ಎರಡು ರಾಷ್ಟ್ರೀಯ ಪಕ್ಷಗಳ ತುಲನೆ

‘ಶಾಸಕರಾಗಿ ಆಯ್ಕೆಯಾಗೋದು ಮೊದಲನೆ ಬಾರಿ ಅನುಭವ ಪಡೆಯಲಿಕ್ಕೆ, ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ, ಮೂರನೇ ಬಾರಿಗೆ ಸಾಕು; ತರುಣರಿಗೆ ದಾರಿ ಬಿಡಿ’ ಎನ್ನುವ ಪ್ರಭಾಕರ ಭಟ್ಟರ ಮಾತುಗಳು ಬಿಜೆಪಿಗೇನು, ಎಲ್ಲ ಪಕ್ಷಗಳಿಗೂ ಮಾರ್ಗದರ್ಶಿಯೇ. ಇದು ಗೊತ್ತಿದ್ದೂ ಧಿಕ್ಕರಿಸಿ ಚುನಾವಣೆಗೆ ನಿಂತು ಸೋತ ಯೋಗೀಶ ಭಟ್ಟರ ಸೋಲಿನ ಹೊಣೆ ಯಾರದ್ದು?

ಬ್ರಿಟಿಷರ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್. ಹಾಗಾದರೆ ಭಾರತದ ಮೊದಲ ವೈಸ್‌ರಾಯ್ ಯಾರು ಗೊತ್ತ? ಮತ್ಯಾರು? ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ!
ನೆಹರೂ ಅತ್ಯಂತ ಶ್ರದ್ಧೆಯಿಂದ ಆಂಗ್ಲರ ರಾಜನೀತಿಯನ್ನು ಅರಿತುಕೊಂಡರು. ಅದನ್ನು ಹಂತಹಂತವಾಗಿ ಪ್ರಯೋಗಿಸಲಾರಂಭಿಸಿದರು. ಅಧಿಕಾರ ಕೈಗೆ ದಕ್ಕುವ ಮುನ್ನಿನ ಚುನಾವಣೆಗಳಲ್ಲಿ ತಮ್ಮ ಚಾಕಚಕ್ಯತೆಯನ್ನು, ವಿಭಜಿಸಿ ಗೆಲ್ಲುವ ತಂತ್ರವನ್ನು ಚೆನ್ನಾಗಿಯೇ ಬಳಸಿದರು. ಒಂದೆಡೆ ಮುಸಲ್ಮಾನರನ್ನು ಓಲೈಸಿ ಗೆಲ್ಲುವುದು, ಮತ್ತೊಂದೆಡೆ ಪಟೇಲರನ್ನು ಕಡು ಹಿಂದೂವಾಗಿ ಬಿಂಬಿಸಿ ಹಿಂದೂಗಳ ಮತವನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಯಶಸ್ವಿಯಾಯ್ತು. ನೆಹರೂ ಪಕ್ಕಾ ಇಂಗ್ಲೀಶ್ ಬಾಬುವಾಗಿಬಿಟ್ಟರು. ಆಗಲೇ ಗಾಂಧೀಜಿ ಗಾಬರಿಯಿಂದ ಹೇಳಿದ್ದು, ‘ದೇಶ ವಿಭಜನೆಗೊಂಡು ಸ್ವಾತಂತ್ರ್ಯ ಬಂತು. ಇನ್ನು ಮುಂದೆ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ.’ ಸ್ವತಃ ಗಾಂಧೀಜಿಗೆ ಅಸಹ್ಯವಾಗಿತ್ತು. ತಾನೇ ಮೂಲೆ ಮೂಲೆಗೆ ಕೊಂಡೊಯ್ದ ಕಾಂಗ್ರೆಸ್ಸು ಮುಂದೊಮ್ಮೆ ದೇಶದ ದುರ್ಗತಿಗೆ ಕಾರಣವಾಗುತ್ತದೆಂಬ ಸ್ಪಷ್ಟ ಅರಿವು ಅವರಿಗಿತ್ತು.

