ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.
ಭಾರತದ ಹಿಂದಿನ ವೈಭವವನ್ನು ಹೇಳಿ- ಕೇಳಿ ಸಾಕಾಗಿಹೋಗಿದೆ. ಒಂದೋ ನಾವೀಗ ಬದುಕಬೇಕು, ಇಲ್ಲವೇ ಇಡಿಯ ರಾಷ್ಟ್ರವನ್ನು ನಿರ್ನಾಮಗೊಳ್ಳಲು ಬಿಟ್ಟು ಸಾಯಬೇಕು. ಹೋರಾಡಿ ಬದುಕುವುದಕ್ಕಿಂತ ನರಸತ್ತವರ ಹಾಗೆ ಸಾಯುವುದೇ ಸರಿ ಎಂದವರ ಬಗ್ಗೆ ಯಾರೇನೂ ಮಾಡಲಾಗದು. ಅಂಥವರು ತಮ್ಮೂರ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹಾರಾಡುವ ಉಗ್ರರ ಗುಂಡುಗಳಿಗೆ ಹೆಣವಾಗುತ್ತಾರೆ. ಹೀಗೆ ಸತ್ತಿದ್ದಕ್ಕೆ ಸರ್ಕಾರದಿಂದ ಲಕ್ಷ ಲಕ್ಷ ರುಪಾಯಿಗಳ ಭಕ್ಷೀಸು ಪಡೆಯುತ್ತಾರೆ.
ಇಂತಹ ಸಾವಿಗೆ ನಮ್ಮ ಪಾಳಿ ಎಂದು ಬಂದೀತೋ ಎಂದು ಕಾಯುತ್ತ ಕೂರೋಣವೆ?
ನಮ್ಮಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಇಂದು ಬಾಂಬ್ ದಾಳಿಗೆ ತತ್ತರಿಸಿದ ಮುಂಬಯಿಯಲ್ಲಿ ನಾಳೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ. ಬೆಳಗಿನ ಎಕ್ಸ್ ಪ್ರೆಸ್ ರೈಲು ಸರಿಯಾದ ಸಮಯಕ್ಕೆ ಬರುತ್ತದೆ. ಕಾಲಿಗೆ ಬಿಗಿಯಾಗಿ ಲೇಸ್ ಕಟ್ಟಿಸಿಕೊಂಡ ಮಗು ತನ್ನ ಶಾಲೆಗೆ ಹೊರಡುತ್ತದೆ. ತರಕಾರಿ ಮಾರಾಟ, ಹೆಂಗಸರ ಚೌಕಶಿ, ಷೇರು ಪೇಟೆ- ಎಲ್ಲವೂ ಮಾಮೂಲಿ. ಆದರೆ, ರಾಷ್ಟ್ರದ ಅಸ್ಮಿತೆಗೆ ಆದ ಗಾಯ…? ಅದು ಮಾಯುವುದು ಯಾವಾಗ?
೧೯೯೩ರಲ್ಲಿ ಆದ ಮುಂಬೈ ಸರಣಿ ಸ್ಫೋಟದ ರೂವಾರಿಗಳೇ ಇನ್ನೂ ಕೈಗೆ ಸಿಕ್ಕಿಲ್ಲ. ಸಂಸತ್ತಿನ ಮೇಲೆ ಆಕ್ರಮಣ ಮಾಡಿದವರಿಗೆ ಶಿಕ್ಷೆ ಘೋಷಣೆಯಾಗಿದ್ದರೂ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದವರೂ ಪತ್ತೆಯಾಗಿಲ್ಲ. ಕರಾಚಿಯಿಂದ ಉಗ್ರರು ಮುಂಬೈಗೆ ರಾಜಾರೋಷವಾಗಿ ಬಂದಿದ್ದಾರೆಂದರೆ, ಇಡಿಯ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದು ಕೇಳುವವರಿಲ್ಲ.
ಪಟ್ಟಿ ಸಕಷ್ಟು ಉದ್ದವಿದೆ. ರಾಷ್ಟ್ರವೆಂಬ ನ್ಯಾಯಾಲಯದಲ್ಲಿ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿದ್ದೇವೆ. ನಿಷ್ಕ್ರಿಯತೆಯ ಕಳಂಕ ನಮ್ಮನ್ನು ಮೆತ್ತಿಕೊಂಡಿದೆ. ಇನ್ನು ಬಹುಕಾಲ ಇದು ನಡೆಯಲಾರದು. ನಮ್ಮ ದಾರಿ ನಾವು ಆರಿಸಿಕೊಳ್ಳಬೇಕಿದೆ. ಒಂದೋ ಹೇಡಿಗಳಂತೆ ಸಾಯಬೇಕು, ಇಲ್ಲವೇ ದೇಶದ್ರೋಹಿಗಳನ್ನು ಹುಡುಹುಡುಕಿ ಕೊಲ್ಲಬೇಕು. ಇದು ತುರ್ತು ಪರಿಸ್ಥಿತಿ. ಹೀನ ರಕ್ಷಣಾ ಮಂತ್ರಿ ಶಿವರಾಜ ಪಾಟೀಲರನ್ನು, ಚಮಚಾಗಿರಿಗಷ್ಟೇ ಸೂಕ್ತರಾದ ಮನಮೋಹನ ಸಿಂಗರನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲವಲ್ಲ.
ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು.
ನಮ್ಮ ಪ್ರಧಾನಿಗೆ ಅಷ್ಟೊಂದು ತಾಕತ್ತಿಲ್ಲ ಬಿಡಿ. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.
ಆದರೇನು? ಅಂಥದೊಂದು ಇಚ್ಛಾಶಕ್ತಿ ಬೇಕಲ್ಲ? ಓಟಿಗಾಗಿ ಗಡ್ಡ ನೆಕ್ಕುವವರು ಬದುಕಿರುವವರೆಗೆ ಅದು ಸಾಧ್ಯವಾಗಲಾರದು. ಅವರನ್ನು ಪಕ್ಕಕ್ಕೆ ತಳ್ಳಿನಾವೇ ಮುಂದೆ ಬಂದರೆ…? ಅದು ಸರಿ. ಎದುರು ಬಂದ ಸೋಗಲಾಡಿ ಬುದ್ಧಿಜೀವಿಗಳನ್ನು, ಭಾರತೀಯತೆಯ ಬದ್ಧ ದ್ವೇಷಿಗಳನ್ನು ಹಳ್ಳದಲ್ಲಿ ಹೂತು, ರಾಷ್ಟ್ರ ರಕ್ಷಿಸುವ ಹೊಣೆ ನಮ್ಮದೇ.
ಈ ಬಾರಿ ಪ್ರತ್ಯುತ್ತರ ನೀಡಬೇಕಿರುವ ಹೊಣೆ ಇಂಟೆಲಿಜೆನ್ಸ್ ಅಧಿಕಾರಿಗಳದಲ್ಲ, ರಾಜಕಾರಣಿಗಳದೂ ಅಲ್ಲ. ಅದು ನಮ್ಮದು. ನಮ್ಮದೇ.
ಭಯೋತ್ಪಾದಕರ ಬೆಂಬಲಿಗರು ನಮ್ಮ ನಡುವೆಯೇ ಇದ್ದಾರೆ. ಅಂಥವರ ಮೇಲೆ ದಿಗ್ಬಂಧನ ನಾವು ಹೇರೋಣ. ಒಂದೊಂದು ಅನ್ನದ ಕಾಳಿಗೂ ಅವರು ಪರಿತಪಿಸುವಂತಾಗಬೇಕು. ಅಲ್ಲಿಂದ ಹೊರಟ ಬೇಗೆ, ಭಯೋತ್ಪಾದನೆಯನ್ನು ಸುಟ್ಟು ಬೂದಿ ಮಾಡಲಿ. ನಮ್ಮಲ್ಲಿರುವ ಅಸ್ತ್ರ ಇದೊಂದೇ.
ಬಳಸಿ. ಚೆನ್ನಾಗಿ ಬಳಸಿ. ಇದು ಕೊನೆಯ ಯುದ್ಧ. ಈ ಬಾರಿ ಗೆಲ್ಲೋಣ. ಇಲ್ಲವೇ ಸತ್ತು ಮಲಗೋಣ. ಆಯ್ಕೆ- ನಿಮ್ಮದು.
e ketta rajakaranada munde youva janaru yava reethi horadabahudu, entha bayotpadaneyannu hege suttu hakabahudu plz thilisi..
