ನೆಲದ ಮಾತು

ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ ಇವರು, ನಿಮ್ಮ ಆಯ್ಕೆ ಯಾರು?
ರಾಷ್ಟ್ರಪತಿ ಯಾರಾಗಬೇಕೆಂಬುದರ ಕುರಿತಂತೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಸ್ಲಿಮ್ ಮತ ಬ್ಯಾಂಕನ್ನು ಒಲಿಸಿಕೊಳ್ಳಲಿಕ್ಕಾಗಿಯೇ ಉಪರಾಷ್ಟ್ರಪತಿ ಅನ್ಸಾರಿಯವರನ್ನು ಪಟ್ಟಕ್ಕೇರಿಸಿಬಿಡುವ ಹುನ್ನಾರ ಕಾಂಗ್ರೆಸ್ಸಿನದು. ಅತ್ತ ಬಿಜೆಪಿಯಾದರೋ ನೂರಾ ಇಪ್ಪತ್ತೊಂದು ಕೋಟಿ ಜನರಿರುವ ನಾಡಿನಲ್ಲಿ ದೇಶದ ಮಹೋನ್ನತ ಹುದ್ದೆಗೆ ಒಬ್ಬರನ್ನು ಹೆಸರಿಸಲಾಗದಷ್ಟು ದೈನೇಸಿ ಸ್ಥಿತಿಗೆ ತಲುಪಿಬಿಟ್ಟಿದೆ. ರಾಷ್ಟ್ರೀಯತೆಯ ಪ್ರತಿಬಿಂಬ ಎನ್ನಿಸಿಕೊಂಡ ಪಕ್ಷವೊಂದಕ್ಕೆ ರಾಷ್ಟ್ರಪುರುಷರೇ ಕಾಣುತ್ತಿಲ್ಲವೆಂದರೆ ನಿಜಕ್ಕೂ ಆತಂಕವೆ ಸರಿ. ಅತ್ತ ಒಂದಷ್ಟು ಪತ್ರಿಕೆಗಳು, ಒಂದಷ್ಟು ಲೇಖಕರು ತಮ್ಮದೇ ಹೆಸರನ್ನು ಹರಿಬಿಡುತ್ತಿದ್ದಾರೆ. ಒಬ್ಬರಂತೂ ಎರಡು ಅವಧಿಗೆ ಅಮೀರ್ ಖಾನರನ್ನೆ ರಾಷ್ಟ್ರಪತಿ ಮಾಡೋಣವೆಂದು ಫರ್ಮಾನು ಹೊರಡಿಸಿದ್ದಾರೆ. ಎತ್ತರ, ಅಗಲದ ದೃಷ್ಟಿಯಿಂದ ನೋಡುವುದಾದರೆ ಅಮಿತಾಭ್ ಬಚ್ಚನ್ ಅವರ ಆಯ್ಕೆಯಂತೆ! ಇಬ್ಬರೂ ಬೇಡವೆಂದರೆ ಸಚಿನ್ ತೆಂಡೂಲ್ಕರ್‌ನನ್ನು ಕೇಳಬಹುದಂತೆ.

ವಾರೆವ್ಹಾ… ಬಾಬೂ ರಾಜೇಂದ್ರ ಪ್ರಸಾದರು, ರಾಧಾಕೃಷ್ಣನ್ನರು, ಕೊನೆಗೆ ಅಬ್ದುಲ್ ಕಲಾಮರು ಅಲಂಕರಿಸಿದಂತಹ ಸ್ಥಾನಕ್ಕೆ ನಾವು ಸೂಚಿಸುತ್ತಿರುವ ಹೆಸರುಗಳು ಎಂಥವು ನೋಡಿ! ಸಂಕರ್ ದಯಾಳ್ ಶರ್ಮಾ, ಪ್ರತಿಭಾ ಪಾಟೀಲರಂತಹ ರಬ್ಬರ್ ಸ್ಟಾಂಪ್ ಗಳನ್ನು ನೋಡಿದ ಮೇಲೆ ಅಲ್ಲಿ ಯಾರು ಕುಳಿತರೂ ಅಡ್ಡಿ ಇಲ್ಲ ಅನ್ನಿಸೋದು ಸಹಜವೇ. ಕೆಲವರಿಗೆ ರಾಷ್ಟ್ರಪತಿ ಹುದ್ದೆ ಕೆಲಸ ಮಾಡಲು ದೊರೆತ ಅಪೂರ್ವ ಅವಕಾಶ. ಇನ್ನು ಕೆಲವರಿಗೆ ಅದು ಭೋಗದ ವಾಸನೆ ತೀರಿಸಿಕೊಳ್ಳಲು ಉನ್ನತ ಹುದ್ದೆ. ಒಮ್ಮೆ ಅಲ್ಲಿ ಹೋಗಿ ಕುಳಿತರೆ ಮುಂದಿನ ಐದು ವರ್ಷಗಳ ಕಾಲ ಈ ದೇಶದ ರಾಜನಂತೆ ವಾಸಿಸಬಹುದಾದ ಅವಕಾಶ ಅದು. ಯಾರಾದರೂ ಬಿಡುತ್ತಾರಾ? ಸಂಗ್ಮಾರಂತಹ ಸಮರ್ಥ ವ್ಯಕ್ತಿಯೂ `ಹತ್ತು ವರ್ಷಗಳ ಹಿಂದೆ ಸೋನಿಯಾರನ್ನು ವಿದೇಶಿ ಮಹಿಳೆಯೆಂದು ಜರೆದಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದು ಸುಮ್ಮನೆ ಅಲ್ಲ. ಒಮ್ಮೆ ಮೇಡಂ ಒಪ್ಪಿ ಅಲ್ಲಿ ಕುಳಿತರೆ, ಆಮೇಲಿನ ಸುಖ ಸವಲತ್ತಿಗೆ ಯಾರ ಅಡ್ಡಿ!?

ಇಷ್ಟಕ್ಕೂ ರಾಷ್ಟ್ರಪತಿಯೊಬ್ಬರಿಗೇ ದಿನಕ್ಕೆ ನಾವು ಮಾಡುವ ಖರ್ಚು ಹೆಚ್ಚೂಕಡಿಮೆ ಆರೆಂಟು ಲಕ್ಷ. ವರ್ಷಕ್ಕೆ ೨೫ರಿಂದ ೩೦ ಕೋಟಿ! ಅವರಿರುವ ರಾಷ್ಟ್ರಪತಿ ಭವನದಲ್ಲಿ ೩೫೦ ಕೋಣೆಗಳಿವೆ. ಅಷ್ಟನ್ನೂ ಸದಾ ಸ್ವಚ್ಛವಾಗಿಡಲೆಂದು ಸಾವಿರಕ್ಕೂ ಮಿಕ್ಕಿ ಕಾರ್ಮಿಕರು. ರಾಷ್ಟ್ರಪತಿಗಳು ಬೆಳಗ್ಗೆ, ಸಂಜೆ ಅಡ್ಡಾಡಿ ಮನ ಮುದಗೊಳಿಸಿಕೊಳ್ಳಲೆಂದು ಒಂದು ಭರ್ಜರಿ ಮುಘಲ್ ಗಾರ್ಡನ್ ಇದೆ. ಅದನ್ನು ನೋಡಿಕೊಳ್ಳಲು ಎಂಟುನೂರು ಕಾರ್ಮಿಕರಿದ್ದಾರಂತೆ. ಅವರಿಗಾಗಿ ಸದಾ ಹೊರಡುವ ಸಿದ್ಧತೆಯಲ್ಲಿರುವ ೧೮ ಬೋಗಿಗಳ ಒಂದು ರೈಲಿದೆ. ಅದನ್ನು ಪ್ರಯಾಣ ಸನ್ನದ್ಧವಾಗಿರಿಸಲೆಂದೇ ದಿನನಿತ್ಯ ಒಂದೂವರೆ ಲಕ್ಷದಷ್ಟು ಖರ್ಚು! ದುರ್ದೈವ, ಕಳೆದ ಅನೇಕ ವರ್ಷಗಳಿಂದ ಅದನ್ನು ರಾಷ್ಟ್ರಪತಿಗಳು ಬಳಸಲೇ ಇಲ್ಲ.

ಭಾರತವನ್ನಾಳುತ್ತಿದ್ದ ಬ್ರಿಟಿಷ್ ಗವರ್ನರ್ ಜನರಲ್‌ಗಳು ಇಲ್ಲಿನ ಜನರನ್ನು ಶೋಷಿಸಿ ಐಷಾರಾಮಿಯಾಗಿ ಬದುಕಲು ಇವೆಲ್ಲವನ್ನೂ ಮಾಡಿಕೊಂಡಿದ್ದರು. ದೂರದ ಲಂಡನ್ನಿನಿಂದ ಇಲ್ಲಿನ ಉದ್ಯೋಗಕ್ಕೆ ಅವರು ಬರಲೊಪ್ಪಲೆಂದೇ ಈ ತರಹದ ವ್ಯವಸ್ಥೆ ಅವರಿಗೆ ಮಾಡಿಕೊಡಲಾಗಿತ್ತು. ಯಾರಪ್ಪನ ಗಂಟು ಹೇಳಿ? ನಮ್ಮ ದುಡ್ಡು, ಅವರಿಗೆ ಆನಂದ. ಬ್ರಿಟಿಷರು ದೇಶ ಬಿಟ್ಟು ೬೫ ವರ್ಷಗಳು ಉರುಳಿಹೋದ ನಂತರವೂ ನಮ್ಮ ಅವಸ್ಥೆ ಹಾಗೇ ಇದೆ. ಇಷ್ಟಕ್ಕೂ ರಾಷ್ಟ್ರಪತಿ ಹುದ್ದೆ ಯಾಕೆ ಬೇಕು ಹೇಳಿ. ಪ್ರತಿಭಾ ಪಾಟೀಲರು ತಮ್ಮ ಅವಧಿಯಲ್ಲಿ ಕೈಗೊಂಡ ಒಂದಾದರೂ ಸಮರ್ಥ ನಿರ್ಧಾರ, ತೋರಿದ ಸಮರ್ಥ ಮಾರ್ಗ ನಿಮಗೆ ನೆನಪಿದೆಯಾ? ಬ್ರಿಟಿಷರು ಭಾರತವನ್ನು ಆಳುವಾಗ ಇಲ್ಲಿನ ಸರ್ಕಾರಗಳನ್ನು ನಿಯಂತ್ರಿಸಲೆಂದೇ ಈ ಹುದ್ದೆ ಕೆಲಸ ಮಾಡುತ್ತಿತ್ತು. ಈಗ ಸರ್ಕಾರಗಳು ಹೇಳಿದಂತೆ ಕೇಳುವುದೇ ಅವರ ಕೆಲಸ!

ಹೀಗೆ ತಾವು ಹೇಳುವ ಕೆಲಸ ಮಾಡುವವರನ್ನೇ ಪಕ್ಷಗಳು ಅಧ್ಯಕ್ಷ ಹುದ್ದೆಗೆ ಆರಿಸೋದು. ಅದಕ್ಕೇ ಪ್ರತಿಭಾ ಪಾಟೀಲರು ಹಿಂದೊಮ್ಮೆ, `ಗಾಂಧಿ ಕುಟುಂಬಕ್ಕೆ ಮಾಡಿದ ಸೇವೆಯಿಂದಾಗಿಯೇ ನಾನೀಗ ಈ ಸ್ಥಾನದಲ್ಲಿರೋದು’ ಎಂದಿದ್ದರು. ಆ ಸ್ಥಾನದ ಘನತೆ ಗೌರವಗಳನ್ನು ಮರೆತು ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಅನಗತ್ಯ ವಿದೇಶ ಪ್ರಯಾಣ ಮಾಡಿ ದೇಶಕ್ಕೆ ಹೊರೆಯಾಗಿದ್ದರು.

ಸ್ವಲ್ಪ ರಾಜೇಂದ್ರ ಪ್ರಸಾದರನ್ನು ನೆನಪಿಸಿಕೊಳ್ಳಿ. ಅವರನ್ನು ರಾಷ್ಟ್ರಪತಿ ಪದವಿಗೆ ಸೂಚಿಸಿದಾಗ ಹಳ್ಳಿ ರೈತ ಈ ಕೆಲಸ ಮಾಡಿಯಾನು ಎಂದು ಜನ ಮೂದಲಿಸಿದ್ದರು. ಕೆಲಸ ಮಾಡುವುದೇನು? ಸರ್ಕಾರವನ್ನು ಎಚ್ಚರದಲ್ಲಿಟ್ಟು ತಪ್ಪು ಹಾದಿಯಲ್ಲಿ ನಡೆಯದಂತೆ ರಾಜೇಂದ್ರಪ್ರಸಾದರು ನೋಡಿಕೊಳ್ಳುತ್ತಿದ್ದರು. ಹಿಂದೂ ಕೋಡ್ ಬಿಲ್‌ನ ಕುರಿತಂತೆ ವಿವಾದವೆದ್ದಾಗ ತಮ್ಮ ನಿರ್ಣಯವನ್ನು ನೆಹರೂಗೆ ವಿರುದ್ಧವಾಗಿ ಮಂಡಿಸಿದವರು ಅವರೇ. ಚೀನಾದ ಆಕ್ರಮಣ ಅವರ ಮನಸನ್ನು ಘಾಸಿಗೊಳಿಸಿತ್ತಲ್ಲ, ಆಗ ಪ್ರಧಾನಿಯ ಬೇಜವಾಬ್ದಾರಿ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಸೋಮನಾಥ ಮಂದಿರದ ಉದ್ಘಾಟನೆಗೆ ಹೋಗಬಾರದೆಂದು ಪ್ರಧಾನಿ ನೆಹರೂ ತಾಕೀತು ಮಾಡಿದಾಗ ಅದನ್ನು ತಿರಸ್ಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು. `ನಮ್ಮದು ಜಾತ್ಯತೀತ ರಾಷ್ಟ್ರ ನಿಜ, ಆದರೆ ಧರ್ಮರಹಿತ ರಾಷ್ಟ್ರವಲ್ಲ’ ಎಂದು ಪ್ರಧಾನಿಗೆ ಜರ್ಬಿನಿಂದಲೇ ಉತ್ತರಿಸಿದರು. ಇದರಿಂದ ನೆಹರೂಗೆ ಅವರ ಮೇಲೆ ಬಹಳವೇ ಕೋಪವುಂಟಾಯ್ತು. ಆತ ಪಟೇಲರು ತೀರಿಕೊಂಡಾಗ ರಾಜೇಂದ್ರ ಪ್ರಸಾದರು ಮಾಡಿದ ಭಾಷಣ ಸರ್ಕಾರಿ ಮಾಧ್ಯಮಗಳಲ್ಲಿ ಬಿತ್ತರವಾಗದಂತೆ ನೋಡಿಕೊಂಡರು. ನೊಂದ ಜೀವ ಎಲ್ಲರ ಆಕ್ಷೇಪದ ನಡುವೆಯೂ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಬಂತು. ನೆಹರೂ ಚಮಚಾಗಿರಿ ಮಾಡಿದ್ದರೆ, ಆ ಹುದ್ದೆಯ ಘನತೆಯನ್ನು ಸಮಾಧಿ ಮಾಡಿ ಉಳಿದ ದಿನಗಳನ್ನು ಅವರು ಅಲ್ಲಿಯೇ ಕಳೆಯಬಹುದಿತ್ತು.

ಅನಂತರ ಆ ಹುದ್ದೆಯನ್ನೇರಿದ್ದು ರಾಧಾಕೃಷ್ಣನ್ನರು. ತಮ್ಮ ಬದುಕಿನುದ್ದಕ್ಕೂ ಭಾರತೀಯತೆಯನ್ನೆ ಉಸಿರಾಡಿದ ಅಪ್ರತಿಮ ಶಿಕ್ಷಕ. ಅಪಾರ ಸ್ವಾಭಿಮಾನಿ. ನಮ್ಮ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕೆ ಬನ್ನಿ ಅಂತ ವಿದೇಶದ ವಿವಿಯೊಂದು ಕೇಳಿಕೊಂಡಾಗ `ಕಲಿಯಬೇಕಾದ್ದು ಇಲ್ಲೇ ಸಾಕಷ್ಟಿದೆ, ಕಲಿಸಲು ಬೇಕಿದ್ದರೆ ಬರುತ್ತೇನೆ’ ಎಂದುಬಿಟ್ಟಿದ್ದರು. ರಷ್ಯಾಕ್ಕೆ ರಾಯಭಾರಿಯಾಗಿ ಅವರು ಹೊರಟರಲ್ಲ. ಆಗ ಶೀತಲಯುದ್ಧದ ಸಮಯ. ಭಾರತ ಅಮೆರಿಕಾ – ರಷ್ಯಾಗಳ ನಡುವೆ ಯಾರು ಹಿತವರೆಂದು ತಲೆ ಕೆರೆದುಕೊಳ್ಳುತ್ತಿತ್ತು. ರಾಧಾಕೃಷ್ಣನ್ನರ ಪ್ರಭಾವ ಎಷ್ಟಿತ್ತೆಂದರೆ, ಅವರ ಹಿಂದಿನ ರಾಯಭಾರಿಯೊಂದಿಗೆ ಮಾತೂ ಆಡದಿದ್ದ ರಷ್ಯಾದ ಸರ್ವಾಧಿಕಾರಿ ಸ್ಟಾಲಿನ್, ರಾಧಾಕೃಷ್ಣನ್ನರನ್ನು ಕರೆಸಿಕೊಂಡಿದ್ದ. ಅವರಿಂದ ಪ್ರಭಾವಿತನಾಗಿ, `ನನ್ನನ್ನು ಮನುಷ್ಯನಂತೆ ಕಂಡು ಮಾತನಾಡಿಸಿದವರು ನೀವು ಮಾತ್ರ’ ಎಂದಿದ್ದ. ಭಾರತದೊಂದಿಗೆ ರಷ್ಯಾ ನಡೆದುಕೊಳ್ಳುತ್ತಿರುವ ರೀತಿಯ ಕುರಿತು ಆಕ್ಷೇಪಿಸಿ, ರಾಧಾಕೃಷ್ನನ್ನರು ಸ್ಟಾಲಿನ್‌ನನ್ನು ತಿದ್ದಿದ್ದರು. ಅಶೋಕ ಯುದ್ಧಾನಂತರ ಸಂತನಾದ ಕಥೆ ಹೇಳಿ ಆತನನ್ನು ಶಾಂತಿಯೆಡೆಗೆ ಯೋಚಿಸುವಂತೆಯೂ ಮಾಡಿದ್ದರು. ಅಷ್ಟೇ ಅಲ್ಲ, ಅವರು ಭಾರತಕ್ಕೆ ಮರಳುವ ಸಂದರ್ಭ ಬಂದಾಗ ಸಚಿವರೊಬ್ಬರು ಬೀಳ್ಕೊಡಲೆಂದು ಕರೆ ಮಾಡಿದ್ದರು. ಔಪಚಾರಿಕ ಮಾತಿನ ನಂತರ ರಾಧಾಕೃಷ್ಣನ್, `ನೀವೇಕೆ ಕಾಶ್ಮೀರದ ವಿಷಯದಲ್ಲಿ ನಮ್ಮನ್ನು ಬೆಂಬಲಿಸುವುದಿಲ್ಲ?’ ಎಂದು ಕುಟುಕಿದ್ದರು. ಸಚಿವರು ಕಕ್ಕಾಬಿಕ್ಕಿ. ರಾಧಾಕೃಷ್ಣನ್ ತಮ್ಮ ಮಾತುಗಳನ್ನು ಗಂಭೀರ ದನಿಯಲ್ಲಿ ಸಮರ್ಥಿಸಿದ್ದರು. ಕೊನೆಗೆ ಮುಂದಿನ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ರಷ್ಯಾ ಭಾರತದ ಪರವಾಗಿ ಸದ್ದು ಮಾಡಿತ್ತು. ರಾಧಾಕೃಷ್ಣನ್ ರಷ್ಯಾದಿಂದ ಭಾರತಕ್ಕೆ ಮರಳಿ ಹೊರಟು ನಿಂತಾಗ ಸ್ಟಾಲಿನ್ ಮುಖ ಬಾಡಿತ್ತು.  `ನಿಮ್ಮಂತವರು ದೀರ್ಘಕಾಲ ಬದುಕಬೇಕು, ಅದರಿಂದ ಮನುಕುಲಕ್ಕೇ ಲಾಭವಿದೆ. ನಮ್ಮಂಥವರಿಂದಲ್ಲ’ ಎಂದು ಹೇಳಿಕೊಂಡಿದ್ದ. ಅದಾದ ಕೆಲವೇ ದಿನಗಳಲ್ಲಿ ಅವನು ತೀರಿಕೊಂಡುಬಿಟ್ಟ.

ಭಾರತದ ಪ್ರತಿಬಿಂಬವೇ ಆಗಿದ್ದ ರಾಧಾಕೃಷ್ಣನ್ ರಾಷ್ಟ್ರಪತಿಯಾದಾಗ ದೇಶ ಆನಂದಿಸಿದ್ದು ಅದಕ್ಕೇ. ಕಾಲಕ್ರಮದಲ್ಲಿ ರಾಷ್ಟ್ರಪತಿಯಾಗುವವರು ನೆಹರೂ ಮನೆತನದವರ ಚಾಕರಿ ಮಾಡಿರಬೇಕೆಂಬ ನಿಯಮ ಅಘೋಷಿತವಾಗಿ ಜಾರಿಯಾಯ್ತು. ಹೀಗೆಂದೇ ರಾಜಸ್ತಾನದ ವಕ್ಫ್ ಮಂತ್ರಿ ಅಮೀರ್ ಖಾನ್, `ಇಂದಿರಾಗಾಂಧಿಯವರ ಮನೆಯಲ್ಲಿ ಅಡುಗೆ ಮಾಡಿಕೊಂಡು, ಪಾತ್ರೆ ತೊಳೆಯುತ್ತಿದ್ದ ಪ್ರತಿಭಾ ಪಾಟೀಲರು ಪ್ರತಿಫಲವನ್ನು ಅಪೇಕ್ಷಿಸಿರಲಿಲ್ಲ. ಹೀಗಾಗಿಯೇ ಅವರನ್ನು ರಾಷ್ಟ್ರಪತಿ ಮಾಡಲಾಯ್ತು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ಮತ್ತೆ ಅಂತಹ ಸೇವಾನಿಷ್ಠರನ್ನೆ ಹುಡುಕಲಾಗ್ತಿದೆ. ವಾಜಪೇಯಿಯೊಬ್ಬರೆ ಈ ಮಾರ್ಗ ಬದಲಿಸಿ ಅಬ್ದುಲ್ ಕಲಾಮ್‌ರಂತಹ ದೇಶ ಗೌರವಿಸುವ ವ್ಯಕ್ತಿಯನ್ನು ಆ ಹುದ್ದೆಯಲ್ಲಿ ಕೂರಿಸಿದ್ದು.

ಇರಲಿ ಬಿಡಿ. ಎಲೆಕ್ಷನ್ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಹೀಗೊಬ್ಬ ಕಮೀಷನರ್ ಇರಬಲ್ಲನೆಂದು ದೇಶಕ್ಕೆ ತೋರಿಸಿದ ಶೇಷನ್ ಹೇಗೆ? ದೇಶದ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತ ಜನ, ಜಲ್, ಜಂಗಲ್, ಜಮೀನ್, ಜಾನ್ವರ್‌ಗಳ ರಕ್ಷಣೆಗೆ ಜೀವನವನ್ನೇ ಅರ್ಪಿಸಿರುವ ಅದ್ಭುತ ಚಿಂತಕ, ದೇಶದ ಬಗೆಗೆ ನೈಜ ಕಾಳಜಿಯುಳ್ಳ ಕೆ.ಎನ್.ಗೋವಿಂದಾಚಾರ್ಯರು ಆಗಲಾರರೇ?  ನಿಮಗೆ ಯಾವ ಕಾರು ಇಷ್ಟವೆಂದು ಕೇಳಿದ್ದಕ್ಕೆ `ಟಾಟಾ ಇಂಡಿಕಾ, ಯಾಕೆಂದರೆ ಅದರಲ್ಲಿ ಇಂಡಿಯಾ ಇದೆಯಲ್ಲ’ ಎಂದ ಉದ್ಯಮಿ ರತನ್ ಟಾಟಾ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಸದಾ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏಳುಬೀಳುಗಳನ್ನು ಗಮನಿಸುತ್ತಾ ಸ್ವದೇಶಿ ಚಿಂತನೆಯ ಆಧಾರದ ಮೇಲೆ ರಾಷ್ಟ್ರಕಟ್ಟಲು ಯೋಜನೆಗಳನ್ನು ರೂಪಿಸುವ ಚಿಂತಕ ಎಸ್. ಗುರುಮೂರ್ತಿಯವರು ಆ ಹುದ್ದೆಯೇರಿದರೆ ಹೇಗೆ? ಹೋಗಲಿ, ಪತ್ರಕರ್ತರಾಗಿ ಜೀವನ ಆರಂಭಿಸಿ, ಭಾರತ ಎಂದೊಡನೆ ಭಾವುಕರಾಗಿಬಿಡುವ ಎಂ.ವಿ.ಕಾಮತರು ಯಾಕಾಗಬಾರದು?  ನನ್ನ ಬಳಿ ಪಟ್ಟಿ ದೊಡ್ಡದಿದೆ. ಆದರೆ ಅವರ್ಯಾರೂ ಸರ್ಕಾರಗಳಿಗೆ ಹಿಡಿಸೋಲ್ಲ. ಏಕೆಂದರೆ ಇವರುಗಳು ಯಾವುದೇ ಪಾರ್ಟಿಯ ಗುಲಾಮರಲ್ಲ.

