ಕ್ರಿಸ್ತ ಮತ್ತು ಭಾರತ- ಎರಡು ಅನುಮಾನಗಳು

ಟೀನಾ ಮತ್ತು ನೀಲಾಂಜನರು ‘ಕ್ರಿಸ್ತ ಮತ್ತು ಭಾರತ’ ಲೇಖನಕ್ಕೆ ಪ್ರತಿಕ್ರಿಯಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪತ್ರಿಕೆಯಲ್ಲಿ ನಾನು ಬರೆದಿರೋದು ಏಸುಕ್ರಿಸ್ತನ ಬಗ್ಗೆ ನಡೆದ ಸಂಶೋಧನೆಯ ಕೇವಲ ಒಂದು ಭಾಗವಷ್ಟೇ. ಇದು ಪತ್ರಿಕೆಯ ಓದುಗರಿಂದಲೂ ಸಾಕಷ್ಟು ಉದ್ಗಾರ ಹೊರಡಿಸಿದೆ. ಆದರೆ ಇನ್ನೂ ಹೇಳಬೇಕಿರುವ ವಿಷಯಗಳು ಮತ್ತೆಷ್ಟು ಸಂಚಲನ ಉಂಟುಮಾಡಬಹುದೆಂದು ಯೋಚಿಸುತ್ತಿದ್ದೇನೆ.

ಇರಲಿ. ಗೆಳತಿ ಟೀನಾ ಹೇಳಿದ ಮೃತ ‘ಸಮುದ್ರದ ದಾಸ್ತಾವೆಜುಗಳು’ ಒಂದು ಕಾಲದಲ್ಲಿ ಜಗತ್ತನ್ನು ಅಲ್ಲಾಡಿಸಿದಂಥವು. ಅವುಗಳನ್ನಷ್ಟೆ ಆಧಾರವಾಗಿಟ್ಟುಕೊಂಡು ಅಧ್ಯಯನಕ್ಕೆ ಕುಳಿತರೆ ಏಸು ಎಂಬ ವ್ಯಕ್ತಿ ಅವತಾರವೆತ್ತಿದ್ದೇ ಸುಳ್ಳು ಎಂದಾಗುತ್ತದೆ. ಈ ಉತ್ಖನನದ ವರದಿ ಬರುವ ಮುನ್ನವೇ ವಿವೇಕಾನಂದರು ಈ ವಿಚಾರವಾಗಿ ಹೇಳಿರುವುದನ್ನು ಹೇಳುತ್ತೇನೆ.
ಯುರೋಪಿನಿಂದ ಭಾರತದೆಡೆಗೆ ಸ್ವಾಮೀಜಿ ಹೊರಟಾಗ ಒಂದೆಡೆ ಹಡಗಿನಲ್ಲಿ ಅವರಿಗೆ ಕನಸಾಯ್ತಂತೆ. ಅದರಲ್ಲಿ ಒಂದಷ್ಟು ಮಂದಿ ಥೇರಾಪುತ್ತರು (ಥೆರಾಪುಟ್ಸ್) “ಎದುರಿಗೆ ಕಾಣುವ ಕ್ರೀಟ್ ದ್ವೀಪದಲ್ಲಿದ್ದವರು ನಾವು. ಇಲ್ಲಿನ ವಿಚಾರಗಳನ್ನು ಸ್ವೀಕರಿಸಿ ಕ್ರೈಸ್ತಮತ ಬೆಳೆಯಿತು. ಇಂದಿನವರು ಹೇಳುತ್ತಿರುವ ‘ಏಸು’ ಎಂಬ ವ್ಯಕ್ತಿ ಇರಲೇ ಇಲ್ಲ” ಎಂದರಂತೆ. ತಕ್ಷಣ ಗಾಬರಿಗೊಂಡ ಸ್ವಾಮೀಜಿ ಹತ್ತಿರದ ದ್ವೀಪಗಳ ಬಗ್ಗೆ ಪ್ರಶ್ನಿಸಿದಾಗ, ಆ ಅಧಿಕಾರಿ ಬೆರಳು ತೋರಿಸುತ್ತ “ಅದು ಕ್ರೀಟ್ ದ್ವೀಪ” ಎಂದರಂತೆ!
(ಸ್ವಾಮಿ ಸೋಮನಾಥಾನಂದರು ಬರೆದಿರುವ ವಿವೇಕಾನಂದರ ಆತ್ಮ ಚರಿತ್ರೆ)
ಮುಂದೆ ಅದೇಭಾಗದಲ್ಲಿ ನಡೆದ ಉತ್ಖನನಗಳು ವಿವೇಕಾನಂದರ ಕನಸನ್ನು ಖಾತ್ರಿಗೊಳಿಸಿದವು.

