ಅಂಜಲಿ ಗುಪ್ತಾ ಸಾವು… ನಾಚಿಕೆಯ ನೋವು

ಅಂಜಲಿ ಗುಪ್ತಾ ಒಂದು ನೋಟ್ ಕೂಡ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ನೆನ್ನೆ (12.09.2011) ಕೇಳಿಬಂತು. ಬಹಳ ಕಸಿವಿಸಿಯಾಯ್ತು. ಸುಮಾರು ಐದಾರು ವರ್ಷಗಳ ಹಿಂದೆ ಅಂಜಲಿಯವರನ್ನ ಕೋರ್ಟ್ ಮಾರ್ಷಲ್ ಗೆ ಒಳಪಡಿಸಿದ್ದಾಗ ಒಂದು ಲೇಖನ (ವಿ.ಕೆಯಲ್ಲಿ) ಬರೆದಿದ್ದೆ. ಯಕೋ ನೆನಪಾಯ್ತು. ಲೆಖನದ ಕೊನೆಯಲ್ಲಿ “ಶೋಷಣೆಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಾಗುವುದು.  ಇಲ್ಲವೇ ತನ್ನ ಜೀವವನ್ನು ತಾನೇ ಕೊನೆಗಾಣಿಸುವುದು!!” ಅಂತ ಬರೆದಿದ್ದನ್ನ ಓದಿಕೊಂಡು ನೋವಿನೊಟ್ಟಿಗೆ ಗಾಬರಿಯೂ ಆಯ್ತು. ಈಗ ಅಂಜಲಿಯ ಆತ್ಮಕ್ಕೆ ಶಾಂತಿ ಕೋರುವುದಷ್ಟೆ ನನ್ನ ಪಾಲಿಗೆ ಉಳಿದಿರುವುದು….

(ಇಲ್ಲಿದೆ, ಆಹಳೆಯ ಲೇಖನ…)

ಗಂಡಸರು ಮಾತ್ರ ಮಾಡಬಹುದಾದ ಕೆಲಸ ಅಂದರೆ ಇದೇನಾ?

ಅಂಜಲಿ ಗುಪ್ತಾ!
ಹಾಲುಗಲ್ಲದ ಹುಡುಗಿ.  ದೇಹದಷ್ಟೇ ಮನಸ್ಸೂ ಗಟ್ಟಿಯಾಗಿದ್ದವಳು.  ಓರಗೆಯವರೆಲ್ಲ ಸೌಟು ಹಿಡಿದು ಅಡುಗೆ ಮನೆಯ ಕಾಯಕದಲ್ಲಿ ನಿರತರಾಗಿದ್ದಾಗಲೇ !ಬವಿಷ್ಯದ ಕನಸು ಕಟ್ಟಿದವಳು.  ಆಟಪಾಠಗಳಲ್ಲೆಲ್ಲಾ ಇತರರನ್ನು ಬದಿಗೆ ಸರಿಸಿ ಮುಂದೆ ಓಡಿದವಳು.  ದೆಹಲಿ ವಿಶ್ವವಿದ್ಯಾಲಯದ ಎಂ.ಎ., ಎಂ.ಫಿಲ್ ಪದವಿ ಪಡೆದ ನಂತರ ಅರಸಿ ಬಂದ ಶಿಕ್ಷಕ ವೃತ್ತಿಯನ್ನು ಒಲ್ಲೆ ಎಂದವಳು.  ೞಅಯ್ಯೋ ಬಿಡಮ್ಮ.  ಎಲ್ಲ ಹೆಂಗಸರೂ ಟಿಪಿಕಲ್ ಶಿಕ್ಷಕಿಯರಾಗಿಬಿಡ್ತಾರೆ.  ನಾನು ಗಂಡಸರು ಮಾತ್ರ ಮಾಡಬಹುದಾದ ಕೆಲಸ ಮಾಡಬೇಕುೞ ಎಂಬ ಚಿಂತನೆಯನ್ನು ತಾಯಿಯ ಮುಂದಿಟ್ಟವಳು.  ಅವಳ ಆ zsರ್ಯ, ಸ್ಥೆರ್ಯಗಳೇ ಅವಳನ್ನು ರಕ್ಷಣಾ ಇಲಾಖೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು.
