ಷಡ್ಯಂತ್ರಕ್ಕೆ ಹುಡುಕಬೇಕಿದೆ ಪರಿಹಾರ ತಂತ್ರ

( ಹೊಸ ದಿಗಂತ ಅಂಕಣ ~ ೪ )
ಹಾಗೆ ನಂಬಿಕೊಂಡ ಅನೇಕರಲ್ಲಿ ನಾನೂ ಒಬ್ಬ. ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸುವುದು ಶುದ್ಧ ಪ್ರೇಮವೇ. ಆನಂತರ ಅದಕ್ಕೆ ಮತೀಯ ಆಲೋಚನೆಗಳು ಮೆತ್ತಿಕೊಳ್ಳುತ್ತವೆ ಎಂದುಕೊಂಡಿದ್ದೆ. ನನ್ನ ನಾಲ್ಕು ದಿನಗಳ ಕೇರಳ ಪ್ರವಾಸ ನನ್ನೆಲ್ಲ ಭ್ರಮೆಗಳನ್ನು ಕಳಚಿ ಬಿಸಾಡಿತು.
ಕೇರಳ ಕಟ್ಟರ್ ಮುಸಲ್ಮಾನರ ತವರೂರು. ಈಗಾಗಲೇ ಅಲ್ಲಿ ಕಾಲು ಕೆದರಿ ಯುದ್ಧಕ್ಕೆ ನಿಲ್ಲುವಷ್ಟು ಸಂಖ್ಯೆಯ ಮುಸಲ್ಮಾನರು ನೆಲೆಯೂರಿಬಿಟ್ಟಿದ್ದಾರೆ. ಸರಿಯಾಗಿ ಹುಡುಕಿದರೆ ಬಾಂಗ್ಲಾ ದೇಶೀಯನೇನು, ಪಾಕ್ ಮುಸಲ್ಮಾನರು ಸಿಕ್ಕಿಬಿದ್ದರೂ ಅಚ್ಚರಿಯಿಲ್ಲ. ನಿಧಾನವಾಗಿ ವ್ಯಾಪಾರ ವಹಿವಾಟುಗಳ ಮೇಲೆ ಹಿಡಿತ ಸಾಧಿಸುತ್ತ, ಕೇರಳದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಜಮೀನು ಖರೀದಿಸಿ ಭದ್ರ ಬುನಾದಿ ಊರಿಬಿಟ್ಟಿದ್ದಾರೆ. ಉಳಿದಿರುವ ಹಿಂದೂಗಳಲ್ಲಿಯೂ ಬಲವಾದ ಎರಡು ಗುಂಪುಗಳಿವೆ. ಒಂದು ಬಲವಾದದ್ದು! ದೇವರ ಪೂಜೆ ಮಾಡುತ್ತ, ಹಾಳಾಗುತ್ತಿರುವ ಸಂಸ್ಕೃತಿ ಕಂಡು ಹಲ್ಲು ಕಡಿಯುತ್ತಿರುವಂಥದ್ದು; ಮತ್ತೊಂದು ಎಡವಾದದ್ದು! ಹಿಂದೂವಾದರೂ ಹಾಗೆ ಹೇಳಿಕೊಳ್ಳಲು ನಾಚುವಂಥದ್ದು. ಅಧಿಕಾರಕ್ಕಾಗಿ ಧರ್ಮ, ಸಂಸ್ಕೃತಿ, ಪರಂಪರೆಗೆ ಕೊಳ್ಳಿ ಇಡುವಂಥದ್ದು.