ರಾಷ್ಟ್ರಕ್ಕೆ ಅಧಿಪತಿಯ ಸ್ಥಾನದಲ್ಲಿರುವವನು ಯಾರದ್ದೋ ಚಾಕರನಾಗಿರಬೇಕೆನ್ನುವುದೇ ಹೊಟ್ಟೆಯಲ್ಲಿ ಬೆಂಕಿ ಹಾಕುವ ವಿಷಯ.

ಕಪ್ಪುಹಣದ ಶ್ವೇತಪತ್ರಕ್ಕೆ, ಇಷ್ಟೊಂದು ಅರ್ಜೆಂಟು ಯಾಕೆ?
ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ!

ಇಲ್ಲಿಂದಾಚೆಗೆ ಇನ್ನು ಎರಡೇ ತಿಂಗಳು. ದೇಶದಲ್ಲಿ ನಾವು ಈ ಹಿಂದೆ ಕಂಡು ಕೇಳರಿಯದ ಬದಲಾವಣೆಯೊಂದು ಸಿಡಿಲಿನಂತೆ ಅಪ್ಪಳಿಸಲಿದೆ. ಈ ಬಾರಿ ಇದು ಅಣ್ಣಾ ಹಜಾರೆಯವರ ಅಂಗಳದಿಂದಲೋ ರಾಮದೇವ್ ಬಾಬಾರ ಆಶ್ರಮದಿಂದಲೋ ಹೊರಟಿದ್ದಲ್ಲ. ಇದು ಸುಬ್ರಮಣಿಯನ್ ಸ್ವಾಮಿಯವರ ಬತ್ತಳಿಕೆಯಿಂದ ಎಗರಿದ್ದು. ಕಳೆದ ಏಪ್ರಿಲ್ ೧೫ಕ್ಕೆ ಸ್ವಾಮಿ ಪ್ರಧಾನಂತ್ರಿ ಮನಮೋಹನ್ ಸಿಂಗರ ಟೇಬಲ್ಲಿಗೆ ೨೦೦ ಪುಟದ ದಸ್ತಾವೇಜನ್ನು ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿಯವರಬ ಭ್ರಷ್ಟಾಚಾರದ ಕುರಿತಂತೆ ವಿಚಾರಣೆಗೆ ಅನುಮತಿ ಕೇಳಿದ್ದಾರೆ. ಮೂರು ತಿಂಗಳೊಳಗೆ ಅನುಮತಿ ದೊರೆಯದಿದ್ದರೆ ಸುಪ್ರೀಮ್ ಕೋರ್ಟ್‌ನಲ್ಲಿ ಈ ಕುರಿತಂತೆ ದಾವೆ ಹೂಡಲಿದ್ದಾರೆ. ಕೋರ್ಟ್‌ನ ಕಟಕಟೆಯಲ್ಲಿ ನೆಹರೂ ಕುಟುಂಬದವರೊಬ್ಬರು ಮೊದಲ ಬಾರಿಗೆ ಬಂದು ನಿಲ್ಲಲಿದ್ದಾರೆ. ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ!

ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದದ್ದೇ ನೆಹರೂ. ದೇಶದ ಕೆಲಸ ಮಾಡುವಾಗ ಒಂದಷ್ಟು ಹಣ ಹೊಡೆದರೆ ತಪ್ಪೇನೆಂದು ನೇರವಾಗಿ ಪ್ರಶ್ನಿಸಿದ್ದವರು ಅವರು. ಜಾತಿ ರಾಜಕಾರಣದ ಪರ್ವ ಶುರುವಾಗಿದ್ದೂ ಅವರ ಕಾಲಕ್ಕೇ. ಎಂ.ಸಿ.ಚಾಗ್ಲಾರನ್ನು ಮುಸಲ್ಮಾನರ ಕೇರಿಯಲ್ಲಿ ಚುನಾವಣೆಗೆ ನಿಂತುಕೊಳ್ಳಿರೆಂದು ಹೇಳಿ ನೆಹರೂ ಉಗಿಸಿಕೊಂಡಿದ್ದರು. ಮೆನನ್‌ರ ಹೆಗಲ ಮೇಲೆ ಕೈಯಿಟ್ಟು ರಕ್ಷಣಾ ಇಲಾಖೆಯ ಭ್ರಷ್ಟಾಚಾರಕ್ಕೆ ಮುದ್ರೆಯೊತ್ತಿದ್ದರು. ಇಂದಿರಾಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ. ಅವರ ಕಾಲದಲ್ಲಿ ಕಾಂಗ್ರೆಸ್ಸಿಗೆ ಹರಿದುಬಂದಷ್ಟು ಹಣ ಹಿಂದೆಂದೂ ಬಂದಿರಲಿಕ್ಕಿಲ್ಲ. ಸರ್ಕಾರ, ನ್ಯಾಯಾಲಯಗಳು, ಪೊಲೀಸ್ ಇಲಾಖೆ- ಎಲ್ಲವನ್ನೂ ಅಂಗೈಲಿಟ್ಟು ಆಡಿಸುತ್ತಿದ್ದ ಆಕೆ ಒಮ್ಮೆ ಸಿಕ್ಕಿಬಿದ್ದರು. ತನಗೆ ಬೇಕೆಂದಾಗ ಸ್ಟೇಟ್ ಬ್ಯಾಂಕ್ ಆಫ್‌ಇಂಡಿಯಾದ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ಇಂತಹವರಿಗೆ ಹಣ ತಲುಪಿಸುವಂತೆ ಆದೇಶಿಸುತ್ತಿದ್ದರು. ಇದನ್ನು ಗಮನಿಸದವರ್‍ಯಾರೋ ಆತನಿಗೊಂದು ಕಳ್ಳ ಕರೆ ಮಾಡಿ ೬೦ ಲಕ್ಷ ರೂಪಾಯಿ ಲಪಟಾಯಿಸಿಬಿಟ್ಟರು. ಆಗಲೇ ಇಂದಿರಮ್ಮನ ಭ್ರಷ್ಟತೆ ಹೊರಗೆ ಬಂದದ್ದು. ೧೯೯೧ರಲ್ಲಿ ಸ್ವಿಟ್ಜರ್‌ಲ್ಯಾಂಡಿನ ಪತ್ರಿಕೆಯೊಂದು ೧೬ ಜನರ ಕಪ್ಪುಹಣದ ವಿವರ ಪ್ರಕಟಿಸಿತು. ಅದರಲ್ಲಿ ಹದಿನೈದನೆಯ ವ್ಯಕ್ತಿ ಈ ದೇಶದ ಪ್ರಧಾನಿ ರಾಜೀವ್ ಗಾಂಧಿಯೇ ಆಗಿದ್ದುದು ಅಚ್ಚರಿ!

ಆ ಪತ್ರಿಕೆಯ ವರದಿಯಂತೆ ಆಗಲೇ ರಾಜೀವ್ ಗಾಂಧಿ ಸ್ವಿಸ್‌ಬ್ಯಾಂಕಿನಲ್ಲಿ ಇಟ್ಟಿದ್ದ ಹಣದ ಮೊತ್ತ ೨೦೦ ಕೋಟಿಯಷ್ಟಾಗಿತ್ತು. ದುರಂತವೇನು ಗೊತ್ತೆ? ಸ್ವತಃ ರಾಜೀವ್ ಆ ವರದಿಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಪ್ರಶ್ನಿಸಹೋದರೆ ಇನ್ನೊಂದಷ್ಟು ಸತ್ಯ ಹೊರಬಂದೀತೆಂಬ ಹೆದರಿಕೆಯಿತ್ತೇನೋ? ಕೆಲವೇ ತಿಂಗಳಲ್ಲಿ ಅವರ ಹತ್ಯೆಯಾಯ್ತು. ಆಗ ಆ ಎಲ್ಲ ಸಂಪತ್ತಿನ ವಾರಸುದಾರಿಕೆ ಬಂದದ್ದು ಸೋನಿಯಾ ಮಾಯ್ನೋರಿಗೆ!

ಆರಂಭದಲ್ಲಿ ಕಾಂಗ್ರೆಸ್ಸು ಬೇಡವೆಂದ ಸೋನಿಯಾ ನಿಧಾನವಾಗಿ ಅದರ ಜುಟ್ಟನ್ನೆ ತೆಕ್ಕೆಗೆ ತೆಗೆದುಕೊಂಡುಬಿಟ್ಟರು. ಪ್ರಧಾನಮಂತ್ರಿಯಿಂದ ಹಿಡಿದು ಕೊನೆಯ ಕಾರ್ಯಕರ್ತನವರೆಗೆ ಎಲ್ಲರೂ ತನ್ನ ಜಪ ಮಾಡುವಂತೆ ಮಾಡಿದರು. ಇತ್ತೀಚೆಗೆ ವಿವೇಕಾನಂದರಿಂದ ಪ್ರೇರಣೆ ಪಡೆದ ಒಬ್ಬ ಮಾಜಿ ಕಾಂಗ್ರೆಸ್ ಶಾಸಕರು ಸೋನಿಯಾ ಗಾಂಧಿ ಒಮ್ಮೆ ಪ್ರಧಾನಿಯಾಗುವುದನ್ನು ನೋಡಬೇಕೆಂಬುದೇ ತಮ್ಮ ಕೊನೆಯ ಆಸೆಯೆಂಬಂತೆ ಹೇಳಿಕೊಳ್ಳುತ್ತಿದ್ದರು. ತಾನೇ ಪ್ರಧಾನಿಯಾಗಬೇಕೆಂಬುದು ಅವರ ಆಸೆಯಲ್ಲ, ಈ ದೇಶದ ಪೌರತ್ವವನ್ನೂ ಸ್ವೀಕರಿಸದೆ ಓಡಲು ಸಿದ್ಧವಾಗಿದ್ದವರು ಈ ದೇಶವನ್ನು ಆಳಬೇಕಂತೆ! ಛೀ.. ಗುಲಾಮಿ ಮಾನಸಿಕತೆಯ ಪರಾಕಾಷ್ಠೆ ಇದು.

ಬಿಡಿ. ಸೋನಿಯಾ ಆನಂತರದ ದಿನಗಳಲ್ಲಿ ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಮಾರ್ಗರೆಟ್ ಆಳ್ವಾ, ಸಿಬಲ್‌ರಂತಹ ಕೆಲವರನ್ನು ಮುಂದಿಟ್ಟುಕೊಂಡು ಅವರ ಬುದ್ಧಿವಂತಿಕೆಯ ಆಧಾರದ ಮೇಲೆ ಹೆಸರನ್ನೂ ಗಳಿಸಿದರು, ಹಣವನ್ನೂ ಮಾಡಿಕೊಂಡರು. ಮಗ ರಾಹುಲ್ ಸ್ವಲ್ಪ ಬುದ್ಧಿವಂತನಾಗಿದ್ದರೆ ಅಧಿಕಾರವನ್ನೂ ಕೊಡಿಸಿಬಿಡುತ್ತಿದ್ದರು. ಪಾಪ, ರಾಹುಲ್. ಅವ ಕಾಲಿಟ್ಟೆಡೆಯೆಲ್ಲ ಕಾಂಗ್ರೆಸ್ಸು ಮಣ್ಣು ಮುಕ್ಕುತ್ತಲೇ ಇದೆ. ಇತ್ತೀಚಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಅನಂತ ಕುಮಾರ್ ವಿರುದ್ಧ ಕೃಷ್ಣ ಭೈರೇಗೌಡ ಗೆದ್ದೇಬಿಡುತ್ತಾರೆಂದು ಪುಕಾರು ಹಬ್ಬಿತ್ತು. ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ ಮೇಲೆ ಅನಂತ್ ಗೆಲ್ಲೋದು ಖಾತ್ರಿಯಾಯ್ತೆಂಬ ಜೋಕು ಹರಿದಾಡಿತು!

ಸೋನಿಯಾ ಕಾಲಕ್ಕೆ ಏನೆಲ್ಲ ನಡೆಯಿತು ನೋಡಿ. ೨ಜಿ ಸ್ಪೆಕ್ಟ್ರಮ್‌ನ ಒಂದೂ ಮುಕ್ಕಾಲು ಲಕ್ಷ ಕೋಟಿ ಹಗರಣ ಸ್ವಲ್ಪ ಗಲಾಟೆ ಎಬ್ಬಿಸಿತು. ಆದರೆ ಅದರ ಆರು ಪಟ್ಟು ದೊಡ್ಡದಾದ ಕಲ್ಲಿದ್ದಲು ಹಗರಣ ಮುಚ್ಚಿಯೇಹೋಯ್ತು. ಕಾಮನ್‌ವೆಲ್ತ್‌ಗೆ ನಮಗಿಂತ ಮುಂಚಿನ ದೇಶಗಳು ೫ ಸಾವಿರ ಕೋಟಿಗಿಂತ ಹೆಚ್ಚು ಖರ್ಚು ಮಾಡಿರಲಿಲ್ಲ. ನಮ್ಮ ನಂತರದ ಇಂಗ್ಲೆಂಡು ೨ ಸಾಔಇರ ಕೋಟಿ ಖರ್ಚಿನ ಅಂದಾಹು ವೆಚ್ಚ ಪ್ರಕಟಿಸಿದೆ. ಆದರೆ ಭಾರತ ಮಾಡಿದ ಖರ್ಚು ಬರೋಬ್ಬರಿ ೬೦ಸಾವಿರ ಕೋಟಿ. ಇದರಲ್ಲಿ ಯಾರ ಪಾಲು ಎಷ್ಟೆಷ್ಟು ಲೆಕ್ಕ ಇದೆಯೇನು? ಪುಣೆಯ ಒಬ್ಬ ಮಾಮೂಲಿ ವ್ಯಕ್ತಿ ಹಸನ್ ಖಾನ್ ೮೦೦ ಕೋಟಿ ಡಾಲರಿನಷ್ಟು ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿಟ್ಟಿದ್ದಾನೆ. ಆತನಿಗೆ ಸೋನಿಯಾರ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲನೊಂದಿಗೆ ಬಲವಾದ ಸಂಪರ್ಕವೂ ಇದೆ. ಇವೆಲ್ಲ ಎಲ್ಲರಿಗೂ ಗೊತ್ತು. ಆದರೂ ಮಾತಾಡುವಂತಿಲ್ಲ. ಆಂಧ್ರದ ರಾಜಶೇಖರ ರೆಡ್ಡಿ ಹತ್ತಿರಹತತಿರ ಒಂದು ಲಕ್ಷ ಕೋಟಿ ಅವ್ಯವಹಾರ ನಡೆಸಿದರೂ ಸಿಕ್ಕಿಬೀಳಲಿಲ್ಲ. ಏಕೆ? ಸೋನಿಯಾರ ಅಭಯ. ಅತ್ಯಂತ ಬಡ ಕುಟುಂಬದಿಂದ ಬಂದವರು ಸೋನಿಯಾ. ಈಗ ಅವರ ಕುಟುಂಬ, ಬಂಧು ಬಳಗ ಇಟಲಿಯಲ್ಲಿ ಪರಮ ಸಿರಿವಂತರಾಗಿದ್ದಾರಲ್ಲ, ಹೇಗಿದು?

ಈ ಎಲ್ಲ ಪ್ರಶ್ನೆಗಳನ್ನು ಸ್ವಾಮಿ ಪ್ರಧಾನಿಯವರಿಗೆ ಕೇಳಿದ್ದಾರೆ. ತನಿಖೆಗೆ ಆದೇಶ ಕೊಡಿ ಎಂದೂ ಆಗ್ರಹಿಸಿದ್ದಾರೆ. ಮನಮೋಹನರಿಗೆ ಈಗ ಪೀಕಲಾಟ. ಅದರಿಂದ ಪಾರಾಗಿ ಮುಖ ಉಳಿಸಿಕೊಳ್ಳಲು ಅವರಿಗಿದ್ದುದು ಒಂದೇ ಮಾರ್ಗ. ಶ್ವೇತ ಪತ್ರ ಹೊರಡಿಸುವುದು. ಶ್ವೇತ ಪತ್ರವೆಂದರೆ ಒಂದು ವಿಚಾರದ ಸಂಪೂರ್ಣ ಅಧ್ಯಯನ ಅಂತಲೇ ಅರ್ಥ. ಸಮಸ್ಯೆಯ ಆಳ  ವಿಸ್ತಾರಗಳನ್ನು ಅರಿತು, ಪರಿಹಾರದ ಕಡೆಗೆ ಸಾಗುವ ಪ್ರಯತ್ನ. ಆಪ್ತಮಿತ್ರ ಪ್ರಣಬ್ ಮುಖರ್ಜಿಯ ಕೈಲಿ ಈ ಕೆಲಸವನ್ನು ಮಾಡಿಸಿ ಮನಮೋಹನ ಸಿಂಗರು ನಿರಾಳರಾಗಿದ್ದಾರೆ. ಆದರೆ ಯಾವ ಶ್ವೇತ ಪತ್ರ ಅಂತರಂಗ ಬಹಿರಂಗಗಳನ್ನು ಜಾಲಾಡಿ ಕಪ್ಪು ಹಣದೊಡೆಯರ ಎದೆ ಕುಟ್ಟಬೇಕಿತ್ತೋ ಅದು ಸರ್ಕಾರದ ಮುಖ ಉಳಿಸಿಕೊಳ್ಳುವ ಕೆಲಸ ಮಾಡಿದೆ ಅಷ್ಟೆ. ಅದಕ್ಕೇ ಜಸ್ವಂತ ಸಿಂಗರು ಈ ಶ್ವೇತ ಪತ್ರ ಬಿಕಿನಿ ಇದ್ದಂತಿದೆ. ಪ್ರಮುಖವಾದ್ದನ್ನು ಬಚ್ಚಿಟ್ಟು, ಉಳಿದೆಲ್ಲವನ್ನೂ ಬಿಚ್ಚಿಟ್ಟಿದೆ ಎಂದಿರೋದು.

ಅಲ್ಲದೆ ಮತ್ತೇನು? ಇಡಿಯ ಶ್ವೇತಪತ್ರದಲ್ಲೆಲ್ಲೂ ಪಾರ್ಟಿಸಿಪೇಟರಿ ನೋಟ್‌ಗಳಿಂದಾದ ತೊಂದರೆಗಳನ್ನು ತೀವ್ರವಾಗಿ ಉಲ್ಲೇಖ ಮಾಡಿಯೇ ಇಲ್ಲ. ಶೆರು ಮಾರುಕಟ್ಟೆಗೆ ದಾಖಲೆಗಳೇ ಇಲ್ಲದೆ ಲಗ್ಗೆ ಇಡುವ ಹೊರದೇಶಗಳ ಬಂಡವಾಳಕೋರರು ಭಾರತದ ಅರ್ಥವ್ಯವಸ್ಥೆಯನ್ನು ಬುಡಸಹಿತ ಅಲುಗಾಡಿಸುವ ಬಗ್ಗೆ ಚಿಂತೆಯೇ ಇಲ್ಲ. ಹಸನ್ ಅಲಿಯಂತಹ ಕೆಲವರು ಭ್ರಷ್ಟ ರಾಜಕಾರಣಿಗಳ ಕಪ್ಪುಹಣವನ್ನು ಶೇರು ಮಾರುಕಟ್ಟೆಗೆ ತಂದು ಬಿಳಿ ಮಾಡಿಕೊಡುತ್ತಿದ್ದುದು ಇದರ ಮೂಲಕವೇ. ಹವಾಲಾದ ಮೂಲಕ ಇಲ್ಲಿಂದ ಕಪ್ಪುಹಣ ಹೊರಗೆ ಹೋದರೆ, ಅಲ್ಲಿಂದ ಅದು ಪಾರ್ಟಿಸಿಪೇಟರಿ ನೋಟ್‌ಗಳ ಮೂಲಕ ಭಾರತಕ್ಕೆ ಬಂದು ಬಿಳಿಯಾಗಿಬಿಡುತ್ತಿತ್ತು. ಚಿದಂಬರಂ ಕೈವಾಡ ಇದರಲ್ಲಿ ಅಪಾರ. ಇಂತಹ ಭ್ರಷ್ಟ ಹಣದ ಕುರಿತು ಪತ್ರ ಬೆಳಕುಚೆಲ್ಲಲೇ ಇಲ್ಲ.

ಈ ದೇಶದಲ್ಲಿ ತನ್ನ ಆಸ್ತಿಯನ್ನು ಮಾರಾಟ ಮಾಡಿಹೋಗಿರುವ ಹಚ್ ಕಂಪನಿಯ ಉಲ್ಲೇಖವಷ್ಟೆ ಇಡಿಯ ಶ್ವೇತ ಪತ್ರದಲ್ಲಿ ಪ್ರಾಮುಖ್ಯತೆ ಪಡೆದಿದ್ದು. ಹಚಿನ್‌ಸನ್ ಕಂಪನಿ ೧೯೯೨ರಲ್ಲಿ ಕೇಮೆನ್ ದ್ವೀಪದಲ್ಲಿ ನಾಮ್‌ಕಾವಾಸ್ತೆ ಕಂಪನಿಯೊಂದನ್ನು ತೆರೆದು ಅದರ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿತು. ಭಾರತ ಸರ್ಕಾರ ಇಷ್ಟು ವರ್ಷದ ಲಾಭ ನಷ್ಟಗಳ ಲೆಕ್ಕ ಕೊಡಿರೆಂದು ಕೇಳಿದಾಗ, ಕೇಮೆನ್ ದ್ವೀಪದ ಸರ್ಕಾರ ಲೆಕ್ಕ ಇಡೋದನ್ನು ಕಡ್ಡಾಯ ಮಾಡಿಲ್ಲವಾದ್ದರಿಂದ ನಾವು ಲೆಕ್ಕ ಕೊಡಲಾರೆವು ಎಂದುಬಿಟ್ಟಿತು. ನಮ್ಮ ತೆರಿಗೆ ಅಧಿಕಾರಿಗಳು ಬಾಯ್ಮುಚ್ಚಿಕೊಂಡು ಮರಳಿ ಬಂದರು. ಹಚಿನ್‌ಸನ್‌ನ ಮೂಲಕ ಭಾರತದಲ್ಲಿ ಕಪ್ಪು ಹಣ ಹೂಡಿ, ಕೆಲವು ವರ್ಷಗಳ ನಂತರ ಮತ್ತೊಂದು ಕಂಪನಿಗೆ ಅದನ್ನು ಮಾರಿ ಬಿಳಿಯ ಹಣ ಮಾಡಿಕೊಳ್ಳಲಾಯ್ತಲ್ಲ! ಹೇಗಿದೆ ವರಸೆ? ಇಷ್ಟನ್ನೂ ಹೇಳಿ ಪ್ರಣಬ್ ಹ್ಯಾಪುಮೋರೆ ಹಾಕಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಧಂಧೆಯ ಕುರಿತಂತೆಯೂ ಶ್ವೇತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ ದುಬೈನ ಮಾಫಿಯಾ ಡಾನ್‌ಗಳು ಬೆಂಗಳೂರು, ಮುಂಬೈ, ದಿಲ್ಲಿಯಲ್ಲಿ ಜಮೀನಿನ ಮೇಲೆ ಜಮೀನು ಖರೀದಿಸುತ್ತಿದ್ದು, ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿರುವುದರ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ.

ನಮ್ಮ ಹಣ ಈಗ ಸ್ವಿಸ್‌ನ ದಾರಿ ಬಿಟ್ಟಿದೆ. ಅದು ದುಬೈನತ್ತ ಹೊರಳುತ್ತಿದೆ. ಬಲಾಢ್ಯ ಚೀನಾ ನಮ್ಮ ಹಣ ತನ್ನ ಒಡಲಲ್ಲಿ ಬಚ್ಚಿಟ್ಟುಕೊಳ್ಳುವತ್ತ ಆಸಕ್ತಿ ತೋರುತ್ತಿದೆ. ಅಣ್ಣಾ ಹಜಾರೆ  ರಾಮದೇವ್ ಬಾಬಾರ ಹೋರಾಟದ ಕಾಲಕ್ಕೆ ದೇಶದಿಂದ ಹೊರಗಿದ್ದ ಸೋನಿಯಾ ತಮ್ಮ ದುಡ್ಡನ್ನು ಸರಿಯಾದ ಠಿಕಾಣಿಗೆ ತಲುಪಿಸಲು ಹೋಗಿದ್ದರಾ? ಪ್ರಶ್ನೆಗೆ ಉತ್ತರ ಪಡೆಯಲು ಬಹಳ ಕಾಯಬೇಕಿಲ್ಲ. ಇನ್ನು ಎರಡು ತಿಂಗಳಿಗೆ ವಿಚಾರಣೆ ಶುರುವಾಗುತ್ತೆ. ಅದಕ್ಕೆ ಮುನ್ನ ಅವರು ದೇಶ ತ್ಯಜಿಸಿದರೆ ಕಾಂಗ್ರೆಸ್ ದುರ್ದೆಸೆ ಹಿಡಿಯುವುದು ಖಾತ್ರಿ.

