ನಿಗೂಢ ಸಾವು ನೇತಾಜಿಯದ್ದಷ್ಟೇ ಅಲ್ಲ!

ರಾಜೇಶ್ ಪೈಲೆಟ್, ಜಿತೇಂದ್ರ ಪ್ರಸಾದ್ ಮತ್ತು ಮಾಧವ್ ರಾವ್ ಸಿಂಧ್ಯಾರ ಸರಣಿ ಸಾವಿನ ಕುರಿತಂತೆಯೂ ಹೀಗೇ ಅನುಮಾನಗಳಿವೆ. ಇಂದಿರಾಗಾಂಧಿಯ ಹತ್ಯೆಯ ಕುರಿತಂತೆಯೂ ಅನೇಕ ಊಹಾಪೋಹಗಳಿವೆ. ಕೊನೆಗೆ ರಾಜೀವ್ಗಾಂಧಿಯವರ ಹತ್ಯೆಯಲ್ಲಿ ಅಮೇರಿಕ ಸಿ.ಐ.ಎ ಏಜೆಂಟರ ಕೈವಾಡ, ತಮಿಳುನಾಡಿನ ಕೆಲವು ಕಾಂಗ್ರೆಸ್ ನಾಯಕರ ಕರಾಮತ್ತು ಇದ್ದುದರ ಕುರಿತಂತೆ ವಿಸ್ತೃತ ಕೃತಿಯೇ ಪ್ರಕಟವಾಗಿದೆ. ರಾಜಕೀಯ ಹಿತಾಸಕ್ತಿಗಳ ಕಾರಣಕ್ಕಾಗಿ ತಮ್ಮವರನ್ನೂ ಕೊಲೆಗೈಯ್ಯುವ ಈ ಪರಿವಾರ ಅತ್ಯಂತ ಕ್ರೂರ ಮತ್ತು ಹೇಯ!

ಸ್ವಾತಂತ್ರ್ಯ ಪ್ರಾಪ್ತಿಗಾಗಿ ಆರು ದಶಕಗಳು ಕಳೆದ ನಂತರವೂ ಉತ್ತರಿಸಲಾಗದ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಮಮತಾ ಬ್ಯಾನಜರ್ೀ ಇದ್ದಕ್ಕಿದ್ದಂತೆ ನೇತಾಜಿಯವರ ಕುರಿತ ಕಡತಗಳನ್ನು ಸಮಾಜದೆದುರಿಗಿಟ್ಟರಲ್ಲ ಎಲ್ಲರೂ ಆಕೆಯನ್ನು ಕಂಠಪೂತರ್ಿ ಹೊಗಳಿದರು. ಕಾಂಗ್ರೆಸ್ ಮಾತ್ರ ಮೌನವಾಗಿತ್ತು. ನರೇಂದ್ರ ಮೋದಿಯವರನ್ನು ಟೀಕಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಕಾಂಗ್ರೆಸ್ಸು, ಮಮತಾ ಮಾಡಬಹುದಾದ ಕೆಲಸ ನೀವೇಕೆ ಮಾಡಲಾರಿರಿ ಎಂದು ಸವಾಲು ಹಾಕಲಿಲ್ಲ ಏಕೆ? ಕಾರಣ ಹುಡುಕಾಡುವುದು ಕಷ್ಟದ ಕೆಲಸವೇನಲ್ಲ. ಇಷ್ಟು ವರ್ಷ ಅಧಿಕಾರದಲ್ಲಿದ್ದ ದೀದಿ ಈ ಕಡತಗಳನ್ನು ಈಗ ಏಕಾಏಕಿ ಹೊರಗೆಡವಿದ್ದಾದರೂ ಏಕೆ? ಪ್ರೇರಣೆ ಯಾರದ್ದು? ಇದಕ್ಕೂ ಕೆಲವು ದಿನಗಳ ಮುನ್ನ ಮೋದಿ-ದೀದಿ ಬಾಂಗ್ಲಾ ದೇಶದ ಪ್ರವಾಸ ಜೊತೆಯಲ್ಲಿಯೇ ಮಾಡಿದ್ದು ಕಾಕತಾಳೀಯವೇ ಇರಬಹುದು ಆದರೆ ವ್ಯರ್ಥವಲ್ಲ!

