ಸ್ವಯಂಸೇವಕನೆಂಬ ಹೆಮ್ಮೆ

ಗೊತ್ತಿಲ್ಲ…. ಕಳೆದ ಒಂದು ತಿಂಗಳಿನಿಂದೀಚೆಗೆ ಬದಲಾವಣೆ ಬಂದಿರಬಹುದು. ಅಸ್ಸಾಮ್‌ನ ಗೌಹಾಟಿಯ ಪ್ರಮುಖ ವೃತ್ತಕ್ಕೆ ಹೋಗಿ ನಿಂತರೆ ಎರಡು – ಮೂರು ಸಾವಿರ ಜನ ಕೂಲಿ ಕಾರ್‍ಮಿಕರು ಕೈಯಲ್ಲಿ ಡಬ್ಬಿ ಹಿಡಿದು ನಿಂತಿರುತ್ತಾರೆ. ಅಷ್ಟು ಹೊತ್ತಿಗೆ ಒಂದಷ್ಟು ಜೀಪಿನಂತಹ ಗಾಡಿಗಳು ಬಂದು ಅವರಲ್ಲಿ ತಮಗೆ ಬೇಕಾದವರನ್ನು ಆರಿಸಿಕೊಂಡು ಹೋಗುತ್ತವೆ. ಸಂಜೆ ಮರಳಿ ಅದೇ ಜಗಕ್ಕೆ ತಂದುಬಿಟ್ಟರಾಯ್ತು. ಇತರರಿಗಿಂತ ಕಡಿಮೆ ಕೂಲಿ ಪಡೆಯುವ, ಹೆಚ್ಚು ಕೆಲಸ ಮಾಡುವ ಈ ಜನರನ್ನು ಅಸ್ಸಾಮ್‌ನ ಜಮೀನ್ದಾರರು, ಕಾಂಟ್ರಾಕ್ಟರುಗಳು ಬಲು ಮೆಚ್ಚುತ್ತಾರೆ. ಮತ್ತು ಇವರನ್ನು ಬಾಂಗ್ಲಾದ ಮುಸಲ್ಮಾನರೆಂದು ಕರೆಯುತ್ತಾರೆ!
ನಯವಾದ ಹೊಂದಾಣಿಕೆಯಿದ್ದು, ಪರಸ್ಪರ ಲಾಭಾಶ್ರಿತರಾದವರ ನಡುವೆ ಕೆಲಸ ಮಾಡೋದು ಎಷ್ಟು ಕಷ್ಟ ಗೊತ್ತ? ತಾನು ಕೂತ ರೆಂಬೆಯನ್ನೇ ಕಡಿಯುವವ ರೆಂಬೆ ಮುರಿದು ಬೀಳುವ ಹಂತ ತಲಪುವವರೆಗೆ ಬುದ್ಧಿ ಮಾತು ಕೇಳೋದೇ ಇಲ್ಲ! ಹಾಗೆ ಇಲ್ಲಿನವರ ಸ್ಥಿತಿ. ಅವರಿಗೆ ಪ್ರಾಚೀನ ಪರಂಪರೆ, ಹಿಂದೂ ವಾರಸಿಕತೆ, ಶಕ್ತಿಪೀಠಗಳನ್ನು ಹೊಂದಿರುವ ಕೇಂದ್ರ, ಹೇಗೆ ಹೇಳಿದರೂ ಅರ್ಥವೇ ಆಗುತ್ತಿರಲಿಲ್ಲ. ಆಕ್ರಮಣಕೋರರಿಂದ ಲಾಭವಾಗಿದೆ, ನಾವು ಉಪಕೃತರಾಗಿದ್ದೇವೆ ಎಂದಷ್ಟೆ ಅನ್ನಿಸುತ್ತಿತ್ತು. ಕಾಂಗ್ರೆಸ್ ನಾಯಕರುಗಳಂತೂ ಹೊರಗಿಂದ ಬಂದವರಿಗೆ ರೇಷನ್ ಕಾರ್ಡ್, ವೋಟರ್ ಐಡಿಗಳನ್ನು ವಿತರಿಸಿ ಧನ್ಯರಾದರು. ಈಗವರು ಅಧಿಕೃತ ನಿವಾಸಿಗಳು. ಅವರಿಗಿಲ್ಲಿ ಜಮೀನು ಖರೀದಿಸುವ, ಮಾರಾಟ ಮಾಡುವ ಅಧಿಕೃತ ಹಕ್ಕು ಲಭಿಸಿದೆ. ಇವುಗಳ ಕುರಿತು ಜಾಗೃತಿ ಮೂಡಿಸುವುದು ಎಷ್ಟು ಕಷ್ಟ ಎಂದು ಅಸ್ಸಾಮಿಗೆ ಹೋಗಿಯೇ ತಿಳಿಯಬೇಕು. ಕಳೆದ ಮೂರ್‍ನಾಲ್ಕು ದಶಕಗಳಿಂದ ರಾ.ಸ್ವ.ಸಂಘ ಮತ್ತು ವಿವೇಕಾನಂದ ಕೆಂದ್ರಗಳು ಬೆವರಿಳಿಸಿ ದುಡಿದರೂ ಜನಕ್ಕೆ ಸಂಕಟಗಳ ಅರಿವಾಗಿರಲಿಲ್ಲ. ಬರಲಿರುವ ಭಯಾನಕ ದಿನಗಳ ಚಿತ್ರಣ ಗೋಚರವಾಗಲಿಲ್ಲ. ಈಗ ತಾವೇ ಕಡಿಯುತ್ತಿದ್ದ ರೆಂಬೆ ಮುರಿದು ಬೀಳುವ ಸ್ಥಿತಿಯಲ್ಲಿದೆ. ಅಸ್ಸಾಮಿನ ಹಿಂದೂ – ಮುಸ್ಲಿಮರಿಬ್ಬರೂ ಜೀವಭಯದಿಂದ ನೇತಾಡುತ್ತಿದ್ದಾರೆ. ಮತ್ತೀಗ ಸಹಾಯಕ್ಕೆ ಇಡಿಯ ದೇಶದಲ್ಲಿ ನಿಂತಿರುವ ಏಕೈಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ.
ಅದಕ್ಕೇ ನಾನು ಸ್ವಯಂಸೇವಕ ಅಂತ ಹೆಮ್ಮೆಯಿದೆ ಎಂದಿದ್ದು.
