ಷರಶಃ ಅದನ್ನೇ. ವೈಜ್ಞಾನಿಕ ಮನೋಭಾವ ಇಲ್ಲದ ಭಾರತೀಯನೇ ಇಲ್ಲ. ಆತನ ಊಟ, ನೋಟ, ಮಾತು ಕೊನೆಗೆ ನಿದ್ದೆಯೂ ವೈಜ್ಞಾನಿಕವೇ. ಎಲ್ಲದರ ಹಿಂದೆಯೂ ಊಹಿಸಲಸಾಧ್ಯವಾದಷ್ಟು ಅಧ್ಯಯನವಿದೆ. ಉಸಿರನ್ನು ಎಳೆದು, ಹೊರಹಾಕುವ ಸಹಜ ಕೈಂಕರ್ಯವನ್ನೂ ಪ್ರಾಣಾಯಾಮವೆಂದು ಕರೆದು ವಿಸ್ತಾರಗೊಳಿಸಿದ್ದು ಭಾರತ. ಯಾವ ಋತುವಿಗೆ ಯಾವ ಊಟ, ಯಾವ ರೋಗಕ್ಕೆ ಯಾವ ಮದ್ದು ಗೊತ್ತಿರಲಿಲ್ಲವೇನು ಅವನಿಗೆ? ಇವನ್ನೆಲ್ಲಾ ತನ್ನ ಸಾಮಥ್ರ್ಯದಿಂದ ಅರಿತು ಹೊಸ ಪೀಳಿಗೆಗೆ ಹೊಸ ರೂಪದಲ್ಲಿ ಕೊಡುವವನೇ ಸಂತ. ಬುದ್ಧನಿಂದ ಹಿಡಿದು ವಿವೇಕಾನಂದರವರೆಗೆ ಎಲ್ಲರೂ ಇದನ್ನೇ ಮಾಡಿದ್ದು. ಇದನ್ನು ಅರಿಯಬಲ್ಲ ಅಂತರ್ಗಣ್ಣು ಇಲ್ಲದವರು ತಪ್ಪುಗಳನ್ನೇ ಎತ್ತಿ ತೋರುತ್ತ ವಿಕೃತಾನಂದದಿಂದ ಚಪ್ಪಾಳೆ ತಟ್ಟುತ್ತಾರೆ. ಸಮಾಜ ಮಗ್ಗುಲು ಬದಲಿಸುತ್ತದೆ, ಅಷ್ಟೇ!

ಅಂದಹಾಗೆ ನಾವು ಚಚರ್ೆ ಮಾಡುತ್ತಿದ್ದುದು ಭಾಷೆಯ ವಿಚಾರ. ಸಂಸ್ಕೃತದ ಹಿಂದಿರುವ ವಿಜ್ಞಾನವೇ ಅದೆಷ್ಟು ರೋಚಕವೆಂದರೆ ವಿವರಿಸ ಹೋದರೆ ಗಾಬರಿಯಾದೀತು. ಜಗತ್ತೆಲ್ಲ ಈ ಭಾಷೆಯ ಸುತ್ತ ತಿರುಗಾಡುತ್ತಿರುವುದು ಈ ಕಾರಣದಿಂದಲೇ. 1980ನೇ ಇಸವಿಯಲ್ಲಿ ನಾಸಾದ ವಿಜ್ಞಾನಿ ರಿಕ್ ಬ್ರಿಗ್ಸ್ ಸಂಸ್ಕೃತದ ಕುರಿತು ವಿಸ್ತಾರವಾದ ಲೇಖನವೊಂದನ್ನು ಬರೆದು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಸಂಸ್ಕೃತ ಕಂಪ್ಯೂಟರಿನ ಭಾಷೆಯಾಗಿ ಬಳಕೆಯಾಗಲು ಹೇಗೆ ಸೂಕ್ತವೆಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ನನಗೆ ಗೊತ್ತು. ನಿಮ್ಮಲ್ಲಿ ಬಹುತೇಕರು ಆಟರ್ಿಫೀಷಿಯಲ್ ಇಂಟೆಲಿಜೆನ್ಸ್ ಎನ್ನುವ ಪದ ಕೇಳಿರಲಾರಿರಿ. ನೇರವಾಗಿ ಅನುವಾದಿಸಬೇಕೆಂದರೆ ಕೃತಕ ಬುದ್ಧಿಮತ್ತೆ ಅಂತ. ಯಂತ್ರವೊಂದು ಸಂದರ್ಭಕ್ಕೆ ತಕ್ಕಂತೆ ತಾನೇ ನಿರ್ಣಯ ಕೈಗೊಳ್ಳುವ ಬುದ್ಧಿವಂತಿಕೆ ಹೊಂದುವ ವಿಜ್ಞಾನದ ಶಾಖೆ ಅದು. ಹಾಗೆ ಸುಮ್ಮನೆ ಆಲೋಚಿಸಿ. ಯಜಮಾನನಿಲ್ಲದಿದ್ದರೂ ಸಂಜೆ ನಾಲ್ಕು ಗಂಟೆಗೆ ತೋಟದ ಮೋಟಾರು ತಾನೇ ಸ್ವಿಚ್ ಆನ್ ಆದರೆ ಹೇಗಿರುತ್ತೆ? ಅಷ್ಟೇ ಅಲ್ಲ, ಹಾಕಿರುವ ಬೆಳೆಗೆ ಇಂತಿಷ್ಟೇ ನೀರು ಸಾಕೆಂದು ಅದೇ ನಿರ್ಣಯ ತೊಗೊಂಡರೆ! ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಾತಾವರಣದ ತಾಪಮಾನ ಲೆಕ್ಕ ಹಾಕಿ ಭೂಮಿ ತಂಪಾಗಿರುವುದರಿಂದ ಕಡಿಮೆ ನೀರು ಸಾಕೆಂದು ಅದೇ ನಿಧರ್ಾರ ಮಾಡಿದರೆ?! ಇದನ್ನೇ ಬುದ್ಧಿವಂತ ನಡವಳಿಕೆ ಅನ್ನೋದು.

