ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!

ರಷ್ಯಾದ ಸ್ಟಾಲಿನ್ ಕೂಡ ಭಗತ್ನನ್ನು ರಷ್ಯಾಕ್ಕೆ ಬಂದು ಹೋಗುವಂತೆ ಕೇಳಿಕೊಂಡಿದ್ದನಂತೆ! ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕೆಲವರು ಭಗತ್ ಸಿಂಗ್ನನ್ನು ತಮ್ಮೆಡೆ ಸೆಳೆಯಲು ಹರಸಾಹಸ ಮಾಡಿ ಕೊನೆಗೆ ಸ್ಟಾಲಿನ್ಗೆ ಸುದ್ದಿ ಮುಟ್ಟಿಸಿದ್ದರಂತೆ. ಆದರೆ ಕಮ್ಯುನಿಸ್ಟ್ ಆಂದೋಲನಕ್ಕೆ ಭಗತ್ಸಿಂಗ್ ಭಾರತೀಯ ರೂಪ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚಾಗಿದ್ದುದರಿಂದ ಈ ಪ್ರಯತ್ನ ಕೈ ಬಿಡಲಾಗಿರಬಹುದೆಂದು ಕೆಲವರು ಊಹಿಸುತ್ತಾರೆ. ಅದೂ ಸರಿಯೇ. ದೇವರನ್ನು ನಂಬುತ್ತಿರಲಿಲ್ಲ, ಬಂಡವಾಳಷಾಹಿಗಳನ್ನು ವಿರೋಧಿಸುತ್ತಿದ್ದ ಎಂದ ಮಾತ್ರಕ್ಕೆ ಅವನನ್ನು ಕಮ್ಯುನಿಸ್ಟ್ ಎಂದುಬಿಡುವುದು ಖಂಡಿತ ಸರಿಯಲ್ಲ. ಅವನು ವಾಸ್ತವವಾಗಿ ದೇಶದೆಡೆಗೆ ಬಲವಾದ ನಿಷ್ಠೆಯುಳ್ಳವನಾಗಿದ್ದ. ಹೀಗಾಗಿಯೇ ಪಾಖಂಡಿತನ ತೋರಿ ಅವಕಾಶಗಳನ್ನು ಮೂಸಿ ನೋಡುತ್ತ ಮನೆಯಲ್ಲಿಯೇ ಉಳಿಯದೇ ಪ್ರತ್ಯಕ್ಷ ಕಾರ್ಯರಂಗಕ್ಕೆ ಧುಮುಕಿದ.

bhagath

‘ವಿದ್ಯಾವತೀ ದೇವಿ’. ಮದುವೆಯಾಗಿ ಬಂದ ಕೆಲವು ವರ್ಷಗಳಲ್ಲಿಯೇ ಮೊದಲ ಮೈದುನ ಗಡೀಪಾರು ಶಿಕ್ಷೆಗೆ ಒಳಗಾದ. ಎರಡನೆಯವ ಜೈಲಿಗೆ ಹೋದ; ಅಸಹ್ಯ ಯಾತನೆಗಳನ್ನು ಅನುಭವಿಸಿ ಬಲಿದಾನಿಯಾದ. ಪತಿಯಂತೂ ಸದಾ ಜೈಲಿಗೆ, ಕೋಟರ್ುಗಳಿಗೆ ಅಲೆಯುವುದರಲ್ಲಿಯೇ ಜೀವ ಸವೆಸಿದರು. ಇವರೆಲ್ಲರನ್ನೂ ಸಂಭಾಳಿಸುತ್ತ, ಸ್ವತಃ ತಾನು ಅನೇಕ ಕಾಯಿಲೆಗಳಿಂದ ನರಳಿದಳು. ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಹಾವಿನಿಂದ ಕಡಿತಕ್ಕೊಳಗಾದಳು. ವಿಧಿಯ ಪರೀಕ್ಷೆ ಇಷ್ಟಕ್ಕೇ ನಿಲ್ಲಲಿಲ್ಲ. ಆಕೆಯ ಮಗ 24ನೇ ವಯಸ್ಸಿಗೆ ಪೊಲೀಸರ ಕೈಸೆರೆಯಾಗಿ ನೇಣಿಗೇರುವ ಶಿಕ್ಷೆ ಅನುಭವಿಸಬೇಕಾಯ್ತು.
ಹೌದು. ಇದು ಸಾಮಾನ್ಯ ಹೆಣ್ಣು ಮಗಳ ಕತೆಯಲ್ಲ. ಸ್ವಾತಂತ್ರ್ಯ ಕಾಲಘಟ್ಟದ ಮಹಾಸೇನಾನಿ ಭಗತ್ ಸಿಂಗ್ರ ತಾಯಿಯ ಬದುಕು. ಅದೂ ಸರಿಯೇ. ಕ್ರಾಂತಿರತ್ನ ಒಡಲೊಳಗಿರಬೇಕೆಂದರೆ ಆಕೆ ಇಷ್ಟಾದರೂ ವೀರಾಂಗನೆಯಾಗಿರದಿದ್ದರೆ ಹೇಗೆ?
