ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

ಹಿಂದುವನ್ನು ಹಿಂದು ಧರ್ಮದ ಆಚರಣೆಯನ್ನು ಅವಹೇಳನ ಮಾಡೋದು ಇಂದು ನೆನ್ನೆಯ ಪ್ರಯತ್ನವಲ್ಲ. ಶತಶತಮಾನದಿಂದಲೂ ಇಸ್ಲಾಮಿನ, ಕ್ರಿಸ್ತನ ಕಟ್ಟರ್ ಅನುಯಾಯಿಗಳು ಹಿಂದೂ ಧರ್ಮದ ನಾಶಕ್ಕೆ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಒಮ್ಮೆ ಕತ್ತಿ ಹಿರಿದು, ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಹೆದರಿಸಿ, ಒಮ್ಮೆ ಸೇವೆಯ ಸೋಗಿನಲ್ಲಿ, ಒಮ್ಮೆ ಸಿನೆಮಾ ಪರದೆಯಲ್ಲಿ!
ಪ್ರಶ್ನಾತೀತರು ಯಾರೂ ಇಲ್ಲ. ಸೃಷ್ಟಿಗೆ ಕಾರಣನಾದವನನ್ನೆ ಬಗೆಬಗೆಯಲ್ಲಿ ಪ್ರಶ್ನಿಸಿ ಉತ್ತರವನ್ನು ಮಥಿಸಿದ ಸಮಾಜ ನಮ್ಮದು. ಚರ್ಚೆ, ವಾಗ್ವಾದಗಳು ನಮ್ಮಲ್ಲಿ ಉಳಿದೆಲ್ಲ ಪಂಥಗಳಿಗಿಂತಲೂ ಸಹಜ ಮತ್ತು ಸಾಮಾನ್ಯ. ವೇದಕಾಲೀನ ಋಷಿ ಯಾಜ್ಞವಲ್ಕ್ಯ ಮತ್ತು ಗಾರ್ಗಿಯರ ಸಂಭಾಷಣೆಗಳು ಮೂಲವನ್ನೆ ಅಲುಗಾಡಿಸಬಲ್ಲ ಪ್ರಶ್ನೋತ್ತರಗಳು. ಶಂಕರರ ಮತ್ತು ಬುದ್ಧಾನುಯಾಯಿಗಳ ಚರ್ಚೆಗಳೇನು ಕಡಿಮೆಯವಲ್ಲ. ಆರ್ಯ ಸಮಾಜದ ಸಯಾನಂದರಂತೂ ಎದುರಾಳಿಗಳನ್ನು ಯಾವ ಗದೆಯಿಂದ ಬೀಸುತ್ತಿದ್ದರೋ ಅದೇ ಗದಾಪ್ರಹಾರವನ್ನು ಸ್ವಂತ ಮತದ ಮೇಲೂ ಮಾಡುತ್ತಿದ್ದರು. ಓರೆಕೋರೆಗಳನ್ನು ತಿದ್ದಿತೀಡುವಲ್ಲಿ ನಾವು ಯಾವಾಗಲೂ ಒಂದು ಹೆಜ್ಜೆ ಮುಂದೆಯೇ. ಆದರೆ ನಾವು ತಿದ್ದಹೊರಟಿದ್ದು ನಮ್ಮನ್ನೇ ಹೊರತು ಅನ್ಯರನ್ನಲ್ಲ. ಅನ್ಯರು ನಮ್ಮ ಮೇಲೆ ಏರಿ ಹೋಗುತ್ತಿದ್ದಾರೆನಿಸಿದಾಗ ಮಾತ್ರ ಸಾಕಷ್ಟು ಅಧ್ಯಯನ ಮಾಡಿ ತಿರುಗಿ ಬಿದ್ದಿದ್ದು. ಶಂಕರಾನುಯಾಯಿಗಳು ಕೆಲವರು ಬುದ್ಧನ ಮತ ಸ್ವೀಕರಿಸಿ ಅವರ ವಾದಶೈಲಿಯನ್ನು ಅರಿತು, ಮರಳಿ ಮೂಲಮತಕ್ಕೆ ಬಂದು ಅದಕ್ಕೆ ಉತ್ತರಿಸಿದ್ದೂ ಈ ಕಾರಣದಿಂದಲೇ. ರಾಜಾ ರಾಮ್‌ಮೋಹನ್ ರಾಯರು ಕ್ರಿಸ್ತಾನುಯಾಯಿಗಳ ಒಡನಾಟದ ಪ್ರಭಾವದಿಂದ ಮೂರ್ತಿ ಪೂಜೆಯನ್ನು ಧಿಕ್ಕರಿಸಿದ್ದು ನಿಜ. ಆದರೆ ಬರಬರುತ್ತಾ ಹಿಂದೂ ಧರ್ಮದ ತಿರುಳಿನಿಂದ ಅದೆಷ್ಟು ಆಕರ್ಷಿತರಾದರೆಂದರೆ, ವಾದಕ್ಕೆ ಬಂದಿದ್ದ ಪಾದ್ರಿಯೇ ಮನಸೋತು ಹಿಂದೂ ಧರ್ಮ ಸ್ವೀಕರಿಸುವಂತೆ ಮಾಡಿದ್ದರು!