ಶಾಲೆಯಲ್ಲಿ ಕೊನೆಯ ಬೆಂಚು, ಬಾಳಿನಲ್ಲಿ ಕೋಲ್ಮಿಂಚು
ಸುಹಾಸ್ ಗೋಪಿನಾಥ್… ಇಪ್ಪತ್ತಾರು ವರ್ಷದವ. ಅರಳುಹುರಿದಂತೆ ಇಂಗ್ಲಿಷ್ ಮಾತನಾಡುತ್ತಾನೆ. ಕನ್ನಡವೂ ಅಷ್ಟೇ ಮಧುರ. ಸದ್ಯಕ್ಕೆ ಜಾಗತಿಕ ಕಂಪನಿ ಗ್ಲೋಬಲ್ ಇಂಕ್ನ ಮಾಲಿಕ. ಅಷ್ಟೇ ಅಲ್ಲ, ವಿಶ್ವ ಬ್ಯಾಂಕ್‌ಗೆ ಭಾರತದ ಪರವಾದ ಏಕೈಕ, ಅತ್ಯಂತ ಕಿರಿಯ ಸಲಹೆಗಾರ. ಚಿಕ್ಕ ವಯಸ್ಸಿನಲ್ಲಿಯೇ ಇಂಟರ್ನೆಟ್ ಜಗತ್ತಿನೆಡೆಗೆ ಆಕರ್ಷಿತನಾಗಿ ರೈಮ್ ಕಲಿಯುವ ವೇಳೆಗೆ ವೆಬ್‌ಸೈಟ್ ನಿರ್ಮಾಣದ ಭಾಷೆಗಳನ್ನು ಕಲಿತ. ಅವನ ಮೊದಲ ವೆಬ್‌ಸೈಟ್ ಕೂಲ್ ಹಿಂದೂಸ್ಥಾನ್, ಹೆಮ್ಮೆ ಪಡುವ ಮುನ್ನವೇ ಕೂಲ್ ಪಾಕಿಸ್ತಾನ್ ಆಗಿಬಿಟ್ಟಿತ್ತು. ಯಾರೋ ಧೂರ್ತರು ಅದನ್ನು ಹ್ಯಾಕ್ ಮಾಡಿದ್ದರು. ೧೪ರ ಸುಹಾಸ್ ತಲೆ ನೂರು ದಿಕ್ಕಿನಲ್ಲಿ ಹರಿದಿತ್ತು. ಆತ ಕಂಪನಿಯೊಂದರ ಆರಂಭಕ್ಕೆ ಮುನ್ನುಡಿ ಬರೆದ. ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿತು. ವಯಸ್ಸು ಹದಿನೆಂಟು ಆಗುವವರೆಗೆ ಬ್ಯಾಂಕಿನಲ್ಲಿ ಖಾತೆ ತೆರೆಯುವಂತಿಲ್ಲ. ಇನ್ನು ಕಂಪನಿ ದೂರದ ಮಾತು ಎಂದುಬಿಟ್ಟಿತು. ಸುಮ್ಮನಿರುವ ಜಾಯಮಾನ ಸುಹಾಸನದಲ್ಲ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಬರೆದ. ಕರೆ ಬಂತು, ಓಡಿದ. ಅವನ ಕನಸಿನ ಕಂಪನಿ ಅಲ್ಲಿಂದ ಶುರುವಾಗಿಯೇ ಬಿಟ್ಟಿತು. ಹದಿನಾಲ್ಕರ ತರುಣ ಜಾಗತಿಕ ಕಂಪನಿಯ ಒಡೆಯನಾದ. ಜಗತ್ತಿನ ಅತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆ ಅವನದಾಯ್ತು.

ಅಚ್ಚರಿ ಗೊತ್ತೇನು? ಶಾಲೆಯಲ್ಲಿ ಮಾತ್ರ ಅವನೆಂದಿಗೂ ಮುಂದಿನ ಸಾಲಿನ ಹುಡುಗನಾಗಿರಲಿಲ್ಲ. ತನ್ನ ಅಣ್ಣನಷ್ಟು ಬುದ್ಧಿವಂತನಾಗಿರಲಿಲ್ಲ. ತಂದೆ – ತಾಯಿ  ಮೇಷ್ಟ್ರುಗಳೆಲ್ಲ ಅಣ್ಣನ್ನ ನೋಡು ಎಂದು ಮೂದಲಿಸುವವರೇ. ಇಂದು ಮಾತ್ರ ಎಲ್ಲವೂ ತಿರುಗಾಮುರುಗಾ! ಅವನ ತರಗತಿಯಲ್ಲಿ ಅವನಿಗಿಂತ ಮುಂದೆ ಕೂತು ಶಭಾಷ್‌ಗಿರಿ ಪಡೆದುಕೊಂಡವರು ಇಂದು ಅವನದೇ ಕಂಪನಿಯಲ್ಲಿ ಉದ್ಯೋಗಿಗಳು. ಅದು ಬಿಡಿ. ಸುಹಾಸ್‌ಗೆ ಇಷ್ಟೆಲ್ಲ ಮಾಡಿದ ನಂತರ ಬಿಇ ಪಡೆಯಬೇಕೆಂಬ ಮನಸ್ಸಾಯ್ತು. ಕಾಲೇಜಿಗೆ ಸೇರಿಕೊಂಡ. ಜಾಗತಿಕ ಖ್ಯಾತಿಯ ತರುಣ ಆತ. ಹೀಗಾಗಿ ಆಗಾಗ ವಿಶ್ವ ಬ್ಯಾಂಕು ಅವನನ್ನು ಬೇರೆ ಬೇರೆ ಕಾರಣಗಳಿಗೆ ಕರೆಸಿಕೊಳ್ಳುತ್ತಲಿತ್ತು. ಇತ್ತ ಸುಹಾಸ್ ಕಾಲೇಜಿನ ಕ್ಯಾಂಪಸ್ಸಿಗಿಂತ ಹೆಚ್ಚು ವಿಶ್ವಬ್ಯಾಂಕಿನ ಪಡಸಾಲೆಗಳಲ್ಲಿ ತಿರುಗಾಡುತ್ತಿದ್ದ. ಸಹಜವಾಗಿಯೇ ತರಗತಿಯಲ್ಲಿ ಹಾಜರಿ ಕಡಿಮೆಯಾಯ್ತು. ಪರೀಕ್ಷೆ ಬರೆಯಲು ಅನುಮತಿ ಸಿಗಲಿಲ್ಲ. ವಿಶ್ವ ಬ್ಯಾಂಕಿನ ಪತ್ರಗಳನ್ನೆಲ್ಲ ಸುಹಾಸ್ ಮುಖ್ಯಸ್ಥರ ಮುಂದೆ ಹರವಿದ. ವಿಶ್ವಬ್ಯಾಂಕಿಗಾದರೂ ಹೋಗು; ರಾಜ್ಯ ಬ್ಯಾಂಕಿಗಾದರೂ ಹೋಗು. ನನಗೆ ಹಾಜರಾತಿ ಬೇಕಷ್ಟೆ ಎಂಬ ಉತ್ತರ ಬಂತು. ಪರೀಕ್ಷೆ ಬರೆಯೋ ಆಸೆ ಕಮರಿಹೋಯ್ತು. ನಮ್ಮ ಶಿಕ್ಷಣ ವ್ಯವಸ್ಥೆ ಇಂಥದ್ದು. ಒಂದೋ ಹಾಜರಾತಿಯ ಹಿಂದೆ ಓಡುವಂಥದ್ದು. ಇಲ್ಲವೇ ಹೇಗಾದರೂ ಪದವಿ ಪ್ರಮಾಣ ಪತ್ರ ನೀಡಿಬಿಡುವಂಥದ್ದು!

ಪುತ್ತೂರಿನಲ್ಲೂ ಇಂತಹುದೇ ಒಂದು ಪ್ರೇರಣಾದಾಯಿ ಘಟನೆ ಇದೆ. ಪಿತ್ರಾರ್ಜಿತವಾದ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ  ಶಂಕರ ಭಟ್ಟರಿಗೆ ಬಂಗಾರದಂಥ ನೀರು ದಕ್ಕಿತು. ಕೃಷಿಯ ಕೆಲಸ ಮಾಡುತ್ತ ಮಾಡುತ್ತಲೇ ರಾಜ್ಯದ ಜನರಿಗೆ ಈ ನೀರನ್ನು ತಲುಪಿಸಬೇಕೆಂಬ ಹುಳ ಅವರ ತಲೆ ಹೊಕ್ಕಿತು. ಸಾಹಸಕ್ಕೆ ಕೈಹಾಕಿಯೇಬಿಟ್ಟರು. ಆ ಕುರಿತಂತೆ ಅಧ್ಯಯನ ನಡೆಸಿ ಬಿಂದು ನೀರಿನ ಕಂಪನಿ ಶುರುಮಾಡೇಬಿಟ್ಟರು. ನೋಡನೋಡುತ್ತಲೆ ಕಂಪನಿ ಬೆಳೆಯಿತು. ಅದೊಂದು ದಿನ ಕೋಕೊಕೋಲಾ ಕಂಪನಿ ೫ ಕೋಟಿಗೆ ಇಡಿಯ ಘಟಕವನ್ನು ಮಾರಲು ಕೇಳಿಕೊಂಡಿತು. ಉಹು…. ಇವರು ಒಪ್ಪಲಿಲ್ಲ. ಇಂದು ನಾಲ್ಕೈದು ರಾಜ್ಯಗಳಿಗೆ ಬಿಂದು ದಕ್ಕುತ್ತದೆ. ಆದರೆ ವಿಷಯ ಅದಲ್ಲ.   ಶಂಕರಭಟ್ಟರೊಡನೆ ಮಾತನಾಡುತ್ತ ಕಣ್ಣರಳಿಸಿ ಕೇಳಿದೆ. ನೀವು ಎಷ್ಟು ಓದಿಕೊಂಡಿದ್ದೀರಿ? ಹಾಗೆ ಕೇಳುವಾಗ ಎಂಬಿಎ ಆದರೂ ಆಗಿರಬೇಕೆಂಬ ಊಹೆ ಇತ್ತು. ಎಸ್‌ಎಸ್‌ಎಲ್‌ಸಿಯನ್ನೂ ಮಾಡಿಲ್ಲವೆಂಬ ಅವರ ಉತ್ತರ ಗಾಬರಿ ಹುಟ್ಟಿಸಿತು. ಸಹೋದರರು ಚೆನ್ನಾಗಿ ಓದಿಕೊಂಡು ಕೆಲಸದಲ್ಲಿದ್ದಾರೆ, ನಾನು ಏನೂ ಓದಿಕೊಂಡಿಲ್ಲ. ಒಂದಷ್ಟು ಜನರಿಗೆ ಕೆಲಸ ನೀಡಿದ್ದೇನೆ ಎನ್ನುವಾಗ ನನಗೆ ಆಶ್ಚರ್ಯವೂ ಸಂತೋಷವೂ ಏಕಕಾಲಕ್ಕೆ ಉಂಟಾದವು. ಅವರ ಮುಂದಿನ ಯೋಜನೆಯ ಬಗ್ಗೆ ತಿಳಿಯುವ ಕಾತರವಿತ್ತು. ಭಟ್ಟರು ಅವರಾಗಿಯೇ, `ಈ ಕಂಪನಿಯನ್ನು ಮತ್ತಷ್ಟು ಬೆಳೆಸಬೇಕು. ಮತ್ತಷ್ಟು ಜನರಿಗೆ ಉದ್ಯೋಗಾವಕಾಶ ಮಾಡಿಕೊಡಬೇಕು. ಇದನ್ನು ವಾರ್ಷಿಕ ನೂರುಕೋಟಿ ರೂಪಾಯಿಗಳಷ್ಟು ವಹಿವಾಟಿನ ಉದ್ಯಮವನ್ನಾಗಿ ರೂಪಿಸಬೇಕು ಅನ್ನುವ ಕನಸು ನನ್ನದು. ಅದಕ್ಕಾಗಿ ಶ್ರಮ ಹಾಕುತ್ತಿದ್ದೇನೆ. ಸಾಧಿಸಿ ತೋರಿಸುತ್ತೇನೆ ಅನ್ನುವ ಭರವಸೆ ನನಗಿದೆ’ ಎಂದಾಗ ನಾನು ಅವರ ಆತ್ಮವಿಶ್ವಾಸಕ್ಕೆ ಬೆರಗಾಗಿಬಿಟ್ಟಿದ್ದೆ.

ಇಷ್ಟೆಲ್ಲ ಮಾತು ಈಗೇಕೆಂದರೆ, ನಮ್ಮ ಶಿಕ್ಷಣ ಅದೆಂಥದ್ದು ಎಂದು ಚರ್ಚಿಸುವ ಕಾರಣಕ್ಕಾಗಿ. ಮಕ್ಕಳೊಳಗಿನ ಸಾಮರ್ಥ್ಯವನ್ನು ಹೊರತೆಗೆಯುವ ಶಿಕ್ಷಣ ಬೇಕಾಗಿದೆಯೇ ಹೊರತು ಅವರಿಗೆ ಮಾಹಿತಿ ತುಂಬಿ ತಲೆಕೆಡಿಸಿ ಕೂಲಿಗಳನ್ನಾಗಿ ಮಾಡುವ ಇಂದಿನ ಶಿಕ್ಷಣವಲ್ಲ. ಆತ್ಮವಿಶ್ವಾಸ ನೀಡದ ಸೃಜನಶೀಲತೆ ಬೆಳೆಸದ ಹೊಸದರ ತುಡಿತ ಹುಟ್ಟಿಸದ ದೊಡ್ಡ ಕನಸು ಕಾಣಲು ಪ್ರೇರೇಪಿಸದ ಶಿಕ್ಷಣ ಅದೆಂತಹ ಶಿಕ್ಷಣ? ಪ್ರೌಢ ಶಾಲೆಗೆ ಹೋಗುವ ವೇಳೆಗಾಗಲೇ ಸ್ವಂತ ಬುದ್ಧಿ ಕಳೆದುಕೊಳ್ಳುವಂತೆ ಮಹಾಪ್ರಯತ್ನವನ್ನೆ ಶಿಕ್ಷಣ ಎಂದು ಕರೆಯಲಾಗುತ್ತಿದೆ. ನಮ್ಮ ನೀತಿಗಳೆ ಹಾಗೆ. ಎಲ್ಲರಿಗೂ ಶಿಕ್ಷಣ ಕೊಡಿಸುವ ಭರದಲ್ಲಿ ಸಮರ್ಥ ಶಿಕ್ಷಣ ಕೊಡುವುದನ್ನು ಮರೆತುಬಿಟ್ಟಿದ್ದೇವೆ.

ತಲೆ ತುಂಬ ಗಣಿತದ ಸೂತ್ರಗಳನ್ನು ತುಂಬಿಕೊಂಡು ಸಮಾಜದ ಇಸವಿಗಳೊಂದಿಗೆ ಗುದ್ದಾಡುತ್ತಾ ವಿಜ್ಞಾನದ ಅತ್ಯಂತ ಕಠಿಣ ಪ್ರಯೋಗಗಳನ್ನು ಪಿಳಿಪಿಳಿ ನೋಡುತ್ತಾ ಕುಳಿತುಕೊಳ್ಳುವ ವಿದ್ಯಾರ್ಥಿ ವರ್ಷದ ಕೊನೆಯ ಪರೀಕ್ಷೆಗಾಗಿ ಬಡಿದಾಡಲು ಸನ್ನದ್ಧನಾಗುತ್ತಾನೆ ಅಷ್ಟೆ. ಅದೇ ಅವನ ಬುದ್ಧಿವಂತಿಕೆಯ ಅಳತೆಗೋಲು. ಹಾಗೆ ನೋಡಿದರೆ ಕೇವಲ ಹತ್ತು ವರ್ಷದ ಶಿಕ್ಷಣ ಆಸಕ್ತಿ ಹುಟ್ಟಿಸುವಂಥದ್ದಾದರೆ ಸಾಕು. ಮುಂದಿನದನ್ನು ಅವನೇ ಓದಿಕೊಳ್ಳುತ್ತಾನೆ.

ನನಗೆ ಚೆನ್ನಾಗಿ ನೆನಪಿದೆ. ಶಿಬಿರವೊಂದಕ್ಕೆ ಬಂದ ಮಿತ್ರ ಚೈತ್ರ ತನ್ನ ಕಂಪ್ಯುಟರ್ ಅನ್ನು ಪ್ರೊಜೆಕ್ಟರ್‌ಗೆ ಹೊಂದಿಸಿ ಪರದೆಯ ಮೇಲೆ ಬಗೆಬಗೆಯ ಪ್ರಾಣಿಗಳನ್ನು ತೋರಿಸುತ್ತಾ ಸಾಗಿದ್ದ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅತ್ಯಂತ ವಿಶಿಷ್ಟ ಪ್ರಾಣಿ ಸಂಕುಲದ ಪರಿಚಯ ಅದು. ಸೇರಿದ್ದ ಅರವತ್ತು ಮಕ್ಕಳೂ ಬಾಯಿ ಕಳಕೊಂಡು ನೋಡಿದರು. ಆಮೇಲಿನ ಕಥೆ ಕೇಳಿ. ಮಕ್ಕಳೆಲ್ಲ ಪಾರ್ಕಿನಲ್ಲಿ ಕಾಣುವ ಕೀಟಗಳನ್ನು ಹತ್ತಿರದಿಂದ ಗುರುತಿಸಲಾರಂಭಿಸಿದರು. ಈ ಮುನ್ನ ಕೇಳಿದುದರೊಂದಿಗೆ ತಾಳೆ ಹಾಕಲಾರಂಭಿಸಿದರು. ಅರೆ! ಪಶ್ಚಿಮ ಘಟ್ಟದ ಹಲ್ಲಿ ಇಲ್ಲೂ ಇದೆ ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದರು. ಮಕ್ಕಳ ಪಾಲಿನ ಪ್ರಾಣಿಶಾಸ್ತ್ರದ ಪಾಠವೇ ಮುಗಿದಿತ್ತು. ಸಲೀಮ್ ಅಲಿ ಎಂಬ ಪಕ್ಷಿ ಶಾಸ್ತ್ರಜ್ಞ ಹುಟ್ಟಿದ್ದು ಹೀಗೇ. ಪಕ್ಷಿಗಳನ್ನು ನೋಡುವ ಹುಚ್ಚು ಬೆಳೆಸಿದ ಉಪಾಧ್ಯಾಯರು ಪಕ್ಕಕ್ಕೆ ಸರಿದರು. ಹುಡುಗ ಅವುಗಳನ್ನು ಗಮನವಿಟ್ಟು ನೋಡಿದ. ನೋಡಿದ್ದೆಲ್ಲ ದಾಖಲಿಸುತ್ತ ಹೋದ. ಅಧ್ಯಯನ ನಡೆಸಿದ. ಪಕ್ಷಿಗಳು ಸಲೀಮ್ ಅಲಿಯ ಪಾಲಿಗೆ ಪಕ್ಕದ ಮನೆಯ ಮಕ್ಕಳಂತಾದವು. ಸ್ವತಂತ್ರ ಚಿಂತನೆಯ ವ್ಯಕ್ತಿತ್ವ ಹುಟ್ಟೋದು ಹೀಗೆ. ನಮಗೆ ಸ್ವಾತಂತ್ರ್ಯ ಬಂತು ನಿಜ. ಆದರೆ ಸ್ವತಂತ್ರ ಚಿಂತನೆ ಬರಲೇ ಇಲ್ಲ.

ಮಣಿಪಾಲದಲ್ಲಿ ಪ್ರೌಢಶಾಲಾ ಮಕ್ಕಳಿಗೆಂದೇ ನಡೆದ ಇನ್ಸ್‌ಪೈರ್ ಕಾರ್ಯಕ್ರಮದಲ್ಲಿ ಮೈಸೂರಿನ ಗಣಿತ ಪ್ರೊಫೆಸರ್ ಯೊಗಾನಂದರು ಹೇಳುತ್ತಿದ್ದರು. ಜಗತ್ತಿನ ಮೂಕ ಭಾಷೆ ಗಣಿತ. ಆದರೆ ಅದನ್ನೂ ಕಷ್ಟವಾಗುವಂತೆ ಕಲಿಸಿಬಿಟ್ಟಿದ್ದೇವೆ ಅಂತ. ಅಲ್ಲವೆ ಮತ್ತೆ? ಭಾರತೀಯರಾಗಿ ನಾವು ಬುದ್ಧಿವಂತಿಕೆಯನ್ನು ಗಣಿತ ಸೂತ್ರಗಳನ್ನು ಉರು ಹೊಡೆಯುವುದರಲ್ಲಿ ವ್ಯಯಿಸುತ್ತಿದ್ದೇವೆ. ಸಮಸ್ಯೆಯ ಹಿಂದಿನ ತತ್ವವನ್ನು ಅರ್ಥೈಸಿಕೊಳ್ಳುವ ಯತ್ನ ನಡೆದೇ ಇಲ್ಲ. ಹೀಗಾಗಿ ಪ್ರಮುಖ ನಿರ್ಣಯ ಕೈಗೊಳ್ಳುವಲ್ಲಿ ನಾವು ಸೋಲೋದು. ಭಾರತೀಯ ವಿದ್ಯಾರ್ಥಿಗಳು ಗಣಿತ ಒಲಂಪಿಯಾಡ್‌ನಲ್ಲಿ ಭಾಗವಹಿಸುತ್ತಾರಲ್ಲ, ಅಲ್ಲಿ ಅನೇಕ ಬಾರಿ ಸೋಲೋದು ಈ ಕಾರಣಕ್ಕಾಗಿಯೇ. ಸಪ್ತಸ್ವರಗಳಿಂದ ಹುಟ್ಟುವ ನೂರಾರು ರಾಗಗಳ ಕುರಿತಂತೆ ಒಬ್ಬ ಗಣಿತ ಅಧ್ಯಾಪಕ ಸಮರ್ಥವಾಗಿ ಪಾಠ ಮಾಡಬಲ್ಲ ಗೊತ್ತೇನು? ಹಾಗೆ ಮಾಡುವ ಮೂಲಕ ಆತ ಗಣಿತದ ಆಸಕ್ತಿಯನ್ನೂ ಅರಳಿಸಬಲ್ಲ. ಸಂಗೀತದೆಡೆಗೆ ಗಮನ ಹರಿಸುವಂತೆಯೂ ಮಾಡಬಲ್ಲ.

ಶಿಕ್ಷಣ ಹೀಗಿದ್ದಾಗಲೇ ಅದರ ಲಾಭ. ಶ್ರೇಷ್ಟ ಪಂಡಿತರಾದ ಸುಧಾಕರ ಶರ್ಮರಿಗೆ ಮಗ ಏನು ಮಾಡುತ್ತಿದ್ದಾನೆ ಎಂದು ಕೇಳಿದ್ದಕ್ಕೆ ಸದ್ಯಕ್ಕೆ ಮಡಿಕೆ ಮಾಡುವ ಮಣ್ಣಿನಲ್ಲಿ ಕಲಾಕೃತಿ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದಿದ್ದರು. ಶಾಲೆಗೆ ಹೋಗೋಲ್ವಾ ಅಂದಿದ್ದಕ್ಕೆ, ಮನೆಯಲ್ಲಿಯೇ ಅದಕ್ಕಿಂತ ಹೆಚ್ಚು ಕಲಿಯುತ್ತಿದ್ದಾನೆ ಎಂದು ಉತ್ತರಿಸಿದ್ದರು. ಶಾಲೆಯ ಶಿಕ್ಷಣ ನಂಬಿಕೆ ಕಳಕೊಂಡಷ್ಟೂ ಜನ ಪ್ರತ್ಯೇಕ ಹಾದಿ ಹಿಡಿಯುತ್ತಿದ್ದಾರೆ. ಸ್ವಂತ ಆಲೋಚನೆಗೆ ಪ್ರೇರಣೆ ಕೊಡಬಲ್ಲ ಸಮರ್ಥ ಮಾರ್ಗ ಅರಸುತ್ತಿದ್ದಾರೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಗೆ ಸರಿಯಾದ ದಾರಿ ತೋರಿಸಲು ಸೂಕ್ತ ಸಮಯ. ಅಂಕಪಟ್ಟಿಗಳಲ್ಲಿ ತುಂಬಿರುವ ಭಾರೀಭಾರೀ ಅಂಕಗಳ ನಡುವೆ ಶಿಕ್ಷಣ ವ್ಯವಸ್ಥೆಯನ್ನು ಹೂತುಹೋಗಲು ಬಿಡದೆ ಅಲ್ಲೆಲ್ಲೋ ಕೊನೆಯ ಸಾಲಿನಲ್ಲಿ ಕುಳಿತ ಸುಹಾಸ ಗೋಪಿನಾಥ್‌ನಂಥವರನ್ನು ಹುಡುಕುವ ಕೆಲಸ ಮಾಡಬೇಕಿದೆ. ಕಲ್ಪನೆಗಳನ್ನು ಸಾಕಾರಗೊಳಿಸಬಲ್ಲ ನವಪೀಳಿಗೆಯನ್ನು ನಿರ್ಮಿಸಬೇಕಿದೆ. ಗಮನವಿಟ್ಟು ನೋಡುವ, ಕೇಳುವ ವರ್ಗವನ್ನು ತಯಾರಿಸಬೇಕಿದೆ.

ಹೌದು… ಶಿಕ್ಷಣದ ಜವಾಬ್ದಾರಿ ಬಹಳಷ್ಟಿದೆ.

ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?
ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ. ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು. ರಾಣಿ ತಾನೇ ಭಾರತವನ್ನು ತನ್ನ ತೆಕ್ಕೆಗೆ ಎಳೆದುಕೊಂಡಳು. ಪರೋಕ್ಷವಾಗಿ ಮಾಡುತ್ತಿದ್ದ ಸುಲಿಗೆಗೆ ನೇರವಾಗಿ ಕೈಹಾಕುವ ಹೊಸ ಮೋಸದಾಟವಿದು. ೧೬೦೦ರ ಮೊದಲ ದಿನದಿಂದ ಹಿಡಿದು, ೧೯೪೭ರ ತಮ್ಮ ಅವಧಿಯ ಕೊನೆಯ ದಿನದವರೆಗೆ ಆಂಗ್ಲರ ಲೂಟಿ ಹೇಳತೀರದ್ದು. ಅವರು ಹಳ್ಳಿಗಳನ್ನು ಧ್ವಂಸಗೈದರು. ಬಂದರುಗಳನ್ನು ಖಾಲಿ ಮಾಡಿದರು. ಊರುಗಳುದ್ದಕ್ಕು ರೈಲ್ವೆ ಹಳಿಗಳನ್ನೆಳೆದು, ತೆರಿಗೆ ಲೂಟಿಗೆ ವ್ಯವಸ್ಥೆ ಮಾಡಿಕೊಂಡರು. ಇಲ್ಲವಾದಲ್ಲಿ, ಸುಮಾರು ಏಳು ಲಕ್ಷದಷ್ಟಿದ್ದ ಬ್ರಿಟಿಷರು ಕೋಟ್ಯಂತರ ಸಂಖ್ಯೆಯಲ್ಲಿದ್ದ ಭಾರತೀಯರನ್ನು ಆಳುತ್ತಿದ್ದುದಾದರೂ ಹೇಗೆ?

