ಯುದ್ಧ ಶುರುವಾಗುವ ಮೊದಲೇ ಸೋತುಹೋದವರು

ರಾಹುಲ್‌ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಆಗೆಲ್ಲ ಇಲ್ಲದ ವಂಶ ಪರಂಪರೆಯ ಕಾಳಜಿ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿಯಾದಾಗ ಹೊರಬಂದಿತೇಕೆ?

ಅದು ಮೋದಿಯ ಮ್ಯಾಜಿಕ್ಕು. ಒಂದು ಗಂಟೆಯ ಭಾಷಣ ಮುಗಿವ ವೇಳೆಗೆ ಎದುರಾಳಿಗಳೆಲ್ಲ ಹೊದ್ದು ಮಲಗಿಬಿಟ್ಟಿದ್ದರು. ಅನಂತ ಕುಮಾರ್, ಮುರಳಿ ಮನೋಹರ್ ಜೋಷಿಯಂತಹ ಮನಸಲ್ಲೇ ಮಂಡಿಗೆ ತಿನ್ನುತ್ತಿದ್ದವರಿರಲಿ, ಸುಷ್ಮಾ, ಜೇಟ್ಲಿ, ಗಡ್ಕರಿ, ಅಡ್ವಾಣಿಯಂತಹ ನಾಯಕರೂ ದಾರಿ ಬಿಟ್ಟು ನಿಂತುಬಿಟ್ಟರು. ಸ್ವಂತ ಪಾರ್ಟಿಯವರೇನು, ಕಾಂಗ್ರೆಸ್ಸು ಕೂಡ ತೊದಲಲಾರಂಭಿಸಿತು. ದೇಶದ ಪಾಲಿಗೆ ಬಾಲ ನಟನೇ ಆಗಿರುವ ರಾಹುಲ್ ಗಾಂಧಿಯೂ ನಾನು ಪ್ರಧಾನಿಯಾಗಲಾರೆ ಎಂದುಬಿಟ್ಟ. ಬೀಸುವ ನಾಲಗೆಯಿಂದ ಬಚಾವಾದರೆ ಸಾವಿರ ವರ್ಷ ಅಧಿಕಾರವಂತೆ’ ಎಂಬ ಹೊಸ ನುಡಿಕಟ್ಟೇ ಸೃಷ್ಟಿಯಾಗಿಬಿಟ್ಟಿತು

modi-rahul-comboಪ್ರಶ್ನೆ ಇರೋದು ಇಲ್ಲಿ. ಪ್ರಧಾನಿಯಾಗುವುದಿಲ್ಲ ಎನ್ನುವ ಜೊತೆಜೊತೆಗೇ ಅಧ್ಯಾತ್ಮಜೀವಿಯಂತೆ ಮಾತನಾಡಿರುವ ರಾಹುಲ್ ಬಾಬಾ ಒಂದಷ್ಟು ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲ. ಮದುವೆಯಾದರೆ ಮಕ್ಕಳಾಗುತ್ತವೆ, ಆಮೇಲೆ ಅವರಿಗೂ ಅಧಿಕಾರದ ಬಯಕೆ ಹತ್ತಿಬಿಡುತ್ತದೆ. ಹೀಗಾಗಿ ಮದುವೆಯೇ ಬೇಡವೆಂದಿದ್ದೇನೆ ಎಂದರಲ್ಲ, ಅದರ ಬದಲು ರಾಜೀವ್ ಗಾಂಧಿಯ ಮಗನೆನ್ನುವ ಕಾರಣಕ್ಕೆ ತಾನೇ ಕಾಂಗ್ರೆಸ್ಸು ಆಳುವುದನ್ನು ಬಿಟ್ಟು ಸ್ವಂತ ಉದ್ಯೋಗ ಮಾಡಿದರೆ ಗಂಟೇನು ಹೋಗುತ್ತೆ ಹೇಳಿ? ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಗ ಹಾಗೇ ಬದುಕಿರಲಿಲ್ಲವೆ? ಮಹಾತ್ಮಾ ಗಾಂಧಿಯೂ ತಮ್ಮ ಮಕ್ಕಳನ್ನ ಸಕ್ರಿಯ ರಾಜಕಾರಣಕ್ಕೆ ತರಲಿಲ್ಲವಲ್ಲ? ದೇಶವನ್ನು ರಾಜರ ಆಳ್ವಿಕೆಯಿಂದ ಮುಕ್ತಗೊಳಿಸಿದ ಪಟೇಲರು ಅದನ್ನು ನೆಹರೂ ಕೈಗಿಟ್ಟರು. ಅವರೂ ಅದೇ ಬಗೆಯ ವಂಶಪಾರಂಪರ‍್ಯದ ಆಡಳಿತ ನಡೆಸುವರೆಂದು ಆಗವರು ಊಹಿಸಿಯೂ ಇರಲಿಲ್ಲವೇನೋ.
ರಾಹುಲ್‌ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಆಗೆಲ್ಲ ಇಲ್ಲದ ವಂಶ ಪರಂಪರೆಯ ಕಾಳಜಿ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿಯಾದಾಗ ಹೊರಬಂದಿತೇಕೆ?