ಇಷ್ಟಕ್ಕೂ ಮೋದಿಯೇಕೆ ಈ ಮುಚ್ಚಿರುವ ಕಡತಗಳನ್ನು ಹೊರತೆಗೆಯುತ್ತಿಲ್ಲ. ಪ್ರಶ್ನೆ ಸಹಜವೇ. ಅದರಲ್ಲೂ ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣ ತೊಟ್ಟಿರುವ ಮೋದಿಗೆ ಈ ಕಡತಗಳು ವರದಾನವಾಗಬೇಕಲ್ಲವೇನು. ಖಂಡಿತ ಹೌದು. ಆದರೆ ಇಲ್ಲೊಂದು ಸೂಕ್ಷ್ಮ ಸಂಗತಿ ಇದೆ. ನೇತಾಜಿಯ ಸಾವಿನ ಸುಳ್ಳು ಸುದ್ದಿಯೊಂದಿಗೆ ರಷ್ಯಾ, ಜಪಾನ್, ಯೂರೋಪ್ಗಳೂ ಬೆಸೆದುಕೊಂಡಿವೆ. ಈ ಕಡತಗಳನ್ನು ತೆರೆದಿಡುವುದೆಂದರೆ ಇವರೆಲ್ಲರನ್ನೂ ಕಟಕಟೆಗೆ ತರುವುದೆಂದರ್ಥ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ರಾಷ್ಟ್ರಗಳಿಗೆ ಮುಖಭಂಗ.

ವಿಶ್ವಸಂಸ್ಥೆಯಲ್ಲಿ ಭದ್ರತಾಸಮಿತಿಯಲ್ಲಿ ಖಾಯಂ ಸದಸ್ಯತ್ವ ಸ್ಥಾನಕ್ಕೆ ಬಹುವಾಗಿ ಲಾಬಿ ಮಾಡುತ್ತಿರುವ ಭಾರತಕ್ಕೆ ಯೂರೋಪ್ ಮತ್ತು ರಷ್ಯಾಗಳ ಬೆಂಬಲ ಬೇಕೇ ಬೇಕು. ಜೊತೆಗೆ ನೆರೆಯ ರಾಷ್ಟ್ರವಾಗಿ ಜಪಾನಿನ ‘ನೋ ಅಬ್ಜೆಕ್ಷನ್’ ಕೂಡ! ಕಡತಗಳ ಕಾರಣದಿಂದಾಗಿ ಉಂಟಾಗುವ ಮುಜುಗರದಿಂದ ಈ ರಾಷ್ಟ್ರಗಳು ದೂರ ನಿಂತರೆ ನಮಗೆ ಬಲು ನಷ್ಟ. ಹೀಗಾಗಿಯೇ ಮೋದಿ ಬುದ್ಧಿವಂತ ನಡೆಯನ್ನೇ ಇಟ್ಟಿದ್ದಾರೆ. ಕಾಂಗ್ರೆಸ್ಸಿಗರೆದುರು ದೀದಿಯ ಮೂಲಕ ಕಡತಗಳನ್ನು ತೆಗೆಸಿ ಭೂತ ಕೂರಿಸಿದ್ದಾರೆ. ತಾವು ಕಡತ ತೆಗೆಯಲಾರೆವೆಂಬ ಭರವಸೆಯನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಕೊಟ್ಟು ಪ್ರೀತಿ ಗಳಿಸಿದ್ದಾರೆ. ಹಾಗಂತ ಸುಮ್ಮನಿರುವ ಜೀವ ಅಲ್ಲ ಅದು. ಅದಾಗಲೇ ಸುಭಾಷರ ಮನೆಯವರನ್ನು ಕರೆಸಿ ನಾಲ್ಕು ಬಾರಿ ಮಾತನಾಡಿಸಿದ್ದಾರೆ. ಸರಿಯಾದ ಸಮಯಕ್ಕಾಗಿ ಕಾಯುತ್ತಿರುವ ಕುರಿತಂತೆ ಅವರೊಂದಿಗೆ ತೋಡಿಕೊಂಡಿದ್ದಾರೆ.

ಆದರೆ ಸ್ವಾತಂತ್ರ್ಯಾನಂತರ ಈ ಬಗೆಯ ಅನೇಕ ಸಾವುಗಳನ್ನು ಈ ದೇಶ ಕಂಡಿತು. ಕೆಲವು ಸಾವುಗಳು ಸಹಜವೇ ಆಗಿದ್ದರೂ ಸತ್ತ ವ್ಯಕ್ತಿಯ ಸ್ಥಾನ-ಮಾನಗಳು ಸಾವಿನ ಹಿಂದಿರಬಹುದಾದ ರಾಜಕೀಯ ಶಕ್ತಿಗಳ ಕೈವಾಡದ ಕುರಿತಂತೆ ಅನುಮಾನ ಹುಟ್ಟಿಸಿದ್ದವು. ಸಹಜವೂ ಹೌದು. ಇಂದಿರಾಗಾಂಧಿಯ ಹತ್ಯೆಯಾದಾಗ ಆಕೆಯನ್ನು ಕೊಂದವರು ಸಿಖ್ಖರಾಗಿದ್ದರೆನ್ನುವ ಏಕೈಕ ಕಾರಣಕ್ಕೆ ಸಾಮೂಹಿಕವಾಗಿ ಸಿಖ್ಖರನ್ನು ಕೊಂದರಲ್ಲ; ದೆಹಲಿಯೊಂದರಲ್ಲಿಯೇ ಮೂರು ಸಾವಿರಕ್ಕೂ ಅಧಿಕ ಸಿಖ್ಖರ ಮಾರಣಹೋಮವಾಗಿತ್ತು! ಅಂದಾಜು ದೇಶದಲ್ಲಿ ಮೂವತ್ತು ಸಾವಿರ ಜನರ ಕಗ್ಗೊಲೆ. ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ತನ್ನ ಕ್ಷೇತ್ರದಲ್ಲಿ ಚಡಪಡಿಸುತ್ತಾ ಶತಪಥ ಹಾಕುತ್ತಿದ್ದರಂತೆ, ಸಿಖ್ಖರ ಮಾರಣಹೋಮವಾಯಿತೆಂದಲ್ಲ; ತನ್ನ ಕ್ಷೇತ್ರದಲ್ಲಿ ಹೆಚ್ಚು ಜನರನ್ನು ಕೊಲ್ಲಲಿಲ್ಲವಲ್ಲ ಅಂತ. ಹೆಚ್ಚು-ಹೆಚ್ಚು ಜನರನ್ನು ಕೊಂದರೆ ಗಾಂಧಿ ಪರಿವಾರಕ್ಕೆ ಹತ್ತಿರವಾಗುವ ನಂಬಿಕೆ ಆತನದ್ದು. ಇತ್ತೀಚೆಗೆ ನ್ಯಾಯಾಲಯ ಶಿಕ್ಷೆ ಘೋಷಿಸಿದಾಗ ಅಪರಾಧಿಗಳೆಂದು ಸಾಬೀತಾದವರೆಲ್ಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರೇ! ಯಾವ ಕೊಲೆಗಳೂ ಹೆಚ್ಚು-ಕಡಿಮೆಯಲ್ಲ ನಿಜ. ಗೋಧ್ರಾದಲ್ಲಿ ರೈಲಿನಲ್ಲಿದ್ದ ರಾಮಸೇವಕರನ್ನು ಕೊಂದ ಮುಸಲ್ಮಾನರು ಆನಂತರ ಮುಸಲ್ಮಾನರ ಮೇಲೆ ಮುಗಿಬಿದ್ದ ರಾಮಸೇವಕರು ಇಬ್ಬರೂ ತಪ್ಪು ಹಾದಿಯಲ್ಲಿದ್ದವರೇ. ಆದರೆ ಒಬ್ಬಾಕೆಯ ಸಾವಿಗೆ ಪ್ರತೀಕಾರವಾಗಿ 30 ಸಾವಿರ ಜನರನ್ನು ಕೊಲ್ಲುವುದು, ಜೀವಂತ ದಹಿಸುವುದಿದೆಯಲ್ಲ ಅದು ಅಕ್ಷಮ್ಯ. ಬರಲಿರುವ ಅನೇಕ ಪೀಳಿಗೆಗಳು ಇದರ ಶಾಪವನ್ನು ಅನುಭವಿಸಲೇಬೇಕು!

