ವಿಶ್ವಗುರುವಿಗೆ ಜೊತೆಯಾಗಬಹುದಾದ ವಿಶ್ವಭಾಷೆ!

1786 ರಲ್ಲಿ ಯುರೋಪಿನ ಭಾಷಾ ತಜ್ಞ ವಿಲಿಯಂ ಜೋನ್ಸ್ ‘ಸಂಸ್ಕೃತದ ಪ್ರಾಚೀನತೆಯ ಬಗ್ಗೆ ಚಚರ್ೆಗಳು ಏನೇ ಇರಲಿ, ಅದರ ವಿನ್ಯಾಸ ಅತ್ಯದ್ಭುತ; ಅದು ಗ್ರೀಕರ ಭಾಷೆಗಿಂತ ಪರಿಪೂರ್ಣ, ಲ್ಯಾಟಿನ್ಗಿಂತ ಸಮೃದ್ಧ ಮತ್ತು ಇವೆರಡಕ್ಕಿಂತಲೂ ಉತ್ಕೃಷ್ಟವಾಗಿ ಪರಿಷ್ಕರಿಸಲ್ಪಟ್ಟ ಭಾಷೆ’ ಎಂದ. ಈ ಮೂರು ಭಾಷೆಗಳ ನಡುವಿನ ಸಾಮ್ಯವನ್ನು ಗುರುತಿಸಿ ಆಶ್ಚರ್ಯಚಕಿತನಾದ ಆತ ಇವೆಲ್ಲಕ್ಕೂ ಒಂದೇ ಮೂಲವಿದೆಯೆಂದು ಪ್ರತಿಪಾದಿಸಿದ. ಅದು ಸಂಸ್ಕೃತವೇ ಆಗಿರಲಾರದೆಂಬ ಸಹಜ ಆಳುವ ವರ್ಗದ ಧಿಮಾಕು ಅವನಿಗಿತ್ತು. ಹೇಗಾದರೂ ಮಾಡಿ ‘ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಭಾಷೆ ಮತ್ತೊಂದಿತ್ತು’ ಎಂದು ಸಾಬೀತು ಪಡಿಸುವ ತುಡಿತ, ಆತುರ ಆ ಯುಗದ ಪ್ರತಿಯೊಬ್ಬ ಪಶ್ಚಿಮದ ಸಂಶೋಧಕನಿಗೂ ಇತ್ತು. ‘ಹೀಬ್ರೂ’ಥರದ ಭಾಷೆಗಳನ್ನು ಈ ನಿಟ್ಟಿನಲ್ಲಿ ಮುಂದಕ್ಕೆಳೆದು ನಿಲ್ಲಿಸುವ ಪ್ರಯತ್ನ ಮಾಡಿ ಸಂಶೋಧಕರು ಸೋತರು. ‘ಮಗನೇ ಅಪ್ಪನನ್ನು ಹೆತ್ತವನೆಂದು ಹೇಳಬಹುದು; ಸಾಬೀತು ಮಾಡೋದು ಕಷ್ಟ!’

lipi-sarada

‘ಬಾಹುಬಲಿ’ ಸಿನಿಮಾ ನೋಡಿದ್ದೀರಾ? ಹಾಗಿದ್ದರೆ ಮಾಹಿಷ್ಮತಿಯೊಂದಿಗಿನ ಕೊನೆಯ ಯುದ್ಧದಲ್ಲಿ ಬಗೆ ಬಗೆಯ ಸದ್ದು ಹೊರಡಿಸುತ್ತಾ ಮಾತಾಡುವ ಶತ್ರು ಪಾಳಯದ ರಾಜನನ್ನೂ ನೋಡಿರಬೇಕು. ದಾರಿಯುದ್ದಕ್ಕೂ ಅವನಂತೆ ಮಾತನಾಡುವ ಪ್ರಯತ್ನವನ್ನೂ ಮಾಡಿರುತ್ತೀರಿ. ಅವನ ಮಾತುಗಳು ನಮಗೆ ನಗು ಹುಟ್ಟಿಸಲು ಕಾರಣವೇನು ಗೊತ್ತೇ? ಆ ಶಬ್ದಗಳ ಅರ್ಥ ಗೊತ್ತಿರದೇ ಇರೋದು. ಒಮ್ಮೆ ಅರ್ಥ ಅರಿವಾಗಿ ಬಿಟ್ಟರೆ ನೀವು ಪ್ರತಿಕ್ರಿಯಿಸಲಾರಂಭಿಸುತ್ತೀರಿ. ಆಗ ಸದ್ದು ಗೌಣವಾಗುತ್ತದೆ. ಅರ್ಥ ಮುಖ್ಯವಾಗಿಬಿಡುತ್ತದೆ.

