ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…
ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.
ಭಾರತದ ಹಿಂದಿನ ವೈಭವವನ್ನು ಹೇಳಿ- ಕೇಳಿ ಸಾಕಾಗಿಹೋಗಿದೆ. ಒಂದೋ ನಾವೀಗ ಬದುಕಬೇಕು, ಇಲ್ಲವೇ ಇಡಿಯ ರಾಷ್ಟ್ರವನ್ನು ನಿರ್ನಾಮಗೊಳ್ಳಲು ಬಿಟ್ಟು ಸಾಯಬೇಕು. ಹೋರಾಡಿ ಬದುಕುವುದಕ್ಕಿಂತ ನರಸತ್ತವರ ಹಾಗೆ ಸಾಯುವುದೇ ಸರಿ ಎಂದವರ ಬಗ್ಗೆ ಯಾರೇನೂ ಮಾಡಲಾಗದು. ಅಂಥವರು ತಮ್ಮೂರ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹಾರಾಡುವ ಉಗ್ರರ ಗುಂಡುಗಳಿಗೆ ಹೆಣವಾಗುತ್ತಾರೆ. ಹೀಗೆ ಸತ್ತಿದ್ದಕ್ಕೆ ಸರ್ಕಾರದಿಂದ ಲಕ್ಷ ಲಕ್ಷ ರುಪಾಯಿಗಳ ಭಕ್ಷೀಸು ಪಡೆಯುತ್ತಾರೆ.
ಇಂತಹ ಸಾವಿಗೆ ನಮ್ಮ ಪಾಳಿ ಎಂದು ಬಂದೀತೋ ಎಂದು ಕಾಯುತ್ತ ಕೂರೋಣವೆ?
ನಮ್ಮಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಇಂದು ಬಾಂಬ್ ದಾಳಿಗೆ ತತ್ತರಿಸಿದ ಮುಂಬಯಿಯಲ್ಲಿ ನಾಳೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ. ಬೆಳಗಿನ ಎಕ್ಸ್ ಪ್ರೆಸ್ ರೈಲು ಸರಿಯಾದ ಸಮಯಕ್ಕೆ ಬರುತ್ತದೆ. ಕಾಲಿಗೆ ಬಿಗಿಯಾಗಿ ಲೇಸ್ ಕಟ್ಟಿಸಿಕೊಂಡ ಮಗು ತನ್ನ ಶಾಲೆಗೆ ಹೊರಡುತ್ತದೆ. ತರಕಾರಿ ಮಾರಾಟ, ಹೆಂಗಸರ ಚೌಕಶಿ, ಷೇರು ಪೇಟೆ- ಎಲ್ಲವೂ ಮಾಮೂಲಿ. ಆದರೆ, ರಾಷ್ಟ್ರದ ಅಸ್ಮಿತೆಗೆ ಆದ ಗಾಯ…? ಅದು ಮಾಯುವುದು ಯಾವಾಗ?
೧೯೯೩ರಲ್ಲಿ ಆದ ಮುಂಬೈ ಸರಣಿ ಸ್ಫೋಟದ ರೂವಾರಿಗಳೇ ಇನ್ನೂ ಕೈಗೆ ಸಿಕ್ಕಿಲ್ಲ. ಸಂಸತ್ತಿನ ಮೇಲೆ ಆಕ್ರಮಣ ಮಾಡಿದವರಿಗೆ ಶಿಕ್ಷೆ ಘೋಷಣೆಯಾಗಿದ್ದರೂ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದವರೂ ಪತ್ತೆಯಾಗಿಲ್ಲ. ಕರಾಚಿಯಿಂದ ಉಗ್ರರು ಮುಂಬೈಗೆ ರಾಜಾರೋಷವಾಗಿ ಬಂದಿದ್ದಾರೆಂದರೆ, ಇಡಿಯ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದು ಕೇಳುವವರಿಲ್ಲ.