ಅದು ಸರಿ, ಹೈಕಮಾಂಡ್ ಪದ್ಧತಿಯೇ ಇಷ್ಟವಿಲ್ಲ ಎಂದರಲ್ಲ ರಾಹುಲ್, ತನ್ನ ತಾಯಿಯೊಬ್ಬರನ್ನು ಕರೆದುಕೊಂಡು ಇಟಲಿಗೆ ಹೊರಟುಬಿಟ್ಟರೆ ಕಾಂಗ್ರೆಸ್ಸಿನಲ್ಲಿ ಈ ಪಿಡುಗನ್ನು ನಾಶ ಮಾಡಿಬಿಡಬಹುದು ಎಂಬ ಕನಿಷ್ಠ ಜ್ಞಾನ ಅವರಿಗಿಲ್ಲವೆ? ಮನಮೋಹನ ಸಿಂಗರ ಕೇಂದ್ರ ಸರ್ಕಾರಕ್ಕೊಂದು ನೆರಳಿನ ಸರ್ಕಾರ (ಶ್ಯಾಡೋ ಗವರ್ನ್‌ಮೆಂಟ್) ಇದೆಯಲ್ಲ, ಅದರ ಮುಖ್ಯಸ್ಥೆಯೇ ಸೋನಿಯಾ ಎಂಬುದನ್ನು ದೆಹಲಿಯ ಗೋಡೆಗೋಡೆಗಳೂ ಕೂಗಿ ಹೇಳುತ್ತವೆ. ಅಲ್ಲೊಂದು ಬದಲಾವಣೆ ತಂದುಬಿಟ್ಟಿದ್ದರೆ ದೇಶದ ಕಥೆಯೇ ಬದಲಾಗಿಬಿಡುತ್ತಿತ್ತಲ್ಲ! ಬಹುಶಃ ಭಾಷಣ ಬರೆದುಕೊಟ್ಟವರು ಇದನ್ನು ಮರೆತುಬಿಟ್ಟಿರಬೇಕು. ಹೋಗಲಿ… ಮುಂದಿನ ಪ್ರಧಾನಿ ಎಂಬಂತೆ ಈ ಹಂತದಲ್ಲಿ ಆಂಟನಿಯವರ ಹೆಸರಿನ ಜಪ ಶುರುವಾಗಿದೆಯಲ್ಲ, ಅದಕ್ಕೇನಾದರೂ ಕಾರಣ ಇದ್ದರೆ, ಆತ ಅತ್ಯಂತ ಪ್ರಾಮಾಣಿಕ ಮತ್ತು ಸೋನಿಯಾ ಪರಿವಾರದ ನಿಷ್ಠ ಎಂಬುದು ಮಾತ್ರ. ಮನಮೋಹನ ಸಿಂಗರೂ ಭ್ರಷ್ಟರೇನಲ್ಲ. ಅವರು ಅಧಿಕಾರಕ್ಕೇರಲು ಇದ್ದುದೂ ಆ ಒಂದೇ ಅರ್ಹತೆ, ಪರಿವಾರ ನಿಷ್ಠೆ. ಈಗ ಹೇಳಿ. ಹೈಕಮಾಂಡ್ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿ ಬೇರೂರಿಲ್ಲವೇನು?
ಏಕವ್ಯಕ್ತಿ ನಿಷ್ಠೆ, ಪರಿವಾರ ನಿಷ್ಠೆ ಇವೆಲ್ಲ ಕೆಡುಕಿನ ಮುನ್ಸೂಚನೆಗಳೇ. ಪಟೆಲರಂತಹ ಪಟೇಲರು ಗಾಂಧಿಗೆ ನಿಷ್ಠರಾಗಿ ನಡೆದುಕೊಂಡಿದ್ದರಿಂದಲೇ ಇಂದಿನ ಎಲ್ಲ ಸಮಸ್ಯೆಗಳೂ ಜೀವಂತವಾಗಿರೋದು. ೧೯೩೦ರ ವೇಳೆಗೇ ಗಾಂಧೀಜಿ ಕಾಂಗ್ರೆಸ್ಸಿನ ಪಾಲಿಗೆ ಸತ್ತು ಹೋಗಿದ್ದರು. ಅವರ ಮಾತುಗಳನ್ನು ಕೇಳುವವರೇ ಇರಲಿಲ್ಲ. ಅವರ ಸತ್ಯಾಗ್ರಹದ ಹೋರಾಟ ಅರ್ಥ ಕಳಕೊಂಡು ಪೇಲವವಾಗಿಬಿಟ್ಟಿತ್ತು. ಅವರನ್ನು ಧಿಕ್ಕರಿಸಿ ಹೊರಬಂದವರೆಲ್ಲ ಸಮಾಜದ ಕಣ್ಮಣಿಗಳಾಗಿಬಿಟ್ಟಿದ್ದರು. ಗಾಂಧೀಜಿ ಬದುಕಿದ್ದಿದ್ದರೆ ಅದು ಪಟೇಲರ ನಿಷ್ಠೆಯಲ್ಲಿ ಮಾತ್ರ! ಅವರಿಗದು ಅರಿವಾಗುವ ವೇಳೆಗೆ ತುಂಬಾ ತಡವಾಗಿಬಿಟ್ಟಿತ್ತು. ದೇಶ ಪ್ರಪಾತದೆಡೆಗೆ ತೀವ್ರ ಗತಿಯಿಂದ ಸಾಗಿತ್ತು. ಸಿದ್ಧಾಂತ, ಆದರ್ಶಗಳನ್ನು ಬಿಟ್ಟು ವ್ಯಕ್ತಿಗೆ ನಿಷ್ಠವಾಗಿ ನಡೆಯುತ್ತಾರಲ್ಲ, ಅಂಥವರು ಬಲು ಅಪಾಯಕಾರಿ ಎಂದು ಅದಕ್ಕೇ ಹೇಳೋದು. ಮನಮೋಹನ ಸಿಂಗರ ನಂತರ ಅಂಥದೇ ರಬ್ಬರ್ ಸ್ಟಾಂಪ್ ಈಗ ಆಂಟನಿಯ ರೂಪದಲ್ಲಿ.