ಭಗತ್ ಸಿಂಗ್ ಬಾಲ್ಯದಿಂದಲೂ ಕುಡಿದ ಅಮೃತ ಕ್ರಾಂತಿಯದ್ದೇ. ಚಿಕ್ಕಪ್ಪ ಅಜಿತ್ ಸಿಂಹ, ಸ್ವರ್ಣ ಸಿಂಹರ ಪ್ರಭಾವ ಅವನ ಮೇಲೆ ಇದ್ದೇ ಇತ್ತು. ಜೊತೆಗೆ ಮನೆಗೆ ಆಗಾಗ ಬಂದು ದಿನಗಟ್ಟಲೆ ಉಳಿಯುತ್ತಿದ್ದ ಸೂಫೀ ಅಂಬಾ ಪ್ರಸಾದನ ಕತೆಗಳನ್ನು ಕೇಳಿದ್ದ; ಸಾಹಿತ್ಯ ಓದಿದ್ದ. ಪ್ರಥಮ ವಿಶ್ವಸಮರದ ಕಾಲಕ್ಕೆ ಭುಗಿಲೆದ್ದ ಗದರ್ ಚಳವಳಿಯೂ ಅವನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನೇಣಿಗೇರಿದ ಕತರ್ಾರ್ ಸಿಂಗ್ ಸರಾಭಾ ಅವನಿಗೆ ಸ್ಫೂತರ್ಿಯ ಕಿಡಿಯಾಗಿದ್ದ. ಬಲು ಬುದ್ಧಿವಂತ ಹುಡುಗ. ಶಾಲೆಗೆ ಹೋಗದೆಯೇ ತರಗತಿಗೆ ಮೊದಲ ಸ್ಥಾನ ಪಡೆಯುವಷ್ಟು ಬೌದ್ಧಿಕ ಸಾಮಥ್ರ್ಯ ಅವನಿಗಿತ್ತು. ಒಂಭತ್ತನೇ ತರಗತಿಯಲ್ಲಿದ್ದಾಗ ಗಾಂಧೀಜಿಯವರ ಅಸಹಕಾರ ಚಳವಳಿಯ ಪ್ರಭಾವಕ್ಕೆ ಸಿಲುಕಿ ಶಾಲೆ ಬಿಟ್ಟು ಬಂದ ಪೋರ ತನ್ನ ಸಂಘಟನಾ ಚಾತುರ್ಯವನ್ನೂ, ವಾಕ್ ಕೌಶಲ್ಯವನ್ನೂ ಪಣಕ್ಕಿಟ್ಟು, ಅಕ್ಕಪಕ್ಕದ ಜನರಲ್ಲಿ ಜಾಗೃತಿಯುಂಟುಮಾಡುವಲ್ಲಿ ಸಫಲನಾದ. ಆದರೇನು? ಗಾಂಧೀಜಿ ಚಳವಳಿ ಹಿಂಪಡೆದರು. ಭಗತ್ನ ಪಾಲಿಗೆ ಶಾಲೆಯೂ ಮುಚ್ಚಿತ್ತು! ಗಾಂಧೀಜಿಯ ಮಾರ್ಗದ ಮೇಲೆ ಪೋರ ಭರವಸೆ ಕಳೆದುಕೊಂಡ.

Bhagat-Singh-1
ಅದು ಭಗತ್ನ ಸಾಲಿನ ದ್ವಂದ್ವದ ಕಾಲ. ಭಗತ್ ಜೀವನದಲ್ಲಿ ಅನೇಕ ಬಾರಿ ಈ ಬಗೆಯ ದ್ವಂದ್ವದಲ್ಲಿ ತೊಳಲಾಡಿದ್ದಾನೆ. ದೇವರನ್ನು ಒಪ್ಪಬೇಕೋ, ಬೇಡವೋ? ನೇಣಿಗೆ ಸಿದ್ಧವಾಗಬೇಕೋ, ತಪ್ಪಿಸಿಕೊಳ್ಳಬೇಕೋ? ಹೀಗೆ. ಆದರೆ ಪ್ರತೀ ಬಾರಿ ನಿರ್ಣಯ ತೆಗೆದುಕೊಂಡ ಮೇಲೆ ಹಿಂದಿರುಗಿ ನೋಡಲಿಲ್ಲ ಅವನು. ಈ ಬಾರಿ ಶಾಂತಿ-ಕ್ರಾಂತಿಗಳ ನಡುವಿನ ತಾಕಲಾಟ ಅವನನ್ನು ಸಾಕಷ್ಟು ಹಣಿದಿತ್ತು. ಕೊನೆಗೂ ತರುಣ, ಗಾಂಧೀಜಿಗಿಂತ ಕತರ್ಾರ್ ಸಿಂಗ್ ಸರಾಭಾನೇ ಮೇಲೆಂದು ಗುರುತಿಸಿಕೊಂಡ. ಕ್ರಾಂತಿ ಪಥದಲ್ಲಿ ಹೆಜ್ಜೆ ಹಾಕಲು ಸಿದ್ಧವಾದ.