ಪಟ್ಟಿ ಸಕಷ್ಟು ಉದ್ದವಿದೆ. ರಾಷ್ಟ್ರವೆಂಬ ನ್ಯಾಯಾಲಯದಲ್ಲಿ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿದ್ದೇವೆ. ನಿಷ್ಕ್ರಿಯತೆಯ ಕಳಂಕ ನಮ್ಮನ್ನು ಮೆತ್ತಿಕೊಂಡಿದೆ. ಇನ್ನು ಬಹುಕಾಲ ಇದು ನಡೆಯಲಾರದು. ನಮ್ಮ ದಾರಿ ನಾವು ಆರಿಸಿಕೊಳ್ಳಬೇಕಿದೆ. ಒಂದೋ ಹೇಡಿಗಳಂತೆ ಸಾಯಬೇಕು, ಇಲ್ಲವೇ ದೇಶದ್ರೋಹಿಗಳನ್ನು ಹುಡುಹುಡುಕಿ ಕೊಲ್ಲಬೇಕು. ಇದು ತುರ್ತು ಪರಿಸ್ಥಿತಿ. ಹೀನ ರಕ್ಷಣಾ ಮಂತ್ರಿ ಶಿವರಾಜ ಪಾಟೀಲರನ್ನು, ಚಮಚಾಗಿರಿಗಷ್ಟೇ ಸೂಕ್ತರಾದ ಮನಮೋಹನ ಸಿಂಗರನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲವಲ್ಲ.
ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು.
ನಮ್ಮ ಪ್ರಧಾನಿಗೆ ಅಷ್ಟೊಂದು ತಾಕತ್ತಿಲ್ಲ ಬಿಡಿ. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.
ಆದರೇನು? ಅಂಥದೊಂದು ಇಚ್ಛಾಶಕ್ತಿ ಬೇಕಲ್ಲ? ಓಟಿಗಾಗಿ ಗಡ್ಡ ನೆಕ್ಕುವವರು ಬದುಕಿರುವವರೆಗೆ ಅದು ಸಾಧ್ಯವಾಗಲಾರದು. ಅವರನ್ನು ಪಕ್ಕಕ್ಕೆ ತಳ್ಳಿನಾವೇ ಮುಂದೆ ಬಂದರೆ…? ಅದು ಸರಿ. ಎದುರು ಬಂದ ಸೋಗಲಾಡಿ ಬುದ್ಧಿಜೀವಿಗಳನ್ನು, ಭಾರತೀಯತೆಯ ಬದ್ಧ ದ್ವೇಷಿಗಳನ್ನು ಹಳ್ಳದಲ್ಲಿ ಹೂತು, ರಾಷ್ಟ್ರ ರಕ್ಷಿಸುವ ಹೊಣೆ ನಮ್ಮದೇ.
ಈ ಬಾರಿ ಪ್ರತ್ಯುತ್ತರ ನೀಡಬೇಕಿರುವ ಹೊಣೆ ಇಂಟೆಲಿಜೆನ್ಸ್ ಅಧಿಕಾರಿಗಳದಲ್ಲ, ರಾಜಕಾರಣಿಗಳದೂ ಅಲ್ಲ. ಅದು ನಮ್ಮದು. ನಮ್ಮದೇ.
ಭಯೋತ್ಪಾದಕರ ಬೆಂಬಲಿಗರು ನಮ್ಮ ನಡುವೆಯೇ ಇದ್ದಾರೆ. ಅಂಥವರ ಮೇಲೆ ದಿಗ್ಬಂಧನ ನಾವು ಹೇರೋಣ. ಒಂದೊಂದು ಅನ್ನದ ಕಾಳಿಗೂ ಅವರು ಪರಿತಪಿಸುವಂತಾಗಬೇಕು. ಅಲ್ಲಿಂದ ಹೊರಟ ಬೇಗೆ, ಭಯೋತ್ಪಾದನೆಯನ್ನು ಸುಟ್ಟು ಬೂದಿ ಮಾಡಲಿ. ನಮ್ಮಲ್ಲಿರುವ ಅಸ್ತ್ರ ಇದೊಂದೇ.