ದೇಶದ ಯಾವ ಮೂಲೆಯಲ್ಲಾದರೂ ಸರಿ, ದೇಶಕ್ಕೆ ಸಮಸ್ಯೆ ಬಂದಿದೆ ಎಂದಾಗ ಧಾವಿಸೋದು ಸ್ವಯಂಸೇವಕ ಮಾತ್ರ. ಅಪಘಾತಕ್ಕೀಡಾಗಿ ಸುಟ್ಟು ಕರಕಲಾದ ದೇಹಗಳನ್ನು ಹೊರಗೆಳೆಯುವುದರಿಂದ ಹಿಡಿದು, ಯುದ್ಧದಲ್ಲಿ ಪ್ರಾಣಾರ್ಪಣೆಗೈದ ಹುತಾತ್ಮರ ಶವಯಾತ್ರೆ, ಸಂಸ್ಕಾರದವರೆಗೆ ಅವರು ಯಾವಾಗಲೂ ಮುಂದೆಯೇ. ಹಸಿದವನಿಗೆ ಅನ್ನ ಕೊಡುವುದರಿಂದ ಶುರು ಮಾಡಿ ಸಾಂಕ್ರಾಮಿಕ ರೋಗಗಳಿಂದ ನರಳುತ್ತಿರುವವರ ಶುಶ್ರೂಷೆಯವರೆಗೆ ಸ್ವಯಂಸೇವಕ ಮುಂದೆ. ಹೀಗಾಗಿಯೇ ಸಂಘದ ಎರಡನೆ ಸರಸಂಘ ಚಾಲಕರಾದ ಗುರೂಜಿ ಗೋಳ್ವಲ್ಕರ್‌ರನ್ನು ಪಂಜಾಬಿನ ಕೆಲವು ಸೈನ್ಯಾಧಿಕಾರಿಗಳು “ಯಾವ ತ್ಯಾಗ ಬಲಿದಾನಗಳಿಗೂ ಸ್ವಯಂಸೇವಕರು ಸಿದ್ಧರಾಗುತ್ತಾರಲ್ಲ, ಅದು ಹೇಗೆ ಅವರನ್ನು ತಯಾರು ಮಾಡುತ್ತಿರಿ?”ಎಂದು ಪ್ರಶ್ನಿಸಿದ್ದರು. ಗುರೂಜಿ ಉತ್ತರ ಏನಾಗಿತ್ತು ಗೊತ್ತೆ? “ಯಾವ ತಯಾರಿಯೂ ಇಲ್ಲ. ಕಬಡ್ಡಿ ಆಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಅಷ್ಟೆ”!
ಕಾಂಗ್ರೆಸ್ಸಿನ ಸಾರ್ವಕಾಲಿಕ ನಾಯಕ(!) ನೆಹರೂಗೆ ಸಂಘವನ್ನು ಕಂಡರೆ ಅಷ್ಟಕ್ಕಷ್ಟೆ. ಉಹುಂ.. ಆತ ವಿರೋಧಿಯೇ ಸರಿ. ಗಾಂಧೀಜಿ ಹತ್ಯೆಯಲ್ಲಿ ಸಂಘವನ್ನು ಮುಂದಿಟ್ಟು ಅದರ ಮೇಲೆ ಜನ ದ್ವೇಷ ಕಾರುವಂತೆ ಮಾಡಿಸಬೇಕೆಂಬ ಹಠವಾದಿ ಪ್ರಯತ್ನವನ್ನೂ ಅವರು ಮಾಡಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಸ್ವಯಂಸೆವಕರ ಮೇಲೆ ದಾಳಿ ನಡೆಸಲಾಯ್ತು. ಸಂಘವನ್ನು ಮಟ್ಟಹಾಕುವ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲಾಯ್ತು. ಆಗೆಲ್ಲ ಸತ್ವಪರೀಕ್ಷೆ. ಸಂಘ ಗೆದ್ದಿತು. ಮುಂದೆ ನೆಹರೂ ಎಡವಟ್ಟು ಮಾಡಿಕೊಂಡು ಚೀನಾ ದಾಳಿಯನ್ನು ಎದುರಿಸಲಾಗದೆ ಹೈರಾಣಾಗಿ ನಿಂತಿದ್ದಾಗ ಮತ್ತೆ ಮುಂದೆ ಬಂದಿದ್ದು ಸ್ವಯಂಸೇವಕರೇ. ಹೋರಾಡುವ ಸೈನಿಕರಿಗೆ ಯುದ್ಧಭೂಮಿಯಲ್ಲೇ ಅನೇಕ ರೀತಿಯ ಸಹಾಯ ಒದಗಿಸಿದ್ದಲ್ಲದೆ, ದೇಶಾದ್ಯಂತ ಜನಮನಸವನ್ನು ಬಡಿದೆಬ್ಬಿಸಿ ಜನರಲ್‌ನಿಂದ ಹಿಡಿದು ಜವಾನನವರೆಗೆ ಎಲ್ಲರ ಮನಸಿಕ ಸ್ಥೈರ್‍ಯ ಬಲವಾಗುವಂತೆ ಮಡಿದ್ದು ಸ್ವಯಂಸೇವಕರೇ. ಅದಕ್ಕೇ ನೆಹರೂ ಜನವರಿ ೨೬ರ ಪೆರೇಡಿಗೆ ಸ್ವಯಂಸೇವಕರನ್ನು ಆಹ್ವಾನಿಸಿದ್ದು. ಎರಡು ದಿನ ಮಾತ್ರ ಬಾಕಿ ಇತ್ತು. ಶಿಸ್ತಿನ ಸಿಪಾಯಿಗಳಾದ ೩೦೦೦ ಸ್ವಯಂಸೇವಕರು ಗಣವೇಷದಲ್ಲಿ ನಡೆಸಿದ ಪಥಸಂಚಲನ ಅಮೋಘವಾಗಿತ್ತು.