ಅಂಜಲಿ ಬಾರತೀಯ ವಾಯುಸೇನೆಯ ಅಧಿಕಾರಿಯಾಗಿ ಆಯ್ಕೆಯಾದಳು.  ಡೆಹ್ರಾಡೂನ್‌ನಲ್ಲಿ ತರಬೇತಿಯಾಯ್ತು.  ಚಿಕ್ಕಂದಿನಿಂದಲೂ ಸಾಹಸದ ಪ್ರವೃತ್ತಿ ಹೊಂದಿದ್ದ ಅಂಜಲಿಯನ್ನು ಅಪ್ಪಅಮ್ಮಂದಿರೂ ತಡೆಯಲಿಲ್ಲ.  ಆಕೆ ತರಬೇತಿ ಮುಗಿಸಿ ಬೆಳಗಾವಿಗೆ ಬಂದಳು.  ಒಂದೇ ವರ್ಷದಲ್ಲಿ ಬೆಂಗಳೂರಿನ ವಾಯುಸೇನೆಯ ಏರ್‌ಕ್ರಾಪ್ಟ್ ಅಂಡ್ ಸಿಸ್ಟಮ್ ಟೆಸ್ಟಿಂಗ್ ಎಸ್ಟಾಬ್ಲಿಶ್‌ಮೆಂಟ್ (ಆಸ್ತೆ)ಗೆ ಅಧಿಕಾರಿಯಾಗಿ ಬಂದಳು.
ಗಂಡಸರು ಮಾತ್ರ ಮಾಡಬಲ್ಲಂತಹ ಕೆಲಸಕ್ಕೆ ಆಕೆ ಬಂದಿದ್ದಳು.  ಬೆಂಗಳೂರಿನ ವಾಯುಸೇನಾ ವಿಬಾಗದ ಏಕೈಕ ಮಹಿಳಾ ಅಧಿಕಾರಿಯಾಗಿ ಗತ್ತುಗೈರತ್ತಿನಿಂದ ಬದುಕು ಸವೆಸತೊಡಗಿದಳು.  ಆದರೆ ಆಕೆಯ ಹಿರಿಯ ಅಧಿಕಾರಿಗಳು ಗಂಡಸರು ಮಾತ್ರ ಮಾಡಬಹುದಾದಂತಹ ಲೈಂಗಿಕ ಶೋಷಣೆ ನಡೆಸಿ ಆಕೆಯ ಬದುಕನ್ನು ಹಾಳುಗೆಡವಿಬಿಟ್ಟರು.
ಹೌದು.  ಅಂಜಲಿ ಗುಪ್ತಾಳ ಬದುಕು ಇಂದು ತೂಗುಯ್ಯಾಲೆಯಲ್ಲಿದೆ.  ಆಕೆಯೊಂದಿಗೆ ಸೈನ್ಯದ ಆಂತರಿಕ ನ್ಯಾಯಲಯ ನಡೆಸುತ್ತಿರುವ ಕೋರ್ಟ್ ಮಾರ್ಶಲ್ ಎಂಬ ಪ್ರಹಸನ ದೇಶದ ರಕ್ಷಣಾ ಇತಿಹಾಸಕ್ಕೊಂದು ಕರಾಳ ಅಧ್ಯಾಯವಾಗಿ ಮಾರ್ಪಡಲಿದೆ!
ಅಂಜಲಿ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗವಾಗಿ ಬಂದೊಡನೆ ಹಿರಿಯ ಅಧಿಕಾರಿಗಳು ಅಸಬ್ಯವಾಗಿ ವರ್ತಿಸಲು ಶುರುವಿಟ್ಟರು.  ಆಫೀಸಿನಲ್ಲಿ ಹೆಣ್ಣು ಜೀವವನ್ನೇ ಕಂಡಿರದಿದ್ದವರಿಗೆ ಈಗ ಏಕಾಏಕಿ ತಳಮಳ ಶುರುವಾಗಿತ್ತು.  ಕೆಲಸವಿಲ್ಲದಿದ್ದರೂ ತುಂಬ ಹೊತ್ತಿನವರೆಗೆ ಆಕೆಯನ್ನು ಆಫೀಸಿನಲ್ಲಿಯೇ ಇರಬೇಕೆಂದು ಒತ್ತಾಯಿಸುತ್ತಿದ್ದರು.  ಒಂಟಿಯಾಗಿದ್ದವಳನ್ನು ಕೀಳುಮಟ್ಟದಲ್ಲಿ ರೇಗಿಸುತ್ತಿದ್ದರು.  ಸೈನ್ಯಕ್ಕೆ ಬೇಕಾದ ಅಡುಗೆ ಬಟ್ಟರ ನೇಮಕಾತಿಯಲ್ಲಿನ ಬ್ರಷ್ಟಾಚಾರಕ್ಕೆ ತವ್ಮೊಂದಿಗೆ ಕೈ ಜೋಡಿಸುವ ಒತ್ತಡ ಹಾಕುತ್ತಿದ್ದರು.