ಈ ರೀತಿಯ ಕಲ್ಪನೆ ವಿಜ್ಞಾನಿಗಳ ನಡುವೆ ಬಲು ಹಿಂದೆಯೇ ಚಚರ್ೆಗೆ ಬಂದಿತಾದರೂ 1985ರ ವೇಳೆಗೆ ಅದು ಜಗತ್ತಿನ ನಿದ್ದೆ ಕೆಡಿಸಿಬಿಟ್ಟಿತ್ತು. ಎಲ್ಲ ಕ್ಷೇತ್ರದಲ್ಲಿಯೂ ಸ್ವಯಂ ಚಾಲನೆಯ ಪರಿಕಲ್ಪನೆ, ಕೃತಕ ಬುದ್ಧಿಮತ್ತೆಯ ಚಿಂತನೆ ಹರಡಿತ್ತು. ಆಗಲೇ ರಿಕ್ ಬ್ರಿಗ್ಸ್ನ ಸಂಶೋಧನಾ ಲೇಖನ ಪ್ರಕಟವಾಗಿದ್ದು. ಕೃತಕ ಬುದ್ಧಿಮತ್ತೆಯ ಯಂತ್ರಗಳಿಗೆ ತಿಳಿಹೇಳುವ ಭಾಷೆಗಾಗಿ ಎಲ್ಲರೂ ಹುಡುಕಾಟ ನಡೆಸಿದ್ದರು. ಇಂಗ್ಲೀಷಿನ ಕೊರತೆಗಳು ಅದನ್ನು ಕಂಪ್ಯೂಟರ್ನಿಂದ ದೂರ ಒಯ್ದಿತ್ತು. ಗ್ರೀಕ್, ಲ್ಯಾಟಿನ್ಗಳು ಪರಿಪೂರ್ಣವಾಗಿರಲಿಲ್ಲ. ಕಣ್ಮುಂದೆ ರಾಚುವಂತೆ ಇದ್ದುದು ಸಂಸ್ಕೃತವೇ.