congress-and-bjpಬಿಜೆಪಿಗೂ ಕಾಂಗ್ರೆಸ್ಸಿಗೂ ಒಂದು ಎದ್ದುಕಾಣುವಂತಹ ಭಿನ್ನತೆ ಇದೆ. ಒಂದು, ಕಾರ್ಯಕರ್ತರಿಂದಲೇ ನಿರ್ಮಾಣಗೊಂಡ, ಕೆಡರ್ ಆಧಾರಿತ ಪಕ್ಷ. ಮತ್ತೊಂದು, ಅಗತ್ಯ ಬಿದ್ದಾಗ ಕಾರ್ಯಕರ್ತರನ್ನು ಕೊಂಡುಕೊಳ್ಳುವ ಪಕ್ಷ. ಇವತ್ತಿಗೂ ನಾನು ಕಾಂಗ್ರೆಸ್ಸಿಗ ಎಂದು ಎದೆ ತಟ್ಟಿ ಹೇಳುವ ಸಾಮಾನ್ಯ ಕಾರ್ಯಕರ್ತರನ್ನು ತೋರಿಸಿ ನೋಡೋಣ. ಅಲ್ಲಿ ಕರುಳ ಸಂಬಂಧಗಳಿಲ್ಲ. ಅದೊಂಥರಾ ನಕಲು ಮಾಡಿಸಿ ನೂರು ಪ್ರತಿಶತ ಅಂಕ ಗಳಿಸುವ ಶಾಲೆಯಿದ್ದಂತೆ. ಆ ಶಾಲೆಯಲ್ಲಿ ಕೆಲಸ ನಡೆಯುವುದೇ ಕೊನೆಯ ಆರು ದಿನಗಳಲ್ಲಿ. ಹೀಗಾಗಿ ಬಂದ ಫಲಿತಾಂಶಕ್ಕೆ ಬೆನ್ನು ತಟ್ಟಿಕೊಳ್ಳುವವರು ಇರುತ್ತಾರೆಯೇ ಹೊರತು, ಆನಂದ ಪಡುವವರಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಬಿಟ್ಟು ಹೊರಬಂದಾಗ ತಾನು ತಾಯಿಯ ಮಡಿಲಿನಿಂದ ಹೊರಗೆ ಬಂದುಬಿಟ್ಟಿದ್ದೇನೆಂದು ಯಾರಿಗೂ ಅನ್ನಿಸೋದೇ ಇಲ್ಲ. ಅಲ್ಲಿ ತಪ್ಪಾದಾಗ ಪ್ರಶ್ನೆ ಯಾರನ್ನು ಕೇಳಬೇಕೆಂದು ಯಾರಿಗೂ ಗೊತ್ತೇಇರುವುದಿಲ್ಲ. ಗೋಹತ್ಯೆ ನಿಷೇಧ ಹಿಂತೆಗೆದುಕೊಂಡಿದ್ದನ್ನು ಕೇಳಿ ಅನೇಕ ಕಾಂಗ್ರೆಸ್ಸಿಗರೇ ಗರಮ್ ಆಗಿದ್ದಾರೆ. ದುರ್ದೈವ, ಈ ದರ್ದನ್ನು ಯಾರೆದುರು ತೋಡಿಕೊಳ್ಳಬೇಕೆಂದು ಗೊತ್ತಿಲ್ಲವಷ್ಟೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದುದಕ್ಕೆ ಖರ್ಗೆಯ ಬಳಗ ಜಿಲ್ಲೆ ಜಿಲ್ಲೆಗಳಲ್ಲಿ ರಾಡಿ ಎಬ್ಬಿಸಿತಲ್ಲ, ಅದಕ್ಕೆಲ್ಲ ಪ್ರಚಾರವೇ ಸಿಗಲಿಲ್ಲ ಏಕೆ? ಬಹಳ ಸಿಂಪಲ್ಲು. ಈ ರೀತಿ ಜೀವ ಕೊಡುವ ಕಾರ್ಯಕರ್ತರು ಅಲ್ಲಿಲ್ಲ; ಖರೀದಿಸಿದವರಿಗಾಗಿ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತರ್ಥ! ಇಷ್ಟು ಮಾತ್ರ ಬಿಜೆಪಿಯೊಳಗೆ ಕಿರಿಕಿರಿಯಾಗಿಬಿಟ್ಟಿದ್ದರೆ ಮಾಧ್ಯಮಗಳಿಗೆ ಹಬ್ಬವಾಗಿಬಿಟ್ಟಿರುತ್ತಿತ್ತು. ಏಕೆ ಗೊತ್ತೇನು? ರಾಯಚೂರಿನಲ್ಲಾಗುವ ಒಂದು ಸಣ್ಣ ಬೆಳವಣಿಗೆಗೂ ಮಡಿಕೇರಿಯ ಕಾರ್ಯಕರ್ತ ನೊಂದುಕೊಳ್ಳುತ್ತಾನೆ. ಅವನ ಹೃದಯ ಕಂಪಿಸುತ್ತದೆ.
ನೀವೆ ನೋಡಿ. ಬಿಜೆಪಿಯಿಂದ ದೂರವಾದ ಶಿವಪ್ಪನವರಿಂದ ಹಿಡಿದು ಯಡಿಯೂರಪ್ಪನವರೆಗೆ ಸದಾ ಕಾಲ ಬಿಜೆಪಿಯ ಜಪ ಮಾಡುವವರೇ. ಎಲ್ಲರ ಮುಂದೆ ಮುನಿಸು ತೋರಿದರೂ ಆಂತರ್ಯದಲ್ಲಿ ಕರುಳ ಬಳ್ಳಿಯನ್ನು ಕಡಿಯಲಾಗದೆ ವಿಲವಿಲ ಒದ್ದಾಡುವವರೇ. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಗಿದೆ ಎನ್ನಿಸಿದರೂ ಮರಳಿ ಧಾವಿಸಿ ಬರುವಂತೆ ತುದಿಗಾಲಲ್ಲಿ ನಿಂತವರೇ. ಬಿಜೆಪಿಯಿಂದ ದೂರಾದವ ವ್ಯಕ್ತಿಯಿಂದ ಬೆಸಗೊಂಡು ದೂರಾದವನೇ ಹೊರತು ಒಕ್ಷದಿಂದ ನೊಂದವನಲ್ಲ. ಕಾಂಗ್ರೆಸ್ಸಿನಿಂದ ದೂರಾದವನಿಗೆ ತನಗೆ ಯಾರಿಂದ ನೋವಾಗಿದೆ ಎಂದೇ ಗೊತ್ತಿರುವುದಿಲ್ಲ. ಅದು ಪಕ್ಷವೋ? ವ್ಯಕ್ತಿಯೋ ತಿಳಿಯುವುದೂ ಇಲ್ಲ. ಅಲ್ಲಿ ಅಕ್ಷರಶಃ ರಾಜ ಮನೆತನದ್ದೇ ದರ್ಬಾರು. ಉಳಿದವರು ಕುರ್ನೀಸಾತು ಮಾಡುವ ಸಾಮಂತ ರಾಜರುಗಳಷ್ಟೆ. ಕಪ್ಪ ಒಪ್ಪಿಸಿ ಸುಮ್ಮನಾಗಬೇಕು. ಎದುರು ಮಾತನಾಡಿದರೆ ನಾಶವೇ ಸರಿ. ಬಿಜೆಪಿಯಲ್ಲಿ ಪಕ್ಷ ದೊಡ್ಡದು, ಉಳಿದವರೆಲ್ಲ ಅದಕ್ಕಿಂತಲೂ ಚಿಕ್ಕವರು ಅಷ್ಟೆ.
ಇನ್ನು ಈ ಕಾಂಗ್ರೆಸ್‌ನವರನ್ನು ನೋಡಿ. ಅವರೊಂಥರಾ ಟು ಪಿನ್ ಚಾರ್ಜರ್‌ಗಳು. ಯಾವ ಸಾಕೆಟ್‌ಗೂ ಹೊಂದಿಕೊಳ್ಳಬಲ್ಲವರು! ಬಿಜೆಪಿಗೆ ಸಂಘಟನೆಯ ಹಿನ್ನೆಲೆಯಿದೆ. ಬಲಢ್ಯವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬುನಾದಿ ಇದೆ. ಇದೇ ರೀತಿ ಎಡ ಪಕ್ಷಗಳೂ ಬುಡ ಹೊಂದಿವೆ. ಪಕ್ಷಗಳಿರಲಿ, ಅದರೊಳಗಿನ ವ್ಯಕ್ತಿಯ ದೌರ್ಬಲ್ಯವನ್ನೂ ಮೂಲ ಸಂಘಟನೆಯಲ್ಲಿನ ದೋಷ ಎಂಬಂತೆ ಬಿಂಬಿಸಲ್ಪಡುತ್ತದೆ. ಸದನದಲ್ಲಿ ಅಶ್ಲೀಲ ಚಿತ್ರ ನೋಡಿದಾಗ, ಮಹಿಳೆಯೊಬ್ಬರಿಂದ ಗುರುತರ ಆರೋಪಕ್ಕೆ ಗುರಿಯಾದಾಗ ಎಲ್ಲರ ದೃಷ್ಟಿ ನೆಟ್ಟಿದ್ದು ವ್ಯಕ್ತಿಯತ್ತ ಅಲ್ಲ; ಸಂಘದತ್ತ. ಕಾಂಗ್ರೆಸ್ಸಿನ ಪರಿಸ್ಥಿತಿ ನೋಡಿ. ರಾಜ್ಯಪಾಲರಾಗಿದ್ದ ಎನ್‌ಡಿ.ತಿವಾರಿ ಹೆಣ್ಣುಮಕ್ಕಳೊಂದಿಗೆ ವಿವಿಧ ಭಂಗಿಗಳಲ್ಲಿ ಸಿಕ್ಕಿಬಿದ್ದಿದ್ದರು. ರೈಲ್ವೇ ಮಂತ್ರಿಯ ಸ್ವಂತ ಮನೆಯಲ್ಲಿ ಸೋದರಳಿಯ ಡೀಲ್ ಕುದುರಿಸಿದ. ರಾಬರ್ಟ್ ವಾಧ್ರಾ ಭೂಮಿ ಮಾರುವ ಪ್ರಕ್ರಿಯೆಯಲ್ಲಿ ಇಡಿ ದೇಶದ ಕೆಂಗಣ್ಣಿಗೆ ಗುರಿಯಾದ. ಅರೆ! ಹೊಣೆ ಹೊರುವವರು ಯಾರು? ವ್ಯಕ್ತಿಗತವಾದ ಈ ಆರೋಪಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಕಾಂಗ್ರೆಸ್ ಚಿರಾಯುವಾಗಿ ಉಳಿಯುತ್ತದೆ.
ಗಾಂಧೀಜಿ ಇರುವವರೆಗೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಅವರು ತಮ್ಮ ಮೈಮೇಲೆ ಎಳೆದುಕೊಂಡು ಪ್ರತಿಕ್ರಿಯಿಸುತ್ತಿದ್ದರು; ನೆಹರೂಗೆ ಇರುಸುಮುರುಸುಂಟು ಮಾಡುತ್ತಿದ್ದರು. ಹಾಗೆ ನೋಡಿದರೆ ಗಾಂಧೀಜಿ ತೀರಿಕೊಂಡಾಗ ಖುಷಿಯಾಗಿದ್ದು ಕಾಂಗ್ರೆಸ್ಸಿಗೇ. (ವೋಟಿಗಾಗಿ ತನ್ನ ಕಛೇರಿ ಎದುರು ಬಿಜೆಪಿ- ಆರೆಸ್ಸೆಸ್‌ಗಳೇ ಬಾಂಬ್ ಸ್ಫೋಟಿಸಿಕೊಂಡವು ಎಂಬ ಸಿದ್ಧರಾಮಯ್ಯನವರ ಆರೋಪ ಒಪ್ಪುವುದೆ ಆದರೆ ಅವತ್ತು ಗಾಂಧೀಜಿ ಹತ್ಯೆಯ್ಲಲೂ ಕಾಂಗ್ರೆಸ್ಸಿನದೆ ಕೈವಾಡ ಇತ್ತೆಂದು ಹೇಳಬಹುದು!) ಅದಾದ ಮೇಲೆ ಕಾಂಗ್ರೆಸ್ಸಿನ ಹಾದಿ ನಿಚ್ಚಳವಾಯ್ತು. ಅದು ಚುನಾವಣೆಯ ಹೊತ್ತಲ್ಲಿ ರಂಗೇರಿಸಿಕೊಳ್ಳುವ ಪಕ್ಷವಾಯ್ತು. ನಾಲ್ಕೂವರೆ ವರ್ಷ ಕಿತ್ತಾಡಿ ಐದನೇ ವರ್ಷ ಒಟ್ಟಾಗಿ ಚುನಾವಣೆ ಎದುರಿಸುವ ಕಲೆ ಕರಗತವಾಯ್ತು. ಇವೆಲ್ಲ ಬ್ರಿಟಿಷರಿಂದಲೇ ಬಳುವಳಿಯಾಗಿ ಬಂದಂಥವು. ಅಲ್ಲವೇ ಮತ್ತೆ? ತಮಗೆ ದಕ್ಕದ ರಾಜ್ಯಗಳನ್ನು ಬಗೆಬಗೆಯ ಕಾನೂನು ಜಾರಿಗೆ ತಂದು ಆಪೋಷನ ತೆಗೆದುಕೊಳ್ತಿದ್ದವರು ಬ್ರಿಟಿಷರು. ಅಕ್ಷರಶಃ ಹಾಗೆಯೇ ಸಿಬಿಐ, ಇಡಿಗಳನ್ನು ಬಳಸಿ ಎದುರಾಳಿಗಳನ್ನು ಮಟ್ಟ ಹಾಕುತ್ತಿದೆ ಕಾಂಗ್ರೆಸ್! ಅವನೆದುರಿಗೆ ಇವನನ್ನು, ಇವನೆದುರಿಗೆ ಮತ್ತೊಬ್ಬನನ್ನು ಎತ್ತಿಕಟ್ಟಿ ವೈಭೋಗದ ಬದುಕು ನಡೆಸಿದರು ಬಿಳಿಯರು. ಮೀರ್‌ಜಾಫರ್‌ಗಳನ್ನು ಹುಡುಕಿ ರಾಜರುಗಳನ್ನು ಮಟ್ಟ ಹಾಕಿದವರೂ ಅವರೇ. ಅಕ್ಷರಶಃ ಇಂಥದೇ ರಾಜಕಾರಣ ಕಾಂಗ್ರೆಸ್ಸಿಗರು ನಡೆಸುತ್ತಿದ್ದಾರೆ. ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕಗಳಲ್ಲಿ ಬಿಜೆಪಿಯ ಆಂತರಿಕ ಭಿನ್ನಮತಕ್ಕೆ ನೀರೆರೆದು ಪ್ರತ್ಯೇಕ ಪಕ್ಷಗಳು ಹುಟ್ಟಲು ಕಾರಣವಾಗಿದ್ದು ಕಾಂಗ್ರೆಸ್ಸೇ! ಅವರು ಸೋತಿದ್ದು ಗುಜರಾತಿನಲ್ಲಿ ಮಾತ್ರ. ಅಂದಹಾಗೆ ನೆನಪಿರಲಿ, ಕರ್ನಾಟಕದಲ್ಲಿ ಮೀರ್‌ಜಾಫರ್‌ಗಳು ಇನ್ನೂ ಪಕ್ಷದೊಳಗೇ ಇದ್ದಾರೆ, ಎಚ್ಚರಿಕೆ ಬೇಕಷ್ಟೆ!
ಇತ್ತ ಬಿಜೆಪಿ ಸಂಘಟನೆಯ ಕಾರಣದಿಂದಲೇ ಬಲಾಢ್ಯವಾಯ್ತು, ಆ ಕಾರಣದಿಂದಲೇ ಬಡವಾಯಿತು. ಇನ್ನೂ ಸ್ವಲ್ಪ ಗಂಭೀರವಾಗಿ ಹೇಳಬೇಕೆಂದರೆ, ಬಿಜೆಪಿ ಅಧಿಕಾರಕ್ಕೆ ಬಂದುದರಿಂದ ಸಂಘವೂ ಸೊರಗಿತು. ದಕ್ಷಿಣ ಕನ್ನಡವನ್ನೆ ನೋಡಿ. ಗಣ ವೇಷದಲ್ಲಿ ಒಂದು ಲಕ್ಷ ಜನರನ್ನು ಒಂದೆಡೆ ಸೇರಿಸಬಲ್ಲ ಸಂಘ ಅಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗುವುದು ಹೇಗೆ? ಇದಕ್ಕೆ ಕಾರಣವೆಂದು ಒಬ್ಬ ವ್ಯಕ್ತಿಯನ್ನು ದೂರುವ ಕೆಲಸ ಮಾಡಲಾಗುತ್ತಿದೆಯಲ್ಲ, ಸರಿಯಾ? ಪ್ರಭಾಕರ ಭಟ್ಟರ ಹೆಸರನ್ನು ಪದೇಪದೇ ಹೇಳಿ ಮಾಧ್ಯಮಗಳು ತೇಜೋವದೆ ಮಾಡಿದವಲ್ಲ, ಇಡಿಯ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬೇರೆ ಯಾರೂ ಹೊಣೆಯಲ್ಲವ? ರಾಜ್ಯದ ಎಲ್ಲ ಪ್ರಚಾರದ ಫ್ಲೆಕ್ಸ್‌ಗಳಲ್ಲಿ ಮಿಂಚಿದ ಅನಂತಕುಮಾರ್, ದೆಹಲಿಯಿಂದ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದರ್ಮೇಂದರ್ ಪ್ರಧಾನ್ – ಇವರ‍್ಯಾರೂ ಜವಾಬ್ದಾರರಲ್ಲವೇನು? ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೆ ನನಗೆ ಅಚ್ಚರಿಯಾಗುತ್ತಿತ್ತೆಂದು ಗಾಯದ ಮೇಲೆ ಉಪ್ಪು ಸುರಿದಂತಹ ಲೇಖನ ಬರೆದರಲ್ಲ ಅಡ್ವಾಣಿ; ಕರ್ನಾಟದಲ್ಲಿ ಬಿಜೆಪಿ ಸೋಲಲಿಕ್ಕೆ ನಾನೇ ಕಾರಣ ಅಂತ ಒಮ್ಮೆಯಾದರೂ ಹೇಳಿಕೊಳ್ಳಲಿಲ್ಲವೇಕೆ? ಸೋನಿಯಾ ಗಾಂಧಿಯ ವಿದೇಶೀ ಮೂಲದ ಉಲ್ಲೇಖ ಮಾಡಿ, ಅನಂತರ ಕ್ಷಮೆ ಕೇಳಿ ಪಕ್ಷಕ್ಕೆ ಮುಜುಗರ ತಂದವರು ಅವರು. ರೆಡ್ಡಿಗಳನ್ನು ಬೆಂಬಲಿಸುವಾಗ ಸುಮ್ಮನಿದ್ದ ಅಡ್ವಾಣಿ ಯಡ್ಯೂರಪ್ಪ ವಿರುದ್ಧ ಮಾತ್ರ ಕೆಂಪುಕೆಂಪಾಗುತ್ತಿದ್ದುದು ಏಕೆ? ಯಾರ ಪ್ರಭಾವಕ್ಕೆ ಅವರು ಅಷ್ಟೊಂದು ಒಳಗಾಗಿದ್ದಾರೆ? ಈ ಪ್ರಭಾವಿ ವ್ಯಕ್ತಿ ಸ್ವತಃ ತಾನು ಭ್ರಷ್ಟ ಎಂಬುದನ್ನು ಪ್ರಧಾನಿ ಅರಿಯರೇ? ಯಾಕೆ ಯಾವ ಮಾಧ್ಯಮವೂ ಪ್ರಶ್ನೆ ಎತ್ತುತ್ತಿಲ್ಲ?