ಆಕೆ ಪ್ರತಿಬಟಿಸಿದರೆ ಅಧಿಕಾರಿ ವರ್ಗದ ದರ್ಪ ಶುರುವಾಗಿಬಿಡುತ್ತಿತ್ತು.
ಅಧಿಕಾರಿ ವರ್ಗದ ದರ್ಪ ಶುರುವಾಗಿಬಿಡುತ್ತಿತ್ತು.
ಪರಿಸ್ಥಿತಿ ಉಸಿರುಕಟ್ಟಿಸುವ ಹಂತಕ್ಕೆ ಹೋದಾಗ ಅಂಜಲಿ ಹಿರಿಯ ಅಧಿಕಾರಿಗಳ ಬಳಿ ದೂರನ್ನೊಯ್ದಳು.  ಸ್ಕ್ವಾಡನ್ ಲೀಡರ್ ಚೌಧರಿ ಕುಡಿದು ಕಿರುಕುಳ ನೀಡಿದ್ದು ಜಾಹೀರಾಯ್ತು.  ಅದರ ಬೆನ್ನಲ್ಲಿಯೇ ಆಕೆಯನ್ನು ಬೇರೊಂದು ವಿಬಾಗಕ್ಕೆ ವರ್ಗಾಯಿಸಲಾಯಿತು.  ಹೆಣ್ಣಿನಿಂದಾದ ಅವಮಾನ ಸಹಿಸದ ಅಧಿಕಾರಿ ವರ್ಗದ ಕಿರುಕುಳ ಮುಂದುವರಿಯಿತು.  ಅಂಜಲಿಯೂ ಎಷ್ಟು ಬಾರಿ ಪ್ರತಿಬಟಿಸಿಯಾಳು ಹೇಳಿ.  ಕಳೆದ ಒಂದು ವರ್ಷದಲ್ಲಿ ಆಕೆ ಏಳು ಬೇರೆಬೇರೆ ವಿಬಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವ ಶಿಕ್ಷೆ ಪಡೆದಿದ್ದಳು.  ಇಷ್ಟಾದ ಮೇಲೂ ಶೋಷಣೆ ನಿಲ್ಲದಾದಾಗ ಆಕೆ ದೃಢವಾದ ನಿರ್ಧಾರ ಮಾಡಿದಳು.
ಹತ್ತಿರದ ಪೂಲೀಸ್ ಠಾಣೆಯಲ್ಲಿ ಅಂಜಲಿ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದಳು! ಕರ್ನಾಟಕ ಮಹಿಳಾ ಆಯೋಗದ ಸಹಾಯ ಕೇಳಿದಳು!!
ಈ ನಿರ್ಧಾರ ಆಕೆಗೆ ಮಾರಕವಾಯ್ತು.  ಸೈನ್ಯದ ಕಾನೂನುಕಟ್ಟಳೆಗಳನ್ನು ಮೀರಿ ಪೂಲೀಸರವರೆಗೂ ದೊರನ್ನೊಯ್ದದ್ದಕ್ಕೆ ಅಧಿಕಾರಿ ವರ್ಗ ಕುಪಿತಗೊಂಡಿತ್ತು.  ಅವರೆಲ್ಲ ಮುರಿದುಕೊಂಡು ಬಿದ್ದರು.  ಆಕೆಯ ಮೇಲೆ ಬಾಲಿಶ ಅಪಾದನೆಗಳನ್ನು ಮಾಡಿದರು.  ಓಡಾಟದ ಖರ್ಚಿಗೆಂದು ಆಕೆ ತಪ್ಪು ಲೆಕ್ಕ ಕೊಟ್ಟು ೧೦೮೦ ರೂಪಾಯಿಗಳನ್ನು ಪಡೆದಿದ್ದಾಳೆ,  ಹಿರಿಯ ಅಧಿಕಾರಿಯ ಊಟವನ್ನು ಚೆಲ್ಲಿದ್ದಾಳೆ, ಕವಾಯತಿಗೆ ಸರಿಯಾದ ಸಮಯಕ್ಕೆ ಹಾಜರಾಗಲಿಲ್ಲ ಎಂಬಂತಹ ಏಳು ಚಿಲ್ಲರೆ ಆರೋಪ ಹೊರಿಸಿದರು.  ಅದನ್ನೇ ಮುಂದಿರಿಸಿ ಕೊಂಡು ಕೋರ್ಟ್ ಮಾರ್ಶಲ್ ನಡೆಸುವ ನಿರ್ಧಾರವೂ ಆಯ್ತು.