ಕಾಂಗ್ರೆಸ್ಸಿಗೆ ಕೇಳುತ್ತಿದೆಯೇನು? ಸ್ವಯಂಸೆವಕನ ಕುರಿತಂತೆ ಅವಕಾಶ ಸಿಕ್ಕಾಗೆಲ್ಲ ಕೀಳಾಗಿ ಮಾತಾಡುವ ಇಂಗ್ಲಿಷ್ ಮಾದ್ಯಮಗಳಿಗೆ ಇವೆಲ್ಲ ಗೊತ್ತಿಲ್ಲವೇನು? ಭಾರತ ಚೀನಾ ಯುದ್ಧದ ವೇಳೆಗೆ ಚೀನಾ ಪರವಾಗಿ ಬಾಲ ಆಡಿಸುತ್ತಿದ್ದ ಎಡಪಂಥೀಯರೆಲ್ಲ ಇಂದು ಕುರ್ಚಿಗೆ ಬಲು ಹತ್ತಿರದವರು. ಭಾರತದ ಆತ್ಮಸ್ಥೈರ್‍ಯ ವೃದ್ಧಿಸಲು ಕಾದಾಡಿದವರು ಮಾತ್ರ ಕೋಮುವಾದಿಗಳು. ಚೆನ್ನಾಗಿದೆ ಲೆಕ್ಕಚಾರ!
ಕಾಂಗ್ರೆಸ್ ಮೊದಲಿಂದಲೂ ಹಾಗೆಯೇ. ಪಕ್ಕಾ ಅವಕಶವಾದಿ. ನೆಹರೂ ಕುಟುಂಬವಂತೂ ಅಧಿಕಾರಕ್ಕಾಗಿ ಯಾರನ್ನು ಮಟ್ಟಹಾಕುವುದಕ್ಕೂ ಹೇಸುವಂಥದಲ್ಲ. ಪಟೇಲರನ್ನು ದುರ ಸರಿಸಿ ನೆಹರೂ ಪದವೇರಿದ್ದರಿಂದ ಹಿಡಿದು ಪ್ರಣಬ್‌ರನ್ನು ರಾಷ್ಟ್ರಪತಿ ಭವನಕ್ಕೆ ತಳ್ಳಿ ಯುವರಾಜನನ್ನು ಪಟಕ್ಕೇರಿಸುವ ಸನ್ನಾಹದವರೆಗೂ ಅವರ ಪ್ರಯಾಸಗಳು ಒಂದೆರಡಲ್ಲ. ಇದರ ವಿರುದ್ಧ ಅಂದಿನಿಂದ ಹೋರಾಡುತ್ತಿರುವ ಬೆರಳೆಣಿಕೆಯಷ್ಟು ಸಂಘಟನೆಗಳಲ್ಲಿ ಸಂಘವೂ ಒಂದು. ಸಾವರ್ಕರರ ಅಭಿನವ ಭಾರತಇತ್ತು. ಅದನ್ನು ಬೆಳೆಯಲು ಬಿಡಲೇ ಇಲ್ಲ; ಂದೂ ಮಹಾಸಭಾಇತ್ತು, ಅದರ ನಾಶಕ್ಕೆ ಬೇಕಾದುದೆಲ್ಲ ಮಡಿದರು; ರಾಮದೇವ್ ಬಾಬಾ ತಮ್ಮ ವಿರುದ್ಧ ಮಾತಾಡಿದರು, ಅವರ ಬಲಗೈಯಾಗಿದ್ದ ಆಚಾರ್‍ಯ ಬಾಲಕೃಷ್ಣರನ್ನು ಒಳತಳ್ಳಿದರು. ಒಂದೇ, ಎರಡೇ.. ಆದರೆ ಅವರು ಬೀಸಿದ ಬಲೆಯಿಂದ ಪ್ರತಿ ಬಾರಿ ಪಾರಾಗುತ್ತಿರುವವನು ಸ್ವಯಂಸೇವಕ ಮಾತ್ರ!
೧೯೬೫ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಘೋಷಣೆಯಾದೊಡನೆ ಅಂದಿನ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಮಾಡಿದ ಮೊದಲ ಕೆಲಸ ಸರಸಂಘ ಚಾಲಕರಿಗೆ ಪತ್ರ ಬರೆದು ಸಹಾಯ ಮಾಡಿಎಂದು ಕೇಳಿದ್ದು. ದೆಹಲಿಯಲ್ಲಿ ಆಗ ಪೊಲೀಸ್‌ರನ್ನು ಬೇರೆ ವ್ಯವಸ್ಥೆಗಳಿಗೆ ಕಳುಹಿಸಿ ಸ್ವಯಂಸೇವಕರು ಅಲ್ಲಿನ ಸಮಚಾರ, ರಕ್ಷಣೆಗಳ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರಲ್ಲ; ಮೀಡಿಯಾಗಳು ಮರೆತಿರಬಹುದು, ಇತಿಹಾಸ ಮರೆತಿಲ್ಲ! ಪಂಜಾಬಿನಲ್ಲಿ ಸ್ವಯಂಸೇವಕರು ಗಾಯಗೊಂಡ ಜನರ, ಸೈನಿಕರ ಉಪಚಾರ ಮಾಡಿದ್ದನ್ನು, ರಕ್ತದಾನ ಮಾಡಿದ್ದನ್ನು ಕಂಡ ಜನರಲ್ ಕುಲವಂತ್ ಸಿಂಗ್, “ಭಾರತದ ಶಕ್ತಿ ಪಂಜಾಬು. ಪಂಜಾಬಿನ ಶಕ್ತಿನ ಆರ್‌ಎಸ್ಸೆಸ್”ಎಂದಿದ್ದ.
೧೯೪೭ರಲ್ಲಿ ಭಾರತ – ಪಾಕಿಸ್ತಾನ ವಿಭಜನೆಯಾದಾಗ ಕೈಲಿ ಲಾಠಿ ಹಿಡಕೊಂಡೇ ಹಿಂದೂಗಳನ್ನು ಸುರಕ್ಷಿತವಾಗಿ ಊರಿಗೆ ತಲಪಿಸುವ ವ್ಯವಸ್ಥೆ ಮಾಡಿದ್ದು ಯಾರೆಂದುಕೊಂಡಿರಿ? ಪ್ರೊ.ಎ.ಎನ್.ಬಾಲಿ ತಮ್ಮ ಪುಸ್ತಕದಲ್ಲಿ ಹೇಳುತ್ತಾರಲ್ಲ, “ಜನರ ಸಹಾಯಕ್ಕೆ ಧಾವಿಸಿದ್ದು ನಿಸ್ವಾರ್ಥ ಹಿಂದೂ ಯುವಕರುಅಂತ, ಅದು ಸವಯಂ ಸೇವಕರೆ!”