‘ಶಾಸಕರಾಗಿ ಆಯ್ಕೆಯಾಗೋದು ಮೊದಲನೆ ಬಾರಿ ಅನುಭವ ಪಡೆಯಲಿಕ್ಕೆ, ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ, ಮೂರನೇ ಬಾರಿಗೆ ಸಾಕು; ತರುಣರಿಗೆ ದಾರಿ ಬಿಡಿ’ ಎನ್ನುವ ಪ್ರಭಾಕರ ಭಟ್ಟರ ಮಾತುಗಳು ಬಿಜೆಪಿಗೇನು, ಎಲ್ಲ ಪಕ್ಷಗಳಿಗೂ ಮಾರ್ಗದರ್ಶಿಯೇ. ಇದು ಗೊತ್ತಿದ್ದೂ ಧಿಕ್ಕರಿಸಿ ಚುನಾವಣೆಗೆ ನಿಂತು ಸೋತ ಯೋಗೀಶ ಭಟ್ಟರ ಸೋಲಿನ ಹೊಣೆ ಯಾರದ್ದು? ಸದನದಲ್ಲಿ ಎಮ್‌ಎಮ್‌ಎಸ್ ಕಳಿಸಿದ ಕೃಷ್ಣ ಫಾಲೇಮಾರರು, ಸೀಡಿಯ ರಾಡಿಯಲ್ಲಿ ಮಿಂದೆದ್ದ ರಘುಪತಿ ಭಟ್ಟರು ಇವರುಗಳಿಂದಾಗಿಯೂ ಪ್ರಜ್ಞಾವಂತ ಮತದಾರರು ಬಿಜೆಪಿಗೆ ವೋಟು ಮಾಡುವರೆಂದು ನಂಬುವುದಾದರೂ ಹೇಗೆ? ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿಗಿರಿ ತಪ್ಪಿಸಿದ್ದು ಸಂಘವೆಂಬ ಅಪಪ್ರಚಾರದಲ್ಲಿ ಸದಾನಂದ ಗೌಡರು ಮಾಡಿದ ಕುತಂತ್ರ ಮುಚ್ಚಿಯೇಹೋಯ್ತಲ್ಲಾ?
ಸಂಗಟನೆಯೊಂದರ ಕೊರತೆಯೇ ಅದು. ಎಲ್ಲರ ಬಳಿ ಎಲ್ಲ ವಿಚಾರವನ್ನು ಮಾತನಾಡಲು ಆಗದು. ಅಂತಹ ಸಂದಿಗ್ಧದಲ್ಲಿ ಸಂಘವೂ ಇದೆ, ಬಿಜೆಪಿಯೂ ಇದೆ. ಅವು ಕಳೆಗುಂದಿರಬಹುದು, ಧೃತಿಗೆಟ್ಟಿಲ್ಲ. ಶೂನ್ಯದಿಂದ ಶುರುವಾದುದು ಸಂಘ. ಹೆಡ್ಗೇವಾರರು ಅದನ್ನು ಕಟ್ಟಿ ನಿಲ್ಲಿಸಿದಾಗ ಹೊರಗಿನ ವಿರೋಧವಿರಲಿ, ಒಳಗೂ ಭಾರೀಭಾರೀ ಆತಂಕಗಳೇ ಇದ್ದವು. ಆ ಹೊತ್ತಿನಲ್ಲಿ ಕಬಡ್ಡಿ ಆಡುತ್ತ ತರುಣರನ್ನು ಒಗ್ಗೂಡಿಸಿ ನಿರ್ಮಾಣ ಮಾಡಿದ್ದು ಸಂಘ. ಗಾಂಧಿಯ ಹತ್ಯೆಯ ಹೊತ್ತಲ್ಲಿ ಸಂಘದವನೆಂದು ಹೇಳಿಕೊಳ್ಳುವುದೆ ಸಾವಿಗೆ ಆಹ್ವಾನದಂತಿತ್ತು. ಆ ಹೊತ್ತಿನಲ್ಲೂ ನೆಹರೂಗೆ ಸೆಡ್ಡು ಹೊಡೆದು ಉಳಿದಿದ್ದು ಸಂಘ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ವಿಪರೀತ ಸನ್ನಿವೇಶಗಳಲ್ಲೂ ರಾಷ್ಟ್ರೀಯತೆಗಾಗಿ ಬಡಿದಾಡಿದ ಶಕ್ತಿ ಅದರದು. ಸಂಘದ ಪರಿವಾರ ಸಂಘಟನೆಗಳಿಗೂ ಈ ಶಕ್ತಿ ಇದ್ದೇ ಇದೆ. ತಪ್ಪುಗಳನ್ನು ತಿದ್ದಿಕೊಂಡು ಬಿಜೆಪಿ ಮತ್ತೆ ಏಳಲಿದೆ. ಹಾಗೆ ಏಳುವುದು ಸಮಾಜಕ್ಕೂ ಬೇಕಿದೆ. ಇಲ್ಲವಾದರೆ ಚೀನೀಯರಿಗೆ, ಪಾಕಿಸ್ಥಾನೀಯರಿಗೆ ದೇಶವನ್ನು ಒತ್ತೆಯಿಟ್ಟುಬಿಡುವ ಕಾಂಗ್ರೆಸ್ಸಿಗೆ ಕಡಿವಾಣ ಯಾರು?
ಇಷ್ಟಕ್ಕೂ ಆರೆಸ್ಸೆಸ್ ಬಿಜೆಪಿಯನ್ನು ವಿಸರ್ಜಿಸಿಬಿಡಬೇಕೆಂದು ನಿರ್ಧರಿಸಿದರೆ ಬಿಜೆಪಿಯ ಕಥೆ ಅಂದೇ ಮುಗಿದುಬಿಡುತ್ತದೆ. ಗಾಂಧೀಜಿಯ ಹೇಳಿಕೆಯ ನಂತರವೂ ಅಸ್ತಿತ್ವ ಉಳಿಸಿಕೊಂಡೇ ಬರುತ್ತಿದೆಯಲ್ಲ ಕಾಂಗ್ರೆಸ್ಸು… ಹಾಗೆ ಬದುಕಲಂತೂ ಸಾಧ್ಯವಿಲ್ಲ.
ಹೌದಲ್ಲವೆ?