ಸರಿ. ಇದನ್ನೇ ಸ್ವಲ್ಪ ರಿವಸರ್್ ಇಂಜಿನಿಯರಿಂಗ್ ಮಾಡೋಣ. ನೀವಾಡುವ ಪ್ರತಿಯೊಂದು ಪದದ ಅರ್ಥವನ್ನೂ ಮರೆತುಬಿಡಿ. ಸುಮ್ಮನೆ ಮಾತನಾಡಿ. ನಿಮಗೇ ಅಚ್ಚರಿಯೆನಿಸುತ್ತದೆ. ನೀವು ಬರಿಯ ಒಂದಷ್ಟು ಸದ್ದನ್ನು ಹೊರಡಿಸುತ್ತೀರಿ ಅಷ್ಟೇ. ‘ಹಿಸ್’ ಎನ್ನುವ ಹಾವಿಗೂ, ‘ಕಾ’ಎನ್ನುವ ಕಾಗೆಗೂ, ‘ಗುರ್’ ಎನ್ನುವ ವ್ಯಾಘ್ರಕ್ಕೂ ನಮಗೂ ವ್ಯತ್ಯಾಸವೇ ಇಲ್ಲ. ಅಂತಿಮವಾಗಿ ಎಲ್ಲವೂ ಶಬ್ದವೇ. ಈ ಶಬ್ದಗಳನ್ನು ಅರಿಯುವ ವಿಜ್ಞಾನ ಒಮ್ಮೆ ಕಲಿತು ಬಿಟ್ಟರೆ ಪ್ರಕೃತಿಯ ರಹಸ್ಯ ತಂತಾನೆ ತೆರೆದುಕೊಂಡುಬಿಡುತ್ತದೆ. ಹಾಗೆ ಗಮನಿಸಿ ನೋಡಿ. ಮಗು ಹೊರಡಿಸುವ ‘ತ’, ‘ದ’, ‘ಬ’ದಂತಹ ಸದ್ದುಗಳಿಂದಲೇ ಅದರ ಮನಸ್ಸನ್ನು ತಾಯಿ ಅರಿತುಬಿಡುವುದಿಲ್ಲವೇ? ಅದರ ಅಳುವಿನ ಸದ್ದಿನ ಬದಲಾವಣೆಯಲ್ಲಿಯೇ ಅದರ ಹಸಿವನ್ನೂ, ನೋವನ್ನೂ ಗುರುತಿಸುವುದಿಲ್ಲವೇ? ಹಾಗೆ.

ಈ ಶಬ್ದಗಳನ್ನೇ ಅಧ್ಯಯನ ನಡೆಸಿದಾಗ ಅಕ್ಷರಗಳು ಹುಟ್ಟಿದ್ದು. ಅಕ್ಷರಗಳನ್ನು ಜೋಡಿಸಿದಾಗ ಪದಗಳು ರೂಪುಗೊಂಡವು. ಆಮೇಲೆ ವ್ಯಾಕರಣ ಹುಟ್ಟಿಕೊಂಡಿತು. ಭಾಷೆ ಟಿಸಿಲೊಡೆಯಿತು. ಒಮ್ಮೆ ಭಾಷೆಯ ಮೇಲೆ ಮಾನವ ಹಿಡಿತ ಸಾಧಿಸಿದೊಡನೆ, ಅದರೊಂದಿಗೆ ಆಟವಾಡಲಾರಂಭಿಸಿದ. ತನಗೆ ಬೇಕಾದಂತೆ ಅದನ್ನು ಹರಿಸಿ ಭಾಷೆಯನ್ನು ಸಮೃದ್ಧಗೊಳಿಸಿದ. ಮನಸ್ಸಿನೊಳಗೆ ಅನಿಸಿದ್ದೆಲ್ಲವನ್ನೂ ಹೇಳಲು ಬೇಕಾದ ಲಾಲಿತ್ಯವನ್ನೂ ಪಡೆದುಕೊಂಡ. ಆ ಮೂಲಕ ಮನಸ್ಸನ್ನೂ ಶ್ರೀಮಂತಗೊಳಿಸಿದ!