ಲಾಲಾ ಲಜಪತರಾಯರ ನ್ಯಾಷನಲ್ ಕಾಲೇಜಿಗೆ ದಾಖಲಾದ. ಅಲ್ಲಿನ ಶಿಕ್ಷಣ ಚೇತೋಹಾರಿಯಾಗಿತ್ತು. ಜಾಗತಿಕ ಸ್ಥಿತಿಗತಿಗಳ ಅವಲೋಕನ ನಡೆಸಲಾಗುತ್ತಿತ್ತು. ಅಂಡಮಾನಿನಲ್ಲಿ ಕರಿನೀರ ಶಿಕ್ಷೆ ಅನುಭವಿಸಿ ಬಂದಿದ್ದ ಭಾಯಿ ಪರಮಾನಂದರು ಪ್ರೊಫೆಸರ್ ಆಗಿದ್ದ ಕಾಲೇಜೆಂದ ಮೇಲೆ ಕೇಳಬೇಕೇನು? ಭಗತ್ ಬಲುಬೇಗ ಅಧ್ಯಯನಕ್ಕೆ ತೆರೆದುಕೊಂಡ. ಒಂದಾದ ಮೇಲೊಂದು ಕ್ರಾಂತಿ ಸಾಹಿತ್ಯ ಓದಿದ. ಗೆಳೆಯರೊಡನೆ ಚಚರ್ಿಸುತ್ತಿದ್ದ. ಗಾಂಧಿವಾದದಿಂದ ದಿನೇ ದಿನೇ ದೂರ ಸರಿಯುತ್ತಿದ್ದ ಭಗತ್ನನ್ನು ರಷ್ಯಾದ ಕ್ರಾಂತಿಕಾರಿಗಳು ಆಕಷರ್ಿಸಿದರು. ಆತ್ಮಬಲಿದಾನದ ಮೂಲಕ ಪ್ರಚಾರ (ಪ್ರೊಪಗೆಂಡ ಬೈ ಡೆತ್ ) ಎಂಬ ವಿಚಾರಧಾರೆಗೆ ಭಗತ್ ಬಲುವಾಗಿ ಮನಸೋತ. ಫ್ರಾನ್ಸಿನ ಕ್ರಾಂತಿಕಾರಿ ವೇಲಾನ್ ‘ಕಾಮರ್ಿಕ ಸಂಘಟನೆ ಕಟ್ಟಿ ನಡೆಸಿದ ಹೋರಾಟದಿಂದ ಬಂಡವಾಳಷಾಹಿಗಳ ಮೇಲೆ ಪ್ರಭಾವವಾಗಲಿಲ್ಲ. ಅದಕ್ಕೇ ಫ್ರಾನ್ಸಿನ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟಿಸುವ ನಿಶ್ಚಯ ಮಾಡಿದೆ. ಕಿವುಡರಿಗೂ ಕೇಳಬೇಕೆಂದರೆ ಸದ್ದು ಜೋರಾಗಿರಬೇಕಲ್ಲವೇ?’ ಎಂದು ಹೇಳಿದ ಮಾತುಗಳನ್ನು ಮತ್ತೆ ಮತ್ತೆ ಮನನ ಮಾಡಿದ. ಅವನ ಕಣ್ಣೆದುರಿಗೆ ಮುಂದಿನ ಕಾರ್ಯ ನಿಚ್ಚಳವಾಗಿ ಗೋಚರವಾಗಲಾರಂಭಿಸಿತು.
ಎಫ್.ಎ ಪಾಸು ಮಾಡಿ ಬಿ.ಎ ಗೆ ಸೇರಿಕೊಂಡ ಭಗತ್ ಪಾರಿವಾರಿಕ ಕಾರಣಗಳಿಂದಾಗಿ ಮನೆಗೆ ಮರಳಲೇಬೇಕಾಯ್ತು. ಅಜ್ಜಿ ಅವನಿಗೊಂದು ಮದುವೆ ಮಾಡಲು ನಿಶ್ಚಯಿಸಿಬಿಟ್ಟಿದ್ದರು. ಭಗತ್ಗೆ ಈ ಬಾರಿ ಬಹಳ ಗೊಂದಲವಿರಲಿಲ್ಲ. ಆಗೆಲ್ಲ ಕ್ರಾಂತಿದಳದ ಪ್ರಮುಖರೆಂದರೆ ಕರೆದಾಗ ಮನೆಬಿಟ್ಟು ಓಡಿ ಬರುವವರು ಮಾತ್ರ. ಅಂತಹವರನ್ನು ಮಾತ್ರ ದಳದ ಪ್ರಮುಖ ಸದಸ್ಯರನ್ನಾಗಿಸಿಕೊಳ್ಳಲಾಗುತ್ತಿತತು. ಶಚೀಂದ್ರ ಸನ್ಯಾಲ್ ಭಗತ್ನಿಗೆ ಮದುವೆಯ ಸಮಸ್ಯೆಗಳನ್ನು ತೆರೆದಿಟ್ಟರು. ಆನಂತರ ಕ್ರಾಂತಿಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಾಗದಿರುವ ಬಗ್ಗೆ ಭಗತ್ಗೂ ಗೊತ್ತಿತ್ತು. ಆತ ತಂದೆಗೊಂದು ಪತ್ರ ಬರೆದ ‘ನನ್ನ ಉಪನಯನದ ಸಂದರ್ಭದಲ್ಲಿ ನನ್ನನ್ನು ದೇಶಸೇವಾಕಾರ್ಯಕ್ಕೆ ಸಮಪರ್ಿಸಿರುವುದಾಗಿ ಎಲ್ಲರ ಮುಂದೆ ಘೋಷಿಸಿದ್ದೀರಲ್ಲ; ಅದನ್ನು ಈಡೇರಿಸಲೆಂದೇ ನಾನು ಹೊರಟ್ಟಿದ್ದೇನೆ’ ಎಂದು ಹೇಳಿ ಮನೆ ಬಿಟ್ಟು ಹೊರಟೇಬಿಟ್ಟ!
