ವಿನಯವಂತಿಕೆಗೆ ಮತ್ತೊಂದು ಹೆಸರೇ ಸಚಿನ್ ತೆಂಡೂಲ್ಕರ್!

ಸಚಿನ್ ಲೈಫ್ ಸ್ಕ್ಯಾನ್ ಸರಣಿಯ ಮುಂದುವರೆದ ಭಾಗ. ಹಿಂದಿನ ಭಾಗ ಮತ್ತು ಉಳಿದ ಕೊಂಡಿಗಳು ಇಲ್ಲಿವೆ. ಮುದ್ರಿತ ಪ್ರತಿಗಳು ಇಲ್ಲದ ಕಾರಣ ಸಂಪೂರ್ಣ ಸರಣಿಯನ್ನು ಇಲ್ಲಿ ಹಾಕಿಕೊಳ್ಳಲಾಗಿಲ್ಲ 😦

ಆಸ್ಟ್ರೇಲಿಯಾದ ನೆಲದಲ್ಲಿಯೇ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯನ್ನರನ್ನು ಹುಚ್ಚಾಪಟ್ಟೆ ಬಡಿದಿದ್ದಾಗ ಅಪರೂಪದ ಘಟನೆಯೊಂದು ನಡೆದಿತ್ತು.ಅವತ್ತು ಆಟಮುಗಿಸಿ ಸಚಿನ್ ಡ್ರೆಸಿಂಗ್ ರೂಮ್‌ನಲ್ಲಿ ಹರಟುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ವಾರ್ನ್ ತನ್ನ ಟೀಷರ್ಟ್ ಮೇಲೆ ಸಚಿನ್‌ನ ಹಸ್ತಾಕ್ಷರ ಕೇಳಿದ. ‘ಯಾರಿಗಾಗಿ?’ ಸಚಿನ್ ಪ್ರಶ್ನಿಸಿದಾಗ,’ಅಯ್ಯೋ,ಇನ್ಯಾರಿಗೆ? ಇದು ನನಗಾಗಿಯೇ’ ಎಂದುತ್ತರಿಸಿದ್ದ ವಾರ್ನ್. ಅವನ ಹಿಂದೆಯೇ ಆಸ್ಟ್ರೇಲಿಯ ತಂಡದ ನಾಲ್ಕಾರು ಆಟಗಾರರು ಆಟೋಗ್ರಾಫಿಗಾಗಿ ಸಾಲುಕಟ್ಟಿ ನಿಂತಿದ್ದರು.

ಸಚಿನ್ ಬ್ರಾಡ್ಮನ್ ನಂತರ ಜಗತ್ತು ಕಂಡ ಶ್ರೇಷ್ಟ ಆಟಗಾರನೆಂದು ಕ್ರಿಕೆಟ್ ಕಲಿಗಳೆಲ್ಲ ಒಪ್ಪಿಕೊಂಡಿದ್ದರು. ಸ್ಟೀವ್ ವಾ, ಶೇನ್ ವಾರ್ನ್, ರಿಚರ್ಡ್ಸ್‌ನಂತಹ ಆಟಗಾರರೂ ಅವನ ಬ್ಯಾಟಿಂಗ್ ಮೋಡಿಗೆ ತಲೆದೂಗುತ್ತಿದ್ದರು. ಸಚಿನ್ ಆಟ ಎಷ್ಟು ಚೆನ್ನಾಗಿ ಆಡುತ್ತಿದ್ದನೋ ಅಷ್ಟೇ ಬದ್ಧತೆಯುಳ್ಲವನೂ ಆಗಿದ್ದ. ೧೯೯೮ರ ಶಾರ್ಜಾ ಪಂದ್ಯದ ವೇಳೆಗೆ ಮ್ಯಾಚ್ ಫಿಕ್ಸ್ ಆಗಿರುವ ವಿಚಾರ ಹೊರಬಂತು. ತೆಹೆಲ್ಕಾ ಹೊರಗೆಡವಿದ ಸುದ್ದಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಫೈನಲ್‌ಗೆ ಮುನ್ನ ತಲೆಕೆಡಿಸಿಕೊಂಡಿದ್ದ ತಂಡದ ಮುಖ್ಯಸ್ಥರು ‘ನಾಳಿನ ಮ್ಯಾಚ್ ಫಿಕ್ಸ್ ಆಗಿದೆಯಂತೆ, ನಾವು ಸೋಲೋದು ಖಚಿತವಂತೆ’ ಎಂದು ಅಳಲು ತೋಡಿಕೊಂಡಿದ್ದರು. ಆಗ ಸಚಿನ್ ಹೇಳಿದ್ದ, ‘ಅವರು ಏನು ಬೇಕಾದರೂ ಮಾಡಿಕೊಳ್ಳಲಿ,ನಾಳಿನ ಮ್ಯಾಚ್ ಗೆಲ್ಲುವ ಜವಾಬ್ದಾರಿ ನನ್ನದು. ನೀವು ಚಿಂತಿಸಬೇಡಿ’ ಎಂದು. ಮಾರನೇ ದಿನ ಸಚಿನ್ ಜೀವನಶ್ರೇಷ್ಠ ಆಟವಾಡಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ. ‘ಪಂದ್ಯ ಪುರುಷೋತ್ತಮ’ ಪ್ರಶಸ್ತಿ ಅವನ ಪಾಲಾಗಿತ್ತು.