ಸೈನ್ಯದ ಹಿರಿಯ ಅಧಿಕಾರಿಗಳು ತೆಹಲ್ಕಾದ ವಿಡಿಯೋ ಟೇಪುಗಳಲ್ಲಿ ಲಂಚ ಸ್ವೀಕರಿಸುತ್ತಾ ಬೆತ್ತಲೆಯಾಗಿಬಿಟ್ಟರಲ್ಲ, ಅವತ್ತು ಕೋರ್ಟ್ ಮಾರ್ಶಲ್‌ಗೆ ಈ ಪರಿಯ ಧಾವಂತವಿರಲಿಲ್ಲ.  ಕಾರ್ಗಿಲ್ ಯುದ್ಧಕ್ಕೂ ಮುನ್ನ ಲಂಚ ಸ್ವೀಕರಿಸಿ, ಉಗ್ರಗಾಮಿಗಳನ್ನು ಒಳಬಿಡುವ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಗಳ ವಿರುದ್ಧ ಏಕಾಏಕಿ ಕೋರ್ಟ್ ಮಾರ್ಶಲ್‌ನ ನಿರ್ಧಾರ ತಳೆದಿರಲಿಲ್ಲ.
ಇಂದಿಗೂ ರಕ್ಷಣಾ ಸಚಿವರ ಕಣ್ಣಿಗೂ ಬೀಳದಂತೆ ಟೆಂಡರ್ ಕರೆಯುವಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸುತ್ತಾರಲ್ಲ ಆ ಅಧಿಕಾರಿಗಳು, ಅವರ ವಿರುದ್ಧ ಯಾವುದೇ ಕೇಸು ದಾಖಲಾಗುವುದಿಲ್ಲ.
ಪಾಪ! ಅಂಜಲಿಯಂತಹವರು ಮಾತ್ರ ಬಲಿಯಾಗುತ್ತಾರೆ.  ಆಕೆ ಮಾಡಿದ ಆರೋಪಗಳಿಗೆ ಉತ್ತರಿಸಲಾಗದ ಅಧಿಕಾರಿಗಳು ಆಕೆಯನ್ನೆ ತಪ್ಪಿತಸ್ಥೆಯಾಗಿಸುವ ಪ್ರಯತ್ನ ಮಾಡುತ್ತಾರೆ.  ಆಕೆ ೧೦೮೦ ರೂಪಾಯಿ ವಂಚಿಸಿದ್ದು ಸೈನ್ಯದ ಪಾಲಿಗೆ ಘೋರ ಎನಿಸುತ್ತಿದೆ.  ಈ ವಂಚನೆ ಸಾಬೀತಾದರೆ ಆಕೆಗೆ ೧೪ ವರ್ಷಗಳ ಕಠಿಣ ಶಿಕ್ಷೆಯೂ ಆಗಿಬಿಡುತ್ತದೆ.  ಸೈನ್ಯದ ಆಯಕಟ್ಟಿನ ಜಾಗದಲ್ಲಿ ಕುಳಿತು ಹೆಗ್ಗಣಗಳಂತೆ ದೇಶದ ಬೊಕ್ಕಸವನ್ನು ಕೊರೆದು, ‘ಬಿಂದಾಸ್‌’ ಆಗಿ ಮೆರೆವವರ ಮzs ಅಜಲಿಯಂzವರು ಹರಕೆಯ ಕುರಿಗಳೇ ಆಗಿಬಿಡುತ್ತಾರೆ!
ಅಂಜಲಿಯ ತಾಯಿ ಉಮಾ ಗುಪ್ತಾ ಶಿಕ್ಷಕಿ ವೃತ್ತಿಗೆ ತಾತ್ಕಾಲಿಕ ವಿದಾಯ ಹೇಳಿ ಬೆಂಗಳೂರಿಗೆ ಬಂದುಬಿಟ್ಟಿದ್ದಾರೆ.  ಸುದ್ಧಿ ಕೇಳಿ ಅಘಾತಕ್ಕೊಳಗಾಗಿರುವ ಪ್ಯಾರಾಲಿಸಿಸ್ ಪೀಡಿತ ಗಂಡನನ್ನು ನೋಡಿಕೊಳ್ಳಲು ಬೇರೆಯವರಿಗೆ ಹೇಳಿ, ಮಗಳತ್ತ ಧಾವಿಸಿದ್ದಾರೆ.  ಆಕೆಯ ಕಣ್ಣಿನಿಂದ ಹರಿಯುತ್ತಿರುವುದು ರಕ್ತ! ಬುದ್ಧಿವಂತಚುರುಕು ಮಗಳ ಬವಿಷ್ಯ ಈ ರೀತಿ ಅಂಧಕಾರಮಯವಾಗುವುದನ್ನು ಯಾರು ತಾನೇ ಸಹಿಸಿಯಾರು ಹೇಳಿ.