ಹೀರಂ ಮ್ಯಾಕ್ಸಿಂ, ಸ್ವಾಮಿ ವಿವೇಕಾನಂದರು ಅಮೆರಿಕಾದ ವೇದಿಕೆಯ ಮೇಲೆ ನಿಂತು ‘ಕ್ರಿಸ್ತ ಪಾದ್ರಿಗಳೊಂದಿಗೆ ಬೆಕ್ಕು ಇಲಿಯೊಂದಿಗೆ ಆಡುವಂತೆ ಆಡುತ್ತಿದ್ದರು’ ಎಂದು ಬರೆದಿದ್ದಾರೆ! ಸ್ವಾಮೀಜಿಯವರ ಪ್ರವಾಸದ ನಂತರ ಅಮೆರಿಕದ ಕ್ರಿಶ್ಚಿಯನ್ನರಿಗೆ ಪ್ರತಿ ವರ್ಷ ಹತ್ತು ಲಕ್ಷ ಡಲರ್‌ಗಳಷ್ಟು ಹಣ ಉಳಿತಾಯವಾಗುತ್ತಿತ್ತೆಂಬುದು ಅವನ ಅಭಿಪ್ರಾಯ. ಅಲ್ಲಿನ ಅನೇಕರು ಯೋಚಿಸಿದ್ದರಂತೆ, ‘ವಿವೇಕಾನಂದರ ನಾಡಿನ ಜನರ ಉದ್ಧಾರಕ್ಕೆಂದು ನಾವು ಮಿಷನರಿಗಳಿಗೆ ಹಣ ಕೊಡುವುದು ವ್ಯರ್ಥ; ವಿವೇಕಾನಂದರಂಥವರನ್ನು ಭಾರತದಿಂದ ಕರೆಸಿಕೊಂಡು ನಾವು ಉದ್ಧಾರವಾಗುವುದೇ ಸೂಕ್ತ’ ಎಂದು!
ನಮ್ಮದು ನೆನ್ನೆ ಮೊನ್ನೆ ಹುಟ್ಟಿದ ಧರ್ಮವಲ್ಲ. ಅದು ಅತಿ ಪ್ರಾಚೀನ ಧರ್ಮ. ಹಾಗಂತ ಮುಂದೆ ವಾಮದೇವ ಶಾಸ್ತ್ರಿಯಾಗಿ ಬದಲಾದ ಡೇವಿಡ್ ಫ್ರಾಲಿ ಅಧಿಕೃತವಾಗಿ ಉಲ್ಲೇಖ ಮಾಡುತ್ತಾರೆ. ‘ನಾನೇಕೆ ಹಿಂದುವಾದೆ?’ ಎಂಬ ತಮ್ಮ ಪುಸ್ತಕದಲ್ಲಿ ಋಗ್ವೇದದಿಂದ ಹಿಡಿದು ಆಧುನಿಕ ಕಾಲದ ಎಸ್.ಎಸ್.ರಾಜಾರಾಂ ರವರೆಗೆ ಪುಂಖಾನುಪುಂಖವಾಗಿ ಉಲ್ಲೇಖಿಸುತ್ತಾರೆ. ಅನ್ಯ ಮತಕ್ಕೂ ಇದಕ್ಕೂ ಇರುವ ಭಿನ್ನತೆಗಳನ್ನು ಗುರುತಿಸಿ ಇದರ ಶ್ರೇಷ್ಠತೆ ಎತ್ತಿ ಹಿಡಿಯುತ್ತಾರೆ. hih
ಅನುಮಾನವೇ ಇಲ್ಲ. ಈ ಹತ್ತು ಸಾವಿರ ವರ್ಷಗಳಲ್ಲಿ ಮಿಡತೆಯ ಹಿಂಡಿನಂತೆ ಬಂದ ದಾಳಿಕೋರರು ಈ ಧರ್ಮದ ನಾಶಕ್ಕೆ ಪ್ರಯತ್ನಿಸಿದಾಗಲೆಲ್ಲ ‘ಇದು ಹೊಸ ರೂಪ ಆವಾಹಿಸಿಕೊಂಡಿದೆ. ಒಳಗಿನ ತಿರುಳನ್ನು ಹಾಗೆಯೇ ಉಳಿಸಿಕೊಂಡು ಹೊರಗಣ ರೂಪಕ್ಕೆ ಹೊಸ ರಂಗು ಬಳಿದು ತನ್ನ ತಾನು ಉಳಿಸಿಕೊಂಡಿದೆ. ಬುದ್ಧ ಭಿಕ್ಷುಗಳ ಪ್ರಭಾವ ಅತಿಯಾದಾಗ ಬಾಲ್ಯ ಸನ್ಯಾಸದ ಕಲ್ಪನೆ ಹುಟ್ಟಿತು. ಮುಸಲ್ಮಾನರ ಆಟಾಟೋಪ ತೀವ್ರವಾದಾಗ ಸುಪ್ತವಾಗಿದ್ದ ಭಕ್ತಿಯು ಚಳವಳಿಯಾಗಿ ಭುಗಿಲೆದ್ದಿತು. ಹರಿ ಎನ್ನುವ ಹೆಸರೇ ಭಕ್ತಿಯ ಅಭಿವ್ಯಕ್ತಿಯಾಯಿತು. ಒಬ್ಬರನ್ನೊಬ್ಬರು ಸಂಧಿಸುವಾಗ ಉತ್ತರ ಭಾರತದಲ್ಲಿ ಈಗಲೂ ‘ಹರಿಬೋಲ್’ ಎನ್ನುತ್ತಾರಲ್ಲ, ಅದು ಮುಸಲ್ಮಾನ ರಾಜರ ವಿರುದ್ಧ ಸೆಟೆದು ನಿಂತ ಹಿಂದೂ ಸಮಾಜದ ದನಿಯೇ!