ಇವೆಲ್ಲ ಬಿಡಿ. ಇಂಥ ಲೂಟಿಕೋರ ಆಂಗ್ಲರನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಬಿಂಬಿಸಿರುವ ರೀತಿಯನ್ನು ನೀವು ನೋಡಬೇಕು. ಹತ್ತನೆ ತರಗತಿಯ ಸಮಾಜ ಪುಸ್ತಕದಲ್ಲಿ ಕೂಡಲೇ ಭಾರತದಾದ್ಯಂತ ರೈಲು ಸಂಪರ್ಕ ಬೆಳೆಯಿತು. ಇದರ ಪರಿಣಾಮವಾಗಿ ಹೆಚ್ಚಿನ ಭಾರತೀಯರು ದೇಶದಾದ್ಯಂತ ಪ್ರಯಾಣ ಮಾಡಲು ಅನುಕೂಲವಾಯಿತು. ಇದರಿಂದ ಭಾರತೀಯರಿಗೆ ತಾವೆಲ್ಲ ಒಂದೇ ಎಂಬ ಭಾವನೆ ಮೂಡಿತು ಎಂದು ಬರೆದಿದ್ದಾರೆ. ನಮ್ಮ ಮಕ್ಕಳು ಈ ಸಾಲುಗಳನ್ನು ಓದಿದರೆ, ನಾವು ಒಂದೆಂಬ ಭಾವನೆ ಮೂಡಲು ರೈಲು ಪ್ರಯಾಣವೇ ಕಾರಣವಾಯಿತು ಎಂದು ತಿಳಿಯುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎರಡನೆಯದು, ಬ್ರಿಟಿಷರು ಬರುವ ಮುನ್ನ ಮಗಧ ಸಾಮ್ರಾಜ್ಯ ದೇಶವ್ಯಾಪಿ ಹರಡಿತ್ತಲ್ಲ, ಆಗ ಭಾರತ ದೇಶ ಒಂದಾಗಿರಲಿಲ್ಲವೆ? ಕಾಶಿಯಾತ್ರೆ ಮಾಡಿದ ಭಕ್ತ ರಾಮೇಶ್ವರಕ್ಕೆ ಬಂದು ತೀರ್ಥ ಸಮರ್ಪಿಸುತ್ತಿದ್ದನಲ್ಲ, ಅವನು ಓಡಾಟ ಮಾಡಲೇ ಇಲ್ಲವೆ? ಅದು ಬಿಡಿ. ಇಂದು ಜಮ್ಮುವಿನಿಂದ ಕನ್ಯಾಕುಮಾರಿಯವರೆಗೆ ರೈಲು ಮಾರ್ಗಗಳಿವೆಯಲ್ಲ, ನಿಜ ಹೇಳಿ, ನಾವೆಲ್ಲ ಒಂದೇ ಎಂಬ ಭಾವನೆ ಜನರಲ್ಲಿ ಬಲವಾಗಿ ಮೂಡಿದೆಯಾ? ಇಂಥಾ ಸಾಲುಗಳನ್ನು ಪ್ರೌಢ ಮಕ್ಕಳ ತಲೆಯಲ್ಲಿ ತುರುಕುವಾಗ ಎಚ್ಚರಿಕೆ ಬೇಡವಾ?

ಅದೇ ಪಾಠ ಆಂಗ್ಲರ ಆಳ್ವಿಕೆಯಲ್ಲಿ ಶಿಕ್ಷಣ ಪದ್ಧತಿ ಚೆಂದಗೊಂಡಿದುದರ ಕುರಿತು ಒಂದಿಡೀ ಪ್ಯಾರ ಹೊಗಳುತ್ತದೆ. ಭಾರತದಲ್ಲಿ ಶಿಕ್ಷಣ ಮೇಲುಜಾತಿಯ ಪುರುಷರಿಗೆ ಮಾತ್ರ ದೊರೆಯುತ್ತಿತ್ತೆಂದು ತೆಗಳುತ್ತದೆ. ಅಷ್ಟೇ ಅಲ್ಲ, ಇಂಗ್ಲೀಷರ ಶಿಕ್ಷಣದಿಂದ ಪಾಶ್ಚಾತ್ಯ ಜ್ಞಾನ- ವಿಜ್ಞಾನ ಎಲ್ಲರಿಗೂ ಹರಡಿತು…. ದೇಶದಲ್ಲಿ ಇಂಗ್ಲಿಷ್ ಶಿಕ್ಷಣ ಶಾಲೆಗಳನ್ನು ತೆರೆದರು…. ಕ್ರೈಸ್ತ ಮತ ಪ್ರಚಾರಕರು ಇದರಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದೆ.

ಈ ಇತಿಹಾಸಕಾರರ ಮನಸ್ಸೆಂಥದ್ದು ನೋಡಿ. ಎಲ್ಲರಿಗೂ ಶಿಕ್ಷಣ ತಲುಪಿಸುವಲ್ಲಿ ಮುಖ್ಯ ಪಾತ್ರ ಕ್ರೈಸ್ತ ಪಾದ್ರಿಗಳದ್ದು ಎಂದು ಹೇಳುವ ಮೂಲಕ ಓದುಗರಲ್ಲಿ ಜಾತೀಯತೆ ಬಿತ್ತುವ ಕೆಲಸ ಮಾಡಿದ್ದಾರೆ. ಇಷ್ಟಕ್ಕೂ ನಮ್ಮ ಚರಿತ್ರಕಾರರು ಧರ್ಮಪಾಲರ ಬ್ಯೂಟಿಫುಲ್ ಟ್ರೀ ಓದಿದ್ದಾರೇನು? ಆಂಗ್ಲರ ದಾಖಲೆಗಳೇ ಹೇಳುವಂತೆ, ಬಳ್ಳಾರಿಯಲ್ಲಿ ಅಧ್ಯಯನಶೀಲರು ಮತ್ತು ಅಧ್ಯಾಪಕರಲ್ಲಿ ಬಹುತೇಕರು ಕೆಳವರ್ಗಗಳಿಂದ ಬಂದವರು. ದೇಶದ ಬಹುತೇಕ ಕಡೆಗಳಲ್ಲಿ ಶಾಲೆಗಳ ಸ್ಥಿತಿ ಹೀಗೆಯೇ ಇತ್ತು. ಇಲ್ಲವಾದಲ್ಲಿ, ಆಂಗ್ಲರ ಆಗಮನ ಕಾಲಕ್ಕೆ ಎಲ್ಲೆಡೆ ಕುಶಲಕರ್ಮಿಗಳು ಇದ್ದರಲ್ಲ, ಅದು ಹೇಗೆ ಸಾಧ್ಯವಾಯ್ತು? ಬ್ರಾಹ್ಮಣರು ಉನ್ನತ ಹುದ್ದೆಗಳಲ್ಲಿದ್ದು ಶೋಷಣೆ ಮಾಡುತ್ತಾ ಕಾಲಾಯಾಪನೆ ಮಾಡುತ್ತಿದ್ದರು ಎನ್ನುವವರಿಗೆ, ೧೮೫೭ರ ವೇಳೆಗೆ ಸೈನ್ಯದಲ್ಲಿದ್ದ ಬಹುಪಾಲು ಸಂಖ್ಯೆ ಬ್ರಾಹ್ಮಣರದ್ದು ಎನ್ನುವ ಅರಿವಿದೆಯೇನು? ಈ ಸಂಗ್ರಾಮದ ಕಿಡಿ ಉರಿಸಿದ ಮಂಗಲ್‌ಪಾಂಡೆ ಸ್ವತಃ ಜನಿವಾರಧಾರಿ. ನಮ್ಮನ್ನು ಒಡೆದಾಳಲು ಆಂಗ್ಲರು ಬಳಸಿದ್ದ ಅದೇ ದಾಳವನ್ನು ಮುಂದಿರಿಸಿ ಇಂದಿಗೂ ಕೊಲ್ಲುವುದು ಯಾವ ನ್ಯಾಯ? ಒಬ್ಬರನ್ನು ಕೊಲ್ಲುವುದು ಒತ್ತಟ್ಟಿಗಿರಲಿ, ಕ್ರೈಸ್ತಪಾದ್ರಿಗಳನ್ನು ಸಾರ್ವಜನಿಕ ಶಿಕ್ಷಣದ ಹರಿಕಾರರೆಂದು ಬಿಂಬಿಸಿರುವುದು ಸರಿಯಾ? ಕ್ರೈಸ್ತಮತ ಪ್ರಚಾರಕರು ಬಂದಾಗಿನಿಂದ ಮಾಡಿದ ಕೆಲಸಗಳೇನೆಂಬುದನ್ನು ಅನೇಕ ಬ್ರಿಟಿಷ್ ಅಧಿಕಾರಿಗಳೇ ದಾಖಲಿಸಿದ್ದಾರೆ. ಗೋವೆಯಲ್ಲಿ ಸಂತ ಕ್ಸೇವಿಯರ್ ನಡೆಸಿದ ಕ್ರೌರ್ಯ ಯಾರಿಗೆ ತಿಳಿಯದು ಹೇಳಿ. ಇಷ್ಟಿದ್ದರೂ ಅವನ್ನೆಲ್ಲ ಮರೆಮಾಚಿ, ಆ ಕ್ರೈಸ್ತಮತವನ್ನು ಹೆಚ್ಚೆಂದು ಬಿಂಬಿಸಿ, ನಮ್ಮ ಪ್ರಚೀನ ಪರಂಪರೆಯನ್ನು ಜರೆದಿರುವುದು ಸರಿಯಾ? ಇದೊಂದು ಗಮನಿಸಲೇಬೇಕಾದ ಸಂಗತಿ.

ನಾವು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುವುದನ್ನು ನೋಡುತ್ತಾ ಇದ್ದೇವೆ. ನೆನ್ನೆ ಲ್ಯಾಪ್‌ಟಾಪ್, ಇಂದು ಪಾಮ್‌ಟಾಪ್. ಪುಸ್ತಕದ ಬದಲು ಕಿಂಡಲ್. ಅದು ಒಪ್ಪಬಹುದಾದದ್ದು. ಆದರೆ ಭಾರತದಲ್ಲಿ ಇತಿಹಾಸವೇ ಬದಲಾಗಿಬಿಡುತ್ತೆ. ಭಾರತವೆಂದರೆ ಏನೆಂದು ಅರಿಯದ ಬ್ರಿಟಿಷರು ಈ ದೇಶದ ಇತಿಹಾಸ ಮನಸಿಗೆ ಬಂದಂತೆ ಬರೆದರು. ಆಮೇಲೆ ಮಾವೋ ಮದವೇರಿಸಿಕೊಂಡವರು, ಸಚ್ಚಿಂತನೆಗಳೆಲ್ಲ ಚೀನಾದಿಂದಲೇ ಹರಿದುಬಂದವೆಂಬಂತೆ ಭಾರತವನ್ನು ತೆಗಳಿದರು. ನಾವು ಅದೇ ವರ್ಣ ಪದ್ಧತಿಯ ಮನುಸ್ಮೃತಿ ಹಿಡಿದುಕೊಂಡು ಬಡೆದಾಡುತ್ತ ಉಳಿದೆವು. ನಮ್ಮ ಅಂಗಳದಲ್ಲಿಯೇ ನಿಂತುಕೊಂಡು ನಮ್ಮ ಮನೆಯನ್ನು ಬಯ್ದುಕೊಳ್ಳುವ ದೈನೇಸಿ ಸ್ಥಿತಿ.

ಇದೇ ಪುಸ್ತಕ, ೧೮೫೭ರ ಸಂಗ್ರಾಮದ ಕುರಿತಂತೆ ಬ್ರಿಟಿಷ್ ಇತಿಹಾಸಕಾರರು ಇದನ್ನು ಕೇವಲ ಸಿಪಾಯಿ ದಂಗೆ ಎಂದು ವರ್ಣಿಸಿದ್ದಾರೆ. ಭಾರತದ ಇತಿಹಾಸಕಾರರು ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಮರ ಎಂದು ಕರೆದಿದ್ದಾರೆ ಎಂದು ಹೇಳುತ್ತದೆ. ಆಮೇಲೆ ಇಡಿಯ ಪುಸ್ತಕದಲ್ಲಿ ಎಲ್ಲೂ ಇದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಸಂಬೋಧಿಸದೆ, ದಂಗೆ ಎಂದೇ ಮತ್ತೆ ಮತ್ತೆ ಕರೆದಿರುವುದರ ಔಚಿತ್ಯ ಯಾರಿಗೂ ಅರ್ಥವಾಗದ್ದು. ಬಹುಶಃ ನಮ್ಮ ಇತಿಹಾಸಕಾರರ ತಲೆ ಕೆಟ್ಟಿರಬೇಕೆಂದು ಪಠ್ಯಪುಸ್ತಕ ರಚನೆಕಾರರು ನಿರ್ಧರಿಸಿರಬೇಕು. ಹೀಗಾಗಿ ಅವರಿಗೆ ಪಠ್ಯಪುಸ್ತಕದ ಉದ್ದಕ್ಕೂ ವಿದೇಶಿ ಅಥವಾ ಕಮ್ಯುನಿಸ್ಟ್ ಬುದ್ಧಿಯ ಸ್ವದೇಶಿ ಲೇಖಕರೇ ಮಾರ್ಗದರ್ಶಕರು. ಅದಕ್ಕೇ ಇಷ್ಟೆಲ್ಲ ಸಮಸ್ಯೆಗಳು.

ಜಾಗತಿಕ ಇತಿಹಾಸ ತಿಳಕೊಳ್ಳುವ ಮುನ್ನ, ಪ್ರಾದೇಶಿಕ ಸ್ಥಿತಿಗತಿಗಳ ಅವಲೋಕನವಾಗಬೇಕಾದದ್ದು ಅತ್ಯಗತ್ಯ. ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಹಲಗಲಿಯ ಬೇಡರೇ ಗೊತ್ತಿಲ್ಲವಾದರೆ ಹೇಗೆ? ಶಿವಮೊಗ್ಗದ ಮಕ್ಕಳು ನಗರದ ಕೋಟೆಯನ್ನೇ ನೋಡಿಲ್ಲವೆಂದರೆ ಸರಿಯೇ? ಉತ್ತರಕನ್ನಡದ ಶಾಲೆಗೆ ಹೋಗಿ ಮೀರ್ಜಾನ್ ಕೋಟೆಯ ಕಥೆ ಕೇಳಿ. ಅದು ಕರಿಯ ಚಲನಚಿತ್ರದ ಚಿತ್ರೀಕರಣ ನಡೆದ ಜಾಗ ಅನ್ನುತ್ತಾರೆ. ಇದಕ್ಕೇನು ಹೇಳುವುದು!?

ಇತ್ತೀಚೆಗೆ ಸುರಪುರಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ೧೮೫೭ರ ಹೋರಾಟದಲ್ಲಿ ವೆಂಕಟಪ್ಪ ನಾಯಕ ಹೋರಾಡಿದ ಜಾಗ ಅದು. ವೆಂಕಟಪ್ಪನಾಯಕನ ಮುಂದಿನ ಪೀಳಿಗೆಯ ರಾಜರು ಅಲ್ಲಿದ್ದಾರೆ. ಅವರು ಅಂದಿನ ದಿನಗಳಲ್ಲಿದ್ದ ನವಾಬರ, ರಾಜರುಗಳ ಇಂದಿನ ಪೀಳಿಗೆಯವರನ್ನು ಒಟ್ಟು ಸೇರಿಸಿ ಮಹತ್ವದ ಕಾರ್ಯಕ್ರಮವೊಂದಕ್ಕೆ ಭಾಷ್ಯ ಬರೆದಿದ್ದರು. ಅದಕ್ಕೂ ವರ್ಷ ಮೊದಲು, ಶಾಲೆ ಮಕ್ಕಳಿಗೆಂದೇ ಇತಿಹಾಸ ಮೇಳವನ್ನು ಅಲ್ಲಿನ ಮಿತ್ರರು ಆಯೋಜಿಸಿದ್ದರು. ಆ ಮಕ್ಕಳು ತಮ್ಮ ಆಸುಪಾಸಿನ ಚಾರಿತ್ರಿಕ ಸ್ಥಳಗಳನ್ನು, ವ್ಯಕ್ತಿಗಳನ್ನು ಭೇಟಿ ಮಾಡಿ, ತಮ್ಮೂರಿನ- ತಮ್ಮ ಜನರ ಕುರಿತಂತೆ ಗೌರವ ತಾಳಿದರು. ಎಲ್ಲ ಕಡೆಯೂ ಹೀಗೆ ಆದರೆ ಎಷ್ಟು ಚೆಂದ ಅಲ್ಲವೆ?

ನಾವು ಇತ್ತೀಚೆಗೆ ವಿಜ್ಞಾನದ ಕುರಿತಂತೆ ತುಂಬ ಗಮನ ಹರಿಸುತ್ತ ಇದ್ದೇವೆ, ಸರಿ. ಆದರೆ ಇತಿಹಾಸವನ್ನು ಅತ್ಯಂತ ಬೋರಿಂಗ್ ಮಾಡಿಬಿಟ್ಟಿದ್ದೇವೆ. ಅಷ್ಟೇ ಅಲ್ಲ, ಅದನ್ನು ತಿರುತಿರುಚಿ ಇತಿಹಾಸ ಪುರುಷರಿಗೆ ಮೈತುಂಬ ಅವಮಾನ ಮಾಡುತ್ತಿದ್ದೇವೆ. ಇವೆಲ್ಲವನ್ನು ಸರಿ ಮಾಡುವ ಯತ್ನಕ್ಕೆ ಯಾರಾದರೂ ಕೈಹಾಕಿದರೆ ಕೇಸರೀಕರಣ ಎಂದು  ಬೊಬ್ಬೆ ಹಾಕುತ್ತಾರೆ. ಭಾರತದ ಇತಿಹಾಸವನ್ನು ಭಾರತೀಯರೇ ಬರೆಯೋದು, ಭಾರತೀಯರು ಓದೋದು ಬೇಡ ಅನ್ನಿಸುತ್ತದೆಯೇನು?

ಮೇ ತಿಂಗಳ ಕಾರ್ಯಕ್ರಮಗಳು
7: ವಿದ್ಯಾರ್ಥಿಗಳಿಗೆ ವಿಜ್ಞಾನದೆಡೆಗೆ ಪ್ರೇರಣೆ- ಶಿಬಿರ, ಮಣಿಪಾಲ್

8: ಬಾಲಭವನ್ ಮಕ್ಕಳ ಶಿಬಿರ, ಬೆಂಗಳೂರು

ಸಂಜೆ: ರಾಗಿಗುಡ್ಡದಲ್ಲಿ ಪ್ರವಚನ

9ರಿಂದ11: ರಾಷ್ಟ್ರಶಕ್ತಿ ಕೇಂದ್ರದ ಶಿಬಿರ, ಮಹಾತ್ಮಾ ಸ್ಕೂಲ್, ಆನೆಕಲ್ಲು

12: ಭಾರತ್ ಸ್ವಾಭಿಮಾನ್, ಧಾರವಾಡ

13: ಭಾರತ್ ಸ್ವಾಭಿಮಾನ್, ಕಾರವಾರ

ಸಂಜೆ: ಉನ್ನತಿ ಟ್ರಸ್ಟ್ ಕಾರ್ಯಕ್ರಮ, ಶಿರಸಿ

14: ಭಾರತ್ ಸ್ವಾಭಿಮಾನ್, ಮಂಗಳೂರು

ಸಂಜೆ: ಭಾರತ್ ಸ್ವಾಭಿಮಾನ್, ಉಡುಪಿ

15: ಭಾರತ್ ಸ್ವಾಭಿಮಾನ್, ಹಾಸನ

16: ಭಾರತ್ ಸ್ವಾಭಿಮಾನ್, ಚಿಕ್ಕಮಗಳೂರು

17: ಭಾರತ್ ಸ್ವಾಭಿಮಾನ್, ಆರ್. ಟಿ.ನಗರ, ಬೆಂಗಳೂರು

18: ಭಾರತ್ ಸ್ವಾಭಿಮಾನ್, ಮೈಸೂರು

19: ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮ, ಸುಳ್ಯ

20: ಬ್ರಾಹ್ಮಣ ಯುವ ಸಮಾವೇಶ, ಶಿವಮೊಗ್ಗ

25: ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮ, ಚನ್ನೇನ ಹಳ್ಳಿ

26: ಶಿಕ್ಷಕರ ಶಿಬಿರ, ಮಹಾತ್ಮಾ ಸ್ಕೂಲ್, ಆನೆಕಲ್ಲು

27: ಧಾರ್ಮಿಕ ಕಾರ್ಯಕ್ರಮ, ಪೂಜೇನ ಅಗ್ರಹಾರ

28ರಿಂದ 31: ಖಾಸಗಿ ಕಾರ್ಯಕ್ರಮ, ಹೊನ್ನಾವರ

ಶಾಂತಿಯ ಮಂತ್ರಕ್ಕೆ ಅಣ್ವಸ್ತ್ರದ ಅಕ್ಷತೆ
ಏನೇ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಎಂದಾಕ್ಷಣ ಒಮ್ಮೆ ಹೃದಯವೇ ತೇವವಾಗುತ್ತೆ. ಆ ಮನುಷ್ಯ ಪ್ರಧಾನಿ ಗಾದಿಯಲ್ಲಿ ಕುಳಿತ ಆ ದಿನಗಳೇ ಚೆಂದ. ಹದಿಮೂರು ದಿನದ ಸರ್ಕಾರ, ಆಮೇಲಿನ ೧೩ ತಿಂಗಳ ಸರ್ಕಾರ, ಕೊನೆಗೆ ಪೂರ್ಣ ಪ್ರಮಾಣದ ಅಧಿಕಾರ! ಅವರ ಕಾಲಕ್ಕೇ ಭಾರತವೆಂಬ ಈ ದೇಶ ಗಂಡು ರಾಷ್ಟ್ರ ಎನಿಸಿಕೊಂಡಿದ್ದು. ಅವರ ಕಾಲದಲ್ಲೇ ಈ ದೇಶದ ಜನರ ದೇಹದಲ್ಲಿ ಸ್ವಾಭಿಮಾನದ ರಕ್ತ ಹರಿದಿದ್ದು. ನಾಡಿದ್ದು ಮೇ ೧೧ಕ್ಕೆ ಪೋಖರಣ್ ನಲ್ಲಿ ಬಾಂಬ್ ಸ್ಫೋಟದ ಪರೀಕ್ಷೆ ನಡೆಸಿ ೧೫ ವರ್ಷಗಳಾಗುತ್ತವೆ. ಅದಕ್ಕೂ ಮುನ್ನ ಶಕ್ತಿಹೀನವಾಗಿದ್ದ ಭಾರತ ಅಲಿಪ್ತ ನೀತಿಯ ಶಾಂತಿಯ ಮಾತಾಡುತ್ತಿತ್ತು. ಆನಂತರ ನಮ್ಮ ಶಾಂತಿ ಮಂತ್ರವನ್ನು ಜಗತ್ತು ಬಾಯ್ಮುಚ್ಚಿ ಕೇಳಲಾರಂಭಿಸಿತು. ಅನುಮಾನವಿಲ್ಲ, ಶ್ರೇಯ ಅಟಲ್ ಜೀಗೇ.

ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ ಮಾಡಿದ ಮೊದಲ ಕೆಲಸವೇ ವಿಜ್ಞಾನಿಗಳನ್ನು ಕರೆದು ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ ಎಂದು ಎಂದು ಕೇಳಿದ್ದು. ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು. ಅವರೇನೋ ತಯಾರಿ ಶುರುವಿಟ್ಟರು. ಪಾಪ, ಸರ್ಕಾರವೇ ೧೩ ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ ಅದೆಷ್ಟು ಬೇಸರವಾಯ್ತೋ, ಪರಮಾಣು ಸಂಶೋಧನಾನಿರತ ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು. ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು, ದೇವೇಗೌದರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಅಣ್ವಸ್ತ್ರ ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ. ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು. ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ, ಪ್ರಧಾನಿಯಾಗಿ ಮತ್ತೆ ಬಂದೇಬರುತ್ತಾನೆಂಬ ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್ ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು, ಚಿದಂಬರಂರನ್ನು ಕರೆದು ಯೋಜನೆ ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು. `ನೀವು ಅಧಿಕಾರ ಕಳಕೊಂಡರೂ ನಾವು ನಮ್ಮ ಸಂಶೋಧನೆ ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ ಅಣ್ವಸ್ತ್ರವಲ್ಲ, ಹೈಡ್ರೋಜನ್ ಬಾಂಬನ್ನೇ ಸಿಡಿಸಿ ಪರೀಕ್ಷಿಸೋಣ ಎಂದುಬಿಟ್ಟರು. ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.

ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪ ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ ಗಮನಿಸುತ್ತಿದ್ದವು. ಅಮೆರಿಕಾದ್ ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ ತಿರುಗಾಡುತ್ತಿದ್ದರು. ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ ಅದನ್ನು ನನಸು ಮಾಡುವಲ್ಲಿ ಪ್ರಯಾಸವೂ ಜೋರಾಗಿಯೇ ಇತ್ತು. ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು. ಯೋಜನೆ ರೂಪುಗೊಂಡಿತು. ಕಲಾಂ, ಚಿದಂಬರಂ, ಅಟಲ್ ಜೀ ಮತ್ತು ಅವರ ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ ಸಂಜೆಯೇ!

ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ, ನೀರಿನ ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ ತಗ್ಗು ತೋಡುವಾಗ ತೊಂದರೆಯೂ ಇಲ್ಲ, ಆಳಕ್ಕೆ ಹೋದಂತೆ ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ. ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ ಶುರು ಮಾಡಬೇಕು. ಬೆಳಗಾಗುವುದರೊಳಗಾಗಿ ವಸ್ತುಗಳು, ವಾಹನಗಳು ಎಲ್ಲೆಲ್ಲಿದ್ದವೋ ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ ಅಣ್ವಸ್ತ್ರ ಪರೀಕ್ಷೆ ಇರಲಿ, ಅದರ ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ ವಿಜ್ಞಾನಿಗಳಿಗೆ ದಾರಿ ಮಾಡಿಕೊಟ್ಟರು. ದೂರದೂರದಿಂದ ಪರಿಸರ ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್ ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು ಯೋಜನೆ!

ಅಬ್ದುಲ್ ಕಲಾಂ, ಚಿದಂಬರಂ, ಕಾಕೋಡ್ಕರ್ ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ, ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ,ಫ್ಯಾನೂ ಇಲ್ಲದೆ ಕೆಲಸ ಮಾಡಬೇಕಿತ್ತು. ಗಾಳಿಗೆ ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ ಹೊತ್ತಿಕೊಂಡರೆ ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.

ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ. ಅದರ ಮರುದಿನವೇ ಪರೀಕ್ಷಣೆ ನಡೆದುಬಿಡಲಿ ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್ ಎಂಬ ಎರಡು ತಗ್ಗುಗಳು, ನವ್ ತಾಲ್ ಎಂಬ ೪ ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್ ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ. ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು. ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.

ದೊಡ್ಡ ದೊಡ್ಡ ರಿಂಗ್‌ಗಳನ್ನು ತಗ್ಗಿನೊಳಗೆ ಇಳಿಬಿಡಲು ಮರಳು ತುಂಬಿದ ಚೀಲಗಳನ್ನು ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್ ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರು. ನಿಮಿಶಕ್ಕೆ ೩ ಮರಳ ಚೀಲವಾದರೆ ೨೪ ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು. ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು. ಜಾಡು ಹುಡುಕಿಕೊಂಡು ಹೊರಟರೆ, ಸೈನಿಕರ ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ, ತಾನೂ ಮರಳ ಚೀಲ ಹೊರುವ ಕೆಲಸಕ್ಕೆ ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು. ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು. ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ ತಾನು ಕೆಲಸ ಮುಂದುವರೆಸಿದ್ದ. ಭಾರತದ ಮಹತ್ಸಾಧನೆಯೊಂದಕ್ಕೆ ಮುನ್ನುಡಿ ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ ಯೋಚನೆಯೇ ಅವನನ್ನು ರೋಮಾಂಚನಗೊಳಿಸಿಬಿಟ್ಟಿತ್ತು.

ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ, ಶಾಲೆಗೆ ರಜೆ ಕೊಡಿ, ಸೈನ್ಯದ ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು. ಸೋಹ್ರಂ ಎಂಬ ವ್ಯಕ್ತಿಯೊಬ್ಬ ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು, ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ? ೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ ಮನೆಯ ಸೂರು ಸೀಳಿಹೋಗಿತ್ತು. ಮನೆ ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ; ನಾವು ನಿಮ್ಮೊಂದಿಗಿದ್ದೇವೆ’ ಎಂದಿದ್ದ. ಅಧಿಕಾರಿ ಅವಾಕ್ಕಾಗಿ ಸೋಹ್ರಂನನ್ನು ತಬ್ಬಿಕೊಂಡಿದ್ದ.

ಕೊನೆಗೂ ಆ ಸಮಯ ಬಂದುಬಿಟ್ಟಿತ್ತು. ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ. ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ ಪ್ಲುಟೋನಿಯಮ್ ಮಿಸುಕಾಡಿದ್ದರೆ ಅನಾಹುತವೇ ಕಾದಿತ್ತು. ಇಡಿಯ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ತಂದೆ ತೀರಿಕೊಂಡ ಸುದ್ದಿ ಬಂತು. ಎಲ್ಲರ ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ, ತಂದೆಯ ಅಂತ್ಯ ಸಂಸ್ಕಾರ ಮುಗಿಸಿ, ಮುಂದಿನ ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು. `ನಮ್ಮಪ್ಪ ಇದ್ದಿದ್ದರೆ, ಹೀಗೇ ಮಾಡಲು ಹೇಳಿರುತ್ತಿದ್ದರು’ ಎಂದರು. ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು. ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ. ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ ಬೆಪ್ಪಾಯ್ತು. ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್ ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ ಕಿವಿಗೊಟ್ಟು ಕೂತಿದ್ದಾರೆ. ೦ಯಾವುದನ್ನೂ ನೇರವಾಗಿ ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ ಭಾಷೆಯಲ್ಲೇ ಕೇಳಬೇಕು.

ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು. ಮರಳು ಶಾಂತವಾಯ್ತು. ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ ಪರಿಣಾಮಗಳನ್ನು ಸೆರೆಹಿಡಿಯಲು ಕ್ಯಾಮೆರಾವೊಂದನ್ನು ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ ಶುರುಮಾಡಿದರು. ೫…೪…೩…೨…೧…. ಅವರೆದುರಿನ ಟೀವಿ ಪರದೆಯಲ್ಲಿ ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು. ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ ಒಂದಷ್ಟು ಸಂಕೇತವನ್ನು ಗೀಚಿತು. ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು. ಅವರು ಕುಣಿದಾಡುತ್ತ ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. `ವೈಟ್ ಹೌಸ್ ಸಿಡಿಯಿತು, ಬುದ್ಧ ಮತ್ತೆ ನಕ್ಕ!’ ಅಟಲ್ ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್, ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.

ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ ಮಾತ್ರ ಎದೆಯುಬ್ಬಿಸಿ ಬೀಗುತ್ತ ಜಗದೆದುರು ನಿಂತಿತ್ತು.

೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ತೆಂಡೂಲ್ಕರ್ ರಾಜ್ಯಸಭಾ ಸದಸ್ಯನಾಗುವ ಸುದ್ದಿ ಕೇಳಿ ರೋಮಾಂಚಿತರಾದವರು’ ಅವತ್ತಿನ ಆ ವಿಜ್ಞಾನಿಗಳೆಲ್ಲ ಎಲ್ಲಿ ಹೋದರೆಂಬ ವಿಚಾರಕ್ಕೆ ಚರ್ಚೆಗೂ ಕೂರಲಿಲ್ಲ…

ಓಡುವ ನದಿ ಮುನಿದರೆ…. ಹರಿವ ದಾರಿ ಮರೆತರೆ…
ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ.

ಮೂರು ವರ್ಷಗಳ ಹಿಂದೆ ಕೊರೆದ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ ಅಂತ, ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಮತ್ತೊಂದು ಬಾವಿ ಕೊರೆದಿದ್ದಾರೆ. ದುರಂತವೆಂದರೆ ೧೧೦೦ ಅಡಿ ಕೆಳಗೆ ದಕ್ಕಿರುವ ನೀರಿನ ಸೆಲೆ ಇನ್ನೊಂದು ವರ್ಷದಲ್ಲಿ ಬತ್ತಿಹೋಗುವಷ್ಟು ಮಾತ್ರ! ಕೋಲಾರದಲ್ಲಿ ಕೊಳವೆ ಬಾವಿ ಕೊರೆಯದಿರಲು ಆಜ್ಞೆ ಜಾರಿಯಾಗಿದೆ. ಮನೆಗೆ ಅಡಿಪಾಯ ಹಾಕಹೋದರೆ ದೊರೆಯುತ್ತಿದ್ದ ನೀರು ಉತ್ತರಕನ್ನಡದಲ್ಲೀಗ ೫೦೦ ಅಡಿ ಆಳಕ್ಕಿಳಿದುಬಿಟ್ಟಿದೆ. ಉತ್ತರ ಕರ್ನಾಟಕದ ಭಣಗುಡುವ ಬಿಸಿಲನಲ್ಲಿ ಶುದ್ಧ ನೀರೆಂದರೆ ಬಾಟಲಿಯ ನೀರು ಅಂತಾಗಿಬಿಟ್ಟಿದೆ. ಈ ಬಾರಿಯ ಬರ ಭೀಕರ, ಹಾದಿ ಹೀಗೇ ಸವೆದರೆ ಬರಲಿರುವ ದಿನಗಳು ಇನ್ನೂ ಭಯಂಕರ!

೨೦೦೬ರಲ್ಲಿ ನಾವು ಬಳಸಿದ ನೀರಿನ ಪ್ರಮಾಣ ೮೨೯ ಬಿ.ಕ್ಯು.ಮೀ. ೨೦೫೦ರ ವೇಳೆಗೆ ಅದರ ಎರಡರಷ್ಟು ನೀರು ನಮಗೆ ಬೇಕು. ದುರಂತ, ಆ ವೇಳೆಗೆ ನಮ್ಮ ಬಳಿ ಈಗಿನ ಅರ್ಧದಷ್ಟು ನೀರೂ ಉಳಿದಿರಲಾರದು! ಅಪಾರ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದರೂ ಧಾನ್ಯೋತ್ಪಾದನೆಯಲ್ಲಿ ನಾವು ಸೋಲುತ್ತಿರುವ ಮುಖ್ಯ ಕಾರಣ ನೀರೇ! ಕಳೆದ ದಶಕದಿಂದೀಚೆಗೆ ನೀರಿಲ್ಲದೇ ಬಂಜರಾಗುತ್ತಿರುವ ಭೂಮಿಯ ಪ್ರಮಾಣವೂ ಹೆಚ್ಚುತ್ತಿದೆ. ಅದಕ್ಕೇ ಕಳೆದ ಫೆಬ್ರುವರಿಯಲ್ಲಿ ನದಿ ಜೋಡಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟು ಸರ್ಕಾರಗಳಿಗೆ ಆದೇಶಿಸಿರೋದು. ಮೇಲ್ನೋಟಕ್ಕೆ ಗಂಗೆ-ಕಾವೇರಿಯರು ಬೆಸೆದುಕೊಂಡರೆ ಚಂದ ಅನಿಸುತ್ತೆ. ನಡುಭಾಗದ ಭೂಮಿಯನ್ನು ಹತ್ತಿ-ಇಳಿಯುವ ಹಾದಿಯಲ್ಲಿ ಗಂಗೆ ಮುನಿದು ಮರಳಿಬಿಟ್ಟರೆ..? ಒಂದಿಡೀ ನಾಗರಿಕತೆ ನಾಶವಾಗಿಬಿಡುವ ಹೆದರಿಕೆ ಪರಿಸರವಾದಿಗಳನ್ನು ಕಾಡುತ್ತಿದೆ.

ನದಿಗಳನ್ನು ಬೆಸೆಯುವ ಯೋಜನೆ ಇಂದು ನೆನ್ನೆಯದಲ್ಲ. ೧೮೫೮ರಲ್ಲಿಯೇ ಕರ್ನಲ್ ಆರ್ಥರ್ ಕಾಟನ್ ಭಾರತವನ್ನು ಕಾಲುವೆಗಳಿಂದ ಬೆಸೆಯುವ ಯೋಜನೆ ಮುಂದಿಟ್ಟಿದ್ದ. ಅದಕ್ಕೆ ತಗಲುವ ವೆಚ್ಚ ಕಂಡು ಗಾಬರಿಗೊಂಡ ಸರ್ಕಾರ ಸುಮ್ಮನಾಗಿತ್ತು. ಎಡವಟ್ಟಾದರೆ ನಷ್ಟವಾದೀತೆಂದು ಹೆದರಿತ್ತು. ಮುಂದೆ ೭೦ರ ದಶಕದಲ್ಲಿ ಗಂಗೆ ಕಾವೇರಿ ಬೆಸೆಯುವ ಯೋಜನೆ ಸರ್ಕಾರದೆದುರು ಬಂತು. ೨೬೪೦ ಕಿ.ಮೀ.ಗಳ ಈ ಯೋಜನೆಗೆ ೧೨ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗಲುವ ಕಲ್ಪನೆಯೇ ಭಯಾನಕವಾಗಿತ್ತು. ಯೋಜನೆ ಕಸದ ಬುಟ್ಟಿ ಸೇರಿತು. ಮುಂದೆ ಆ ದಶಕದ ಕೊನೆಯಲ್ಲಿ ಹಿಮಾಲಯದ ನದಿಗಳನ್ನು ಹಾರದಂತೆ ಬೆಸೆಯುವ ೯,೩೦೦ ಕಿ.ಮೀ ಉದ್ದದ ಯೋಜನೆ ಬಂತು, ಹೋಯ್ತು. ಎನ್‌ಡಿಎ ಸರ್ಕಾರ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಕೇಳಿತು. ಸಮಿತಿ ವರದಿಯನ್ನು ಕೊಟ್ಟಿತು ನಿಜ, ಆದರೆ ಎಲ್ಲ ಬಗೆಯ ಸಮಸ್ಯೆಗಳಿಗೆ ನದೀ ಜೋಡಣೆಯಿಂದ ಪರಿಹಾರ ದೊರಕಲಾರದೆಂದೂ ಒಪ್ಪಿಕೊಂಡಿತ್ತು. ಈಗ ಮತ್ತೊಮ್ಮೆ ನದೀ ಜೋಡಣೆಯ ವಿಚಾರಕ್ಕೆ ಜೀವ ಬಂದಿದೆ. ಈ ಬಾರಿ ಒಟ್ಟಾರೆ ಖರ್ಚು ಸುಮಾರು ೨೦ ಲಕ್ಷ ಕೋಟಿಯಾದರೂ ಆದೀತು. ನೆನಪಿಡಿ, ಕರ್ನಾಟಕದ ವರ್ಷಿಕ ಬಜೆಟ್ ಒಂದು ಲಕ್ಷ ಕೋಟಿ ಮಾತ್ರ.

ನದಿ ಜೋಡಣೆ ಯೋಜನೆ ಎಷ್ಟು ಮನಮೋಹಕವೋ ಅಷ್ಟೇ ಸಮಸ್ಯೆಗಳ ಆಗರ ಕೂಡಾ. ಮಧ್ಯ ಪ್ರದೇಶದ ಕೆನ್ ಮತ್ತು ಬೇಟ್ವಾ ನದೀ ಜೋಡಣೆಯೊಂದೇ ಅಲ್ಲಿನ ಪನ್ನಾ ರಕ್ಷಿತಾರಣ್ಯದ ಎರಡರಷ್ಟು ಅರಣ್ಯವನ್ನು ನುಂಗಿ ನೀರು ಕುಡಿದುಬಿಡುತ್ತದೆ. ಇನ್ನು ದೇಶದ ಮೂವತ್ತು ನದಿಗಳನ್ನು ಜೋಡಿಸಿದರೆ ಕಥೆ ಏನಾದೀತು? ೨೦೦೭ರ ಒಂದು ವರದಿಯ ಪ್ರಕಾರ ಭಾರತದ ನದೀಜೋಡಣೆ ಯೋಜನೆ ಏಳೂ ಮುಕ್ಕಾಲು ಲಕ್ಷ ಹೆಕ್ಟೇರ್ ಭೂಮಿಯನ್ನು ಅಪೋಶನ ತೆಗೆದುಕೊಳ್ಳದೆ. ಸುಮಾರು ೧೫ ಲಕ್ಷ ಜನರು ನಿರ್ವಸಿತರಾಗುತ್ತಾರೆ. ಸುಮಾರು ೨೦ ಹೆಕ್ಟೇರ್ ಭೂಮಿ ಕಾಲುವೆ ಕೊರೆಯಲಿಕ್ಕೇ ಬೇಕು. ಇದರಲ್ಲಿ ಒಂದು ಲಕ್ಷ ಹೆಕ್ಟೇರ್ ನಷ್ಟು ಭೂಮಿ ಅರಣ್ಯದ್ದಾಗಿದೆ ಎನ್ನುವುದೇ ಭಯಾನಕ. ಹೇಳಿ, ಇಷ್ಟು ಸವಾಲು ಸ್ವೀಕರಿಸಲು ಸಿದ್ಧವಿದ್ದೇವೆಯೇ? ಇಷ್ಟಕ್ಕೂ ಈ ಯೋಜನೆಗೆ ಹಸಿರು ನಿಶಾನೆ ದೊರೆತೊಡನೆ ಜಗತ್ತಿನ ಆಕ್ರಾಮಕ ಕಂಪೆನಿಗಳು ಅರಣ್ಯವನ್ನು ಸಪಾಟು ಮಾಡಲು ಧಾವಿಸುತ್ತವೆ. ಮೊದಲು ಆ ಕೆಲಸ. ಆಮೇಲೆ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಹೋರಾಟ. ಇಷ್ಟೆಲ್ಲ ಆದನಂತರ ಕಾಮಗಾರಿ ಶುರುವಾಗಬೇಕು. ಅಷ್ಟರೊಳಗೆ ಭೂ ಮಂಡಲದ ತಾಪಮಾನದಲ್ಲಿ ಏರುಪೇರಾಗಿ ನದಿಯ ನೀರಿನ ಸೆಲೆ ಕಡಿಮೆಯಾಗುತ್ತ ಈ ಯೋಜನೆಯನ್ನೇ ಕೈಬಿಟ್ಟರೆ ಅಚ್ಚರಿಯಿಲ್ಲ.

ಹಾಗೆ ನೋಡಿದರೆ ನಮ್ಮ ಕೃಷಿಯ ಅರ್ಧಕ್ಕೂ ಹೆಚ್ಚು ಭಾಗ ಭೂಗರ್ಭದ ನೀರಿನ ಆಧಾರದ ಮೇಲೆಯೇ ನಿಂತಿರೋದು. ಹಳ್ಳಿಯ ಶೇಕಡಾ ೯೦ರಷ್ಟು, ಪಟ್ಟಣದ ಶೇ.೫೦ರಷ್ಟು ಕುಡಿಯುವ ನೀರಿಗೆ ಭೂಗರ್ಭದ ನೀರೇ ಆಧಾರ. ಅದರೆ, ನಮ್ಮ ನೀರಾವರಿ ಬಜೆಟ್ಟಿನ ಮುಕ್ಕಾಲು ಭಾಗ ಡ್ಯಾಮ್ಗಳ ನಿರ್ಮಾಣಕ್ಕೆ ಮೀಸಲಾಗಿಟ್ಟಿರುವುದು ಮಹಾ ದುರಂತ.

ನೆನಪು ಮಾಡಿಕೊಳ್ಳಿ, ೧೯೮೦ರ ಅರಂಭದಲ್ಲಿ ರಾಜಸ್ಥಾನದ ಆಳ್ವಾರಿನ ಅನೇಕ ಭಾಗಗಳನ್ನು ಕಪ್ಪು ಪ್ರದೇಶವೆಂದು ಘೋಷಿಸಲಾಗಿತ್ತು. ಅದರರ್ಥ, ಅಲ್ಲಿ ಇನ್ನು ಭೂಗರ್ಭದ ಜಲವೇ ಇಲ್ಲ ಅಂತ. ರಾಜೇಂದ್ರ ಸಿಂಗರ ನೇತೃತ್ವದ ತರುಣ ಭಾರತದ ೧೫ ಜನ ಅಲ್ಲಿಗೆ ಹೋಗಿ ಮಳೆಯ ನೀರನ್ನು ಇಂಗಿಸುವ ಯತ್ನ ಶುರು ಮಾಡಿದರು. ಆರಂಭದ ದಿನಗಳಲ್ಲಿ ಮಕ್ಕಳ ಕಳ್ಳರೆಂದು ಜನರ ಬಳಿ ಅವರು ಹೊಡೆತ ತಿಂದದ್ದೂ ಇದೆ. ಕ್ರಮೇಣ ರಾಜೇಂದ್ರ ಸಿಂಗರ ಪ್ರಯತ್ನ ಜನರಿಗೆ ಮನದಟ್ಟಾಯಿತು. ಭೂಮಿಯೊಳಗೆ ನಿರ್ಮಿಸಲಾದ ನೀರಿಂಗುವ ತೊಟ್ಟಿಗಳು ನೀರನ್ನು ಹಿಡಿದವು, ಭೂಮಿಯೊಳಗೆ ಇಂಗಿಸಿದವು. ನೋಡನೋಡುತ್ತ ಅಂತರ್ಜಲದ ಮಟ್ಟ ಏರಿತು, ಕಪ್ಪು ಪ್ರದೇಶದ ಹಣೆಪಟ್ಟಿ ಹೋಗಿ, ಆಳ್ವಾರ್, ಸಮೃದ್ಧ ನೀರಿನ ಪ್ರದೇಶವಾಯಿತು. ಅಂದು ೫೦ ಸಾವಿರದಲ್ಲಿ ಎರಡು ತೊಟ್ಟಿ ಕಟ್ಟಿಕೊಂಡವ, ಇಂದು ವರ್ಷಕ್ಕೆ ಮೂರು ಕೋಟಿಯಷ್ಟು ಕೃಷಿ ಪದಾರ್ಥ ಬೆಳೆಯುತ್ತಾನೆ. ಅದು ಬಿಡಿ, ೧೯೮೬ರಲ್ಲಿ ಬತ್ತಿ ಹೋಗಿದ್ದ ಅರವಾರಿ ನದಿಯಗುಂಟ ನೀರಿಂಗಿಸಿದ್ದರ ಪರಿಣಾಮವಾಗಿ ಆ ನದಿಯೇ ಪುನರುಜ್ಜೀವಿತಗೊಂಡು ಲಕಲಕಿಸಿ ಹರಿಯಲಾರಂಭಿಸಿತು. ಡಿಸೆಂಬರ್‌ಗೇ ಬತ್ತುತ್ತಿದ್ದ ನೀರು ಈಗ ಮಾರ್ಚ್- ಏಪ್ರಿಲ್ ವರೆಗೂ ಕಾಣಸಿಗುತ್ತದೆಂದರೆ, ನೀವೇ ಲೆಕ್ಕ ಹಾಕಿ.

ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ. ಅದಕ್ಕೇ ಸುರೇಶ್ ಪ್ರಭು, ರಾಜಕೀಯ ನೇತರರಾಗಿದ್ದೂ ಈ ವಿಚಾರದಲ್ಲಿ ಮಾತ್ರ ರಾಜಕೀಯ ತರಬೇಡಿರೆಂದು ಸಂದರ್ಶನದಲ್ಲಿ ಗೋಗರೆದಿರೋದು.

ಮಹಾರಾಷ್ಟ್ರದ ಕಾಂಗ್ರೆಸ್ ನೇತಾರ ಅಮರೀಷ್ ಪಟೇಲ್ ಮತ್ತು ನಿವೃತ್ತ ಭೂಗರ್ಭ ಶಾಸ್ತ್ರಜ್ಞ, ಆರೆಸ್ಸೆಸ್‌ನ ಸುರೇಶ್ ಖಾನಾಪುರ್‌ಕರ್, ದಶಕಗಳಷ್ಟು ಹಿಂದೆಯೇ ತಮ್ಮ ನಡುವಿನ ಸೈದ್ಧಾಂತಿಕ ಭೇದ ಮರೆತು, ನೀರಿಗಾಗಿ ಒಂದಾಗಿದ್ದರು. ಅಲ್ಲಿನ ಧುಲೆ ಜಿಲ್ಲೆಯ ಶಿರಪುರ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ನಿರು ಇಂದು ಮತ್ತೆ ಭೋರ್ಗರೆಯುತ್ತಿದೆ. ವರ್ಷಕ್ಕೆ ಒಂದು ಬೆಳೆ ತೆಗೆಯಲು ಹೈರಾಣಾಗುತ್ತಿದ್ದ ರೈತ ಈಗ ಎರಡನೇ ಬೆಳೆಯನ್ನು ತೆಗೆದು ಸುಖದಿಂದಿದ್ದಾನೆ. ಅಮರೀಷ್ ಪಟೇಲರು ತಮ್ಮ ಸಹಕಾರಿ ಸಂಸ್ತೆಯ ಲಾಭವನ್ನು ಈ ಯೋಜನೆಗೆ ಸುರಿದಿದ್ದಾರೆ. ಅಚ್ಚರಿ ಏನು ಗೊತ್ತೆ? ನೂರೈತ್ತು ಚದರ ಕಿ.ಮೀ.ಗಳಷ್ಟು ಭುಮಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅವರು ಮಾಡಿರುವ ಖರ್ಚು ಅರೂವರೆ ಕೋಟಿಯಷ್ಟು ಮಾತ್ರ.