25 thoughts on “ಎರಡು ರಾಷ್ಟ್ರೀಯ ಪಕ್ಷಗಳ ತುಲನೆ

 1. ಇಷ್ಟಕ್ಕೆಲ್ಲಾ ಕಾರಣ ಸದಾನಂದ ಗೌಡರು , ಒಂದು ವೇಳೆ ಯೂಡಿರಪ್ಪನವರು ಮರಳಿ ಬಂದಾಗ ಆ ರೀತಿಯ ದರ್ಪ ತೋರಬಾರದಿತ್ತು . ಲೇಖನ ತುಂಬಾ ಇಷ್ಟವಾಯಿತು

 2. ಇಷ್ಟಕ್ಕೆಲ್ಲಾ ಕಾರಣ ಸದಾನಂದ ಗೌಡರು , ಯೂಡಿರಪ್ಪನವರು ಜೈಲಿನಿಂದ ಮರಳಿ ಬಂದಾಗ ಆ ರೀತಿಯ ದರ್ಪ ತೋರಬಾರದಿತ್ತು . ಲೇಖನ ತುಂಬಾ ಇಷ್ಟವಾಯಿತು

 3. ಸೋಲಿನ ಕಹಿ ಸುದ್ದಿಯಿಂದ ಕುಗ್ಗಿದ್ದ ಕಾರ್ಯಕರ್ತನಿಗೆ, ಸಾವರಿಸಿ, ಸಂತೈಸಿದ ಹಾಗಿದೆ ನಿಮ್ಮ ಬರಹ… ನಿಜ ಈಗ ಅತ್ಮವಿಮರ್ಶೆಯ ಪರ್ವ, ಸೋಲಿನ ಕಾರಣಗಳನ್ನ ಹೊಕ್ಕು ಮುಂದಿನ ಜಯಬೇರಿಗೆ ಸಿದ್ದತೆ ನಡೆಸಬೇಕಾಗಿದೆ… 🙂

 4. ” ಸಂಘದ ಪರಿವಾರ ಸಂಘಟನೆಗಳಿಗೂ ಈ ಶಕ್ತಿ ಇದ್ದೇ ಇದೆ. ತಪ್ಪುಗಳನ್ನು ತಿದ್ದಿಕೊಂಡು ಬಿಜೆಪಿ ಮತ್ತೆ ಏಳಲಿದೆ. ಹಾಗೆ ಏಳುವುದು ಸಮಾಜಕ್ಕೂ ಬೇಕಿದೆ. ಇಲ್ಲವಾದರೆ ಚೀನೀಯರಿಗೆ, ಪಾಕಿಸ್ಥಾನೀಯರಿಗೆ ದೇಶವನ್ನು ಒತ್ತೆಯಿಟ್ಟುಬಿಡುವ ಕಾಂಗ್ರೆಸ್ಸಿಗೆ ಕಡಿವಾಣ ಯಾರು?”

  Ee meleni vakya tumba hitavanuntu maditu. Bharatakke BJP ye sariyada paksha aaluvudakke. 2014 chunavanege BJP sidhavagabeku. BJP geddare desha udhdhara agutte illa andre amma makkalu seri deshana maribidtare….

 5. ಕರ್ನಾಟಕದಲ್ಲಿರುವ ಮೀರ್‌ಜಾಫರ್‌ಗಳು ಪಕ್ಷವನ್ನು ಹಾಳು ಮಾಡಿ ತಾವು ಹೇಳ ಹೆಸರಿಲ್ಲಾದಂತೆ ಮಾಯವಾಗಿದ್ದಾರೆ. ಇಂತವರಿಂದ ನಿಜವಾಗಿ ಮುಜುಗರ ಅನುಭವಿಸುತ್ತಿರುವವರು ನಮ್ಮಂತಹ ಪರದೆ ಹಿಂದಿನ ಕಾರ್ಯಕರ್ತರು. ಯಾರ ಎದುರಿಗು ನಮ್ಮ ಸ್ಡಂತ ವಿಚಾರಕ್ಕೆ ತಲೆತಗ್ಗಿಸದವರು ಪಕ್ಷದ ವಿಚಾರಕ್ಕೆ ತಲೆತಗ್ಗಿಸಬೇಕಾಗಿದೆ.