ಈ ಭಾಷೆಯ ವೈಶಿಷ್ಟ್ಯವನ್ನು ಹೇಗೆಂದು ಬಣ ್ಣಸೋದು ಹೇಳಿ. ಸುಮ್ಮನೆ ಇಂಗ್ಲೀಷಿನ ವಾಕ್ಯವೊಂದನ್ನು ಸಂಸ್ಕೃತಕ್ಕೆ ಅನುವಾದಿಸಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಖಚಿಟಚಿ ಞಟಟಜಜ ಖಚಿತಚಿಟಿಚಿ. ಅತ್ಯಂತ ಸರಳ ಸಾಲದು. ರಾಮನು ರಾವಣನನ್ನು ಕೊಂದನು ಅನ್ನೋದು ಇದರರ್ಥ. ಇರೋದು ಮೂರು ಪದಗಳು. ಈ ಪದಗಳನ್ನೇ ಸ್ಥಳಾಂತರಿಸಿ ನೋಡಿ; ರಾವಣನನ್ನು ರಾಮನು ಕೊಂದನು ಅಥವಾ ಕೊಂದನು ರಾವಣನನ್ನು ರಾಮನು ಹೀಗೇ. ಹೇಗೆ ನೋಡಿದರೂ ಅರ್ಥ ವ್ಯತ್ಯಾಸವಾಗಲಾರದು. ಇಂಗ್ಲೀಷಿನ ವಾಕ್ಯದ ಮೇಲೆ ಈ ಪ್ರಯೋಗ ಮಾಡಿ ನೋಡಿ. ಖಚಿತಚಿಟಿಚಿ ಞಟಟಜಜ ಖಚಿಟಚಿ ಎಂದಾದರೆ ರಾಮಾಯಣದ ಕಥೆಯೇ ಎಕ್ಕುಟ್ಟಿ ಹೋಗುತ್ತದೆ!

ಇದು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ ಹೀಗೇಕೆಂದು ಯೋಚಿಸಲು ಸಮಯ ಕೊಟ್ಟಿರಲಾರಿರಿ ಅಷ್ಟೇ. ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ಅದರ ವೈಶಿಷ್ಟ್ಯಗಳಲ್ಲೊಂದು. ಏಳು ವಿಭಕ್ತಿಗಳು, ಮೂರು ವಚನಗಳೂ ಸೇರಿ ಪದಗಳ ಭಂಡಾರವನ್ನೇ ಮುಂದಿಟ್ಟಿದೆ. ಇವುಗಳನ್ನು ಅಥರ್ೈಸಿಕೊಂಡವ ಸಲೀಸಾಗಿ ಮಾತನಾಡಬಲ್ಲ. ಉದಾಹರಣೆಗೆ ನಮ್ಮ ಭಾಷೆಯಲ್ಲಿ ನಾಯಿಯೊಂದಿಗೆ ಹೊಂದಿಕೊಂಡ ವಿಭಕ್ತಿಗಳೆಷ್ಟು ನೋಡಿ. ನಾಯಿಯಿಂದ, ನಾಯಿಗೆ, ನಾಯಿಯಲ್ಲಿ, ಹೀಗೇ ಹಲವಾರು. ಇಂಗ್ಲೀಷಿನಲ್ಲಿ ಇಷ್ಟನ್ನು ಹೇಳಲು ಹಿಂದೆ ಒಂದಷ್ಟು ಹೊಸ ಪದಗಳನ್ನು ಸೇರಿಸಬೇಕು. ಉಚ್ಚಾರಣೆಯ ಸಂದರ್ಭದಲ್ಲಿ ಅವುಗಳ ಸ್ಥಾನ ವ್ಯತ್ಯಾಸವಾಯಿತೆಂದರೆ ಅರ್ಥವೇ ಏರುಪೇರು. ಹೀಗಾಗಿ ಕಂಪ್ಯೂಟರಿಗೆ ಇದು ಸೂಕ್ತವಾದ ಭಾಷೆಯೇ ಅಲ್ಲ. ಆದರೆ ವಾಕ್ಯ ರಚನೆ, ಪದ ನಿಮರ್ಾಣಗಳಲ್ಲೆಲ್ಲಾ ಸೂಕ್ತ ನಿಯಮ ಹೊಂದಿರುವ ಸಂಸ್ಕೃತವೇ ಕೃತಕ ಬುದ್ಧಿಮತ್ತೆಗೆ ಹೊಂದುವ ಸೂಕ್ತ ಭಾಷೆ.