ಗಾಂಧೀಜಿಯ ಹತ್ಯೆಯಾದಾಗಲೂ ಹಾಗೆಯೇ. ಚಿತ್ಪಾವನ ಬ್ರಾಹ್ಮಣರ ಮೇಲೆ ಮಹಾರಾಷ್ಟ್ರದುದ್ದಕ್ಕೂ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶವನ್ನು ಉದ್ರಿಕ್ತ ಗುಂಪು ಎಂದು ತಳ್ಳಿಹಾಕುವುದು ಸರಿಯೆನಿಸುತ್ತದೆಯೇ? ಅದೇ ತರ್ಕವನ್ನು ಬಳಸಿ ಗೋಡ್ಸೆಯನ್ನು ದಾರಿತಪ್ಪಿದ ದೇಶಭಕ್ತ ಎಂದು ಸುಮ್ಮನಾಗಿಬಿಡಬಹುದೇ? ಅರವತ್ತೆಂಟು ವರ್ಷಗಳ ನಂತರವೂ ಉತ್ತರ ಮಾತ್ರ ದಕ್ಕಲಿಲ್ಲ.

ನೆಹರೂರಿಂದ ಶುರುಮಾಡಿ ಸೋನಿಯಾವರೆಗೆ ಮಾಧ್ಯಮಗಳನ್ನು ವಶಕ್ಕೆ ಪಡೆದು ತಮಗೆ ಬೇಕಾದ ಸುದ್ದಿಗಳನ್ನು ಪ್ರಚಾರಕ್ಕೆ ತರುವ ಕಲೆ ಸಿದ್ಧಿಸಿದೆ. ಜವಹರ್ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಈ ಬಗೆಯ ದೇಶವಿರೋಧೀ ಚಟುವಟಿಕೆಗಳ ತಾಣವಾಗಿ ರೂಪಿಸಿದ್ದೇ ಇವರುಗಳು. ಇಲ್ಲಿಂದ ಹೊರಬಂದವರೇ ಪ್ರಮುಖ ಮಾಧ್ಯಮಗಳ ಜವಾಬ್ದಾರಿ ಹೊರುವವರು ಮತ್ತು ತಮ್ಮನ್ನು ಇಲ್ಲಿಯವರೆಗೂ ಬೆಳೆಸಿದ ಮಾಲೀಕರಿಗೆ ನಿಷ್ಠರಾಗಿದ್ದು ಪ್ರಶಸ್ತಿ ಪಡೆಯುವವರು! ಇವರೆಲ್ಲರನ್ನೂ ಅಡ್ಡಗಟ್ಟಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳುತ್ತಿರೋದು ಮಾತ್ರ ನರೇಂದ್ರ ಮೋದಿಯೇ. ಗುಜರಾತಿನಲ್ಲಿ 12 ವರ್ಷಗಳ ಕಾಲ ಮಾಧ್ಯಮವನ್ನು ನಡು ಬಗ್ಗಿಸಿ ಕೂರಿಸಿದ ಅನುಭವ ಈಗ ಕೆಲಸಕ್ಕೆ ಬರುತ್ತಿದೆ.