ಹೀಗೆ ಕಾಲಕ್ರಮದಲ್ಲಿ ಹೊರ ಆವರಣಕ್ಕೆ ಬಳಿಯುತ್ತ ಹೋದ ಬಣ್ಣವನ್ನೆ ಅನೇಕರು ಹಿಂದೂ ಧರ್ಮವೆಂದು ಭಾವಿಸಿ ಯುದ್ಧಕ್ಕೆ ತೊಡೆ ತಟ್ಟಿ ನಿಂತರು. ಕೆಲವೆಡೆ ಒಂದಷ್ಟು ದುರುಪಯೋಗವೂ ಆಯಿತು. ಕಾವಿಧಾರಣೆ ಬಲು ಸಲೀಸಾಯ್ತು. ಭಕ್ತಿಯ ಹೆಸರಲ್ಲಿ ಮೂರ್ತಿಪೂಜೆ ವ್ಯಾಪಕವಾಯ್ತು. ಕೊನೆಗೆ ಸಿನೆಮಾ – ಕ್ರಿಕೆಟ್ ಸ್ಟಾರುಗಳಿಗೂ ಮಂದಿರವಾಗಿ ಕ್ಷೀರಾಭಿಷೇಕ ನಡೆಯಿತು.
ಹೌದು… ಇವೆಲ್ಲವೂ ಸಹಿಸಲಾಗದವೇ ನಿಜ. ಆದರೆ ಇದು ಹಿಂದೂ ಧರ್ಮವಲ್ಲ, ಅದರೊಳಗಿನ ಸತ್ವದ ಕಡೆಗೆ ಹೊರಳುವ ಪ್ರಯತ್ನವನ್ನೆ ಯಾರೂ ಮಾಡಿಲ್ಲ! ಯಾರು ಈ ಪ್ರಯತ್ನಕ್ಕೆ ಕೈ ಹಾಕುವರೋ ಅವರು ಅಕ್ಷರಶಃ ಶಾಂತರಾಗುತ್ತಾರೆ. ಎಲ್ಲರಲ್ಲೂ ದೇವರನ್ನು ಕಾಣುತ್ತಾ ಆನಂದೋನ್ಮತ್ತರಾಗುತ್ತಾರೆ. ಅದನ್ನು ಅರಿಯಲಾಗದವರು ಮಾತ್ರ ‘ಪೀಕೆ’ಯಂತಹ ಸಿನೆಮಾದ ಮೂಲಕ ಸವಾಲೆಸೆದ ವಿಕೃತ ತೃಪ್ತಿ ಪಡೆಯುತ್ತಾರೆ.
ಬಾಲಿವುಡ್ ಸಿನೆಮಾಗಳು ಎತ್ತುವ ಯಾವ ಪ್ರಶ್ನೆಗಳೂ ಹೊಸತಲ್ಲ, ನಾವು ಅದನ್ನು ಅಲ್ಲಗಳೆಯುವುದೂ ಇಲ್ಲ. ಆದರೆ ಈ ಪ್ರಶ್ನೆ ಎತ್ತುವ ಹಿಂದಿನ ಉದ್ದೇಶವಷ್ಟೆ ನಮಗೆ ಮುಖ್ಯ. ಹಾಗೆ ನೋಡಿದರೆ ಸ್ವಾಮಿ ವಿವೇಕಾನಂದರಿಗಿಂತಲೂ ನಮ್ಮನ್ನು ಚೆನ್ನಾಗಿ ಝಾಡಿಸಿದ ಮತ್ತೊಬ್ಬ ವ್ಯಕ್ತಿ ಇರುವುದು ಅಸಾಧ್ಯ. ‘ಕೆಲವು ಸಾವಿರ ಢೋಂಗೀ ಸಾಧುಗಳು, ಒಂದಷ್ಟು ಲಕ್ಷ ಢೋಂಗೀ ಸಮಾಜ ಸುಧಾರಕರು ಈ ಧರ್ಮವನ್ನು ಹಾಳು ಮಾಡಿಬಿಟ್ಟಿದ್ದಾರೆ’ ಎಂದು ಅವರು ಹೇಳುವುದರ ಹಿಂದೆ ಗೂಢಾರ್ಥ ಅಡಗಿದೆ. ಅವರ ಉದ್ದೇಶ ಸಾಧುಗಳ ನಾಶವಲ್ಲ, ಬದಲಿಗೆ ಸಾಧು ಸುಧಾರಣೆ. ಹಿಂದೂ ಧರ್ಮವನ್ನು ಶಕ್ತಿವಂತಗೊಳಿಸುವ ಸಾತ್ವಿಕ ಪ್ರಯತ್ನ ಅದು. ಅದಕ್ಕೇ ಅವರು ನಮಗೆ ದೇವರಾಗೋದು. ಬುದ್ಧ ವೇದವಿರೋಧಿಯಾದರೂ ಅವನನ್ನು ಹಿಂದೂ ಸಮಾಜ ಪೂಜಿಸೋದು ಆತ ನಮ್ಮ ಓರೆಕೋರೆಗಳನ್ನು ಸಾತ್ವಿಕ ಮನೋಭಾವದಿಂದಲೇ ತಿದ್ದಿದ ಎನ್ನುವ ಕಾರಣಕ್ಕಾಗಿಯೇ.
ಆದರೆ ಆಮೀರ್ ಖಾನ್‌ನ ಮನೋಗತ ಖಂಡಿತ ಸಾಧುವಲ್ಲ. ಈ ಹಿಂದೆ ಆತ ಸತ್ಯಮೇವ ಜಯತೇಯಲ್ಲೂ ಹೀಗೇ ಂಆಡಿದ್ದ. ಸಾಮಾಜಿಕ ಸಮಸ್ಯೆಗಳು ಅಂದಾಗಲೆಲ್ಲ ಅವರಿಗೆ ಕಾಣಿಸೋದು ಜಾತಿ ವೈಷಮ್ಯಗಳೇ! ಸ್ತ್ರೀ ಸಮಾನತೆಯ ಕೊರತೆ ಅದೇಕೆ ಕಾಣುವುದೇ ಇಲ್ಲ? ಗಂಡೊಬ್ಬ ನಾಲ್ಕು ಹೆಣ್ಣನ್ನು ಮದುವೆಯಾಗುವ ಬಗ್ಗೆ ಅದೇಕೆ ಬೌದ್ಧಿಕ ಶ್ರೀಮಂತಿಕೆಯ ಸಮಾಜ ಚಕಾರ ಎತ್ತುವುದಿಲ್ಲ? ಎತ್ತಿದ ಪ್ರಶ್ನೆಗಳು ಮನುಕುಲದ ಹಿತದೃಷ್ಟಿಯವಾಗಬೇಕೇ ಹೊರತು ಒಂದು ಪಂಥವನ್ನು ನಿರ್ನಾಮ ಮಾಡಬೇಕೆಂಬ ಉದ್ದೇಶದ್ದಲ್ಲ.