ಹಾಗಂತ ಸ್ವಯಂಸೇವಕರು ಹಿಂದೂಗಳ ಆರ್ತನಾದ ಮಾತ್ರ ಕೆಳುತ್ತಾರೆ ಅಂತಲ್ಲ. ಆದರೆ ಖಂಡಿತ ಅದು ಅವರ ಮೊದಲ ಆದ್ಯತೆ. ಅಲ್ಲದೆ ಮತ್ತೇನು? ಪ್ರಮುಖ ಕುರ್ಚಿಯಲ್ಲಿ ಕುಳಿತು ಹಿಂದೂ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುವವರು ಇರುವವರೆಗೆ ಸಾಮಾನ್ಯ ಹಿಂದೂವಿನ ಕೂಗು ಕೇಳುವವರೊಬ್ಬರು ಬೇಕೇಬೇಕಲ್ಲವೆ? ಯೋಚಿಸಿ. ಹಿಂದೂ ಕೋಡ್ ಬಿಲ್ ಜಾರಿಗೆ ತರುವ ಕಾಲದಿಂದ ಹಿಡಿದು ಮನ್‌ಮೋಹನ್ ಸಿಂಗರು ದೇಶದ ಸಂಪತ್ತಿನ ಹಕ್ಕು ಮುಸಲ್ಮಾನರದೇ ಎಂದು ಘೋಷಿಸುವವರೆಗೂ ಉಪೇಕ್ಷೆಗೆ ಒಳಗಾಗಿದ್ದು ಹಿಂದೂವೇ ತಾನೆ? ಎಲ್ಲಿ ಸತ್ತುಹೋದವು ಮಾನವ ಹಕ್ಕುಗಳು? ಎಲ್ಲಿ ಹೋಯಿತು ಸಮಾನತೆಯ ಸಂವಿಧಾನ? ಆಯಕಟ್ಟಿನ ಜಾಗದಲ್ಲಿ ಕುಳಿತ ಅವಕಾಶವಾದಿಗಳು ನೀಚತೆಯ ಪಾತಾಳಕ್ಕಿಳಿದು ಮುಸಲ್ಮಾನರ ಬೆಂಬಲಕ್ಕೆ ನಿಂತರೆ ಹಿಂದೂವಿಗೆ ಆತುಕೊಳ್ಳುವವ ಬೇಕಲ್ಲವೆ? ಅದಕ್ಕೇ ಸ್ವಯಂಸೇವಕ ಚಡ್ಡಿಗೆ ಬೆಲ್ಟು ಬಿಗಿದು ನಿಂತಿರುವುದು.
ಹೆಡಗೇವಾರರು ಹಾಕಿಕೊಟ್ಟ ಹಾದಿಯೇ ಅದು. “ನಮ್ಮ ಧರ್ಮ ಮತ್ತು ರಾಷ್ಟ್ರವನ್ನು ರಕ್ಷಿಸುವ ಹೊಣೆ ನಾವು ಹೊತ್ತಿದ್ದೇವೆ. ನಮ್ಮ ಸೈದ್ಧಾಂತಿಕ ಹಿನ್ನೆಲೆ ಅರಿತ ಲಕ್ಷ ಕೋಟಿ ಜನರ ಸಂಘಟಿತ ಪ್ರಯತ್ನ ಇದಕ್ಕೆ ಬೇಕು. ಸಮರ್ಪಿತ ಯುವಕರ ಸಂಘಟಿತ ಜಾಲವೊಂದನ್ನೆ ಇದಕ್ಕಾಗಿ ಹೆಣೆಯಬೇಕು.”ಎಂದು ಬಲು ಹಿಂದೆ ಅವರು ಹೇಳಿದ್ದ ಮಾತು ಸಾಕಾರಗೊಂಡು ನಿಂತಿದೆ. ಬಿಹಾರದಲ್ಲಿ ಕ್ಷಾಮ ಬಂದಾಗ, ಆಂಧ್ರ, ತಮಿಳುನಾಡುಗಳಿಗೆ ಸೈಕ್ಲೋನ್ ಅಪ್ಪಳಿಸಿದಾಗ, ಯಮುನೆ ಸಾವಾಗಿ ಹರಿದಾಗ, ರಾಜಸ್ಥಾನದಲ್ಲಿ ಮಳೆಯೇ ಶಾಪವಾದಾಗ, ಭೋಪಾಲದಲ್ಲಿ ಅನಿಲ ದುರಂತವಾದಾಗ, ಕೊನೆಗೆ ಸುನಾಮಿಯಾದಾಗಲೂ ಖಾಕಿ ಚಡ್ಡಿ ತೊಟ್ಟ ವೀರರ ಪಡೆ ಹಗಲಿರುಳೆನ್ನದೆ ಸೇವಾಕಾರ್‍ಯಕ್ಕೆ ಇಳಿಯುತ್ತಿತ್ತಲ್ಲ, ಅಗೆಲ್ಲ ಹಿಂದೂ ಮುಸಲ್ಮಾನರೆಂಬ ಭೇದವಿದ್ದಿಲ್ಲ ಅಲ್ಲಿ. ಎಲ್ಲರೂ ಭಾರತೀಯರೆಂಬ ಅಭಿಮಾನ ಅಷ್ಟೆ ಅಲ್ಲಿದ್ದುದು. ಹೆಡಗೇವಾರರು ಹೇಳುವಂತೆ, ಂದೂಗಳ ಕಾರಣದಿಂದಾಗಿ ಇದು ಹಿಂದೂಸ್ಥಾನವಾಯಿತು. ಶಾಂತಿಯಿಂದ ಇತರರು ಇರಬಯಸಿದರೆ ನಮ್ಮದೇನು ಅಡ್ಡಿಯಿಲ್ಲ. ಅತಿಥಿಗಳಾಗಿ ಬಂದು ಕತ್ತಿಯಿಂದ ಆಕ್ರಮಣ ಮಾಡಬಯಸುವವರಿಗಾಗಿ ಮಾತ್ರ ಇಲ್ಲಿ ಸ್ಥಳವಿಲ್ಲ