 6. ನಿಜವನ್ನು ಮರೆ ಮಾಚುವ ಪ್ರಯತ್ನ .ಸೊಗಸಾಗಿದೆ.ಪ್ರಭಾಕರ ಭಟ್ಟರ ಬಗ್ಗೆ ಪರಿವಾರದವರೇ ಖಾಸಾಗಿಯಾಗಿ ಆಡುವ ಮಾತುಗಳನ್ನು ಕೇಳಿಸಿಕೊಳ್ಳಿ.ಅದ್ವಾನಿಯವರಿಂದಾಗಿ ಬಿಜೇಪಿ ಕುಸಿದು ಹೋಗಿದೆಯೇ ,ಇದು ಅಧಿಕಾರದಲ್ಲಿದ್ದವರನ್ನು ಓಲೈಸುವ ಪ್ರಯತ್ನವಲ್ಲದೆ ಇನ್ನೇನು.ದಿ.ಶೇಶಾದ್ರಿಯವರು ಹೇಳಿದ ಮಾತನ್ನೇ ಹೇಳಿ” ಜಿನ್ನಾ ಮೂಲತಹ ಜಾತ್ಯತೀತರು,ಆದರೆ ಗಾಂಧೀಜಿಯವರ ಮುಸ್ಲಿಮ್ ಓಲೈಸುವಿಕೆಯನ್ನು ಕಂಡು ನಂತರ ಮತಾಂಧತೆಯ ಮುಖವಾಡ ಧರಿಸಿದರು” ಸಂಘದಿಂದಲೇ ಉಗಿಸಿ ಕೊಂಡವರು ಅವರು.ಶೇಶಾದ್ರಿಯವರು ತಪ್ಪು ಹೇಳಿದ್ದೇ ಅಲ್ಲಾ ಅದ್ವಾನಿಯವರೇ.ದ.ಕ ದಲ್ಲಿ ಬಿಜೇಪಿ ಸೋಲಿಗೆ ಯಡಿಯೂರಪ್ಪ ರ ಬ್ರಷ್ಟಾಚಾರ,ರೆಡ್ಡಿಗಳ ಗಣಿ ಧೂಳು ಮತ್ತು ಪ್ರಭಾಕರ ಭಟ್ಟರ ಬಿಗಿ ಹಿಡಿತ ಮೂರೂ ಕಾರಣ.ಯಾವುದನ್ನು ಕಡೆಗಣಿಸಿದರೂ ಸತ್ಯವನ್ನು ಮರೆ ಮಾಚಿದಂತೆ.

 7. You have analysed everytyhing according to your convinience. RSS is still doesn’t know how to go for election poltics in a democratic set up. Nowdays people vote only for the persons who are always in touch with them, ready to listen their problems and grown up as leaders in between the them only.Those leaders are known as mass leaders. This time in D.K and Udupi, people supported such kind of leaders irrespective of party. But RSS is always allergic with mass leaders, shakunthala shetty in Puttur and Haladi srinivasa Shetty in Kundapur are good example for this.

  In Udupi district Haladi factor ruined the party completely in Kundapur and Baindoor constituency. Also influenced badly on the result of Udupi and Kapu constituency. Whenever there is no senior leader like V.S Acharya, then RSS should have given the responsibility of Udupi district to senior and most respected leader like Haladi. All the MLA’s of Udupi district of that time and all party leaders including Srinivasa Poojary demanded for the same. Still MInistry was denied for him.who is responsible for this? why can’t you say the reason?

  Last time in Puttur, All the BJP village units put forwad only Shakunthala Shetty’s name for MLA candidature. Inspite Rama Bhat’s support she didnt get ticket. Then who is playing dirty poltics in Udupi and D.K BJP? Please don’t select BJP candidates in Bhaitaks for your own and unknown reasons. Let the leaders grow up in between the people. Then only they will win.

  You are beutifully explained the reasons for the defeat of Palemar, Yogish Bhat and Raghupathi Bhat. Then you must be knowing the reasons for the defeat in Belthangady, Bantwal and Puttur. No need to explain it in public.because even the small child can list it.

  In future, please encourage and engage your mass leaders in poltics. Leaders like Thungappa Bangera, Chanila Thimmappa Shetty, Kushalappa Gowda, Sathyajith Surathkal, Santhosh Kumar Rai Boliyar, Ishwar Kateel and Kodman Kanthappa Shetty has the ability to chage the poltical directions of the district. and have the ability to boost up the morality of the party activists. I know party is important than persons. but only good persons (leaders) like Advani, Vajapayee and Modi can bring name and fame to the party. Same factor is applicable in state, District and MLA constituencies.

  RSS should guide the BJP in this regard. Because you have the ability to remove Advani from party presidential post for silly reasons. so please go ahead. Don’t keep quiet as you have did in the serious matters of Yadiyoorappa, finally encouraged BJP to commit suicide in Karnataka.

  Iam a supporter of BJP from my childhood (2nd standard) and even today. so hope I have the moral right to post my feelings here and waiting for the repeat of Party’s beautiful history in our district.