ಜಾವಾದಂತಹ ಕಂಪ್ಯೂಟರ್ ಭಾಷೆಗಳಲ್ಲಿ ಕ್ಲಾಸ್, ಆಬ್ಜೆಕ್ಟ್ ಪಾಯಿಂಟರ್ಗಳನ್ನೋ ಆಬ್ಜೆಕ್ಟ್ಗಳನ್ನೋ ಬಳಸುತ್ತಾರಲ್ಲ ಇವೆಲ್ಲವೂ ಸಂಸ್ಕೃತದ ಸಂರಚನೆಗೆ ಬಹುವಾಗಿ ಹೋಲುವಂಥದ್ದು!

ಖ್ಯಾತ ಭಾಷಾ ಶಾಸ್ತ್ರಜ್ಞ ನೋಮ್ ಚೋಮ್ಸ್ಕಿ ಇಂಗ್ಲೀಷಿನ ವ್ಯಾಕರಣವೂ ಸೇರಿದಂತೆ ಅನೇಕವು ಸಾಮಾನ್ಯ ವಾಕ್ಯ ರಚನೆಗೂ ದಾರಿ ತೋರಿಸಲಾರವು. ಆದರೆ ಪಾಣ ನಿಯ ವ್ಯಾಕರಣ ಹಾಗಲ್ಲ ಎಂದಿದ್ದರು. ಹಾರ್ವಡರ್್ ವಿಶ್ವವಿದ್ಯಾಲಯದ ಪ್ರೊಫೆಸರ್ ವಾಲ್ಟರ್ ಯುಜೀನ್ ಕ್ಲಾಕರ್್ ಪಾಣ ನಿಯ ವ್ಯಾಕರಣ ಬಲು ಪ್ರಾಚೀನವಾದ ವೈಜ್ಞಾನಿಕ ವ್ಯಾಕರಣ. ಭಾರತೀಯರ ಭಾಷಾ ಅಧ್ಯಯನ ವೈದ್ಯನೊಬ್ಬ ದೇಹವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಂಗಾಂಗಗಳನ್ನು ಕೊಯ್ದು ಅಧ್ಯಯನ ಮಾಡಿದಂತೆ ಎಂದು ಉದ್ಗಾರವೆತ್ತಿದ್ದರು.