ಹಾಗೆ ನೋಡಿದರೆ, ಜಗತ್ತಿನ ಎಲ್ಲ ಮತಗಳಿಗೂ ಮೂಲ ಭಾರತದ ಚಿಂತನೆಗಳೇ ಎಂಬುದರಲ್ಲಿ ಸಂಶಯವೇ ಇಲ್ಲ. ಮತ್ಸ್ಯ ಪುರಾಣದಲ್ಲಿ ಮೀನಾಗಿ ಅವತಾರವೆತ್ತಿ ಮನುಕುಲವನ್ನು ಉಳಿಸಿದ ಮಹಾವಿಷ್ಣು, ‘ನೋವಾ’ ಆಗಿ ಪಾಶ್ಚಾತ್ಯ ಕೃತಿಗಳಲ್ಲಿ ಕಂಡುಬರುತ್ತಾನೆ. ಕ್ರಿಶ್ಚಿಯನ್ನರ ಹಳೆಯ ಒಡಂಬಡಿಕೆಗಳ ಮೂಲ ಎಂದು ಹೇಳಲಾಗುವ ‘ಜೆಂಡ್ ಅವೆಸ್ತಾ’ದಲ್ಲಿ ‘ರಾಮ್ ಯಶ್ತ್’ ಎಂಬ ಒಂದು ಅಧ್ಯಾಯವಿದೆ. ಅದು ರಾಮನ ಕಥೆ. ಅಲ್ಲಿ ಸಾಕಷ್ಟು ಪ್ಯಾರಗಳಲ್ಲಿ ನಮ್ಮ ‘ಹನುಮಾನ್ ಚಾಲೀಸಾ’ದ ನೇರ ಅನುವಾದ ಅನ್ನಿಸುವ ವಿವರಗಳಿವೆ. ಯಜ್ಞಗಳ ಮೂಲಕ ಅಗ್ನಿಯನ್ನು ಪೂಜಿಸುವ ನಮ್ಮ ಚಿಂತನೆ ಯಾವ ಮತದಲ್ಲಿಲ್ಲ ಹೇಳಿ!?

ಏಸು ನಮ್ಮ ಪಾಲಿಗೆ ಒಬ್ಬ ಶ್ರೇಷ್ಟ ಸಂತ. ಶಿರಡಿಯ ಸಾಯಿ ಬಾಬಾ ಇಂಥಹದೇ ಶ್ರೇಷ್ಟ ಸಂತರಲ್ಲವೇ? ಅನಾರೋಗ್ಯ ಪೀಡಿತರನ್ನು ಗುಣಪಡಿಸಿದ, ನೀರಿಂದಲೇ ಬೆಂಕಿ ಹೊತ್ತಿಸಿದ ಅವರ ಪವಾಡಗಳು ಗೊತ್ತಿಲ್ಲವೇ? ದೇಹತ್ಯಾಗ ಮಾಡಿ ಮೂರುದಿನಗಳ ನಂತರ ಅವರು ಮತ್ತೆ ಮರಳಿದ್ದು, ಅದನ್ನು ಬ್ರಿಟಿಶ್ ಅಧಿಕಾರಿಯೊಬ್ಬ ಸಾಕ್ಷಿಯಾಗಿ ನಿಂತು ನೋಡಿದ್ದು ಜನಜನಿತ.
ಬಾಬಾ ಎಲ್ಲರಿಗೂ ಸತ್ಸಂಗ ದೊರಕಿಸಿಕೊಡಲು ಯತ್ನಿಸಿದರು. ಸದ್ವಿಚಾರಗಳನ್ನು, ಶಾಂತಿ- ಅಹಿಂಸೆಗಳನ್ನು ಬೋಧಿಸಿದರು.
ಕ್ರಿಸ್ತನೂ ಹಾಗೆಯೇ ಅಲ್ಲವೇ?
ಕಾಶ್ಮೀರದಲ್ಲಿ ಮಾರ್ತಾಂಡ ಮಂದಿರ ಎಂಬುದೊಂದಿದೆ. ಅಲ್ಲಿನ ಅವಶೇಷಗಳು ಕ್ರೈಸ್ತ ಧರ್ಮದ ಮೆಲೆ ಇಲ್ಲಿನ ತತ್ತ್ವಗಳ ಪ್ರಭಾವವನ್ನು ಸಾರಿಸಾರಿ ಹೇಳುತ್ತವೆ.