ಬಳಸಿ. ಚೆನ್ನಾಗಿ ಬಳಸಿ. ಇದು ಕೊನೆಯ ಯುದ್ಧ. ಈ ಬಾರಿ ಗೆಲ್ಲೋಣ. ಇಲ್ಲವೇ ಸತ್ತು ಮಲಗೋಣ. ಆಯ್ಕೆ- ನಿಮ್ಮದು.
ಉಪನ್ಯಾಸ ಕಾರ್ಯಕ್ರಮಗಳು
ನಮಸ್ತೇ. ಹಿಂದೊಮ್ಮೆ ಕೆಲವರ ಬಯಕೆಯಂತೆ ಬ್ಲಾಗಿನಲ್ಲಿ ಚಕ್ರವರ್ತಿಯ ಉಪನ್ಯಾಸ ಕಾರ್ಯಕ್ರಮಗಳ ವಿವರ ಹಾಕುವುದಾಗಿ ಹೇಳಲಾಗಿತ್ತು. ಕಾರಣಾಂತರಗಳಿಂದ ಹೇಳಿದಂತೆ ನಡೆದುಕೊಳ್ಳಲಾಗಲಿಲ್ಲ. ಈ ಬಾರಿ ಸದ್ಯಕ್ಕೆ ಗೊತ್ತಾಗಿರುವಂತೆ ಚಕ್ರವರ್ತಿಯ ಕಾರ್ಯಕ್ರಮ ವಿವರವನ್ನು ಹಾಕಲಾಗಿದೆ. ಮತ್ತೇನಾದರೂ ವ್ಯತ್ಯಾಸಗಳಾದರೆ ಅಪ್ ಡೇಟ್ ಮಾಡಲಾಗುವುದು.
ನವೆಂಬರ್
೨೪: ಸೂಲಿಬೆಲೆ- ಕನ್ನಡ ರಾಜ್ಯೋತ್ಸವ
೨೫: ಪೀಣ್ಯಾ ಬಳಿ ಇಸ್ಪಾತ್ ನಲ್ಲಿ ಕನ್ನಡ ರಾಜ್ಯೋತ್ಸವ
೨೬: ಬೆಳಗ್ಗೆ ೧೧ರಿಂದ ೧೨ರವರೆಗೆ ವಿಜಯ ನಗರದ ಉದಯ ಸ್ಕೂಲಿನಲ್ಲಿ ಉಪನ್ಯಾಸ. ಸಂಜೆ ೫ರಿಂದ ೬ ಜ್ಞಾನವಾಣಿ ಲೈವ್ ಫೋನ್ ಇನ್ ಕಾರ್ಯಕ್ರಮ
೨೯: ರವಿಶಂಕರ್ ಗುರೂಜಿ ಆಶ್ರಮದಲ್ಲಿ ಶಿಕ್ಷಕರ ಸಮಾವೇಶ- ಉಪನ್ಯಾಸ
೩೦: ಬೆಳಗ್ಗೆ- ಹೊಳೆನರಸೀಪುರ; ಶಿಕ್ಷಕರಿಗೆ ಉಪನ್ಯಾಸ. ಸಂಜೆ ಬೆಂಅಗಳೂರಿನ ಕಾಕ್ಸ್ ಟೌನಿನಲ್ಲಿ ಸಂತರೊಂದಿಗೆ ಪಾದಯಾತ್ರೆ
ಡಿಸೆಂಬರ್
೭: ಶಿವಮೊಗ್ಗ- ಅಂಧರ ವಿಕಾಸ ಕೇಂದ್ರದ ಕಾರ್ಯಕ್ರಮ
೨೨ ಮತ್ತು ೨೩: ಗುಲ್ಬರ್ಗಾ- ಶಿಕ್ಷಕರ ಸಮಾವೇಶದಲ್ಲಿ ಉಪನ್ಯಾಸ
ಜನವರಿ
೯: ಬೆಂಗಳೂರು- ಚಂದ್ರಶೇಖರ ಭಾರತೀ ತೀರ್ಥ ಸ್ವಾಮೀಜಿಕಲಾ ಮಂಟಪದಲ್ಲಿ ‘ಜಗದ್ಗುರು ಭಾರತ’ ಉಪನ್ಯಾಸ
೧೮: ಬಳ್ಳಾರಿ- ಸಂಸ್ಕಾರ ಭಾರತೀ ವತಿಯಿಂದ ಹರಟೆ
೧೯ರಿಂದ ೨೩: ಕುಮಟಾ; ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಾಲೆ
ಫೆಬ್ರವರಿ
೬ರಿಂದ ೮: ಕಾಳಿ ಮಂದಿರ ವಾರ್ಷಿಕೋತ್ಸವ
ಮುಂದೇನು ಮಾಡಬಹುದು?