ಇಷ್ಟಕ್ಕೂ ರಾಹುಲ್ ಗಾಂಧಿ ರಣರಂಗದಿಂದ ಹಿಂಜರಿಯಲು ಕಾರಣ ಏನು ಗೊತ್ತೆ? ಎದುರಾಳಿ ಮೋದಿಯೆಂಬುದು ಖಾತ್ರಿಯಾದುದರಿಂದ. ದೇಶದ ಯುವಕರು, ರೈತರು, ಹೆಂಗಸರು, ವ್ಯಾಪಾರಿಗಳು, ಬುದ್ಧಿವಂತರೆಲ್ಲ ಮೋದಿಯ ಹೆಸರನ್ನು ಜಪಿಸುತ್ತಿದ್ದರೆ. ಅಲ್ಲೊಂದು ಇಲ್ಲೊಂದು ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆಗಳು ಮಾತ್ರ ಜನ ರಾಹುಲ್‌ರನ್ನು ಪ್ರಧಾನಿಯಾಗಿ ನೋಡಲಿಚ್ಛಿಸುತ್ತಾರೆ ಎಂಬ ವರದಿ ಪ್ರಕಟಿಸುತ್ತಿವೆ.
ಪಾಪ. ಮೋದಿ ಎದುರು ರಾಹುಲ್‌ಗಿರುವ ಸಾಮರ್ಥ್ಯವಾದರೂ ಎಂತಹದು ಹೇಳಿ? ಆತ ಮುಖ್ಯಮಂತ್ರಿಯಾಗಿ ಒಂದು ರಾಜ್ಯದ ಹೊಣೆ ಹೊತ್ತಿರುವರಾ? ಅಥವಾ ಕ್ಷೇತ್ರದ ಅಭಿವೃದ್ಧಿ ಸಾಧಿಸಿ ಮಾದರಿ ಮಾಡಿದ್ದಾರಾ? ಅವೆಲ್ಲ ಬಿಡಿ. ಈ ಆಡಳಿತಾವಧಿಯಲ್ಲಿ ಸಮಸ್ಯೆಗಳ ಆಗರವಾಗಿರುವ ಭಾರತದ ಕುರಿತಂತೆ ಸಂಸತ್ತಿನಲ್ಲಿ ದನಿ ಎತ್ತಿದ್ದಾರಾ? ಲೆಕ್ಕ ಹಾಕಿದರೆ ಮೂರ್ನಾಲ್ಕು ಗಂಟೆಗಳು ಸಂಸತ್ತಿನಲ್ಲಿ ಮಾತಾಡಿರದ ರಾಹುಲ್ ಬಾಬಾ ಪ್ರಧಾನಿಯಾಗಿ ಅದೇನು ಮಾಡಿಯಾರು ಹೇಳಿ! ಮೋದಿಯ ಚಾಟಿ ತಿರುಗಲಾರಂಭಿಸಿದರೆ ಉಳಿಯೋದು ಕಷ್ಟ ಅಂತಾನೇ ಯುದ್ಧ ಆರಂಭವಾಗುವುದಕ್ಕೂ ಮುನ್ನ ರಾಹುಲ್ ಗಾಂಧಿ ನಿವೃತ್ತಿ ಘೋಷಿಸಿಬಿಟ್ಟಿರೋದು.
ಇದು ಒಳ್ಳೆಯ ಬೆಳವಣಿಗೆಯೇ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಸಾಕುಸಾಕಾಗಿ ಹೋಗಿದೆ. ಮುಲಾಯಮ್‌ರ ಮಗ ಅಖಿಲೇಶ್ ಅಧಿಕಾರಕ್ಕೆ ಬಂದಾಗ ಉತ್ತರ ಪ್ರದೇಶ ಹಿರಿಹಿರಿಹಿಗ್ಗಿತ್ತು. ಆದರೆ ತಂದೆಯ ಚಪ್ಪಲಿಯೊಳಗೆ ಕಾಲಿಟ್ಟ ಮಗ ಅವರಂತೆ ನಡೆದನೇ ಹೊರತು ಹೊಸದಾದ ದಾರಿ ಮಾಡಿಕೊಳ್ಳಲೇ ಇಲ್ಲ. ಅವನ ಕ್ಯಾಬಿನೆಟ್ಟಿನಲ್ಲಿರುವ ಪ್ರತಿಯೊಬ್ಬರನ್ನೂ ಆರಿಸಿ ಕುಳ್ಳಿರಿಸಿಕೊಂಡಿರೋದು ಅಖಿಲೇಶನಲ್ಲ, ಅವರಪ್ಪನೇ! ಎಡ ಬಲ – ಹಿಂದೆ ಮುಂದೆಯೆಲ್ಲ ಅಂಕಲ್‌ಗಳ ರಾಶಿ. ಅವರು ಹೇಳಿದ ಮಾತನ್ನು ಮೀರಲಾಗದೆ ಉತ್ತರ ಪ್ರದೇಶವನ್ನೆ ಗೂಂಡಾ ರಾಜ್ ಮಾಡಿಬಿಟ್ಟಿದ್ದಾನೆ ಅಖಿಲೇಶ್. ಹಣವನ್ನು ಅಲ್ಪಸಂಖ್ಯಾತರಿಗೆ ಹಂಚೋದು, ೨೦೧೪ರಲ್ಲಿ ಸಾಕಷ್ಟು ಮತ ಗಳಿಸೋದು. ಇದೊಂದೇ ಅವನ ಸದ್ಯದ ಗುರಿ.