ಆನಂತರದ್ದು ದೀರ್ಘ ಕ್ರಾಂತಿಯಾತ್ರೆ. ಶಚೀಂದ್ರ ಸನ್ಯಾಲ್ರ ಶಿಫಾರಸ್ಸಿನ ಮೇರೆಗೆ ಭಗತ್ಸಿಂಗ್ ಕಾನ್ಪುರ ಸೇರಿಕೊಂಡ. ಹಿಂದುಸ್ತಾನ್ ರಿಪಬ್ಲಿಕನ್ ಆಮರ್ಿಯೊಂದಿಗೆ ನಂಟು ಗಟ್ಟಿಯಾಯ್ತು. ಜಾಗತಿಕ ಕ್ರಾಂತಿ ಇತಿಹಾಸದ ಅರಿವಿದ್ದುದರಿಂದ ಯಾವ ಹೆಜ್ಜೆ ಇಟ್ಟರೆ ಪರಿಣಾಮ ಏನೆಂಬುದನ್ನು ಆತ ಮುಂಚಿತವಾಗಿ ಊಹಿಸುತ್ತಿದ್ದ. ಹೀಗಾಗಿಯೇ ಜನರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಮಾತ್ರ ಗೆಲುವು ಎಂಬುದನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದ. ಈ ವೇಳೆಗೇ ಜಗತ್ತನ್ನು ಅಚ್ಚರಿಗೆ ದೂಡಿದ ಕಾಕೋರಿ ದರೋಡೆ ನಡೆದದ್ದು. ರೈಲಿನಲ್ಲಿ ಬ್ರಿಟೀಷರು ಸಾಗಿಸುತ್ತಿದ್ದ ಹಣವನ್ನು ಕ್ರಾಂತಿಕಾರಿಗಳು ಲೂಟಿಗೈದು ಬ್ರಿಟೀಷರಿಗೆ ಸರಿಯಾದ ತಪಲಾಕಿಯನ್ನೇ ನೀಡಿದ್ದರು. ಭಗತ್ ಆ ತಂಡಕ್ಕೆ ಸಹಕಾರಿಯಾಗಿ ನಿಂತಿದ್ದನಷ್ಟೇ. ಅನೇಕ ಕ್ರಾಂತಿಕಾರಿಗಳು ಸಿಕ್ಕಿಬಿದ್ದರು, ನೇಣು ಪಾಲಾದರು. ತಪ್ಪಿಸಿಕೊಂಡವರು ಇಬ್ಬರೇ. ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ಮಾತ್ರ.
ಭಗತ್ ಊರಿಗೆ ಬಂದು ನೌಜವಾನ್ ಭಾರತ್ ಸಭಾ ಕಟ್ಟಿ ಜನರಲ್ಲಿ ನಾಟಕ, ಹಾಡುಗಳ ಮೂಲಕ ಜಾಗೃತಿಗಾಗಿ ಪ್ರಯತ್ನಿಸಿದ. ಅವನು ಬಲು ಬೇಗ ತರುಣರ ಮನ ಗೆದ್ದ. ಪೊಲೀಸರು ವಿನಾಕಾರಣ ಅವನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಕಾಕೋರಿ ಕಾಂಡದ ವಿವರ ಪಡೆಯುವ ಬಯಕೆಯಿತ್ತು. ಭಗತ್ ಒಂದಿನಿತೂ ಗುಟ್ಟು ಬಿಡಲಿಲ್ಲ. ಮುಚ್ಚಳಿಕೆ ಬರೆಸಿಕೊಂಡು ಬಿಟ್ಟುಬಿಡಬೇಕಾಗಿ ಬಂತು.
ಈ ವೇಳೆಗಾಗಲೇ ಭಗತ್ನ ಖ್ಯಾತಿ ವ್ಯಾಪಕವಾಗಿ ಹಬ್ಬಿತ್ತು. ರಷ್ಯಾದ ಸ್ಟಾಲಿನ್ ಕೂಡ ಭಗತ್ನನ್ನು ರಷ್ಯಾಕ್ಕೆ ಬಂದು ಹೋಗುವಂತೆ ಕೇಳಿಕೊಂಡಿದ್ದನಂತೆ! ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕೆಲವರು ಭಗತ್ ಸಿಂಗ್ನನ್ನು ತಮ್ಮೆಡೆ ಸೆಳೆಯಲು ಹರಸಾಹಸ ಮಾಡಿ ಕೊನೆಗೆ ಸ್ಟಾಲಿನ್ಗೆ ಸುದ್ದಿ ಮುಟ್ಟಿಸಿದ್ದರಂತೆ. ಆದರೆ ಕಮ್ಯುನಿಸ್ಟ್ ಆಂದೋಲನಕ್ಕೆ ಭಗತ್ಸಿಂಗ್ ಭಾರತೀಯ ರೂಪ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚಾಗಿದ್ದುದರಿಂದ ಈ ಪ್ರಯತ್ನ ಕೈ ಬಿಡಲಾಗಿರಬಹುದೆಂದು ಕೆಲವರು ಊಹಿಸುತ್ತಾರೆ. ಅದೂ ಸರಿಯೇ. ದೇವರನ್ನು ನಂಬುತ್ತಿರಲಿಲ್ಲ, ಬಂಡವಾಳಷಾಹಿಗಳನ್ನು ವಿರೋಧಿಸುತ್ತಿದ್ದ ಎಂದ ಮಾತ್ರಕ್ಕೆ ಅವನನ್ನು ಕಮ್ಯುನಿಸ್ಟ್ ಎಂದುಬಿಡುವುದು ಖಂಡಿತ ಸರಿಯಲ್ಲ. ಅವನು ವಾಸ್ತವವಾಗಿ ದೇಶದೆಡೆಗೆ ಬಲವಾದ ನಿಷ್ಠೆಯುಳ್ಳವನಾಗಿದ್ದ. ಹೀಗಾಗಿಯೇ ಪಾಖಂಡಿತನ ತೋರಿ ಅವಕಾಶಗಳನ್ನು ಮೂಸಿ ನೋಡುತ್ತ ಮನೆಯಲ್ಲಿಯೇ ಉಳಿಯದೇ ಪ್ರತ್ಯಕ್ಷ ಕಾರ್ಯರಂಗಕ್ಕೆ ಧುಮುಕಿದ.