ಇನ್ನು, ಭವಿಷ್ಯ ಪುರಾಣದ ಬಗ್ಗೆ ಎತ್ತಿರುವ ಪ್ರಶ್ನೆಯೂ ಸಮಂಜಸವಾಗಿದೆ. ನನಗೂ ಮೊದಲು ಈ ಅನುಮಾನವಿತ್ತು. ಅದು ಮುಂದೆಂದೋ ಆಗಲಿದೆ ಎನ್ನುವುದನ್ನು ಹೇಳುವ ಕೃತಿಯಲ್ಲದೆ, ಆಗಿದ್ದನ್ನು ಹೇಳುವ ಕೃತಿಯೆಂದೇ ಇಟ್ಟುಕೊಳ್ಳಿ; ಆಗಲೂ ಏಸು ಭಾರತಕ್ಕೆ ಬಂದಿದ್ದುದು ಸತ್ಯ ಎಂದೇ ಸ್ಥಾಪಿತವಾಗುತ್ತದೆಯಲ್ಲವೆ?

ಸದ್ಯಕ್ಕೆ ನಾನು ಈ ನಿಟ್ಟಿನ ಅಧ್ಯಯನದಲ್ಲಿ ನಿರತನಾಗಿದ್ದೇನೆ. ಇನ್ನೆರಡು ತಿಂಗಳು ಅವಕಾಶ ಕೊಡಿ, ಸಮಗ್ರ ವಿವರಣೆಗಳೊಂದಿಗೆ ಒಂದು ಪುಸ್ತಕ ನಿಮ್ಮ ಕೈಲಿಡುತ್ತೇನೆ.

ವಂದೇ,
ಚಕ್ರವರ್ತಿ, ಸೂಲಿಬೆಲೆ

6 thoughts on “ಕ್ರಿಸ್ತ ಮತ್ತು ಭಾರತ- ಎರಡು ಅನುಮಾನಗಳು

  1. ಚಕ್ರವರ್ತಿ ಅವರೆ,

    ಈ ದಾರಿಯಲ್ಲಿ ನೀವು ಇನ್ನೂ ಹೆಚ್ಚಿನ ಬರವಣಿಗೆಯಲ್ಲಿ ತೊಡಗಿರುವುದನ್ನು ಕೇಳಿ ನಲಿವಾಯಿತು. ನಿಮ್ಮ ಪುಸ್ತಕ ಓದುವ ಕುತೂಹಲದೊಡನೆ ಕಾಯುತ್ತಿರುವೆ.

    ಬುದ್ಧನ ವಿಷಯ, ಅಥವಾ ಚಾಣಕ್ಯನ ವಿಷಯ ಭವಿಷ್ಯತ್ಪುರಾಣದಲ್ಲಿ ಸರಿಯಾಗಿದ್ದರೆ, ಯೇಸುವಿನ ವಿಷಯದಲ್ಲೂ ಸರಿಯಾಗಿಯೇ ಇರಬೇಕು ಎನ್ನುವ ನಂಬಿಕೆ ನನ್ನದು. ಈ ವಿಷಯವನ್ನು ಹೆಚ್ಚಿನ ಅಧ್ಯಯನದಿಂದ ನಿಮ್ಮಂತಹವರು ಗಟ್ಟಿಗೊಳಿಸಿದರೆ, ಅದರಿಂದ ಖಂಡಿತ ಒಳಿತಾಗುತ್ತದೆ.

    -ನೀಲಾಂಜನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s