hindus_muslim
ಹಾಗಂತ ಕೇರಳದಲ್ಲಿ ಸಂಪ್ರದಾಯ, ಆಚರಣೆಗಳಿಗೆ ಕೊರತೆಯೇ ಇಲ್ಲ. ವಿಶಾಲವಾದ ದೇಗುಲಗಳು, ಸ್ವಚ್ಛ – ಸುಂದರ ಆವಾಸ, ಎಲ್ಲ ಬಗೆಯ ಕಠಿಣ ವ್ರತ ನಿಯಮಗಳೆಲ್ಲವೂ ಸಾಕಷ್ಟಿವೆ. ಇವುಗಳ ನಡುವೆಯೇ ಇವನ್ನೆಲ್ಲ ವಿರೋಧಿಸುವ ಜಾತಿ – ಸಮುದಾಯಗಳೂ ಇವೆ. ಬಹುಶಃ ದೀರ್ಘಕಾಲ ಕೆಲವು ಜಾತಿ ಪಂಥಗಳನ್ನು ಅಸ್ಪೃಶ್ಯವೆಂದು ಜರಿದು, ಮುಟ್ಟದಿರುವ, ದೂರ ತಳ್ಳುವ ಪದ್ಧತಿ ಆಚರಿಸಿದ್ದರಿಂದಲೋ ಏನೋ ಇಂದು ಭಯದ ವಾತಾವರಣವೊಂದು ಅಲ್ಲಿ ಮಡುಗಟ್ಟಿದೆ.
ಸ್ವಾಮಿ ವಿವೇಕಾನಂದರು ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಕರೆದು, ಈ ರೀತಿಯ ಆಚರಣೆಗಳಿಗೆ, ಜನರನ್ನು ನಿರ್ಲಕ್ಷಿಸಿದ್ದಕ್ಕೆ ಸೂಕ್ತ ಪರಿಣಾಮ ಎದುರಿಸಲಿದ್ದೀರೆಂದು ಎಚ್ಚರಿಕೆ ನೀಡಿದ್ದರಲ್ಲ, ಅದು ಸತ್ಯವಾಗಿದೆ. ಯಾರು ಅಸ್ಪೃಶ್ಯರೆನಿಸಿಕೊಂಡು ದೂರ ಉಳಿದಿದ್ದರೋ ಅವರ ಕೋಪ ಹಿಂದೂ ಧರ್ಮದ ವಿರುದ್ಧ ತಿರುಗಿದೆ. ಇದರ ಲಾಭ ನಿಸ್ಸಂಶಯವಾಗಿ ಮುಸಲ್ಮಾನರಿಗೆ ಮತ್ತು ಕ್ರಿಶ್ಚಿಯನ್ನರಿಗೇ! ಮತಾಂತರ, ಲವ್ ಜಿಹಾದ್ ಪ್ರಕರಣಗಳು ಕೇರಳದಲ್ಲಿಯೇ ಹೆಚ್ಚು ಕಂಡುಬರುತ್ತಿರುವುದಕ್ಕೆ ಇದೇ ಕಾರಣ.
ಮುಸಲ್ಮಾನ ಹುಡುಗನ ಪ್ರೇಮ ಪಾಶಕ್ಕೆ ಸಿಲುಕಿ ಪಾರಾಗಿ ಬಂದ ಹೆಣ್ಣುಮಗಳೊಬ್ಬಳೊಂದಿಗೆ ಒಂದೆರಡು ಗಂಟೆ ಮಾತನಾಡುವ ಅವಕಾಶ ಸಿಕ್ಕಿತ್ತು. ಆಕೆ ಪ್ರೀತಿಸಿದ ಹುಡುಗ ಅವಳಿಗಿಂತ ಸಾಕಷ್ಟು ದೊಡ್ಡವ, ನೋಡಲು ಬಲು ಸುಂದರನೇನಲ್ಲ. ‘ನಿಮ್ಮಿಬ್ಬರ ನಡುವೆ ನಿಜವಾದ ಪ್ರೀತಿ ಇತ್ತಾ?’ ಅಂದರೆ, ‘ಆಗ ಹಾಗನ್ನಿಸಿತ್ತು. ಈಗ ಸತ್ಯ ಅರಿವಾಯ್ತು’ ಅಂದಳು ಹುಡುಗಿ. ಸತ್ಯ ಸರಿಯುವ ಕುತೂಹಲ ನನಗಂತೂ ಇತ್ತು. ಈಕೆಗೆ ಸಹಜವಾಗಿ ಪರಿಚಯವಾದ ಆ ಹುಡುಗ ಮಾತನಾಡುತ್ತಾ ಆಡುತ್ತಾ ‘ನಿಮಗೆಷ್ಟೊಂದು ದೇವರು! ಕಷ್ಟ ಕಾಲದಲ್ಲಿ ಅದ್ಯಾರನ್ನು ಕರೆಯುತ್ತೀ?’ ಎಂದ. ಈಕೆಗೆ ಗಾಬರಿ. ಮೂವತ್ಮೂರು ಕೋಟಿ ದೇವರಲ್ಲಿ ಕರೆಯುವುದು ಯಾರನ್ನು? ಆತ ಕೇಳಿದ. ‘ನೀನು ಸಮಸ್ಯೆಯಿಂದ ಪಾರಾದರೆ ಉಳಿಸಿದ್ದು ಯಾರೆಂದು ಗುರುತಿಸುವೆ?’ ಈಕೆ ಗೊಂದಲಕ್ಕೆ ಬಿದ್ದಳು. ದೇವರ ಕೋಣೆಗೆ ಹೋಗುವುದೇ ಅಸಹ್ಯ ಎನಿಸಿತು. ನಮ್ಮ ದೇವರುಗಳನ್ನು ಪೂಜಿಸುವುದಿರಲಿ, ನೋಡಲೂಬಾರದು ಎಂದುಕೊಂಡಳು. ಸಮಯ ನೋಡಿ ಆ ಹುಡುಗ ಆಕೆಯನ್ನು ಮಸೀದಿಗೊಯ್ದುಬಿಟ್ಟ. ಅಲ್ಲಿ ಇದಕ್ಕೋಸ್ಕರವೇ ತರಬೇತಿ ಪಡೆದಿದ್ದ ಅನೇಕರು ಹಿಂದೂ ಧರ್ಮದಲ್ಲಿ ಅವರಿಗೆ ಅರ್ಥವಾಗದ ಪ್ರಶ್ನೆಗಳನ್ನು ಇವಳಿಗೆ ಕೇಳಿದರು. ಧರ್ಮಜ್ಞಾನದ ಕೊರತೆಯಿದ್ದ ಈ ಹುಡುಗಿ ಪೆಚ್ಚಾದಳು. ಮಸೀದಿಗೆ ನಿತ್ಯ ಹೋಗಲಾರಂಭಿಸಿದಳು. ಮನೆಯವರಿಗೋ, ಈಕೆಯ ಮೇಲೆ ಕರಗದ ವಿಶ್ವಾಸ. ಇವಳು ಕುಂಕುಮ ಇಡುವುದನ್ನು ಬಿಟ್ಟಾಗ ಒಂದಷ್ಟು ಮಾತಿನ ಚಕಮಕಿ ನಡೆದಿದ್ದು ಬಿಟ್ಟರೆ ಮತ್ತೇನಿಲ್ಲ. ಆ ಹುಡುಗಿ ಮೌಲ್ವಿಯ ಮಾತಿಗೆ ಮರುಳಾಗಿ ತನ್ನ ಇಡಿಯ ದೇಹವನ್ನು ಸಾಧ್ಯವಾದಷ್ಟು ಮುಚ್ಚಿಕೊಂಡು, ಇತರರು ಕೆಟ್ಟ ದೃಷ್ಟಿಯಿಂದ ನೋಡಬಾರದೆಂದು ಭಾವಿಸುತ್ತಿದ್ದಳಂತೆ. ಬುರ್ಖಾಕ್ಕೆ ಶರಣಾಗುವುದೊಂದು ಬಾಕಿ. ಮಸೀದಿಯ ವ್ಯವಸ್ಥಿತ ಜಾಲ ಆಕೆಯನ್ನು ಇಸ್ಲಾಮಿನ ಉನ್ನತ ಅಧ್ಯಯನಕ್ಕೆಂದು ‘ಪೊನ್ನಾಣಿ’ಗೆ ಒಯ್ದು ಬಿಟ್ಟಿತು. ಆಗ ಮನೆಯಲ್ಲಿ ಅಲ್ಲೋಲಕಲ್ಲೋಲ. ತಂದೆ ತಾಯಿಗೆ ಆಕಾಶವೇ ಕಳಚಿ ಬಿದ್ದಂತಾಯ್ತು.
