ಹೇ ಕಾಶ್ಮೀರ….!

ನಿನ್ನ ವರ್ತಮಾನ ನಾನು
ಇತಿಹಾಸ, ಭವಿಷ್ಯ
ಎಲ್ಲವೂ ನಾನು.
ನಿನ್ನ ಶೃಂಗಾರಕ್ಕೆ ವೈಯಾರಕ್ಕೆ ಸೌಂದರ್ಯಕ್ಕೆ
ಕಾರಣ ನಾನೇ.
ನೀ ಮಾಡುವ ಪೂಜೆ
ನೀ ಬರೆವ ಕವನ
ಅದು ನಾನೇ.
ನೀನು ಇಲ್ಲವೆಂದು ವಾದಿಸು
ಹೌದೆಂದು ಭಾವಿಸು
ನಿನ್ನೊಳಗಿನ ನಾನು ನಾನೇ.
ನಿನ್ನ ಒಂದೊಂದು ತುತ್ತಿಗೆ
ನಾನೆಷ್ಟು ಹಸಿದೆ
ಸಿಡಿವ ಮೋಡದಂತೆ ಸುರಿದೆ.
ನಿನಗೆ ತಿಳಿಯಲಿಲ್ಲ…
ಏಣಿಯ ಒದ್ದು ಮತ್ತೊಬ್ಬನ ಆಲಂಗಿಸಿದೆ.
ಸಿದ್ಧಾಂತವ ಬದಲಿಸಿದೆ
ವೇದಾಂತವ ತೊರೆದೆ
ಬದಲಾದೆ ನೀನು ಬದಲಾದೆ…
ಛೇ!! ನಾ ಬಿಟ್ಟ ಮರುಕ್ಷಣ
ನೀನಿಲ್ಲವಾಗುವೆ
ಆದರೂ ಇಗೋ ಬಿಡುತಿರುವೆ.
ಗೊತ್ತೆನಗೆ,
ಅಸಹ್ಯದ ಬಾಳು ಬದುಕಿ
ನೀ ಮರಳಿ ಬರುವೆ
ನನ್ನ ತಬ್ಬುವೆ,
ನಾನೂ ಕಾಯುವೆ.

7 thoughts on “ಹೇ ಕಾಶ್ಮೀರ….!

  1. i was there in 2011 batch ,held in manipal sir u gave a wonderful speech ,superb
    i still remembered that..
    six hodibekandre crease bit munde barbeku,life nalli sadisbekadre risk thagollebeku…wow what a speech on that day i am your big fan,because i am a hinditvavadi ……

  2. ಅದ್ಬುತವಾದ ಕವನ..!ನಾನು 2012ರಲ್ಲಿ ಸರಹದ್ ಕೋ ಪ್ರಣಾಮ್ ಪಂಜಾಬ್-ಪಾಕ್ ಗಡಿಗೆ ಹೋಗಿದ್ದೆ,ಪ್ರೇರಣಾದಾಯಕ ಪ್ರವಾಸ.ಅಮೃತಸರದ ಆನೆಲ ,ಜಮ್ಮುವಿನ ವೈಷ್ಣೋದೇವಿ ಸ್ವರ್ಗ ಸರ್…!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s