ಬಯೋಡೇಟಾ

ಚಕ್ರವರ್ತಿ ಸೂಲಿಬೆಲೆ

ಹುಟ್ಟಿದ್ದು ಹೊನ್ನಾವರದಲ್ಲಿ, ಏಪ್ರಿಲ್‌ ೯, ೧೯೮೦ರಲ್ಲಿ. ಓದಿದ್ದು- ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ.
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ. ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ.
ವಿದ್ಯಾಭ್ಯಾಸ ಪೂರೈಸಿದ ನಂತರ ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶ. ಸ್ವದೇಶಿ ಆಂದೋಲನಕ್ಕೆ ಸೇರ್ಪಡೆ. ಸ್ವದೇಶಿ ವಸ್ತುಗಳ ಪ್ರಚಾರ ಹಾಗೂ ರಾಷ್ಟ್ರೀಯತೆಯ ಪ್ರಸಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ.
ಅನಂತರ ವಿವಿಧ ಸಮಾಜಮುಖಿ ಸಂಘಟನೆಗಳೊಂದಿಗೆ ಸಹಭಾಗಿತ್ವ, ಸಾಮಾಜಿಕ ಕಾರ್ಯಕರ್ತನಾಗಿ ಸೇವೆ.
ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷನಾಗಿ ಆಯ್ಕೆ.
ಪತಂಜಲಿ ಯೋಗ ಪೀಠದೊಂದಿಗೆ ಸಂಪರ್ಕ; ಭಾರತ್ ಸ್ವಾಭಿಮಾನ್‌ ರಾಜ್ಯ ಪ್ರಭಾರಿ ಹುದ್ದೆ. ಬಾಬಾ ರಾಮದೇವ್ ಅವರ ಹೋರಾಟಗಳೊಂದಿಗೆ ಸೇರ್ಪಡೆ. ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಹಾಗೂ ಸಾಕ್ಷ್ಯ ಚಿತ್ರ ತಯಾರಿಕೆ.

ಮುದ್ರಣ ಮಾಧ್ಯಮದಲ್ಲಿ:
* ಸ್ವದೇಶಿ ಆಂದೋಲನದ ಮುಖ ಪತ್ರಿಕೆ ‘ಹೊಸ ಸ್ವಾತಂತ್ರ್ಯದ ಬೆಳಕು’ ಸಂಪಾದಕನಾಗಿ ಕಾರ್ಯ ನಿರ್ವಹಣೆ.
* ಇದೇ ವೇಳೆಗೆ ವಿಜಯ ಕರ್ನಾಟಕದಲ್ಲಿ ‘ಮೇರಾ ಭಾರತ್ ಮಹಾನ್’ ಕಿರು ಅಂಕಣ ಬರಹ ಪ್ರಾರಂಭ.
* ವಿಜಯ ಕರ್ನಾಟಕದಲ್ಲಿ ‘ಹೋಂಗೆ ಕಾಮ್ಯಾಬ್’ ಅಂಕಣ ಬರಹಗಾರನಾಗಿ ಮುಂದುವರಿಕೆ.
* ಗರ್ವ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕನ ಜವಾಬ್ದಾರಿ.
* ಕರ್ಮವೀರ ಪತ್ರಿಕೆಯಲ್ಲಿ ‘ಲೈಫ್ ಸ್ಕ್ಯಾನ್’ ಅಂಕಣ ಸರಣಿ. ಇದರ ಅಡಿಯಲ್ಲಿ ಸುಭಾಷ್ ಚಂದ್ರ ಬೋಸ್, ಐನ್‌ಸ್ಟೀನ್ ಹಾಗೂ ಸಚಿನ್ ತಂಡೂಲ್ಕರ‍್ ಕುರಿತಾದ ಸರಣಿ ಲೇಖನಗಳು ಪ್ರಕಟ.
* ಪ್ರಸ್ತುತ ವಿಜಯವಾಣಿಯಲ್ಲಿ ’ಜಾಗೋ ಭಾರತ್’ ಅಂಕಣ ಬರಹದ ಕೊಡುಗೆ.

ದೃಶ್ಯ ಮಾಧ್ಯಮದಲ್ಲಿ:
* ಈ ಟೀವಿಯಲ್ಲಿ ‘ನಿವೇದನ’ ಕಾರ್ಯಕ್ರಮದ ನಿರೂಪಣೆ. ಇದೇ ವಾಹಿನಿಗಾಗಿ ‘ತೀರ್ಥ ಯಾತ್ರೆ’ ಕಾರ್ಯಕ್ರಮ ನಿರೂಪಣೆ.
* ಜೀ ಟೀವಿಯ ‘ಸಂಧ್ಯಾರಾಧನೆ’ ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ.
* ಚಂದನ ವಾಹಿನಿಗಾಗಿ ಚಿಂತನ ಕಾರ್ಯಕ್ರಮ,
* ಕಸ್ತೂರಿ ವಾಹಿನಿಯಲ್ಲಿ ಜಾಣರ ಜಗಲಿ ಕಾರ್ಯಕ್ರಮ,
* ಉದಯ ಟೀವಿಯ ಹರಟೆ ಕಾರ್ಯಕ್ರಮದಲ್ಲಿ ನಿರಂತರ ಸಹಭಾಗಿ.
* ನಾಗಾಭರಣ ನಿರ್ದೇಶನದ, ಸ್ವಾಮಿ ವಿವೇಕಾನಂದರ ಪ್ರೇರಣೆ ಕುರಿತಾದ “ಹೀರೋ” ಕಿರು ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರಚನೆ
* ಈ ಟೀವಿಗಾಗಿ ವಿಶೇಷ ಸಂದರ್ಭಗಳ ನೇರ ಪ್ರಸಾರದಲ್ಲಿ ಕಾರ್ಯಕ್ರಮ ನಿರೂಪಣೆ.
* ವಿವಿಧ ವಾಹಿನಿಗಳ ಪ್ಯಾನೆಲ್ ಡಿಸ್ಕಷನ್‌ಗಳಲ್ಲಿ ಭಾಗಿ.