ಅಲ್ಲಿಯವರೆಗೆ ಹಿಂದೂ ಸಂಘಟನೆಯ ತರುಣರನ್ನು ಅಸಹ್ಯ ಭಾವದಿಂದ ಕಾಣುವ ಪೋಷಕರಿಗೆ ಸಂಘಟನೆ ನೆನಪಾಗೋದೇ ಆವಾಗ. ಹುಡುಗರು ಹಿಂದೆ ಬಿದ್ದು ಆಕೆಯನ್ನು ಕೋರ್ಟಿನವರೆಗೂ ತಂದರು. ತೋಟದ ಮನೆಯಲ್ಲಿ ತಾಯಿಯೊಂದಿಗೆ ಕೂಡಿ ಹಾಕಿದರು. ಅಮ್ಮನ ಕಣ್ಣೀರಿಗೆ ಮಗಳು ಕರಗಿದಳಾದರೂ ಒಳಮನಸ್ಸು ಪೊನ್ನಾಣಿಗೆ ಓಡಿಹೋಗಲು ತಹತಹಿಸುತ್ತಿತ್ತು. ಉಪಾಯವಾಗಿ ಮಿತ್ರರೆಲ್ಲ ಸೇರಿ ಎರ್ನಾಕುಲಂ ನ ಆರ್ಷ ವಿದ್ಯಾಲಯಕ್ಕೆ ಹುಡುಗಿಯನ್ನೊಯ್ದು ಬಿಟ್ಟರು.
ಇಲ್ಲಿ ಕೆಲವು ನುರಿತ ವಿದ್ವಾಂಸರು ಈ ರೀತಿ ದಾರಿ ತಪ್ಪಿದ ಹಿಂದೂಗಳನ್ನು ಮರಳಿ ಮಾರ್ಗಕ್ಕೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸಿಕೊಡುವುದರ ಜೊತೆಗೆ ಅನ್ಯ ಮತಗಳ ನ್ಯೂನತೆಯನ್ನು ಸಮರ್ಥವಾಗಿ ಮನದಟ್ಟು ಮಾಡುತ್ತಾರೆ. ದಿನಗಟ್ಟಲೆ ಸಂವಾದಗಳು ನಡೆಯುತ್ತವೆ. ಮಸೀದಿಯಲ್ಲಿ ಕುಳಿತು ಮೌಲ್ವಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ಸಿಗುವುದಲ್ಲದೇ, ತಾನು ಅನುಸರಿಸುವ ಧರ್ಮದ ಕುರಿತು ಹೊಸ ಹೊಳಹು ಮೂಡಲಾರಂಭಿಸುತ್ತದೆ. ಅಲ್ಲಿಗೆ, ಜೀವಮಾನದಲ್ಲಿ ಅವರೆಂದಿಗೂ ಹಿಂದೂ ಧರ್ಮ ಬಿಟ್ಟು ಹೋಗುವ ಸಾಹಸ ಮಾಡಲಾರರು!
ಈ ಹುಡುಗಿಗೂ ಹಾಗೆಯೇ ಆಯ್ತು. ಚರ್ಚೆ – ಸಂವಾದಗಳಿಂದ ಅವಳ ಮನಸ್ಸು ಹಗುರವಾಯ್ತು. ಅವಳೀಗ ಸಂಕಲ್ಪಬದ್ಧಳಾದಳು. ಪೊನ್ನಾಣಿಯಲ್ಲಿ ತನ್ನೊಂದಿಗೆ ಇಸ್ಲಾಮ್ ಅಪ್ಪಿಕೊಂಡ ನಲ್ವತ್ತಕ್ಕೂ ಹೆಚ್ಚು ಹೆಣ್ಣುಮಕ್ಕಳ ಚಿತ್ರ ಅವಳ ಕಣ್ಮುಂದೆ ಹಾದುಹೋಯ್ತು. ಇಂಥಾ ತರುಣ ತರುಣಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವಲ್ಲಿ ಕಟಿಬದ್ಧಳಾದಳು. ಮದುವೆಯಾಗಲಾರೆನೆಂದು ಆಕೆ ಅದಾಗಲೇ ನಿರ್ಧರಿಸಿಯಾಗಿತತ್‌ಉ. ತನ್ನ ಬದುಕು ಏತಕ್ಕಾಗಿ ಎಂಬ ಸ್ಪಷ್ಟ ದೃಷ್ಟಿ ಆಕೆಗೆ ದಕ್ಕಿತ್ತು. ಆಕೆಯನ್ನು ಕಂಡಾಗ ನನ್ನ ಮನಸ್ಸಿಗೆ ತಂಪೆರೆದಂತಾಯ್ತು.