ಈಗ ಸ್ವಯಂಸೇವಕ ಸಿಡಿದೆದ್ದಿರುವುದು ಇದಕ್ಕೇ. ಅಸ್ಸಾಮಿಗೆ ನುಗ್ಗಿಬಂದ ಬಾಂಗ್ಲಾವಾಸಿಗಳು ಅಸ್ಸಾಮನ್ನೆ ತಮ್ಮದೆನ್ನುವುದಕ್ಕೆ ಹೊರಟರೆ ಸುಮ್ಮನಿರೋದು ಹೇಗೆ ಹೇಳಿ? ಅವರಿಗೆ ಬೆಂಬಲವಾಗಿ ನಮ್ಮೂರಿನ ಮುಸಲ್ಮಾನರು ನಿಂತರೆ ಸುಮ್ಮನಿರಲಾಗತ್ತಾ? ಮುಂಬೈನ ಮತಾಂಧರು ಬಾಂಗ್ಲಾದವರ ಪರವಾಗಿ ನಿಂತು, ಹುತಾತ್ಮರ ಸ್ಮಾರಕಗಳನ್ನು ಪುಡಿಗೈದು, ಹಿಂದೂಗಳ ಮೇಲೆ ಮುಗಿಬಿದ್ದರೆ ಯಾವ ಸಭ್ಯ ಸಮಾಜ ತಾನೆ ಸಹಿಸಿಕೊಂಡೀತು? ನಮ್ಮ ನೆಲದಲ್ಲಿ ನಿಂತು ಪಾಕಿಸ್ತಾನದ ಧ್ವಜ ಹಾರಿಸಿ ಅವಮಾನಗೈದರೆ ಪ್ರಧಾನಿ ಮನಮೋಹನ ಸಿಂಗರು ತೆಪ್ಪಗಿರಬಹುದೆನೋ. ಸ್ವಯಂಸೇವಕನ ಹೃದಯವಲ್ಲ. ಹೋಗಲಿ, ಮುಸಲ್ಮಾನ ನಾಯಕರು ಈ ಸರಹೊತ್ತಲ್ಲಿ ಪುಂಡ ಪೋಕರಿಗಳಿಗೆ ನೀವು ಮಾಡ್ತಿರುವ ಕೆಲಸ ಕುರಾನಿಗೆ ಸಮ್ಮತವಲ್ಲವೆಂದು ಹೇಳಿಕೆಯನ್ನಾದರೂ ಕೊಟ್ಟಿದ್ದಾರಾ?
ಆಗಲೇ ಪ್ರಖರ ಹಿಂದೂ ಗುರ್ರೆನ್ನೋದು. ಹಿಂದೂಗಳು ತಪ್ಪು ಮಾಡಿದಾಗ ಹಿಂದೂಗಳಾಗಿ ನಾವೇ ಖಂಡಿಸ್ತೇವೆ. ಮುಸಲ್ಮಾನನ ತಪ್ಪು ತಿದ್ದಲು ಮಾತ್ರ ಯಾರೂ ಮುಂದೆ ಬರಲೊಲ್ಲರೇಕೆ? ಈ ಪ್ರಶ್ನೆಗಳು ಮೊನ್ನೆ ರೈಲು ನಿಲ್ದಾಣದಲ್ಲಿ ಹರಿದಾಡುತ್ತಿದ್ದವು. ಈಶಾನ್ಯ ರಾಜ್ಯದಿಂದ ಬಂದವರನ್ನು ಬಿಡಲಾರೆವೆಂದು ಮತಾಂಧರು ಘೋಷಿಸುತ್ತಿದ್ದಂತೆ, ಹೆದರಿ ಓಡಲಾರಂಭಿಸಿದ ಯುವಕ ಯುವತಿಯರ ರಕ್ಷಣೆಗೆ ಧಾವಿಸಿದ್ದು ಮತ್ತದೇ ಸ್ವಯಂಸೇವಕ. ನಿಮ್ಮ ಕೂದಲೂ ಕೊಂಕದಂತೆ ಕಾಯುವ ಜವಬ್ದಾರಿ ನಮ್ಮದೆಂದು ಕಾಯುತ್ತ ನಿಂತ ಆತನಿಗೆ ಸರ್ಕಾರ ಕೊಡುವ ಭಾರತರತ್ನ ಕೂಡ ಚಿಕ್ಕದಾದೀತು.
ಖಾಕಿ ಚಡ್ಡಿ, ತೋಳು ಮಡಚಿದ ಬಿಳಿ ಷರ್ಟು, ಕಾಲಿಗೆ ಬಿಗಿದ ಶೂ, ಕೈಯಲ್ಲಿ ಬಲಿಷ್ಠ ದಂಡ, ನಿಸ್ವಾರ್ಥ ಮನಸ್ಸು, ಕಲ್ಲು ಹೃದಯ – ಇವಿಷ್ಟನ್ನು ಕಂಡಾಗ, ಮತ್ತೆ ನಾನು ಸ್ವಯಂಸೇವಕನಾಗಿದ್ದು ಸಾರ್ಥಕ ಎನ್ನಿಸಿಬಿಡುತ್ತದೆ.

7 thoughts on “ಸ್ವಯಂಸೇವಕನೆಂಬ ಹೆಮ್ಮೆ

 1. ಭಾರತದೀ……. ಕನಸುಗಾರನಾರು ?

  1. ಭಾರತದಲ್ಲಿ ಮತ್ತೆ ಆ ಮುಠ್ಠಾಳ ಸನಾತನ ವೈದಿಕ ಧರ್ಮವನ್ನೇ ಸಾರ್ವಭೌಮವನ್ನಾಗಿ ತರಲು ಪ್ರಯತ್ನಿಸುತ್ತೇವೆ.
  2. ಬ್ರಾಹ್ಮಣ ಮಕ್ಕಳಿಗೆ ಮಾತ್ರ ಎಲ್ಲರಿಗೂ ವೇದಾಧ್ಯಾಯನ ಆಗಮಗಳು ಉಪನಿಷದ್ ಕಡ್ಡಾಯಗೊಳ್ಳಸುತ್ತೇವೆ. ಆಗಮ ಶಾಸ್ತ್ರ ಕಲಿತವರಿಂದಲೇ ಪೂಜಾ ವಿಧಿ ವಿಧಾನದಂತೆ ಪೂಜಾ ಮಾಡುತ್ತೇವೆ. ಆಗಮಿಕರು ಕಲ್ಲು ಗೊಂಬೆಗಳನ್ನು ವಿಶ್ವಕರ್ಮನು ( ಆಚಾರಿಯು ) ಮಾಡಿದ ಕಲ್ಲು ಗೊಂಬೆಗಳನ್ನು ಗುಡಿಯಲ್ಲಿ ದೇವಾಲಯಗಳಲ್ಲಿ ಸೇರಿಸಿ ವಿಶೇಷ ಪೂಜೆ ಮಂತ್ರ ಪಠಣದಿಂದ ನೀರ್ಜೀವಿಯಾದ ಕಲ್ಲಿಗೂ ಜೀವಕೊಟ್ಟನೆಂದು ನಂಬಿಸುತ್ತಾನೆ. ಆ ಕಲ್ಲು ನಿಮ್ಮ ಕಷ್ಟಗಳನ್ನು ತೀರಿಸುತ್ತದೆ ಎಂದೂ ನಾವು ನಂಬುವಂತೆ ಮಾಡುತ್ತೇವೆ.