ಭಗತ್ಸಿಂಗ್ ಬಾಂಬ್ ತಯಾರಿಕೆಯ ಕಾರ್ಯಕ್ಕೆ ಕೈ ಹಾಕಿದ. ಲಾಹೋರಿನಿಂದ ದೆಹಲಿಗೆ, ದೆಹಲಿಯಿಂದ ಕಾನ್ಪುರಕ್ಕೆ, ಕಾನ್ಪುರದಿಂದ ಆಗ್ರಾಕ್ಕೆ, ಅಲ್ಲಿಂದ ಕಲ್ಕತ್ತಾಕ್ಕೆ, ಮತ್ತೆ ಮರಳಿ ಲಾಹೋರಿಗೆ ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ. ದೇಶದ ಸ್ವಾತಂತ್ರ್ಯದ ಇಚ್ಛೆಯನ್ನು ಎದೆಯಲ್ಲಿ ಹೊತ್ತು ಕ್ರಾಂತಿಕಾರ್ಯದಲ್ಲಿ ತೊಡಗಿದ್ದ ಎಲ್ಲರನ್ನೂ ಏಕ ಸೂತ್ರದಲ್ಲಿ ಬಂಧಿಸುವ ಪ್ರಯತ್ನ ಅವನದ್ದು. ಬಾಂಬ್ ತಯಾರಿಕೆಯಲ್ಲಿ ನಿಸ್ಸೀಮರಾದವರನ್ನೆಲ್ಲಾ ಜೋಡಿಸಿಕೊಂಡ. ಅನೇಕ ಬಗೆಯ ಸವಾಲುಗಳನ್ನೆದುರಿಸಿಯೂ ನಾಡ ಬಾಂಬ್ ತಯಾರಿಕೆಯಲ್ಲಿ ಯಶಸ್ವಿಯಾದ.
ಈ ವೇಳೆಗಾಗಲೇ ಭಗತ್ಸಿಂಗ್ನ ನಾಸ್ತಿಕವಾದದದ ಕುರಿತಂತಹ ಗೊಂದಲ ಒಂದು ಮಹತ್ವದ ಘಟ್ಟ ತಲುಪಿತ್ತು. ಬ್ರಿಟೀಷರ ಒಡೆದು ಆಳುವ ನೀತಿ ಮುಸಲ್ಮಾನರಲ್ಲಿದ್ದ ಕ್ರೌರ್ಯದ ಜ್ವಾಲೆಗೆ ತುಪ್ಪ ಸುರಿದಿತ್ತು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಿಂದೂಗಳೂ ಹೆಣಗಾಡುವಂತಹ ಹಂತಕ್ಕೆ ತಲುಪಿತ್ತು ಈ ಕಿರಿಕಿರಿ. ಈ ವಿಷದ ರಕ್ತ ಸ್ವಾತಂತ್ರ್ಯಕ್ಕೋಸ್ಕರ ಕಾದಾಡುತ್ತಿದ್ದ ಕ್ರಾಂತಿಕಾರಿಗಳನ್ನೂ ಬಿಟ್ಟಿರಲಿಲ್ಲ. ಅನೇಕ ಬಾರಿ ಜೈಲಿನೊಳಗೂ ಬಡಿದಾಟಗಳು ನಡೆದು ಬಿಡುತ್ತಿದ್ದವು. ಗದರ್ ಕ್ರಾಂತಿಯ ವೇಳೆಗೆ ಒಂದಾಗಿ ಹೋರಾಟ ನಡೆಸಿದ್ದವರೂ ಈಗ ಒಬ್ಬರ ಮುಖ ಮತ್ತೊಬ್ಬರು ನೋಡುತ್ತಿರಲಿಲ್ಲ. ಇದಕ್ಕೆಲ್ಲ ಕಾರಣ ಬ್ರಿಟೀಷರ ನೀತಿ ಎಂದು ಅಥರ್ೈಸುವಲ್ಲಿ ಸೋತ ಭಗತ್ ದೇವರನ್ನು ನಂಬುವುದನ್ನೇ ಬಿಟ್ಟ. ದೇವರು ಇಂತಹ ಸೃಷ್ಟಿ ಮಾಡಿದ್ದಾದರೂ ಏಕೆಂದು ಪ್ರಶ್ನಿಸುತ್ತಿದ್ದ. ಅದೂ ಸರಿಯೇ. ದೇಶದ ಎಲ್ಲ ಜನರನ್ನೂ ಒಗ್ಗೂಡಿಸಬೇಕೆಂದರೆ ತಾನೂ ಸಿಖ್ಖರ ಆವರಣ ತೊರೆದು ಬರುವುದು ಅನಿವಾರ್ಯವಾಗಿದ್ದೀತು. ಸಹಜವಾಗಿಯೇ ಎಲ್ಲರೂ ಈ ಆವರಣ ಕಿತ್ತೆಸೆದು ಬರಲೆಂಬುದು ಆತನ ಬಯಕೆಯಾಗಿರಬೇಕು. ಈ ದೃಷ್ಟಿಯಿಂದ ಆತ ನಾಸ್ತಿಕನಾದ.
ಇದಾದ ನಂತರವೇ ಲಾಲಾ ಲಜಪತರಾಯರ ಮೇಲೆ ಸ್ಕಾಟ್ನ ಆದೇಶದಂತೆ ಸ್ಯಾಂಟಸರ್್ ಲಾಠಿ ಚಾಜರ್್ ಮಾಡಿ ಅವರನ್ನು ದಾರುಣವಾಗಿ ಕೊಂದದ್ದು. ಪ್ರತೀಕಾರಕ್ಕೆ ಭಗತ್ ಸಿದ್ಧನಾದ. ಅವನ ಮನಸ್ಸಿನೊಳಗೆ ಆ ವಿಚಾರಗಳ ಬುಗ್ಗೆಗಳೇಳಲಾರಂಭಿಸಿದವು. ಬಲಿದಾನದ ಹಪಾಪಿತನ ಅವನೊಳಗೆ ಇಣುಕಿಬಿಟ್ಟಿತ್ತು. ತಾನು ಓದಿಕೊಂಡ ಕ್ರಾಂತಿಕಾರಿಗಳೆಲ್ಲ ಒಮ್ಮೆ ಕಣ್ಮುಂದೆ ಹಾದು ಹೋದರು. ಭಗತ್ ಸ್ಕಾಟ್ನ ಹತ್ಯೆಗೆ ಸಿದ್ಧನಾದ. ಯೋಜನೆ ರೂಪುಗೊಂಡಿತು. ಸ್ವಲ್ಪ ಎಡವಟ್ಟಾದ್ದರಿಂದ ಸ್ಕಾಟ್ನ ಬದಲು ಸ್ಯಾಂಡಸರ್್ನ ಶವ ಉರುಳಿತು. ಲಾಲಾ ಲಜಪತರಾಯರ ಆತ್ಮಕ್ಕೆ ಸದ್ಗತಿ ಸಿಕ್ಕಿರಲು ಸಾಕು.