ಆಕೆಯೇ ಹೇಳಿದ್ದು; ಹೀಗೆ ಪ್ರೀತಿಯ ಸೋಗಿನಲ್ಲಿ ಬರುವ ಅನ್ಯಮತೀಯನ ಹಿಂದೆ ಅವನ ಇಡಿಯ ಸಮಾಜವೇ ನಿಂತಿರುತ್ತದೆ. ಇಂತಿಂಥ ಜಾತಿಯ ಹೆಣ್ಣುಮಗುವನ್ನು ಒಲಿಸಿ ತಂದರೆ ಇಂತಿಷ್ಟು ಹಣವೆಂದು ನಿಗದಿ ಬೇರೆ! ಅದರಲ್ಲೂ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ಬೇಡಿಕೆ ಹೆಚ್ಚು. ಮದುವೆಯಾದ ಮೇಲೆ ಆಕೆ ತನ್ನ ಮನೆಯ ಇತರ ಹೆಂಗಸರಂತೆ. ಆಕೆಗೆ ಗೌರವವಿಲ್ಲ, ಆದರವೂ ಇಲ್ಲ!
ಕೇರಳ ಈ ಸಮಸ್ಯೆಯಿಂದ ಧಗಧಗ ಉರಿಯುತ್ತಿದೆ. ಕಾಸರಗೋಡಿನಿಂದ ಶುರು ಮಾಡಿದರೆ, ದಕ್ಷಿಣ ತುದಿಯವರೆಗೂ ಪ್ರತಿ ಜಿಲ್ಲೆಯೂ ಈ ಸಮಸ್ಯೆಯಿಂದ ಬಳಲುತ್ತಲೇ ಇದೆ. ಇದನ್ನು ಎದುರಿಸಲೆಂದೇ ಈಗೀಗ ಹಿಂದೂ ಸಮಾಜ ಒಟ್ಟಾಗಿದೆ. ಮನೆ ಮನೆಗಳು ಧಾರ್ಮಿಕ ಶಿಕ್ಷಣಕ್ಕೆ ಮುಂದಾಗಿವೆ. ಸಂಘಟನೆಗೆ ಒತ್‌ತು ಕೊಡುತ್ತಿವೆ. ಎಡಪಂಥೀಯರೂ ಕೂಡ ಇವುಗಳಿಂದ ರೋಸಿಹೋಗಿ, ಚುನಾವಣಾ ಸಮಯವೊಂದನ್ನು ಬಿಟ್ಟು ಬಾಕಿ ಎಲ್ಲ ಸಂದರ್ಭಗಳಲ್ಲೂ ಹಿಂದೂ ಮಂತ್ರ ಜಪಿಸತೊಡಗಿದ್ದಾರೆ. ಜಾತೀಯತೆ ಪೂರ್ಣ ಇಲ್ಲವಾಗಿಲ್ಲ ಎನ್ನುವುದು ಸತ್ಯವಾದರೂ ಮೊದಲಿಗಿಂತ ಸಾಕಷ್ಟು ಕಡಿಮೆಯಾಗಿದೆ.