ಮ್ಯಾಚ್ ಫಿಕ್ಸಿಂಗ್ ವಿವಾದ್ ಇಡೀ ದೇಶವನ್ನೆ ತಲ್ಲಣಗೊಳಿಸಿದ್ದಾಗಲೂ ಭಾರತದ ಶ್ರೇಷ್ಠ ಆಟಗಾರರೆಲ್ಲ ಬಲೆಗೆ ಬಿದ್ದಿದ್ದಾಗಲೂ ಸಚಿನ್ ಮಾತ್ರ ಎಂದಿನಂತಿದ್ದ.ಆ ವಿವಾದ ಅವನ ಕೂದಲನ್ನೂ ಕೊಂಕಿಸಿರಲಿಲ್ಲ. ಅವನು ಪುಟವಿಟ್ಟ ಚಿನ್ನದಂತೆ ಕಂಗೊಳಿಸಿದ. ನಿರಂತರ ಆಟ,ಸ್ಫೋಟಕ ಹೊದೆತಗಳು ಅವನ ದೈಹಿಕ ಆರೋಗ್ಯವನ್ನು ಹಾಳುಗೆದವತೊದಗಿದವು. ೨೦೦೨-೨೦೦೩ರ ನ್ಯೂಜಿಲೆಮ್ಡ್ ಪ್ರವಾಸದ ವೇಳೆಗೆ ಸಚಿನ್ ಕೈಬೆರಳಿಗಾದ ಪೆಟ್ಟಿನಿಂದ ಸಹಿಸಲಸಾಧ್ಯ ನೋವುಂಡ. ಅವನ ಆಕರ್ಷಕ ಫುಲ್ ಹೊದೆತಗಳು ಬೆನ್ನುಮೂಳೆ ಸವೆಸಿದ್ದವು. ವೈದ್ಯರ ಸಲಹೆ ಮೇರೆಗೆ ಸಚಿನ್ ಒಂದಿಷ್ಟು ವಿಶ್ರಾಂತಿ ಪಡೆದ. ತನ್ನ ಆಟದ ಶೈಲಿ ಬದಲಿಸಿಕೊಂಡ. ಇಷ್ಟಾದರೂ ಆಟದ ಆರ್ಭಟ ಮಾತ್ರ ಕಡಿಮೆಯಾಗಲೇ ಇಲ್ಲ.