ಇತ್ತ ಅಂಜಲಿ ಮಾನಸಿಕವಾಗಿ ಜರ್ಝರಿತಳಾಗಿ ಹೋಗಿದ್ದಾಳೆ.  ಆಕೆ ಮುಕ್ತವಾಗಿ ತಾಯಿಯೊಂದಿಗೆ ಇರುವಂತೆಯೂ ಇಲ್ಲ.  ಸೈನ್ಯದ ಜೈಲಿನಲ್ಲಿ ಆಕೆ ಬಂಧಿ.  ೨೪ ಗಂಟೆಯೂ ಆಕೆಯ ಮೇಲೆ ವಿಶೇಷ ಪಹರೆ.  ಪೌಷ್ಟಿಕ ಆಹಾರವೂ ಇಲ್ಲ.  ಎಣ್ಣೆಯ ತೊಯಾಗಿರುವ ಪೂರಿ ತಿಂದು ಆಕೆಯ ಗಂಟಲು ಕಟ್ಟಿದೆ.  ೞನನಗೆ ಪೂರಿ ಬೇಡ, ಇಡ್ಲಿ ಕೊಡಿೞ ಎಂಬ ಬೇಡಿಕೆಯನ್ನು ಅಧಿಕಾರಿಗಳು ತಳ್ಳಿಹಾಕಿಬಿಟ್ಟಿದ್ದಾರೆ.  ಬೆಳಿಗ್ಗೆ ೬ಕ್ಕೆ ಶುರುವಾಗುವ ಕೋರ್ಟ್ ಮಾರ್ಶಲ್ ಸಂಜೆ ೬ಕ್ಕೆ ಮುಗಿವ ವೇಳೆಗೆ ಆಕೆ ಬಸವಳಿದು ಬೆಂಡಾಗಿ ಹೋಗಿರುತ್ತಾಳೆ! ಮzs ಒಂದು ಗ್ಲಾಸು ನಿಂಬೆಹಣ್ಣಿನ ರಸ ಕೂಡ ಆಕೆಗೆ ದಕ್ಕುತ್ತಿಲ್ಲ.
ಮೊನ್ನೆಯಂತೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರಬೇಕಾದರೆ ಅಂಜಲಿ ತಲೆಸುತ್ತಿ ಬಿದ್ದುಬಟ್ಟಳು.  ಆಗ ಅಧಿಕಾರಿಯೊಬ್ಬರು ಆಕೆ ನಾಟಕ ಮಾಡುತ್ತಿದ್ದಾಳೆಂಬ ಕುಹಕದ ಮಾತಾಡಿದರೂ.  ತೆಲಗಿ ಹುಷಾರಿಲ್ಲವೆಂದ ಕಾರಣಕ್ಕೆ ಆಸ್ಪತ್ರೆಗೆ ಕಳಿಸಿ, ವಿಚಾರಣೆ ಮುಂದೂಡಿಸುವ ನಾವು ಅಂಜಲಿಗೆ ಮಾತ್ರ ಎಲ್ಲ ಸೌಲಬ್ಯವನ್ನೂ ನಿರಾಕರಿಸುತ್ತಿದ್ದೇವೆ!
ಪಾಪ! ೨೯ರ ಅಂಜರಿಗೆ ಈಗ ಎರಡೇ ದಾರಿ.  ಅಧಿಕಾರಿ ವರ್ಗದ ಮುಂದೆ ತಲೆಬಾಗಿಸಿ, ಶೋಷಣೆಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಾಗುವುದು.  ಇಲ್ಲವೇ ತನ್ನ ಜೀವವನ್ನು ತಾನೇ ಕೊನೆಗಾಣಿಸುವುದು!!

4 thoughts on “ಅಂಜಲಿ ಗುಪ್ತಾ ಸಾವು… ನಾಚಿಕೆಯ ನೋವು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s