ಕೇರಳ ನಮಗೊಂದು ಪಾಠ. ನಮ್ಮ ಪೀಳಿಗೆಯವರಿಗೆ ಧರ್ಮಶ್ರದ್ಧೆ ಬೆಳೆಸಬೇಕಾದ್ದು ನಮ್ಮ ಕರ್ತವ್ಯ. ಮನೆಗಳಲ್ಲಿ ಆಡಂಬರದ ಆಚರಣೆಯಲ್ಲ, ಅರ್ಥಪೂರ್ಣ ಆರಾಧನೆಯ ಪರಿಕಲ್ಪನೆ ತರಬೇಕಾಗಿದೆ. ಯುವಕ ಯುವತಿಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಿಡಬೇಕಿದೆ. ಎಲ್ಲಕ್ಕೂ ಮಿಗಿಲಾಗಿ ದೇವಸ್ಥಾನಗಳ ಸುತ್ತಲೂ ಇರುವ ಹಿಂದೂಗಳ ದಾಖಲೆಯನ್ನು ಸಂಗ್ರಹಿಸಿ ಅರ್ಚಕರು ದಿನಕ್ಕೊಂದು ಮನೆಗೆ ಭೇಟಿ ಕೊಡುವ ಪರಂಪರೆ ಮತ್ತೆ ಚಾಲನೆಗೆ ತರಬೇಕಿದೆ. ಇಸ್ಲಾಮ್ ಬೇರೂರಿರುವುದೇ ಮಸೀದಿ ಆಧರಿತವಾಗಿ. ಶುಕ್ರವಾರ ನಮಾಜ್ ತಪ್ಪಿದರೆ ಹೇಗೆ ಮೌಲ್ವಿಗಳು ಮನೆಗೇ ಧಾವಿಸುತ್ತಾರೋ ಹಾಗೆಯೇ ದೇವಸ್ಥಾನದ ಅರ್ಚಕರೂ ನಮ್ಮವರ ಸಂಕಟಗಳಿಗೆ ಕಿವಿಯಾಗಬೇಕಿದೆ.
ಹೌದು… ಮಾಡಲು ಕೆಲಸ ಬೇಕಾದಷ್ಟಿದೆ. ಇಲ್ಲವಾದಲ್ಲಿ ವ್ಯವಸ್ಥಿತವಾದ ಪ್ರಯತ್ನಗಳು ಹಿಂದೂ ಸಂಖ್ಯೆಯನ್ನು ದಿನೇದಿನೇ ಕಡಿಮೆ ಮಾಡುತ್ತಾ ಕೊನೆಗೊಂದು ದಿನ ಕೊನ್ರಾಡ್ ಎಲ್ಪ್ಟ್ ಹೇಳುವಂತೆ ೨೦೫೦ರ ವೇಳೆಗೆ ಜಗತ್ತಿನಲ್ಲಿ ಹಿಂದುವೇ ಸಿಗದ ಪರಿಸ್ಥಿತಿ ಮುಟ್ಟಿದರೆ? ಎದೆ ಒಡೆದಂಥ ಅನುಭವವಾಗುತ್ತದೆಯಲ್ವೆ?
ಚಿಂತೆ ಪಡಬೇಕಾದ್ದಿಲ್ಲ ಬಿಡಿ. ಎರಡಕ್ಕೆ ಎರಡು ಕೂಡಿದರೆ ನಾಲ್ಕಾಗುವುದು ಗಣಿತ ಲೋಕದಲ್ಲಿ ಮಾತ್ರ. ಭಗವಂತನ ಲೋಕದಲ್ಲಿ ಅದು ನಾಲ್ಕು ನೂರಾದರೂ ಆಗಬಹುದು, ನಾಲ್ಕು ಲಕ್ಷ ಕೂಡ! ಉತ್ತರ ಪ್ರದೇಶದ ಘರ್ ವಾಪ್ಸಿ ಅದಕ್ಕೆ ಉತ್ತಮ ಉದಾಹರಣೆ. ಹಾಗಂತ ನಾವು ಸುಮ್ಮನೆ ಕೂರುವಂತಿಲ್ಲ. ಕೈ ಕೈ ಜೋಡಿಸೋಣ. ವ್ಯವಸ್ಥಿತ ಪ್ರಯತ್ನಕ್ಕೆ ಸೂಕ್ತ ಉತ್ತರ ಕೊಡೋಣ.