anitha shimoga…
ಚಕ್ರವರ್ತಿ,
ಈಗ ಎಲ್ಲ ಜನ ಒಟ್ಟಾಗಿ ನಮ್ಮಲ್ಲಿನ ತಪ್ಪು ಹುಡುಕಿ, ಸರಿಪಡಿಸಲು ದಾರಿಮಾಡಿಕೊಂಡು ನಮ್ಮ ಬಾರ್ಡರುಗಳನ್ನು ಮೊದಲು ಭದ್ರಪಡಿಸಿಕೊಳ್ಳಲು ಸಕಾಲ. ಈಗಿಲ್ಲದಿದ್ದರೆ ಇನ್ನಿಲ್ಲ. ನಮ್ಮ ಕೊಂಚ ಪರ್ಸನಲ್ ಸ್ವಾತಂತ್ರ್ಯಗಳನ್ನು ಕಳೆದುಕೊಂಡರೂ ಪರವಾಯಿಲ್ಲ, ನಮಗೆ ಈಗ ಬೇಕಿರುವದು ಸುರಕ್ಷತೆ. ಎಲ್ಲರಿಗೂ ಸರಿಯಾದ ಐಡಿ ಕಾರ್ಡುಗಳು, ಸರಿಯಾದ ಮೆರೈನ್ ಸೂಪರ್ ವಿಶನ್, ಮಿಲಿಟರಿ ಪ್ರಿಸಿಶನ್ನಿನೊಡನೆ ತಪಾಸಣೆ, ಕೂಂಬಿಂಗ್ ಆಪರೇಶನ್ನುಗಳು, ದೇಶದೊಳಗೆ ಬರುವ, ಹೊರಹೋಗುವ ಪ್ರತಿ ವ್ಯಕ್ತಿ, ವಸ್ತುವಿನ ತಪಾಸಣೆ.. ಹೀಗೆ ಕಟ್ಟುನಿಟ್ಟಾಗಿದ್ದರೆ ಯಾವ ಬ್ಲಡೀ ಆತಂಕವಾದಿ ಒಳನುಗ್ಗಿಯಾನು? ನಾವು ನಮ್ಮನಮ್ಮಲ್ಲೆ ಕಚ್ಚಾಡುವತನಕ ಹೊರಗಿನವರಿಗೆ ಲಾಭ. ಬ್ರಿಟೀಶರ ಸಮಯದಲ್ಲಿ ಆಗಿದ್ದೂ ಅದೆ, ಪಾರ್ಟಿಸನ್ನಿನ ಸಮಯದಲ್ಲಿ ಆಗಿದ್ದೂ ಅದೆ, ಈಗ ಆಗುತ್ತಿರುವುದೂ ಅದೆ. ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು. ಆದರೆ ನೀವು ಹೇಳಿದಂತೆ ಅವಸರದ ರಿಯಾಕ್ಷನ್ನಿನ ಬದಲು ಯೋಜಿಸಿ, ಯೋಚಿಸಿ ಬೇಗನೆ ಕ್ರಮ ಕೈಗೊಳ್ಳಬೇಕು. ಅಧಿಕಾರದಲ್ಲಿರುವ್ವರು ಏನಾದರು ಮಾಡುವಷ್ಟರಲ್ಲಿ ಇನ್ನಷ್ಟು ಮನೆಗಳು ಸಮಾಧಿಯಾಗುವುದರಲ್ಲಿ ಸಂಶಯವೇ ಇಲ್ಲ.
ಅಕ್ಷರವಿಹಾರ ಬ್ಲಾಗ್ ಬರಹ ಅರಗಿಸಿಕೊಳ್ಳಲು ಕಷ್ಟವಾಗಿತ್ತು.
ಇಲ್ಲಿ ಬಂದಾಗ ಸ್ವಲ್ಪ ನೆಮ್ಮದಿಯಾಯಿತು.
ಈ ಘಟನೆ ಇಂಟೆಲಿಜೆನ್ಸ್ ಫೈಲ್ಯೂರ್ ಅಲ್ಲ.
ಇಷ್ಟು ದಿನ ಸುಮ್ಮನಿದ್ದ (ಈಗಲೂ ಸುಮ್ಮನಿರುವ?) ನಮ್ಮದು… ಅಲ್ಲವೇ?
ತಾವು ಹೇಳುತ್ತಿರುವುದು ಅಕ್ಷರಶಃ ಸತ್ಯ…ಭಗವದ್ಗೀತೆಯನ್ನೇ ತೆಗೆದುಕೊಂಡರೂ ಅಲ್ಲಿ ಅರ್ಜುನನನ್ನು ಹುರಿದುಂಬಿಸಿದ ಶ್ರೀ ಕೃಷ್ಣನ ಮಾರ್ಗದರ್ಶನವೇ ಕಂಡುಬರುತ್ತದೆ..
ತಲೆಗೆ ಮಬ್ಬು ಹಿಡಿದವರಂತೆ, ಜಾತ್ಯಾತಿತತೆ ಎಂಬ ಮುಸುಕಿನಲ್ಲಿ ಸದಾ ಮುಲುಗುತ್ತಾ ಕರ್ಮ ಸನ್ಯಾಸವನ್ನು ಮಾಡಿರುವ ಈ ನಪುಂಸಕ ರಾಜಕಾರಣಿಗಳು ಕೂಡಲೇ ಎಚ್ಚೆತ್ತು ಈ ದೇಶದ ವಿರಾವೇಶವನ್ನು ಮೆರೆದು , ವೈರಿಗಳನ್ನು ಬಗ್ಗುಬಡಿಯಲಿ..ಎಂದು ಹಾರೈಸುವ
ನಾಗೇಶ್ ಕುಮಾರ್
http://www.nageshkumarcs.blogspot.com