ಹೌದು ಇಲ್ಲೆಲ್ಲಾ ಭಾಷೆ ಎನ್ನುವಾಗ ಸಹಜವಾಗಿ ಎಲ್ಲ ಭಾಷೆಗಳ ಬಗ್ಗೆಯಾದರೂ ನನ್ನ ದೃಷ್ಟಿ ವಿಶೇಷವಾಗಿ ಸಂಸ್ಕೃತದ ಮೇಲೆಯೇ. 1786 ರಲ್ಲಿ ಯುರೋಪಿನ ಭಾಷಾ ತಜ್ಞ ವಿಲಿಯಂ ಜೋನ್ಸ್ ‘ಸಂಸ್ಕೃತದ ಪ್ರಾಚೀನತೆಯ ಬಗ್ಗೆ ಚಚರ್ೆಗಳು ಏನೇ ಇರಲಿ, ಅದರ ವಿನ್ಯಾಸ ಅತ್ಯದ್ಭುತ; ಅದು ಗ್ರೀಕರ ಭಾಷೆಗಿಂತ ಪರಿಪೂರ್ಣ, ಲ್ಯಾಟಿನ್ಗಿಂತ ಸಮೃದ್ಧ ಮತ್ತು ಇವೆರಡಕ್ಕಿಂತಲೂ ಉತ್ಕೃಷ್ಟವಾಗಿ ಪರಿಷ್ಕರಿಸಲ್ಪಟ್ಟ ಭಾಷೆ’ ಎಂದ. ಈ ಮೂರು ಭಾಷೆಗಳ ನಡುವಿನ ಸಾಮ್ಯವನ್ನು ಗುರುತಿಸಿ ಆಶ್ಚರ್ಯಚಕಿತನಾದ ಆತ ಇವೆಲ್ಲಕ್ಕೂ ಒಂದೇ ಮೂಲವಿದೆಯೆಂದು ಪ್ರತಿಪಾದಿಸಿದ. ಅದು ಸಂಸ್ಕೃತವೇ ಆಗಿರಲಾರದೆಂಬ ಸಹಜ ಆಳುವ ವರ್ಗದ ಧಿಮಾಕು ಅವನಿಗಿತ್ತು. ಹೇಗಾದರೂ ಮಾಡಿ ‘ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಭಾಷೆ ಮತ್ತೊಂದಿತ್ತು’ ಎಂದು ಸಾಬೀತು ಪಡಿಸುವ ತುಡಿತ, ಆತುರ ಆ ಯುಗದ ಪ್ರತಿಯೊಬ್ಬ ಪಶ್ಚಿಮದ ಸಂಶೋಧಕನಿಗೂ ಇತ್ತು. ‘ಹೀಬ್ರೂ’ಥರದ ಭಾಷೆಗಳನ್ನು ಈ ನಿಟ್ಟಿನಲ್ಲಿ ಮುಂದಕ್ಕೆಳೆದು ನಿಲ್ಲಿಸುವ ಪ್ರಯತ್ನ ಮಾಡಿ ಸಂಶೋಧಕರು ಸೋತರು. ‘ಮಗನೇ ಅಪ್ಪನನ್ನು ಹೆತ್ತವನೆಂದು ಹೇಳಬಹುದು; ಸಾಬೀತು ಮಾಡೋದು ಕಷ್ಟ!’

ಅಲ್ಲವೇ ಮತ್ತೇ? ಸಿಂಧೂ ಬಯಲಿನ ನಾಗರೀಕತೆಯೇ ಅತ್ಯಂತ ಪ್ರಾಚೀನವೆಂದು ಗಣಿಸಲ್ಪಡುತ್ತದೆ. ಮತ್ತಿದು ವೇದಕಾಲೀನ ನಾಗರೀಕತೆಯ ಕೊನೆಯ ಭಾಗವೆಂದು ಎಲ್ಲಾ ತಜ್ಞರೂ ಈಗ ಒಪ್ಪಲಾರಂಭಿಸಿದ್ದಾರೆ. ಹೀಗಿರುವಾಗ ಆಮೇಲೆ ಹುಟ್ಟಿದ ಪ್ರಭಾವಿತಗೊಂಡ ಭಾಷೆಗಳು ಸಂಸ್ಕೃತಕ್ಕೂ ಮುಂಚಿನವೆಂದು ಮಂಡಿಸಿದ ವಾದವೆಲ್ಲವೂ ಈಗ ಹೊಳಪು ಕಳೆದುಕೊಂಡಿವೆ. ಈಗೇನಿದ್ದರೂ ಸಂಸ್ಕೃತವನ್ನು ಸತ್ತು ಹೋಗಿರುವ ಭಾಷೆಯೆಂದು ಸಾಬೀತು ಪಡಿಸುವಲ್ಲಿ ಕೆಲವರಿಗೆ ಆಸ್ಥೆ ಉಳಿದಿದೆ. ಹಾಗಾದರೂ ಭಾರತದ ಪ್ರಾಬಲ್ಯವನ್ನು ಕಡಿಮೆ ಮಾಡುವ ಪ್ರಯತ್ನ ಅದು.