  3. ತಮ್ಮ ತಮ್ಮ ಮಾತೃಬಾಷೆಗಳನ್ನು( ಕನ್ನಡ ತಮೀಳ್ ಮಲಯಾಳ ತೆಲಗು ಹಿಂದಿ ) ಇಂಗ್ಲೀಷ್‍ನ್ನು ತಿಪ್ಪೆಗೆ ಎಸೆದು ( ಬ್ರಹ್ಮ ಸಮಾಜದ ನೇತಾರಾ ರಾಜಾರಾಂ ಮೋಹನರಾಯ್ ಹೇಳಿದಂತೆ ಸಂಸ್ಕೃತವನ್ನು ಸತ್ವಹೀನ ಅದರ ಸಾಹಿತ್ಯ ಅತ್ಯಂತ ಕೀಳುದರ್ಜೆಯದು. ಭಾರತ ಪ್ರಗತಿ ಸಾಧಿಸಲು ಆಂಗ್ಲವೇ ವಿದ್ಯೆಯೇ ಇಲ್ಲರಿಗೆ ಕಲಿಸಿ ಎಂದರು. ) ಈ ದೇಶದಲ್ಲಿ ೫೦೪೯ ಜನ ಮಾತ್ರವೇ ಮಾತನಾಡುವಸಂಸ್ಕೃತವನ್ನು ಎಲ್ಲರೂ ಕಡ್ಡಾಯ ಓದಬೇಕು. ಒಂದೇ ಸಂಸ್ಕೃತವನ್ನು ಅದನ್ನೇ ವಿಶ್ವಬಾಷೆಯಾಗಿಸುತ್ತೇವೆ.
  4. ಒಂದೇ ಸಂಸ್ಕೃತಿಯಾದ ಹಿಂದೂ ನಮ್ಮ ಸಂಸ್ಕೃತಿಯನ್ನು ಬಿಟ್ಟು ಬೇರೆಯಾವ ಸಂಸ್ಕೃತಿಯನ್ನು ನಮ್ಮಲಿ ಸೇರಿಸಿಕೊಳ್ಳಬಾರದು. ಹಾಗೆ ಸೇರಿಸಿಕೊಂಡರೆ ಹಿಂಸೆ ಬೈಗುಳ ಹಾನಿ ಮಾಡಿಸುತ್ತೇವೆ.
  5. ಭಾರತದ ಎಲ್ಲಾ ಮಕ್ಕಳಿಗೂ ಈಗಿರುವ ವೈಙ್ಞಾನಿಕ ಆ ಪುಸ್ತಕಗಳನ್ನು ಸುಟ್ಟು ರಾಮಾಯಣ ಮಹಾಭಾರತ ವಿಷ್ಣು ಪುರಾಣ ಗರುಡ ಪುರಾಣ ಪದ್ಮಪುರಾಣ ಶ್ರೀಮದ್ಭಾಗವತ ಆಗಮ ಶಾಸ್ತ್ರ ಕಲಿಸುತ್ತೇವೆ
  6. ಹಿಂದೂಗಳ ಗುರು ಜಗದ್ಗುರು ಕೈಯಿಂದಲಿ ಮಾತ್ರವೇ ದೇಶದ ರಾಜಕೀಯವನ್ನು ನಡೆಸುತ್ತೇವೆ.
  7. ಉಡುಪಿ ಆ ಮುಠ್ಠಾಳ ಅಙ್ಞಾನಿಯ ಗುರುವನ್ನು ಈ ದೇಶದ ಗುರು ಎಂದು ನಾಮಕರಣ ಮಾಡಸುತ್ತೇವೆ.
  8. ಕೇಸರಿ ದ್ವಜವನ್ನು ಈ ದೇಶದ ದ್ವಜವನ್ನಾಗಿ ಮಾಡಸುತ್ತೇವೆ
  9. ಭಗವಧ್ಗೀತೆಯನ್ನು ಈ ದೇಶದ ಧರ್ಮಗ್ರಂಥವೆಂದು ಘೋಷಿಸುತ್ತೇವೆ. ಮಿಕ್ಕವನ್ನೆಲ್ಲಾ ಧರ್ಮಗ್ರಂಥವನ್ನು ಸುಟ್ಟು ಬಿಸಾಡಿಸುತ್ತೇವೆ
  10. ರಾಮನನ್ನೇ ( ಈತನಿಂದ ಈ ದೇಶಕ್ಕೆ ಏನೂ ಕೊಡಿಗೆ ಇಲ್ಲದ್ದಿದ್ದರೂ ) ಈ ದೇಶದ ದೇವರೆಂದು ಎಲ್ಲರು ಒಪ್ಪಿಸುತ್ತೇವೆ.
  ಮುವತ್ತು ಮೂರು ( ೩೩ )ಕೋಟಿ ಮನೆ ದೇವರನ್ನು ಕಿತ್ತು ಬಿಸಾಟು
  11. ಭಾರತದಲ್ಲಿ ನಾಲ್ಕು ಅಲ್ಲ ಐದು ವರ್ಣಾಶ್ರಮ ಧರ್ಮವನ್ನು ಮತ್ತೇ ತರಬಯಸುತ್ತೇವೆ. ಅಂದರೆ, ಮುಖದಿಂದ ಹುಟ್ಟಿದ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಬ್ರಾಹ್ಮಣ, ತೊಳಿನಿಂದ ಹುಟ್ಟಿದ ಕ್ಷತ್ರಿಯ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ತೊಡೆಯಿಂದ ಹುಟ್ಟಿದ ವೈಶ್ಯ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ಕಾಲುಗಳಿಂದ ಹುಟ್ಟಿದ ಶೂದ್ರ ಮತ್ತು ಪಂಚಮರು ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಇವರು ತಮ್ಮ ತಮ್ಮ ಕಾರ್ಯವನ್ನೇ ಮಾಡಿಸುತ್ತೇವೆ.