ಬಿಡಿ. ಮತ್ತೆ ಮುಚ್ಚಿ ಹಾಕಿದ ಹತ್ಯೆಗಳ ಕಡೆಗೆ ಬನ್ನಿ. ನೆಹರೂ ಮತ್ತು ಶೇಕ್ ಅಬ್ದುಲ್ಲಾರನ್ನು ಏಕಕಾಲಕ್ಕೆ ವಿರೋಧಿಸುತ್ತಾ ಕಾಶ್ಮೀರಕ್ಕೆ ಕೊಟ್ಟ ಸ್ವಾಯತ್ತತೆಯನ್ನು ಧಿಕ್ಕರಿಸಿ ಅಲ್ಲಿಗೇ ನುಗ್ಗಿದ ಶ್ಯಾಂ ಪ್ರಸಾದ್ ಮುಖಜರ್ಿಯವರನ್ನು ಬಂಧಿಸಿ ಸಕರ್ಾರ ಜೈಲಿಗಟ್ಟಿತು. ಅವರನ್ನು ಯಾತನಾಮಯ ಸ್ಥಿತಿಯಲ್ಲಿರಿಸಿ ಅವರಿಗೆ ಒಗ್ಗದ ಔಷಧಿಯನ್ನು ಕೊಟ್ಟಿತು. ಅದರ ಕಾರಣದಿಂದಾಗಿಯೇ ಅವರ ಸಾವೆಂದು ಮನೆಯವರು ಈಗಲೂ ಆರೋಪಿಸುತ್ತಾರೆ. ತನಿಖೆ ಮಾತ್ರ ನಡೆಯಲೇ ಇಲ್ಲ. ರಾಜಕೀಯ ಮುತ್ಸದ್ದಿಯಾಗಿದ್ದ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಶವ ರೈಲ್ವೇ ಹಳಿಯ ಮೇಲೆ ಅನಾಥವಾಗಿ ಬಿದ್ದಿತ್ತು. ಹಣಕ್ಕಾಗಿ ನಡೆದ ಕೊಲೆ ಎಂದು ಸಕರ್ಾರ ಕೈತೊಳೆದುಕೊಂಡಿತು. ಹರಿವವರೆಗೂ ಅದೇ ಬಟ್ಟೆ ತೊಡುತ್ತಿದ್ದ ಪಂಡಿತ್ಜೀಯ ಬಳಿ ಅದೆಲ್ಲಿ ಹಣ ಬರಬೇಕೆಂಬ ಕಲ್ಪನೆಯೂ ಸರಕಾರಕ್ಕಿರಲಿಲ್ಲ. ಹಣಕ್ಕಾಗಿ ಕೊಲೆ ಮಾಡಿದ ದರೋಡೆಕೋರ ಅದೇಕೆ ಅವರ ಸೂಟ್ಕೇಸ್ ಬಿಟ್ಟು ಹೋದ? ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಕೊಲೆಯೊಂದು ಇತಿಹಾಸದ ಗರ್ಭದಲ್ಲಿ ಹೂತುಹೋಯ್ತು.