ಸ್ಥೂಲವಾಗಿ ಮುಂದಿರಿಸಬಹುದೆಂದರೆ ವೇದಕಾಲೀನ ಸಂಸ್ಕೃತ ಆನಂತರದ ದಿನಗಳಲ್ಲಿ ಪರಿಷ್ಕೃತಗೊಂಡು ಈಗಿನ ರೂಪ ಪಡೆಯಿತು. ಆ ವೇಳೆಗಾಗಲೇ ಜಗತ್ತಿನ ಇತರೆ ಭಾಗಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಭಾರತದಿಂದ ವ್ಯಾಪಾರಿಗಳೊಂದಿಗೆ, ತತ್ತ್ವಶಾಸ್ತ್ರಜ್ಞರು, ಕಲೆಗಾರರು, ಪಂಡಿತರೆಲ್ಲ ಜಗತ್ತಿನೆಡೆಗೆ ಪ್ರವಾಸ ಮಾಡುತ್ತಿದ್ದರು. ಸಹಜವಾಗಿಯೇ ಭಾಷೆಯನ್ನೂ ಒಯ್ದರು. ಅಲ್ಲಿನ ಎಲ್ಲಾ ಚಟುವಟಿಕೆಗಳ ಮೇಲೆಯೂ ಈ ಪ್ರಭಾವ ಈಗಲೂ ಕಂಡು ಬರುತ್ತದೆ. ಇದು ಸಾವಿರಾರು ವರ್ಷಗಳ ಕಾಲದ ದೀರ್ಘ ಪ್ರಕ್ರಿಯೆಯಾದ್ದರಿಂದ ಸಾಕಷ್ಟು ರೂಪಾಂತರಗಳೂ ಸಹಜವೇ.

ಬಿಡಿ. ನನ್ನ ಉದ್ದೇಶ ಸಂಸ್ಕೃತದ ಪ್ರಾಚೀನತೆಯನ್ನು ಸಾಬೀತು ಪಡಿಸುವುದೋ, ಜಗತ್ತಿನ ಎಲ್ಲಾ ಭಾಷೆಗಳ ಮೂಲ ಸಂಸ್ಕೃತವೇ ಎಂಬ ಅಭಿಪ್ರಾಯ ಮೂಡಿಸುವುದೋ ಅಲ್ಲ. ಅದನ್ನು ನುರಿತ, ನಿಷ್ಪಕ್ಷಪಾತ ತಜ್ಞರು ಮಾಡಬಲ್ಲರು. ನನಗೇನಿದ್ದರೂ ಶಬ್ದ ಮತ್ತು ಭಾಷೆಯನ್ನು ಜೋಡಿಸುವ ಕೆಲಸವಷ್ಟೇ.

ಪ್ರತಿಯೊಂದು ಅಕ್ಷರವೂ ಬಗೆ ಬಗೆಯ ಸದ್ದುಗಳೇ ತಾನೇ? ನಮ್ಮ ಸುತ್ತಲೂ ಹರಡಿರುವ ಅಸಂಖ್ಯ ಸದ್ದುಗಳಲ್ಲಿ ನಾವು ಹೊರಡಿಸಬಹುದಾದ್ದನ್ನು ಆಯ್ದುಕೊಂಡು ಅಕ್ಷರಗಳ ಗುಂಪನ್ನು ರೂಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆಯ್ಕೆಯೂ ವಿಶಿಷ್ಟವಾಗಿರಬೇಕು, ಅದಕ್ಕೆ ಕಾರಣವೂ ಇರಬೇಕು. ಆಗಲೇ ಶಬ್ದ ವಿಜ್ಞಾನದ ಹೊಸ ಲೋಕ ಅನಾವರಣಗೊಂಡಿದ್ದಿರಬೇಕು. ಬಾಯಿಂದ ಸದ್ದು ಹೊರಡುವಾಗ ಕಂಠ, ಅಂಗಳ, ನಾಲಿಗೆ, ಕಿರುನಾಲಿಗೆ, ಹಲ್ಲು, ತುಟಿ ಕೊನೆಗೆ ಮೂಗಿನ ಬಳಕೆಯೂ ಆಗುತ್ತದೆ. ಇವೆಲ್ಲಕ್ಕೂ ಜೊತೆಯಾಗಿ ಶ್ವಾಸಕೋಶ ಮತ್ತು ಶ್ವಾಸನಾಳಗಳು.