ಈ ಹತ್ಯೆಯಲ್ಲಿ ಪಾಲ್ಗೊಂಡವರೆಲ್ಲಾ ಕಾಣೆಯಾದರು. ಪೊಲೀಸರೂ ಕೈ ಚೆಲ್ಲಿದರು. ಅಲ್ಲಿಗೆ ಒಂದು ಅಧ್ಯಾಯ ಮುಗಿಯಿತು. ಹಿಂದೂಸ್ತಾನಿಗಳು ಪ್ರಾಣಹೀನರಾಗಿಲ್ಲ, ಅವರ ರಕ್ತವೂ ತಣ್ಣಗಾಗಿಲ್ಲವೆಂಬುದನ್ನು ಆಜಾದ್, ಭಗತ್, ರಾಜಗುರು, ಸುಖದೇವರು ಸಾಬೀತು ಪಡಿಸಿದ್ದರು. ಅಷ್ಟೇ ಅಲ್ಲ. ಬ್ರಿಟೀಷ್ ಅಧಿಕಾರಿಯನ್ನು ಹಾಡಹಗಲೇ ಹತ್ಯೆಗೈದು ನಾಪತ್ತೆಯಾಗಿಬಿಡುವ ತಾಕತ್ತನ್ನೂ ತೋರಿದ್ದರು!
ಯಾವುದಕ್ಕಾಗಿ ಭಗತ್ ಕಾತುರದಿಂದ ಕಾಯುತ್ತಿದ್ದನೋ ಆ ಸಮಯ ಬಂತು. ಅಸೆಂಬ್ಲಿಯಲ್ಲಿ ಬಾಂಬೆಸೆಯುವ ದಿನ ಅದ. ಫ್ರಾನ್ಸಿನ ಕ್ರಾಂತಿಕಾರಿ ವೇಲಾನ್ ಭಗತ್ನೊಳಗೆ ಆವಾಹಿತನಾಗಿದ್ದ. ಭಗತ್ ಅಸೆಂಬ್ಲಿಯಲ್ಲಿ ಬಾಂಬೆಸೆದು ತಾನೇ ಬಂಧಿಯಾದ. ಜೊತೆಗೆ ಮಿತ್ರ ಬಟುಕೇಶ್ವರ ದತ್ತ ಕೂಡ. ನ್ಯಾಯಾಲಯದ ವಿಚಾರಣೆಯಲ್ಲಿ ತೀವ್ರತರವಾಗಿ ವಾದ ಮಂಡಿಸಿದ ಭಗತ್ ಕ್ರಾಂತಿಕಾರ್ಯದ ರೂಪುರೇಷೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ. ಇಂದು ನಾವೆಲ್ಲ ಭಗತ್ನನ್ನು ‘ಹೀರೋ’ ಅಂತ ಭಾವಿಸುವುದರಲ್ಲಿ ಆತನ ನ್ಯಾಯಾಲಯದ ಕಲಾಪಗಳ ಕೊಡುಗೆ ಬಹಳ.
‘ನಮ್ಮ ದೃಷ್ಟಿಯಲ್ಲಿ ಬಲಪ್ರಯೋಗ ಆಕ್ರಮಣಕಾರಿ ರೀತಿಯಲ್ಲಿ ಮಾಡಿದಾಗ ಅನ್ಯಾಯವೆನಿಸಿಕೊಳ್ಳುವುದು. ಅದು ಮಾತ್ರವೇ ಹಿಂಸೆ. ಆದರೆ ಯಾವುದಾದರೂ ಶ್ರೇಷ್ಠ ಸಾಧನೆಗಾಗಿ ಹಿಂಸೆ ಎಸಗಿದರೆ ಅದು ನೈತಿಕವಾಗಿ ನ್ಯಾಯಸಮ್ಮತವೇ ಆಗುತ್ತದೆ’ ಎಂದ ಭಗತ್. ಅಲ್ಲವೇ ಮತ್ತೆ? ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದವನಿಗೂ ಅವನಿಗೆ ನೇಣು ಶಿಕ್ಷೆ ಕೊಡುವ ನ್ಯಾಯಾಧೀಶನಿಗೂ ವ್ಯತ್ಯಾಸವಿಲ್ಲವೇ? ಯಾರದ್ದು ಹಿಂಸೆ, ಯಾರದ್ದು ನ್ಯಾಯ? ಹೇಳಿ ನೋಡೋಣ. ಭಗತ್ ಎಳೆ ಎಳೆಯಾಗಿ ವಾದ ಮಂಡಿಸುತ್ತಿದ್ದರೆ ನ್ಯಾಯಾಲಯ ಕಂಪಿಸುತ್ತಿತ್ತು; ನ್ಯಾಯಾಧೀಶರು ತಡಬಡಾಯಿಸುತ್ತಿದ್ದರು. ‘ಕ್ರಾಂತಿಯೆಂದರೆ ಸದ್ಯದ ವ್ಯವಸ್ಥೆಯಲ್ಲಿನ ಪರಿವರ್ತನೆ ಅಷ್ಟೇ’ ಎಂಬ ಅವನ ವಾದಕ್ಕಂತೂ ಎಲ್ಲರೂ ತಲೆದೂಗಿದರು. ನೋಡ ನೋಡುತ್ತ ಭಗತ್ ತರುಣರ ಆರಾಧ್ಯ ದೈವವಾದ. ಕಾಂಗ್ರೆಸ್ಸಿನ ಬಗ್ಗೆ ಜನರ ಅಸಹನೆ ಮೊದಲಿಗಿಂತ ತೀವ್ರವಾಯ್ತು. ಭಗತ್ನ ಪೂರ್ಣ ಸ್ವರಾಜ್ಯದ ಘೋಷಣೆ ವ್ಯಾಪಕವಾಗುವವರೆಗೆ ಕಾಂಗ್ರೆಸ್ಸು ಸ್ವಾಯತ್ತ ಅಧಿಕಾರ ಸಿಕ್ಕರೆ ಸಾಕೆಂದು ಬೇಡಿಕೆ ಇಟ್ಟಿತ್ತು!