ಶಾಸ್ತ್ರೀಜೀಯವರ ಸಾವು ಕೂಡ ಸ್ವಾತಂತ್ರ್ಯಾನಂತರದ ಭಯಾನಕ ಕಗ್ಗೊಲೆಯೇ. 1965 ರ ಯುದ್ಧ ನಾವು ಗೆದ್ದೆವು ನಿಜ. ಆದರೆ ಶಾಸ್ತ್ರೀಜೀಯಂತಹ ಗಂಡು ಪ್ರಧಾನಿಯನ್ನು ಕಳೆದುಕೊಂಡು ದೇಶವೇ ಅನಾಥವಾಯ್ತು! ಅವರ ದೇಹದ ಪೋಸ್ಟ್ ಮಾರ್ಟಂ ಮಾಡಿಸದೇ, ಜೊತೆಯಲ್ಲಿದ್ದವರನ್ನು ವಿಚಾರಣೆ ನಡೆಸದೇ ಆತುರಾತುರವಾಗಿ ಎಲ್ಲವನ್ನೂ ಮುಗಿಸಲಾಯ್ತಲ್ಲ; ಇದು ಮಹಾದುರಂತ.

ರಾಜೇಶ್ ಪೈಲೆಟ್, ಜಿತೇಂದ್ರ ಪ್ರಸಾದ್ ಮತ್ತು ಮಾಧವ್ ರಾವ್ ಸಿಂಧ್ಯಾರ ಸರಣಿ ಸಾವಿನ ಕುರಿತಂತೆಯೂ ಹೀಗೇ ಅನುಮಾನಗಳಿವೆ. ಇಂದಿರಾಗಾಂಧಿಯ ಹತ್ಯೆಯ ಕುರಿತಂತೆಯೂ ಅನೇಕ ಊಹಾಪೋಹಗಳಿವೆ. ಕೊನೆಗೆ ರಾಜೀವ್ಗಾಂಧಿಯವರ ಹತ್ಯೆಯಲ್ಲಿ ಅಮೇರಿಕ ಸಿ.ಐ.ಎ ಏಜೆಂಟರ ಕೈವಾಡ, ತಮಿಳುನಾಡಿನ ಕೆಲವು ಕಾಂಗ್ರೆಸ್ ನಾಯಕರ ಕರಾಮತ್ತು ಇದ್ದುದರ ಕುರಿತಂತೆ ವಿಸ್ತೃತ ಕೃತಿಯೇ ಪ್ರಕಟವಾಗಿದೆ. ರಾಜಕೀಯ ಹಿತಾಸಕ್ತಿಗಳ ಕಾರಣಕ್ಕಾಗಿ ತಮ್ಮವರನ್ನೂ ಕೊಲೆಗೈಯ್ಯುವ ಈ ಪರಿವಾರ ಅತ್ಯಂತ ಕ್ರೂರ ಮತ್ತು ಹೇಯ!

ಅನೇಕರು ಈಗಿನ ಕೇಂದ್ರ ಸಕರ್ಾರ ಈ ಬಗ್ಗೆ ತನಿಖೆ ಏಕೆ ಮಾಡಬಾರದೆಂದು ಸವಾಲೆಸೆಯುತ್ತಾರೆ. ಡಿ.ಕೆ ರವಿಯವರು ತೀರಿಕೊಂಡ ನಾಲ್ಕು ದಿನದಲ್ಲಿಯೇ ಸ್ಥಳೀಯ ಪೊಲೀಸರ ಮುಖಾಂತರ ಕೊಲೆಗೆ ಪೂರಕವಾಗಿರುವ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡುವ ಯತ್ನ ನಡೆಯಲಿಲ್ಲವೇ? ಇನ್ನು ಇಷ್ಟು ವರ್ಷ ಇಡಿಯ ವ್ಯವಸ್ಥೆಯನ್ನು ಮುಷ್ಟಿಯಲ್ಲಿಟ್ಟುಕೊಂಡವರು ಸುಮ್ಮನಿರುತ್ತಾರಾ?