10 thoughts on “ಷಡ್ಯಂತ್ರಕ್ಕೆ ಹುಡುಕಬೇಕಿದೆ ಪರಿಹಾರ ತಂತ್ರ

  1. ಸಾರ್ ಇದಕ್ಕೆ ಮುಖ್ಯ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ. ಹಿಂದೂಗಳೂ ನಾವು ಹಿಂದೂಗಳೇಂದು ಹೇಳೀಕೊಳ್ಳಲು ಹಿಂಜರಿಯುತ್ತಿದ್ದಾರೆ. ಅದರೆ ತಮ್ಮ ಸಮುದಾಯದ ಯಾವುದೇ ವ್ಯಕ್ತಿಗೆ ಎನಾದರೂ ಸಮಸ್ಯೆ ಎದುರಾದರೆ ಮುಸ್ಲೀಂ ಸಮುದಾಯದವರೆಲ್ಲರೂ ಸೇರಿ ಸ್ಪಂದಿಸುವಂತೆ ಹಿಂದೂ ಸಮೂದಾಯದಲ್ಲೂ ಒಗ್ಗಟ್ಟಿನ ಅವಶ್ಯಕತೆ ಇದೆ. ಬೇರೆ ಸಮೂದಾಯದವರಿಂದ ಹಿಂದೂ ಸಮೂದಾಯದವರ ಮೇಲೆ ನಡೆಯುವ ದೌರ್ಜನ್ಯಕ್ಕೆ ಒಗ್ಗಟ್ಟಾಗಿ ಖಂಡಿಸಬೇಕಾಗಿರುತ್ತದೆ.

  2. ಮೂರ್ತಿ ಪೂಜೆ ಎಂದರೆ ದೇವರನ್ನು ಆ ವಿಗ್ರಹದಲ್ಲಿ ಕಾಣುವುದು. ಭಯ, ಭಕ್ತಿಯಿಂದ ಆರಾಧಿಸುವುದು. ಆದರೆ, ಇಂದಿನ ಯುವಕರಿಗೆ ದೇವರು ಎನ್ನುವುದರ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ವೇದ, ಉಪನಿಷತ್ತು, ಭಗವದ್ಗೀತೆ, ಸುಭಾಷಿತ, ರಾಮಾಯಣ, ಮಹಾಭಾರತ ಇವುಗಳನ್ನು ಓದಿ ಮನನ ಮಾಡಿಕೊಂಡಿದ್ದರೆ ದೇವರ ಬಗ್ಗೆ ಒಂದಿಶ್ಟು ಅರಿವು ಮೂಡಬಹುದಿತ್ತು. ಆದರೆ, ನಮ್ಮ ಹೆಚ್ಚಿನ ಮನೆಗಳಲ್ಲಿ ಧರ್ಮಾಧಾರಿತ ಗ್ರಂಥಗಳ ಪಠಣ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣಗಳು ಹಲವಾರು. ಪರಧರ್ಮೀಯರಿಂದ ಅವಹೇಳನದ ಜತೆಗೆ ಅನೇಕ ಸ್ವಧರ್ಮೀಯರೂ ನಮ್ಮ ಸಂಪ್ರದಾಯ, ಆಚರಣೆಗಳನ್ನು ತೆಗಳುತ್ತಿರುವುದು ಮತ್ತು ಅಂಥಹವರಿಗೆ ತಿಳಿಹೇಳುವ ಅಥವಾ ಎಚ್ಚರಿಸುವ ಪ್ರಯತ್ನವನ್ನು ಯಾರೂ ಮಾಡದಿರುವುದು ಒಂದು ಮುಖ್ಯ ಕಾರಣವಾದರೆ – ನಮ್ಮ ಮಕ್ಕಳಿಗೆ ಬರೇ ಆಚರಣೆ- ಕೈಮುಗಿಯುವುದು, ಸಾಷ್ಟಾಂಗ ನಮಸ್ಕಾರ ಮಾಡುವುದು ಇಂತಹವುಗಳನ್ನಷ್ಟೇ ಹೇಳಿಕೊಡುವುದರಿಂದ ಅವರು ಧರ್ಮದ ಮೂಲತತ್ವವನ್ನು ತಿಳಿದುಕೊಳ್ಳದೆ ಗೊಂದಲಕ್ಕೊಳಗಾಗುತ್ತಾರೆ. ಕಾಲಕ್ಕನುಗುಣವಾಗಿ ಆಚರಣೆಯನ್ನು ಮಿತಿಗೊಳಿಸಿ ಹಿಂದೂಧರ್ಮದ ಒಳತಿರುಳನ್ನು ಪ್ರಸಾರಪಡಿಸಬೇಕಾದ ಅನಿವಾರ್ಯತೆ ಇಂದು ಒದಗಿಬಂದಿದೆ. ದೇವಸ್ಥಾನಗಳಲ್ಲಿ ವ್ಯವಹಾರದ ಅಂಶವೇ ಪ್ರಾಧಾನ್ಯತೆ ಹೊಂದುತ್ತಿರುವುದನ್ನು ಕೈಬಿಟ್ಟು ಭಕ್ತರ ಮನ ಪ್ರಸನ್ನಗೊಳಿಸುವಂತಹ ವಾತಾವರಣ ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಕೇರಳದ ಪ್ರಯತ್ನ ಸ್ತುತ್ಯರ್ಹವಾಗಿದ್ದು ಮಾದರಿಯಾಗಿದೆ. ಧರ್ಮದ ಮೇಲಿನ ಹಲ್ಲೆಯನ್ನು ಇಡೀ ಹಿಂದೂಧರ್ಮ ಒಟ್ಟಾಗಿ ಎದುರಿಸಭೇಕಾಗಿದೆ. ಆ ದಿಕ್ಕಿನಲ್ಲಿ ಎಲ್ಲರೂ ಪ್ರಯತ್ನಿಸೋಣ.