291442-aamir-weird-pkನನಗೊಬ್ಬ ವೈದ್ಯರು ‘ಪೀಕೆಯಲ್ಲಿ ತೋರಿಸಿದ್ದರಲ್ಲಿ ತಪ್ಪೇನಿದೆ? ಢೋಂಗೀ ಬಾಬಾಗಳ ಹಿಂದೆ ಬಿದ್ದು ಕ್ಯಾನ್ಸರ್ ತೃತೀಯ ಹಂತಕ್ಕೆ ಹೋದಮೇಲೆ ರೋಗಿಗಳು ನಮ್ಮ ಬಳಿ ಬಂದು ರೋಗ ಉಲ್ಬಣಗೊಂಡು ಸಾಯುತ್ತಾರೆ. ತಪ್ಪಲ್ಲವೆ?’ ಅಂದರು. ಅದೂ ನಿಜವೇ. ಆದರೆ ರೋಗವೇ ಇಲ್ಲದವನ ಬಳಿ ದುಡ್ಡಿದೆ ಎಂಬ ಏಕಮಾತ್ರ ಕಾರಣಕ್ಕೆ ಹೃದಯವನ್ನೆ ಬಗೆದು ಹಣ ಪೀಕುವ ವೈದ್ಯರೆಷ್ಟಿಲ್ಲ? ಎಂದು ಕೇಳಿದೆ. ಡಾಕ್ಟರ್ ಮೌನವಾಗಿದ್ದರು. ಹುಬ್ಬಳ್ಳಿ ಒಂದರಲ್ಲಿಯೇ ಇರುವ ಆಸ್ಪತ್ರೆಗಳ ಒಟ್ಟೂ ದಿನದ ಆದಾಯ ಸುಮಾರು ಎಂಟು ಕೋಟಿಯಂತೆ! ತಿಂಗಳಿಗೆ ೨೫೦ ಕೋಟಿ ರುಪಾಯಿಗಳು! ವರ್ಷಕ್ಕೆ ಸುಮಾರು ಮೂರು ಸಾವಿರ ಕೋಟಿ!! ಲೆಕ್ಕ ಮುಂದಿಟ್ಟೊಡನೆ ಅವರ ಮುಖ ಕೆಂಪಾಯ್ತು. ಎಲ್ಲಾ ವೈದ್ಯರೂ ಒಂದೇ ರೀತಿ ಇರೋದಿಲ್ಲ ಎಂದರು. ಹಾಗೆಯೇ ಎಲ್ಲಾ ಬಾಬಾಗಳೂ ಢೋಂಗಿಯೇ ಆಗಬೇಕಿಲ್ಲ ಎಂದೆ. ಚರ್ಚೆ ಮುಗಿದಿತ್ತು.
ಅಮೀರ್ ಖಾನ್‌ನ ಸಿನೆಮಾವನ್ನು, ಈ ಹಿಂದೆ ಬಂದಂತಹ ಓ ಮೈ ಗಾಡ್ ಅನ್ನು ಭಾರತದಲ್ಲಿ ಹಿಂದೂಗಳ ನಡುವೆಯೇ ಕುಳಿತು ನೋಡುವುದು ಸರಿ; ಯಾವಾಗಲಾದರೂ ದೂರದ ಅಬುದಾಭಿಯಲ್ಲಿ, ದುಬೈನಲ್ಲಿ, ಅಮೆರಿಕಾ – ಲಂಡನ್ನುಗಳಲ್ಲಿ ನೋಡುವುದನ್ನು ಊಹಿಸಿಕೊಳ್ಳಿ! ಎದೆ ಒಡೆದುಹೋಗುತ್ತದೆ. ಪಾಕಿಸ್ತಾನಿ ಗೆಳೆಯನೊಡನೆ ನೋಡುವವನ ಕಥೆಯಂತೂ ಅಸಹನೀಯ. ಹಿಂದೂ ಪ್ರಧಾನಿಯಾಗಿ ಯೋಗ, ಭಗವದ್ಗೀತೆಗಳನ್ನು ಜಗತ್ತಿಗೆ ಹಂಚುತ್ತ ನಡೆದಿರುವ ನರೇಂದ್ರ ಮೋದಿಯವರ ಓಟಕ್ಕೆ ಇದು ಎಂತಹ ಸ್ಪೀಡ್ ಬ್ರೇಕರ್ ಆಗಬಹುದೆಂದು ಆಲೋಚಿಸಿ. ಹಿಂದೂ ಜಾಗೃತವಾಗಲಿ. ಒಗ್ಗಟ್ಟಾಗಿ ನಿಲ್ಲಲು ಇದು ಸಕಾಲ. ನಮ್ಮ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ನಾವೇ ಬೀದಿಗೆ ಬರೋಣ. ಅಮೀರ್ ಖಾನ್ ತನ್ನ ಸಮುದಾಯವನ್ನು ತಿದ್ದುವ ಹೊಣೆ ಹೊತ್ತರೆ ಸಾಕು!
ವಿಶ್ವರೂಪಮ್‌ನ ವಿರುದ್ಧ ಹೋರಾಡಿದ ಮುಸಲ್ಮಾನರ ಕುರಿತು ನನಗೆ ಹೆಮ್ಮೆಯಿದೆ. ತಮ್ಮ ಪಂಥಕ್ಕೆ ಆಘಾತವಾಗುವ ಸತ್ಯವನ್ನೂ ಅವರು ಸಹಿಸಲಾರರು; ನಾವು ಸುಳ್ಳನ್ನೂ ಚಪ್ಪಾಳೆ ತಟ್ಟಿ ಆನಂದಿಸುತ್ತೇವೆ.
ಬದಲಾಗೋದು ಬೇಡವೆ?