ಅಂದಹಾಗೆ, ಮೊನ್ನೆ ತಾನೇ ಗಾಂಧೀ ಜಯಂತಿಯಾಯಿತಲ್ಲ ಅದಕ್ಕೇ ಇವೆಲ್ಲವನ್ನೂ ನೆನಪಿಸಿಕೊಳ್ಳಬೇಕಾಯ್ತು. ಗಾಂಧೀ ಹತ್ಯೆಯೂ ಅಂದುಕೊಂಡಷ್ಟು ಸರಳವಾಗಿಲ್ಲ ಎಂಬ ಬಲವಾದ ವಾದಗಳೂ ಇವೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೂ ಅಹಿಂಸಾವಾದಿ ಗಾಂಧಿಯ ನಾಡಿನಲ್ಲಿ ಅದೇ ಪಕ್ಷದ ಜನ ಮುಗ್ಧರ ಮಾರಣ ಹೋಮಕ್ಕೆ ಟೊಂಕ ಕಟ್ಟಿ ನಿಂತುಬಿಟ್ಟರಲ್ಲ, ಇದೇ ನಿಜವಾದ ಗಾಂಧಿಯ ಕಗ್ಗೊಲೆ!
ಹೇ ರಾಮ್!!

5 thoughts on “ನಿಗೂಢ ಸಾವು ನೇತಾಜಿಯದ್ದಷ್ಟೇ ಅಲ್ಲ!

 1. ಸೂಲಿಬೆಳೆಯವರೇ ಅಂತೂ ಇಂತೂ ಇವತ್ತಾದರೂ ನಿಮಗೆ ಗಾಂಧಿ ನೆನಪಾದರು ಅಂತ ಖುಷಿ ಆಯ್ತು . ಮತ್ತು ಗೋಡ್ಸೆ ಹೇಗಿದ್ದರೂ ನೀವು ನೆನಪಿಸಿ ಕೊಳ್ತೀರಿ ಅಂತಾನೂ ಗೊತ್ತಿತ್ತು .ಹಲವಾರು ನಾಯಕರ ನಿಗೂಡ ಸಾವಿನ ಬಗ್ಗೆ ಚರ್ಚಿಸಿದ ತಾವು ರಾಜೀವ್ ದೀಕ್ಷಿತರ ಅಥವಾ ಪ್ರಮೋದ್ ಮಹಾಜನರ ಬಗ್ಗೆ ಯಾಕೆ ಏನು ಹೇಳಲಿಲ್ಲ . ವ್ಯಾಪಂ ಹಗರಣದಲ್ಲಿ 35 ಸಾವುಗಳು ನಿಗೂಡವಾಗಿವೆ ಅಲ್ಲವೇ ? ನಿಮ್ಮ “ಗೋಧ್ರಾದಲ್ಲಿ ರೈಲಿನಲ್ಲಿದ್ದ ರಾಮಸೇವಕರನ್ನು ಕೊಂದ ಮುಸಲ್ಮಾನರು ಆನಂತರ ಮುಸಲ್ಮಾನರ ಮೇಲೆ ಮುಗಿಬಿದ್ದ ರಾಮಸೇವಕರು ಇಬ್ಬರೂ ತಪ್ಪು ಹಾದಿಯಲ್ಲಿದ್ದವರೇ. ಆದರೆ ಒಬ್ಬಾಕೆಯ ಸಾವಿಗೆ ಪ್ರತೀಕಾರವಾಗಿ 30 ಸಾವಿರ ಜನರನ್ನು ಕೊಲ್ಲುವುದು, ಜೀವಂತ ದಹಿಸುವುದಿದೆಯಲ್ಲ ಅದು ಅಕ್ಷಮ್ಯ. ” ಈ ಸಮರ್ಥನೆ ಎಷ್ಟು ಸರಿ ?
  “ನೆಹರೂರಿಂದ ಶುರುಮಾಡಿ ಸೋನಿಯಾವರೆಗೆ ಮಾಧ್ಯಮಗಳನ್ನು ವಶಕ್ಕೆ ಪಡೆದು ತಮಗೆ ಬೇಕಾದ ಸುದ್ದಿಗಳನ್ನು ಪ್ರಚಾರಕ್ಕೆ ತರುವ ಕಲೆ ಸಿದ್ಧಿಸಿದೆ. ”
  ಹಾಗೂ
  “ಗುಜರಾತಿನಲ್ಲಿ 12 ವರ್ಷಗಳ ಕಾಲ ಮಾಧ್ಯಮವನ್ನು ನಡು ಬಗ್ಗಿಸಿ ಕೂರಿಸಿದ ಅನುಭವ ಈಗ ಕೆಲಸಕ್ಕೆ ಬರುತ್ತಿದೆ.”
  ಎರಡರ ಅರ್ಥ ಒಂದೇ ಅಲ್ಲವೇ , ಇಬ್ಬರು ಪತ್ರಿಕಾ ಸ್ವಾತಂತ್ರವನ್ನು ಕಸಿದಿದ್ದರು ಅಂತಲೇ ಅಲ್ವೇ ? ನೀವೊಬ್ಬ ಪಾತ್ರಕರ್ತರಾಗಿದ್ದವರು ಮೋದಿಯ ಈ ಕಾರ್ಯವನ್ನು ಹೇಗೆ ಸಮರ್ಥಿಸುತ್ತೀರಾ ?