ಸಂಸ್ಕೃತದ ಮತ್ತೊಂದು ಅತಿ ವಿಶಿಷ್ಟ ಸಾಮಥ್ರ್ಯದ ಕಡೆಗೆ ಹೊರಳೋಣ. ಹೊಸ ಪದಗಳ ಹುಟ್ಟು ಹಾಕುವಿಕೆ ಇಂಗ್ಲೀಷಿಗಿಂತ ಸಂಸ್ಕೃತಕ್ಕೇ ಸುಲಭ. ಏಕೆ ಗೊತ್ತೇ? ಇಲ್ಲಿ ಪದಗಳು ವಸ್ತುವನ್ನು ಸೂಚಿಸುವಂಥದ್ದಲ್ಲ. ಬದಲಿಗೆ ಅದರ ಲಕ್ಷಣವನ್ನೋ, ಕ್ರಿಯೆಯನ್ನೋ ವಣರ್ ಸುವಂಥದ್ದು. ಉದಾಹರಣೆಗೆ ಸಂಸ್ಕೃತದಲ್ಲಿ ಮರವನ್ನು ವಸ್ತುವಾಗಿ ಸೂಚಿಸುವುದೇ ಇಲ್ಲ. ಅಲ್ಲಿ ವೃಕ್ಷ ಎಂದಾಗ ಕಡಿದು ಉರುಳಿಸಲ್ಪಡುವಂಥದ್ದು ಎಂದರ್ಥ. ತರು ಎಂದಾಗ ತೇಲುವ ಗುಣವುಳ್ಳದ್ದು ಅಂತ. ಇನ್ನೂ ಪಾದಪ ಎಂದಾಗ ಕಾಲ್ಗಳಿಂದ ನೀರನ್ನು ಕುಡಿಯಬಲ್ಲವು ಎನ್ನುವ ಅರ್ಥ ಹೊಮ್ಮಿಸುವಂಥದ್ದು. ಅಂದರೆ ವಸ್ತುಗಳ ಹೆಸರು ಅದರ ಲಕ್ಷಣ ಮತ್ತು ಕಾರ್ಯವನ್ನು ಅನುಸರಿಸುವಂಥದ್ದು ಅಂತಾಯ್ತು. ಹೀಗಾಗಿ ಹೊಸ ವಸ್ತುಗಳನ್ನು ಗುರುತಿಸುವಲ್ಲಿ ಸಂಸ್ಕೃತಕ್ಕೆ ಕಷ್ಟವಾಗಲಾರದು. ಹಾಗೆಯೇ ಎಲ್ಲಾ ಪದಗಳನ್ನೂ ನೆನಪಿಟ್ಟುಕೊಳ್ಳುವ ಪ್ರಯಾಸವೂ ಇಲ್ಲ. ಇಂಗ್ಲೀಷ್ ಹಾಗಲ್ಲ. ಇಲ್ಲಿ ಹೊಸ ಸಂಶೋಧನೆಗಳಿಗೂ ಹೊಸ ಹೆಸರು ಬೇಕು. ಸುಂಟರಗಾಳಿಗೆ ಕೊಡುವ ಹೆಸರುಗಳನ್ನು ನೀವು ಕೇಳಿರಬೇಕು. ಅಲೆಕ್ಸ್, ಚಾಲರ್ಿ, ಕೇಟ್, ಲ್ಯಾರಿ, ರೀನ್, ರೋಸ್ ಈ ರೀತಿ. ಎಲ್ನಿನೋಥರದ್ದವಂತೂ ಬಲು ಖ್ಯಾತವಾದವು. ಈ ಹೆಸರುಗಳನ್ನು ಮನಸಿಗೆ ಬಂದಂತೆ ಕೊಟ್ಟು ಸುಮ್ಮನಾಗಿಬಿಡುತ್ತಾರೆ. ಈ ಕೆಲಸಕ್ಕೆ ಸಂಸ್ಕೃತ ಪಂಡಿತನನ್ನೇ ನೇಮಿಸಿದ್ದರೆ ಆತ ಅದು ಹುಟ್ಟುವ ಸ್ಥಳ, ಸಾಗುವ ಮಾರ್ಗ ಇವುಗಳ ಆಧಾರದ ಮೇಲೆ ಹೆಸರಿಟ್ಟಿರುತ್ತಿದ್ದ. ಆಗ ಅದನ್ನು ನೆನಪಿಟ್ಟುಕೊಳ್ಳುವ ಗೊಡವೆಯೇ ಇರುತ್ತಿರಲಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬಸ್ಸು, ಕಾರು ಇವೆಲ್ಲ ಯಾವ ಕಾರಣಕ್ಕಾಗಿ ಇಟ್ಟ ಹೆಸರು ಯಾರಿಗೂ ಗೊತ್ತಿಲ್ಲ. ಹೀಗೆ ಅಲ್ಲಿಂದ ಇಲ್ಲಿಂದ ಹೆಕ್ಕಿ ತಂದ ಪದಗಳಿಂದಲೇ ಇಂಗ್ಲೀಷ್ ಡಿಕ್ಷನರಿ ತುಂಬಿ ಹೋಗಿದೆ. ಉಪಯೋಗಕ್ಕೆ ಬಾರದ ಪದಗಳನ್ನು ರಿಸೈಕಲ್ ಬಿನ್ಗೆ ಕಳಿಸೋದು ಸುಲಭವಿಲ್ಲ. ಸಂಸ್ಕೃತವನ್ನು ಒಂದೆರಡು ವರ್ಷ ಕಲಿತರೆ, ಪದವನ್ನು ಅಂಗಾಂಗ ತುಂಡರಿಸಿದಂತೆ ಬೇರೆ ಬೇರೆ ಮಾಡಿ ಧಾತುವನ್ನು ಗುರುತಿಸಿ ಅರ್ಥ ಕಲ್ಪಿಸುವುದು ಕಷ್ಟವೇ ಅಲ್ಲ. ಹೀಗಾಗಿಯೇ ಈ ಭಾಷೆ ಕಂಪ್ಯೂಟರ್ಗೆ ಬಲು ಪ್ರಿಯವಾದುದು.