ಮಕ್ಕಳನ್ನು ರಾಜಕಾರಣಕ್ಕೆ ತರದೆ ಶುದ್ಧ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಉಳಿದುಬಿಟ್ಟಿದ್ದರೆ ಇಂದು ರಾಷ್ಟ್ರ ರಾಜಕಾರಣ ನೆನಪಿನಲ್ಲಿಡುವಂತಹ ನಾಯಕರಾಗಿಬಿಟ್ಟಿರುತ್ತಿದ್ದರು. ತನ್ನಂತೆ ತನ್ನ ಮಕ್ಕಳೂ ಅಧಿಕಾರದ ಅಂಗಳದಲ್ಲಿಯೇ ಆಟವಾಡಬೇಕೆಂದು ಬಯಸಿದರೆ ಸೂಕ್ತ ದಂಡವನ್ನು ತೆರಲೇಬೇಕು. ಅನುಮಾನವೇ ಇಲ್ಲ.
ಸಾಲ್ಮನ್ ಹಿಲ್ಪ್ ಎನ್ನುವ ಮೀನು ಪ್ರವಾಹಕ್ಕೆ ವಿರುದ್ಧವಾಗಿ ಈಜಿ ನದಿ ಹುಟ್ಟುವಲ್ಲಿ ಮೊಟ್ಟೆ ಇಡುತ್ತದಂತೆ. ಮರಿಗಳು ಹುಟ್ಟುವಾಗ ಎತ್ತರದಲ್ಲಿರಬೇಕೆಂಬ ಬಯಕೆ ಅದರದ್ದು. ಹಾಗೆಯೇ ಈ ಪರಿವಾರ ರಾಜಕಾರಣದ ಅಧ್ವರ್ಯುಗಳು. ಇದು ರಾಜಕಾರಣದಲ್ಲಷ್ಟೆ ಅಲ್ಲ, ಎಲ್ಲೆಡೆಯೂ ಹಾಸುಹೊಕ್ಕಾಗಿ ಹರಡಿಕೊಂಡಿದೆ. ಸರ್ಕಾರಿ ನೌಕರ ತನ್ನ ಮಗನಿಗೂ ಇಂತಹದೆ ನೌಕರಿ ಸಿಗಲೆಂದು ಹಂಬಲಿಸುತ್ತಾನೆ. ವೈದ್ಯರಿಗೆ ತಮ್ಮ ಮಕ್ಕಳೂ ಇದೇ ವೃತ್ತಿ ಹಿಡಿಯಲೆಂಬ ಬಯಕೆ. ಮಠಾಧಿಕಾರ ಹೊಂದಿದ ಅನೇಕ ಸಂತರು ತಮ್ಮ ಪೀಠಕ್ಕೆ ಅಣ್ಣ-ತಮ್ಮಂದಿರ ಮಕ್ಕಳನ್ನೂ ಎಳೆದು ತರೋದು ಈ ಕಾರಣದಿಂದಲೇ. ಈ ಹಂಬಲ ಇಲ್ಲದವರು ಸಮಾಜದ ನೆನಪಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾರೆ.
ವಾಜಪೇಯಿಗೆ ಎದುರಾಳಿಗಳೂ ಮುಜರಾ ಸಲ್ಲಿಸುತ್ತಿದ್ದುದು ಇದೇ ಕಾರಣದಿಂದಾಗಿ. ಈಗ ಮೋದಿಗೂ ಅಷ್ಟೆ. ತನ್ನ ನಂತರ ತನ್ನವರಾರನ್ನೂ ಮುಂದಿಡುತ್ತಿಲ್ಲವೆಂಬ ಕಾರಣಕ್ಕೇ ಜನ ಅಪ್ಪಿಕೊಳ್ಳಲು ಸಿದ್ಧವಾಗುತ್ತಿರೋದು. ಮೋದಿ ಈ ರಾಷ್ಟ್ರದ ಮೂಲಸತ್ವಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ವ್ಯಕ್ತಿತ್ವ. ಬಹಳ ಜನರಿಗೆ ಗೊತ್ತಿರಲಾರದು. ಆತ ಈ ಬಾರಿ ಚುನಾವಣೆಗಳನ್ನು ಗೆದ್ದೊಡನೆ ಮೊದಲು ತಾಯಿಯ ಕಾಲಿಗೆ ನಮಸ್ಕರಿಸಿದರು. ಮತ್ತೆ ಮಾಡಿದ್ದೇನು ಗೊತ್ತೆ? ಚುನಾವಣೆಯನ್ನು ತನ್ನ ಪಾಲಿಗೆ ಕಠಿಣಗೊಳಿಸಿದ ಒಂದು ಕಾಲದ ಮಿತ್ರ ಕೇಶುಭಾಯಿ ಪಟೇಲರ ಮನೆಗೆ ಹೋಗಿದ್ದು. ಚತುರ ಮೋದಿ ಪಟೇಲರಿಗೆ, ನೀವು ಗುಜರಾತಿನ ಮಾನ ಉಳಿಸಿಬಿಟ್ಟಿರಿ ಎಂದರಂತೆ. ಕೇಶುಭಾಯಿ ಪಟೇಲರು ಅದು ಹೇಗೆ ಎಂದು ಕೇಳಿದಾಗ, ಕಳೆದ ಬಾರಿ ನಮಗೆ ನೂರಾ ಹದಿನೇಳು ಸ್ಥಾನದಲ್ಲಿ ಜಯ ದಕ್ಕಿತ್ತು. ಈ ಬಾರಿಯೂ ಅಷ್ಟೆ. ನನಗೆ ನೂರಾ ಹದಿನೈದು, ನಿಮಗೆ ಎರಡು. ಮತ್ತೆ ಅಷ್ಟೇ ಆಯಿತಲ್ಲ ಅಂತ! ಇದನ್ನು ಕೇಳಿದೊಡನೆ ನನಗಂತೂ ಧರ್ಮರಾಯ ನೆನಪಾಗಿಬಿಟ್ಟ. ಆತ ಹೇಳುತ್ತಾನಲ್ಲ, ನಮ್ಮೊಳಗೆ ಕಾದಾಡುವಾಗ ನಾವು ಐವರು, ನೀವು ನೂರು. ಅನ್ಯರು ನಮ್ಮ ಮೇಲೆರಗಿ ಬಂದರೆ ನಾವು ನೂರೈದು ಅಂತ. ಹಾಗಾಯ್ತು ಕಥೆ!