ಅಚಾನಕ್ಕು ಸಿಕ್ಕಿಬಿದ್ದ ಕೆಲವು ಕ್ರಾಂತಿಕಾರಿಗಳಿಂದಾಗಿ ಸ್ಯಾಂಡಸರ್್ ಹತ್ಯೆಯಲ್ಲಿನ ಭಗತ್ನ ಪಾತ್ರ ಹೊರಬಂತು. ರಾಜಗುರು ಮತ್ತು ಸುಖದೇವರೊಂದಿಗೆ ಸೇರಿ ಭಗತ್ನಿಗೆ ನೇಣು ಶಿಕ್ಷೆ ಘೋಷಿಸಲಾಯ್ತು. ಕಾಂಗ್ರೆಸ್ಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಲು ಸಾಕು. ಆಗಲೂ ಕ್ರಾಂತಿಕಾರಿಗಳು ಸುಮ್ಮನಿರಲಿಲ್ಲ. ಜೈಲಿನಲ್ಲಿನ ವ್ಯವಸ್ಥೆ ಸುಧಾರಣೆಗೆಂದು ಉಪವಾಸಕ್ಕೆ ಕುಳಿತರು. ದಿನಗಳೆದಂತೆ ಕ್ರಾಂತಿಕಾರಿಗಳ ಉಪವಾಸದ ಕಾವು ಇಡಿಯ ದೇಶವನ್ನು ಆವರಿಸಿತು. ಗಾಂಧೀಜಿಯವರ ಉಪವಾಸ ಸತ್ಯಾಗ್ರಹಗಳಿಗಿಂತ ಪ್ರಭಾವಿಯಾಯಿತು ಇದು. ಜತೀಂದ್ರನಾಥರು ಉಪವಾಸದಿಂದಾಗಿಯೇ ದೇಹತ್ಯಾಗ ಮಾಡಿದ ಮೇಲೆ ಸಕರ್ಾರ ಮಣಿಯಲೇಬೇಕಾಯ್ತು. 24ರ ಪೋರ ಭಗತ್ ಕಾಂಗ್ರೆಸ್ ನಾಯಕರೂ ಸಾಧಿಸಲಾಗದ್ದನ್ನೂ ಗಳಿಸಿಕೊಂಡಿದ್ದ.

The-news-of-the-execution-Source-guruprasad.net_
ಭಗತ್ನ ಸಾವಿನ ದಿನ ಸಮೀಪಿಸುತ್ತಿದ್ದಂತೆ ದೇಶದೊಳಗೆ ಅವ್ಯಕ್ತ ಭಯ ಆವರಿಸಲಾರಂಭಿಸಿತು. ಆತನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ತುಡಿತ. ಮನಸ್ಸು ಮಾಡಿದ್ದರೆ ಗಾಂಧೀಜಿ ಇರ್ವಿನ್ನೊಂದಿಗಿನ ಒಪ್ಪಂದ ಮುರಿಯುವ ಬೆದರಿಕೆಯೊಡ್ಡಿ ಈ ತರುಣರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಗುರಿಗಿಂತ ಮಾರ್ಗವೇ ಮುಖ್ಯವಲ್ಲವೇ!?
ಆಜಾದ್ರ ಪ್ರಯತ್ನಕ್ಕೂ ಭಗತ್ ಸೊಪ್ಪುಹಾಕಲಿಲ್ಲ. ಅವನಿಗೆ ಗೊತ್ತಿತ್ತು. ಕೆಲವೊಮ್ಮೆ ಬದುಕಿ ಸಾಧಿಸುವುದಕ್ಕಿಂತ ಸತ್ತು ಗಳಿಸಿಕೊಳ್ಳುವುದೇ ಹೆಚ್ಚು. ಅವನ ಕಿವಿಗಳಲ್ಲಿ ಅಶ್ವಾಕ್ ಉಲ್ಲಾಖಾನನ ಗೀತೆ ಗುಂಯ್ಗುಡುತ್ತಿತ್ತು,
ನನಗೊಂದು ಆಸೆ ಗೆಳೆಯ
ಶವದ ಪೆಟ್ಟಿಗೆಯೊಳಗೆ ನನ್ನ ದೇಶದ
ಹಿಡಿ ಮಣ್ಣಿಡುವೆಯಾ?