ಶ್ವಾಸಕೋಶ ಮತ್ತು ನಾಳಗಳು ನೇರ ಸದ್ದು ಹೊರಡಿಸುವುದಿಲ್ಲವಾದರೂ ಹೊರಡುವ ಸದ್ದಿಗೆ ಶಕ್ತಿ ತುಂಬಬಲ್ಲವು. ಶ್ವಾಸಕೋಶದಿಂದ ಹೊರಟ ಗಾಳಿಯನ್ನು ತಡೆಯದಿದ್ದಾಗ ಮಾತ್ರ ಅದು ಸದ್ದಾಗುತ್ತದೆ. ‘ಹ’ಕಾರದಂತಹ ಅಕ್ಷರವೂ ಆಗುತ್ತದೆ! ಇದು ಒಂದು ಉದಾಹರಣೆಯಷ್ಟೇ. ಈಗ ನೀವು ಕುಳಿತಲ್ಲೇ ಬಗೆ ಬಗೆಯ ಸದ್ದುಗಳನ್ನು ಹೊರಡಿಸಿ. ಅದಕ್ಕೆ ಬಳಕೆಯಾಗಿರುವ ಅಂಗಗಳ ಕುರಿತಂತೆ ಆಲೋಚಿಸುತ್ತಾ ಹೋಗಿ. ನಿಮ್ಮ ಮುಖವೇ ಒಂದು ಪ್ರಯೋಗಾಲಯವಾಗಿಬಿಡುತ್ತದೆ!

ಭಾರತ ಅನೇಕ ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕವಾದ ಈ ಪ್ರಯೋಗಕ್ಕೆ ಕೈ ಹಾಕಿ ಅದ್ಭುತ ಫಲಿತಾಂಶ ಪಡೆಯಿತು. ವಿಲಿಯಂ ಜೋನ್ಸ್ ಹೇಳುವಂತಹ ಅತ್ಯಂತ ಪರಿಷ್ಕೃತ ಭಾಷೆಯ ಆವಿಷ್ಕಾರ ಮಾಡಿತು. ಒಂದು ಅಂದಾಜಿನ ಪ್ರಕಾರ ಹೀಗೆ ಭಾಷೆ ಉಗಮಗೊಂಡ ಸ್ಥಾನ ಸರಸ್ವತಿಯ ಬಯಲೇ. ಹೀಗಾಗಿ ಈ ಕುರಿತಂತಹ ಎಲ್ಲ ಜ್ಞಾನಕ್ಕೂ ಆಕೆಯೇ ಅಧಿದೇವತೆ. ಅದಕ್ಕೇ ಪ್ರತಿನಿತ್ಯದ ಪ್ರಾರ್ಥನೆಯಲ್ಲಿ-
ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ|
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂಚ ದೇಹಿ ಮೇ|| ಅಂತ ಪ್ರಾಥರ್ಿಸೋದು. ಆಕೆಯ ಅತ್ಯಂತ ಪ್ರಾಚೀನ ಮಂದಿರವೊಂದು ಕಾಶ್ಮೀರದಲ್ಲಿದೆ. ದುದರ್ೈವವಶಾತ್ ಈಗ ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನರಳುತ್ತಿದೆ. 1947 ರಲ್ಲಿ ಆಕ್ರಮಣ ಮಾಡಿದ ಪಾಕಿಗಳು ಅದನ್ನು ಧ್ವಂಸಗೊಳಿಸಿಬಿಟ್ಟಿದ್ದಾರೆ. ಸದ್ಯ, ಈಚಿನ ದಿನದಲ್ಲಿ ಪಿಓಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಶಾರದಾ ಪೀಠದ ಪುನರುಜ್ಜೀವನಕ್ಕೆ ಮಾರ್ಗಸೂಚಿಯಾದರೆ, ಬಹುಶಃ ನಮ್ಮ ವಿಶ್ವಗುರುತ್ವದ ಪಟ್ಟ ಅಬಾಧಿತವಾಗಬಹುದು.

ಹ್ಞಾಂ. ಮತ್ತೆ ಭಾಷೆಯತ್ತ ಬನ್ನಿ. ಮುಖದಿಂದ ಹುಟ್ಟುವ ಸದ್ದುಗಳನ್ನು ಸೂಕ್ತವಾಗಿ ದಾಖಲಿಸಿ ನಮ್ಮವರು ಗುಂಪುಮಾಡಿದರು. ಸ್ಥೂಲವಾಗಿ ಎರಡು ಗುಂಪು. ಸ್ವರಗಳು, ವ್ಯಂಜನಗಳು. ಈ ಎರಡಕ್ಕೂ ಸೇರದ್ದನ್ನು ವಗರ್ೀಕರಿಸಲಾಗದ ವ್ಯಂಜನಗಳೆಂದರು. ಯಾವ ಅಕ್ಷರಗಳು ಸ್ವತಂತ್ರವಾಗಿ ಯಾರ ಸಹಾಯವೂ ಇಲ್ಲದೇ ಉಚ್ಚರಿಸಲ್ಪಡುತ್ತವೆಯೋ ಅವನ್ನು ಸ್ವರಗಳೆಂದರು. ಅಕಾರದಿಂದ ಔಕಾರದವರೆಗಿನ ಅಕ್ಷರಗಳನ್ನು ಉಚ್ಚರಿಸಿ ನೋಡಿ. ಕಂಠದ ಆಳದಿಂದ ಹೊರಟ ಗಾಳಿ ಉಂಟು ಮಾಡುವ ಸದ್ದು ಅದು. ಮೂಗನೆನಿಸಿಕೊಂಡವ ಕೂಡ ಈ ಅಕ್ಷರಗಳನ್ನು ಉಚ್ಚರಿಸಬಲ್ಲ.