 8. ನರೇಂದ್ರ ಅಂತ ಹೆಸರಿದ್ದ ಮಾತ್ರಕ್ಕೆ ವಿವೇಕಾನಂದ ಹಾಗಲು ಸಾಧ್ಯವಿಲ್ಲ. ಅವರಂತೆ ನಡೆಯಲಿ. ಬಾಜಪ ಸರಕಾರ ಬಂದ ನಂತರ ರಾಜ್ಯದಲ್ಲಿ ಹೊಸ ಯುಗ ಆರಂಭ ಅಂತಿದ್ದವರಿಗೆ ಮಸಿಬಳಿಯುವ ಕೆಲಸ ಮಾಡಿದೆ. ದಿ18-5-13 ರ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹರ ಲೇಖನ ನನ್ನ ಅನಿಸಿಕೆ.
  ಹೇ ಭಾರತಿ ಅಧಿಕಾರದ ದಾಹದಲ್ಲಿ ಬೆಯುತ್ತಿರುವ ಇವರಿಂದ ನಿನ್ನ ಸೆರಗನ್ನು ಹೇಗೆ ಕಾಪಾಡಿಕೋಳ್ಳುವೆಯೋ ತಾಯೆ, ಜೇ ಭಾರತ್ ಮಾತಾಕೀ ಜ್ಯೆ, ವಂದೇ ಮಾತರಂ.
  ಭಾರತ ಮಾತೆಯ ಪುತ್ರರು ನಾವು ಎಂದು ಹೇಳಿಕೊಳ್ಳುತ್ತಿದ್ದ ನಾಯಕರನ್ನು ನಂಬಿ ಅಧಿಕಾರ ನೀಡಿದರೆ ಅಧಿಕಾರದ ಅಮಲಿನಲ್ಲಿ ದೇಶ ಸುಲಿಗೆ ಮಾಡಿದ ರಾಜ್ಯ ನಾಯಕರಿಗೆ ಏನು ಹೇಳಬೇಕು. ಉದಾಹರಣೆ ದತ್ತಪೀಠದ ಹೆಸರೇಳಿಕೊಂಡು ಅಧಿಕಾರ ಹಿಡಿದ ಸಿಟಿ ರವಿ(ಲೂಟಿ, ಕೋಟಿ ರವಿ) ಕೋಟಿಗಟ್ಟಲೇ ದರೋಡೆ ಮಾಡಿ ಗಳಿಸಿದರೆ ಆ ಹಣ ಎಲ್ಲಿಯದು?. ಅವರು ಮಾಡಿರುವ ಕಾಮಾಗಾರಿ ಈ ಮಳೆಗಾಲ ಕಳೆದರೆ ಹೆಚ್ಚು, ಇಂತವರಿಂದ ನಾವು ನೀತಿ ಪಾಠ ಕೇಳ ಬೇಕಾದ ದುಸ್ಥಿತಿ ನಮ್ಮದು, ಮತ್ತು ಇಂತ ಮಕ್ಕಳಿಂದ ತಾನು ರಕ್ಷಣೆ ಪಡೆಯಬೇಕಾದ ದೌಭಾಱಗ್ಯ ತಾಯಿ ಭಾರತಿಯದು. ಇವರು ಮಾಡಿರುವ ಕೆಲಸಕ್ಕೆ ಅವರ ಎಂಜಲು ತಿಂದ ಹಿಂಬಾಲಕರು ಯಾರು ಮಾಡಿರದ ತಪ್ಪು ಮಾಡಿಲ್ಲ 50 ವಷಱ ಆಳೀದ ಕಾಂಗ್ರೇಸ್ಸಿನವರು ಮಾಡ್ಡಿದ್ದಾರೆ ಎಂದು ತಿಪ್ಪೆ ಸಾರಿಸುತ್ತಾರೆ. ಅವರು ಮಾಡಿದ್ದಾರೆ ಅಂತ ಇವರಿಗೆ ಅಧಿಕಾರ ನೀಡಿದರೆ ಇವರು ಅವರಿಗಿಂತ ಹೆಚ್ಚು.

 9. ವೋಟಿಗಾಗಿ ತನ್ನ ಕಛೇರಿ ಎದುರು ಬಿಜೆಪಿ- ಆರೆಸ್ಸೆಸ್‌ಗಳೇ ಬಾಂಬ್ ಸ್ಫೋಟಿಸಿಕೊಂಡವು ಎಂಬ ಸಿದ್ಧರಾಮಯ್ಯನವರ ಆರೋಪ ಒಪ್ಪುವುದೆ ಆದರೆ ಅವತ್ತು ಗಾಂಧೀಜಿ ಹತ್ಯೆಯ್ಲಲೂ ಕಾಂಗ್ರೆಸ್ಸಿನದೆ ಕೈವಾಡ ಇತ್ತೆಂದು ಹೇಳಬಹುದು!.

  ತಪ್ಪುಗಳನ್ನು ತಿದ್ದಿಕೊಂಡು ಬಿಜೆಪಿ ಮತ್ತೆ ಏಳಲಿದೆ. ಹಾಗೆ ಏಳುವುದು ಸಮಾಜಕ್ಕೂ ಬೇಕಿದೆ-ಸಂಘದ ಪರಿವಾರ ಸಂಘಟನೆಗಳಿಗೂ ಈ ಶಕ್ತಿ ಇದ್ದೇ ಇದೆ.

 10. As you are an eminent spokesperson in Karnataka, i would like to suggest to you that we prepare a wishlist to be sent to Narendra Modi once he becomes the P.M. I think the first point in the wishlist is to build electric train transport on the roads and monopolize public transport sector to utilize electricity. This is the case in all the developed countries. The more we use oil resources for transport, the more we are at the mercy of US dollars and import which is the first factor in bringing a nations’s currency down. A model of this can be seen from the Strassenbahn in Germany.

  Also developed countries mostly use electric stove’s to cook . This also minimizes the Natural Gas import and become self reliant because it is much easier to setup 10 new electricity generation plants than oil and natural gas plants.

  Hope you consider my suggestions and include them in your speeches also.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s