ಸಾವಿನ ಮುನ್ನಾ ದಿನ ಭಗತ್ ಅಮ್ಮನೊಂದಿಗೆ ಮಾತನಾಡಿದ, ನೀನು ಅಳಬಾರದು, ಭಗತ್ ಸಿಂಗ್ನ ಅಮ್ಮ ಹೇಡಿಯಂತೆ ಅಳುತ್ತಾ ಹುಚ್ಚಿಯಾಗಿದ್ದಾಳೆ ಎಂದು ಯಾರೂ ಮೂದಲಿಸುವಂತಾಗಬಾರದು ಎಂದ. ಹಾಗೆಯೇ ಆಯಿತು. ಮಗನನ್ನು ನೇಣಿಗೇರಿಸುತ್ತಿದ್ದ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಕೋಡಿಯೊಡೆದ ದುಖಃದ ಕಟ್ಟೆ ಆಕೆ ತಡೆದಳು. ಕಣ್ಣೊಳಗೇ ನೀರನ್ನು ಇಂಗಿಸಿಕೊಂಡಳು. ಕಲ್ಲು ಬಂಡೆಯಾಗಿಬಿಟ್ಟಳು.
ಓಹ್! ಇಂದು ಭಗತ್ನ ಹುಟ್ಟು ಹಬ್ಬ. ಮಗುವಿನ ಹುಟ್ಟು, ತಾಯಿಯ ಮರುಜನ್ಮ ಅಂತಾರೆ. ಇಲ್ಲಿ ಮಗನ ಸಾವೂ ತಾಯಿಗೆ ಮರುಜನ್ಮವೇ! ಯಾರನ್ನು ನೆನಪಿಸಿಕೊಳ್ಳೋದು, ಯಾರನ್ನು ಬಿಡೋದು. ಇಂತಹ ತಾಯಿ ಮಗನನ್ನು ಪಡೆದ ತಾಯಿ ಭಾರತಿ, ನೀನೇ ಧನ್ಯ!

vidyavatee

6 thoughts on “ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!

  1. ಚಕ್ರವರ್ತಿಯವರೆ, ನಾನು ನಿಮ್ಮ ದೊಡ್ಡ ಅಭಿಮಾನಿಗಳಲ್ಲೊಬ್ಬ ನನ್ನ ಹೆಸರು ಮಂಜುನಾಥ್ ಎಂದು ನಾನು ನಿಮ್ಮ ವಿಶ್ವಗುರು ಲೇಖನ ಮಾಲೆಗಳನ್ನು ನನ್ನ ಇಮೇಲ್ ವಿಳಾಸಕ್ಕೆ ಲಿಂಕ್ ಮಾಡಿಕೊಂಡಿದ್ದೆ. ಅಲ್ಲದೆ ಇಂಟರ್ ನೆಟ್ ಮೂಲಕ ನೆಲದಮಾತು ಲೇಖನಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದೆ, ಆದರೆ ಇತ್ತೀಚಿನ ದಿನಗಳಲ್ಲಿ ನನಗೆ ನಿಮ್ಮ ಲೇಖನ ಸರಣಿಯ ಮುಂದುವರಿದ ಭಾಗಗಳು ನನ್ನ ಇಮೇಲ್ ನಲ್ಲಿಯೂ ದೊರೆಯುತ್ತಿಲ್ಲ ಅಲ್ಲದೇ ನೆಲದಮಾತು ವೆಬ್ಸೈಟ್ ಮೂಲಕವೂ ದೊರೆಯುತ್ತಿಲ್ಲ, ಪ್ರತಿದಿನ ಅದಕ್ಕಾಗಿ ಹುಡುಕಾಟ ನಡೆಸಿದ್ದೇನೆ, ನನಗೆ ಇದೊಂದು ರೀತಿ ಅಡಿಕ್ಷನ್ ನಂತಾಗಿದೆ ದಯವಿಟ್ಟು ನಿಮ್ಮ ಲೇಖನ ಸರಣಿಯ ಮುಂದುವರಿದ ಭಾಗಗಳನ್ನು ಬಿಡುಗಡೆಮಾಡಿ ಹಾಗೂ ನನ್ನ ಇಮೇಲ್ ವಿಳಾಸಕ್ಕೂ ಕಳುಹಿಸಿ ನನ್ನ ಇಮೇಲ್ ವಿಳಾಸ ಹೀಗಿದೆ ” smart.mh2000@gmail.com” ನಾನು ನಿಮ್ಮ ಇತರೆ ಲೇಖನಗಳನ್ನೂ ಕೊಂಡು ಓದಿದ್ದೇನೆ ಅವುಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಜಾಗೋ ಭಾರತ್ ಹಾಗೂ ಮೊದಲಾದವು. ನೀವೊಬ್ಬ ಅಪ್ರತಿಮ ದೇಶಭಕ್ತ ನಾನು ನಿಮ್ಮ ಅನುಯಾಯಿ. ನಿಮ್ಮ ಲೇಖನ ಸರಣಿಯ ಮುಂದುವರಿದ ಭಾಗಗಳನ್ನು ಬಿಡುಗಡೆಮಾಡಿ. ಈ ಮೊದಲು ಭಗತ್ ಸಿಂಗ್ ಜನ್ಮದಿನದ ವಿಶೇಶ ಲೇಖನ “ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!” ಇದರ ನಂತರ ನನಗೆ ಯಾವುದೇ ಅಪ್ಡೇಟ್ಸ್ ದೊರೆತಿಲ್ಲ. ದಯವಿಟ್ಟು ಸಹಾಯಮಾಡಿ. ಪ್ಲೀಸ್…! ಪ್ಲೀಸ್….! ಪ್ಲೀಸ್…..! ಬೇಕಾದರೆ ಇನ್ನೊಂದೆರಡು ಪ್ಲೀಸ್ ಕೇಳ್ತೀನಿ. ಪ್ಲೀಸ್….! ಪ್ಲೀಸ್…..!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s