ಈಗ ವ್ಯಂಜನಗಳ ಸರದಿ. ಕಂಠದ ಆಳದಿಂದ ಸ್ವರಗಳು ಹುಟ್ಟಿದರೆ, ಶ್ವಾಸನಾಳದಿಂದ ಹೊರಟ ಗಾಳಿಯನ್ನು ಕಂಠದ ಮೇಲ್ಭಾಗ ತಡೆದಾಗ ಹುಟ್ಟೋದು ಕ ದಿಂದ ಜ್ಞ ವರೆಗಿನ ಅಕ್ಷರಗಳು. ಇನ್ನು ತುಟಿಯ ಮೇಲ್ಭಾಗದ ಅಂಗಳ ಇದೆಯಲ್ಲ; ಇದಕ್ಕೆ ಎರಡು ಭಾಗವಿದೆ. ಮುಂದಿನದು ಬಲವಾದ ಭಾಗ, ಕಿರುನಾಲಗೆಯ ಹತ್ತಿರವಿರೋದು ಮೆದುವಾದ ಅಂಗಳ. ನಾಲಗೆಯಿಂದ ಅಂಗಳದ ಬಲವಾದ ಭಾಗಕ್ಕೆ ಮುಟ್ಟಿಸಿದರೆ ಹೊರಡುವ ಅಕ್ಷರಗಳು ‘ಚ’ ವರ್ಗದ್ದಾದರೆ; ಮೆದು ಭಾಗಕ್ಕೆ ನಾಲಗೆ ಮುಟ್ಟಿಸಿದರೆ ಹೊರಡುವ ಸದ್ದು ‘ಟ’ ವರ್ಗದ್ದಾಗುತ್ತದೆ. ಇದೇ ನಾಲಗೆಯನ್ನು ಹಲ್ಲುಗಳಿಗೆ ಮುಟ್ಟಿಸಿ ಶ್ವಾಸನಾಳದಿಂದ ಹೊರಟ ಗಾಳಿಯನ್ನು ತಡೆದು ಬಿಟ್ಟರೆ ತ ದಿಂದ ನ ವರೆಗಿನ ಅಕ್ಷರಗಳು ಹುಟ್ಟುತ್ತವೆ. ಕೊನೆಗೆ ತುಟಿಗಳೆರಡನ್ನು ಬಳಸಿ ನಿಯಂತ್ರಿಸಿದ ಗಾಳಿ ಪಕಾರದಿಂದ ಆರಂಭವಾಗುವ ಅಕ್ಷರಗಳನ್ನು ಉತ್ಪಾದಿಸುತ್ತದೆ!

ಅಷ್ಟೇ ಅಲ್ಲ. ಶ್ವಾಸಕೋಶದಿಂದ ಸ್ವಲ್ಪ ಗಾಳಿಯನ್ನು ಹೊರಹಾಕಿದಾಗ ಹುಟ್ಟಿಕೊಂಡ ಅಕ್ಷರಗಳನ್ನು ಅಲ್ಪಪ್ರಾಣ ಅಂತಾರೆ; ಸ್ವಲ್ಪ ಗಾಳಿಯನ್ನು ಬಲವಾಗಿ ಹೊರ ದಬ್ಬಿದರೆ ಮಹಾಪ್ರಾಣ ಅಂತಾರೆ. ಈ ಪ್ರಾಣಶಕ್ತಿಯನ್ನು ಬಾಯೊಳಗೆ ತಡೆದು ಮೂಗಿನಿಂದ ಕಳಿಸಿದರೆ ಅದು ಅನುನಾಸಿಕವೆನಿಸಿಕೊಳ್ಳುತ್ತದೆ!