ಶ್ವೇತಾಳ ಸಮಸ್ಯೆಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ.
ಬೇಸರದ ಸಂಗತಿಯೆಂದರೆ, ಹಾಗೆ ಸಧ್ಯಕ್ಕೆ ಹಣ ನೀಡು, ಮುಂದೆ ಹೀಗಾಗದಂತೆ ತಡೆಯಲು ಖಂಡಿತವಾಗಿಯೂ ಪ್ರಯತ್ನ ಪಡುವೆವು ಎಂದು ಹೇಳಿದ ನಂತರ ಆಕೆ ಕರೆ ಮಾಡಲೇ ಇಲ್ಲ. ಬಹಳ ನಿರಾಸೆಯಾಗಿರಬೇಕು. ಪ್ರತಿರೋಧ, ಹೋರಾಟಗಳು ತತ್ ಕ್ಷಣದ ಪ್ರಕ್ರಿಯೆ ಆಗಿಬಿಟ್ಟರೆ ಅದರಲ್ಲಿ ಜೋಶ್ ಏನೋ ಇರುವುದು.. ಆದರೆ ಅದು ದೀರ್ಘಕಾಲಿಕ ಪರಿಣಾಮ ಉಳಿಸುವುದು ಕಷ್ಟವೇ.
ಈಗ ನಾನಂತೂ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕೇವಲ ಒಬ್ಬ ಶಿಕ್ಷಕನ ವಿರುದ್ಧ ಹೋರಾಡಲೂ ನನಗೆ ಮನಸಿಲ್ಲ. ಹಾಗೆ ಮಾಡುವಂತೆ, ಭ್ರಷ್ಟಾಚಾರವನ್ನು ವಿರೋಧಿಸಿ ಪ್ರಾಮಾಣಿಕತೆ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ಅದನ್ನು ಮಾಡಬಲ್ಲೆ ಎನ್ನುವುದು ನನ್ನ ವಿಶ್ವಾಸ.
ಇದರ ಜೊತೆಗೇ, ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕಿದೆ. ಈ ಬಗೆಯ ಚಟುವಟಿಕೆಗಳನ್ನು ಅವರ ಗಮನಕ್ಕೆ ತಂದು ಕಾನೂನಾತ್ಮಕವಾದ ದಾರಿಯಲ್ಲಿ ನಡೆಯಬೇಕಿದೆ. ಈ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಲೋಕಾಯುಕ್ತದ ಗಮನ ಸೆಳೆಯುವ ಕೆಲಸ ನಾನು ಮಾಡಬಲ್ಲೆನಾದರೂ ನನ್ನ ದೂರಿಗಿಂತ ವಿದ್ಯಾರ್ಥಿಗಳ ದೂರಿಗೆ ಮಾನ್ಯತೆ ಹೆಚ್ಚು. ಈ ದೆಸೆಯಲ್ಲಿ ಅವರೊಡನೆ ಸಂಪರ್ಕಕ್ಕೆ ಯತ್ನಿಸುತ್ತಿದ್ದೇನೆ.