19 thoughts on “ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

 1. ನಮ್ಮ ನಿಜವಾದ ಶತ್ರುಗಳು ಡೋಂಗಿ ಸೆಕ್ಯೂಲರ್ ಹಿಂದುಗಳೇ, ಇವರ ಕುಮ್ಮಕ್ಕಿನಿಂದಲೇ ಈ ಯವನರು ಮತ್ತು ಮ್ಲೇಚ್ಛರು ಹೀಗಾಡುತ್ತಿರುವುದು. ಮೊದಲು ಇವರನ್ನು ಸರಿದಾರಿಗೆ ತಂದರೆ ಹೊರಗಿನವರನ್ನು ಅನಾಯಾಸವಾಗಿ ನಿಗ್ರಹಿಸಬಹುದು 😦

 2. “…………………ನಮ್ಮನ್ನು ಚೆನ್ನಾಗಿ ಝಾಡಿಸಿದ ಮತ್ತೊಬ್ಬ ವ್ಯಕ್ತಿ ಇರುವುದು ಅಸಾಧ್ಯ. ‘ಕೆಲವು ಸಾವಿರ ಢೋಂಗೀ ಸಾಧುಗಳು, ಒಂದಷ್ಟು ಲಕ್ಷ ಢೋಂಗೀ ಸಮಾಜ ಸುಧಾರಕರು ಈ ಧರ್ಮವನ್ನು ಹಾಳು ಮಾಡಿಬಿಟ್ಟಿದ್ದಾರೆ’ ಎಂದು ಅವರು ಹೇಲುವುದರ ಹಿಂದೆ ಗೂಢಾರ್ಥ ಅಡಗಿದೆ.”

  “ಹೇಳುವುದರಲ್ಲಿ” ಹೋಗಿ “ಹೇಲುವುದರಲ್ಲಿ” ಆಗಿದೆ. ದಯವಿಟ್ಟು ತಿದ್ದಿ.