ಮೋದಿ ಧರ್ಮರಾಯನಂತಷ್ಟೆ ಅಲ್ಲ, ಅರ್ಜುನನಂತೆ ಗುರಿಯಿಟ್ಟು ಭೀಮಸೇನನಂತೆ ಗದಾಪ್ರಹಾರದವನ್ನೂ ಮಾಡಬಲ್ಲವರು. ನಕುಲ ಸಹದೇವರಂತೆ ಕುಶಲಕರ್ಮಿಯಾಗಿಯೂ ನಿಲ್ಲಬಲ್ಲವರು. ಹೌದು. ಆತ ಒಂಥರಾ ಪಾಂಡವರನ್ನು ಒಳಗೊಂಡ ಕಂಪ್ಲೀಟ್ ಪ್ಯಾಕೇಜ್. ಕುರುಕ್ಷೇತ್ರಕ್ಕೆ ಆತ ಈಗ ತಯಾರಾಗಿಯೇ ಬಂದಿದ್ದಾರೆ. ತನ್ನನ್ನು ಸದಾ ವಿರೋಧಿಸುವ ಮಾಧ್ಯಮಗಳು, ಅಂತಾರಾಷ್ಟ್ರೀಯ ಷಡ್ಯಂತ್ರಗಳು, ಕಾಂಗ್ರೆಸ್ಸು, ಈಗೀಗ ಕೇಜ್ರಿವಾಲ್- ಇವರೆಲ್ಲರನ್ನೂ ಒಳಗೊಂಡಿರುವ ಹದಿನೆಂಟು ಅಕ್ಷೋಹಿಣಿ ಸೈನ್ಯ ಅವನೆದುರಿಗೆ ನಿಂತಿದೆ. ಕೌರವರ ಪಾಳಯದ ನಾಯಕರಾಗಿ ಪಟ್ಟಕ್ಕೇರಿದ್ದವ ಯುದ್ಧಕ್ಕೆ ಮುನ್ನವೇ ನೇತೃತ್ವದಿಂದ ಹಿಂಜರಿದಾಗಿದೆ. ಮುಂದೆ ಯಾರೆಂದು ಕಾದು ನೋಡಬೇಕಿದೆ ಅಷ್ಟೆ.
ಅಗೋ! ಪಾಂಚಜನ್ಯ ಮೊಳಗಲು ಸಿದ್ಧತೆ ನಡೆದುಬಿಟ್ಟಿದೆ. ಇನ್ನು ಯುದ್ಧ ಆರಂಭವಾಗುವುದಷ್ಟೆ ಬಾಕಿ.

30 thoughts on “ಯುದ್ಧ ಶುರುವಾಗುವ ಮೊದಲೇ ಸೋತುಹೋದವರು

 1. Bolo Bharath Matha ki ….JAI- it is the first word of Modi’s speech where ever he goes. If we want to save INDIA & its Culture Narendra Modi should be our PM. we don’t support him blindly , but we have seen him in all dimensions that he is the only MEN. who is having all elligibility to sit in DELHI SIMHASANA . rest (……….)are useless.
  Jai Hind

  Nice &trouthfull article (allways)

 2. ಅಯೋಗ್ಯ ವ೦ಶಾಡಳಿತ ಇನ್ನಾದರೂ ಕೊನೆಗೊಳ್ಳಲಿ, ಆಕಾರ ಕಳೆದುಕೊ೦ಡ ಹರಕಲು ಗಾ೦ಧಿ ಟೋಪಿ ಹಾಕಿದ ಭ್ರಷ್ಟ ನೆಹರು ಸ೦ತತಿ ನಿರ್ನಾಮವಾಗಲಿ.ನೆಹರು ಎ೦ಬ ಲಫ೦ಗನನ್ನು ಅಧಿಕಾರದ ಗದ್ದುಗೆಗೆ ಏರಿಸದೆ ಪಟೇಲರು ಪ್ರಧಾನಿಯಾಗುತ್ತಿದ್ದರೆ ಈ ರಾಷ್ಟ್ರದ ಚಿತ್ರಣವೇ ಬದಲಾಗುತ್ತಿತ್ತು .ಮೋದಿಯವರು ಅಖಾಡಕ್ಕಿಳಿದಾಗ ರಾಷ್ಟ್ರಭಕ್ತರೆಲ್ಲರೂ ಜತೆಗೂಡಿ ಮತ್ತೋ೦ದು ಸ್ವಾತ೦ತ್ರ್ಯ ಸ೦ಗ್ರಾಮದ೦ತೆ ಬೆ೦ಬಲಿಸಬೇಕಾದುದು ಅಷ್ಟೇ ಮುಖ್ಯ.

 3. ದೇಶ ವಿಭಜನೆ ಆಗಿ ಸಾವಿರಾರು ಜನ ಹೊಡೆದಾಡಿ ಸತ್ತಿದ್ದೇ ಜಿನ್ನಾ ಮತ್ತು ನೆಹರು ಎಂಬ ಇಬ್ಬರು ಸ್ತ್ರೀಲೋಲರಿಂದ.. ಇಂತಹಾ ವಂಶಪಾರಂಪರ್ಯ ಆಡಳಿತ ನಿಜವಾಗಿಯೂ ಬ್ರಿಟಿಷ್ ಆಡಳಿತದಲ್ಲಿ ಇರಲಿಲ್ಲ ಹಾಗೂ ಬುದ್ದಿವಂತರಿಗೆ ಮೊದಲ ಆದ್ಯತೆ ಇತ್ತು. ಇನ್ನು ಮುಂದೆ ರಾಜಕಾರಣಿಯಾಗುವವನಿಗೆ ತನ್ನ ವಂಶದಿಂದ ಯಾರನ್ನೂ ರಾಜಕಾರಣಿ ಮಾಡುವುದಿಲ್ಲ ಎಂದು ಉಯಿಲು ಬರೆಸಿ ನಂತರ ಅಧಿಕಾರ ಕೊಡಬೇಕು.

 4. ಮುಖ್ಯಮಂತ್ರಿ ನರೆಂದ್ರಮೋದಿಯ ಹಲವು ಮುಖ

  ಭಾರತೀಯರಲ್ಲಿ ಕೆಲವರು ಮೋದಿಯನ್ನು ಹೊಗಳಿ ಬರೆಯುತ್ತಿದ್ದಾರೆ. ನೀವುಗಳು ಮೋದಿಯ ಒಂದು ಮುಖವನ್ನು ಮಾತ್ರವೇ ನೋಡಿ ಬರೆಯುತ್ತಿದ್ದೀರಿ ಆತನಿಗೆ ಹಲವು ಮುಖಗಳಿವೆ ಅದನ್ನು ನೋಡಿದಲ್ಲಿ ನೀವು ಕಾಣೆಯಾಗುತ್ತೀರಿ. ಗೋಮುಖ ವ್ಯಾಘ್ರವೆಂದು ಕೇಳಿದ್ದೀರಿ ಅಷ್ಟೆ, ಮುಂದೆ ಆತ ಪ್ರಧಾನ ಮಂತ್ರಿಯಾದಲ್ಲಿ ನೀವು ಕಾಣುವುದರಲ್ಲಿ ಸಂದೇಹವಿಲ್ಲ. ಕೇಸರಿ ಬಾವುಟ ಬಟ್ಟೆಯವರು ಹೊಗಳಲೇ ಬೇಕು ಕಾರಣ ಅವರು ಬಹುಸಂಖ್ಯಾತರು ಅವರು ನೆನಸಿದಂತೆ ಅಲ್ಪಸಂಖ್ಯಾತರು ಬಹು ಸಂಖ್ಯಾತರು ಹೇಳಿದಂತೆ ಕೇಳಿ ನಡೆಯಬೇಕಿದೆ. ಅಲ್ಪಸಂಖ್ಯಾತ ತುಳಿದು ನಡೆಯ ಬೇಕಿದೆ. ಈ ದೇಶದಲ್ಲಿ ಅದಕ್ಕಾಗಿ ಒಂದು ಸಂಘಟನೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂಬುದು ಎಲ್ಲರು ಅರಿತ ಸತ್ಯಸ್ಯ ಸತ್ಯವೇ.
  ಅಮೇರಿಕಾದ ಕೆಲವು ಅವರ ಚೇಲಾಗಳು ಅವರಿಂದ ಪ್ರಚಾರವನ್ನು ಮಾಡುತ್ತಿರುವುದು ಸೋಜಿಗವೇ ಸರಿ. ಯಾವಾಗಲೂ ನಮ್ಮಗಿಂತ ಹೊರನಾಡ ಜನರಿಂದಲೇ ಭಾತದ ಮೇಲೆ ಅಭಿಮಾನವಿರುವುದು ಸರಿಯಷ್ಟೆ, ಆದರೇ, ಅದು ದೊಡ್ಡ ದುರಾಭಿಮಾನಕ್ಕೆ ಎಡೆಮಾಡಿಕೊಡುತ್ತದೆ. ಅದು ನಮ್ಮಾ ಈ ಐಕ್ಯತೆಗೆ ಭಂಗತರುವಂತದ್ದು ಸರಿಯಲ್ಲ.
  ಯಾರು ಏನೇ ಹೇಳಲಿ ನಾವು ಒಟ್ಟು (ಮುಸಲ್ಮಾನರು ಕ್ರೈಸ್ತರು ಸಿಕ್ಕರು ಬೌದ್ಧರು ಜೈನರು) ಜನರೇ ಭಾರತೀಯ ಸೋದರಿ ಸೋದರು ಎಂಬುವುದರಲ್ಲಿ ಸಂದೇಹವಿಲ್ಲ. ಹೀಗೆ ಹಲವರು ಬೇರ್ಪಡಿಸಲು ಹೊರಟವರೇ, ಸೋಲುಕಂಡು ಹೋಗಿದ್ದಾರೆ. ಇಂತಹ ಹೊಲಸು ನಾಯಕರು ಏಷ್ಟೇ ಬರಲಿ ಅವರಿಗೆ ಸೋಲು ಖಚಿತ.