  ಅಷ್ಟಕ್ಕೂ ಅಂದಹಾಗೆ, ಮೊನ್ನೆ ತಾನೇ ಗಾಂಧೀ ಜಯಂತಿಯಾಯಿತಲ್ಲ ಅದಕ್ಕೇ ಇವೆಲ್ಲವನ್ನೂ ನೆನಪಿಸಿಕೊಳ್ಳಬೇಕಾಯ್ತು ಎಂದಿರಲ್ಲ ಇಲ್ಲ ನಿಮ್ಮ ಈ ಅಂಕಣ ಮೊನ್ನೆ ಮೋದಿಯವರ ಹೇಳಿಕೆಗೆ ಇಂದ ಹುಟ್ಟಿದ್ದು ಅಷ್ಟೇ , ಅಷ್ಟಕ್ಕೂ ಜನವರಿ 16 ಯಾಕೆ ? ಪಶ್ಚಿಮ ಬಂಗಾಳದ ಎಲೆಕ್ಷನ್ ಯಾವಾಗ ?

  ನಿಮ್ಮ Land Aquisition Bill ವಿರೋಧದ ಬಗೆಗಿನ ಅಂಕಣಕ್ಕಾಗಿ ನಾನು ಇನ್ನೂ ಕಾಯುತ್ತಲೇ ಇದ್ದೇನೆ . ನೀವೊಬ್ಬ ದೇಶಭಕ್ತರಾಗಿ ಈ ರೀತಿ ವ್ಯಕ್ತಿಯನ್ನು ವೈಭಿಕರಿಸುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ …

 2. Its amazing that , now also our politician working for their own home, see the brutality of the situation any politician who’s earning salary perks or what ever it may he need not pay any taxes where as those they are in defense who are ready die for the country they are paying taxes , wah meera desh bhut mahaan ,,,,,,,,,vande mataraam

 3. ಅಣ್ಣಾ, ಸತ್ಯ ಹೊರ ಬರಲೇ ಬೇಕು, ಇದಕ್ಕೆನನ್ನುತ್ತಾರೆ ಆ ಸಾಹಿತಿಗಳ ವರ್ಗ? ಯಾವ ಸಾಹಿತಿಯೂ ಈ ಅನ್ಯಾಯದ ವಿರುದ್ಧ ಸಿಡಿದೆಳಲಿಲ್ಲಾ? ಪ್ರಶಸ್ತಿ ಹಿಂತಿರುಗಿಸಲಿಲ್ಲಾ. ಯಾವ ಮಾಧ್ಯಮಗಳು ಸತ್ಯ ಹೊರತರಲು ಪ್ರಯಯತ್ನಿಸಲ್ಲಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s