  ಸಮಯೋಚಿತ ಅಂಕಣ. ಆದರೂ ವಿಶ್ವರೂಪ೦ ನಲ್ಲಿ ಆಕ್ಷೇಪಾರ್ಹವಾದುದ್ದು ಏನು ಎಂದು ತಿಳಿಯಲಿಲ್ಲ

 3. ಸ್ನೇಹಿತ ಚಕ್ರವರ್ತಿಯವರೆ, ನಾನೂ ಕೂಡ ಪಿ .ಕೆ ಸಿನೆಮಾ ನೋಡಿದ್ದೇನೆ ; ನೋಡುತ್ತಾ ನನಗೆ ಕಾಡಿದ ಮೊದಲನೇ ಪ್ರಶ್ನೆ ಏನೆಂದರೆ ಇದು ನಿಜಕ್ಕೂ ಚಲನ ಚಿತ್ರ ಕಲೆಯೇ ? ಯಾವ ಕೋನದಲ್ಲಿ ರಾಜ್ ಕುಮಾರ್ ಹಿರಾನಿಗೆ ಇದರಲ್ಲಿ ಕಥಾವಸ್ತು ಕಂಡಿದೆ ? ಆಯ್ತು, ಆದರೂ ವೈಚಾರಿಕ ದೃಷ್ಟಿಕೋನ ದಿಂದಲೇ ನೋಡಿದರೆ ಅಲ್ಲಿ ಆತ ಎತ್ತುವ ಪ್ರಶ್ನೆಗಳು ಪ್ರಶ್ನೆಗಳೇ ಅಲ್ಲ !! ದೇವಳದ ಒಳಗೆ ಹೋಗುವ ವ್ಯಕ್ತಿಗೆ ಹಿರಾನಿ ಎತ್ತುವ ಪ್ರಶ್ನೆಗಿಂತಲೂ ಹೆಚ್ಚಿನ ಆಲೋಚನೆ ಎಂದಿಗೂ ಬರಲೇ ಇಲ್ಲವೇ ? ಈ ದೇಶದ ಅವಿದ್ಯಾವಂತ ಹಿಂದೂ ವ್ಯಕ್ತಿಗೂ ಗೊತ್ತು ತಾನು ದೇವರ ಭಕ್ತಿ ಮಾಡುವುದು “ನಂಬಿಕೆ” ಎನ್ನುವ ಮನುಷ್ಯ ಮೂಲ ಪದಾರ್ಥ ದಿಂದಲೇ ಹೊರತು ಆಲೋಚನಾ ಕಾರಣಕ್ಕಲ್ಲ ಎಂದು !! ವೈಚಾರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಚಲನ ಚಿತ್ರ ಕಲೆಯನ್ನೇ ಅತೀ ಕೀಳುಮಟ್ಟಕ್ಕೆ ಒಯ್ದ ಚಿತ್ರವಿದು !! ಇಲ್ಲಿ ತಾತ್ವಿಕವಾಗಿ ಅಮೀರ್ ಖಾನನಿಗೆ ಎಲ್ಲರೂ ಕೇಳಬೇಕಾದ್ದು ” ವಿಶ್ಲೇಷಣೆ ಯಾವುದನ್ನೂ ಮಾಡಬೇಕು ? ಚಲನ ಚಿತ್ರ ಕಲೆಯನ್ನು ಸರ್ಕಸ್ ಮಟ್ಟಕ್ಕಿಂತ ಕೆಳಗೆ ಹೊಯ್ದು ಯಾವುದೇ ” ತಾತ್ವಿಕ ತಳ ಬುಡವಿಲ್ಲದ ಕಥಾ ವಸ್ತು ಸೃಷ್ಟಿದಕ್ಕೋ ಅಥವಾ ಮಾನವ ತತ್ವಜ್ನಾನದಲ್ಲಿ ತನ್ನದೇ ಅಸ್ತಿತ್ವ ಉಳ್ಳ ” ನಂಬಿಕೆ” ಪದಾರ್ಥದ ಮೇಲಿನ ಹಿಂದೂ ತತ್ವಕ್ಕೋ ? ವಿಚಿತ್ರ ಏನೆಂದರೆ ಕಥೆಯಲ್ಲಿ ಬರುವ ಎಲ್ಲ ವಿಚಾರಕ್ಕೂ ತನ್ನದೇ ಆದ ಆಳ ತತ್ವಜ್ಞಾನ ಮತ್ತು ಸೈಕಾಲಜಿ ಆಧಾರಗಳು ಇವೆ !! ಆತ ಚತುರತೆ ಇಂದ ಅವೆಲ್ಲವನ್ನೂ ಹಾಗೆ ಸಾವರಿಸಿ, ವಿಕ್ಷಕ ತನ್ನಲ್ಲಿ ತಾನು ಮುಂದಿನ ಹಂತ ಪ್ರಶ್ನೆ ಮಾಡುವಷ್ಟರಲ್ಲಿ ನಿರ್ದೇಶಕ ಅದೇ ವಿಚಾರವನ್ನು ಹಾಸ್ಯಕ್ಕೆ ತಿರುಗಿಸುತ್ತಾನೆ ; ಕಾರಣ ಇಷ್ಟೇ , ಅಲ್ಲಿ ತತ್ವಜ್ಞಾನದ ಮಹತ್ತರ ಪ್ರಶ್ನೆಗಳಿಗೆ ನಿರ್ದೇಶಕ ಸಿಕ್ಕಿಕೊಳ್ತಾನೆ ; ಹಾಗೇನಾದರೂ ಆತ ಅದನ್ನು ಮುಟ್ಟಲು ಹೋದರೆ ವೈಜ್ಞಾನಿಕವಾಗಿ ಯಾವುದು ವಾಸ್ತವ ? ಎನ್ನುವ ಮತ್ತೊಂದು ಗಂಬೀರ ಪ್ರಶ್ನೆಗೆ ಸಿಕ್ಕಿ ಕೊಳ್ತಾನೆ !!.. ಬೇಕಂತಲೇ ಬಾಬಾ ಪಾತ್ರವನ್ನು ಆತ್ಮ ಜ್ಞಾನ ವಿಲ್ಲದ ವ್ಯಕ್ತಿಯ ಹಾಗೆ ಯಾರು ಬೇಕಾದರೂ ಕಥೆ ಬರೆಯ ಬಹುದು ..ಆದರೆ ಅದು ಕಥೆಗೆ ಮಾತ್ರ ಸೀಮಿತ ಎಂದು ಕಥೆಯಲ್ಲೇ ನಿರೂಪಿಸಬೇಕಾಗುತ್ತದೆ. ಅಮೀರ್ ಖಾನ್ ಪಾತ್ರದಾರಿ ಹಿಂದೂ ಇತಿಹಾಸ, ವೇದ, ಕಲಾ, ಅಂತರ್ಜ್ಞಾನ, ಸತ್ವ ವಿಚಾರಗಳ ಹೇಳದೆ ಸಾಮಾಜಿಕ ಪರಿಹಾರ ಹೇಗೆ ಹೇಳಲು ಸಾಧ್ಯ ? ಒಂದು ಸರಿ ಇಲ್ಲ ಎಂದರೆ ಸರಿಯಾದುದು ಯಾವುದು ಎಂದು ಹೇಳಬೇಕೇ ಹೊರತು ; ಹಾಸ್ಯಕ್ಕೆ ತಿರುಗಿಸುವುದಲ್ಲ !! ಮತ್ತೊಂದು ಗಂಭೀರ ವಿಚಾರ ಏನೆಂದರೆ ಈ ತಲೆ ತಿರುಕ ಕಲಾವಿದರು ಹಿಂದೂ ಎನ್ನುವ ಪ್ರಚಲಿತ ಹಾಗು ಜನಪ್ರಿಯ ವಿಚಾರವನ್ನೇ ಬಳಸಿ ಪ್ರಚಾರ ಗಿಟ್ಟಿಸಿ ಅದರ ಅನ್ನ ತಿನ್ನುತ್ತಾರೆ ; ಅನಾಮತ್ತಾಗಿ ಯಾವುದೇ ಕರ್ಚು ವೆಚ್ಚವಿಲ್ಲದೆ ” ಧರ್ಮ” ಎಂಬ ವಿನ್ಯಾಸ ನಾಲಯಾಕ್ ಜನಕ್ಕೆ ದುಡ್ಡು ಮಾಡಿ ಕೊಟ್ಟು ಬಿಟ್ಟಿತು. ಎಲ್ಲವು ಕಳ್ಳ ಪ್ರಚಾರ ತಂತ್ರಗಳಿಂದ ಮಾಡುವ ದರಿದ್ರ ನಾಟಕಗಳು ಇವು ಹೊರತು ಸ್ವಚ್ಛ ಕಲೆಯಂತೂ ಅಲ್ಲ !! ಇಲ್ಲಿ ನಿರ್ದೇಶಕ ಮತ್ತು ನಾಯಕ ಆಲೋಚನಾ ಕ್ಷಯದಿಂದ ಬಳಲುವುದಲ್ಲದೆ ಸಮಾಜಕ್ಕೂ ಅದನ್ನು ಹರಡುತ್ತಾ ಮುಂದುವರೆದಿದ್ದಾರೆ. ಬಾಬಾನ ಜಾಗದಲ್ಲಿ ಒಬ್ಬ ವೇದಾಧ್ಯಯನ ಮಾಡಿದ ಪಂಡಿತ ಇದ್ದಿದ್ದರೆ ಚಿತ್ರದ ನಾಯಕ ನಿಜವಾಗಿ ಅನ್ಯಗ್ರಹಕ್ಕೆ ಬಟ್ಟೆ ಇಲ್ಲದೆ ಒಡಬೇಕಾಗುತ್ತಿತ್ತು. ಕೆಟ್ಟ ಚಲನ ಚಿತ್ರವನ್ನು ಮೂರು ಕಾಸಿಗೆ ಬಾರದ ಗಾಳಿಯಲ್ಲಿ ಕೈ ಬೀಸುವಂತ ಮಾತುಗಳಿಂದಲೇ ಸಾಮಾಜಿಕ ಪರಿಹಾರ ಎಂಬ ಸುಳ್ಳು ಹೇಳಿದ ಇಂತಹ ಕಲಾವಿದರಿಂದ ಸಮಾಜಕ್ಕೆ ಎಂದಿಗೂ ಕೆಟ್ಟದೇ. ಹಿಂದೂ ಬಗ್ಗೆ ಚಲನ ಚಿತ್ರ ನೋಡಿ ತಿಳಿಯುವುದಲ್ಲ ; ಹಿಂದೂ ಬಗ್ಗೆ ತನ್ನ ತಾನು ಪ್ರಶ್ನೆ ಮಾಡಿ ಶ್ರಮ ಅಧ್ಯಯನದಿಂದ ತಿಳಿಯಬೇಕು ಯುವ ಜನತೆ.