ಇನ್ನೂ ಗಮನಿಸಲೇಬೇಕಾದ ಮತ್ತೊಂದು ಸಂಗತಿಯೆಂದರೆ ರಾಮಾಯಣ, ಮಹಾಭಾರತ, ಭಾಗವತಾದಿಯಾಗಿ ಅಷ್ಟೆಲ್ಲಾ ವಿಸ್ತಾರವಾದ ಸಾಹಿತ್ಯ ರಾಶಿ ಸಂಸ್ಕೃತದಲ್ಲಿದೆಯಲ್ಲ; ಅಲ್ಲೆಲ್ಲು ವಿರಾಮ ಚಿಹ್ನೆಗಳೇ ಇಲ್ಲ. ಶ್ಲೋಕ ಪಾದಗಳನ್ನು ತೋರುವ ಒಂದು ಗೆರೆ ಮತ್ತು ಎರಡು ಗೆರೆಗಳು ಮಾತ್ರ! ಗೀತೆಯಲ್ಲಿ ಶ್ರೀಕೃಷ್ಣನ ವಿಶ್ವರೂಪ ದರ್ಶನ ನೋಡಿ ಬೆಕ್ಕಸ ಬೆರಗಾಗುತ್ತಾನಲ್ಲ ಅಜರ್ುನ, ಈ ಸಂಗತಿ ಓದಿದವರಿಗೆಲ್ಲ ಅರಿವಾಗುತ್ತದೆ. ಆದರೆ ಆಶ್ಚರ್ಯ ಸೂಚಕ ಚಿಹ್ನೆ ಮಾತ್ರ ಅಲ್ಲಿಲ್ಲ. ಇದು ಹೇಗೆ? ಈ ಭಾಷೆಯೇ ಅದೆಷ್ಟು ಮಧುರವಾಗಿದೆಯೆಂದರೆ ಬಳಕೆಯ ಪದಗಳೇ ಭಾವವನ್ನು ಸೂಚಿಸಿಬಿಡುತ್ತದೆ. ಇನ್ನು ಅನವಶ್ಯಕ ಚಿಹ್ನೆಗಳೇಕೆ? ಸತ್ಯ ಹೇಳಿ. ಹತ್ತಾರು ಚಿಹ್ನೆಗಳ ಗೊಂದಲಗಳಿಲ್ಲದ ಭಾಷೆಯನ್ನು ಕಂಪ್ಯೂಟರ್ಗೆ ನೀಡಿದರೆ ಅದು ಸಂತಸ ಪಡದೇ ಇರುತ್ತಾ? ಈ ಕಾರಣಕ್ಕಾಗಿಯೇ ಕಂಪ್ಯೂಟರ್ ಭಾಷೆ ಸಂಸ್ಕೃತ ಅಂದಿದ್ದು.

ಹೇಳಲಿಕ್ಕೆ ಬಹಳ ಇದೆ. ಆದರೂ ಕೊನೆಯ ಒಂದಂಶ ಹೇಳಲೇಬೇಕು ಅಂದರೆ ಸಂಸ್ಕೃತ ಪಕ್ಕಾ ಕಂಜೂಸ್ ಭಾಷೆ! ಅತ್ಯಂತ ಹೆಚ್ಚಿನ ಸಂಗತಿ ಹೇಳಲು ಅದಕ್ಕೆ ಕಡಿಮೆ ಪದಗಳೇ ಸಾಕು. ಜಗತ್ತೆಲ್ಲ ಇಂದು ಸಮಯವನ್ನು, ಸಂಪನ್ಮೂಲವನ್ನು ಉಳಿಸುವ ಪ್ರಯತ್ನದಲ್ಲಿ ನಿರತವಾಗಿದ್ದಾಗ ಅನವಶ್ಯಕ ಪದ ಬಳಕೆಯಾಗುವುದನ್ನು ಸಹಿಸೋದು ಸಾಧ್ಯವೇ ಇಲ್ಲ. ಸುಮ್ಮನೆ ಗಮನಿಸಿ ಸುಂದರಿ ಎಂಬ ಸಂಸ್ಕೃತ ಪದದ ಇಂಗ್ಲೀಷ್ ಅನುವಾದ ಂ ಛಜಚಿಣಣಜಿಣಟ ತಿಠಟಚಿಟಿ. ಒಂದಕ್ಕೆ ಮೂರು! ಕೆಲವೆಡೆಯಂತೂ ನಾಲ್ಕು ಪದದ ಸಂಸ್ಕೃತ ವಾಕ್ಯದ ಇಂಗ್ಲೀಷ್ ಅನುವಾದಕ್ಕೆ ಎರಡು, ಮೂರು ಸಾಲುಗಳನ್ನೇ ಬರೆಯಬೇಕಾದೀತು. ಈ ತಲೆನೋವಿನಿಂದಾಗಿಯೇ ಮೊಬೈಲ್ನಲ್ಲಿ ಮಸೇಜ್ ಕಳಿಸುವಾಗ ಎಲ್ಲವನ್ನೂ ಹೃಸ್ವಗೊಳಿಸಿ ಪದಗಳನ್ನು ಕೆತ್ತಿ, ತೀಡಿ ಕಳಿಸೋದು. ಬರಲಿರುವ ದಿನಗಳಲ್ಲಿ ಮೊಬೈಲ್ ಭಾಷೆಗೇ ಒಂದು ವ್ಯಾಕರಣ ಸೃಷ್ಟಿಯಾದರೆ ಅಚ್ಚರಿ ಪಡಬೇಡಿ. ಸಂಸ್ಕೃತ ಬಲು ಹಿಂದೆಯೇ ಈ ರೀತಿಯ ಆಲೋಚನೆ ಮಾಡಿದೆ. ಮಿತ ಬಳಕೆಯ ಮಹತ್ವ ಅರಿತಿದೆ. ಹೀಗಾಗಿಯೇ ಅದು ಕಂಪ್ಯೂಟರಿಗೆ ಪ್ರಿಯವೆನಿಸಲು ಮತ್ತೊಂದು ಕಾರಣವಾಗಿದೆ.