  3. Wonderful article! I have always believed that Hindu parents are partially responsible for this love jihad and other stuffs. Had they known our glorious history and puranas, these problems wouldn’t have been occurring. Me and my wife have decided that we will pass our rich heritage to our children. It is really scary that these barbarians are strategically acquiring our nation. However, there is still hope that this will end soon. Vande Mataram! Jai Hind!!

  4. This Ghar Vapasi is not effective in reconversion. Those chaps are back doing Namaz the very next day. Personal faith conversion is not so easy. Especially in Hindu’s no one cares what a certain guy is doing or not doing to follow Hindu Dharma. Unlike in Christianity, Islam, they will push for one uniform worshiping way, day, time and make it strict. Here it is left to individuals, communities to explore themselves and their deity. And that is the most important point in individual faith.
    So it is best to retain who we have got in Hinduism rather than creating ruckus to bring them back.
    But one thing is good. This ruckus probably is needed also. It will trigger all political parties to pass the anti conversion law. Hopefully that would be a good result.

  5. ನನ್ನೊಬ್ಬ ಸಹೋದ್ಯೋಗಿಯೊಬ್ಬನನ್ನು ನೋಡಿದ ಮೇಲೆ ಅನಿಸಿದ್ದು. ಕೇರಳದಲ್ಲಿ ಅನ್ಯ ಮತೀಯರೆಲ್ಲ ಕಟ್ಟರ್ ಪಂಥದ ಕಡೆಗೆ ಸಾಗುತ್ತಿದ್ದರೆ ನಮ್ಮವರು ಮಾತ್ರ ಸ್ವೇಚ್ಛಾಚಾರದ ಬೆನ್ನು ಹತ್ತಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಇದುವೇ ಮೂಲ ಎನಿಸುತ್ತಿದೆ!!!

  6. ಧರ್ಮ ಬೀಟ್ಟರೆ ತಾಯಿ ಮರೆತಂತಹಲ್ಲವೆ. ಬ್ರೀಟಿಷರು ರೊಪಿಸಿದ ಶಿಕ್ಷಣ ವ್ಯವಸ್ಥೆ ಈ ನೆಲದ ಧರ್ಮವನ್ನೇ ತುಳ್ಳಿಯುತಿದ್ದೆಅಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮಬೋಧನೆ ಇಲ್ಲ, ಚಿಂತನೆ ಇಲ್ಲ, ಒಂದು ಕಡೆ ಪಶ್ಚಿಮಾತ್ಯ ಸಂಸ್ಕೃತಿಯ ಅರಬಾಟ್ಟ, ಕಾರಣಗಳು ಹಲವಾರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s