  12. ಬ್ರಾಹ್ಮಣನು ( ಇಲ್ಲದಾ ದೇವರಗೆ ಪೂಜೆ ಯಾಗ ಯಙ್ಞ ಮಾಡಿಕೊಂಡಿರುತ್ತಾನೆ ) ಕ್ಷತ್ರಿಯನಿಗೆ ಉಪದೇಶ ನೀಡುತ್ತಿರುತ್ತಾನೆ. ಅವನೋ ಬ್ರಾಹ್ಮಣನು ಇವನು ಹೇಳಿದಂತೆ ನಡೆಸುತ್ತೇವೆ.
  13. ಕ್ಷತ್ರಿಯನು ದೇಶವನ್ನು ಬ್ರಾಹ್ಮಣರನ್ನು ಕಾಪಾಡಲು ತನ್ನ ಮನಃ ಪೂರ್ವಕಪ್ರಯತ್ನ ಮಾಡಿಸುತ್ತೇವೆ.
  14. ವೈಶ್ಯ ತನ್ನ ತನ್ನ ವ್ಯಾಪಾರದಲ್ಲಿನ ಲಾಭದಲ್ಲಿ ೩೦% ಭಾಗ ವನ್ನು ರಾಜನಿಗೆ ಕೊಡಬೇಕು ೨೦% ಭಾಗ ದೇವರಿಗೆ ದೇವಾಲಯಗಳಿಗೆ ಕೊಡಿಸುತ್ತೇವೆ.
  15. ಶೂದ್ರನು, ಶೂದ್ರ ಯಾರಾಗಿದ್ದರೂ ಗೌಡ ಲಿಂಗಾಯಿತ ಕುರುಬ ವಿಶ್ವಕರ್ಮ ( ಶಿಲ್ಪಿ ಕಮ್ಮಾರ ಬಡಗಿ )ಗಾಣಿಗ ಅಗಸ ದಲಿತ ಹೀಗೆ ನೀವು ಭಾವಿಸುವ ಇವರೆಲ್ಲಾ ಒಂದೇ ತಾನು ಬ್ರಾಹ್ಮಣ ಕ್ಷತ್ರಿಯನ ವೈಶ್ಯನ ಸೇವೆಯನ್ನು ಕಡ್ಡಯವಾಗಿ ಮಾಡಿಸುತ್ತೇವೆ.
  16. ಪಂಚಮರು ಈ ಎಲ್ಲರ ಸೇವೆಯನ್ನು ಕಡುಕಡ್ಡಾಯವಾಗಿ ಮಾಡಲೇಬೇಕು ಇವನು ಯಾರು ಬಂದರು ಅಡ್ಡ ಬಂದರು ಎದುರಿಗೆ ನಿಲ್ಲಬಾರದು ಮಾತನಾಡಬಾರದು ಈತನಿಗೆ ಮಾತ್ರ ಬಹಳಷ್ಟು ಕಟ್ಟಪ್ಪಣೆಗಳಿವೆ ಪಾಲಿಸಲೇಬೇಕೆಂದು, ಹಾಗಿಲ್ಲದ ಪಕ್ಷ ದೊಡ್ಡ ಶಿಕ್ಷೆಯನ್ನೇ ಕೊಡಬಯಸುತ್ತೇವೆ.
  17. ಬಟ್ಟೆ ಬರೆಗಳೂ ಕೂಡ ನಮ್ಮಹಳೆ ಸಂಸ್ಕೃತಿಯಂತೆಯೇ ಇರಬೇಕು ಹೆಣ್ಣುಗಳಿಗೆ ಸಮಾನತೆ ಇರಬಾರದು.
  18. ಈಗಿರುವ ಹಿಂದೂ ಇಸ್ಲಾಂ ಕಾನೂನನ್ನು ತೆಗೆದು ಮನು ಬರೆದ ಮನುಸ್ಮೃತಿಯನ್ನೇ ಮತ್ತೇ ಕಾನೂನಾಗಿ ತಂದೆ ತರುತ್ತೇವೆ

  ಇಂತಿ ನಿಮ್ಮವರೆ ಆದ
  ರಕ್ಕಸ ಸಾಂಸ್ಕೃತಿಕ ಸಂಘಟನೆ

  ಭಾರತದಲ್ಲಿ ಭಾರತೀಯರಿಗಾಗಿ ಮತ್ತೊಮ್ಮೆ ಸ್ವಾತಂತ್ರ ಹೋರಾಟವ ಮಾಡುವಬನ್ನಿ
  ಓ ಎನ್ನ ಪ್ರೀತಿಯ ಒಡಹುಟ್ಟುಗಳೇ ಬನ್ನಿ ಬನ್ನಿ……….ಎಲ್ಲರೂ ಬನ್ನಿ
  ಸಮರ್ಥ ಸಮತಾವಾದದ ಸಮಗ್ರ ಸಂವೃದ್ಧ ಭಾರತವ ಕಟ್ಟುವ ನಿಲ್ಲಿ
  ಸರ್ವರಿಗೂ ಅನ್ನ ಬಟ್ಟೆ ಸೂರು ಗೂಡು ಸಿಕ್ಕಲು
  ಸರ್ವರಿಗೂ ಸುಖಬಾಳು ಸಮಪಾಲು ದೊರೆಯಲು
  ಸರ್ವರಿಗೂ ಭಾತೃತ್ವದಿಂದ ಸಮಾನತೆಯ ಬಾಳಲು
  ಸರ್ವರಿಗೂ ಸಾಮಾಜಿಕ ನ್ಯಾಯ ದೊರೆಯಲು
  ಸರ್ವಧರ್ಮ ಜನಾಂಗದಲ್ಲೂ ಶಾಂತಿ ಸೌಹಾರ್ದ ನೆಲೆಸಲು
  ಸರ್ವರು ಜಾತಿಮತ ಧರ್ಮ ಭೇಧ ಮರೆತು ಒಂದಾಗಿ ಬಾಳಲು
  ಸರ್ವರಿಗೂ ಸರಿಸಮಾನ ಶಿಕ್ಷಣ ದೊರೆಯಲು
  ಸರ್ವರಿಗೂ ದೇವಾಲಯಗಳಲ್ಲಿ ಪ್ರವೇಶಾವಕಾಶಕ್ಕೆ ದಾರಿ ಮಾಡಿಕೊಡಲು
  ಸರ್ವರು ಎಲ್ಲಾ ದಾರಿ ರಸ್ತೆಗಳಲ್ಲಿ ಸಮಾನರಂತೆ ನಡೆಯಲು