  ಮುಂದೆಯೇ ಗುಜರಾತ್ ಸಣ್ಣ ಗೃಹ ಉದ್ದುಮೆಯಲ್ಲಿ ಪ್ರಗತಿ ಕಂಡಿತ್ತು. ಅಲ್ಲಿನ ಜನರು ಚೆನ್ನಾಗಿ ಇದ್ದರೇ ಹೊರತು ಕಷ್ಟಪಡುವಂತೆ ಇರಲಿಲ್ಲವೆಂಬುದು ಸತ್ಯ. ಉದಾಹರಣೆಗೆ, ಅಲ್ಲಿ ಭೂಕಂಪವಾದಾಗ ಕೆಲ ರಾಜ್ಯಗಳಿಂದ ಹಣ ಬಟ್ಟೆ ಬರೆಗಳನ್ನು ಕಳಿಹಿಸಿದರು ಆಗ ಇದ್ದ ಮುಖ್ಯಮಂತ್ರಿ ನರೆಂದ್ರಮೋದಿ ಹೇಳಿಕೆ ಇತ್ತರು ನಮ್ಮ ಜನರು ಬಡವರೇನಲ್ಲ ಅವರಿಗೆ ಕೊಡುವುದಾದರೇ ಹೊಸ ಬಟ್ಟೆಗಳನ್ನು ಮಾತ್ರ ಕಳಿಸಿ ಹಳೆ ಬಟ್ಟೆಗಳನ್ನು ಕಳಿಹಿಸಬೇಡಿ ಎಂದಿರುತ್ತಾರೆ. ಅದೇ ಬೇರೆ ರಾಜ್ಯದಲ್ಲಿ ಇಂತಹ ಪರಿಸ್ಥಿಯಲ್ಲಿ ಇವರು ಹೊಸ ಬಟ್ಟೆಗಳನ್ನು ಕೊಟ್ತರೇ, ಯೋಚಿಸಿ. ಜೋತೆಗೆ ಆ ರಾಜ್ಯಗಳು ಅದನ್ನೇ ಚಿನ್ನದಂತೆ ಸ್ವೀಕರಿಸಿತು ಇದರಿಂದ ನೀವು ಅರಿತದ್ದು ಗುಜರಾತ್ ಸುಭಿಕ್ಷವಾಗೇ ಹಿಂದಿನಿಂದಲೂ ಇತ್ತು.
  ಗುಜರಾತ್ ನಿಂದ ಈ ಭಾರತದ ಬೇರೆ ರಾಜ್ಯಗಳಿಗೆ ಹಿಂದೆ ಯಾರಾದರು ಕೂಲಿ ಕೆಲಸಕ್ಕೆ ಬಂದಿದ್ದಾರಾ ಯೋಚಿಸಿ, ಮುಂದುವರಿದ ಜನರನ್ನು ಮುಂದೆ ತರುವುದು ದೊಡ್ಡ ವಿಷಯವಲ್ಲ. ಬಡತನದ ರಾಜ್ಯದ ಜನರ ಮುಂದೆ ತರುವುದು ದೊಡ್ಡ ವಿಷಯವಾಗುತ್ತದೆ.
  * * *. ಒಂದು ದೇಶಕ್ಕೆ ವಿದ್ಯಾವಂತರ ಮೇಲೆಯೇ ಒಂದು ದೇಶ ತಲೆಯೆತ್ತಿ ನಿಂತಿರುತ್ತದೆ. ಗುಜರಾತಿನಲ್ಲಿ ಸಾಕ್ಷರತೇಯ ಪ್ರಮಾಣವೇನು ಇವರು ಬಂದ ಮೇಲೆ ಅದರ ಬೆಳವಣಿಗೆ ಏನೂ ಇಲ್ಲವೆಂದು ಹೇಳಬಹುದಾಗಿದೆ.
  * ೧. ಮಕ್ಕಳ ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳು ಸಾವು ಹೆಚ್ಚುತಲಿದೆ. ಇವರ ಅದರ ಬಗ್ಗೆ ಮಾಡಿದ್ದಾದರೂ ಏನೂ.
  *೨. ಆದಿವಾಸಿ ಮತ್ತು ಹಿಂದೂಳಿದವರ ಮೇಲೆ ದೌರ್ಜನ್ಯವು ಹೆಚ್ಚುತಲೇ ಇದೆ. ಇದಕ್ಕೆ ಆ ಸರಕಾರವು ಅವರು ಮಾಡಿದ್ದಾದರೂ ಏನೂ .
  *೩. ದಲಿತರಿಗೆ ಏನಾದರೂ ಹೊಸ ಯೋಜನೆಗಳು ಇದೆಯೇ ದಲಿತರಿಗೆ ಸರಕಾರಗಳು ಮಾಡಿದ್ದಾದರೂ ಏನೂ.
  ೨೦೦೨ರಲ್ಲಿ ನಡೆದ ಸಂಘರ್ಷದಲ್ಲಿ ಪರಿಹಾರವೇನಾದರೂ ಆ ಜನಗಳಿಗೆ ಕೊಟ್ಟಿದೆಯೇ ಅವರ ಬಾಳು ನೆಮ್ಮದಿಯಾಗಿದೇಯೇ ಅವರಿಂದ ಮಾಹಿತಿ ಪಡೆಯಬೇಕಿದೆ.
  *೪. ಗುಜರಾತ್ ಸರಕಾರಿ ಬಂಡವಾಳ ಉದ್ದಮೆಗಳ ತೊಡಗದೇ ಬರೀ ಬಂಡವಾಳಶಾಹಿಗಳಿಗೆ ಉದ್ದೋಗ ಉದ್ದುಮೆಗಳ ನೆರವಲು ಅವಕಾಶಕೊಡಲು ಕಾರಣವೇನೂ.