ಹಾಗಂತ ಕಂಪ್ಯೂಟರಿನೊಂದಿಗೆ ನಾಳೆಯಿಂದ ಸಂಸ್ಕೃತದಲ್ಲಿಯೇ ಮಾತನಾಡಬಹುದೆಂದಲ್ಲ ಅದರರ್ಥ. ಈ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಇದರ ನಿಯಮಗಳಂತೆಯೇ ಕಂಪ್ಯೂಟರ್ ಭಾಷೆಯ ನಿಯಮಗಳನ್ನೂ ರೂಪಿಸಿ ಅದರ ಕಾರ್ಯ ಕ್ಷಮತೆಯನ್ನು ವೃದ್ಧಿಸುವ ಪ್ರಯತ್ನ ಮಾಡಲಾಗುತ್ತದೆ!

ಈ ಹಂತದಲ್ಲಿ ಒಂದು ಅಪರೂಪದ ಸಂಗತಿ ಹಂಚಿಕೊಳ್ಳಲೇಬೇಕು. ಎಂಭತ್ತರ ದಶಕದ ಅಂತ್ಯ ಭಾಗದಲ್ಲಿ ದೆಹಲಿಯಲ್ಲಿ ಸಂಸ್ಕೃತ ಮತ್ತು ಕಂಪ್ಯೂಟರ್ ಕುರಿತಂತೆ ವಿಚಾರ ಸಂಕಿರಣ ನಡೆದಿತ್ತು. ಆಗಿನ ರಾಷ್ಟ್ರಪತಿ ಶಂಕರ ದಯಾಳ ಶಮರ್ಾರ ಮನ ಸೂರೆಗೊಂಡದ್ದು ರಾಮಾನುಜನ್ ಎಂಬ ಸಾಧಾರಣ ವ್ಯಕ್ತಿ. ಸಂಸ್ಕೃತವನ್ನೇ ಆಧಾರವಾಗಿಟ್ಟುಕೊಂಡು ಕಂಪ್ಯೂಟರ್ಗೆ ಬೇಕಾಗುವ ಫ್ಲೋ ಚಾಟರ್್ ಮತ್ತು ಆಲ್ಗರಿದಂ ಗಳನ್ನು ಆತ ಮಂಡಿಸಿದ್ದರು. ಶಮರ್ಾ ತಡಮಾಡಲಿಲ್ಲ. ಸೂಪರ್ ಕಂಪ್ಯೂಟರ್ ತಜ್ಞ ವಿಜಯ್ ಭಾಟ್ಕರರಿಗೆ ಫೋನಾಯಿಸಿ ರಾಮಾನುಜನ್ರ ಸಂಶೋಧನೆಗೆ ವೇದಿಕೆ ರೂಪಿಸುವಂತೆ ಕೇಳಿಕೊಂಡರು. ಸಿಡ್ಯಾಕ್ಗೆ ಅಧಿಕೃತವಾಗಿ ಸೇರಿಕೊಂಡ ರಾಮಾನುಜನ್ ದೇಶಿಕಾ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದರು. ಅದರ ಕೆಲಸದ ಶೈಲಿ ನೋಡಿ ಅಂದಿನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾಯರು ದಂಗು ಬಡಿದಿದ್ದರು. ಅವರ ಪ್ರಯತ್ನದಿಂದಾಗಿ ಇಂದು ವೇದಗಳು ಯಂತ್ರಗಳಿಂದ ಓದಬಲ್ಲವಾಗಿವೆ; ಅಲ್ಲಿಯೇ ಪದಗಳನ್ನು ಹುಡುಕಿ ಅದರ ಅರ್ಥ ವಿವರಣೆ ಕೊಡಿಸುವಂತಹ ಚಟುವಟಿಕೆಗಳೂ ನಡೆದಿವೆ. ಇಷ್ಟನ್ನು ಅದೇಕೆ ಹೇಳಬೇಕಾಯಿತೆಂದರೆ ನಾವು ನಮ್ಮ ಭಾಷೆಯ ಮೇಲೆ ಗೌರವಾದರ ತೋರಿ ಸಂಶೋಧನೆಗೆ ತೊಡಗಲಿಲ್ಲವೆಂದರೆ ಮತ್ತ್ಯಾರು ಮಾಡಬೇಕು ಹೇಳಿ ಎಂಬುದನ್ನು ನೆನಪಿಸುವುದಕ್ಕೆ ಮಾತ್ರ.