ನನಗೆ ಗೊತ್ತು. ಒಮ್ಮೆ ಮಾತನಾಡಲು ಬಂದಿತೆಂದರೆ ಈ ವಿವರಗಳಿಂದ ಆಗಬೇಕಾದ್ದು ಏನೂ ಇಲ್ಲ. ಆದರೆ ನಮ್ಮ ಭಾಷೆಯ ಪರಿಪೂರ್ಣತೆಯ ಹಿಂದೆ ಅಡಗಿರುವ ವೈಜ್ಞಾನಿಕತೆಯ ಅರಿವು ನಮಗಿದ್ದರೆ ಅಭಿಮಾನ ನೂರ್ಮಡಿಯಾಗುತ್ತದೆ ಅಷ್ಟೇ. ಸುಮ್ಮನೆ ಕುಳಿತಾಗಲೊಮ್ಮೆ ನಮ್ಮ ಭಾಷೆಯನ್ನೂ, ಇಂಗ್ಲೀಷನ್ನು ತುಲನೆ ಮಾಡಿ ನೋಡಿ. ನಮ್ಮವರ ವೈಜ್ಞಾನಿಕ ಪ್ರಜ್ಞೆ ನಿಮ್ಮಲ್ಲಿ ಬೆರಗು ಹುಟ್ಟಿಸದಿದ್ದರೆ ಕೇಳಿ. 26 ಅಕ್ಷರಗಳು ಭಾಷೆಯ ಪರಿಪೂರ್ಣತೆಗೆ ಸಾಲವು. ಹೀಗಾಗಿಯೇ ಇಂಗ್ಲೀಷಿನಲ್ಲಿ ಬರೆಯುವುದೊಂದಾದರೆ ಓದುವ ಬಗೆ ಮತ್ತೊಂದು. ‘ಟ’ ಕಾರಕ್ಕೂ ‘ತ’ ಕಾರಕ್ಕೂ ಅಲ್ಲಿ ಭಿನ್ನತೆಯೇ ಇಲ್ಲ. ಯಾವುದಕ್ಕೆ ಪ್ರಾಣ ಕಡಿಮೆ ಹಾಕಬೇಕು, ಯಾವುದಕ್ಕೆ ಹೆಚ್ಚು ಎಂಬುದಕ್ಕೆ ನಿಯಮಗಳಿಲ್ಲ. ಕೊನೆಗೆ ಒಂದೇ ನಿಯಮವನ್ನು ಬೇರೆ ಬೇರೆ ಪದಗಳ ಉಚ್ಚಾರಣೆಯಲ್ಲಿ ಬಳಸುವಂತಿಲ್ಲ. ಯಾವಾಗ ಯಾವ ಅಕ್ಷರಗಳು ಶಾಂತವಾಗುತ್ತವೆ; ಯಾವ ಅಕ್ಷರಗಳು ಜೀವಂತಗೊಂಡುಬಿಡುತ್ತವೆ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಏಕೆಂದರೆ ಇಡಿಯ ಭಾಷೆಯ ಹುಟ್ಟು, ಬೆಳವಣಿಗೆಯ ಹಿಂದೆ ವೈಜ್ಞಾನಿಕ ಮನೋಭಾವ ಕ್ರಿಯಾಶೀಲವಾಗಿದ್ದಂತೆ ಕಾಣುವುದಿಲ್ಲ.

ಹೀಗೆ ಹೇಳುತ್ತಿದ್ದಂತೆ ಯಾವ ಭಾಷೆಯನ್ನು ದ್ವೇಷಿಸಬಾರದೆಂದು ನಮ್ಮನ್ನು ತೀಡುವ ಮಂದಿ ಜಾಗರೂಕರಾಗಿಬಿಡುತ್ತಾರೆ. ಸಂಸ್ಕೃತವನ್ನು ಮಾತ್ರ ಜರಿಯುತ್ತಲೇ ಇರುತ್ತಾರೆ.

ಸಂಸ್ಕೃತದ ಸಂಧಿ ನಿಯಮಗಳಂತೂ ಇಡಿಯ ಭಾಷೆಯ ಶಕ್ತಿಯೇ ಸರಿ. ಯಾವಾಗ ಎರಡು ಪದಗಳನ್ನು ಉಚ್ಚರಿಸುವಲ್ಲಿ ಸಮಸ್ಯೆ ಎನಿಸುತ್ತೋ ಆಗೆಲ್ಲಾ ಸಂಧಿಗಳು ಇಣುಕಿಬಿಡುತ್ತವೆ. ಉದಾಹರಣೆಗೆ ಇಂಗ್ಲೀಷಿನಲ್ಲಿ ಟೆಡ್ ಟಾಕ್ (ಖಿಜಜ ಖಿಚಿಟಞ) ಅಂತ ಉಚ್ಚರಿಸಿ ನೋಡೋಣ. ಅಂತಿಮವಾಗಿ ನೀವು ಟೆಟಾಕ್ ಅಂತೀರಿ ಇಲ್ಲವೇ ಟೆಡ್ಡಾಕ್ ಅಂದುಬಿಡ್ತೀರಿ. ಊಹೂಂ ಇಂಗ್ಲೀಷಿನಲ್ಲಿ ಇವುಗಳನ್ನು ಯೋಚಿಸಿದಂತೆ ಕಾಣುವುದಿಲ್ಲ. ಸಂಸ್ಕೃತ ಹಾಗಲ್ಲ. ‘ನಿಮಗೆ ನಮಸ್ಕಾರ’ ಅನ್ನೋದನ್ನು ಸಂಸ್ಕೃತದಲ್ಲಿ ‘ ನಮಃ ತೆ’ ಅಂತಾರೆ. ಮಃ ಮತ್ತು ತೆ ಯನ್ನು ಒಂದಾದೊಡನೆ ಉಚ್ಚರಿಸಲು ಅನುಕೂಲವೆನ್ನಿಸದೆಂಬ ಕಾರಣಕ್ಕೆ ಅಲ್ಲೊಂದು ಸಂಧಿ ಪ್ರಯೋಗವಾಗಿ ಅದು ‘ನಮಸ್ತೇ’ ಎನಿಸಿಕೊಳ್ಳುತ್ತದೆ. ಮತ್ತಿದು ಸಾರ್ವತ್ರಿಕ ನಿಯಮ. ವಿಸರ್ಗದೆದುರಿನ ತಕಾರದ ನಡುವೆ ಸಕಾರದ ಬಳಕೆ!