  *೫. ಇಂತಹ ಪ್ಯಾಶಿಸ್ಟ್ ಸರ್ವಾಧಿಕಾರಿ ಸಮ್ರಾಜ್ಯಶಾಹಿ ಕೈಯಲ್ಲಿ ಭಾರತದಂತ ೧೨೦ ಕೋಟಿ ಜನಸಂಖ್ಯೆಯುಳ್ಳ ದೇಶವನ್ನು ಕೊಟ್ಟರೇ, ನಿಮ್ಮಂತಹ ಮುಠ್ಠಾಳರು ಇನ್ನಿಲ್ಲವೆಂಬುದು ಸತ್ಯ.

 5. Sri Gunashekhar,
  ನರೇಂದ್ರ ಮೋದಿ ಬರುವುದಕ್ಕಿಂತ ಮುನ್ನವೂ ಗುಜರಾತು ವ್ಯಾಪಾರಿಗಳ ನಾಡೇ ಆಗಿತ್ತು. ಆದರೆ ಆಗಿನ ನಾಯಕರಿಗಿಲ್ಲದ ದೃಷ್ಟಿ ಮೋದಿಯವರಿಗಿತ್ತು ಅಷ್ಟೇ! ಹೀಗಾಗಿ ಈಗ ಗುಜರಾತು ನಂಬರ್ ಒನ್ ಆಯಿತು.
  ಅದೇ ಹಳೆಯ ರಾಗ ಹಾಡುತ್ತಿದ್ದೀರಲ್ಲ.., 2002ರಿಂದ ಕೇಳೀ ಕೇಳಿ ಸಾಕಾಗಿ ಹೋಗಿದೆ. ಅಲ್ಲಿನ ಮುಸಲ್ಮಾನರ ಮನೆಗೇ ಹೋಗಿ ಮಾತನಾಡಿಸಿ ಬಂದಿದ್ದೇನೆ. ಅವರೂ ಮೋದಿ ರಾಜ್ಯದಲ್ಲಿ ಆನಂದವಾಗಿದ್ದಾರೆ. ಅದನ್ನು ಹೇಳಿದರೆ, ಹೆದರಿಕೆ ಅಂತೀರಿ. ನಿಮ್ಮ ಮನಸ್ಥಿತಿಗಳಿಗೆ ಮರುಗುವುದನ್ನುಉ ಬಿಟ್ಟರೆ ಮತ್ತೇನೂ ಮಾಡಲಾಗದು.
  ದಲಿತರಿಗಾಗಿ ಅವರು ಏನು ಮಾಡಿದ್ದೀರಿ ಅನ್ನೋ ಪ್ರಶ್ನೆ ಉದ್ಭವಿಸುವುದೇ ಇಲ್ಲ ಕಾರಣವೇನು ಗೊತ್ತೇ? ಆತ ಸ್ವತಃ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಪಾಪ. ಆತ ಮೇಲ್ವರ್ಗದವನಾಗಿದ್ದರೆ ನೀವೆಲ್ಲ ಕೊಂದೇ ಬಿಡುತ್ತಿದ್ದಿರೆನೋ?
  ಅದು ಸರಿ. ಕಾಶ್ಮೀರದಲ್ಲಿ ವರ್ಷಾನುಗಟ್ಟಲೆ ಮತಾಂಧ ಮುಸಲ್ಮಾನರು ಆಳುತ್ತಲೇ ಇದ್ದಾರಲ್ಲ.. ನಿಮಗೇನೂ ಅನ್ನಿಸುತ್ತಲೇ ಇಲ್ಲವಲ್ಲ. ಕೊಳೆತು ಹೋಗಿರುವ ನಿಮ್ಮ ಮನಸ್ಥಿತಿಗಳನ್ನು ರಿಪೇರಿ ಮಾಡಿಕೊಳ್ಳಿ.
  ದೃಷ್ಟಿ ಬದಲಾಯಿಸಿ, ಸೃಷ್ಟಿ ಬದಲಾಗುತ್ತದೆ. ಅದೇ ರಾಡಿಯಲ್ಲಿ ರಚ್ಚೆ ಹಿಡಿದು ಕೂತಿರುವವರು ಸ್ವಲ್ಪ ಎದ್ದು ಸ್ನಾನ ಮಾಡಿ, ಜಗತ್ತು ಆಗಲೇ ಸುಂದರವಾಗಿಬಿಟ್ಟಿದೆ.. ಎಲ್ಲಿಯವರೆಗೆ ಮುಠ್ಠಾಳರೇ ಆಗಿರುತ್ತೀರಿ?
  ಚಕ್ರವರ್ತಿ

 6. ಚಕ್ರವರ್ತಿಯವರೇ, ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ನಾನು ಬಯಸುವುದು ಸುಂದರ ಭಾರತವನು ನೋಡ ಬೇಕೆಂಬುದೇ, ನಾನು ಹೇಳುವುದು ಒಳ್ಳೆಯ ಸತ್ಚರಿತ್ರೆಯುಳ್ಳ ಮನುಷ್ಯರು ಯಾರು ಇಲ್ಲವೇ ಈ ದೇಶದಲ್ಲಿ ಅಂಥಹವರನ್ನು ಚುನಾಹಿಸಿ ಮನುಷ್ಯರನ್ನು ಕೊಲ್ಲ ಬಯಸುವ ವ್ಯೆಕ್ತಿಗಳು ಬೇಡವೆಂಬುದು ನನ್ನ ಸಲಹೆಯಷ್ಟೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s