Dr-P-Ramanujan

ನಮ್ಮದೆನ್ನುವ ವಿಚಾರಗಳ ಮೇಲೆ ನಾವು ಅಸಡ್ಡೆ ತೋರಿದರೆ ಬೇರೆಯವರು ಅದನ್ನು ಏಕಾದರೂ ಒಪ್ಪಬೇಕು? ಹಾಗಂತ ಕುರುಡು ಅಭಿಮಾನವೂ ಬೇಕಿಲ್ಲ. ಭಾರತೀಯವಾದುದರ ಎಲ್ಲದರ ಹಿಂದೆಯೂ ಇರುವ ದೂರದೃಷ್ಟಿ, ವೈಜ್ಞಾನಿಕ ಅಭಿಪ್ರಾಯ, ಕಾಳಜಿ ಇವೆಲ್ಲವನ್ನೂ ತಿಳಿದೇ ಅನುಮೋದಿಸೋಣ. ಸುಖಾಸುಮ್ಮನೆ ಜರಿಯುವುದಕ್ಕೇನೂ ಹಾದಿಗೊಬ್ಬರು, ಬೀದಿಗೊಬ್ಬರು ಸಿಗುತ್ತಾರೆ. ನಾವಾದರೂ ಅರಿತು ಆಚರಿಸೋಣ.

ಹ್ಞಾ. ಹೇಳೋದು ಮರೆತಿದ್ದೆ. ಕನ್ನಡದ ತಿಂಗಳು ಬಂತು. ಸಂಸ್ಕೃತವನ್ನು ಗೌರವಿಸೋದು ಅಂದರೆ ಕನ್ನಡವನ್ನು ಅಖಂಡವಾಗಿ ಪ್ರೀತಿಸೋದು ಅಂತಾನೆ ಅರ್ಥ. ಸಂಸ್ಕೃತ ಕಲಿತವ ಕನ್ನಡವನ್ನು ತಲೆಮೇಲಿಟ್ಟು ಮೆರೆಸುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಸಂಸ್ಕೃತಕ್ಕೆ ಘನತೆ ತಂದುಕೊಟ್ಟಿರುವ ಎಲ್ಲ ಅಂಶಗಳು ಕನ್ನಡದಲ್ಲೂ ಇವೆ. ಎಷ್ಟಾದರೂ ಎಲ್ಲಾ ಭಾಷೆಗಳ ತಾಯಿಯಲ್ಲವೇ ಸಂಸ್ಕೃತ!

6 thoughts on “ಕಂಪ್ಯೂಟರ್ಗೆ ಸಂಸ್ಕೃತವನ್ನು ಕಂಡರೆ ಪ್ರೀತಿ ಅದೇಕೆ ಗೊತ್ತಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s