ಈ ಬಗೆಯ ಸಂಗತಿಗಳು ಪಾಲಕರ ಗಮನಕ್ಕೂ ಬರಬೇಕು. ಇದಕ್ಕೆ ಮುದ್ರಣ ಮಾಧ್ಯಮ ಬಹಳ ಸಹಕಾರಿಯಾಗಬಲ್ಲದು. ಈ ಬಗೆಯ ಪರೀಕ್ಷಾ ಕೊಠಡಿಯ ಲಂಚ ಪ್ರಕರಣಗಳು ಸರ್ವೇಸಾಮಾನ್ಯವೆಂದು ಈಗ ಗೊತ್ತಾಗಿರುವುದರಿಂದ ಮಾಹಿತಿ ಸಂಗ್ರಹಕ್ಕೇನೂ ಕೊರತೆಯಾಗದೆನಿಸುತ್ತದೆ. ನಾನೂ ಒಂದಷ್ಟು ಸಂಗ್ರಹಿಸಿಕೊಡಬಲ್ಲೆ. ಪತ್ರಕರ್ತ ಮಿತ್ರರು ಈ ಕುರಿತು ಬರೆಯುವುದಾದರೆ ಸಂತೋಷ.
ಪ್ರತಿಕ್ರಿಯಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ.
ಈ ಕುರಿತ ಹೆಚ್ಚಿನ ಸಲಹೆಗಳಿಗೆ ಸ್ವಾಗತವಿದೆ.
ನನ್ನ ಸಂಪರ್ಕ ಸಂಖ್ಯೆ: 9448423963- ಇದಕ್ಕೆ ಕರೆ ಮಾಡಬಹುದು.
ವಂದೇ,
ಚಕ್ರವರ್ತಿ ಸೂಲಿಬೆಲೆ.
ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…
ಮೊನ್ನೆ ಮಧ್ಯಾಹ್ನ ಎರಡು ಗಂಟೆಗೆ ಬನಶಂಕರಿಯ ಡಿಪ್ಲೊಮಾ ಕಾಲೇಜೊಂದರಲ್ಲಿ ಓದುತ್ತಿರುವ ಶ್ವೇತಾ ಕರೆ ಮಾಡಿದ್ದಳು. ‘ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋದು ಹೇಗೆ ಸಾರ್?” ಎಂದಳು. ನಾನು ಎಂದಿನಂತೆ, “ಮೊದಲು ನಾವು ಶುದ್ಧವಾಗೋಣ. ನಮ್ಮ ಕೈಯಿಂದ ಅಚಾತುರ್ಯ ನಡೆಯದಿದ್ದರಾಯ್ತು” ಎಂದೆ. ಅದರರ್ಥ, ಲಂಚ ತೊಗೋಳೋದೂ ತಪ್ಪು, ಕೊಡೋದೂ ತಪ್ಪು.
ಇಷ್ಟಾದ ಮೇಲೆ ಆ ಹುಡುಗಿ ಹೇಳಿದ ಘಟನೆ ನನ್ನನ್ನ ವಿಷಾದಕ್ಕೆ ನೂಕಿತು. ಅವತ್ತು ಬೆಳಗ್ಗೆ ಆಕೆಗೆ ಪ್ರ್ಯಾಕ್ಟಿಕಲ್ ಎಗ್ಸಾಮ್ ಇತ್ತಂತೆ. ಅದನ್ನು ‘ಟೈಮಿಂಗ್’ ಅಂತ ಕರೀತಾರೆ. ನಿಗದಿತ ಸಮಯದಲ್ಲಿ ಮಾಡಿ ಮುಗಿಸಬೇಕು. ಅವಳಿಗೆ ೨೨ ನಿಮಿಷ ನಿಗದಿ ಮಾಡಲಾಗಿತ್ತು. ಆಕೆ ಚುರುಕಾಗಿ ಹದಿನೈದೇ ನಿಮಿಷದಲ್ಲಿ ಅದನ್ನು ಮುಗಿಸಿ ವೈವಾಗೆಂದು ಕುಳಿತಳು. ಪ್ರಶ್ನೆ ಕೇಳಲು ಬಂದಿದ್ದ ಪರ ಕಾಲೇಜಿನ ಶಿಕ್ಷಕರು ಅವಳನ್ನು ಪ್ರಶ್ನೆ ಕೇಳಲಿಲ್ಲ. ಬದಲಿಗೆ ಅವಳೊಳಗೇ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದರು! “ಇನ್ನೂರೈವತ್ತು ರುಪಾಯಿ ಕೊಡು, ಪಸು ಮಾಡ್ತೇನೆ” ಅಂದರು!!
