ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ

ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ, ಆ ಭಯಾನಕವಾದ ಲಾಠಿ ಏಟುಗಳಿಗೆ, ಆ ಅಸಹನೆಗೆ, ಆ ಅವಮಾನಕ್ಕೆ, ಆ ನೋವಿಗೆ, ಆ ಚೀತ್ಕಾರಗಳಿಗೆ ಇಂದಿಗೆ ಎರಡು ವರ್ಷ. ಆ ನೆನಪಿಗೆ ಈ ಲೇಖನ ಮರು ಬ್ಲಾಗಿಸಲಾಗಿದೆ..

ನೆಲದ ಮಾತು

ಮರೆವಿನ ವ್ಯಾಪ್ತಿ ಅದೆಷ್ಟಿದೆಯಲ್ಲ! ರಾಮದೇವ್ ಬಾಬಾ ಮತ್ತು ಅವರ ಭಕ್ತ ಸಮೂಹಕ್ಕೆ ದೆಹಲಿಯಲ್ಲಿ ಲಾಠಿ ಏಟು ಬಿದ್ದು ಜೂನ್‌ಗೆ ಬರೋಬ್ಬರಿ ಒಂದು ವರ್ಷ. ಅದಕ್ಕೂ ತಿಂಗಳ ಮುನ್ನ ಇಡಿಯ ದೇಶ ಜುಬ್ಬ- ಪೈಜಾಮಾದ ವೃದ್ಧನೊಬ್ಬನ ಹಿಂದೆ ನಡೆದುಹೊರಟಿತ್ತು. ಜೆಪಿ ಆಂದೋಲನದ ನಂತರ ದೇಶ ಕಂಡ ಮಹತ್ವದ ಹೋರಾಟ ಎಂದೆಲ್ಲ ಹೇಳಿಸಿಕೊಂಡ ಅಣ್ಣಾ ಹೋರಾಟ ಆ ಹೋರಾಟದ ಸ್ಥಿತಿ-ಗತಿಗಳೇನು? ನಾವೆಲ್ಲ ಮರೆತೇಬಿಟ್ಟಿದ್ದೇವೆ.
ಸ್ವಲ್ಪ ಫ್ಲ್ಯಾಷ್ ಬ್ಯಾಕು. ಅಣ್ಣಾ ಹಜಾರೆ ಕಳೆದ ಕೆಲವಾರು ದಶಕಗಳಿಂದ ಭ್ರಷ್ಟರ ವಿರುದ್ಧ ತೊಡೆ ತಟ್ಟುತ್ತಲೇಬಂದವರು. ರಾಮದೇವ್ ಬಾಬಾ ರಾಜೀವ ದೀಕ್ಷಿತರ ಭಾಷಣಗಳಿಂದ ಪ್ರಭಾವಿತರಾಗಿ ಸ್ವದೇಶೀ ಆಂದೋಲನದ ಮೂಲಕ ಭಾರತ್ ಸ್ವಾಭಿಮಾನ್‌ದತ್ತ ಹೊರಳಿದವರು. ೨೦೧೧ರ ಮಾಯೆಯೇನೋ? ಮಾಹಿತಿ ಹಕ್ಕಿನ ಹೋರಾಟಗಳನ್ನು ನಡೆಸಿಕೊಂಡುಬಂದಿದ್ದ ಕೇಜ್ರಿವಾಲ್, ಪೊಲೀಸ್ ಅಧಿಕಾರಿ ಕಿರಣ್ ಬೇಡಿ ತಾವು ಕೈಗೆತ್ತಿಕೊಂಡ ಹೋರಾಟಕ್ಕೆ ಅಣ್ಣಾರನ್ನು ಮುಂದಿರಿಸಿಕೊಂಡರು. ಆಸ್ಥಾ- ಸಂಸ್ಕಾರ್‌ಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರಿಗಳ ನೀರಿಳಿಸುತ್ತಿದ್ದ ರಾಮದೇವ್ ಬಾಬಾರ ಬೆಂಬಲವನ್ನು ಪಡಕೊಂಡು ಬೀಗಿದರು. ’ಇಂಡಿಯಾ ಅಗೇನ್‌ಸ್ಟ್ ಕರಪ್ಷನ್’ ಕೆಲಸ ಶುರು ಮಾಡಿತು. ಭ್ರಷ್ಟಾಚಾರಿಗಳ ಸಮೂಲ ನಾಶದ ಚರ್ಚೆ ಆರಂಭವಾಯಿತು.
ಅಂದುಕೊಂಡಂತೆ ನಡೆದಿದ್ದರೆ ಸಮಸ್ಯೆ ಇರಲಿಲ್ಲ. ದೆಹಲಿಯಲ್ಲಿ ಜನಲೋಕ್‌ಪಾಲ್ ಬಿಲ್‌ಗೆ ಆಗ್ರಹಿಸಿ ನಡೆದ ರ್‍ಯಾಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಸೇರಿದ್ದರು. ಹಾಗೆ ಸೇರಿದವರಲ್ಲಿ ಬಹುಪಾಲು ಬಾಬಾರ ಯೋಗ ಅನುಯಾಯಿಗಳೆಂಬುದರಲ್ಲಿ ಅನುಮಾನ ಯಾರಿಗೂ ಇರಲಿಲ್ಲ. ಟೀವಿಗಳಲ್ಲಿ ಬಿತ್ತರಗೊಂಡ ಚಿತ್ರಗಳಲ್ಲಿ ರಾಮ್‌ದೇವ್‌ರ ಫೋಟೋ ಹಿಡಿದು ನಿಂತ ಜನರೇ ಇದಕ್ಕೆ ಸಾಕ್ಷಿಯಾಗಿದ್ದರು. ಇದನ್ನು ಕಂಡು ’ಸೆಕ್ಯುಲರ್’ ಮದಿರೆ ಕುಡಿದ ಹಲವರಿಗೆ ಮತ್ತೇರಿಬಿಟ್ಟಿತು. ಕೇಸರಿ ಕಂಡಷ್ಟೂ ಆಂದೋಲನ ಹಳ್ಳಹಿಡಿಯುತ್ತದೆಂದು ಅಣ್ಣಾ…

View original post 591 more words

4 thoughts on “ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ

  1. namaskara ….. ivaga tane facebook nalli BBC avru india janara income tax bagge article hakiddu nodide … jothe jothege hattu bere vishayagalu … jagattina shreshta suddivahini endu karesikollo ivaru nam bharatada nyunyate galannu etti hididu janara munde toristare … ideshtu sari ?? inthavarige yenu madbeku?? … avreno article baridru aadre adara kelage baruva comments …. yake avaru namma deshada bagge ketta alochane hondiruttare … namma jaana matra bere deshad samskruti bagge olleyadanne adidru ivru yake heege gurugale ??

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s