ಬೆಳೆ ಹಾಳಾದೊಡನೆ ನಮ್ಮ ಸರ್ಕಾರಗಳು ರೈತನಿಗೆ ಹಣದ ಪರಿಹಾರ ಘೋಷಿಸಿಬಿಡುತ್ತವೆ. ಅದು ಅವನಲ್ಲೇನೂ ಬಲ ತುಂಬಿಕೊಳ್ಳುವುದಿಲ್ಲ, ಬದಲಿಗೆ ಅವನನ್ನು ಶಾಶ್ವತವಾಗಿ ಬೇಡುವವನನ್ನಾಗಿಸಿಬಿಡುತ್ತದೆ. ಮಧ್ಯಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಸ್ವಾವಲಂಬಿ ಆಂದೋಲನದ ನೇತೃತ್ವ ವಹಿಸಿದ ಹಿರಿಯರೊಬ್ಬರು ಹೇಳಿದ ಮಾತು ಮನನೀಯ. ಊಟ ಹಾಕೋದು ನಿಜವದ ಸೇವೆಯಲ್ಲ, ಊಟ ಗಳಿಸುವ ಮಾರ್ಗ ತೋರೋದು ನಿಜವಾದ ಸೇವೆ. ನೀರಿನ ವಿಚಾರದಲ್ಲಿ ನಾವು ಸ್ವಾವಲಂಬಿಯಾಗಬೇಕೆಂದರೆ ಇರುವುದನ್ನು ಹಾಗೆಯೇ ಉಳಿಸಿಕೊಂಡು, ನೀರಿನ ಸೆಲೆ ಹೆಚ್ಚಿಸಬೇಕೇ ಹೊರತು, ಇರುವುದನ್ನುನ ನಾಶಮಾಡಿ, ನೀರಿನ ಸ್ರೋತವನ್ನೆ ಮುಗಿಸುವುದಲ್ಲ.

ನಮ್ಮೂರಿನ ಕೆರೆ ನೋಡಿದಾಗೆಲ್ಲ ಹೊಟ್ಟೆ ಉರಿಯುತ್ತದೆ. ಸೂಲಿಬೆಲೆಯ ಕೆರೆ ತುಂಬಿದರೆ ಸುತ್ತಲ ಹಳ್ಳಿಗಳಿಗೆ ನೀರು. ಹೊಸಕೋಟೆ ಕೆರೆ ತುಂಬಿದರೆ, ಸುತ್ತಲ ತಾಲ್ಲೂಕಿಗೆ ನೀರು ಅಂತ ರೈತರು ಹೇಳೋದನ್ನ ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಆ ಕೆರೆ ತುಂಬಿ ಎರಡು ದಶಕಗಳಾದರೂ ಕಳೆದಿವೆ. ಆಳು ಮುಳುಗುವಷ್ಟು ಹೂಳು ಆ ಕೆರೆಗಳಲ್ಲಿ. ಅರಣ್ಯ ಇಲಾಖೆಯಂತೂ ನಮ್ಮೂರಿನ ಕೆರೆಯೊಳಗೆ ನಿರುಪಯುಕ್ತ ಯೂಕಲಿಪ್ಟಸ್ ಗಿಡಗಳನ್ನು ನೆಟ್ಟು ಎರಡೇ ವರ್ಷಗಳಲ್ಲಿ ಹೆಲಿಕಾಪ್ಟರಿಗೆ ಹಸಿರುಹಸಿರು ಕಾಣುವ ಅರಣ್ಯದ ನಿರ್ಮಾಣ ಮಾಡಿದೆ. ಈ ಗಿಡಗಳಾದರೋ, ಭೂಗರ್ಭದ ನೀರನ್ನೆ ಬತ್ತಿಸಿ, ಕೆರೆಯನ್ನೂ ನಾಶಮಾಡಿಬಿಟ್ಟಿವೆ. ಹೇಳಿ, ನಮ್ಮೂರಿನ ಕೆರೆಗಳನ್ನೆ ಉಳಿಸಿಕೊಳ್ಳಲಾಗದ, ಪಕ್ಕದ ಕೆರೆಗಳೊಂದಿಗೆ ಜೋಡಿಸಿಕೊಳ್ಳಲಾಗದ ನಾವು, ನದಿ ಜೋಡಿಸುವಲ್ಲಿ ಗೆಲ್ಲುತ್ತೀವಾ? ಕೆರೆಗಳಿಂದ ಉಪಕೃತಗೊಂಡ ರೈತ, ತಾನೇ ನಾಲ್ಕು ವರ್ಷಕ್ಕೊಮ್ಮೆ ಕೆರೆಗಳಿಂದ ಹೂಳೆತ್ತುವ ಪ್ರಕ್ರಿಯೆ ನಡೆಸುತ್ತಿದ್ದನಂತೆ. ಅದಕ್ಕೆ ಕೈಹಾಕಿ ನಿಭಾಯಿಸುವೆನೆಂದು ಹೊರಟ ಸರ್ಕಾರ ತಾನೂ ಮಾಡಲಿಲ್ಲ, ರೈತನಿಗೂ ಬಿಡಲಿಲ್ಲ.

ಒಟ್ಟಾರೆ ಇಂದಿನ ಪರಿಸ್ಥಿತಿ ನೀರಿಗಾಗಿ ಹಾಹಾಕಾರ, ಮತ್ತೊಂದಷ್ಟು ಲಕ್ಷಕೋಟಿಯ ಯೋಜನೆಗೆ ಶ್ರೀಕಾರ ಅನ್ನುವಂತಾಗಿದೆಯಷ್ಟೆ.

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ
ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

ಅದಿರಲಿ. ಈ ಅಗ್ನಿಯ ವಿಶೇಷವೇನು ಗೊತ್ತೇ? ಈ ಕ್ಷಿಪಣಿ ಚೀನಾದ ಈಶಾನ್ಯವೂ ಸೇರಿದಂತೆ ಇಡಿಯ ಏಷ್ಯಾ, ಯುರೋಪಿನ ಶೇ.೭೦ ಭಾಗ ಹಾಗೂ ಆಸ್ಟ್ರೇಲಿಯಾದ ತೀರಗಳನ್ನು ನಾಶ ಮಾಡಬಲ್ಲದು. ಚೀನಾದ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗಿರೋದು ಅದ್ಕಕೇ. ಪಾಕಿಸ್ತಾನವಂತೂ ಇಂತಹದೊಂದು ಪ್ರಯೋಗದ ಯೋಚನೆಯನ್ನೂ ಮಾಡಲಾರದು ಬಿಡಿ. ಆದರೆ ಚೀನಾ ಮಾತ್ರ ತಕ್ಕ ಸಿದ್ಧತೆ ಶುರು ಮಾಡಿದೆ. ಇಂತಹ ಕ್ಷಿಪಣಿಗಳು ಅದರ ಬಳಿ ಇಲ್ಲವೆಂದಲ್ಲ, ಆದರೆ ತಾನು ಬಳಸುವ ಒಂದೊಂದು ಕ್ಷಿಪಣಿಗೂ ಭಾರತ ಪ್ರತ್ಯುತ್ತರ ನೀಡಬಲ್ಲದೆಂಬುದು ಅದಕ್ಕೀಗ ಖಾತ್ರಿಯಾಗಿದೆ. ಅದಕ್ಕೇ ತನ್ನ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿ ಚೀನಾ ಅಲವತ್ತುಕೊಂಡಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರಬೇಡಿ ಎಂದೆಲ್ಲ ತಾಕೀತು ಮಾಡಿದೆ.

ಒಟ್ಟಾರೆ ಇಂದು ಅಗ್ನಿಯ ಸೇರ್ಪಡೆಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿರುವುದು ಅಚ್ಚರಿಯ ಸಂಗತಿಯೇನಲ್ಲ. ಇಂತಹ ಕ್ಷಿಪಣಿ ಹೊಂದಿರುವ ಆರು ರಾಷ್ಟ್ರಗಳ ಸಾಲಿನಲ್ಲಿ ಈಗ ಭಾರತವೂ ಎದೆಯೆತ್ತಿ ನಿಲ್ಲುವಂತಾಗಿದೆ.

ಬರಿ ಇಷ್ಟೇ ಆಗಿದ್ದರೆ ವಿಶೇಷ ಎನ್ನಿಸುತ್ತಿರಲಿಲ್ಲ. ಕಳೆದ ಫೆಬ್ರವರಿ ೧೦ಕ್ಕೆ ನಮ್ಮ ವಿಜ್ಞಾನಿಗಳು ಶತ್ರು ರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂತಹ ಪ್ರತಿಕ್ಷಿಪಣಿಗಳನ್ನೂ ಯಶಸ್ವಿಯಾಗಿ ಉಡಾಯಿಸಿದ್ದಾರೆ. ಒರಿಸ್ಸಾದ ಕಡಲ ತೀರದಲ್ಲಿ ನಡೆದ ಈ ಪ್ರಯೋಗ ರಾಮ ರಾವಣರ ಯುದ್ಧದ ಆಧುನಿಕ ಚಿತ್ರದಂತೆ ತೋರುತ್ತಿತ್ತು. ಶತ್ರು ದೇಶದಿಂದ ಹೊರಟಂತೆ ಒಂದು ಪೃಥ್ವಿ ಕ್ಷಿಪಣಿ ಹೊರಟರೆ, ಒರಿಸ್ಸಾದ ಕಡಲ ತೀರದ ಮತ್ತೊಂದು ತುದಿಯಿಂದ ಹೊರಟ ಪ್ರತಿ ಕ್ಷಿಪಣಿ ಅದನ್ನು ಆಕಾಶದಲ್ಲಿಯೇ ಧ್ವಂಸಗೊಳಿಸಿ ವಿಜ್ಞಾನಿಗಳ ಮುಖದಲ್ಲಿ ಮಂದಹಾಸ ತಂದಿತು. ೨,೦೦೦ ಕಿ.ಮೀ. ದೂರದಿಂದ ಹೊರಟ ಕ್ಷಿಪಣಿಯೊಂದನ್ನು ರೇಡಾರ್‌ಗಳು ಗುರುತಿಸಿ, ಅದರ ಹಾದಿಯನ್ನು ಗಮನಿಸುತ್ತಾ ನಮ್ಮ ಪ್ರತಿಕ್ಷಿಪಣಿಗೆ ಮಾರ್ಗದರ್ಶನ ಮಾಡುತ್ತಾ ಆಕಾಶದಲ್ಲಿಯೇ ಶತ್ರು ಕ್ಷಿಪಣಿಗೆ ಢಿಕ್ಕಿ ಹೊಡೆಸಿ ನಾಶಗೈಯುವ ಪ್ರಕ್ರಿಯೆ ಇದೆಯಲ್ಲ, ಅದು ಸಾಮಾನ್ಯ ತಂತ್ರಜ್ಞಾನವೇನಲ್ಲ. ಜೊತೆಗೆ ಈ ಕಾಳಗ ನಮ್ಮ ಹವಾಗೋಳದ ಒಳಗೆ ನಡೆಯದಂತೆ ಎಚ್ಚರಿಕೆ ಬೇರೆ ವಹಿಸಬೇಕಲ್ಲ. ನಮ್ಮ ವಾತಾವರಣದ ಒಳ ಹೊಕ್ಕ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸಿದರೆ ನಷ್ಟ ನಮಗೇ. ಅದಕ್ಕೇ ಅದನ್ನು ಆದಷ್ಟು ದೂಎದಲ್ಲಿಯೇ ಧ್ವಂಸಗೈಯುವ ಪ್ರಯಾಸವೂ ಆಗಬೇಕು. ಇದು ಕ್ಷಿಪಣಿಯನ್ನು ಗುರಿಯತ್ತ ನಿಖರವಾಗಿ ಹಾರಿಸಿದಷ್ಟೇ, ಸ್ವಲ್ಪ ಅದಕ್ಕಿಂತಲೂ ಹೆಚ್ಚು ಕಷ್ಟದ ಸಂಗತಿ. ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲನ್ನು ಬಿಟ್ಟರೆ ಇಂತಹ ತಂತ್ರಜ್ಞಾನ ಹೊಂದಿರುವ ೫ನೇ ದೇಶ ನಾವು ಮಾತ್ರ!

ಹೌದು. ತಂತ್ರಜ್ಞಾನದ ದೃಷ್ಟಿಯಿಂದ, ಸೈನಿಕರ ಆತ್ಮಸ್ಥೈರ್‍ಯದ ದೃಷ್ಟಿಯಿಂದ ನಮ್ಮನ್ನು ಸರಿಗಟ್ಟಬಲ್ಲ ರಾಷ್ಟ್ರ ಸಿಕ್ಕೋದು ಕಷ್ಟ. ಆದರೆ ನಮ್ಮನ್ನಾಳುವ ನಾಯಕರ ದೂರದೃಷ್ಟಿಯ ಕೊರತೆ ಮಾತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮನ್ನು ಕಾಡುತ್ತಲೇ ಇದೆ. ಚೀನಾ ನೇರ ಯುದ್ಧಕ್ಕಿಳಿಯದೇ ನಮ್ಮ ಸುತ್ತಲೂ ಶತ್ರುಗಳ ನಿರ್ಮಾಣ ಮಾಡಿ ನಮ್ಮನ್ನು ಹೈರಾಣು ಮಾಡಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಪಾಕಿಸ್ತಾನಕ್ಕೆ ಅದು ನೀಡುತ್ತಿರುವ ಸಹಕಾರವಂತೂ ಎಲ್ಲರಿಗೂ ಗೊತ್ತಿದ್ದದ್ದೇ. ಅದರೊಟ್ಟಿಗೇ ಚೀನಾ ಶ್ರೀಲಂಕಾಕ್ಕೂ ಬಗೆ ಬಗೆಯಲ್ಲಿ ಸಹಾಯ ಮಾಡುತ್ತಿದೆ. ಹಣವಿರಲಿ, ಶಕ್ತಿಯಿರಲಿ ಎಲ್ಲ ದಿಕ್ಕಿನಿಂದಲೂ ಬಗ್ಗಿಸಿಕೊಂಡಿದೆ. ನಾವಾದರೋ ಮಿತ್ರ ಶ್ರೀಲಂಕಾವನ್ನು ಮಾನವ ಹಕ್ಕುಗಳ ಹೆಸರಲ್ಲಿ ವಿರೋಧಿಸಿಕೊಂಡು ಚೀನಾದ ಕೈ ಅದರಲ್ಲಿ ಬಲವಾಗುವಂತೆ ಮಾಡಿಬಿಟ್ಟಿದ್ದೇವೆ. ಇಂತಹದೊಂದು ಮೂರ್ಖ ನಿರ್ಧಾರವನ್ನು ಕೈಗೊಂಡಿದ್ದರ ಪರಿಣಾಮವನ್ನು ನಾವು ಭವಿಷ್ಯದಲ್ಲಿ ಎದುರಿಸಲೇಬೇಕು, ಅನುಮಾನವಿಲ್ಲ. ನಾಳೆ ಭಾರತದ ಮುಸಲ್ಮಾನರು, ಕ್ರಿಶ್ಚಿಯನ್ನರು ನಮ್ಮ ಮೇಲೆ ದಬ್ಬಾಳಿಕೆ ಆಗುತ್ತಿದೆಯೆಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದರೆ ನಮ್ಮ ಸಹಾಯಕ್ಕೆ ನೆರೆಯ ರಾಷ್ಟ್ರಗಳು ಯಾವುದು ಬಂದಾವು ಹೇಳಿ. ನೌಕಾ ಸೇನೆಯ ದೃಷ್ಟಿಯಿಂದ ನೋಡಿದರೆ ನಮಗಿಂತ ಸಾಕಷ್ಟು ಹಿಂದಿರುವ ಚೀನಾ ತನಗೆ ಬೇಕಾದ ನೌಕಾ ನೆಲೆಯನ್ನು ಶ್ರೀಲಂಕಾದಲ್ಲಿ ಕಂಡುಕೊಳ್ಳುತ್ತಿದೆ ಗೊತ್ತೇನು? ಮಾವೋತ್ಸೆ ತುಂಗನ ಕಾಲದಿಂದಲೂ ಇದ್ದ ಭಾರತವನ್ನು ಆಪೋಶನ ತೆಗೆದುಕೊಳ್ಳಬೇಕೆಂಬ ಕನಸನ್ನು ಚೀನಾ ಈಗ ಮೊದಲಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ನನಸು ಮಾಡಿಕೊಳ್ಳುತ್ತಿದೆ. ಅದಕ್ಕೆ ಪ್ರತಿತಂತ್ರ ಹೆಣೆಯಬೇಕೆಂಬ ಕಿಂಚಿತ್ ಯೋಚನೆಯಾದರೂ ಇದೆಯೆ?

ಹೋಗಲಿ ಬಿಡಿ, ಚೀನಾದ ಸಂಪರ್ಕ ಸಾಧನ ಕಂಪೆನಿ ಹುವೆ (huಚಿತಿei) ತಾನು ಹುಟ್ಟಿಕೊಂಡ ೨೫ ವರ್ಷಗಳಲ್ಲಿ, ಜಾಗತಿಕ ಸಂಪರ್ಕ ಪಡಕೊಂಡ ೧೫ ವರ್ಷಗಳಲ್ಲಿ ಮಾಡಿದ ಸಾಧನೆ ಕಣ್ಣು ಕುಕ್ಕುವಂಥದ್ದು.   ಇಂದು ಭಾರತೀಯರು ಬಳಸುವ ಅಂತರ್ಜಾಲ ಸಂಬಂಧಿತ ೯೦% ಸಾಧನಗಳು ಈ ಕಂಪೆನಿಯಿಂದಲೇ ತಯಾರಾಗುವಂಥವು. ನಮ್ಮ ಸೈನ್ಯದಲ್ಲೂ ಈ ಕಂಪೆನಿಯ ಹಸ್ತ ಆಳಕ್ಕೆ ಇಳಿದಿದೆ. ನಮ್ಮ ಹಿರಿಯ ಅಧಿಕಾರಿಗಳು ಬಳಸುವ ಮೊಬೈಲಿನಿಂದ ಹಿಡಿದು, ವಿಜ್ಞಾನಿಗಳು ಬಳಸುವ ಅಂತರ್ಜಾಲ ಸಂಪರ್ಕ ಸಾಧನದವರೆಗೆ ಎಲ್ಲವೂ ಚೀನಾದ್ದೇ. ಮುಂದೆ ಮಹತ್ವದ ದಿನ ಬಂದಾಗ ಈ ಸಾಧನಗಳನ್ನು ಹುವೆ ನಿಷ್ಕ್ರಿಯಗೊಳಿಸಿಬಿಟ್ಟರೆ, ಎಲ್ಲಾ ಇದ್ದೂ ಇಲ್ಲದಂತಿರುವ ಸ್ಥಿತಿಗೆ ನಾವು ತಲುಪಿಬಿಟ್ಟೇವು.  (ಕರ್ಣ ಸಮಯಕ್ಕೆ ಸರಿಯಾಗಿ ಯುದ್ಧ ವಿದ್ಯೆಯನ್ನು ಮರೆತಂತೆಯೇ ಇದು, ಎಚ್ಚರಿಕೆ!)

ಈ ಕಂಪೆನಿಯ ವಸ್ತುಗಳಿಗೆ ಬಿಎಸ್ಸೆನ್ನೆಲ್. ಅವಕಾಶ ನೀಡಬಾರದೆಂದು ಬಹಳ ಹಿಂದೆಯೇ ನಮ್ಮ ಗುಪ್ತಚರರು ವರದಿ ನೀಡಿದ್ದರು. ಅರುಣ್ ಶೌರಿ ಕಾಲಕ್ಕೆ ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದು ಈ ಕಂಪೆನಿಯನ್ನು ದೂಎರವಿಡುವ ನಿರ್ಧಾರವೂ ಆಗಿತ್ತು. ಅದು ಹೇಗೋ ಗವಾಕ್ಷಿಯಿಂದ ಭೂತ ಮತ್ತೆ ನುಸುಳಿದೆ. ನಮ್ಮ ಸೈನ್ಯದೊಳಗೆ ಆಗುವ ಪ್ರತಿ ಚಲನವಲನವನ್ನು ಚೀನಾ ಕುಳಿತಲ್ಲಿಂದಲೇ ಗಮನಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ. ಈಗ ಹೇಳಿ, ನಮ್ಮನ್ನು ಆಳುವ ನಾಯಕರು ಇವುಗಳ ಬಗ್ಗೆ ಯೋಚಿಸದೆ ಇರುವಷ್ಟು ಮೂರ್ಖರಾಗಿಬಿಟ್ಟಿದ್ದಾರಾ?

೧೭೫೭ರಲ್ಲಿ ಸಿರಾಜುದ್ದೌಲನ ಬಳಿಯೂ ಸಾಕಷ್ಟು ಸೈನ್ಯವಿತ್ತು, ಶಸ್ತ್ರಗಳಿದ್ದವು. ಎದುರಾಳಿ ರಾಬರ್ಟ್ ಕ್ಲೈವನ ಬಳಿ ಹೇಳಿಕೊಳ್ಳುವಷ್ಟು ಸೈನ್ಯವಾಗಲೀ ಶಸ್ತ್ರಗಳಾಗಲೀ ಇರಲಿಲ್ಲ. ಆದರೆ ಅವನ ಬಳಿ ಕುಟಿಲ ನೀತಿಗಳಿದ್ದವು. ಆತ ಮೀರ್ ಜಾಫರ್‌ನನ್ನು ಬುಟ್ಟಿಗೆ ಹಾಕಿಕೊಂಡ. ನಮ್ಮ ಸೈನ್ಯ ಕಾದಾಡಲಿಲ್ಲ. ಸಿರಾಜುದ್ದೌಲನ ಹತ್ಯೆಯಾಯಿತು. ದೇಶ ಗುಲಾಮವಾಯಿತು. ಮನಮೋಹನರೂ ಸಿರಾಜುದ್ದೌಲನಂತೆಯೇ. ಅವರೊಡನೆ ಹಣಕ್ಕಾಗಿ ತಮ್ಮನ್ನೇ ಮಾರಿಕೊಳ್ಳುವ ಅನೇಕ ಮೀರ್‌ಜಾಫರ್‌ಗಳೂ ಇದ್ದಾರೆ. ಅದಕ್ಕೇ ಹೆದರಿಕೆಯಾಗೋದು. ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ. ನೆಹರೂ ಪಾಕಿಸ್ತಾನಕ್ಕೆ ಭೂಮಿ ಬಿಟ್ಟರು. ಆಗಲೂ ನಮ್ಮ ಶಕ್ತಿಯೇ ಹೆಚ್ಚಿತ್ತು. ಲಾಲ್ ಬಹದ್ದೂರರು ಅನಗತ್ಯವಾಗಿ ತಾಷ್ಕೆಂಟಿನಲ್ಲಿ ಒಪ್ಪಂದಕ್ಕೆ ಬಲಿಯಾದರು. ೯೦ ಸಾವಿರ ಶತ್ರು ಸೈನಿಕರನ್ನು ಬಂಧಿಸಿಯೂ ಒಪ್ಪಂದದ ಮೇಜಿನಲ್ಲಿ ಇಂದಿರಾ ಗಾಂಧಿ ಸೋತರು. ಕಾರ್ಗಿಲ್‌ನಲ್ಲಿ ಕಷ್ಟಪಟ್ಟು ಗೆದ್ದ ಭೂಮಿಯಲ್ಲಿ ನಮ್ಮ ಸೈನಿಕರೇ ನಿಂತು ಶತ್ರು ಸೈನಿಕರಿಗೆ ’ಸೇಫ್ ಪ್ಯಾಸೇಜ್’ ನೀಡಬೇಕಾಯ್ತು. ಅದು ವಾಜಪೇಯಿಯವರು ಮಾಡಿಕೊಂಡ ಒಪ್ಪಂದ. ಹೇಳಿ, ಸೋತಿದ್ದು ಸೈನಿಕರಾ, ಆಳುವ ಧಣಿಗಳಾ?

ಅಗ್ನಿ ಬಂತು ಅಂದೊಡನೆ ಒಮ್ಮೆ ಇವೆಲ್ಲವನ್ನೂ ಕೇಳಬೇಕನ್ನಿಸಿತು ಅಷ್ಟೇ. ದೇಶದೊಡನೆ ಘನಿಷ್ಟ ಬಾಂಧವ್ಯ ಇರುವ ಸೈನಿಕರು – ವಿಜ್ಞಾನಿಗಳು ತಮ್ಮನ್ನೇ ಪನವಾಗಿಟ್ಟುಕೊಂಡು ನಮ್ಮ ಆತ್ಮಸ್ಥೈರ್‍ಯ ಹೆಚ್ಚಿಸುತ್ತಾರೆ. ಆಳುವವರು ತಮ್ಮನ್ನೇ ಮಾರಿಕೊಂಡು ನಮ್ಮಲ್ಲಿ ಹೆದರಿಕೆಯ ಬೀಜ ಬಿತ್ತುತ್ತಾರೆ. ಈ ಹೆದರಿಕೆಗೂ ಅಗ್ನಿಸ್ಪರ್ಷ ಮಾಡಬಲ್ಲ ನಾಯಕನೊಬ್ಬನಿಗಾಗಿ ದೇಶ ಕಾಯುತ್ತಿದೆ. ಆತ ಆಳುತ್ತಾನಾ? ಅದೇ ಕೋಟಿ ರೂಪಾಯಿ ಪ್ರಶ್ನೆ.

ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ
ಮರೆವಿನ ವ್ಯಾಪ್ತಿ ಅದೆಷ್ಟಿದೆಯಲ್ಲ! ರಾಮದೇವ್ ಬಾಬಾ ಮತ್ತು ಅವರ ಭಕ್ತ ಸಮೂಹಕ್ಕೆ ದೆಹಲಿಯಲ್ಲಿ ಲಾಠಿ ಏಟು ಬಿದ್ದು ಜೂನ್‌ಗೆ ಬರೋಬ್ಬರಿ ಒಂದು ವರ್ಷ. ಅದಕ್ಕೂ ತಿಂಗಳ ಮುನ್ನ ಇಡಿಯ ದೇಶ ಜುಬ್ಬ- ಪೈಜಾಮಾದ ವೃದ್ಧನೊಬ್ಬನ ಹಿಂದೆ ನಡೆದುಹೊರಟಿತ್ತು. ಜೆಪಿ ಆಂದೋಲನದ ನಂತರ ದೇಶ ಕಂಡ ಮಹತ್ವದ ಹೋರಾಟ ಎಂದೆಲ್ಲ ಹೇಳಿಸಿಕೊಂಡ ಅಣ್ಣಾ ಹೋರಾಟ ಆ ಹೋರಾಟದ ಸ್ಥಿತಿ-ಗತಿಗಳೇನು? ನಾವೆಲ್ಲ ಮರೆತೇಬಿಟ್ಟಿದ್ದೇವೆ.