ಈ ಹುಡುಗಿ ನನ್ನ ಬಳಿ ಹಣ ಇಲ್ಲ ಎಂದದ್ದಕ್ಕೆ ‘ಪರವಾಗಿಲ್ಲ, ನಾಡಿದ್ದು ಮತ್ತೊಂದು ಪರೀಕ್ಷೆ ಇದೆಯಲ್ಲ, ಆಗ ತೊಗೊಂಡು ಬಾ’ ಎಂದರಂತೆ. ಅವಳೇನೂ ಇನ್ನೂರೈವತ್ತು ರುಪಾಯಿ ಕೊಡಲಾಗದ ಸ್ಥಿತಿಯಲ್ಲಿಲ್ಲ. ಆದರೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದು ಅವಳ ಮನಸಿಗೊಪ್ಪುತ್ತಿಲ್ಲ. ಹೇಳಿಕೊಳ್ಳಲಾಗದ ಕುದಿ ಅವಳನ್ನು ಆವರಿಸಿಬಿಟ್ಟಿತ್ತು. ಎಲ್ಲವನ್ನೂ ವರದಿ ಒಪ್ಪಿಸಿದ ನಂತರ ಶ್ವೇತಾ ನನ್ನನ್ನು ಕೇಳಿದಳು. “ಹೇಳಿ ಸಾರ್, ನಾನು ಹಣ ಕೊಡ್ಲಾ? ಅಥವಾ ಕೊಡೋಲ್ಲ ಅಂತ ಹೇಳಲಾ?”
ನಾನು ದ್ವಂದ್ವಕ್ಕೆ ಬಿದ್ದೆ. ಹಣ ಕೊಡಬೇಡ ಅಂದರೆ ಶ್ವೇತಾಳ ಪರಿಶ್ರಮಕ್ಕೆ ಬೆಲೆ ಸಿಗುವುದಿಲ್ಲ, ಮಾರ್ಕ್ಸು ದೊರೆಯುವುದಿಲ್ಲ. ಹಣ ಕೊಡು ಅಂದರೆ, ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಮಾತಾಡುವಂತೆಯೇ ಇಲ್ಲ. ಕೊನೆಗೆ, ಒಂದು ದಿನ ಯೋಚಿಸಲು ಸಮಯ ತೆಗೆದುಕೊಂಡೆ. ಅಂದು ಸಂಜೆಯೇ ಟೆಕ್ನಿಕಲ್ ಬೋರ್ಡಿನ ಮಿತ್ರರ ಬಳಿ ಈ ಬಗ್ಗೆ ಮಾತನಾಡಿದೆ. ಆರಂಭದಲ್ಲಿ, ಇದಕ್ಕೊಂದು ಪರಿಹಾರ ಸಿಕ್ಕೇಬಿಡುತ್ತದೆ ಎಂಬ ಉತ್ಸಾಹವಿತ್ತು. ನನ್ನ ಮಿತ್ರ ಅಷ್ಟೂ ವಿವರ ಕೇಳಿ, ಒಂದೇ ಮಾತು ಹೇಳಿದ. “ಬರೀ ಇನ್ನೂರೈವತ್ತು ರುಪಾಯಿ ಕೇಳಿದ ಆ ಮೇಷ್ಟ್ರು ಪಾಪದವನು!”