ಶ್ರವಣ ಮಾಧ್ಯಮ:
ಬೆಂಗಳೂರು ಆಕಾಶವಾಣಿಯ ಜ್ಞಾನವಾಣಿ ವಾಹಿನಿಯಲ್ಲಿ ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಸರಣಿ ಉಪನ್ಯಾಸ, ಮತ್ತಿತರ ಉಪನ್ಯಾಸಗಳು.

ಉಪನ್ಯಾಸಕಾರನಾಗಿ:
ಸ್ವದೇಶಿ ಆಂದೋಲನದ ಸದಸ್ಯನಾಗಿ ಆರಂಭಗೊಂಡ ಉಪನ್ಯಾಸ ಪ್ರವೃತ್ತಿ ಸದ್ಯದ ವರೆಗೆ ಮುಂದುವರಿಕೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಭೇಟಿ.
ಶಾಲಾ ಕಾಲೇಜಿಗಳು, ಧಾರ್ಮಿಕ ಸಭೆಗಳು, ಸಾರ್ವಜನಿಕ ಸಭೆಗಳು – ಹೀಗೆ ವಿವಿಧ ವರ್ಗಗಳನ್ನು ಉದ್ದೇಶಿಸಿ ವಿಭಿನ್ನ ವಸ್ತು ವಿಷಯಗಳ ಕುರಿತು ಉಪನ್ಯಾಸ ನೀಡಿಕೆ.
ಬೆಂಗಳೂರಿನ ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಗತ್‌ ಸಿಂಗ್‌, ಜಲಿಯನ್‌ವಾಲಾ ಬಾಗ್‌ ಹಾಗೂ ಮದನ್‌ ಲಾಲ್‌ ಧಿಂಗ್ರಾ ಕುರಿತ ಏಕದಿನ ಉಪನ್ಯಾಸ ಹಾಗೂ ಸ್ವಾಮಿ ವಿವೇಕಾನಂದ ಮತ್ತು ಸುಭಾಷ್‌ ಚಂದ್ರ ಬೋಸ್‌ ಕುರಿತ ಮೂರು ದಿನಗಳ ಸರಣಿ ಉಪನ್ಯಾಸ ನೀಡಿಕೆ.

ಸ್ವತಂತ್ರ ಕೃತಿಗಳು:
*ಮೇರಾ ಭಾರತ್ ಮಹಾನ್,
* ಪೆಪ್ಸಿ ಕೋಕ್ ಅಂತರಾಳ,
* ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್,
* ನೆಹರೂ ಪರದೆ ಸರಿಯಿತು,
* ಸ್ವಾತಂತ್ರ್ಯ ಮಹಾ ಸಂಗ್ರಾಮ ೧೮೫೭- ಒಂದು ವಾಕ್ಚಿತ್ರ,
* ಭಾರತ ಭಕ್ತ ವಿದ್ಯಾನಂದ,
* ಸರದಾರ
* ಜಾಗೋ ಭಾರತ್ – ಅಂಕಣ ಬರಹ ಸಂಗ್ರಹ.

* ಕಾರ್ಗಿಲ್ ಕದನ ಕಥನ

ಅನುವಾದಿತ ಹಾಗೂ ಸಂಪಾದಿತ ಕೃತಿಗಳು:
* ಭಾರತ ಮಾತೆಯ ಕರೆ,
* ಸ್ವದೇಶೀ ಮತ್ತು ಗೋ ಚಿಕಿತ್ಸೆ, ಮೊದಲಾದವುಗಳು.

ಸಾಮಾಜಿಕ ಚಟುವಟಿಕೆಗಳು:
* ರಾಷ್ಟ್ರ ಶಕ್ತಿ ಕೇಂದ್ರ ಸಂಘಟನೆಯ ಸ್ಥಾಪನೆ. ಇತರ ಸದಸ್ಯರೊಡಗೂಡಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳ ಆಯೋಜನೆ.
* ’ಜಾಗೋ ಭಾರತ್’ ತಂಡದ ಮೂಲಕ ರಾಷ್ಟ್ರೀಯತೆಯನ್ನು ಉದ್ದೀಪಿಸುವ ದೇಶಭಕ್ತಿಗೀತೆಗಳ ಪ್ರಸ್ತುತಿ. ಈ ತಂಡದೊಂದಿಗೆ ರಾಜ್ಯಾದ್ಯಂತ ಮಾತ್ರವಲ್ಲದೆ ಗೋವಾ, ಮುಂಬಯ್‌ಗಳಿಗೆ ಪ್ರದರ್ಶನ ಪ್ರವಾಸ.

E mail ID: astitvam@gmail.com

Web site: www.neladamaatu.wordpress.com

And         www.yuvashakti.wordpress.com