ಸ್ವಲ್ಪ ಫ್ಲ್ಯಾಷ್ ಬ್ಯಾಕು. ಅಣ್ಣಾ ಹಜಾರೆ ಕಳೆದ ಕೆಲವಾರು ದಶಕಗಳಿಂದ ಭ್ರಷ್ಟರ ವಿರುದ್ಧ ತೊಡೆ ತಟ್ಟುತ್ತಲೇಬಂದವರು. ರಾಮದೇವ್ ಬಾಬಾ ರಾಜೀವ ದೀಕ್ಷಿತರ ಭಾಷಣಗಳಿಂದ ಪ್ರಭಾವಿತರಾಗಿ ಸ್ವದೇಶೀ ಆಂದೋಲನದ ಮೂಲಕ ಭಾರತ್ ಸ್ವಾಭಿಮಾನ್‌ದತ್ತ ಹೊರಳಿದವರು. ೨೦೧೧ರ ಮಾಯೆಯೇನೋ? ಮಾಹಿತಿ ಹಕ್ಕಿನ ಹೋರಾಟಗಳನ್ನು ನಡೆಸಿಕೊಂಡುಬಂದಿದ್ದ ಕೇಜ್ರಿವಾಲ್, ಪೊಲೀಸ್ ಅಧಿಕಾರಿ ಕಿರಣ್ ಬೇಡಿ ತಾವು ಕೈಗೆತ್ತಿಕೊಂಡ ಹೋರಾಟಕ್ಕೆ ಅಣ್ಣಾರನ್ನು ಮುಂದಿರಿಸಿಕೊಂಡರು. ಆಸ್ಥಾ- ಸಂಸ್ಕಾರ್‌ಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರಿಗಳ ನೀರಿಳಿಸುತ್ತಿದ್ದ ರಾಮದೇವ್ ಬಾಬಾರ ಬೆಂಬಲವನ್ನು ಪಡಕೊಂಡು ಬೀಗಿದರು. ’ಇಂಡಿಯಾ ಅಗೇನ್‌ಸ್ಟ್ ಕರಪ್ಷನ್’ ಕೆಲಸ ಶುರು ಮಾಡಿತು. ಭ್ರಷ್ಟಾಚಾರಿಗಳ ಸಮೂಲ ನಾಶದ ಚರ್ಚೆ ಆರಂಭವಾಯಿತು.

ಅಂದುಕೊಂಡಂತೆ ನಡೆದಿದ್ದರೆ ಸಮಸ್ಯೆ ಇರಲಿಲ್ಲ. ದೆಹಲಿಯಲ್ಲಿ ಜನಲೋಕ್‌ಪಾಲ್ ಬಿಲ್‌ಗೆ ಆಗ್ರಹಿಸಿ ನಡೆದ ರ್‍ಯಾಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಸೇರಿದ್ದರು. ಹಾಗೆ ಸೇರಿದವರಲ್ಲಿ ಬಹುಪಾಲು ಬಾಬಾರ ಯೋಗ ಅನುಯಾಯಿಗಳೆಂಬುದರಲ್ಲಿ ಅನುಮಾನ ಯಾರಿಗೂ ಇರಲಿಲ್ಲ. ಟೀವಿಗಳಲ್ಲಿ ಬಿತ್ತರಗೊಂಡ ಚಿತ್ರಗಳಲ್ಲಿ ರಾಮ್‌ದೇವ್‌ರ ಫೋಟೋ ಹಿಡಿದು ನಿಂತ ಜನರೇ ಇದಕ್ಕೆ ಸಾಕ್ಷಿಯಾಗಿದ್ದರು. ಇದನ್ನು ಕಂಡು ’ಸೆಕ್ಯುಲರ್’ ಮದಿರೆ ಕುಡಿದ ಹಲವರಿಗೆ ಮತ್ತೇರಿಬಿಟ್ಟಿತು. ಕೇಸರಿ ಕಂಡಷ್ಟೂ ಆಂದೋಲನ ಹಳ್ಳಹಿಡಿಯುತ್ತದೆಂದು ಅಣ್ಣಾ ಟೀಮಿಗೆ ಅಫೀಮು ತಿನ್ನಿಸಿದರು. ಅವತ್ತೇ ಆಗಬಾರದ್ದು ಆಗಿಹೋಯಿತು. ರಾಮದೇವ್ ಬಾಬಾ ವೇದಿಕೆಯ ಬಳಿ ಬಂದಾಗ ಅವರನ್ನು ವೇದಿಕೆಯೇರದಂತೆ ತಡೆಯುವ ಯತ್ನ ಮಾಡಲಾಯ್ತು. ಭಾರತ ಮಾತೆಯ ಪಟವನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಲಾಯ್ತು. ’ವಂದೇ ಮಾತರಂ’ ಘೋಷಣೆ ಪ್ರಯತ್ನಪೂರ್ವಕವಾಗಿ ನಿಲ್ಲಿಸಲಾಯಿತು. ಕೊನೆಗೆ ಸೋನಿಯಾಗಾಂಧಿಯನ್ನು ಕರೆಸಿ ಅಣ್ಣಾ ಹಜಾರೆಯವರಿಗೆ ಹಾಲು ಕುಡಿಸುವ ಪ್ರಯಾಸವೂ ಆರಂಭವಾಯ್ತು. ರಾಮದೇವ್ ಬಾಬಾ ಕಡಿಮೆ ಭಂಡರಲ್ಲ. ಯಾರ ಮುಲಾಜೂ ಇಲ್ಲದೆ ವೇದಿಕೆ ಏರಿದರು. ಅಣ್ಣಾ ಹಜಾರೆಯವರನ್ನು ತಬ್ಬಿಕೊಂಡರು. ಹಾಲು ಕುಡಿಸಿದರು. ಬಗೆಬಗೆಯ ಘೋಷಣೆಗಳನ್ನು ಹಾಕಿಸಿ ತೆರಳಿದರು.

ಆದರೆ ॒ಹಾವು ಬಾಲ ತುಳಿಸಿಕೊಂಡಿತ್ತು. ಈಗ ಭುಸುಗುಟ್ಟುವುದಷ್ಟೇ ಬಾಕಿ. ಬಾಬಾ ರಾಮದೇವ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿಬಿಟ್ಟರು. ಕಪ್ಪುಹಣ ಮರಳಿ ತರುವ ಹೋರಾಟಕ್ಕೆ ತಮ್ಮ ಅನುಯಾಯಿಗಳನ್ನು ಎಳೆದುತಂದರು. ದೆಹಲಿಯ ರಾಮಲೀಲಾ ಮೈದಾನ ತುಂಬಿ ತುಳುಕಾಡಿತು. ಅದಕ್ಕೂ ಮುನ್ನ ಕಪಿಲ್ ಸಿಬಲ್ ನಡೆಸಿದ ಸಂಧಾನ ಬಾಬಾಜಿಗೆ ಕೋಡು ಮೂಡಿಸಿತ್ತು. ಸರ್ಕಾರ ತನ್ನೆದುರು ಸಾಷ್ಟಾಂಗವೆರಗಿಬಿಟ್ಟಿದೆಯೆಂಬ ಭ್ರಮೆಯಲ್ಲಿ ತೇಲಾಡಿದರು ಬಾಬಾ.

ಎಡವಟ್ಟು ಅಲ್ಲಿಯೇ ಆಗಿದ್ದು. ಅಡ್ಡ ನಿಂತವರನ್ನು ಮುಗಿಸಿಯೇಬಿಡುವ ಚಾಳಿ ಕಾಂಗ್ರೆಸ್ಸಿನ ಸಂಸ್ಕೃತಿಯಲ್ಲೇ ಅಡಗಿರುವಂಥದ್ದು. ನೆಹರೂ, ಸುಭಾಷ್ ಚಂದ್ರ ಬೋಸರ ಸಾವಿನ ಗುಟ್ಟು ರಟ್ಟಾಗಲು ಬಿಡಲೇ ಇಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ತಿರಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಇನ್ನು ಸಣ್ಣಪುಟ್ಟ ಅದೆಷ್ಟು ಮಂದಿ ಅದರ ಅಧಿಕಾರ ದಾಹಕ್ಕೆ ಬಲಿಯಾಗಿರುವರೋ ದೇವರೇ ಬಲ್ಲ. ಇಂತಹ ಕಾಂಗ್ರೆಸ್ಸಿಗೆ ಲಂಗೋಟಿಯುಡುವ ಫಕೀರನೊಬ್ಬ ಸವಾಲೇ ಆಗಿರಲಿಲ್ಲ. ಬಾಬಾಜೀಯನ್ನು ಬಡಿದು ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನೆ ಮಟ್ಟ ಹಾಕಿಬಿಡಬೇಕು ಅನ್ನುವ ಹಟಕ್ಕೆ ಬಿದ್ದಿತ್ತು ಸರ್ಕಾರ. ಕಪಿಲ್ ಸಿಬಲ್ ಒಪ್ಪಂದದ ಪತ್ರವನ್ನು ಬಾಬಾರ ಬಳಿಯೇ ಬರೆಸಿಕೊಂಡು ರಾಮಲೀಲಾ ಮೈದಾನದಲ್ಲಿ ಎಲ್ಲರೆದುರು ಅವರ ಮಾನ ಹರಾಜಿಗಿಟ್ಟುಬಿಟ್ಟ. ದಿನ ಬೆಳಗಾಗುವುದರಲ್ಲಿ ಮಾಧ್ಯಮಗಳು ಕಾಂಗ್ರೆಸ್ಸಿನ ಸೊಂಟವೇರಿ ಕುಳಿತುಬಿಟ್ಟಿದ್ದವು.

ಯೋಗಗುರು ಮುಗುಮ್ಮಾಗಿಬಿಟ್ಟರು. ಸರ್ಕಾರದ ಎಲ್ಲ ಇಲಾಖೆಗಳು ಅವರ ಹಿಂದೆ ಬಿದ್ದವು. ಪ್ರತಿಕ್ರಿಯಾತ್ಮಕ ರಾಜಕಾರಣ ಶುರುವಾಯ್ತು. ಭ್ರಷ್ಟಚಾರ ನಿರ್ಮೂಲನೆಯ ಕ್ರೆಡಿಟ್ಟು ಬಾಬಾಗೆ ಸೇರಿಬಿಡುತ್ತದಲ್ಲ ಎಂದು ಕಸಿವಿಸಿಪಡುತ್ತಿದ್ದ ಅಣ್ಣಾ ಟೀಮಿಗೆ (ಅಣ್ಣಾ ಹಜಾರೆ ಬಿಟ್ಟು) ಈಗ ನಿರಾಳವಾಗಿತ್ತು. ಗಾಂಧಿ ಮಾದರಿ ಹೊರಾಟ ರಾಮ್‌ದೇವ್ ಬಾಬಾಗೆ ಗೊತ್ತಿಲ್ಲವೆಂದರು ಕೆಲವರು. ತಾನೇ ಪ್ರಾಮಾಣಿಕನಲ್ಲದೆ ಇಂಥ ಹೋರಾಟ ಮಾಡಬಾರದೆಂದರು ಮತ್ತೊಂದಷ್ಟು ಜನ. ಬಾಬಾರಿಗೆ ಒಂದು ಹಿಡನ್ ಅಜೆಂಡಾ ಇದೆ ಎಂದರು ಕಿರಣ್ ಬೇಡಿ. ಅಲ್ಲಿಗೆ ಸಿಬಲ್ ಯೋಜನೆ ಪೂರ್ಣಗೊಂಡಿತ್ತು. ಬಾಬಾ ತಣ್ಣಗಾಗಿದ್ದರು. ಅಣ್ಣಾ ಟೀಮ್ ಅವರಿಂದ ಬೇರ್ಪಟ್ಟಿತ್ತು.

ಈಗ ಅಣ್ಣಾ ತಂಡ ತಿರುಗಿಬಿತ್ತು. ದೇಶವೆಲ್ಲ ಈ ಬಾರಿ ಪ್ರತಿಕ್ರಿಯೆಗೆ ಸಜ್ಜಾಯ್ತು. ಲಕ್ಷಲಕ್ಷ ಜನ ಧಾವಿಸಿಬಂದರು. ತೀರಾ ಅಸ್ಸಾಮ್‌ನಲ್ಲೂ ಕಾಲೇಜಿಂದ ಹುಡುಗರು ಬೀದಿಗಿಳಿದರು. ಅರವಿಂದ ಕೇಜ್ರಿವಾಲ್ ದಿನ ಬೆಳಗಾಗುವುದರೊಳಗೆ ಖ್ಯಾತರಾಗಿಬಿಟ್ಟರು. ಇನ್ನೇನು ಗೆಲುವು ಹತ್ತಿರವಿದೆ ಎಂದಾಗ ಮತ್ತೆ ಸಿಬಲ್ ಎಂಟ್ರಿಯಾಯ್ತು. ಅಣ್ಣಾ ತಂಡದೊಂದಿಗೆ ಗುರುತಿಸಿಕೊಂಡಿದ್ದ ಸ್ವಾಮಿ ಅಗ್ನಿವೇಶ್ ಸಿಬಲ್‌ರ ಏಜೆಂಟ್ ಎನ್ನುವುದು ಬೆಳಕಿಗೆ ಬಂತು. ಕಿರಣ್ ಬೇಡಿ ಕಾರ್ಯಕ್ರಮವೊಂದಕ್ಕೆ ಎಷ್ಟು ದುಡ್ಡು ಪಡೆಯುತ್ತಾರೆ ಎನ್ನುವ ಚರ್ಚೆ ಶುರುವಾಯ್ತು. ಕೆಜ್ರೀವಾಲ್ ವೇತನ ಬಾಕಿಯ ಕುರಿತಾಗಿ ಮಹತ್ವದ ಸುದ್ದಿಗಳು ಬೀದಿಗೆ ಬಿದ್ದವು. ಅಣ್ಣಾ ಟೀಮ್ ಒಳಗಿಂದೊಳಗೇ ಕಳಾಹೀನವಾಯಿತು. ಆದರೆ ಜನರ ಉತ್ಸಾಹ ಕುಂದಲಿಲ್ಲ. ಎಲ್ಲರ ಆಕ್ರೋಶ ತನ್ನ ವಿರುದ್ಧ ಎಂದರಿತ ಕೇಂದ್ರ ಸರ್ಕಾರ, ಭ್ರಷ್ಟಾಚರದಲ್ಲಿ ಎಲ್ಲ ಪಕ್ಷಗಳೂ ಒಂದೇ ಎಂದು ಬಿಂಬಿಸುವ ಪ್ರಯತ್ನಕ್ಕೆ ಕೈಹಾಕಿತು. ಬಿಜೆಪಿ ಕಾಂಗ್ರೆಸ್ಸಿನ ತೆಕ್ಕೆಗೆ ಬಿತ್ತು. ಕರ್ನಾಟಕದ ಬಿಜೆಪಿಯ ಭ್ರಷ್ಟರು, ಈ ಭ್ರಷ್ಟರಿಂದ ಹಣ ಪಡೆದು ತೇಜೋಹೀನವಾದ ಹೈಕಮಾಂಡು ಯಾರೂ ಮಾತಡುವ ಗೋಜಿಗೆ ಹೋಗದೆ ಸುಮ್ಮನುಳಿದುಬಿಟ್ಟರು. ಅಲ್ಲಿಗೆ ಕಾಂಗ್ರೆಸ್ಸಿನ ಯೋಜನೆ ಯಶಸ್ವಿಯಾಗಿತ್ತು. ತನಗಾದ ನಷ್ಟ ಬಿಜೆಪಿಗೆ ಲಾಭವಾಗದಂತೆ ಅದು ನೋಡಿಕೊಂಡಿತು.

ಅತ್ತ ಜನಲೋಕಪಾಲ್‌ಗೆ ಪ್ರತಿಯಾಗಿ ಲೋಕ್‌ಪಾಲ್ ಅನ್ನು ಸರ್ಕಾರ ಜಾರಿಗೆ ತಂತು. ಅಣ್ಣಾ ಟೀಮ್ ಜನಲೋಕಪಾಲ್ ಬೇಕೇಬೇಕೆಂಬ ಹಟಕ್ಕೆ ಬಿತ್ತು. ತಗೊಳ್ಳಿ. ಕಾಂಗ್ರೆಸ್ಸಿಗೆ ನಿರಾಳ. ಭ್ರಷ್ಟಾಚಾರ, ಕಪ್ಪುಹಣದ ಚರ್ಚೆಗಳು ನಿಂತುಹೋಗಿ ಲೋಕಪಾಲ್, ಜನಲೋಕಪಾಲ್ ಚರ್ಚೆ ಶುರುವಾಯ್ತು. ಜನಲೋಕಪಾಲದಲ್ಲಿ ಪ್ರಧಾನಿಯೂ ಪ್ರಶ್ನಾರ್ಹರೆಂಬ ಮಾತು ಕಾಂಗ್ರೆಸ್ಸನ್ನಿರಲಿ, ಬಿಜೆಪಿಯನ್ನೂ ಕೆರಳಿಸಿತು. ಸಂಸತ್ತನ್ನು ಹೊರಗಿನವರೊಬ್ಬರು ಪ್ರಶ್ನಿಸುವ ವ್ಯವಸ್ಥೆ ಯಾರೊಬ್ಬರಿಗೂ ಹಿಡಿಸಲಿಲ್ಲ. ಎನ್ನುವಲ್ಲಿಗೆ, ಅಣ್ಣಾ ಹಜಾರೆ ನಿಂತ ನೆಲ ಕಳಚಿಹೋಗಿತ್ತು. ಬಿಜೆಪಿಯೂ ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಲ್ಲಬೇಕೋ ಬೇಡವೋ ಎನ್ನುವ ದ್ವಂದ್ವಕ್ಕೆ ಬಿದ್ದಿತ್ತು. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಕಪ್ಪು ಹಣದ ಸುದ್ದಿ ತೆಗೆದು ಅದನ್ನು ಮರಳಿ ತರುವ ಆಧಾರದ ಮೇಲೇ ಬಿಜೆಪಿ ಹೋರಾಟ ನಡೆಸಿತ್ತು. ಈಗ ಅದು ಮೊದಲಿಗಿಂತ ಹೆಚ್ಚು ಆತುಕೊಂಡು ಅದನ್ನು ಮರಳಿ ತರಲು ಕಾದಾಡಬೇಕಿತ್ತು. ಅಷ್ಟು ಬಿಡಿ. ಸೋನಿಯಾ ಹಣ ವಿದೇಶದಲ್ಲಿದೆ ಎಂದು ಹೇಳಿದ್ದು ತಪ್ಪಾಯ್ತೆಂದು ಆಕೆಗೆ ಅಡ್ವಾಣಿ ಪತ್ರ ಬರೆದು, ಕಾರ್ಯಕರ್ತರ ಆತ್ಮಸ್ಥೈರ್ಯ ಕೊಂದುಬಿಟ್ಟರು. ಈ ವೇಳೆಗೆ ವಿದೇಶ ಪ್ರವಾಸಕ್ಕೆ ಹೋಗಿ ತನ್ನ ಕಪ್ಪು ಹಣವನ್ನು ಸೋನಿಯಾ ಚೀನಾಕ್ಕೆ ವರ್ಗಾಯಿಸಿದರೆಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ್ದನ್ನು ಹಿಡಿದೆಳೆಯಬೇಕಿದ್ದ ಬಿಜೆಪಿಗೆ ಅಡ್ವಾಣಿಯ ಈ ಪತ್ರವೇ ಮುಳುವಾಯಿತು.

ಅಣ್ಣಾ ಉಪವಾಸ ಮುಗಿಯಿತು. ಈಗಿಂದೀಗಲೇ ಜನಲೋಕಪಾಲ್ ಎಂದವರು ಎಲೆಕ್ಷನ್‌ಗೆ ಮುಂಚಿತವಾಗಿ ಆದರೆ ಸಾಕು ಎನ್ನುವಲ್ಲಿಗೆ ಬಂದರು. ಜನ ಲೋಕಪಾಲ್ ಜಾರಿಗೆ ತಂದ ಬಿಜೆಪಿ ಉತ್ತರಾಖಂಡದಲ್ಲಿ ಸೋತಿತು. ಅದರ ಹೆಸರನ್ನೂ ಎತ್ತದಿದ್ದ ಸಮಾಜವಾದಿ ಪಾರ್ಟಿ ಉತ್ತರಪ್ರದೇಶದಲ್ಲಿ ಗೆದ್ದಿತು. ಅಂದರೆ, ಅಣ್ಣಾ ಮತವಾಗಿ ಪರಿವರ್ತನೆಯಾಗಿರಲಿಲ್ಲ! ಎಲ್ಲ ರಾಜಕೀಯ ಪಕ್ಷಗಳೂ ನಿರಾಳವಾದವು. ಅಣ್ಣಾ ಟೀಮ್ ಹೈರಾಣಾಯಿತು. ಕಾಂಗ್ರೆಸ್ಸು ರಾಮದೇವ ಬಾಬಾರನ್ನು ಬಡಿದಾಗ ಬೀಗಿದ್ದ ಕೆಜ್ರಿವಾಲ್ ಹರಿದ್ವಾರ ಯೋಗಪೀಠಕ್ಕೆ ಹೋಗಿ ಬಾಬಾರೊಡನೆ ವೇದಿಕೆ ಹಂಚಿಕೊಂಡರು. ಕಿರಣ್ ಬೇಡಿಯಂತು ತಾನೇ ಹೇಳಿದ್ದ ಹಳೆಯದನ್ನೆಲ್ಲ ಮರೆತು ಒಗ್ಗಟ್ಟು ಮುರಿಯುವವರ ಸಂಚಿಗೆ ಬಲಿಯಾಗಬಾರದೆಂದು ಹರಿದ್ವಾರದಲ್ಲಿ ಭಾಷಣ ಬಿಗಿದುಬಿಟ್ಟರು. ರಾಮದೇವ ಬಾಬಾ ವರ್ಷದಿಂದಲೇ ಹೊಸ ಆಂದೋಲನವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅವರ ಸುತ್ತಲಿನ ತಂಡ ಹೊಚ್ಚ ಹೊಸತು. ಅವರ ಸುತ್ತಮುತ್ತ ಕೆ.ಎನ್.ಗೋವಿಂದಾಚಾರ್ಯ ಕಾಣುತ್ತಿಲ್ಲ, ಸುಬ್ರಹ್ಮಣಿಯನ್ ಸ್ವಾಮಿ ನಾಪತ್ತೆಯಾಗಿದ್ದಾರೆ. ಆರೆಸ್ಸೆಸ್ಸಿನ ಮುಖಂಡರು ದೂರ ಉಳಿದಿದ್ದಾರೆ. ಬಹುಶಃ ಇವರು ಬಂದರೆ ಅಂದೋಲನ ವ್ಯಾಪಕವಾಗಿ ಹರಡಲಾರದೆಂಬ ಹೆದರಿಕೆ ಬಾಬಾರಿಗೆ ಇರಬಹುದು.

ಹೇಗೇ ಇರಲಿ. ಜೂನ್ ಮೂರಕ್ಕೆ ಜಂತರ್‌ಮಂತರ್‌ನಲ್ಲಿ ಬಾಬಾ ಅನುಯಾಯಿಗಳು ಸೇರಲಿದ್ದಾರೆ. ಬಹುಶಃ ಅವತ್ತು ಅಣ್ಣಾ ಹಜಾರೆಯವರೂ ಅಲ್ಲಿಗೆ ಬಂದಾರು. ಇಂದಿನ ಟ್ರೆಂಡ್ ನೋಡಿದರೆ ಕೇಜ್ರಿವಾಲ್, ಕಿರಣ್ ಬೇಡಿಯೂ ವೇದಿಕೆಯ ಮೇಲಿದ್ದರೆ ಅಚ್ಚರಿಯಿಲ್ಲ. ಅಣ್ಣಾ ತಂಡಕ್ಕೆ ಈಗ ಜನಬಲ ಕಡಿಮೆಯಾಗಿದೆ. ವಿರೋಧಿಗಳು ಹೆಚ್ಚಾಗಿದ್ದಾರೆ. ಬಾಬಾ ಮಾತ್ರ ಹಳೆಯದರಿಂದ ಪಾಠ ಕಲಿತು ಸಂಚು ರೂಪಿಸಿದ್ದಾರೆ. ಅಣ್ಣಾಗೆ ಜನಲೋಕಪಾಲ್ ಬೆಕು, ಬಾಬಾಗೆ ಕಪ್ಪುಹಣ! ಇವರಿಬ್ಬರನ್ನು ಬೇರ್ಪಡಿಸಿ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮಾತ್ರ ಹೊಂಚುಹಾಕುತ್ತಲೆ ಕುಳಿತಿದೆ.