ಆಮೇಲೆ ವಿಷಯ ಬಿಚ್ಚಿಟ್ಟ. ಇನ್ನೂ ಕೆಲವು ಕಡೆಗಳಲ್ಲಿ ಕಡಿಮೆಯೆಂದರೂ ಎರಡು ಸಾವಿರದವರೆಗೆ ಹಣ ಪೀಕುತ್ತಾರೆ ಎಂದ. ಯಾವ ಕಾಲೇಜಲ್ಲಿ ಹೆಚ್ಚು ಹಣ ಕೊಡಬಲ್ಲ ವಿದ್ಯಾರ್ಥಿಗಳಿರುವರೋ ಅದೇ ಕಾಲೇಜಿಗೆ ತಮ್ಮನ್ನು ಪರೀಕ್ಷಕರನ್ನಾಗಿ ಹಾಕುವಂತೆ ಲಾಬಿಯನ್ನೂ ನಡೆಸುತ್ತರೆನ್ನುವ ಸತ್ಯ ಬಾಯ್ಬಿಟ್ಟ. ಹಾಗಿದ್ದರೆ ಪರಿಹಾರವೇನು? ಕೇಳಿದ್ದಕ್ಕೆ, ಸುಮ್ಮನೆ ದುಡ್ಡು ಕೊಟ್ಟು ಬದುಕು ಕಟ್ಟಿಕೊಳ್ಳುವುದು- ಎಂದುಬಿಟ್ಟ.
ನಾನು ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ವಿದ್ಯಾರ್ಥಿ ಸಂಘಟನೆಯೊಂದರ ಬಳಿ ಚರ್ಚೆ ಮಾಡಿದೆ. ಅವರೂ ನನ್ನ ಮಿತ್ರನ ಮಾತನ್ನು ಅನುಮೋದಿಸಿ, ಇಲ್ಲಿಂದ ಪ್ರತಿಭಟನೆ ಅಂತ ಹೊರಟರೆ, ಒಂದೋ ಆ ಹೆಣ್ಣು ಮಗಳ ಭವಿಷ್ಯ ಮಸುಕಾಗುತ್ತೆ, ಇಲ್ಲವೇ ಆ ಶಿಕ್ಷಕರನ್ನು ಸಸ್ಪೆಂಡ್ ಮಾಡುವ ನೆಪದಲ್ಲಿ ಹಿರಿಯ ಅಧಿಕಾರಿಗಳು ಅವನಿಂದ ಸಿಕ್ಕಾಪಟ್ಟೆ ಲಂಚ ಹೊಡೆಯುತ್ತಾರೆ ಎಂದರು. ಈ ಸಂಘಟನೆ ಇಂತಹ ಸಂಗತಿಗಳನ್ನು ಪ್ರತಿಭಟಿಸುವ ಮೂಲಕ ಯಾರೆಲ್ಲರನ್ನು ಮನೆಗೆ ಕಳಿಸಿತ್ತೋ, ಅವರು ಒಂದೆರಡು ತಿಂಗಳ ನಂತರ ಲಕ್ಷಾಂತರ ರುಪಾಯಿ ಕೊಟ್ಟು ಮತ್ತೆ ಅದೇ ಸ್ಥಾನದಲ್ಲಿ ರಾರಾಜಿಸುತ್ತ ಕುಳಿತಿದ್ದರು. ಅದನ್ನವರು ಗಾಢ ವಿಷಾದದಿಂದ ಹೇಳಿಕೊಂಡರು.
ಈಗ…. ನನ್ನ ಪೀಕಲಾಟ ಕೇಳಿ. ಆ ಹುಡುಗಿ ಮತ್ತೆ ಕರೆ ಮಾಡ್ತಾಳೆ. ಏನು ಉತ್ತರ ಕೊಡಲಿ ಅಂತ ಚಡಪಡಿಸ್ತಿದೇನೆ. ವಾಸ್ತವ ತೀರ ಕಹಿಯಾಗಿದೆ. ಮೊದಲ ಬಾರಿಗೆ ಅಸಹಾಯಕನಂತೆನಿಸಿ ನಿರಾಶೆ ಕಾಡ್ತಿದೆ.
ನೀವಾದ್ರೂ ಒಂದು ಪರಿಹಾರ ಹುಡುಕಿ ಕೊಡಿ…. ಸಹಾಯ ಮಾಡಿ ಪ್ಲೀಸ್…
5 comments