ಒಮ್ಮೆ ಪಾಕಿಸ್ತಾನದ ವಿರುದ್ಧ ಆಡುತ್ತಿರಬೇಕಾದರೆ, ಕಾಲಿಗೆ ಬಿದ್ದ ಏಟಿನಿಂದ ಕುಂಟತೊಡಗಿದ್ದ. ಅದನ್ನೇ ಗುರಿಯಾಗಿಸಿಕೊಂಡ ಪಾಕ್ ಆಟಗಾರರು ಆಟದುದ್ದಕ್ಕೂ ಸಚಿನ್ ಓಡುತ್ತಿದ್ದ ತುದಿಯತ್ತಲೇ ಚೆಂಡೆಸೆಯುತ್ತಿದ್ದರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವನ ದಾಳಿ ಸಾಗಿಯೇ ಇತ್ತು. ಹತಾಶನಾಗಿದ್ದ ಕಮೆಂಟೇಟರ್ ರಮೀಜ್ ರಾಜಾ,ಇಂಥ ದೈತ್ಯನನ್ನು ಔಟ್ ಮಾಡಲಾಗದಿದ್ದರೆ, ಚೆಂಡಿನಿಂದ ಗಾಯಗೊಳಿಸಬೇಕು. ಏಟು ತಿಂದು ಪೆವಿಲಿಯನ್ ಗೆ ಮರಳುವಂತೆ ಮಾಡಬೇಕು ಎಂದುಬಿಟ್ಟಿದ್ದ, ಅಪ್ಪಿತಪ್ಪಿ ಸಚಿನ್ ರನ್ನರ್ ಕೇಳಿದರೆ ಕೊಡಬಾರದೆಂದೂ ಅವಲತ್ತುಕೊಂಡಿದ್ದ.

ಎದುರಾಳಿಗಳ ತಂಡವನ್ನು ಈ ಪರಿ ಕಾಡುತ್ತಿದ್ದ ಬ್ಯಾಟ್ಸ್‌ಮನ್ ಬ್ರಾಡ್ಮನ್ ನಂತರ ಆ ಸ್ಥಾನವನ್ನು ಯಾರೂ ಪಡೆದಿರಲಿಲ್ಲ. ಈಗ ಸಚಿನ್ ಆ ಖಾಲಿಯನ್ನು ತುಂಬಿದ್ದ. ಎಷ್ಟೆಂದರೂ ಸಚಿನ್ ಕ್ರಿಕೆಟ್ ಆಡಲೆಂದೇ ಹುಟ್ಟಿಬಂದವನು. ಕ್ರಿಕೆಟ್ ಅನ್ನೆ ಧ್ಯಾನಿಸುತ್ತ ಬೆಳೆದವನು. ಅವನಲ್ಲದೆ ಇನ್ನಾರು ತಾನೆ ಅದನ್ನು ತುಂಬಲು ಸಾಧ್ಯವಿತ್ತು? ತನ್ನ ಅಸೀಮ ಕ್ರಿಕೆಟ್ ಪ್ರೇಮ ಮತ್ತು ಆಟದಲ್ಲಿನ ಶ್ರದ್ಧೆಗಳಿಂದಾಗಿಯೇ ಅವನು ಐತಿಹಾಸಿಕ ದಾಕಲೆಗಳನ್ನು ಬರೆಯಲು ಸಾಧ್ಯವಾಗಿರುವುದು. ಅವನ್ನು ಸರಿಗಟ್ತಲು ಮತ್ತೊಬ್ಬ ಸಚಿನ್ನೇ ಹುಟ್ಟಿಬರಬೇಕು ಅನ್ನುವಂಥ ಮಾತು ಹುಟ್ಟಿಕೊಂದಿರುವುದು.