  ಸರ್ಕಾರಿ ಕಛೇರಿ\ಕೆಲಸದಲ್ಲಿ ಲಂಚವದು ತಾಂಡವವಾಡುವುದ ನಿಲ್ಲಿಸಲು
  ಬಡವ ಬಲ್ಲಿದರ ಅಂತರದ ಏರುಪೇರು ಕಡಿಮೆ ಮಾಡಲು
  ನಿಜವಾದ ಧರ್ಮಾತೀತ ಜ್ಯಾತ್ಯಾತೀತ ರಾಷ್ಟ್ರವನ್ನು ಕಟ್ಟಲು… ಬನ್ನಿ… ಬನ್ನಿ…

 2. ಚಕ್ರವರ್ತಿಗಳೇ,
  ನಿಮ್ಮ ಲೇಖನ ಎಲ್ಲಾ ಸ್ವಯಂಸೇವಕರೂ ಗರ್ವದಿಂದ ತಾನು ಸ್ವಯಂಸೇವಕನೆಂದು ಹೇಳಿಕೊಳ್ಳಲು ಉತ್ಸುಕತೆಯನ್ನುಂಟು ಮಾಡುವಂತಿದೆ. ಅದೇ ರೀತಿ ಸಂಘವನ್ನು ಟೀಕಿಸುವ ಏಕೈಕ ಉದ್ದೇಶವಿಟ್ಟುಕೊಂಡ ಬುದ್ಧಿಜೀವಿಗಳು ಮತ್ತು ಎಡಪಂಥೀಯರಿಗೆ ಅವರ ತಪ್ಪನ್ನು ಅವಲೋಕಿಸಿಕೊಳ್ಳುವಂತೆ ಇದೆ. ಅದರ ಜೊತೆಗೆ ಮುಸ್ಲಿಮರು ತಮ್ಮ ಜನಾಂಗದವರು ತಪ್ಪು ಮಾಡಿದಾಗ ಅದನ್ನು ಖಂಡಿಸುವ ಗೋಜಿಗೆ ಹೋಗುವುದಿಲ್ಲ; ಅವರು ತಪ್ಪು ಮಾಡಿದಾಗ ಸುಮ್ಮನೆ ಕುಳಿತುಕೊಳ್ಳುವ ನಮ್ಮ ಬುದ್ಧಿಜೀವಿ ಜನಾಂಗ ಅಂತಹ ಸಂದರ್ಭಗಳಲ್ಲಿ ಅದು ಏಕೆ ಸುಮ್ಮನೇ ಕುಳಿತುಕೊಳ್ಳುತ್ತದೆಯೋ ಅರ್ಥವಾಗದು. ಹೈದರಾಬಾದಿನಲ್ಲಿ ದನದ ಮಾಂಸ ಹಬ್ಬ (ಬೀಫ್ ಫಿಸ್ಟಿವಲ್) ಆಚರಿಸಿದಾಗ ಅದನ್ನು ಪ್ರತಿರೋಧಿಸಿದ ಸಂಘದ ಕಾರ್ಯವೈಖರಿಯನ್ನು ಟೀಕಿಸುವ ಈ ಮಂದಿ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕುಂಕುಮ ಧರಿಸುವುದು, ಬಳೆ ತೊಡುವುದು ಇವನ್ನೆಲ್ಲಾ ನಿಷೇದಿಸಿದಾಗ ಅಥವಾ ಅವರು ಜನಗಣಮನ/ವಂದೇ ಮಾತರಂ ಹಾಡುವುದನ್ನು ನಿಷೇದಿಸಿದಾಗ ಏಕೆ ಸುಮ್ಮನೆ ಕುಳಿತುಕೊಳ್ಳುತ್ತಾರೋ ಅರ್ಥವಾಗದು. ಇವೆಲ್ಲವನ್ನೂ ನೋಡುತ್ತಿದ್ದರೆ ಹಿಂದೂಗಳಿಗೆ ಆಶಾಕಿರಣವಾಗಿರುವುದು ಸಂಘ ಮಾತ್ರವೇ.

 3. ಇಂಥ ದೇಶ ಭಕ್ತ ಸಂಘಟನೆ ದೇಶ ಸ್ವತಂತ್ರ ವಾದ ನಂತರ ಮೂರು ಸಲ (ಗಾಂಧೀಜಿ ಹತ್ಯೆ ಕಾರಣಕ್ಕಾಗಿ ವಲ್ಲಭ ಪಟೇಲರಿಂದ, ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿಯವರಿಂದ, ಬಾಬರಿ ಮಸ್ಜಿದ್ ಧ್ವಂಸ ದ ನಂತರ ಮಾಜಿ ಸ್ವಯಂಸೇವಕ ನರಸಿಂಹ ರಾವ್ ನಿಂದ) ನಿಷೇಧಕ್ಕೊಳಗಾಗಿದ್ದು ಮಾತ್ರ ಅರ್ಥವಾಗದ ಒಗಟು.

 4. ಧರ್ಮವೇ ಉಸಿರಾಗಿ, ಧರ್ಮದ ಭದ್ರ ಬುನಾದಿಯಿಂದಲೇ ಸಾವಿರ ವರ್ಷ ಪರಕೀಯರ ನಯ ವಂಚನೆಗಳಿಂದ, ಘೋರ ಅನ್ಯಾಯಗಳನ್ನು ಸಹಿಸಿ, ತನ್ನನು ಕಡೆಯಲು ಬಂದವರಿಗೂ ಬದುಕಲು ಅವಕಾಶಕೊಟ್ಟ ಭಾರತ ಮಾತೆಯನ್ನು ಧರ್ಮಾತೀತ ಮಾಡಲು ಹೊರಟಿರುವ ಪಾಪಿಷ್ಠರ ಮಧ್ಯೆ ನಿಮ್ಮ ಬರಹ, ಮರುಭೂಮಿಯ oaisis ನಂತಿದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s