 4. ಎಲ್ಲಾ ಚರಾಚರ ವಸ್ತುಗಳ ಹಿಂದೆ ದೈವೀಕತೆಯನ್ನು ನೋಡುವ ಸಮುದಾಯವೇ ಹಿಂದೂ. ಆದರೆ ಈ ಭಾವ ಉಳಿದಿರುವುದಾದರೂ ಎಲ್ಲಿ?. ಪ್ರಸ್ತುತ ಹಿಂದುತ್ವ ತಿದ್ದಲ್ಪಡುವಷ್ಟು ಓರೆಯಾಗಿಲ್ಲವೆಂಬುದು ನಿಮ್ಮ ಅಭಿಮತವೇ?

 5. The beauty of Hinduism is that it is not an organized religion at all. It’s a collection of beliefs and faiths that have come to be known as “Sanatana Dharma”. In fact, Sanatana Dharma comprises of so many contradictory and intertwined philosophies like Dwaita, Adwaita and Vishishtadwaita. In essence, one philosophy says god and man are different and the other says god is within man. Technically, all this is left to interpretation and the beauty of Sanatana Dharma is that it says “Take one, take all, take what you want and leave what you don’t.” It doesn’t say you have to pray 5 times in a day, otherwise you’ll burn in hell. It’s what I call an “Open Source Religion”.

  Now, one may be tempted to argue that Swamis, Sanyasis only help you understand this Dharma. They may and they may not. They may be helpful but they are not absolutely essential. PK is saying “Cut out the middle man. Have a direct connection with god.” That’s not an insult to Hinduism. It’s what Hinduism is all about.

 6. Sir,This one of the best article I have read in recent years.Sorry for writing in English, mobile doesn’t support kannada language writing.However you criticised Mr. Aamir Khan for his movie, can you please answer my questions:1. How many Sadhu we have in India, they are not fitted for the job?2. How many traditional followings‎ (aacharanegalu) we are following they are not supported by â€Žus only.  Thanks & Regards,Sameer S MBrahmin Vaishnava. From: ನೆಲದ ಮಾತುSent: Monday 29 December 2014 2:39 PMTo: cercit@gmail.comReply To: ನೆಲದ ಮಾತುSubject: [New post] ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

  a:hover { color: red; } a { text-decoration: none; color: #0088cc; } a.primaryactionlink:link, a.primaryactionlink:visited { background-color: #2585B2; color: #fff; } a.primaryactionlink:hover, a.primaryactionlink:active { background-color: #11729E !important; color: #fff !important; }

  /* @media only screen and (max-device-width: 480px) { .post { min-width: 700px !important; } } */ WordPress.com

  Chakravarty posted: “ಹಿಂದುವನ್ನು ಹಿಂದು ಧರ್ಮದ ಆಚರಣೆಯನ್ನು ಅವಹೇಳನ ಮಾಡೋದು ಇಂದು ನೆನ್ನೆಯ ಪ್ರಯತ್ನವಲ್ಲ. ಶತಶತಮಾನದಿಂದಲೂ ಇಸ್ಲಾಮಿನ, ಕ್ರಿಸ್ತನ ಕಟ್ಟರ್ ಅನುಯಾಯಿಗಳು ಹಿಂದೂ ಧರ್ಮದ ನಾಶಕ್ಕೆ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಒಮ್ಮೆ ಕತ್ತಿ ಹಿರಿದು, ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಹೆದರಿಸಿ, ಒಮ್ಮೆ ಸೇವೆ”

 7. First of all credit to shri Sulibele sir on awesome write up of this beautiful blog .. And as movie ‘pk’ concerned , Amir Khan n company ( including director Rajkumar ) has always been enjoying the false representation of cultural practices. Money making is their main MOTO of life. Hypocracy is flowing in their blood. But we should not give much importance to such ppl. And pls do update the blog with ur enlightening thoughts with timely presentation of facts.

 8. Truth is always bitter….I also watched pk but i didn’t found anything wrong in this movie. not only me majority of people. Only least peoples opposing this movie because it is exposing the truth. Can anybody explain which point of the movie is wrong? It exposed dongi sadhus so called God mans like Asaram, Nityananda,Chandra swamy etc.
  It should have also exposed rituals of Nagha Sadhus or Aghoris(whom you are thinking Spirit of India) like Shava sambhoga (Intercourse with dead bodies) and Shava bojana (Eating dead bodies) if you want to see then search in youtube
  We should worship our creator not the creature
  I have some more points to say which is not shown in this movie.
  *Hindus believing in mythology means they trust stories like ramayana and mahabharata Rama , Krishna,shiva etc. which are not historical persons if so can you prove me one live example SUN in hindu mythology Sooryadeva according to hindu belief sun is god but fact is it is only a star.
  *Hindus worship shiva linga most of hindus dont know what is shiva linga. Shiva linga means organ (shishna) of shiva and now hindus telling thet is Atma ling means Soul organ!!!! does soul have organ? When soul does not have body how did this linga comes? funny thing is shiva linga is also worshipped with vegina (yoni) of parvati. Height of foolishness!!!!
  Lot of things to expose but not now
  Kindly login to YouTube and search ummer Rao and girish neat isaq kattar hindus who converted to Islam and know why. Wake up brothers Worship the creator not his creation.

 9. Hi mr. chakravarthi sulibele, i use to get inspired by watching your marvelous speech on country and i was thrilled many times. Nimma maatinalli and baravanigeyalli antaha dhum ide. But before commenting on Aamir khan , neevu story writer and dialogue writer and directors Hindugalu anta nenpu ittukondu maatadi. Y r u blaming aamir? he is just an actor, ide taraha “Oh my god” anta movie bandaga Akshay kumar mele yaake bareyalilla? because he was hindu? yella sannivesha nu dharma da mukhavada haaki nodbedi. I am also hindu, i respect my religion but nimmantha olleya vicharavantaru intaha blind statements kodta , samaajadalli huli hinduva prayatna maadabedi. Ya i agree PK movie li kelavu scenes hindugalige besara tarisuttave, aadare adakke kaarana agiruva hirani na baiyodu bittu aamir khan na baiyodu artha unta? think madi.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s