ಅಚ್ರೇಕರ್ ಗರಡಿಯಿಂದ ಆರಂಭಿಸಿ ಭಾರತ ತಂಡದ ಹೊಸ್ತಿಲು ದಾಟುವವರೆಗೂ ಆತನದು ಒಂದೇ ಗುರಿಯಿತ್ತು.ತನ್ನಿಂದ ಭಾರತದ ಕೀರ್ತಿ ಮತ್ತಷ್ಟು ಪ್ರಜ್ವಲಿಸಬೇಕು ಅನ್ನೋದು. ಖಂಡಿತ ಅದೇ ವಿನಯ ವಿಧೇಯತೆ ಅವನಲ್ಲಿ ಇಂದಿಗೂ ಉಳಿದಿದೆ. ಶುರುವಿನ ದಿನಗಳಲ್ಲಿ ಮಿಡ್‌ಡೇ ಫೋಟೋಗ್ರಫರ್ ಎದುರು ಎಷ್ಟು ನಾಚಿದ್ದನೋ ಅದೇ ನಾಚಿಕೆ ಇವತ್ತಿಗೂ ಇದೆ. ೧೯ರ ಪೋರ ಆಸ್ಟ್ರೇಲಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾಗ ಹಿರಿಯ ಕ್ರಿಕೆಟ್ ಆಟಗಾರರ ಪತ್ನಿಯರು ಮುತ್ತಿಟ್ಟು ಕೆನ್ನೆ ಕೆಂಪು ಮಾಡಿದಾಗ ಮುಜುಗರಪಟ್ಟು ಮುದ್ದೆಯಾಗಿದ್ದನಲ್ಲ, ಅಂತಹ ಭಾವ ಇಂದಿಗೂ ಆತನಲ್ಲಿದೆ.

ಬದುಕಿನುದ್ದಕ್ಕೂ ಪತ್ರಿಕೆಗಳಿಗೆ ಚಪಲದ ಆಹಾರವಾಗಲಿಲ್ಲ ಸಚಿನ್. ಸುದ್ದಿಯಾಗಲು ಹಂಬಲಿಸಿದವನಲ್ಲ. ಆಯ್ಕೆ ಮಂಡಳಿಯು ಮನಸೋಇಚ್ಛೆ ನಡೆದುಕೊಂಡಾಗಲೂ ಪ್ರಶ್ನಿಸಿದವನಲ್ಲ. ಪ್ರತಿ ಬಾರಿಯೂ ಆತ ಸಹನೆಯಿಂದಲೇ ಇದ್ದ. ಸಚಿನ್‌ನ ಗಮನವೆಲ್ಲ ಕೇವಲ ಕ್ರಿಕೆಟ್ ಆಡುವ ಕಡೆಗಷ್ಟೆ. ಆತ ಯಾವ ಬಗೆಯ ರಾಜಕಾರಣದಲ್ಲೂ ಮೂಗು ತೂರಿಸಿದವನಲ್ಲ. ಇದು ಪ್ರತಿಯೊಬ್ಬ ಆಟಗಾರನೂ ಅವನಿಂದ ಕಲಿಯಬೇಕಾದ ಗುಣ.

3 thoughts on “ವಿನಯವಂತಿಕೆಗೆ ಮತ್ತೊಂದು ಹೆಸರೇ ಸಚಿನ್ ತೆಂಡೂಲ್ಕರ್!

 1. ನಮಸ್ಕಾರ.

  ಕ್ರಿಕೆಟ್ ಎಂಬ ಒಂದು ಆಟವಿದೆ, ಅದರಲ್ಲಿ ೧೧ ಮಂದಿ ಆಡುತ್ತಾರೆ ಎಂಬುದನ್ನು ಬಿಟ್ಟರೆ, ನನಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ.
  ಸಚಿನ್ ಆಟವನ್ನು ನಾನು ಗಮನಿಸಿದ್ದೇ ಆತ ೨೦೦ ರನ್ ಹೊಡೆದಾಗ..
  ಅವರ ಜೀವನದ ಘಟನೆಗಳನ್ನು ಬಹಳ ಚೆನ್ನಾಗಿ ಕಟ್ಟಿ ಕೊಡುತ್ತಿದ್ದೀರಿ. ಖುಷಿಯಾಯಿತು ಓದಿ.
  ವಂದೇ.

  ನಂದ ಕಿಶೋರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s