ಉದಯ ಸೂರ್ಯನ ನಾಡಲ್ಲಿ ಭಾರತೀಯತೆಯ ಹೊಂಬೆಳಕು
ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ

- ಚಕ್ರವರ್ತಿ ಸೂಲಿಬೆಲೆ

‘ಸರ್, ನನಗೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಬಿಹಾರಗಳೆಲ್ಲಗೊತ್ತು. ಆದರೆ ನಿಮ್ಮ ಜನರಿಗೆ ಅರುಣಾಚಲವೇ ಗೊತ್ತಿಲ್ವಲ್ಲ, ನಾವು ಅಲ್ಲಿಗೆ ಹೋದರೆ ನಮ್ಮನ್ನು ಗುರುತಿಸೋದೇ ಇಲ್ವಲ್ಲ, ಹೀಗೇಕೆ?’ ಇಟಾನಗರದ ವಿವೇಕಾನಂದ ಕೇಂದ್ರ ಶಾಲೆಯ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬ ಕೇಳಿದ ಪ್ರಶ್ನೆ ಇದು. ನಾನು ಒಂದಷ್ಟು ಹೊತ್ತು ತಡಬಡಾಯಿಸಿದೆ. ಅಷ್ಟರಲ್ಲಿ ಹುಡುಗಿಯೊಬ್ಬಳು ಎದ್ದು ನಿಂತು, ‘ನಿಮ್ಮ ಬೆಂಗಳೂರಿನಲ್ಲಿಯೇ ನಮ್ಮನ್ನು ನೋಡಿ ಜನ ಚೈನೀಸ್ ಅಂತಾರೆ. ಯಾಕೆಂದು ಕೇಳಿದರೆ ನೋಡಲಿಕ್ಕೆ ಹಾಗೇ ಇದ್ದೀರಲ್ಲ ಅಂದುಬಿಡ್ತಾರೆ. ನೀವು ನೋಡಲಿಕ್ಕೆ ಥೇಟು ಪಾಕಿಸ್ತಾನದವರ ಥರ ಕಾಣ್ತೀರಲ್ಲ ಅಂದರೆ ಕೋಪಿಸ್ಕೋತಾರೆ. ನಿಜ ಹೇಳಿ ಸರ್, ಅರುಣಾಚಲ ನಿಮಗೆ ಬೇಡವಾ? ನಾವೆಲ್ಲ ಚೀನಾಕ್ಕೆ ಸೇರಿ ಹೋದರೆ ನಿಮಗೆ ಖುಷೀನಾ?’ ಅಂತ ತನ್ನ ಪುಟ್ಟ ಕಂಗಳಿಂದ ನನ್ನನ್ನೇ ನೋಡಿದಳು. ನಾನೇ ಸ್ವಲ್ಪ ಕಣ್ತಪ್ಪಿಸುವ ಯತ್ನ ಮಾಡಿದೆ.
ನನ್ನ ಯೋಚನೆಗಳೆಲ್ಲ ಬುಡಮೇಲಾಗಿದ್ದವು. ಅರುಣಾಚಲದ ಜನ ಚೈನಾಕ್ಕೆ ಓಡಿಹೋಗಲು ತುದಿಗಾಲಲ್ಲಿ ನಿಂತಿದ್ದಾರೆ, ಬಿಟ್ಟರೆ ಸಾಕೆಂದು ಕಾಯುತ್ತಿದ್ದಾರೆ, ಪ್ರತಿನಿತ್ಯ ಟೀವಿಯಲ್ಲಿ ಚೈನಾದ ಚಾನೆಲ್ಲುಗಳನ್ನು ನೋಡಿ ಆನಂದಿಸುತ್ತಾರೆ ಎಂದುಕೊಂಡಿದ್ದ ನನಗೆ ಆಘಾತ ಕಾದಿತ್ತು. ನಾನು ದಕ್ಷಿಣ ಅರುಣಾಚಲದ ಅನೇಕ ಜಿಲ್ಲೆಗಳನ್ನು, ಹಳ್ಳಿಗಳನ್ನು, ಕೊನೆಗೆ ಮನೆಗಳನ್ನೂ ಹೊಕ್ಕಿ ಬಂದೆ. ನನ್ನೊಡನೆ ಮಾತನಾಡಿದ ಪ್ರತಿಯೊಬ್ಬರೂ ನನ್ನಷ್ಟೇ, ಸರಿಯಾಗಿ ಹೇಳಬೇಕೆಂದರೆ ನನಗಿಂತ ಒಂದು ಗುಲಗಂಜಿ ಹೆಚ್ಚೇ ಭಾರತೀಯರಾಗಿ ಕಂಡರು!
ಅರುಣಾಚಲ ಚೀನಾದೊಂದಿಗೆ ಬದುಕಲಾರದೆಂಬ ತಥ್ಯ ಕಳೆದ ಒಂದೂವರೆ ದಶಕದಿಂದೀಚೆಗೆ ಪ್ರತಿಯೊಬ್ಬ ಅರುಣಾಚಲೀಯನಿಗೂ ದೃಢವಾಗುತ್ತ ಬಂದಿದೆ. ಆತನೀಗ ತನ್ನ ಮೂಲವನ್ನು ಭಾರತದೊಳಗೆ ಅರಸುವ ಪ್ರಯತ್ನ ಹೆಚ್ಚಿಸುತ್ತಿದ್ದಾನೆ. ಅದಕ್ಕೆ ಸೂಕ್ತ ಪುರಾವೆಗಳು ದಕ್ಕಿದಾಗಲೆಲ್ಲ ಸಂತೋಷಿಸುತ್ತಾನೆ. ಚೈನಾದ ವಿರುದ್ಧ ತನ್ನ ಭಾವನೆಗಳನ್ನು ತೀವ್ರಗೊಳಿಸಿಕೊಳ್ಳುತ್ತಾನೆ.
ಹಾಗೆ ನೋಡಿದರೆ ಅರುಣಾಚಲವೆನ್ನುವ ಹೆಸರೇ ಅದನ್ನು ಭಾರತದೊಂದಿಗೆ ಬೆಸೆಯುವಂತಹ ಮೊದಲ ಅಂಶ. ಅದು ಉದಯ ಸೂರ್ಯನ ನಾಡು. ಬೆಳಿಗ್ಗೆ ನಾಲ್ಕಕ್ಕೆಲ್ಲ ಅಲ್ಲಿ ಸೂರ್ಯನ ಬೆಳಕು ಹರಡಿಕೊಂಡುಬಿಡುತ್ತೆ. ಸಂಜೆ ಐದಕ್ಕೆ ಮುನ್ನ ಕತ್ತಲೂ ಆವರಿಸಿಕೊಂಡುಬಿಡುತ್ತದೆ. ಅರುಣೋದಯ ಮೊದಲು ಇಲ್ಲಿಯೇ ಆಗುವುದರಿಂದ ಇದು ಅರುಣಾಚಲ. ರಾಮಾಯಣ, ಮಹಾಭಾರತದ ಕಾಲದಲ್ಲೂ ಅರುಣಾಚಲದ ಉಲ್ಲೇಖವನ್ನು ಪಂಡಿತರು ಗುರುತಿಸಿದ್ದಾರೆ. ಕೃಷ್ಣನ ಸತಿ ರುಕ್ಮಿಣಿ ಅರುಣಾಚಲದವಳೇ ಎನ್ನುವುದಕ್ಕೆ ಪುರಾವೆಗಳಿವೆ. ಪರಶುರಾಮನ ಮೂಲಸ್ಥಾನವೂ ಇದೇ ಎನ್ನಲಾಗುತ್ತದೆ. ಇಲ್ಲಿನ ಬುಡಕಟ್ಟು ಜನಾಂಗದವರು ಕೈಲಿ ಹಿಡಿಯುವ ‘ದಾವು’ ಮತ್ತು ಪರಶುರಾಮನ ಕೈಯ ‘ಕೊಡಲಿ’ ಎರಡನ್ನೂ ಸಮೀಕರಿಸಿ ನೋಡಿದಾಗ ಇದು ನಿಜವಿರಬಹುದು ಎನ್ನಿಸುತ್ತದೆ. ಅಷ್ಟೇ ಅಲ್ಲ, ಇಡಿಯ ಅರುಣಾಚಲದಲ್ಲಿ ವ್ಯಾಪಿಸಿಕೊಂಡಿರುವ ೨೬ ಥರದ ಬುಡಕಟ್ಟುಗಳ ಆಚರಣೆ, ಬದುಕಿನ ರೀತಿ ನೀತಿಗಳು ವೇದಕಾಲದ ಜೀವನ ಪದ್ಧತಿಗೆ ಅತ್ಯಂತ ಹತ್ತಿರದ್ದೆಂಬುದನ್ನು ನೋಡಿದಾಗಲಂತೂ ಅರುಣಾಚಲದ ಬುಡ ಭಾರತದೊಳಕ್ಕೆ ಎಷ್ಟು ಭದ್ರವಾಗಿದೆಯೆಂಬುದರಲ್ಲಿ ಎಳ್ಳಷ್ಟೂ ಅನುಮಾನವಿರದು.
ಇಷ್ಟಕ್ಕೂ ಅರುಣಾಚಲ ಕರ್ನಾಟಕದ ಅರ್ಧಭಾಗದಷ್ಟು ಭೂಪ್ರದೇಶ ಹೊಂದಿದ್ದು, ಜನಸಂಖ್ಯೆಯಲ್ಲಿ ನಮ್ಮ ಒಟ್ಟು ಜನಸಂಖ್ಯೆಯ ಮೂರು ಪ್ರತಿಶಥದಷ್ಟು ಮಾತ್ರ ಇದೆ. ಅಂದಾಜು ಕಿಲೋಮೀಟರಿಗೆ ಹದಿನೈದು ಜನ! ನೈಸರ್ಗಿಕವಾಗಿ ಅತ್ಯಂತ ಸಿರಿವಂತ ಭೂಮಿ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವಷ್ಟರಲ್ಲಿ ಅದೆಷ್ಟು ನದಿಗಳು ನಿಮ್ಮನ್ನು ಅಡ್ಡಗಟ್ಟುತ್ತವೆಯೋ ಲೆಕ್ಕವಿಟ್ಟು ಸುಸ್ತಾಗುತ್ತೀರಿ. ಹೀಗಾಗಿ ಇಲ್ಲಿನ ಬಹುತೇಕ ಜಿಲ್ಲೆಗಳು ನದಿಗಳ ಹೆಸರಿಂದಲೇ ಗುರುತಿಸಲ್ಪಡುತ್ತವೆ. ಇಲ್ಲಿನ ಪ್ರತಿ ಜಿಲ್ಲೆಯೂ ಒಂದೊಂದು ಬುಡಕಟ್ಟಿನವರಿಂದ ತುಂಬಿಹೋಗಿದೆ. ಅವರ ವೇಷ ಭೂಷಣ, ಆಚಾರ ವಿಚಾರಗಳೆಲ್ಲವೂ ವಿಶಿಷ್ಟವಾದವು. ಪ್ರತಿಯೊಂದು ಪಂಗಡದವರ ಭಾಷೆ ಕೂಡ ಭಿನ್ನವೇ. ಆದರೂ ವಿಚಿತ್ರವೆನಿಸುವಂತೆ ಇಲ್ಲಿನ ಮೂಲೆಮೂಲೆಯಲ್ಲೂ ಜನ ಹಿಂದಿ ಮಾತನಾಡುತ್ತಾರೆ. ಚಿಕ್ಕ ಮಗುವಿರಲಿ, ವಯಸ್ಸಾದ ಮುದುಕರಿರಲಿ ಹಿಂದಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಹೀಗಾಗಿ ಅರುಣಾಚಲದುದ್ದಕ್ಕೂ ತಿರುಗಾಡುವಾಗ ನಿಮಗೆ ಭಾಷೆಯ ಸಮಸ್ಯೆ ಎದುರಾಗದು. ಅಷ್ಟೇ ಅಲ್ಲ, ಇಡಿಯ ರಾಜ್ಯವನ್ನು ರಾಷ್ಟ್ರದೊಂದಿಗೆ ಬೆಸೆಯುವಲ್ಲಿ ಅದರ ಪಾತ್ರ ಹೇಳತೀರದು.
ಈಶಾನ್ಯದ ಏಳು ರಾಜ್ಯಗಳಲ್ಲಿ ಅರುಣಾಚಲದಷ್ಟು ಭಾರತದೊಂದಿಗೆ ಏಕಾತ್ಮಗೊಂಡ ಮತ್ತೊಂದು ರಾಜ್ಯವಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಅಸ್ಸಾಮ್ ಎಲ್ಲ ಬಗೆಯ ಸವಲತ್ತು ಪಡೆದುಕೊಂಡೂ ಭಿನ್ನಭಿನ್ನ ರಾಗ ಹಾಡುತ್ತಿರುತ್ತದೆ. ಅರುಣಾಚಲ ಹಾಗಲ್ಲ. ಈ ಅಸ್ಮಿತೆಯನ್ನು ಹಾಳುಗೈಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಈಸ್ಟ್ ಇಂಡಿಯಾ ಕಂಪೆನಿ ಭಾರತವನ್ನು ಆಳುವಾಗಲೇ ಏಳು ರಾಜ್ಯಗಳನ್ನು ಕ್ರಿಸ್ತನಿಗೆ ಉಡುಗೊರೆಯಾಗಿ ಕೊಡಬೇಕೆಂದು ಅವರು ನಿರ್ಧರಿಸಿಯಾಗಿತ್ತು. ಹೀಗಾಗಿ ಭಾರತದ ಇತರ ರಾಜ್ಯಗಳಿಂದ ಈಶಾನ್ಯ ರಾಜ್ಯಗ್ಳನ್ನು ಬೇರ್ಪಡಿಸಿಯೇ ಇಟ್ಟಿದ್ದರು. ಸ್ವಾತಂತ್ರ್ಯ ಬಂದ ಮೇಲೂ ನಮ್ಮ ಸರ್ಕಾರಗಳು, ಸಂಘಟನೆಗಳು ಅತ್ತ ಗಮನ ಕೊಡಲಿಲ್ಲ. ದೇವರ ಲೀಲೆಯೇ ಇರಬೇಕು, ೧೯೬೨ರಲ್ಲಿ ಚೀನಾ ಆಕ್ರಮಣವೆಸಗಿತು. ‘ಹಿಂದೀ ಚೀನೀ ಭಾಯಿ ಭಾಯಿ’ ಎಂದು ಜಪಿಸುತ್ತಲೇ ಇದ್ದ ನೆಹರೂ ಬೆಚ್ಚಿಬಿದ್ದರು. ತಯಾರಿ ಮಾಡಿಕೊಳ್ಳುವ ಮೊದಲೇ ದಾಳಿಗೆ ಸಜ್ಜಾಗಿದ್ದೇವೆಂದು ಘೋಷಿಸಿಬಿಟ್ಟರು. ಚೀನಾದ ಕೆಂಪು ಸೇನೆ ಭಾರತದೊಳಕ್ಕೆ ನುಗ್ಗಿತು. ಕೆಲವೇ ದಿನಗಳಲ್ಲಿ ನಮ್ಮ ಸೇನೆಯ ಪ್ರತಿರೋಧವನ್ನು ಮಣಿಸಿ ಗೆಲುವು ಸಾಸಿಬಿಟ್ಟಿತು. ಅರುಣಾಚಲದ ಉತ್ತರ ಭಾಗವನ್ನು ವಶಪಡಿಸಿಕೊಂಡುಬಿಟ್ಟಿತು. ಹಿಂದಿನ ಎಲ್ಲ ಒಪ್ಪಂದಗಳನ್ನೂ ಕ್ಕರಿಸಿ ಮುನ್ನಡೆದೇ ಬಿಟ್ಟಿತು. ಮಾವೋತ್ಸೆ ತುಂಗ ಪೂರ್ಣ ಭಾರತವನ್ನು ವಶಪಡಿಸಿಕೊಂಡು ಅರ್ಧದಷ್ಟು ಜನರನ್ನು ನಾಶಗೈದು, ಉಳಿದವರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವ ಕನಸು ಕಾಣತೊಡಗಿದ. ರಷ್ಯಾ ಭಾರತದ ಸಹಾಯಕ್ಕೆ ಬರಲು ನಿರಾಕರಿಸಿತು. ‘ನೀವು ನಮಗೆ ಮಿತ್ರರಿರಬಹುದು. ಚೀನಾ ನಮಗೆ ಸಹೋದರನಂತೆ’ ಎಂದುಬಿಟ್ಟಿತು. ನೆಹರೂ ಒಲ್ಲದ ಮನಸ್ಸಿನಿಂದಲೇ ಅಮೆರಿಕಾದ ಎದುರು ನಿಂತರು. ಅಮೆರಿಕಾ ಅಧ್ಯಕ್ಷರ ಗುಡುಗಿನಂಥ ಮಾತು, ಮಿಂಚಿನಂತಹ ಕಾರ್ಯಾಚರಣೆ ಚೀನಾಕ್ಕೆ ಗಾಬರಿ ಹುಟ್ಟಿಸಿತು. ಚೀನಾ ಮುಂದೆ ಬರುವುದನ್ನು ತಡೆದು, ಈವರೆಗೆ ಪಡಕೊಂಡಿದ್ದ ಪ್ರದೇಶಗಳನ್ನು ಪಟ್ಟಾಗಿ ಹಿಡಕೊಂಡಿತು. ನಮ್ಮ ನಾಯಕರಿಗೆ ಇಷ್ಟಾದರೂ ಸಾಕಿತ್ತು. ಗೆದ್ದೆವೆಂದು ಬೀಗುತ್ತ ತಮ್ಮವರ ಮುಂದೆ ನಡೆದರು. ಆದರೆ ಅರುಣಾಚಲದ ಜನರ ಆತ್ಮಸ್ಥೈರ್ಯ ಕುಸಿದುಹೋಗಿತ್ತು. ಭಾರತದ ಸೈನಿಕರು ಕಠಿಣ ಸಮಯದಲ್ಲಿ ಕೈಕೊಟ್ಟು ಓಡಿಹೋಗುತ್ತಾರೆಂಬ ಚಿತ್ರಣ ಅವರ ಮನಸ್ಸಿನಲ್ಲಿ ನಿಂತುಬಿಟ್ಟಿತು. ಅಲಾಂಗ್ ಜಿಲ್ಲೆಯಲ್ಲಿ ಮುದುಕಿಯೊಬ್ಬಳು ಹೇಳಿದ್ದು ಈಗಲೂ ಗುಂಯ್‌ಗುಡುತ್ತಿದೆ, ‘ನಮ್ಮ ಸೈನಿಕರು ನಮ್ಮನ್ನು ಸಂಕಷ್ಟದಲ್ಲಿ ತಳ್ಳಿ ಓಡಿಬಿಟ್ಟರು.ಆ ಸೈನಿಕರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು’
ಇತ್ತ ಭಾರತೀಯರ ಆತ್ಮಸ್ಥೈರ್ಯವೂ ಉಡುಗಿಹೋಗಿತ್ತು. ಮುಂದೇನು ಎಂಬ ಚಿಂತೆ ಕಾಡುತ್ತಿದ್ದಾಗ, ಗಾಂಧೀಜಿಯ ಅನುಯಾಯಿಗಳೊಂದಷ್ಟು ಜನ ಅರುಣಾಚಲದತ್ತ ನಡೆದರು. ಭಾರತದ ಇತರೆ ಜನಗಳು ಅರುಣಾಚಲಕ್ಕೆ ಬರುತ್ತಾರೆಂಬ ಭರವಸೆಯನ್ನು ಅಲ್ಲಿಯ ಜನರಲ್ಲಿ   ಮೂಡಿಸುವ ಪುಟ್ಟ ಪ್ರಯತ್ನವದು. ಅದೇ ವೇಳೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಶುರುವಾದವು. ವನವಾಸಿ ಕಲ್ಯಾಣ ಆಶ್ರಮ, ಅರುಣಾಚಲ ವಿಕಾಸ ಪರಿಷತ್ತಿನ ಹೆಸರಿನಲ್ಲಿ ನೆಲೆನಿಲ್ಲುವ ಯತ್ನ ಮಾಡಿತು. ಇಷ್ಟು ಹೊತ್ತಿಗಾಗಲೇ ಪಕ್ಕದ ನಾಗಾಲ್ಯಾಂಡು ಕ್ರಿಸ್ತನ ನಾಡಾಗಿ ಪರಿವರ್ತನೆ ಹೊಂದಿತತು. ಮತಾಂತರ ಹೊಂದಿ, ರಾಷ್ಟ್ರವಿರೋ ಕೃತ್ಯಗಳಿಗೆ ಪ್ರೇರಣೆ ಪಡೆದವರ ಉಪಟಳ ಮಿತಿ ಮೀರಿತ್ತು.ಇಡಿಯ ನಾಗಾಲ್ಯಾಂಡ್ ಭೀತಿಯ ರಾಜ್ಯವಾಯ್ತು. ಬೆಚ್ಚಿಬಿದ್ದ ಅರುಣಾಚಲ ಸರ್ಕಾರ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವನ್ನು, ರಾಮಕೃಷ್ಣ ಆಶ್ರಮವನ್ನು ರಾಜ್ಯಕ್ಕೆ ಬರುವಂತೆ ಕೇಳಿಕೊಂಡಿತು.
ಬದಲಾವಣೆಯ ಗಾಳಿ ಬೀಸತೊಡಗಿತು. ಎಲ್ಲ ತೊಂದರೆಗಳ ನಡುವೆ ಶುರುವಾದ ಆಶ್ರಮ ಮತ್ತು ಕೇಂದ್ರದ ಶಾಲೆಗಳು ಕಳೆದ ೩೫ ವರ್ಷಗಳಲ್ಲಿ ಹೊಸದೊಂದು ಶಿಕ್ಷಿತ, ದೇಶಭಕ್ತ ಪೀಳಿಗೆಯನ್ನು ಹುಟ್ಟುಹಾಕಿವೆ. ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ. ಮತ್ತೊಂದೆಡೆ, ಆದರೆ ಅರುಣಾಚಲವನ್ನು ಆದಷ್ಟು ಬೇಗ ಮತಾಂತರಿಸುವ ತರಾತುರಿಗೆ ಬಿದ್ದ ವ್ಯಾಟಿಕನ್ ತನ್ನ ಅಷ್ಟೂ ದೃಷ್ಟಿಯನ್ನು ಅದರತ್ತ ಕೇಂದ್ರೀಕರಿಸಿದೆ. ‘ನಿಮಗೆ ಪೂಜಿಸಲೊಂದು ದೇವರ ಮೂರ್ತಿಯಿಲ್ಲ, ಒಂದು ಪ್ರಾರ್ಥನಾ ಮಂದಿರವಿಲ್ಲ’ ಎಂದು ಪದೇ ಪದೇ ಹೇಳುತ್ತ ಸಮುದಾಯಗಳ ಮುಖಂಡರನ್ನು ಚರ್ಚಿನತ್ತ ಸೆಳೆದು ತರಲಾಗುತ್ತದೆ. ಆಮೇಲೆ ಅವರಿಗೆ ಕುಡಿಸಿ, ತಿನ್ನಿಸಿ,ಕತ್ತಿಗೊಂದು ಶಿಲುಬೆ ತೊಡಿಸಲಾಗುತ್ತದೆ. ಕಳೆದ ೬೫ ವರ್ಷಗಳಿಂದ ಇದೇ ಅವರ ಕಾಯಕವಾಗಿದೆ.
ಇದಕ್ಕೆ ಪ್ರತಿಯಾಗ ಅರುಣಾಚಲ ವಿಕಾಸ ಪರಿಷತ್ತಿನ ಕಾರ್ಯಗಳು ಅನನ್ಯವಾದುದು. ಆಯ್ದ ಬುಡಕಟ್ಟಿನ ಹಿರಿಯರನ್ನು ಪರಿಷತ್ತು ದೇಶದ ಇತರ ರಾಜ್ಯಗಳಿಗೆ ಕರೆದೊಯ್ದಿತು. ಇಲ್ಲಿನ ರೀತಿನೀತಿಗಳನ್ನು ಕಂಡ ಅವರಿಗೆ ತಾವೂ ಹೀಗೇ ಬದುಕಬೇಕನ್ನಿಸಿತು. ಮರಳಿ ಅರುಣಾಚಲಕ್ಕೆ ಬಂದೊಡನೆ ಅಲ್ಲೊಂದು ಸಭೆಯಾಯ್ತು. ಹತ್ತಾರು ವಿಚಾರ ಸಂಕಿರಣಗಳು ನಡೆದವು. ಅವರು ನಿತ್ಯ ಪೂಜಿಸುವ ಸೂರ್ಯ ಚಂದ್ರರ (ಅವರ ಭಾಷೆಯಲ್ಲಿ ಡೋನ್ಯೊ- ಪೋಲೋ) ಚಿತ್ರ ಬಿಡಿಸಲಾಯ್ತು. ಕೇರಿಗೊಂದು ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿತು. ಈಗ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡವರೂ ದೇಸೀ ಶ್ರದ್ಧೆಯ ಹಬ್ಬಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿವರ್ತನೆಗೆ ತಯಾರಾಗುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಅರುಣಾಚಲವನ್ನು ಮುಷ್ಟಿಯಲ್ಲಿ ಹಿಡಿಯುವ ಚೀನಾದ ಪ್ರಯತ್ನಗಳು ನೆಲಕಚ್ಚುತ್ತಿವೆ. ಚೀನಾದ ನಿವೃತ್ತ ಸೇನಾಕಾರಿಯೊಬ್ಬ ಇತ್ತೀಚೆಗೆ ತನ್ನ ಬ್ಲಾಗ್‌ನಲ್ಲಿ ‘ಚೀನಾ ಭಾರತದಿಂದ ಕಲಿಯಬೇಕಾದ ಪಾಠಗಳು’ ಎನ್ನುವ ಲೇಖನ ಬರೆದಿದ್ದಾರೆ. ಅದರಲ್ಲಿ ಅರುಣಾಚಲದಲ್ಲಿ ಬಲಗೊಳ್ಳುತ್ತಿರುವ ಭಾರತೀಯ ಭಾವನೆಗಳ ಕುರಿತಂತೆ ಅಚ್ಚರಿ, ಗಾಬರಿ ಎರಡನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದೂ ಹೊಸತಾಗಿ ಆದುದಲ್ಲ. ಅರುಣಾಚಲದ ಜನರ ಒಳಗಿದ್ದ ದೇಸೀ ಭಾವನೆಗಳು ಈಗ ಹೊರಬರುತ್ತಿವೆ ಅಷ್ಟೇ.