ಉಫ್. ಪ್ರತಿಯೊಂದು ಪದ; ಅವುಗಳನ್ನು ಅಕ್ಷರಗಳಾಗಿ ವಿಭಜಿಸಿ, ಸದ್ದು ಹೊರಡುವಾಗ ಆಗುವ ತೊಂದರೆಗಳನ್ನು ಗಮನಿಸಿ ಅದನ್ನು ಸರಿಪಡಿಸುವ ಪ್ರಯತ್ನದಲ್ಲಿ ಸಾರ್ವತ್ರಿಕ ನಿಯಮಗಳನ್ನು ರೂಪಿಸಿದ್ದನ್ನು ಸಾಮಾನ್ಯ ಸಾಹಸ ಅಂತೀರೇನು? ಅತ್ಯಂತ ಕಠಿಣವೆನಿಸುವ ಈ ನಿಯಮಗಳನ್ನು ಸರಳ ಸೂತ್ರಗಳಿಗೆ ಅಳವಡಿಸಿ ಅತ್ಯಂತ ಸಾಮಾನ್ಯನಿಗೂ ಅರ್ಥವಾಗುವಂತೆ ಹೇಳಿದ ಪಾಣಿನಿಯನ್ನು ಭಾಷಾವಿಜ್ಞಾನಿ ಅಂತ ಜಗತ್ತು ಬೇಕಿದ್ದರೆ ಕರೆಯಲಿ ಅಥವಾ ಬಿಡಲಿ; ಭಾರತ ಮಾತ್ರ ಮಹಷರ್ಿ ಎಂದು ಕರೆದು ಕೊಡಬೇಕಾದ ಗೌರವ ಕೊಟ್ಟುಬಿಟ್ಟಿದೆ.

ಭಾರತ ಮತ್ತೆ ವಿಶ್ವಗುರುವಾಗಬೇಕೆಂದರೆ ಸಂಸ್ಕೃತ ಭಾರತವ್ಯಾಪಿಯಾದರೆ ಸಾಲದು. ಜಗತ್ತಿಗೇ ಹಬ್ಬಬೇಕು. ಆಗಮಾತ್ರ ಇಲ್ಲಿ ಜ್ಞಾನ ಪರಂಪರೆ ಯಾವ ಕಲ್ಮಷವೂ ಇಲ್ಲದಂತೆ ಜಗತ್ತನ್ನೇ ತಬ್ಬಿಕೊಳ್ಳಬಹುದು. ಆ ಲಕ್ಷಣಗಳು ಇತ್ತೀಚೆಗೆ ಗೋಚರಿಸುತ್ತಿವೆ. ನಮ್ಮ ದೇಶದ ಪ್ರಧಾನ ಮಂತ್ರಿ ಐಲರ್ೆಂಡಿನ ಪ್ರವಾಸದಲ್ಲಿದ್ದಾಗ ಅಲ್ಲಿನ ಮಕ್ಕಳು ಈಶಾವಾಸ್ಯೋಪನಿಷತ್ತಿನ ಮಂತ್ರದ ಮೂಲಕ ಅವರನ್ನು ಸ್ವಾಗತಿಸಿದರಲ್ಲಿ ಸಂಸ್ಕೃತ ಸಲೀಸಾಗಿ ಅಪ್ಪಿಕೊಳ್ಳಬಹುದಾದ ಜಾಗತಿಕ ಮತ್ತು ವೈಜ್ಞಾನಿಕ ಭಾಷೆ ಎನಿಸಿದ್ದರಲ್ಲಿ ಅಚ್ಚರಿಯಿಲ್ಲ.

2 thoughts on “ವಿಶ್ವಗುರುವಿಗೆ ಜೊತೆಯಾಗಬಹುದಾದ ವಿಶ್ವಭಾಷೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s